Search
  • Follow NativePlanet
Share
» »ರೋಗ ನಿವಾರಕ ನಂದಿ ತೀರ್ಥ

ರೋಗ ನಿವಾರಕ ನಂದಿ ತೀರ್ಥ

ಮಲ್ಲೇಶ್ವರಂಅಲ್ಲಿರುವ ಪ್ರಸಿದ್ಧ ದೇಗುಲಗಳಲ್ಲಿ ದಕ್ಷಿಣ ಮುಖ ನಂದಿ ತೀರ್ಥವು ಒಂದು. ಶಿವಲಿಂಗದ ಮೇಲೆ ನೀರು ಬೀಳುವುದು ಹಾಗೂ ಲಿಂಗದ ಎದುರು ಕಲ್ಯಾಣಿ ಇರುವುದು ಈ ದೇಗುಲದ ವಿಶೇಷ.

By Divya

ಮಲ್ಲೇಶ್ವರಂಅಲ್ಲಿರುವ ಪ್ರಸಿದ್ಧ ದೇಗುಲಗಳಲ್ಲಿ ದಕ್ಷಿಣ ಮುಖ ನಂದಿ ತೀರ್ಥವು ಒಂದು. ಶಿವಲಿಂಗದ ಮೇಲೆ ನೀರು ಬೀಳುವುದು ಹಾಗೂ ಲಿಂಗದ ಎದುರು ಕಲ್ಯಾಣಿ ಇರುವುದು ಈ ದೇಗುಲದ ವಿಶೇಷ. ತಗ್ಗು ಪ್ರದೇಶದಲ್ಲಿರುವ ಈ ದೇಗುಲ ಅನೇಕ ವಿಸ್ಮಯಗಳನ್ನು ಒಳಗೊಂಡಿದೆ. ಮಲ್ಲೇಶ್ವರಂನ 15ನೇ ಅಡ್ಡರಸ್ತೆ ವ್ಯಾಪ್ತಿಯಲ್ಲಿರುವ ಈ ದೇಗುಲಕ್ಕೆ ಭಕ್ತರ ಹರಿವು ಅಪಾರ. ಭಕ್ತರಿಗೆ ಶಿವ ದೇಗುಲ ದರ್ಶನ

ರೋಗ ನಿವಾರಿಸುವ ನಂದಿ ತೀರ್ಥ

PC: en.wikipedia.org

ದೇಗುಲದ ಇತಿಹಾಸ
ಗೌತಮ ಮಹರ್ಷಿಗಳ ಅನುಮತಿಯಂತೆ ವೃಷಭಾವತಿ ನದಿಯು ಬಸವನ ಬಾಯಿಂದ ಆವಿರ್ಭವಿಸಿದಳು. ಹಾಗಾಗಿಯೇ ಬಸವನ ಬಾಯಲ್ಲಿ ವರ್ಷವಿಡೀ ನೀರು ಜಿನುಗುತ್ತದೆ ಎಂಬ ಪುರಾಣವಿದೆ. ನಂದಿಯ ಬಾಯಿಂದ ಬರುವ ನೀರಲ್ಲಿ ರೋಗ ನಿವಾರಕ ಶಕ್ತಿ ಅಡಗಿದೆ. ಈ ನೀರನ್ನು ಮೈಗೆ ಸೋಕಿಕೊಂಡರೆ ಅನೇಕ ರೋಗಗಳು ಗುಣಮುಖವಾಗುತ್ತದೆ ಎನ್ನುವ ಪ್ರತೀತಿ ಇದೆ. ಭಾರತದಲ್ಲಿರುವ ಅತಿ ಪ್ರಮುಖ ಶಿವನ ದೇವಸ್ಥಾನಗಳು

ರೋಗ ನಿವಾರಿಸುವ ನಂದಿ ತೀರ್ಥ

PC: en.wikipedia.org

ವಿಶೇಷ
ಶಿವಲಿಂಗವನ್ನು ನಾಗಾಭರಣಗಳಿಂದ ಅಲಂಕರಿಸಲಾಗುತ್ತದೆ. ರಾತ್ರಿಯ ದೀಪಾಲಂಕಾರ ಬಹಳ ವಿಶೇಷವಾಗಿರುತ್ತದೆ. ದೇಗುಲದಲ್ಲಿರುವ ಕೆತ್ತನೆಗಳು, ಪ್ರವೇಶ ದ್ವಾರದ ಗೋಪುರಗಳು ಹಾಗೂ ಗೋಪುರದ ಮೇಲಿರುವ ನಂದಿ, ಶಿವ-ಪಾರ್ವತಿಯ ಮೂರ್ತಿಗಳು ಮನಮೋಹಕವಾಗಿವೆ. ದೇಗುಲದ ಆರಂಭದಲ್ಲೇ ಗಣಪತಿ ವಿಗ್ರಹವನ್ನು ಇಡಲಾಗಿದೆ. ದೇಗುಲದ ಎದುರಲ್ಲಿರುವ ಸುಂದರ ಕಲ್ಯಾಣಿ ಹಾಗೂ ಅದರಲ್ಲಿರುವ ಆಮೆಗಳ ವಾಸ ವಿಶೇಷವಾದದ್ದು. ಬೆಂಗಳೂರಿನ ಹೆಮ್ಮೆಯ 15 ದೇವಾಲಯಗಳು!

ರೋಗ ನಿವಾರಿಸುವ ನಂದಿ ತೀರ್ಥ

PC: en.wikipedia.org

ನಂಬಿಕೆ
ನಂದಿಯ ಬಾಯಿಂದ ಬರುವ ನೀರು ಶಿವಲಿಂಗದ ಮೇಲೆ ಬೀಳುತ್ತದೆ. ನಂತರ ಕಲ್ಯಾಣಿಗೆ ಹರಿದು ಸಾಗುತ್ತದೆ. ಅದನ್ನು ಜನರು ತೀರ್ಥವೆಂದು ಸ್ವೀಕರಿಸುತ್ತಾರೆ. ಈ ನೀರನ್ನು ಗುದ್ದಲಿ ಪೂಜೆಗೆ, ಬಾವಿ ತೋಡಿಸುವಾಗ ಮಾಡುವ ಗಂಗಾ ಪೂಜೆಗೆ, ಮದುವೆ, ಮುಂಜಿ ಹಾಗೂ ಇತರ ಶುಭ ಕಾರ್ಯಗಳಲ್ಲಿ ಬಳಸಲು ಕೊಂಡೊಯ್ಯುತ್ತಾರೆ. ಇದರಿಂದ ಕಾರ್ಯಗಳು ಸುಗಮಗೊಂಡು, ಮನದ ಆಸೆಗಳು ಪೂರೈಸುತ್ತವೆ ಎನ್ನುವ ನಂಬಿಕೆಯಿದೆ.

ಆಕರ್ಷಣೆ
ದೇಗುಲದ ಹತ್ತಿರ ಸ್ಯಾಂಕಿ ಕೆರೆ, ಕಾಡು ಮಲ್ಲೇಶ್ವರ ದೇಗುಲ, ಚೌಡಯ್ಯಾ ಮೆಮೊರಿಯಲ್ ಹಾಲ್, ಸಾಯಿ ಬಾಬಾ ದೇಗುಲ, ಮಾರಮ್ಮಾ ದೇಗುಲ ಹಾಗೂ ಗಂಗಮ್ಮಾ ದೇಗುಲವಿದೆ.

Read more about: bangalore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X