Search
  • Follow NativePlanet
Share
» »ಮೈಸೂರು ದಸರಾ 2014 : ಇವುಗಳನ್ನು ಆನಂದಿಸಿ

ಮೈಸೂರು ದಸರಾ 2014 : ಇವುಗಳನ್ನು ಆನಂದಿಸಿ

By Vijay

ಮೈಸೂರು ದಸರಾ ಹಬ್ಬದ ಸಡಗರವು ಎಲ್ಲರಿಗೂ ಎಲ್ಲಿಲ್ಲದ ಉತ್ಸಾಹ, ಪ್ರಸನ್ನತೆ ಹಾಗೂ ಸಂತಸವನ್ನು ಮೂಡಿಸುತ್ತದೆ. ದೇಶದ ನಾನಾ ಭಾಗಗಳಿಂದ ಅದರಲ್ಲೂ ವಿಶೇಷವಾಗಿ ವಿದೇಶಗಳಿಂದಲೂ ಸಹ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಮೈಸೂರು ದಸರೆಯ ಸಂಭ್ರಮದಲ್ಲಿ ಪಾಲ್ಗೊಳ್ಳಲು ಬರುತ್ತಾರೆ.

ಕರ್ನಾಟಕ ರಾಜ್ಯದ ಅಧಿಕೃತ ರಾಜ್ಯ/ನಾಡ ಹಬ್ಬವಾಗಿರುವ ದಸರೆಗೆ ತನ್ನದೆ ಆದ ವಿಶಿಷ್ಟ ಇತಿಹಾಸವಿದೆ. ವಿಜಯನಗರ ಸಾಮ್ರಾಜ್ಯದ ಅರಸರ ಕಾಲದಿಂದಲೆ ದಸರೆಯನ್ನು ವಿಶಿಷ್ಟವಾಗಿ ಸಾರ್ವಜನಿಕ ಹಬ್ಬವನ್ನಾಗಿ ಆಚರಿಸುತ್ತಿದ್ದರೆನ್ನಲಾಗಿದೆ. ನಂತರ ಟಿಪ್ಪುವಿನ ಸಮಯದಲ್ಲೂ ಇದು ಮುಂದುವರೆಯಿತು. ಆ ಸಮಯದಲ್ಲಿ ಶ್ರೀರಂಗಪಟ್ಟಣವು ಪ್ರಮುಖ ಹಬ್ಬದ ತಾಣವಾಗಿತ್ತು.

ಕಾಲಾಂತರ ಇದು ಮೈಸೂರು ಮಹಾರಾಜರಿಂದ ಮತ್ತೆ ಕಳೆಯನ್ನು ಕಂಡಿತು. ಮೈಸೂರಿನ ಮಹಾರಾಜರಿಂದಲೆ ಇದು ಮೈಸೂರು ಪಟ್ಟಣಕ್ಕೆ ಸ್ಥಳಾಂತರಗೊಂಡು ಇನ್ನಷ್ಟು ಶೋಭಾಯಮಾನವಾಗಿ ಸಾರ್ವಜನಿಕ ಉತ್ಸವವಾಗಿ ಚಿಗುರತೊಡಗಿತು. ಅದೆ ಪರಂಪರೆಯು ಇಂದೂ ಸಹ ಮುಂದುವರೆಯಲ್ಪಟ್ಟಿದ್ದು ನಮಗೆ ಹೆಮ್ಮೆಯ ವಿಷಯವಾಗಿದೆ.

ದೇಶದ ಎಲ್ಲ ನಗರಗಳಿಂದ ಮೈಸೂರು ಪಟ್ಟಣವನ್ನು ನಿರಾಯಾಸವಾಗಿ ತಲುಪಬಹುದು. ಒಂದೊಮ್ಮೆ ದಸರೆಗೆ ಮೈಸೂರಿಗೆ ಬಂದಿದ್ದೆ ಆದಲ್ಲಿ, ಈ ಎಲ್ಲ ಚಟುವಟಿಕೆಗಳನ್ನು ನೀವು ಅತಿ ಆನಂದದಿಂದ ಅನುಭವಿಸಬಹುದು.

ಆನಂದಮಯ ದಸರ ಹಬ್ಬ:

ಆನಂದಮಯ ದಸರ ಹಬ್ಬ:

ನಾಡ ಕುಸ್ತಿ: ಮಲ್ಲ ಯುದ್ಧ ಅಥವಾ ಕುಸ್ತಿ ನಮ್ಮ ದೇಶದ ಸಾಂಪ್ರದಾಯಿಕ ಕ್ರೀಡೆ. ಹಿಂದೆ ರಾಜರೂ ಕೂಡ ಅತಿ ಉತ್ಸಾಹದಿಂದ ಭಾಗವಹಿಸುತ್ತಿದ್ದ ಕ್ರೀಡೆ ಇದು. ಯೋಧನ ಪರಾಕ್ರಮ, ಬಲ, ಶಕ್ತಿಗಳನ್ನು ಪ್ರದರ್ಶಿಸುವ ಮಾನದಂಡವಾಗಿತ್ತು ಕುಸ್ತಿ. ಈ ದಸರೆಯ ಪ್ರಮುಖ ಆಕರ್ಷಣೆಗಳ ಪೈಕಿ ಒಂದಾಗಿದೆ ಈ ಕುಸ್ತಿ ಕ್ರೀಡೆ.

