Search
  • Follow NativePlanet
Share
» »ನ್ಯಾಶನಲ್ ಕ್ಯಾಪಿಟಲ್ ರೀಜನ್ ಸ್ಥಳಗಳು

ನ್ಯಾಶನಲ್ ಕ್ಯಾಪಿಟಲ್ ರೀಜನ್ ಸ್ಥಳಗಳು

By Vijay

ಚುಟುಕಾಗಿ ಎನ್.ಸಿ.ಆರ್ (ನ್ಯಾಶನಲ್ ಕ್ಯಾಪಿಟಲ್ ರೀಜನ್) ಎಂದು ಕರೆಯಲ್ಪಡುವ ರಾಷ್ಟ್ರೀಯ ರಾಜಧಾನಿ ಪ್ರದೇಶವು ಒಂದು ಮಹಾ ನಗರಗಳ ಸಮೂಹ ಪ್ರದೇಶವಾಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಕೈಗಾರಿಕೋದ್ಯಮ ಬೆಳೆದಂತೆ, ಜನಸಂಖ್ಯೆಯಲ್ಲೂ ಸಾಕಷ್ಟು ಏರಿಕೆ ಉಂಟಾಗಿ ಒತ್ತಡ ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ ಈ ಒಂದು ಪರಿಕಲ್ಪನೆಯನ್ನು ಭಾರತ ಸರ್ಕಾರದ ವತಿಯಿಂದ ನ್ಯಾಶನಲ್ ಕ್ಯಾಪಿಟಲ್ ರೀಜನ್ ಆಕ್ಟ್ ಯೋಜನಾ ಆಯೋಗದ ಮೂಲಕ 1985 ರಲ್ಲಿ ಜಾರಿಗೆ ತರಲಾಯಿತು.

ಕ್ಲಿಕ್ ಮಾಡಿ ಯಾತ್ರಾ ಕೂಪನ್ ಗಳನ್ನು ಉಚಿತವಾಗಿ ಪಡೆಯಿರಿ

ಪ್ರಸ್ತುತ ಈ ರಾಷ್ಟ್ರೀಯ ರಾಜಧಾನಿ ಪ್ರದೇಶವು ದೆಹಲಿ ಜೊತೆಗೆ ಹರ್ಯಾಣ, ಉತ್ತರ ಪ್ರದೇಶ ಹಾಗೂ ರಾಜಸ್ಥಾನ ರಾಜ್ಯಗಳ ಪ್ರಮುಖ 20 ನಗರಗಳನ್ನು ಒಳಗೊಂಡಿದೆ. ಈ ಎಲ್ಲ ಸ್ಥಳಗಳನ್ನು ಒಟ್ಟಾಗಿ ಸೇರಿಸಿ ಎನ್.ಸಿ.ಆರ್ ಪ್ರದೇಶವೆಂದು ಗುರುತಿಸಲಾಗಿದೆ. ಈ ಸ್ಥಳಗಳು ದೇಶದ ಜಿ.ಡಿ.ಪಿ ಬೆಳವಣಿಗೆಯಲ್ಲಿ ತಮ್ಮ ಬೃಹತ್ ಪಾಲನ್ನು ಒಳಗೊಂಡಿದೆ. ಎನ್.ಸಿ.ಆರ್ ಪ್ರಮುಖವಾಗಿ ನಾಲ್ಕು ಉಪವಲಯಗಳನ್ನು ಒಳಗೊಂಡಿದೆ ಹಾಗೂ ಅವುಗಳೆಂದರೆ ಹರ್ಯಾಣ, ರಾಜಸ್ಥಾನ, ಉತ್ತರ ಪ್ರದೇಶ ಹಾಗೂ ದೆಹಲಿ ವಲಯ.

ದೆಹಲಿ ನಗರದ ಚೆಂದದ ಆಕರ್ಷಣೆಗಳು

ಪ್ರಸ್ತುತ ಲೇಖನದ ಮೂಲಕ ಯಾವೇಲ್ಲ ಸ್ಥಳಗಳು ಎನ್.ಸಿ.ಆರ್ ಪ್ರದೇಶದ ಭಾಗವಾಗಿವೆ ಎಂಬುದರ ಕುರಿತು ತಿಳಿಯಿರಿ.

