ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ವಾರಾಂತ್ಯದಲ್ಲಿ ಹೋಗುವುದೆಲ್ಲಿ ಎಂದು ಯೋಚಿಸುತ್ತಿದೀರ? ನೋಡೋಣ ಬನ್ನಿ ಸುಂದರ ವೆಲ್ಲೊರನ್ನು!

Written by:
Published: Monday, April 10, 2017, 10:00 [IST]
Share this on your social network:
   Facebook Twitter Google+ Pin it  Comments

ಪಾಲರ್ ನದಿಯ ದಂಡೆಯಮೇಲಿರುವ ವೆಲ್ಲೋರ್ ಜಿಲ್ಲೆ ವಾರಾಂತ್ಯ ಪ್ರವಾಸಕ್ಕೆ ಕುಟುಂಬದವರೊಡನೆ ಉತ್ತಮ ಸಮಯ ಕಳೆಯಲು ಒಂದು ಒಳ್ಳೆಯ ಪ್ರೇಕ್ಷಣೀಯ ಸ್ಥಳವಾಗಿದೆ. ಇದು ನಮ್ಮ ಬೆಂಗಳೂರಿನಿಂದ ಸುಮಾರು ೪ ಘಂಟೆಗಳ ಪ್ರಯಾಣದಷ್ಟು ದೂರದಲ್ಲಿದೆ.

ಬೆಂಗಳೂರಿನಿಂದ ವೆಲ್ಲೂರಿಗೆ ತಲಪುವ ಮಾರ್ಗಗಳು

ಮಾರ್ಗ ೧ - ೨೨೪ ಕಿಲೋಮೀಟರ್ಗಳು - NH48 - ಬೆಂಗಳೂರು - ಹೊಸೂರು-ಆಂಬೂರು-ವೆಲ್ಲೋರ್

ಮಾರ್ಗ ೨ - ೨೦೯ ಕಿಲೋಮೀಟರ್ಗಳು - NH75 - ಬೆಂಗಳೂರು-ಕೋಲಾರ್-ಮುಳಬಾಗಿಲು-ಪಲಾಮ್ನೇರು-ವೆಲ್ಲೋರ್

ತಮಿಳುನಾಡಿನ ರಾಜಧಾನಿಯಾದ ಚೆನ್ನೈನಿಂದ ೧೪೫ ಕಿಲೋಮೀಟರ್ಗಳ ದೂರದಲ್ಲಿರುವ ವೆಲ್ಲೋರ್ ಜಿಲ್ಲೆಯನ್ನು ಪಲ್ಲವರು, ವಿಜಯನಗರ ಅರಸರು, ರಾಷ್ಟ್ರಕೂಟರು ಹಾಗು ಬ್ರಿಟಿಷರು ಆಳ್ವಿಕೆ ನಡೆಸಿದ್ದರು.

ಸ್ಥಳೀಯರ ಪ್ರಕಾರ ವೆಲ್ಲೂರಿನ ಮುಖ್ಯವಾದ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸಿಗರು ಒಂದು ದಿನದ ಮಟ್ಟಿಗೆ ಭೇಟಿ ನೀಡಿದರೆ ಸಾಕಾಗುವುದು, ಆದರೆ ಅಲ್ಲಿಯ ಎಲ್ಲ ಸುತ್ತ ಮುತ್ತಲಿನ ಪ್ರದೇಶಗಳನ್ನು ನೋಡಿ ಆನಂದಿಸಲು ಸುಮಾರು ಮೂರು ದಿನಗಳಷ್ಟು ಕಾಲಾವಕಾಶವನ್ನು ಮಾಡಿಕೊಳ್ಳಬೇಕು.

ವೆಲ್ಲೂರಿನ ತಾಣಗಳ ಬಗ್ಗೆ ಒಂದಿಷ್ಟು ವಿಚಾರಗಳನ್ನು ತಿಳಿದುಕೊಳ್ಳೋಣ ಬನ್ನಿ!