ಚಿತ್ರಕೃಪೆ: mysoredasara.gov.in

ಆನಂದಮಯ ದಸರ ಹಬ್ಬ:

ಆನಂದಮಯ ದಸರ ಹಬ್ಬ:

ಯುವ ಸಂಭ್ರಮ: ಹದಿಹರೆಯದವರ ಯವ್ವನದ ವಯಸಿನಲಿ ಕನಸುಗಳು, ಆಸೆಗಳು ಅಪಾರ. ಮನಸ್ಸು ಸದಾ ಆನಂದವನ್ನು, ರೋಮಾಂಚನವನ್ನು ಬಯಸುತ್ತಿರುತ್ತದೆ. ದಸರೆಯ ಪ್ರಯುಕ್ತ ನಡೆಯುವ ಯುವ ಸಂಭ್ರಮ ಕಾರ್ಯಕ್ರಮವು ಅಂತಹ ಒಂದು ಸುಂದರ ಅವಕಾಶಕ್ಕೆ ಎಡೆಮಾಡಿ ಕೊಡುತ್ತದೆ. ವಿವಿಧ ಪ್ರಕಾರದ ನೃತ್ಯಗಳು ನಿಮ್ಮನ್ನು ರಂಜಿಸುತ್ತವೆ. ಸೆಪ್ಟಂಬರ್ 17 ರಿಂದ ಆರಂಭವಾದ ಈ ಕಾರ್ಯಕ್ರಮವು ಸೆ.22 ರ ವರೆಗೆ ಸಂಜೆ 6.30 ರಾತ್ರಿ 10.30 ರ ವರೆಗೆ ಮೈಸೂರಿನ ತೆರೆದ ಸಭಾಂಗಣದಲ್ಲಿ ನಡೆಯುತ್ತದೆ. ವಿವಿಧ ಕಾಲೇಜು ಯುವಕ ಯುವತಿಯರು ಇದರಲ್ಲಿ ಪಾಲ್ಗೊಳ್ಳುತ್ತಾರೆ. (ಸಾಂದರ್ಭಿಕ ಚಿತ್ರ)

ಚಿತ್ರಕೃಪೆ: Kyle Falconer

ಆನಂದಮಯ ದಸರ ಹಬ್ಬ:

ಆನಂದಮಯ ದಸರ ಹಬ್ಬ:

ದಸರಾ ಕ್ರೀಡೆ : ದಸರಾ ಕ್ರೀಡಾ ಸಮೀತಿಯು ಈ ಸ್ಪರ್ಧೆಯನ್ನು ಆಯೋಜಿಸುತ್ತದೆ. ಮಕ್ಕಳಿಂದ ಹಿಡಿದು ವಯಸ್ಕರೆಲ್ಲರು ಇದರಲ್ಲಿ ಭಾಗವಹಿಸಬಹುದಾಗಿದೆ. ಅಷ್ಟೆಅಲ್ಲ, ಗೆದ್ದವರಿಗೆ ಮೊದಲ ಹತ್ತು ಸ್ಥಾನಗಳವರೆಗೆ ಪ್ರಶಸ್ತಿಯ ರೂಪದಲ್ಲಿ ಹಣವನ್ನು ನೀಡಲಾಗುತ್ತದೆ. ಮ್ಯಾರಥಾನ್ ಓಟ ಹಾಗೂ ಸೈಕಲ್ ಓಡಿಸುವುದು ಕ್ರೀಡೆಗಳು ಆಯೋಜಿಸಲ್ಪಡುತ್ತವೆ. ಅಲ್ಲದೆ ಈ ಸಲ ಯುನಿಟಿ ರನ್ ಎಂದು ಎಲ್ಲರೂ ಪಾಲ್ಗೊಳ್ಳಬಹುದಾದ ಏಕತೆಯನ್ನು ಸೂಚಿಸುವ ಓಟವನ್ನು ಹಮ್ಮಿಕೊಳ್ಳಲಾಗಿದೆ. ಈ ಕ್ರೀಡೆಯು ಸೆ.24 ರಿಂದ ಸೆ.28 ರ ವರೆಗೆ ಬೆಳಿಗ್ಗೆ 6.30 ರಿಂದ ಪ್ರಾರಂಭಗೊಳ್ಳುತ್ತದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: R E B E L TM®

ಆನಂದಮಯ ದಸರ ಹಬ್ಬ:

ಆನಂದಮಯ ದಸರ ಹಬ್ಬ:

ಖಾದ್ಯ ಮೇಳ: ಸೆ.25 ರಿಂದ ಅಕ್ಟೋಬರ್ 2 ರ ವರೆಗೆ ಮೈಸೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಮಧ್ಯಾಹ್ನ ಮೂರು ಘಂಟೆಯಿಂದ ನಾಲ್ಕು ಘಂಟೆಯವರೆಗೆ ಆಯೋಜಿಸಲಾಗಿದೆ. ವಿವಿಧ ಬಗೆಯ ತಿಂಡಿ ತಿನಿಸುಗಳ ಜೊತೆ ತಿನ್ನುವ ಸ್ಪರ್ಧೆಯೂ ಇರುತ್ತದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: eddie welker

