Search
  • Follow NativePlanet
Share
» »ಶೃಂಗಾರ ರಸ ಉಕ್ಕಿಸುವ ಕಾಮಶಿಲ್ಪಗಳು!

ಶೃಂಗಾರ ರಸ ಉಕ್ಕಿಸುವ ಕಾಮಶಿಲ್ಪಗಳು!

ಭಾರತದಲ್ಲಿ ಕಂಡು ಬರುವ ಕೆಲವು ಪ್ರಾಚೀನ ದೇವಾಲಯಗಳು ತಮ್ಮ ಕಾಮ ಪ್ರಚೋದಕ ಶಿಲ್ಪಕಲೆಗಳಿಂದಾಗಿ ಜಗತ್ತಿನಲ್ಲೆ ಸಾಕಷ್ಟು ಹೆಸರುವಾಸಿಯಾಗಿವೆ

By Vijay

ಹುಟ್ಟು-ಸಾವು ಸತ್ಯವಾದರೂ ಲೋಕವು ನಿರಂತರವಾಗಿ ನಡೆಯಲೇಬೇಕು. ಅದಕ್ಕಾಗಿ, ಸಾವು ಹೇಗೆ ಸಂಭವಿಸುತ್ತಿರುತ್ತದೊ ಅದೇ ರೀತಿಯಲ್ಲಿ ಹುಟ್ಟು ಸಹ ಸದಾ ಕಾಲ ಇರಲೇಬೇಕು. ಅದಕ್ಕೆಂದೆ ಮನುಷ್ಯನಿಗೆ ವಂಶವನ್ನು ಬೆಳೆಸುವ ಅದ್ಭುತ ಶಕ್ತಿಯನ್ನು ಪ್ರಕೃತಿ ಅಥವಾ ದೈವ ಶಕ್ತಿಯು ನೀಡಿದೆ.

ಆ ಒಂದು ಉದ್ದೇಶದಿಂದಲೆ ಪುರುಷ-ಸ್ತ್ರೀ ಯ ಮಧ್ಯೆ ಸ್ವಾಭಾವಿಕವಾದ ಆಕರ್ಷಣೆ ಇರುವುದು ಪ್ರಕೃತಿ ಸಹಜ. ಅದಕ್ಕೆಂದೆ ಕಾಮವು ಬಲು ಮಹತ್ವದ ಪಾತ್ರವಹಿಸುತ್ತದೆ. ಜಗತ್ತಿಗೆ ಕಾಮಸೂತ್ರ ನೀಡಿದಂತಹ ಭಾರತದಂತಹ ದೇಶದಲ್ಲಿ ಸಾವಿರಾರು ವರ್ಷಗಳಷ್ಟು ಇತಿಹಾಸವಿರುವ, ಕಾಮ ಕ್ರೀಡೆಗಳನ್ನು ಕಲಾತ್ಮಕವಾಗಿ ಪ್ರತಿಬಿಂಬಿಸುವ ನೂರಾರು ಶಿಲ್ಪಕಲೆಗಳಿರುವುದನ್ನು ಕಾಣಬಹುದು.

ಮಧ್ಯ ಪ್ರದೇಶದ ಖಜುರಾಹೋ ಆಗಿರಬಹುದು ಇಲ್ಲವೆ ಕೋನಾರ್ಕಿನ ಸೂರ್ಯ ದೇವಾಲಯವಾಗಿರಬಹುದು ಅಥವಾ ಕರ್ನಾಟಕದ ಬಳ್ಳಿಗಾವಿಯ ತ್ರಿಪುರಾಂತಕೇಶ್ವರ ದೇವಾಲಯವಾಗಿರಬಹುದು. ಇವೆಲ್ಲವೂ ಕಲಾತ್ಮಕವಾಗಿ ಕೆತ್ತಲಾದ ಕಾಮರಸವನ್ನು ಪ್ರಚೋದಿಸುವ ಅದ್ಭುತ ಶಿಲ್ಪಕಲೆಗಳಿಂದಾಗಿ ಕಲಾಪ್ರಿಯ ಪ್ರವಾಸಿಗರ ಅದರಲ್ಲೂ ವಿಶೇಷವಾಗಿ ಪಾಶ್ಚಾತ್ಯರ ಗಮನಸೆಳೆಯುತ್ತವೆ.