೧.ವೆಲ್ಲೋರ್ ಫೋರ್ಟ್

ಈ ಕೋಟೆಯು ವಿಜಯನಗರ ಅರಸರ ಆಳ್ವಿಕೆಯಲ್ಲಿ ಕ್ರಿ. ಷ.೧೫೬೬ರಲ್ಲಿ ನಿರ್ಮಾಣಗೊಂಡಿರುವುದು.ಈ ಕೋಟೆಯು ಅರವೀಡು ಸಂಸ್ಥಾನದ ಮುಖ್ಯ ಆಡಳಿತ ಕಛೇರಿಯಾಗಿತ್ತು.

ವೆಲ್ಲೂರಿನ ಕೋಟೆಯ ತರಹ ಮತ್ತೊಂದು ಕೋಟೆ ಎಲ್ಲಿಯೂ ಇಲ್ಲವೆಂದು ಪ್ರಶಂಸೆಗೆ ಪಾತ್ರವಾಗಿರುವ ಈ ಕೋಟೆಯು ವಿಜಯಪುರದ ಸುಲ್ತಾನರು, ಮರಾಠರು ಹಾಗು ಬ್ರಿಟಿಷರ ಆಳ್ವಿಕೆಯನ್ನು ಮೆರೆದಿದೆ.

ಫಹಾದ್ ಫೈಸಲ್

 

ವೆಲ್ಲೋರ್ ಫೋರ್ಟ್

ಕೋಟೆಯನ್ನು ಶತ್ರುಗಳ ಆಕ್ರಮಣದಿಂದ ಕಾಪಾಡಲು ಹಿಂದಿನ ಕಾಲದಲ್ಲಿ ರಾಜರು ಈ ಕೋಟೆಯಲ್ಲಿ ೧೦೦೦ ಮೊಸಳೆಗಳನ್ನು ಸಾಕಿದ್ದರು ಎಂಬ ವಿಚಾರವು ನಮಗೆ ಈ ಕೋಟೆಯ ಕಟ್ಟಡದ ನಿರ್ಮಾಣದಿಂದ ತಿಳಿಯುತ್ತದೆ. ಈ ಕೋಟೆಯನ್ನು ಪೆಡಸುಕಲ್ಲಿಂದ ಕಟ್ಟಲಾಗಿದ್ದು, ಇದು ಸುಮಾರು ೧೩೩ ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿದೆ.

ಭಾಸ್ಕರ್ ನಾಯ್ಡು

 

೨. ಶ್ರೀಪುರಂ ಗೋಲ್ಡನ್ ಟೆಂಪಲ್

ವೆಲ್ಲೂರಿನ ಮುಖ್ಯ ಸ್ಥಳವಾದ 'ಶ್ರೀಪುರಂ ಗೋಲ್ಡನ್ ಟೆಂಪಲ್' ಮಲೈಕೋಡಿ ಎಂಬ ಬೆಟ್ಟದ ತಪ್ಪಲಿನಲ್ಲಿ ಇರುವುದು. ಈ ದೇವಾಲಯದಲ್ಲಿ ಲಕ್ಷ್ಮಿ ದೇವಿಯ ಆರಾಧನೆ ಬಹಳ ಸೊಗಸಾಗಿ ನಡೆಯುತ್ತದೆ. ಈ ದೇವಾಲಯದಲ್ಲಿ ಅಮ್ಮನವರನ್ನು ಶ್ರೀ ಲಕ್ಷ್ಮಿ ನಾರಾಯಣಿ ಎಂಬ ಹೆಸರಿನಿಂದ ಕರೆಯುತ್ತಾರೆ.

ಆ.ಜಿ ೧೭೦೭

ಶ್ರೀಪುರಂ ದೇವಾಲಯ

ದೇವಾಲಯದ ಗೋಪುರ ಹಾಗು ಅರ್ಧ ಮಂಟಪವನ್ನು ಚಿನ್ನದಿಂದ ಮಾಡಿರುವುದೇ ಇಲ್ಲಿಯ ವಿಶೇಷತೆ. ದೇವಸ್ಥಾನದ ಆವರಣವು ಸುಮಾರು ೧೦೦ ಎಕರೆ ಪ್ರದೇಶದಲ್ಲಿ ಹರಡಿಕೊಂಡು ವಿಸ್ತಾರವಾಗಿದೆ.