ಆನಂದಮಯ ದಸರ ಹಬ್ಬ:

ಆನಂದಮಯ ದಸರ ಹಬ್ಬ:

ಗಾಳಿಪಟ ಉತ್ಸವ: ಸೆ.30 ರಿಂದ ಅಕ್ಟೋಬರ್ 2 ರ ವರೆಗೆ ಗಾಳಿಪಟ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: rajkumar1220

ಆನಂದಮಯ ದಸರ ಹಬ್ಬ:

ಆನಂದಮಯ ದಸರ ಹಬ್ಬ:

ದಸರಾ ಚಿತ್ರೋತ್ಸವ: ಸೆ.25 ರಿಂದ ಅಕ್ಟೋಬರ್ 3 ರ ವರೆಗೆ ವಿವಿಧ ಚಲನ ಚಿತ್ರಗಳ ಪ್ರದರ್ಶನದ ಚಿತ್ರೋತ್ಸವವನ್ನು ಆಯೋಜಿಸಲಾಗಿದೆ. ಕಲಾಮಂದಿರ, ಸೆನೆಟ್ ಭವನ ಹೀಗೆ ಹಲವಾರು ಸಭಾಂಗಣಗಳಲ್ಲಿ ಕನ್ನಡ ಹಾಗೂ ಹಿಂದಿ ಚಿತ್ರಗಳ ಪ್ರದರ್ಶನವಿರುತ್ತದೆ. ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Ivonne Chocarro

ಆನಂದಮಯ ದಸರ ಹಬ್ಬ:

ಆನಂದಮಯ ದಸರ ಹಬ್ಬ:

ಇವುಗಳಲ್ಲದೆ ಗ್ರಾಮೀಣ ದಸರಾ, ಮಹಿಳೆಯರ ದಸರಾ, ಮಕ್ಕಳ ದಸರಾ, ಯುವ ದಸರಾ, ದಸರಾ ಕವಿಗೋಷ್ಠಿ, ಪುಷ್ಪಪ್ರದರ್ಶನ, ರೈತರ ದಸರಾ, ಆರೋಗ್ಯ ದಸರಾ ಎಂಬ ವಿಶಿಷ್ಟ ಆಚರಣೆಗಳನ್ನು ಆಯೋಜಿಸಲಾಗಿದೆ. ಅಂದರೆ ನೀವು ಮೈಸೂರಿಗೆ ತೆರಳಿದಾಗ ನಿಮಗಿಷ್ಟವಾದ ಕಾರ್ಯಕ್ರಮಗಳಿಗೆ ತೆರಳಬಹುದು. ಪ್ರವೇಶ ಶುಲ್ಕದ ಕುರಿತು ಮೊದಲೆ ಸ್ಥಳೀಯವಾಗಿ ತಿಳಿದುಕೊಳ್ಳಿ. ಪ್ರಸ್ತುತ ದಸರಾಗೆ ಜಿಲ್ಲಾಡಳಿತದ ವತಿಯಿಂದ ಪ್ರವಾಸಿಗರ ಅನುಕೂಲಕ್ಕೆಂದು ಗೋಲ್ಡ್ ಕಾರ್ಡ್ ಹಾಗೂ ದಸರಾ ಪಾಸ್‍ಪೋರ್ಟ್ ಗಳನ್ನು ಬಿಡುಗಡೆ ಮಾಡಲಾಗಿದೆ. ಇದರ ಕುರಿತು ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ.

ಚಿತ್ರಕೃಪೆ: mysoredasara.gov.in

ಆನಂದಮಯ ದಸರ ಹಬ್ಬ:

ಆನಂದಮಯ ದಸರ ಹಬ್ಬ:

ಕೊನೆಯದಾಗಿ ಅಕ್ಟೋಬರ್ 4 ರಂದು ಅದ್ದೂರಿಯ, ಅತಿ ವೈಭವದ ಜಂಬೂ ಸವಾರಿ ಮೆರವಣಿಗೆಯು ಏರ್ಪಡುತ್ತದೆ. ರಾಜ್ಯದ ಎಲ್ಲೆಡೆಯಿಂದ ಆಗಮಿಸುವ ಹಲವಾರು ಕಲಾವಿದರು ಈ ಮೆರವಣಿಗೆಯ ಭಾಗವಾಗಿರುತ್ತಾರೆ. ಗಣ್ರಜ್ಯೋತ್ಸವದಂದು ದೆಹಲಿಯಲ್ಲಿ ನಡೆಯುವ ಸಾಂಸ್ಕೃತಿಕ ಮೆರವಣಿಗೆಯ ರೀತಿಯಲ್ಲೆ ಈ ಅದ್ಭುತ ಮೆರವಣಿಗೆಯು ನಡೆಯುತ್ತದೆ. ಈ ಒಂದು ಪ್ರಸಂಗಕ್ಕೆ ಲಕ್ಷಾಂತರ ಜನರು ಸಾಕ್ಷಿಯಾಗುತ್ತಾರೆ.