ಪ್ರಸ್ತುತ ಲೇಖನದಲ್ಲಿ ಭಾರತದಲ್ಲಿ ಆಸ್ವಾದಿಸಬಹುದಾದಂತಹ ಕಾಮದ ಹಲವು ಮುಖಗಳನ್ನು ಸೂಕ್ಷ್ಮವಾಗಿ ಅನಾವರಣಗೊಳಿಸುತ್ತ ಅದ್ಭುತವಾಗಿ ಕೆತ್ತಲಾಗಿರುವ ಕೆಲವು ಆಯ್ದ ದೇವಾಲಯಗಳು ಯಾವುವು ಹಾಗೂ ಅಲ್ಲಿ ಕಂಡುಬರುವ ಆಕರ್ಷಕ ಶಿಲ್ಪಕಲೆಗಳ ಕುರಿತು ತಿಳಿಸುತ್ತದೆ. ಇವು ಕಾಮಕಲೆಯ ಶಿಲ್ಪಕಲೆಗಳಾಗಿ ಹೆಸರುವಾಸಿಯಾಗಿದೆ ವಿನಃ ಯಾವುದೆ ರೀತಿಯ ಅಶ್ಲೀಲ ಭಾವನೆಗಳಿಂದ ನೋಡುವುದು ಸಮಂಜಸವಲ್ಲ.

ಹಂಪಿ

ಹಂಪಿ

ಕರ್ನಾಟಕದ ಬಳ್ಳಾರಿ ಜಿಲ್ಲೆಯ ಪ್ರಖ್ಯಾತ ಪ್ರವಾಸಿ ತಾಣವಾದ ಹಂಪಿಯು ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ಸೂಚಿಸುವ ಅದ್ಭುತ ತಾಣವಾಗಿದೆ. ಇಲ್ಲಿ ಕಂದುಬರುವ ಸಾಕಷ್ಟು ದೇವಾಲಯಗಳು ಅತ್ಯದ್ಭುತ ಶಿಲ್ಪಕಲೆಯಿಂದ ಕೂಡಿದ ಕೆತ್ತನೆಗಳಿಗಾಗಿ ಹೆಸರುವಾಸಿಯಾಗಿದೆ. ಅದರಲ್ಲಿ ವಿರೂಪಾಕ್ಷ ದೇವಾಲಯವೂ ಸಹ ಒಂದು. ಆದರೆ ಈ ದೇವಾಲಯದ ಕೆತ್ತನೆಗಳನ್ನು ಸೂಕ್ಷಮವಾಗಿ ಗಮನಿಸಿದಾಗ ಕೆಲವು ಕಡೆಗಳಲ್ಲಿ ಕಾಮವನ್ನು ಪ್ರಚೋದಿಸುವ ಕೆಲವು ಶಿಲ್ಪಕಲೆಗಳನ್ನೂ ಸಹ ಕಾಣಬಹುದಾಗಿದೆ.

ಚಿತ್ರಕೃಪೆ: Jean-Pierre Dalbéra

ತಿರುಮಾಯಂ

ತಿರುಮಾಯಂ

ತಮಿಳುನಾಡಿನ ಪುದುಕೊಟ್ಟೈ ನಗರದಿಂದ 20 ಕಿ.ಮೀ ದೂರವಿರುವ ತಿರುಮಾಯಂ ಒಂದು ಐತಿಹಾಸಿಕ ಮಹತ್ವ ಪಡೆದ ತಾಣವಾಗಿದೆ. ಇಲ್ಲಿ ಎರಡು ಬಂಡೆಯಲ್ಲಿ ಕೆತ್ತಲಾದ ದೇವಾಲಯಗಳಿದ್ದು ಒಂದು ಶಿವನಿಗೆ ಮುಡಿಪಾಗಿದ್ದರೆ ಇನ್ನೊಂದು ವಿಷ್ಣುವಿಗೆ ಮುಡಿಪಾದ ದೇವಾಲಯವಾಗಿದೆ.