ಅಶ್ವಿನ್ ಕುಮಾರ್

 

೩. ಜಲಕಂಠೇಶ್ವರ ದೇವಾಲಯ

ಈ ದೇವಾಲಯವು ವೆಲ್ಲೂರಿನ ಒಂದು ಪ್ರಮುಖ ಆಕರ್ಷಣೀಯ ಸ್ಥಳವಾಗಿದೆ. ಶಿವ ಈ ದೇವಾಲಯದ ಪ್ರಮುಖ ದೇವನಾಗಿದ್ದು ಎಲ್ಲ ಪೂಜೆಗಳು ಸಾಂಗೊ ಪಾಂಗೋವಾಗಿ ನಡೆಯುತ್ತದೆ. ಈ ದೇವಲಾಯವು ವೆಲ್ಲೋರ್ ಕೋಟೆಯ ಒಂದು ಭಾಗವಾಗಿದ್ದು ಹೆಚ್ಚಿನ ಭಕ್ತಾದಿಗಳನ್ನು ಸೆಳೆಯುತ್ತದೆ.

PC : Vaikoovery

ಜಲಕಂಠೇಶ್ವರ ದೇವಾಲಯ

೧೮೦೦ ವರ್ಷಗಳ ಇತಿಹಾಸವಿರುವ ಈ ದೇವಾಲಯವು ಚೋಳರ ಕಾಲದಲ್ಲಿ ನಿರ್ಮಾಣವಾಗಿದೆ. ಪಂಚಭೂತ ದೇವಾಲಯಗಳಲ್ಲಿ ಒಂದಾಗಿರುವ ಈ ದೇವಾಲಯವು ಜಲ ತತ್ವವನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಈ ದೇವಾಲಯವನ್ನು ಜಲಕಂಠೇಶ್ವರ ದೇವಾಲಯವೆಂದು ಕರೆಯುತ್ತಾರೆ.

PC : Nandhinikandhasamy

೪. ಕರ್ಪಗ ವಿನಾಯಕರ್ ದೇವಾಲಯ

ಪಿಳ್ಳೆಯಾರ್ಪಟ್ಟಿ ಗಣೇಶನ ದೇವಾಲಯವು ಯಾರಿಗೆ ತಿಳಿಯದು ಹೇಳಿ? ಬಹಳ ಪ್ರಸಿದ್ಧಿಯಾಗಿರುವ ಈ ದೇವಾಲಯವು ತಿರುಪತ್ತೂರಿನ ಹತ್ತಿರವಿದೆ. ಈ ದೇವಾಲಯವು ಗುಹೆಯ ಆಕಾರದಲ್ಲಿದ್ದು ಇದನ್ನು ಪಿಳ್ಳೆಯಾರ್ಪಟ್ಟಿ ಎಂಬ ಗುಡ್ಡದಿಂದ ನಿರ್ಮಿತವಾಗಿದೆ. ಸುಮಾರು ೨೫೦೦ ವರ್ಷಗಳ ಇತಿಹಾಸವಿರುವ ಈ ದೇವಾಲಯವು ಬಹಳ ರಮಣೀಯವಾಗಿದೆ. ಗಣೇಶನು ಇಲ್ಲಿ ಬರುವ ಎಲ್ಲ ಭಕ್ತಾದಿಗಳ ಕಷ್ಟಗಳನ್ನು ಪರಿಹರಿಸುತ್ತಾನೆಂಬ ವಾಡಿಕೆಯೂ ಸಹ ಇಲ್ಲಿ ಇರುವುದು.

PC : Sai DHananjayan Babu

ಕರ್ಪಗ ವಿನಾಯಕರ್ ದೇವಾಲಯ

ಈ ದೇವಸ್ಥಾನದಲ್ಲಿ ೧೪ ರೀತಿಯ ಕಲ್ಲಿನ ಕೆತ್ತನೆಗಳಿವೆ ಹಾಗು ಗಣೇಶನ ವಿಗ್ರಹವು ಸುಮಾರು ೬ ಅಡಿಗಳಷ್ಟು ಉದ್ದವಿದೆ. ಗುಹೆಯ ಆಕರಡಿಲ್ಲ ನಿರ್ಮಿಸಲ್ಪಟ್ಟಿರುವ ಈ ದೇವಾಲಯದಲ್ಲಿ ಭಕ್ತಾದಿಗಳಿಗೆ ಗಣೇಶನಿಗೆ ಪ್ರದಕ್ಷಿಣೆ ಹಾಕುವ ಅನುಕೂಲಗಳಿಲ್ಲ.