ಚಿತ್ರಕೃಪೆ: mysoredasara.gov.in

ಆನಂದಮಯ ದಸರ ಹಬ್ಬ:

ಆನಂದಮಯ ದಸರ ಹಬ್ಬ:

ಚಿನ್ನದ ಅಂಬಾರಿ ಹಾಗೂ ಅದರಲ್ಲಿ ಚಾಮುಂಡೇಶ್ವರಿಯ ವಿಗ್ರಹ ಹೊತ್ತ ಗಜ ಪಡೆಯು ನಂದಿ ಧ್ವಜ ಪೂಜೆಯ ನಂತರ ಮೈಸೂರು ಅರಮನೆಯಿಂದ ಸಾಗುತ್ತದೆ. ಈ ಮೆರವಣಿಗೆಯು ಹೆಚ್ಚು ಕಡಿಮೆ ಮಧ್ಯಾಹ್ನದ ಸಮಯದಲ್ಲಿ ಪ್ರಾರಂಭಗೊಂಡು ರಾತ್ರಿಯವರೆಗೆ ನಡೆಯುತ್ತದೆ. ಬನ್ನಿಮಂಟಪ ಮೂಲಕ ಪಂಜಿನ ಕವಾಯತ್ತು ಮೈದಾನದಲ್ಲಿ ಮುಕ್ತಾಯಗೊಳ್ಳುತ್ತದೆ. ದಸರಾ ಮೆರವಣಿಗೆ.

ಚಿತ್ರಕೃಪೆ: Kalyan Kumar

ಆನಂದಮಯ ದಸರ ಹಬ್ಬ:

ಆನಂದಮಯ ದಸರ ಹಬ್ಬ:

ಅದ್ದೂರಿಯ ದಸರಾ ಮೆರವಣಿಗೆ. ಹಬ್ಬದ ಪ್ರಮುಖ ಆಕರ್ಷಣೆ ಹಾಗೂ ಹತ್ತು ದಿನಗಳವರೆಗೆ ನಡೆಯುವ ಉತ್ಸವದಲ್ಲಿ ಕೊನೆಯದಾದ ಮಹತ್ತರ ಕಾರ್ಯಕ್ರಮ ಈ ಮೆರವಣಿಗೆ.

ಚಿತ್ರಕೃಪೆ: Kalyan Kumar

ಆನಂದಮಯ ದಸರ ಹಬ್ಬ:

ಆನಂದಮಯ ದಸರ ಹಬ್ಬ:

ದಸರಾ ಹಬ್ಬದ ಸಮಯದಲ್ಲಿ ಪ್ರಕಾಶಮಾನವಾಗಿ, ವೈಭವೋಪೇತವಾಗಿ ಕಾಣುವ ಅತಿ ಸುಂದರ ಹಾಗೂ ಮನಮೋಹಕವಾದ ಮೈಸೂರು ಅರಮನೆ.

ಚಿತ್ರಕೃಪೆ: Ananth BS

ಆನಂದಮಯ ದಸರ ಹಬ್ಬ:

ಆನಂದಮಯ ದಸರ ಹಬ್ಬ:

ದಸರೆಯ ನಂತರ ನಿಮಗೆ ಇನ್ನೂ ಸಮಯಾವಕಾಶವಿದ್ದರೆ ಅಥವಾ ದಸರಾ ಸಂದರ್ಭದಲ್ಲಿ ಬಹುತೇಕ ಕಾರ್ಯಕ್ರಮಗಳು ಸಂಜೆಯ ವೇಳೆಯಲ್ಲೆ ನಡೆಯುವುದರಿಂದ ದಿನದ ಸಮಯವನ್ನು ನಗರದಲ್ಲಿರುವ ಪ್ರವಾಸಿ ಆಕರ್ಷಣೆಗಳಿಗೆ ಭೇಟಿ ನೀಡುತ್ತ ಹಾಯಾಗಿ ಕಳೆಯಬಹುದು. ಏನೇಲ್ಲ ಆಕರ್ಷಣೆಗಳು ನಿಮ್ಮನ್ನು ಚುಂಬಕದಂತೆ ಸೆಳೆಯುತ್ತವೆ ಎಂಬುದರ ಕುರಿತು ಈ ಮೂಲಕ ತಿಳಿಯಿರಿ.

ಚಿತ್ರಕೃಪೆ: Hsk007in

ಆನಂದಮಯ ದಸರ ಹಬ್ಬ:

ಆನಂದಮಯ ದಸರ ಹಬ್ಬ:

