Search
  • Follow NativePlanet
Share
» »ಸೇಲಂನ ಪೆರುಮಾಳ್ ದೇವಾಲಯದಲ್ಲಿನ ರಹಸ್ಯಗಳು

ಸೇಲಂನ ಪೆರುಮಾಳ್ ದೇವಾಲಯದಲ್ಲಿನ ರಹಸ್ಯಗಳು

ಮಾಹಿಮಾನ್ವಿತ ಪೆರುಮಾಳ್ ದೇವಾಲಯವು ತಮಿಳುನಾಡು ರಾಜ್ಯದಲ್ಲಿನ ಸೇಲಂ ಜಿಲ್ಲೆಯಲ್ಲಿ ಇರುವ ಒಂದು ನಗರದಲ್ಲಿದೆ. ಇದು ಭಾರತ ದೇಶದ ದಕ್ಷಿಣದಿ ರಾಷ್ಟ್ರಗಳಲ್ಲಿ ಉತ್ತರದ ಮಧ್ಯೆ ಪ್ರಾಂತ್ಯದಲ್ಲಿದೆ. ಸೇಲಂ, ಕೊಂಗು ನಾಡು ಎಂದು ಕರೆಯುವ ಪಶ್ಚಿಮ ತಮಿಳುನ

ಮಾಹಿಮಾನ್ವಿತ ಪೆರುಮಾಳ್ ದೇವಾಲಯವು ತಮಿಳುನಾಡು ರಾಜ್ಯದಲ್ಲಿನ ಸೇಲಂ ಜಿಲ್ಲೆಯಲ್ಲಿ ಇರುವ ಒಂದು ನಗರದಲ್ಲಿದೆ. ಇದು ಭಾರತ ದೇಶದ ದಕ್ಷಿಣದಿ ರಾಷ್ಟ್ರಗಳಲ್ಲಿ ಉತ್ತರದ ಮಧ್ಯೆ ಪ್ರಾಂತ್ಯದಲ್ಲಿದೆ. ಸೇಲಂ, ಕೊಂಗು ನಾಡು ಎಂದು ಕರೆಯುವ ಪಶ್ಚಿಮ ತಮಿಳುನಾಡಿನ ಒಂದು ಪ್ರದೇಶ ಇದಾಗಿದೆ.

ಸೇಲಂನ ಎಲ್ಲಾ ಪ್ರದೇಶಗಳಲ್ಲಿಯೂ ದಟ್ಟವಾದ ಪರ್ವತಗಳು ಅವೃತಗೊಂಡಿವೆ. ಈ ಪ್ರದೇಶವು ಪ್ರವಾಸಿಗರಿಗೆ ಒಂದು ಸುಂದರವಾದ ಪ್ರದೇಶವಾಗಲಿದೆ. ಈ ದಟ್ಟವಾದ ಪರ್ವತಗಳಲ್ಲಿ ಎರ್ಕಾಡ ಎಂಬ ಪರ್ವತವಿದೆ. ಈ ಬೆಟ್ಟವನ್ನು ಹತ್ತುವಾಗ ಹಾಗೂ ಇಳಿಯುವಾಗ ಅತ್ಯಂತ ಸುಂದರವಾದ ಅದ್ಭುತ ದೃಶ್ಯಗಳು ಕಾಣಿಸುತ್ತವೆ.

ಇಲ್ಲಿ ಕಿಳಿಯೂರ್ ಜಲಪಾತದಂತಹ ಕೆಲವು ಅಪೂರ್ವವಾದ ವಿದೂರ ಪ್ರದೇಶಗಳು ಕೂಡ ಇವೆ. ಉತ್ತರದಲ್ಲಿ ನಗರಮಲೈ, ದಕ್ಷಿಣದಲ್ಲಿ ಜರುಗುಮಲೈ, ಪಶ್ಚಿಮದಲ್ಲಿ ಕಂಜಮಲೈ ಮತ್ತು ಪೂರ್ವದಲ್ಲಿ ಗೊಡುಮಲೈ ನಂತಹ ಪ್ರಕೃತಿಸಿದ್ಧವಾದ ಪರ್ವತದ ಮಧ್ಯೆದಲ್ಲಿ ಈ ನಗರವಿದೆ.