PC : Mayuri88

೫. ಸೆಂಟ್. ಜಾನ್ಸ್ ಚರ್ಚ್

ಇದು ಸಹ ವೆಲ್ಲೂರಿನ ಕೋಟೆಯ ಒಳಗಡೆ ಇರುವ ಮತ್ತೊಂದು ವೀಕ್ಷಣೀಯ ಸ್ಥಳ. ಈ ಚುರ್ಚನ್ನು ೧೮೪೬ರಲ್ಲಿ ಮದ್ರಾಸ್ ಸರ್ಕಾರದವರು ನಿರ್ಮಿಸಿದರು.

PC : Frank Penny

ಸೆಂಟ್. ಜಾನ್ಸ್ ಚರ್ಚ್

ಈ ಹಿಂದೆ ಇದು ಈಸ್ಟ್ ಇಂಡಿಯಾ ಕಂಪನಿ ಅವರ ಮಿಲಿಟರಿ ಕಛೇರಿಯಾಗಿತ್ತು. ಪ್ರಸ್ತುತ ಈ ಚರ್ಚ್ ಪುರಾತತ್ವ ಇಲಾಖೆಯ ಅಧೀನದಲ್ಲಿದೆ.
PC : Wikimedia.org

೬. ಕೋಟೆ ಸಂಗ್ರಹಾಲಯ

ವೆಲ್ಲೋರ್ ಕೋಟೆಯ ಒಳಗಿರುವ ಮತ್ತೊಂದು ಸ್ಥಳ ಕೋಟೆ ಸಂಗ್ರಹಾಲಯ. ಈ ವಸ್ತು ಸಂಗ್ರಹಾಲಯದಲ್ಲಿ ಕೆತ್ತನೆಯ ಶಿಲ್ಪಗಳು, ಹಿತ್ತಾಳೆ ಶಿಲ್ಪಗಳು ಹಾಗು ಕಲೆಗೆ ಸಂಭದಿಸಿದಂತೆ ಅನೇಕ ವಸ್ತುಗಳನ್ನು ಇಲ್ಲಿ ಕಾಣಬಹುದು.

PC : Mashu

 

ವಸ್ತು ಸಂಗ್ರಹಾಲಯ

ಇಲ್ಲಿ ಕಾಣಬಹುದು. ಈ ಸಂಗ್ರಹಲಾಯ್ದಲ್ಲಿ ಛಾಯಾಚಿತ್ರಣವನ್ನು ನಿಷೇದಿಸಲಾಗಿದೆ.

PC : Fahad Faisal

 

೭.ಟಿಪ್ಪು ಮಹಲ್ ಮತ್ತು ಹೈದೆರ್ ಮಹಲ್

ಈ ಎರಡು ಮಹಲ್ಗಳು ಕೂಡ ವೆಲ್ಲೋರ್ ಕೋಟೆಯ ಒಂದು ಭಾಗದಲ್ಲಿವೆ. ಟಿಪ್ಪು ಮಹಲ್ನಲ್ಲಿ ಸುಮಾರು ೧೮೦ ಕೋಣೆಗಳಿದ್ದು ಅದರ ಮಹಲಿನ ಮಧ್ಯ ಭಾಗದಲ್ಲಿ ಒಂದು ಸುಂದರವಾದ ಹಾಗು ದೊಡ್ಡ ಕಂಭವಿದೆ.

PC : Samuelrajkumar

 

ಟಿಪ್ಪು ಮಹಲ್ ಮತ್ತು ಹೈದೆರ್ ಮಹಲ್

ಹೈದೆರ್ ಮಹಲಿನಲ್ಲಿ ೨೦೦ ಕೋಣೆಗಳಿದ್ದು ಇದು ಸಹ ಅತ್ಯಂತ ಸುಂದರವಾಗಿದೆ. ಆಂಗ್ಲರೊಡನೆ ಯುದ್ಧದ ಸಮಯದಲ್ಲಿ ಟಿಪ್ಪು ಸುಲ್ತಾನನು ತನ್ನ ಪರಿವಾರದೊಂದಿಗೆ ಇಲ್ಲಿ ನೆಲಸಿದ್ದನೆಂಬ ಪ್ರತೀತಿ ಇದೆ. ಈ ಅರಮನೆಗಳಿಗೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದೆ.