ಲಲಿತ ಮಹಲ್: ನಾಲ್ವಡಿ ಕೃಷ್ಣ ರಾಜ ರಾಜ ಒಡೆಯರವರು 1931ರಲ್ಲಿ ಭಾರತದ ವೈಸರಾಯ್ ರವರಿಗಾಗಿ ಈ ಮಹಲ್ ಅನ್ನು ನಿರ್ಮಿಸಿದರು. ಮುಂಬೈನ ಈ ಡಬಲ್ಯು. ಫ್ರೀಚ್ಲೀರವರು ನವೀನ ವಾಸ್ತುಶೈಲಿಯ ಜೊತೆಗೆ ಆಂಗ್ಲರ ಮನೆಗಳ ಮತ್ತು ಇಟಾಲಿಯನ್ ಪ್ಲಾಜಾಗಳ ಮಾದರಿಯಲ್ಲಿ ವಿನ್ಯಾಸ ಮಾಡಿದರು. ಪ್ರಸ್ತುತವಾಗಿ ಈ ಬಂಗಲೆಯು ಭಾರತೀಯ ಪ್ರವಾಸೋಧ್ಯಮ ಅಭೀವೃದ್ಧಿ ಇಲಾಖೆಯ ಯೋಜನೆಯಂತೆ ಪಂಚತಾರಾ ಹೊಟೇಲ್ ಆಗಿ ಮಾರ್ಪಾಡಾಗಿದೆ. ಈ ವೈಭವಯುತ ಹೊಟೇಲ್ ತನ್ನ ಅತಿಥಿಗಳಿಗೆ ಮೂಲ ಬಂಗಲೆಯ ಸಮಾನಕ್ಕೆ ತಕ್ಕಂತೆ ಉನ್ನತ ಮಟ್ಟದ ಆತಿಥ್ಯದೊಂದಿಗೆ ಸೇವೆ ನೀಡುತ್ತದೆ.

ಚಿತ್ರಕೃಪೆ: Sreeraj PS

ಆನಂದಮಯ ದಸರ ಹಬ್ಬ:

ಆನಂದಮಯ ದಸರ ಹಬ್ಬ:

ಜಯಲಕ್ಷ್ಮಿ ವಿಲಾಸ: ಮೈಸೂರಿನ ಅತ್ಯಂತ ಸೂಂದರವಾದ ಪಾರಂಪರಿಕಾ ಕಟ್ಟಡಗಳಲ್ಲಿ ಒಂದೆನಿಸಿದ ಜಯಲಕ್ಷ್ಮಿ ವಿಲಾಸ್ ಬಂಗಲೆಯನ್ನು ಎಲ್ಲಾ ಪ್ರವಾಸಿಗರೂ ಒಮ್ಮೆ ಹೋಗಿ ನೋಡಲೇಬೇಕು. ಈ ಅರಮನೆಯು ಮೈಸೂರು ವಿಶ್ವವಿದ್ಯಾನಿಲಯದ ಆವರಣವಾಗಿರುವ ಹಚ್ಚ ಹಸಿರಿನಿಂದ ಸುಂದರವಾಗಿರುವ ಮಾನಸ ಗಂಗೋತ್ರಿಯಿಂದ ಸುತ್ತುವರೆದಿದ್ದು ಒಂದು ಬೆಟ್ಟದ ಮೇಲೆ ಕುಕ್ಕರಹಳ್ಳಿ ಕೆರೆಯ ಪಶ್ಚಿಮದ ಭಾಗದಲ್ಲಿ ನೆಲೆಸಿದೆ. ಜಯಲಕ್ಷ್ಮಿ ವಿಲಾಸ್ ಬಂಗಲೆಯನ್ನು ನಾಲ್ವಡಿ ಕೃಷ್ಣ ರಾಜ ಒಡೆಯರ್ ರವರ ಅವಧಿಯಲ್ಲಿ ಮಹಾರಾಜ ಚಾಮರಾಜ ಒಡೆಯರವರ ದೊಡ್ಡ ಮಗಳಾದ ಯುವರಾಣಿ ಜಯಲಕ್ಷ್ಮಿ ಅಮ್ಮಣ್ಣಿರವರಿಗೆಂದು ನಿರ್ಮಿಸಿದ್ದರು.

ಚಿತ್ರಕೃಪೆ: Pratheepps

ಆನಂದಮಯ ದಸರ ಹಬ್ಬ:

ಆನಂದಮಯ ದಸರ ಹಬ್ಬ:

ಕುಕ್ಕರಹಳ್ಳಿ ಕೆರೆ: ಮೈಸೂರು ವಿಶ್ವವಿದ್ಯಾಲಯದ ವಲಯದಲ್ಲಿರುವ ಈ ಸುಂದರ, ಪ್ರಶಾಂತ ಕೆರೆಯು ಮೊದಲಿನಿಂದಲೂ ಹಲವಾರು ಕವಿ, ಸಾಹಿತಿಗಳ ಮೇಲೆ ಪ್ರಭಾವ ಬೀರಿದೆ. ಇದೊಂದು ಕೃತಕ ಕೆರೆಯಾಗಿದ್ದು ಮುಮ್ಮಡಿ ಕೃಷ್ಣರಾಜ ವಡೇಯರ್ ಅವರಿಂದ 1864 ರಲ್ಲಿ ನಿರ್ಮಿಸಲ್ಪಟ್ಟಿದೆ. ಸುಮಾರು 200 ಎಕರೆಗಳಷ್ಟು ವಿಶಾಲವಾದ ಪ್ರದೇಶದಲ್ಲಿ ಈ ಕೆರೆಯು ಹರಡಿದೆ.