ಚಿತ್ರಕೃಪೆ: Ravindraboopathi

ಭಂಗಿಗಳು

ಭಂಗಿಗಳು

ವಿಷ್ಣುವಿಗೆ ಮುಡಿಪಾದ ದೇವಾಲಯವಾದ ಸತ್ಯಮೂರ್ತಿ ದೇವಾಲಯದಲ್ಲಿ ಕಾಮ ಪ್ರಸಂಗಗಳನ್ನು ಬಿಂಬಿಸುವ ಕೆಲವಾರು ಶಿಲ್ಪಕಲೆಗಳಿರುವುದನ್ನು ಕಾಣಬಹುದು. ರತಿ-ಮನ್ಮಥರ ಸಮಾಗಮದ ಹಲವಾರು ಭಂಗಿಗಳು ಈ ಶಿಲ್ಪಕಲೆಗಳಲ್ಲಿ ಒಡ ಊಡಿರುವುದನ್ನು ಕಾಣಬಹುದು.

ಚಿತ್ರಕೃಪೆ: Ravindraboopathi

ಬಳ್ಳಿಗಾವಿ

ಬಳ್ಳಿಗಾವಿ

ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಬಳ್ಳಿಗಾವಿ ಗ್ರಾಮವು ಒಂದು ಐತಿಹಾಸಿಕ ಪ್ರವಾಸಿ ಕೇಂದ್ರವಾಗಿದೆ. ಇಲ್ಲಿರುವ ಶಿವನ ಪುರಾತನ ತ್ರಿಪುರಾಂತಕ ದೇವಾಲಯದ ಗೋಡೆಗಳ ಮೇಲೆ ಅದ್ಭುತವಾದ ಮಿಥುನ ಶಿಲ್ಪಕಲೆಗಳನ್ನು ಕಾಣಬಹುದು.

ಚಿತ್ರಕೃಪೆ: Dineshkannambadi

ಬಗಲಿ

ಬಗಲಿ

ದಾವಣಗೆರೆ ಜಿಲ್ಲೆಯ ಬಗಲಿ ಎಂಬಲ್ಲಿರುವ ಪ್ರಾಚೀನ ಕಲ್ಲೆಶ್ಬರ ದೇವಾಲಯದ ಗೋಪುರದ ಬಳಿಯಲ್ಲೂ ಸಹ ವಿವಿಧ ಭಂಗಿಗಳ ಪ್ರೀತಿಯಲ್ಲಿ ನಿರತ ಜೋಡಿಗಳ ಶಿಲ್ಪಕಲೆಗಳಿರುವುದನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Dineshkannambadi

ಭುವನೇಶ್ವರ

ಭುವನೇಶ್ವರ

ಒಡಿಶಾದ ಭುವನೇಶ್ವರ ನಗರ ಪ್ರದೇಶದಲ್ಲಿರುವ ಹತ್ತನೇಯ ಪ್ರಾಚೀನ ಮುಕ್ತೇಶ್ವರ ದೇವಾಲಯವು ಸಾಕಷ್ಟು ಪ್ರವಾಸಿ ಪ್ರಾಮುಖ್ಯತೆಗಳಿಸಿರುವ ತಾಣವಾಗಿದೆ. ಅಲ್ಲದೆ ಅದ್ಭುತವಾದ ತೋರಣ ಕೆತ್ತನೆ ಹಾಗೂ ಶಿಲ್ಪಕಲೆಗಳಿಗಾಗಿಯೂ ಇದು ಪ್ರಸಿದ್ಧವಾಗಿದೆ. ಇಲ್ಲಿನ ಶಿಲಪ್ಕಲೆಗಳಲ್ಲಿ ಗಂಡು-ಹೆಣ್ಣಿನ ಸಮಾಗಮದ ಪ್ರೀತಿಯ ಭಂಗಿಗಳನ್ನೂ ಸಹ ಕಾಣಬಹುದಾಗಿದೆ.