PC : Rajaraman Sundaram

 

೮. ಪೆರಿಯಾರ್ ಪಾರ್ಕ್

ಮಕ್ಕಳಿಗೆ ಅತ್ಯಂತ ಇಷ್ಟವಾಗುವ ಸ್ಥಳವೆಂದರೆ ಪಾರ್ಕ್. ವೆಲ್ಲೂರಿನ ಪೆರಿಯ ಪಾರ್ಕ್ ಕೂಡ ಮಕ್ಕಳು ಇಷ್ಟ ಪಡುವ ಸ್ಥಳವಾಗಿದೆ.ಈ ಉದ್ಯಾನವನದಲ್ಲಿ ಸುಮಾರು ಒಂದು ಕಿಲೋ ಮೀಟರ್ನ ಜಾಗದಲ್ಲಿ ನಡೆಯಲು ಯೋಗ್ಯವಾದ ರಸ್ತೆಯನ್ನು ನಿರ್ಮಿಸಲಾಗಿದೆ.

PC : Wikimapia

 

ಪೆರಿಯಾರ್ ಪಾರ್ಕ್

ಈ ಉದ್ಯಾನವನದಲ್ಲಿ ಮಕ್ಕಳಿಗಾಗಿಯೇ ಪ್ರತ್ಯೇಕವಾಗಿ ಸುಂದರವಾದ ಹುಲ್ಲು ಹಾಸಿಗೆ, ದೀಪದ ಬೆಳಕು, ಬಣ್ಣದ ಕಾರಂಜಿಗಳು, ಬ್ಯಾಟರಿ ಚಾಲಿತ ವಾಹನಗಳು ಹಾಗು ಕಾರ್ಗಳನ್ನು ಇಡಲಾಗಿದೆ. ಈ ಉದ್ಯಾನವನದಲ್ಲಿ ಬಾತುಕೋಳಿಗಳು, ಗಿಳಿಗಳು ಹಾಗು ಉಷ್ಟ್ರ ಪಕ್ಷಿಗಳನ್ನು ಸಾಕುತ್ತಾರೆ.

PC : Wikimapia

 

೯. ಬಾಲಮುರುಗನ ದೇವಾಲಯ

ಬಹಳ ಹಳೆಯದಾದ ಈ ದೇವಾಲಯವು ವೆಲ್ಲೂರಿನ ರತ್ನಗಿರಿಯ ತುದಿಯಲ್ಲಿದೆ. ಇದು ಬಹಳ ಮುಖ್ಯವಾದ ದೇವಸ್ಥಾನವಾಗಿದ್ದು ಈ ದೇವಾಲಯದ ಮುಖ್ಯ ದೇವರು ಶ್ರೀ ಸುಬ್ರಮಣ್ಯ ಸ್ವಾಮಿಯು ಮೂರ್ತಿಯು ಬಹಳ ಮನೋಹರವಾಗಿದೆ.

PC : Harivel17

ಬಾಲಮುರುಗನ ದೇವಾಲಯ

ಈ ದೇವಾಲಯದಲ್ಲಿ ಮುರುಗನನ್ನು ದೇವಸೇನನೆಂದು ಕರೆಯುತ್ತಾರೆ ಮತ್ತೆ ವಲ್ಲಿ ದೇವಿಯು ಈ ದೇವಾಲಯದ ಒಂದು ಭಾಗವಾಗಿದೆ. ಸುಬ್ರಮಣ್ಯನ ರಥವನ್ನು ಪೆಡಸುಕಲ್ಲಿನಿಂದ ಮಾಡಲಾಗಿದೆ.

PC : Vssekm

 

English summary

Must Visit Places In Vellore Of Tamil Nadu

Vellore district, in the state of Tamil-Nadu has a lot of tourist places to visit including the famous Golden Temple. Let's read to know more about the places to visit in Vellore!
Please Wait while comments are loading...