ಸೇಲಂ ಪರಿಸರ ಪ್ರದೇಶದಲ್ಲಿರುವ ಪರ್ವತಗಳು ಪ್ರಾಚೀನ ಕಾಲದಲ್ಲಿಯೂ ಗುರುತಿಸಲಾಗಿದೆ. ಮುಖ್ಯವಾಗಿ ತಿರುಮಣಿಮುತ್ತೂರ್ ಎನ್ನುವ ನದಿ ಈ ನಗರದ ಮಧ್ಯೆ ಇದೆ. ಪರ್ವತದ ಸುತ್ತಲೂ ಇರುವ ಪ್ರದೇಶವನ್ನು ಶಾಸನದಲ್ಲಿ ಕೂಡ ಕಾಣಬಹುದಾಗಿದೆ.

ದೇವಾಲಯ ಎಲ್ಲಿದೆ?

ದೇವಾಲಯ ಎಲ್ಲಿದೆ?

ತಮಿಳುನಾಡಿನಲ್ಲಿನ ಸೇಲಂ ಜಿಲ್ಲೆಯ ನವಕುರುಚ್ಚಿ ಎನ್ನುವ ಗ್ರಾಮದಲ್ಲಿ ಹಲವಾರು ದಶಕಗಳಿಂದ ಮುಚ್ಚಿ ಹೋಗಿದ್ದ ಒಂದು ಪುರಾತನವಾದ ದೇವಾಲಯವನ್ನು ಗ್ರಾಮಸ್ಥರು ಇತ್ತಿಚೀಗೆ ಹೊರ ತೆರೆದರು.

ದೇವಾಲಯದ ರಹಸ್ಯ

ದೇವಾಲಯದ ರಹಸ್ಯ

ಆದರೆ ದೇವಾಲಯದಲ್ಲಿ ಕೆಲವು ವಾಸ್ತು ದೋಷಗಳಿವೆ ಎಂದು ಪಂಡಿತರು ಹೇಳಿದರು. ಆಂಜನೇಯ ಸ್ವಾಮಿ ಇರಬೇಕಾದ ಸ್ಥಳದಲ್ಲಿ ಬೇರೆ ದೇವತೆಗಳ ವಿಗ್ರಹಗಳಿವೆ ಎಂದು ತಿಳಿಸಿದರು.

ಪುನರ್ ಪ್ರತಿಷ್ಟಾಪನೆ

ಪುನರ್ ಪ್ರತಿಷ್ಟಾಪನೆ

ವಾಸ್ತು ದೋಷವಿದೆ ಎಂದ ಪಂಡಿತರು ಆದನ್ನು ಹೋಗಲಾಡಿಸಲು ಸ್ವಾಮಿಯ ವಿಗ್ರಹವನ್ನು ಪುನರ್ ಪ್ರತಿಷ್ಟಾಪನೆ ಮಾಡಬೇಕು ಎಂದು ನಿರ್ಣಯಿಸಿದರು.

ರಹಸ್ಯ ಬಹಿರಂಗ

ರಹಸ್ಯ ಬಹಿರಂಗ

ದೇವತಾ ಮೂರ್ತಿಯನ್ನು ಪುನರ್ ಪ್ರತಿಷ್ಟಾಪಿಸಲು ಮುಂದಿನ ಕೆಲಸ ಪ್ರಾರಂಭಿಸಿದರು. ದೇವಾಲಯದ ಪ್ರಾಂಗಣದಲ್ಲಿ ವಿಗ್ರಹ ಪ್ರತಿಷ್ಟಾಪನೆಗೋಸ್ಕರ ಅಗೆಯುವ ಸಂದರ್ಭದಲ್ಲಿ ಒಂದು ರಹಸ್ಯವಾದ ಕೊಠಡಿಯು ಬೆಳಕಿಗೆ ಬಂದಿತು.

ಆ ರಹಸ್ಯ ಕೊಠಡಿಯಲ್ಲಿ ಏನಿದೆ?