ಉಪಯುಕ್ತ ಕೊಂಡಿ : ದೆಹಲಿಯಲ್ಲಿರುವ ಹೋಟೆಲುಗಳು

ನ್ಯಾಶನಲ್ ಕ್ಯಾಪಿಟಲ್ ರೀಜನ್:

ನ್ಯಾಶನಲ್ ಕ್ಯಾಪಿಟಲ್ ರೀಜನ್:

ದೆಹಲಿ : ರಾಜಧಾನಿ ದೆಹಲಿ ಭಾರತದ ದೊಡ್ಡನಗರಗಳಲ್ಲೊಂದು ಮಾತ್ರವಲ್ಲದೆ, ಪ್ರಾಚೀನತೆ ಮತ್ತು ಆಧುನಿಕತೆಗಳಿಂದ ಸಮ್ಮಿಳಿತವಾದ ನಗರವಾಗಿದೆ. ಹೊಸ ದೆಹಲಿ ಮತ್ತು ಹಳೆ ದೆಹಲಿ ಎಂಬ ಹೆಸರುಗಳಲ್ಲಿರುವ ಈ ಪುರಾತನ ಮತ್ತು ನವೀನತೆಯಿಂದ ಸಮ್ಮಿಲಿತವಾಗಿರುವ ಈ ನಗರವು ಭಾರತೀಯ ಇತಿಹಾಸ, ಸಂಸ್ಕೃತಿ ಮತ್ತು ವಿವಿಧ ಅದ್ಭುತಗಳ ವರ್ಗೀಕರಣಗಳನ್ನೊಳಗೊಂಡ ಬಟ್ಟಲು ಎಂದರೆ ತಪ್ಪಾಗಲಾರದು. ಅಷ್ಟೇ ಅಲ್ಲದೇ ದೇಶದ ಎಲ್ಲಾ ಪ್ರಮುಖ ರಾಜಕೀಯ ಚಟುವಟಿಕೆಗಳ ಕೇಂದ್ರವೂ ಆಗಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಪ್ರಯಾಣಿಕನೂ ಭೇಟಿ ಮಾಡಲೇ ಬೇಕೆಂದೆನಿಸುವಂತಹ ನಗರವಾಗಿದೆ. ಇದು ಎನ್.ಸಿ.ಆರ್ ಪ್ರದೇಶದ ಒಟ್ಟು 2.9% ರಷ್ಟು ಭಾಗವನ್ನು ಆವರಿಸಿದೆ. ದೆಹಲಿಯಲ್ಲಿರುವ ಪ್ರವಾಸಿ ಆಕರ್ಷಣೆಗಳು.

ಚಿತ್ರಕೃಪೆ: Budhesh

ನ್ಯಾಶನಲ್ ಕ್ಯಾಪಿಟಲ್ ರೀಜನ್:

ನ್ಯಾಶನಲ್ ಕ್ಯಾಪಿಟಲ್ ರೀಜನ್:

ಫರೀದಾಬಾದ್ : ಹರಿಯಾಣಾ ರಾಜ್ಯದ ಎರಡನೇ ಅತಿ ದೊಡ್ಡ ನಗರ ಫರಿದಾಬಾದ್ ಎನ್.ಸಿ.ಆರ್ ಪ್ರದೇಶದ ಭಾಗವಾಗಿದೆ. ಇದಕ್ಕೆ ಈ ಹೆಸರು ಇದರ ನಿರ್ಮಾಣ ಮಾಡಿದ ಬಾಬಾ ಫರಿದ್ ರಿಂದಾಗಿ ಬಂದಿದೆ. ಫರಿದಾಬಾದ್ ಔದ್ಯಮಿಕ ಕೇಂದ್ರವೂ ಆಗಿದ್ದು ಹಲವು ಉದ್ಯಮಗಳು ಇಲ್ಲಿ ತಲೆ ಎತ್ತಿವೆ. ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆ ಎಂದರೆ ಬಧಕಲ್ ಸರೋವರ, ಸೂರಜ್ ಕುಂಡ್, ರಾಜಾ ನಹರ್ ಸಿಂಘ್ ಅರಮನೆ, ಶಿರಡಿ ಸಾಯಿ ಬಾಬಾ ದೇವಾಲಯ, ಶಿವ ದೇವಾಲಯ, ಸೈಂಟ್ ಮೇರಿ ಚರ್ಚ್, ಧೌಜ್ ಸರೋವರ, ಅರಾವಳಿ ಗಾಲ್ಫ್ ಕ್ಲಬ್, ನಹರ್ ಸಿಂಘ್ ಕ್ರಿಕೆಟ್ ಆಟದ ಮೈದಾನ, ನಗರ ಉದ್ಯಾನ ಮುಂತಾದವುಗಳು. ಫರೀದಾಬಾದ್ ಕುರಿತು ಹೆಚ್ಚಿನ ವಿವರ ಚಿತ್ರದಲ್ಲಿರುವುದು ನಗರದ ಸೂರಜ್ ಕುಂಡ ಎಂಬ ಪುರಾತನ ಜಲಾಶಯ ತಾಣದಲ್ಲಿ ಆಚರಿಸಲಾದ ಕ್ರಾಫ್ಟ್ ಉತ್ಸವದ ಒಮ್ದು ನೋಟ.