ಚಿತ್ರಕೃಪೆ: Sushma R

ಆನಂದಮಯ ದಸರ ಹಬ್ಬ:

ಆನಂದಮಯ ದಸರ ಹಬ್ಬ:

ರೀಜನಲ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿ: ಪ್ರವಾಸಿಗರು ತಮ್ಮ ಮೈಸೂರಿನ ಭೇಟಿಯ ಸಮಯದಲ್ಲಿ ಸ್ಥಳೀಯ ಪ್ರಕೃತಿಯ ಇತಿಹಾಸ ವಸ್ತು ಸಂಗ್ರಹಾಲಯಕ್ಕೊಮ್ಮೆ ಭೇಟಿ ಕೊಡಬಹುದು. ಈ ವಸ್ತು ಸಂಗ್ರಹಾಲಯವು ಚಾಮುಂಡಿ ಬೆಟ್ಟದ ಅಡಿಯಲ್ಲಿ ಕಾರಂಜಿ ಕೆರೆಯ ದಂಡೆಯ ಮೇಲೆ ನೆಲೆಸಿದೆ. ಈ ಸಂಗ್ರಹಾಲಯವು ಒಳಗೆ ಹಲವು ಮಾದರಿಗಳು, ತೀಮ್ಯಾಟಿಕ್ಸ್, ಆಡಿಯೋ ವಿಡಿಯೋ ರೂಪದ ಪ್ರದರ್ಶಕಗಳನ್ನು ಒಳಗೊಂಡಿದೆ. ಪ್ರವಾಸಿಗರು ಪರಿಸರ ವಿಜ್ನಾನ, ಜೈವಿಕ ವೈವಿಧ್ಯತೆ, ವಿಕಂಸನ ಮತ್ತು ಪ್ರಕೃತಿಯ ಸಂರಕ್ಷಣೆಯ ಬಗೆಗಿನ ಹಲವು ವಿಷಯಗಳನ್ನು ತಿಳಿಯಬಹುದು.

ಚಿತ್ರಕೃಪೆ: nmnh.nic.in

ಆನಂದಮಯ ದಸರ ಹಬ್ಬ:

ಆನಂದಮಯ ದಸರ ಹಬ್ಬ:

ರೈಲ್ವೆ ಮ್ಯೂಸಿಯಂ : ಮೈಸೂರಿನಲ್ಲಿರುವ 1979 ರಲ್ಲಿ ಅಸ್ತಿತ್ವಕ್ಕೆ ಬಂದ ರೈಲು ವಸ್ತುಸಂಗ್ರಹಾಲಯಕ್ಕೆ ಪ್ರವಾಸಿಗರು ಒಮ್ಮೆ ಭೇಟಿ ನೀಡಬಹುದು. ಈ ವಸ್ತು ಸಂಗ್ರಹಾಲಯದ ಚಾಮುಂಡಿ ಪ್ರದರ್ಶನಾ ಘಟಕದಲ್ಲಿ ರೈಲುಮಾರ್ಗದ ಉನ್ನತೀಕರಣ ಮತ್ತು ವಿಸ್ತರೀಕರಣದ ಸವಿಸ್ತಾರವಾದ ವಿವರಗಳನ್ನು ಕಾಣಬಹುದು. ಅಂದಿನ ಬ್ರಿಟೀಷರು ಈ ಆಸ್ಟೀನ್ ಮಾರ್ಟಿನ್ ಕಾರಿಗೆ ಹಳಿಗಳ ಮೇಲೆ ಚಲಿಸಬಲ್ಲ ಚಕ್ರಗಳನ್ನು ಜೋಡಿಸಿ ತಮ್ಮ ರೈಲು ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದರು.

ಚಿತ್ರಕೃಪೆ: Nagesh Kamath

ಆನಂದಮಯ ದಸರ ಹಬ್ಬ:

ಆನಂದಮಯ ದಸರ ಹಬ್ಬ:

ಜಗನ್ಮೋಹನ ಅರಮನೆ: ಮೈಸೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಪುರಾತನ ಕಟ್ಟಡಗಳ ಪಟ್ಟಿಯಲ್ಲಿ ಒಂದಾದ ಜಗನ್ಮೋಹನ ಅರಮನೆಯನ್ನು ಪ್ರವಾಸಿಗರು ನೋಡಬಹುದು. ಪ್ರಸ್ತುತವಾಗಿ ಈ ಸ್ಥಳವನ್ನು ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನ ಮತ್ತು ದಸರಾ ಹಬ್ಬದ ಸಂದರ್ಭದಲ್ಲಿ ನಡೆಯುವ ಸಮ್ಮೇಳನಗಳಿಗಾಗಿ ಬಳಸಲಾಗುತ್ತಿದೆ.

ಚಿತ್ರಕೃಪೆ: Ryan

ಆನಂದಮಯ ದಸರ ಹಬ್ಬ:

ಆನಂದಮಯ ದಸರ ಹಬ್ಬ:

ಚಾಮುಂಡಿ ಬೆಟ್ಟ: ಚಾಮುಂಡಿ ಬೆಟ್ಟವು ಸಮುದ್ರ ಮಟ್ಟದಿಂದ ಸುಮಾರು 1065 ಮೀ.ನಷ್ಟು ಎತ್ತರದಲ್ಲಿ ನೆಲೆಸಿದ್ದು, ಮೈಸೂರಿಗೆ ಬರುವ ಪ್ರವಾಸಿಗರು ಇಲ್ಲಿಗೆ ಒಮ್ಮೆ ಭೇಟಿ ನೀಡಲೇಬೇಕು. ಚಾಮುಂಡಿ ಬೆಟ್ಟದ ಮೇಲೆ ವೊಡೆಯರ ದೇವತೆಯಾದ, ಪಾರ್ವತಿಯ ಅವತಾರಿಣಿ ತಾಯಿ ಚಾಮುಂಡೇಶ್ವರಿಯ ದೇವಾಲಯವಿದೆ.