ಚಿತ್ರಕೃಪೆ: Sujit kumar

ತಿರುಪತಿ

ತಿರುಪತಿ

ದೇಶದ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಆಂಧ್ರಪ್ರದೇಶದ ತಿರುಪತಿಯಲ್ಲಿರುವ ಶ್ರೀ ಗೋವಿಂದರಾಜ ದೇವಾಲಯದ ಕೆಲವು ಗೋಡೆಗಳ ಮೇಲೂ ಸಹ ರತಿ-ಮನ್ಮಥರ ಸಮಾಗಮವನ್ನು ಬಿಂಬಿಸುವ ಶಿಲ್ಪಕಲೆಗಳನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Bhaskaranaidu

ಶಾಹದೋಲ್

ಶಾಹದೋಲ್

ಮಧ್ಯ ಪ್ರದೇಶ ರಾಜ್ಯದ ಶಾಹದೋಲ್ ಜಿಲ್ಲೆಯ ಶಾಹದೋಲ್ ಪಟ್ಟಣದಲ್ಲಿರುವ ವಿರಾಟ ದೇವಾಲಯವು ಸಾಕಷ್ಟು ಪ್ರಾಚೀನ ದೇವಾಲಯವಾಗಿ ಗಮನ ಸೆಳೆಯುತ್ತದೆ. ಭಾರತೀಯ ಪುರಾತತ್ವ ಇಲಾಖೆಯಿಂದ ಇದು ರಾಷ್ಟ್ರೀಯ ಸ್ಮಾರಕದ ಸ್ಥಾನಮಾನ ಪಡೆದಿದೆ. ಇಲ್ಲಿಯೂ ಸಹ ಕಾಮ ಪ್ರಚೊದಕ ಶಿಲ್ಪಕಲೆಗಳನ್ನು ಕಾಣಬಹುದು.

ಚಿತ್ರಕೃಪೆ: Dr.ashishk10

ಅಲ್ವಾರ್

ಅಲ್ವಾರ್

ರಾಜಸ್ಥಾನ ರಾಜ್ಯದ ಅಲ್ವಾರ್ ನಗರದಲ್ಲಿರುವ ನೀಲಕಂಠ ದೇವಾಲಯದಲ್ಲಿ ಕಂಡು ಬರುವೆ ಶಿಲ್ಪಕಲೆಗಳಲ್ಲಿ ಇದೂ ಸಹ ಒಂದಾಗಿದೆ. ಸ್ತ್ರೀ-ಪುರುಷನ ಪ್ರೀತಿಯನ್ನು ಬಿಂಬಿಸುವ ಶಿಲ್ಪಕಲೆಯನ್ನು ಇಲ್ಲಿ ನೋಡಬಹುದಾಗಿದೆ.

ಚಿತ್ರಕೃಪೆ: Yann Forget

ಮಧ್ಯಪ್ರದೇಶ

ಮಧ್ಯಪ್ರದೇಶ

ಭಾರತದ ಮಧ್ಯ ಪ್ರದೇಶ ರಾಜ್ಯದಲ್ಲಿರುವ ಖಜುರಾಹೊ ಒಂದು ನಗರ ಪ್ರದೇಶವಾಗಿದ್ದು ತನ್ನಲ್ಲಿರುವ ಅತಿ ವಿಶಿಷ್ಟ ಹಾಗೂ ಅದ್ಭುತವಾದ ಕಾಮ ವೈವಿಧ್ಯತೆಯನ್ನು ಬಿಂಬಿಸುವ ಶಿಲ್ಪಕಲೆಗಳನ್ನು ಹೊಂದಿರುವ ಪುರಾತನ ದೇವಾಲಯ ರಚನೆಗಳಿಂದಾಗಿ ಜಗತ್ತಿನಲ್ಲೆ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Jean-Pierre Dalbéra