ಚಿತ್ರಕೃಪೆ: Ranbirsingh

ನ್ಯಾಶನಲ್ ಕ್ಯಾಪಿಟಲ್ ರೀಜನ್:

ನ್ಯಾಶನಲ್ ಕ್ಯಾಪಿಟಲ್ ರೀಜನ್:

ಗುರ್ಗಾಂವ್ : ಗುರ್ಗಾಂವ್ ಹರಿಯಾಣದ ಅತಿದೊಡ್ಡನಗರ. ಇದನ್ನು ಹರಿಯಾಣದ ಆರ್ಥಿಕ ಮತ್ತು ಕೈಗಾರಿಕ ರಾಜಧಾನಿ ಎಂದೇ ಪರಿಗಣಿಸಲಾಗುತ್ತದೆ. ಇದು ದೆಹಲಿಯಿಂದ 30 ಕಿಮೀ ದೂರದಲ್ಲಿದೆ. ಗುರ್ಗಾಂವ್ ದೆಹಲಿಯ ನಾಲ್ಕು ಉಪನಗರಗಳಲ್ಲಿ ಒಂದು ಮತ್ತು ಇದು ರಾಜಧಾನಿ ಪ್ರದೇಶದ ಭಾಗ. ಈ ಪಟ್ಟಣವನ್ನು ಯೋಜಿತ ರೀತಿಯಲ್ಲಿ ರೂಪಿಸಲಾಗಿದ್ದು, ಚಂಡೀಗಢ ಮತ್ತು ಮುಂಬೈನ ನಂತರ ಅತಿ ಹೆಚ್ಚು ಆದಾಯವನ್ನು ಹೊಂದಿರುವ ಪ್ರದೇಶ ಇದಾಗಿದೆ. ಗುರ್ಗಾಂವ್ ಕುರಿತು ತಿಳಿಯಿರಿ.

ಚಿತ್ರಕೃಪೆ: Ronit Bhattacharjee

ನ್ಯಾಶನಲ್ ಕ್ಯಾಪಿಟಲ್ ರೀಜನ್:

ನ್ಯಾಶನಲ್ ಕ್ಯಾಪಿಟಲ್ ರೀಜನ್:

ಮೇವಾತ್ : ಹರಿಯಾಣ ರಾಜ್ಯದ 21 ಜಿಲ್ಲೆಗಳ ಪೈಕಿ ಒಂದಾದ ಮೇವಾತ್ ಎನ್.ಸಿ.ಆರ್ ಪ್ರದೇಶದ ಒಂದು ಭಾಗವಾಗಿದೆ. ಗುರ್ಗಾಂವ್ ಜಿಲ್ಲೆ ವಿಭಜಿಸಿ ರೂಪಗೊಂಡಿರುವ ಮೇವಾತ್ ನ ಆರ್ಥಿಕತೆಯು ಪ್ರಮುಖವಾಗಿ ವ್ಯವಸಾಯ ಹಾಗೂ ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳ ಮೇಲೆ ನಿರ್ಭರವಾಗಿದೆ.

ಚಿತ್ರಕೃಪೆ: Ola.saurabh

ನ್ಯಾಶನಲ್ ಕ್ಯಾಪಿಟಲ್ ರೀಜನ್:

ನ್ಯಾಶನಲ್ ಕ್ಯಾಪಿಟಲ್ ರೀಜನ್:

ರೊಹ್ತಕ್ : ಹರಿಯಾಣ ರಾಜ್ಯದ 21 ಜಿಲ್ಲೆಗಳ ಪೈಕಿ ಒಂದಾದ ರೊಹ್ತಕ್, ಎನ್.ಸಿ.ಆರ್ ಪ್ರದೇಶದ ಒಂದು ಭಾಗವಾಗಿದೆ. ಇಲ್ಲಿಂದ ಹತ್ತು ಕಿ.ಮೀ ದೂರದಲ್ಲಿರುವ ಮದಿನಾ ಎಂಬ ಗ್ರಾಮದಲ್ಲಿ ಜಪಾನಿ ಟೌನ್ ಶಿಪ್ ಯೋಜನೆಯನ್ನು ಯೋಜಿಸಲಾಗಿದ್ದು ಶೀಘ್ರದಲ್ಲೆ ನಿರ್ಮಿಸುವ ಆಲೋಚನೆಯಿದೆ. ಇದು ಹಲವು ವಾಣಿಜ್ಯ ಕೇಂದ್ರಗಳು ಹಾಗೂ ಕಚೇರಿಗಳನ್ನು ಒಳಗೊಂಡಿರುತ್ತದೆ. ರೊಹ್ತಕ್ ನಲ್ಲಿರುವ ಜಿಮ್ಖಾನಾ ಕ್ಲಬ್ ಕಟ್ಟಡ.