ಚಿತ್ರಕೃಪೆ: Sanath Kumar

ಆನಂದಮಯ ದಸರ ಹಬ್ಬ:

ಆನಂದಮಯ ದಸರ ಹಬ್ಬ:

ಮೈಸೂರು ಮೃಗಾಲಯ: ಮೈಸೂರಿಗೆ ಪ್ರವಾಸ ಮಾಡುವ ಪ್ರವಾಸಿಗರು ಅಲ್ಲಿ ನೋಡಲೇಬೇಕಾದ ಮತ್ತೊಂದು ಸ್ಥಳ ಮೈಸೂರು ಮೃಗಾಲಯ. ಮೈಸೂರು ಮೃಗಾಲಯ 1892ರಲ್ಲಿ ಮಹಾರಾಜ ಚಾಮರಾಜ ಒಡೆಯರ್ ರವರು ನಿರ್ಮಿಸಿದ್ದು ಭಾರತದಲ್ಲಿನ ನೆಚ್ಚಿನ ಪ್ರಾಣಿ ಸಂಗ್ರಹಾಲಯಗಳಲ್ಲಿ ಒಂದೆಂದು ಗುರುತಿಸಲಾಗಿದೆ. 250 ಎಕ್ಕರೆ ಪ್ರದೇಶದಲ್ಲಿ ಚಾಚಿಕೊಂಡಿರುವ್ ಇದು ವೈವಿಧ್ಯಮಯ ಮತ್ತು ಅನನ್ಯವಾದ ಸಸ್ತನಿಗಳು, ಸರೀಸೃಪಗಳು ಮತ್ತು ಪಕ್ಷಿಗಳ ನೆಲೆಯಾಗಿದೆ. ಮೃಗಾಲಯದ ಕುರಿತು ಹೆಚ್ಚಿಗೆ ಇಲ್ಲಿ ತಿಳಿಯಿರಿ.

ಚಿತ್ರಕೃಪೆ: Punithsureshgowda

ಆನಂದಮಯ ದಸರ ಹಬ್ಬ:

ಆನಂದಮಯ ದಸರ ಹಬ್ಬ:

ಸೇಂಟ್ ಫಿಲೋಮಿನಾ ಚರ್ಚ್: ಮೈಸೂರಿಗೆ ಭೇಟಿ ಕೊಡುವ ಸಂದರ್ಭದಲ್ಲಿ ಪ್ರವಾಸಿಗರು ಸಂತ ಜೋಸೆಫ್ ಚರ್ಚ್ ಎಂದೂ ಕರೆಯಲ್ಪಡುವ ಸಂತ ಫಿಲೋಮಿನಾರ ಚರ್ಚ್ ಗೆ ಒಮ್ಮೆ ಭೇಟಿ ಕೊಡಲೇಬೇಕು. ಈ ಪ್ರಾಚೀನ ಕಾಲದ ಬೃಹತ್ತಾದ ಚರ್ಚ್ ನನಿರ್ಮಾಣವು 1933ರಲ್ಲಿ ಮೂರನೇ ಮಹಾರಾಜ ಕೃಷ್ಣ ರಾಜ ಒಡೆಯರ ಅಡಿಯಲ್ಲಿ ಆರಂಭಗೊಂಡು 1941ರಲ್ಲಿ ಪೂರ್ಣಗೊಂಡಿತು. ವರ್ಣಭರಿತ ಕಿಟಕಿಯ ಗಾಜಿನ ಮೇಲಿರುವ ಕಲಾಕೃತಿಗಳು ಯೇಸುವಿನ ಜನನ, ಶಿಲುಬೆಗಿರಿಸಿದ ದೃಶ್ಯ, ಲಾಸ್ಟ್ ಸಪ್ಪರ್, ರೀಸರಕ್ಷನ್ ಮತ್ತು ಯೇಸುವು ಮೇಲಕ್ಕೆರಿದ ಸಂದರ್ಭವನ್ನು ಬಿಂಬಿಸುತ್ತವೆ. ಈ ಚರ್ಚಿನ ಮತ್ತೊಂದು ವಿಶೇಷವೆಂದರೆ ನ್ಯೂ ಯಾರ್ಕ್ ಟವರ್ ನ ಸಂತ ಪ್ಯಾಟ್ರಿಕ್ ಚರ್ಚನ್ನು ಹೋಲುವ ಇಲ್ಲಿನ 54 ಮೀ ಎತ್ತರದ ಎರಡು ಗೋಪುರಗಳು.