ಕಾಮಪ್ರಚೋದಕ

ಕಾಮಪ್ರಚೋದಕ

ಖಜುರಾಹೊ ದೇವಾಲಯಗಳು ವಿಶೇಷವಾಗಿ ತಮ್ಮ ಮಿಥುನ ಶಿಲ್ಪಕಲಾಕೃತಿಗಳಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲೆ ಹೆಚ್ಚು ಗಮನಸೆಳೆದಿವೆ. ಯುನೆಸ್ಕೊದಿಂದ ವಿಶ್ವಪಾರಂಪರಿಕ ತಾಣದ ಮಾನ್ಯತೆಯನ್ನೂ ಸಹ ಪಡೆದಿರುವ ಈ ತಾಣವು ನಿರ್ದಿಷ್ಟವಾಗಿ ಕಾಮ ಪ್ರಚೋದಕ ಭಂಗಿಗಳ ಆಕರ್ಷಕ ಶಿಲ್ಪಕಲೆಗಳಿಗೆ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Benjamín Preciado

ವಿವಿಧ ಭಾವ-ಭಂಗಿ

ವಿವಿಧ ಭಾವ-ಭಂಗಿ

ಕಲಾಪ್ರಿಯರಿಗೆ ಅದರಲ್ಲೂ ವಿಶೇಷವಾಗಿ ಪಾಶ್ಚಾತ್ಯರ ಸಾಕಷ್ಟು ಕುತೂಹಲ ಕೆರಳಿಸಿರುವ ಖಜುರಾಹೊ ದೇವಾಲಯ ರಚನೆಗಳು ಅಚ್ಚರಿ ಪಡಿಸುವಂತಹ ಕಾಮದ ವಿವಿಧ ಭಾವ ಭಂಗಿಗಳನ್ನು ಅನಾವರಣಗೊಳಿಸುವ ಶಿಲ್ಪಕಲೆಗಳಿಂದ ಶ್ರೀಮಂತವಾಗಿದೆ.

ಚಿತ್ರಕೃಪೆ: Dennis Jarvis

ರಚನೆಗಳಿವೆ

ರಚನೆಗಳಿವೆ

ಉತ್ತಮ ವಾಸ್ತುಶೈಲಿಯನ್ನು ಹೊಂದಿರುವ ಈ ದೇವಾಲಯಗಳು, ಮಂಟಪ, ಅಂತರಾಳ, ಗರ್ಭಗೃಹ, ಅರ್ಧ ಮಂಟಪದಂತಹ ರಚನೆಗಳನ್ನು ಹೊಂದಿರುವುದು ವಿಶೇಷವಾಗಿದೆ.

ಚಿತ್ರಕೃಪೆ: YashiWong

ಎದ್ದು ಕಾಣುತ್ತದೆ

ಎದ್ದು ಕಾಣುತ್ತದೆ

ಶಿಲ್ಪಕಲೆಯ ಪ್ರತಿಯೊಂದು ಹಂತಗಳಲ್ಲೂ ಶಿಲ್ಪಿಯ ಕಲಾ ನೈಪುಣ್ಯತೆ, ಕುಸುರಿ ಕೆಲಸದ ಅಗಾಧತೆ ಸಾಕಷ್ಟು ಅನಾವರಣಗೊಳ್ಳುತ್ತವೆ.

ಚಿತ್ರಕೃಪೆ: Aotearoa

ಅಮೋಘ ಕೆತ್ತನೆಗಳು

ಅಮೋಘ ಕೆತ್ತನೆಗಳು

ಒಟ್ಟಿನಲ್ಲಿ ಹೇಳಬೇಕೆಂದರೆ ಖಜುರಾಹೊದ ದೇವಾಲಯಗಳು ಭಾರತೀಯ ವಾಸ್ತುಕಲೆಯ ಶ್ರೀಮಂತಿಕೆಗೆ ಉತ್ತಮ ಸಾಕ್ಷಿಗಳಾಗಿದ್ದು ಕಲೆಯ ಮಹೋನ್ನತ ಘಟ್ಟವನ್ನು ಸೂಚಿಸುವ ಅದ್ಭುತ ಸ್ಮಾರಕಗಳಾಗಿವೆ ಎಂದರೂ ತಪ್ಪಾಗಲಾರದು.