ಚಿತ್ರಕೃಪೆ: Madansahil

ನ್ಯಾಶನಲ್ ಕ್ಯಾಪಿಟಲ್ ರೀಜನ್:

ನ್ಯಾಶನಲ್ ಕ್ಯಾಪಿಟಲ್ ರೀಜನ್:

ಸೋನಿಪತ್ : ಹರಿಯಾಣ ರಾಜ್ಯದ 21 ಜಿಲ್ಲೆಗಳ ಪೈಕಿ ಒಂದಾದ ಸೋನಿಪತ್, ಎನ್.ಸಿ.ಆರ್ ಪ್ರದೇಶದ ಒಂದು ಭಾಗವಾಗಿದೆ. ಮೊದಲಿಗೆ ಸೋನಪ್ರಸ್ಥವಾಗಿದ್ದ ಈ ಪಟ್ಟಣ ನಂತರ ಸ್ವರ್ಣಪ್ರಸ್ಥ ಎಮ್ಬ ಹೆಸರು ಪಡೆದು ಕಾಲ ಉರುಳಿದಂತೆ ಇಂದು ಸೋನಿಪತ್ ಎಂಬ ಹೆಸರು ಪಡೆದಿದೆ. ಮಹಾಭಾರತದಲ್ಲೂ ಈ ಪಟ್ಟಣದ ಕುರಿತು ಉಲ್ಲೇಖಿಸಲಾಗಿರುವುದನ್ನು ಗಮನಿಸಬಹುದು. ಸೋನಿಪತ್ ನಲ್ಲಿರುವ ಮಾತಾ ಚಿಂತಪೂರ್ಣಿ ಮಂದಿರ.

ಚಿತ್ರಕೃಪೆ: Pardeep Dogra

ನ್ಯಾಶನಲ್ ಕ್ಯಾಪಿಟಲ್ ರೀಜನ್:

ನ್ಯಾಶನಲ್ ಕ್ಯಾಪಿಟಲ್ ರೀಜನ್:

ರೇವಾರಿ : ರೆವಾರಿ ಎಂಬುದು ಹರ್ಯಾಣದ ರೆವಾರಿ ಜಿಲ್ಲೆಯಲ್ಲಿರುವ ಒಂದು ಪಟ್ಟಣ. ದೆಹಲಿಯಿಂದ 82 ಕಿ ಮೀ ಅಂತರದಲ್ಲಿರುವ ಇದು ರಾಷ್ಟ್ರೀಯ ರಾಜಧಾನಿ ಪ್ರದೇಶದ ಒಂದು ಭಾಗ. ಭಾರತದ ಕೊನೆಯ ಚಕ್ರವರ್ತಿ ಹೇಮು ಬೆಳೆದದ್ದು ಮತ್ತು ಶಿಕ್ಷಣ ಪಡೆದದ್ದು ಈ ರೆವಾರಿನಲ್ಲಿ ಎಂಬ ಇತಿಹಾಸವಿದೆ. ರೇವಾರಿಯ ಮುಖ್ಯ ಆಕರ್ಷಣೆ ಎಂದರೆ ಹೆರಿಟೇಜ್ ಉಗಿಬಂಡಿ ಸಂಗ್ರಹಾಲಯ. ಈ ಸಂಗ್ರಹಾಲಯದ ಮಾಳಿಗೆಯನ್ನು 1893 ರಲ್ಲಿ ಪ್ರಾರಂಭಿಸಲಾಯಿತು ಮತ್ತು ತಮ್ಮ ಶ್ರಮದಾಯಕ ಕಣ್ಣೀರಿನ ಉಗಿ ಯಂತ್ರಗಳ ಬಗ್ಗೆ ತಿಳಿಸಲು ಭಾರತದಲ್ಲಿ ಇರುವ ಏಕೈಕ ಸಂಗ್ರಹಾಲಯ ಇದಾಗಿದೆ.

ಚಿತ್ರಕೃಪೆ: Sudhirkbhargava

ನ್ಯಾಶನಲ್ ಕ್ಯಾಪಿಟಲ್ ರೀಜನ್:

ನ್ಯಾಶನಲ್ ಕ್ಯಾಪಿಟಲ್ ರೀಜನ್:

ಝಜ್ಜರ್ : ಹರಿಯಾಣ ರಾಜ್ಯದ 21 ಜಿಲ್ಲೆಗಳ ಪೈಕಿ ಒಂದಾದ ಝಜ್ಜರ್, ಎನ್.ಸಿ.ಆರ್ ಪ್ರದೇಶದ ಒಂದು ಭಾಗವಾಗಿದೆ.