ಆ ರಹಸ್ಯ ಕೊಠಡಿಯಲ್ಲಿ ಏನಿದೆ?

ಆಶ್ಚರ್ಯಕ್ಕೆ ಗುರಿಯಾದ ಗ್ರಾಮಸ್ಥರು ಆ ರಹಸ್ಯಮಯವಾದ ಕೊಠಡಿಗೆ ತೆರಳಿ ನೋಡಿದರೆ ಅಲ್ಲಿ ಶತಮಾನಗಳ ಇತಿಹಾಸವಿರುವ ಪೆರುಮಾಳ್‍ನ ವಿಗ್ರಹಗಳು ಬೆಳಕಿಗೆ ಬಂದಿತು.

ಪುರಾತತ್ವ ಶಾಖೆ

ಪುರಾತತ್ವ ಶಾಖೆ

ಈ ವಿಷಯ ತಿಳಿದ ಪುರಾತತ್ವ ಶಾಖೆಯವರು ತಕ್ಷಣ ಈ ದೇವಾಲಯಕ್ಕೆ ಭೇಟಿ ನೀಡಿದರು.

ಯಾವ ಕಾಲದ್ದು?

ಯಾವ ಕಾಲದ್ದು?

ವಿಗ್ರಹಗಳು ಪರಿಶೀಲಿಸಿದ ಪುರಾತತ್ವ ಇಲಾಖೆಯವರು ವಿಗ್ರಹಗಳು 16 ನೇ ಶತಮಾನದವು ಎಂದು ಗುರುತಿಸಿದರು.

ಪ್ರತಿಪಾದನೆ

ಪ್ರತಿಪಾದನೆ

ಈ ವಿಗ್ರಹಗಳನ್ನು ಪುರಾತತ್ವ ಇಲಾಖೆ ಅಧಿಕಾರಿಗಳು ಸ್ವಾಧಿನ ಮಾಡಿಕೊಳ್ಳುತ್ತಿದ್ದೇವೆ ಎಂದು ಪ್ರತಿಪಾದಿಸಿದರು. ಆದರೆ ಇದಕ್ಕೆ ಸ್ಥಳೀಯರು ವಿರೋದವನ್ನು ವ್ಯಕ್ತ ಪಡಿಸಿದರು.

ಪ್ರತಿಷ್ಟಾಪನೆ

ಪ್ರತಿಷ್ಟಾಪನೆ

ಸ್ಥಳೀಯರು ಪುರಾತತ್ವ ಇಲಾಖೆಯವರನ್ನು ವಿರೋಧಿಸಿ ಪೆರುಮಾಳ್ ವಿಗ್ರಹಗಳನ್ನು ಅದೇ ಗುಡಿಯಲ್ಲಿ ಪ್ರತಿಷ್ಟಾಪಿಸಬೇಕು ಎಂದು ನಿರ್ಣಯಿಸಿದರು.

ಪುರಾತತ್ವ ಶಾಖೆ

ಪುರಾತತ್ವ ಶಾಖೆ

ಗ್ರಾಮಸ್ಥರ ಈ ಮಾತಿಗೆ ಪುರಾತತ್ವ ಇಲಾಖೆಯವರು ಏನೇನೂ ಹೇಳಿ ಅಲ್ಲಿಂದ ಪೆರುಮಾಳ್ ವಿಗ್ರಹವನ್ನು ತೆಗೆದುಕೊಂಡು ಹೋದರಂತೆ.

ಸಮೀಪದ ಪ್ರವಾಸಿ ತಾಣಗಳು

ಸಮೀಪದ ಪ್ರವಾಸಿ ತಾಣಗಳು

ಏರ್ಕಾಡ ಹಿಲ್ ಸ್ಟೇಷನ್
ಭಾರತ ದೇಶದಲ್ಲಿನ ತಮಿಳುನಾಡಿನಲ್ಲಿ ಸೇಲಂನಲ್ಲಿನಲ್ಲಿರುವ ಒಂದು ಹಿಲ್ ಸ್ಟೇಷನ್ ಏರ್ಕಾಡ. ಇದೊಂದು ಅತ್ಯಂತ ಸುಂದರವಾದ ಪರ್ವತ ಶ್ರೇಣಿಗಳಲ್ಲಿ ಒಂದಾಗಿದೆ. ಇಲ್ಲಿಗೆ ಸಾವಿರಾರು ಪ್ರವಾಸಿರು ಭೇಟಿ ನೀಡುತ್ತಿರುತ್ತಾರೆ.