ಚಿತ್ರಕೃಪೆ: Vu2sga

ಶೃಂಗಾರ ರಸ

ಶೃಂಗಾರ ರಸ

ಖಜುರಾಹೊ ದೇವಾಲಯ ಸಂಕೀರ್ಣದಲ್ಲಿರುವ ವಿಶ್ವನಾಥ ದೇವಾಲಯದ ಗೋಡೆಗಳ ಮೇಲೆ ಕಂಡುಬರುವ ಶೃಂಗಾರ ರಸ ಉಕ್ಕಿಸುವ ಅದ್ಭುತ ಕಲಾ ಶಿಲಪಗಳು.

ಚಿತ್ರಕೃಪೆ: Aotearoa

ಅಚ್ಚರಿಪಡಿಸುತ್ತವೆ

ಅಚ್ಚರಿಪಡಿಸುತ್ತವೆ

ಕೇವಲ ಮನುಷ್ಯರೊಂದಿಗೆ ಮಾತ್ರವಲ್ಲದ ಪ್ರಾಣಿಯ ಜೊತೆಯೂ ಸಮಾಗಮ ಹೊಂದಿದಂತಹ ಸನ್ನಿವೇಶಗಳ ಕುರಿತು ಶಿಲ್ಪಕಲೆಗಳನ್ನು ಇಲ್ಲಿ ಕೆತ್ತಲಾಗಿರುವುದು ಒಂದು ರೀತಿಯ ವಿಚಿತ್ರತೆಯೂ ಸಹ ಹುಟ್ಟುವಂತೆ ಮಾಡುತ್ತದೆ.

ಚಿತ್ರಕೃಪೆ: Ggia

ಆಕರ್ಷಕ

ಆಕರ್ಷಕ

ಖಜುರಾಹೊದಲ್ಲಿರುವ ಲಕ್ಷ್ಮಣ ದೇವಾಲಯವಂತೂ ಸಾಕಷ್ಟು ವಿಭಿನ್ನ ರೀತಿಯ ಕಾಮ ಪ್ರಚೋದಯ ಶಿಲ್ಪ ಕಲೆಗಳಿಂದಾಗಿ ಹೆಚ್ಚು ಜನಾರ ಗಮನ ಸೆಳೆಯುತ್ತದೆ.

ಚಿತ್ರಕೃಪೆ: Antoine Taveneaux

ದೇವಸ್ಥಾನ

ದೇವಸ್ಥಾನ

ಖಜುರಾಹೊ ದೇವಾಲಯ ಸಂಕೀರ್ಣದಲ್ಲಿರುವ ಖಂಡರಿಯಾ ಮಹಾದೇವ ದೇವಾಲಯವೂ ಸಹ ಕಾಮ ಪ್ರಚೋದಕ ಶಿಲ್ಪಕಲೆಗಳಿಂದ ತುಂಬಿದೆ.

ಚಿತ್ರಕೃಪೆ: Ricardo Hurtubia

ಅನಾವರಣ

ಅನಾವರಣ

ದೈಹಿಕ ಪ್ರೆಮ ಅನಾವರಣಗೊಳಿಸುತ್ತಿರುವ ಮತ್ತೊಂದು ವಿಶಿಷ್ಟ ಪ್ರತಿಮೆ. ಖಂಡರಿಯಾ ಮಹಾದೇವ ಮಂದಿರ.

ಚಿತ್ರಕೃಪೆ: Jean-Pierre Dalbéra

ಕೋನಾರ್ಕ್

ಕೋನಾರ್ಕ್

ಒಡಿಶಾ ರಾಜ್ಯದಲ್ಲಿರುವ ಕೋನಾರ್ಕ್ ಪಟ್ಟಣವು ತನ್ನಲ್ಲಿರುವ ಪ್ರಾಚೀನ ಹಾಗೂ ಅಸಾಧಾರಣವಾದ ಸೂರ್ಯ ದೇವಾಲಯದಿಂದಾಗಿ ವಿಶ್ವವಿಖ್ಯಾತಿಗಳಿಸಿದೆ. ಈ ಸೂರ್ಯ ದೇವಾಲಯದ ಕೆಲ್ತ್ತನಗಳು, ಶಿಲ್ಪಕಲೆಗಳು ಜಗತ್ತಿನಾದ್ಯಂತ ಕಲಾರಸಿಕರಿಂದ ಪ್ರಶಂಸೆಗಳನ್ನು ಗಳಿಸಿವೆ. ಇಲ್ಲಿಯೂ ಸಹ ಸಾಕಷ್ಟು ಪ್ರೇಮದ ರಸ ಉಣಿಸುವಂತಹ ಶಿಲ್ಪಕಲೆಗಳನ್ನು ಈ ದೇವಾಲಯದ ಗೋಡೆಗಳ ಮೇಲೆ ಕಾಣಬಹುದಾಗಿದೆ.