ಚಿತ್ರಕೃಪೆ: Ola.saurabh

ನ್ಯಾಶನಲ್ ಕ್ಯಾಪಿಟಲ್ ರೀಜನ್:

ನ್ಯಾಶನಲ್ ಕ್ಯಾಪಿಟಲ್ ರೀಜನ್:

ಪಾನಿಪತ್ : ಹರಿಯಾಣ ರಾಜ್ಯದ 21 ಜಿಲ್ಲೆಗಳ ಪೈಕಿ ಒಂದಾದ ಪಾನಿಪತ್, ಎನ್.ಸಿ.ಆರ್ ಪ್ರದೇಶದ ಒಂದು ಭಾಗವಾಗಿದೆ. ಐತಿಹಾಸಿಕವಾಗಿ ಈ ಸ್ಥಳವು ಪಾನಿಪತ್ ಕದನಕ್ಕೂ ಸಹ ಹೆಸರುವಾಸಿಯಾಗಿದೆ. ಪಾನಿಪತ್ ನಲ್ಲಿರುವ ಕಾಬೂಲಿ ಬಾಗ್ ಮಸೀದಿ.

ಚಿತ್ರಕೃಪೆ: Ramesh lalwani

ನ್ಯಾಶನಲ್ ಕ್ಯಾಪಿಟಲ್ ರೀಜನ್:

ನ್ಯಾಶನಲ್ ಕ್ಯಾಪಿಟಲ್ ರೀಜನ್:

ಪಲ್ವಾಲ್ : ಪಲ್ವಾಲ್, ಹತ್ತಿಯ ಕೇಂದ್ರವಾಗಿದ್ದು ಹರ್ಯಾಣದ ಪಲ್ವಾಲ್ ಜಿಲ್ಲೆಯಲ್ಲಿದೆ. ಇದು ದೆಹಲಿಯಿಂದ ಅರವತ್ತು ಕಿಲೋಮೀಟರ್ ದೂರದಲ್ಲಿದೆ. ಪಾಂಡವರ ಕಾಲದಲ್ಲಿ ಪಲ್ವಾಸುರ ಎನ್ನುವ ರಾಕ್ಷಸನಿದ್ದನು, ಹಾಗಾಗಿ ಇದಕ್ಕೆ ಪಲ್ವಾಲ್ ಹೆಸರು ಬಂತು ಎನ್ನುವುದು ನಂಬಿಕೆ. ಮಹಾಭಾರತದಲ್ಲೂ ಪಲ್ವಾಲ್ ಬಗ್ಗೆ ಉಲ್ಲೇಖವಿದ್ದು, ಪಾಂಡವ ಸಾಮ್ರಾಜ್ಯದ ಇಂದ್ರಪ್ರಸ್ಥದ ಜೊತೆಗಿದೆ. ಪಲ್ವಾಸುರ ಎನ್ನುವ ರಾಕ್ಷಸನು ಕೃಷ್ಣ ಪರಮಾತ್ಮನ ಸಹೋದರ ಬಲರಾಮನಿಂದ ಹತನಾದ. ಇದು ವಿಕ್ರಮಾದಿತ್ಯ ಅರಸನ ಸ್ಥಳವೂ ಆಗಿತ್ತು. ಪಲ್ವಾಲ್, ಎನ್.ಸಿ.ಆರ್ ಪ್ರದೇಶದ ಒಂದು ಭಾಗವಾಗಿದೆ.

ಚಿತ್ರಕೃಪೆ: SAGAR PRADHAN

ನ್ಯಾಶನಲ್ ಕ್ಯಾಪಿಟಲ್ ರೀಜನ್:

ನ್ಯಾಶನಲ್ ಕ್ಯಾಪಿಟಲ್ ರೀಜನ್:

ಮಹೇಂದ್ರಗಡ್ : ಹರಿಯಾಣ ರಾಜ್ಯದ 21 ಜಿಲ್ಲೆಗಳ ಪೈಕಿ ಒಂದಾದ ಮಹೇಂದ್ರಗಡ್, ಎನ್.ಸಿ.ಆರ್ ಪ್ರದೇಶದ ಒಂದು ಭಾಗವಾಗಿದೆ. ಜಿಲ್ಲೆಯ ಹಾಗೂ ಜಿಲ್ಲಾ ಕೇಂದ್ರ ಹೆಸರುಗಳು ಬೇರೆಯಾಗಿರುವ ಕೆಲವೆ ಕೆಲವು ಭಾರತದ ಜಿಲ್ಲೆಗಳ ಪೈಕಿ ಇದೂ ಸಹ ಒಂದು. ಇದರ ಜಿಲ್ಲಾ ಕೇಂದ್ರದ ಹೆಸರು ನರ್ನೌಲ್. ಮಹೇಂದ್ರಗಡ್ ಕೋಟೆಗಾಗಿ ಈ ಜಿಲ್ಲೆ ಪ್ರಸಿದ್ಧವಾಗಿದೆ.