ಏರ್ಕಾಡ ಹಿಲ್ ಸ್ಟೇಷನ್

ಏರ್ಕಾಡ ಹಿಲ್ ಸ್ಟೇಷನ್

ಇದು ಸಮುದ್ರ ಮಟ್ಟಕ್ಕೆ ಸುಮಾರು 1515 ಮೀಟರ್ (4969 ಅಡಿ) ಎತ್ತರದಲ್ಲಿದೆ. ಈ ಊರಿನ ಹೆಸರು ಊರಿನ ಮೂಲೆಯಲ್ಲಿನ ಹೊಳೆಯ ಹೆಸರಿನಿಂದ ಬಂದಿದೆ ಎಂತೆ. ತಮಿಳಿನಲ್ಲಿ "ಏರಿ" ಎಂದರೆ " ಹೊಳೆ" ಮತ್ತು "ಕಾಡು" ಎಂದರೆ "ಅಡವಿ" ಯಾಗಿದೆ. ಇಲ್ಲಿ ಹೆಚ್ಚಾಗಿ ಕಾಫಿ ತೋಟ ಹಾಗೂ ಆರೆಂಜ್ ತೋಟ ಹೆಚ್ಚಾಗಿ ಕಾಣಬಹುದು.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ಚೆನ್ನೈ, ಬೆಂಗಳೂರು, ತಿರುವನಂತಪುರ, ಕೊಯಂಬತ್ತೂರು, ಮದುರೈ, ಎರ್ನಾಕುಳಂ ಅಥವಾ ಕೊಚ್ಚಿನ್, ಪಾಂಡಿಚೆರಿ, ತಿರುಚಿ, ಕನ್ಯಾಕುಮಾರಿಯಂತಹ ಪ್ರದೇಶಗಳಿಗೆ ತೆರಳುವ ಮಾರ್ಗ ಮಧ್ಯೆಯಲ್ಲಿ ಸೇಲಂ ಇದೆ.

ರಸ್ತೆ ಮಾರ್ಗದ ಮೂಲಕ

ರಸ್ತೆ ಮಾರ್ಗದ ಮೂಲಕ

ಸೇಲಂನಲ್ಲಿ 2 ದೊಡ್ಡದಾದ ಬಸ್ ಸ್ಟಾಪ್‍ಗಳಿವೆ. ಅವುಗಳಲ್ಲಿ ಒಂದು ಎಮ್,ಜಿ,ಆರ್ ಇಂಟೆಗ್ರೆಟಡ್ ಬಸ್ ಟೆರ್ಮಿನಸ್. ಸೆಂಟ್ರಲ್ ಬಸ್ ಟೆರ್ಮಿನಸ್ ಎಂದು ಕೂಡ ಕರೆಯುತ್ತಾರೆ. ಇನ್ನೊಂದು ಬಸ್ ಸ್ಟೇಷನ್ (ಹಳೆಯ ಬಸ್ ಸ್ಟಾಂಡ್).

ರೈಲ್ವೆ ಮಾರ್ಗದ ಮೂಲಕ

ರೈಲ್ವೆ ಮಾರ್ಗದ ಮೂಲಕ

ಚೆನ್ನೈನ ಮೂಲಕ ಸೇಲಂಗೆ ರೈಲ್ವೆ ಮಾರ್ಗವಿದೆ. ಹೀಗಾಗಿ ಸುಲಭವಾಗಿ ಈ ದೇವಾಲಯಕ್ಕೆ ಹಾಗೂ ಸುಂದರವಾದ ಪರ್ವತಗಳಿಗೆ ಭೇಟಿ ನೀಡಬಹುದಾಗಿದೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X