ಚಿತ್ರಕೃಪೆ: romana klee

ಆನಂದಮಯ ದಸರ ಹಬ್ಬ:

ಆನಂದಮಯ ದಸರ ಹಬ್ಬ:

ದೇವರಾಜ ಮಾರುಕಟ್ಟೆ: ಮೈಸೂರಿನಲ್ಲಿ ಹಣ್ಣು, ತರಕಾರಿಗಳಿಗೆ ಪ್ರಸಿದ್ಧಿ ಪಡೆದಿರುವ ದೇವರಾಜ ಮಾರುಕಟ್ಟೆ ಸದಾ ಜನರಿಂದ ತುಂಬಿದ್ದು ಸಾಕಷ್ಟು ಜನರನ್ನು ಆಕರ್ಷಿಸುತ್ತದೆ. 700 ಕ್ಕೂ ಹೆಚ್ಚು ಅಂಗಡಿ ಮುಗ್ಗಟ್ಟುಗಳಿರುವ ಈ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಹಣ್ಣು ಹಂಪಲಗಳು ಚೌಕಾಸಿಯ ನಂತರ ಕಡಿಮೆ ಬೆಲೆಗೆ ದೊರೆಯುತ್ತವೆ.

ಚಿತ್ರಕೃಪೆ: romana klee

ಆನಂದಮಯ ದಸರ ಹಬ್ಬ:

ಆನಂದಮಯ ದಸರ ಹಬ್ಬ:

ಕಾರಂಜಿ ಕೆರೆ: ಮೈಸೂರಿನ ಚಾಮುಂಡಿ ಬೆಟ್ಟದ ಬುಡದಲ್ಲಿರುವ ಕಾರಂಜಿ ಕೆರೆ ಒಂದು ಅದ್ಭುತ ಹಾಗೂ ಮನೋಹರವಾದ ಪ್ರವಾಸಿ ಆಕರ್ಷಣೆಯಿರುವ ಶಾಂತಮಯ ಕೆರೆಯಾಗಿದೆ. ಹಿನ್ನಿಲೆಯಲ್ಲಿರುವ ಚಾಮುಂಡಿ ಬೆಟ್ಟವು ಕೆರೆಗೆ ಹೆಚ್ಚಿನ ಮೆರುಗನ್ನು ನೀಡುತ್ತದೆ. ಪ್ರಸ್ತುತ ಮೈಸೂರು ಮೃಗಾಲಯದ ಭಾಗವಾಗಿರುವ ಈ ಕೆರೆಯು ಪಕ್ಷಿ ಪ್ರಿಯರೂ ಸಹ ಇಷ್ಟಪಡಬಹುದಾದ ಸ್ಥಳವಾಗಿದೆ.

ಚಿತ್ರಕೃಪೆ: Riju K

ಆನಂದಮಯ ದಸರ ಹಬ್ಬ:

ಆನಂದಮಯ ದಸರ ಹಬ್ಬ:

ಮೈಸೂರು ಅರಮನೆ: ಕೊನೆಯದಾಗಿ ಮೈಸೂರು ಅರಮನೆಯು ಅತಿ ಪ್ರಸಿದ್ಧಿಯನ್ನು ಹೊಂದಿದ್ದು, ಮೈಸೂರು ನಗರಕ್ಕೆ ಭೇಟಿ ಕೊಡುವ ಎಲ್ಲ ಪ್ರವಾಸಿಗರಲ್ಲೂ ಅತ್ಯಂತ ಸೂಚಿತ ಸ್ಥಳವಾಗಿದೆ. ಅರಮನೆಯಲ್ಲಿ ಇಂಡೋ-ಅರೇಬಿಯನ್, ದ್ರಾವಿಡ, ರೋಮನ್ ಮತ್ತು ಓರಿಯೆಂಟಲ್ ವಾಸ್ತುಶಿಲ್ಪ ಶೈಲಿಗಳು ಪ್ರದರ್ಶಿತವಾಗಿದೆ. ಮೂರು ಗುಲಾಬಿ ಅಮೃತಶಿಲೆ ಗುಮ್ಮಟಗಳನ್ನು ಹೊಂದಿರುವ ಈ ಕಟ್ಟಡದ ನಿರ್ಮಾಣದಲ್ಲಿ ಬೂದು ಬಣ್ಣದ ಗ್ರಾನೈಟ್ ಅನ್ನು ಬಳಸಲಾಗಿದೆ. ಪ್ರವಾಸಿಗರು ಈ ಸ್ಥಳಕ್ಕೆ 'ಗೊಂಬೆ ತೊಟ್ಟಿ' ಅಥವಾ 'ಡಾಲ್ಸ್ ಪೆವೀಲಿಯನ್' ನಿಂದ ಪ್ರವೇಶ ಮಾಡಬಹುದು. ಇಲ್ಲಿ ಸುಮಾರು 19 ರಿಂದ 20ನೇ ಶತಮಾನದ ಪ್ರಾರಂಭದ ಕಾಲದಲ್ಲಿನ ಬೊಂಬೆಗಳನ್ನು ಕಾಣಬಹುದಾಗಿದೆ. ಇದನ್ನು ಹೊರತುಪಡಿಸಿದರೆ 81 ಕೆ‌ಜಿ ಬಂಗಾರದಿಂದ ಅಲಂಕೃತವಾದ ಮರದ ಆನೆ 'ಹೌಡಾ' ಅಲ್ಲಿದೆ.

ಚಿತ್ರಕೃಪೆ: Jim Ankan Deka

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X