ಚಿತ್ರಕೃಪೆ: gdaley5593

ನ್ಯಾಶನಲ್ ಕ್ಯಾಪಿಟಲ್ ರೀಜನ್:

ನ್ಯಾಶನಲ್ ಕ್ಯಾಪಿಟಲ್ ರೀಜನ್:

ಭಿವಾನಿ : ಹರಿಯಾಣ ರಾಜ್ಯದ 21 ಜಿಲ್ಲೆಗಳ ಪೈಕಿ ಒಂದಾದ ಭಿವಾನಿ, ಎನ್.ಸಿ.ಆರ್ ಪ್ರದೇಶದ ಒಂದು ಭಾಗವಾಗಿದೆ. ಈ ಪಟ್ಟಣವು ದೇವಾಲಯಗಳಿಗಾಗಿ ಪ್ರಸಿದ್ಧಿ ಪಡೆದಿದ್ದು, ಸ್ಥಳೀಯವಾಗಿ ಛೋಟಾ ಕಾಶಿ (ಛೋಟಾ ಅಂದರೆ ಚಿಕ್ಕ ಎಂದರ್ಥ) ಎಂದು ಕರೆಯಲ್ಪಡುತ್ತದೆ. ಭಿವಾನಿಯಲ್ಲಿರುವ ನಕ್ಷತ್ರಾಕಾರದ ಸ್ಮಾರಕ ದೇವಾಲಯ ಆಶ್ರಮ.

ಚಿತ್ರಕೃಪೆ: Raj Kamal Khare

ನ್ಯಾಶನಲ್ ಕ್ಯಾಪಿಟಲ್ ರೀಜನ್:

ನ್ಯಾಶನಲ್ ಕ್ಯಾಪಿಟಲ್ ರೀಜನ್:

ಜಿಂದ್ : ಮಹಾಭಾರತದಲ್ಲಿ ಪಾಂಡವರು ಜಯ ಹಾಗೂ ಯಶಸ್ಸಿನ ದೇವತೆಯಾದ ಜೈಂತಿಗೆ ಗೌರವ ಸೂಚಕವಾಗಿ ಜಯಂತಿ ದೇವಿ ದೇವಸ್ಥಾನ ನಿರ್ಮಿಸಿರುವಂತಹ ಜೈನತಪುರಿಯಿಂದ ಹೆಸರನ್ನು ಪಡೆದುಕೊಂಡಿರುವ ಹರ್ಯಾಣದ ಒಂದು ಜಿಲ್ಲೆ ಜಿಂದ್. ದೇವಸ್ಥಾನವಿದ್ದ ಕಾರಣ ಜೈನತಪುರಿ ಎನ್ನುವ ಹೆಸರನ್ನು ಪಡೆದುಕೊಂಡಿದ್ದ ನಗರವನ್ನು ಈಗ ಜಿಂದ್ ಎಂದು ಕರೆಯಲಾಗುತ್ತಿದೆ. ಜಿಂದ್, ಎನ್.ಸಿ.ಆರ್ ಪ್ರದೇಶದ ಒಂದು ಭಾಗವಾಗಿದೆ.

ಚಿತ್ರಕೃಪೆ: jind.nic.in

ನ್ಯಾಶನಲ್ ಕ್ಯಾಪಿಟಲ್ ರೀಜನ್:

ನ್ಯಾಶನಲ್ ಕ್ಯಾಪಿಟಲ್ ರೀಜನ್:

ಕರನಾಲ್ : ಹರಿಯಾಣ ರಾಜ್ಯದ 21 ಜಿಲ್ಲೆಗಳ ಪೈಕಿ ಒಂದಾದ ಕರನಾಲ್, ಎನ್.ಸಿ.ಆರ್ ಪ್ರದೇಶದ ಒಂದು ಭಾಗವಾಗಿದೆ. ದೀಪಾವಳಿಯ ಸಂದರ್ಭದಲ್ಲಿ ಕರ್ನಾಲ್ ಪಟ್ಟಣ.