ಚಿತ್ರಕೃಪೆ: Amitavamarine007

ಕೆತ್ತಲಾಗಿದೆ

ಕೆತ್ತಲಾಗಿದೆ

ಗೋಡೆಗಳ ಮೇಲೆ ಖಂಬದಾಕಾರದ ಕೆತ್ತನೆಗಳನ್ನು ಕೆತ್ತಿ ಅದರ ಮೇಲೆ ಗಂಡು-ಹೆಣ್ಣಿನ ಮಧ್ಯದ ಪ್ರೀತಿಯ ರಸಮಯ ಕ್ಷಣಗಳನ್ನು ಸೊಗಸಾಗಿ ಕೆತ್ತಲಾಗಿರುವುದನ್ನು ಕಾಣಬಹುದಾಗಿದೆ.

ಚಿತ್ರಕೃಪೆ: wikimedia

ಛತ್ತೀಸ್ಗಡ್

ಛತ್ತೀಸ್ಗಡ್

ಭೋರಂದೇವ್ ದೇವಾಲಯ ಸಂಕೀರ್ಣವನ್ನು "ಛತ್ತೀಸ್ಗಡ್ ರಾಜ್ಯದ ಖಜುರಾಹೊ" ಎಂದೆ ಕರೆಯುತ್ತಾರೆ. ಏಕೆಂದರೆ ಇಲ್ಲಿಯೂ ಸಾಕಷ್ಟು ಕಾಮ ಪ್ರಚೋದಕ ಶಿಲ್ಪಕಲೆಗಳಿರುವುದನ್ನು ಕಾಣಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಚೆರ್ಕಿ ಮಹಲ್ ರಚನೆಯಲ್ಲಿ.

ಚಿತ್ರಕೃಪೆ: Ratnesh1948

ದಟ್ಟ ಕಾಡು

ದಟ್ಟ ಕಾಡು

ಛತ್ತೀಸ್ಗಡ್ ರಾಜ್ಯದ ದಕ್ಷಿಣ ಕೋಶಲ ಭಾಗದಲ್ಲಿ ಬರುವ ಮೇಕಲ್ ಪರ್ವತ ಶ್ರೇಣಿಯ ದಟ್ಟ ಕಾಡು ಪ್ರದೇಶದಲ್ಲಿ ಈ ದೇವಾಲಯವನ್ನು ಕಾಣಬಹುದು. ಇತಿಹಾಸದ ಪ್ರಕಾರ, ಈ ದೇವಾಲಯವು ಖಜುರಾಹೊ ದೇವಾಲಯಕ್ಕಿಂತಲೂ ಪುರಾತನವಾದುದೆನ್ನಲಾಗಿದೆ.

ಚಿತ್ರಕೃಪೆ: Ratnesh1948

ಕಾವರ್ಧಾ

ಕಾವರ್ಧಾ

ಪ್ರಸ್ತುತ ರಾಜಯದ ಕಬೀರಧಾಮ್ ಜಿಲ್ಲೆಯ ಕಾವರ್ಧಾ ಪಟ್ಟಣದಿಂದ ಸುಮಾರು 18 ಕಿ.ಮೀ ಗಳಷ್ಟು ದೂರದಲ್ಲಿ ಈ ದೇವಾಲಯ ಸಂಕೀರ್ಣವಿದ್ದು ತನ್ನ ಕಾಮಮಯ ಶಿಲ್ಪಕಲೆಗಳಿಂದಾಗಿಯೆ ಹೆಚ್ಚು ಸಮ್ಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Ratnesh1948

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X