ಚಿತ್ರಕೃಪೆ: Arne Hückelheim

ನ್ಯಾಶನಲ್ ಕ್ಯಾಪಿಟಲ್ ರೀಜನ್:

ನ್ಯಾಶನಲ್ ಕ್ಯಾಪಿಟಲ್ ರೀಜನ್:

ಮೀರತ್ : ಉತ್ತರ ಪ್ರದೇಶದ ಮೀರತ್ ನಗರ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ 63ನೇ ಸ್ಥಾನ ಮತ್ತು ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ 14ನೇ ಸ್ಥಾನದಲ್ಲಿದೆ. ಉತ್ತರ ಭಾರತದ ಪ್ರಮುಖ ಸೇನಾ ದಂಡು ಮತ್ತು ಪ್ರಮುಖ ಕೈಗಾರಿಕಾ ಚಟುವಟಿಕೆಗಳಿಗೆ ಈ ನಗರ ಒಂದು ತಾಣವಾಗಿದೆ. ಕ್ರೀಡಾ ಸಾಮಗ್ರಿ ಹಾಗೂ ಸಂಗೀತ ಸಾಧನಗಳನ್ನು ಅತೀ ಹೆಚ್ಚು ಉತ್ಪಾದಿಸುವ ನಗರಗಳಲ್ಲಿ ಮೀರತ್ ಕೂಡ ಒಂದಾಗಿದೆ ಮತ್ತು ವಿಶ್ವದಲ್ಲೇ ಅತೀ ಹೆಚ್ಚಿನ ಬೈಸಿಕಲ್ ರಿಕ್ಷಾ ತಯಾರಾಗುವುದು ಇಲ್ಲಿಯೇ. ಮೀರತ್ ರಾಷ್ಟ್ರೀಯ ರಾಜಧಾನಿ ಪ್ರದೇಶದ ಒಂದು ಭಾಗವಾಗಿದೆ. ಹೆಚ್ಚಿನ ವಿವರ

ಚಿತ್ರಕೃಪೆ: Siddhartha Ghai

ನ್ಯಾಶನಲ್ ಕ್ಯಾಪಿಟಲ್ ರೀಜನ್:

ನ್ಯಾಶನಲ್ ಕ್ಯಾಪಿಟಲ್ ರೀಜನ್:

ಘಾಜಿಯಾಬಾದ್ : ದೆಹಲಿಯ ಜೊತೆಗೆ ತನ್ನ ಗಡಿಯನ್ನು ಹಂಚಿಕೊಂಡಿರುವ ಘಾಜಿಯಾಬಾದ್ ಉತ್ತರ ಪ್ರದೇಶದ ಹೆಬ್ಬಾಗಿಲು ಎಂಬ ಅಭಿಧಾನಕ್ಕೆ ಪಾತ್ರವಾಗಿದೆ. ಈ ನಗರವನ್ನು ಸ್ಥಾಪಿಸಿದ ಘಜಿ-ಉದ್-ದಿನ್ ನಿಂದ ಪಟ್ಟಣಕ್ಕೆ ಈ ಹೆಸರು ಬಂದಿದೆ. ಈ ಊರು ರಾಜಧಾನಿ ದೆಹಲಿಗೆ ಸಮೀಪದಲ್ಲಿರುವ ಕಾರಣವಾಗಿ ಇಲ್ಲಿ ಸಹ ದೊಡ್ಡ ಮಾಲ್‍ಗಳು ಮತ್ತು ವ್ಯಾಪಾರ ಕೇಂದ್ರಗಳು ಇಲ್ಲಿ ಸಹ ತೀವ್ರ ವೇಗವಾಗಿ ತಲೆ ಎತ್ತುತ್ತಿವೆ. ಹೆಚ್ಚಿನ ವಿವರ

ಚಿತ್ರಕೃಪೆ: Mnstwr2418

ನ್ಯಾಶನಲ್ ಕ್ಯಾಪಿಟಲ್ ರೀಜನ್:

ನ್ಯಾಶನಲ್ ಕ್ಯಾಪಿಟಲ್ ರೀಜನ್:

ಗೌತಮ ಬುದ್ಧ ನಗರ : ಉತ್ತರ ಪ್ರದೇಶದ ಗೌತಮ ಬುದ್ಧ ನಗರದಲ್ಲಿ ನೊಯ್ಡಾ ನೆಲೆನಿಂತಿದೆ. ಇದರ ಆಡಳಿತ ಮಂಡಳಿ ಸಮೀಪದ ಗ್ರೇಟರ್ ನೊಯ್ಡಾ ನಗರದಲ್ಲಿದೆ. ಗುರ್ಗಾಂವ್ ನೊಂದಿಗೆ ನೊಯ್ಡಾ ಕೂಡ ಭಾರತದ ಐಟಿ ಕ್ಷೇತ್ರದ ಪ್ರಮುಖ ಕೇಂದ್ರ ಹಾಗೂ ಇಂದು ಹೆಚ್ಚಿನ ಅಂತಾರಾಷ್ಟ್ರೀಯ ಕಂಪನಿಗಳ ಕಚೇರಿಗಳು ಇಲ್ಲಿವೆ. ಇದೂ ಕೂಡ ಎನ್.ಸಿ.ಆರ್ ನ ಭಾಗವಾಗಿದೆ. ಹೆಚ್ಚಿನ ವಿವರ

ಚಿತ್ರಕೃಪೆ: Him2586

ನ್ಯಾಶನಲ್ ಕ್ಯಾಪಿಟಲ್ ರೀಜನ್:

ನ್ಯಾಶನಲ್ ಕ್ಯಾಪಿಟಲ್ ರೀಜನ್:

ಬುಲಂದ್ ಶಹರ್ : ಬುಲಂದ್ ಶಹರ್ ನಗರ ಉತ್ತರಪ್ರದೇಶದ ಬುಲಂದ್ ಶಹರ್ ಜಿಲ್ಲೆಯಲ್ಲಿದೆ ಮತ್ತು ಇದು ಆಡಳಿತ ಮುಖ್ಯಾಲಯವೂ ಹೌದು. ಈ ನಗರದ ಬಗ್ಗೆ ಇತಿಹಾಸ ಜಾಲಾಡಿಸಿದರೆ ಮಹಾಭಾರತದ ಅವಧಿಯಲ್ಲಿ ತಂದು ನಿಲ್ಲಿಸುತ್ತದೆ.

ಚಿತ್ರಕೃಪೆ: Ola.saurabh

ನ್ಯಾಶನಲ್ ಕ್ಯಾಪಿಟಲ್ ರೀಜನ್:

ನ್ಯಾಶನಲ್ ಕ್ಯಾಪಿಟಲ್ ರೀಜನ್:

ಬಾಗಪತ್ : ಉತ್ತರ ಪ್ರದೇಶ ರಾಜ್ಯದ ಜಿಲ್ಲೆಗಳ ಪೈಕಿ ಒಂದಾಗಿರುವ ಬಾಗಪತ್ ಜಿಲ್ಲೆಯ ಜಿಲ್ಲಾ ಕೇಂದ್ರ ಪ್ರದೇಶ ಬಾಗಪತ್. ಇದು ರಾಷ್ಟ್ರೀಯ ರಾಜಧಾನಿ ಪ್ರದೇಶದ ಒಂದು ಭಾಗವಾಗಿದೆ. ಬಾಗಪತ್ ಜಿಲ್ಲೆಯಲ್ಲಿರುವ ಪೂರಾ ಮಹಾದೇವ ಮಂದಿರ. ಇದೊಂದು ಜನಪ್ರೀಯ ಧಾರ್ಮಿಕ ಪ್ರವಾಸಿ ಆಕರ್ಷಣೆಯ ಸ್ಥಳವಾಗಿದೆ.

ಚಿತ್ರಕೃಪೆ: Udham Solanki

ನ್ಯಾಶನಲ್ ಕ್ಯಾಪಿಟಲ್ ರೀಜನ್:

ನ್ಯಾಶನಲ್ ಕ್ಯಾಪಿಟಲ್ ರೀಜನ್:

ಭರತ್ಪುರ : ಭಾರತದ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಲ್ಲಿ ಭರತ್ಪುರ ಕೂಡ ಒಂದು. ಇದನ್ನು 'ರಾಜಸ್ಥಾನಕ್ಕೆ ಪೂರ್ವದ ದಾರಿ' ಎಂದೂ ಕೂಡ ಕರೆಯಲಾಗುತ್ತದೆ. ಇದು ರಾಜಸ್ಥಾನದ ಭರತ್ಪುರ ಜಿಲ್ಲೆಯಲ್ಲಿದೆ. ಇದೂ ಸಹ ಎನ್.ಸಿ.ಆರ್ ನ ಒಂದು ಭಾಗವಾಗಿದೆ. ರಾಮನ ಮತ್ತೊಬ್ಬ ಸಹೋದರನಾದ ಲಕ್ಷ್ಮಣನನ್ನೂ ಕೂಡ ಇಲ್ಲಿ ಮನೆ ದೇವತೆಯಾಗಿ ಪೂಜಿಸಲಾಗುತ್ತದೆ. 'ಲೋಹ್ ಗರ್' ಎಂಬ ಹೆಸರಿನಿಂದಲೂ ಖ್ಯಾತಿಯಾಗಿರುವ ಭರತ್ಪುರ್, ಜನಪ್ರಿಯ ಪ್ರವಾಸಿ ಸ್ಥಳಗಳಾದ ಜೈಪುರ್, ಉದಯ್ ಪುರ್, ಜೈಸಲ್ಮೇರ್ ಮತ್ತು ಜೋಧಪುರ್ ಗೆ ಹೋಗಲು ಮಾರ್ಗವಾಗಿದೆ. [ಹೆಚ್ಚಿನ ವಿವರ] ಚಿತ್ರದಲ್ಲಿರುವುದು ಭರತ್ಪುರ ಕೋಟೆ.

ಚಿತ್ರಕೃಪೆ: Anupom sarmah

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X