Search
  • Follow NativePlanet
Share
» »ನೋಡಲೇಬೇಕಾದ ಆಂಧ್ರದ ಅದ್ಭುತ ವನಸಿರಿಗಳು!

ನೋಡಲೇಬೇಕಾದ ಆಂಧ್ರದ ಅದ್ಭುತ ವನಸಿರಿಗಳು!

ಆಕರ್ಷಕ ಪ್ರವಾಸಿ ರಾಜ್ಯವಾಗಿರುವ ದಕ್ಷಿಣದ ಆಂಧ್ರಪ್ರದೇಶ ರಾಜ್ಯವು ದೇವಾಲಯಗಳನ್ನು ಹೊರತುಪಡಿಸಿ ಕೆಲವು ಅದ್ಭುತವಾದ ಕಾಡು ಪ್ರದೇಶಗಳಿಗಾಗಿಯೂ ಸಾಕಷ್ಟು ಹೆಸರುವಾಸಿಯಾಗಿದೆ

By Vijay

ದಕ್ಷಿಣ ಭಾರತದ ರಾಜ್ಯಗಳಲ್ಲೊಂದಾದ ಆಂಧ್ರಪ್ರದೇಶ ಪ್ರವಾಸೋದ್ಯಮದ ದೃಷ್ಟಿಯಿಂದ ಸಾಕಷ್ಟು ಮಹತ್ವ ಪಡೆದಿರುವ ರಾಜ್ಯವಾಗಿದೆ. ಆಂಧ್ರಪ್ರದೇಶವು ಮುಖ್ಯವಾಗಿ ಧಾರ್ಮಿಕ ತಾಣಗಳಿಗೆ ಹೆಸರುವಾಸಿಯಾಗಿದ್ದರೂ ಇಲ್ಲಿನ ಸೃಷ್ಟಿ ಸೌಂದರ್ಯ ತನ್ನದೆ ಆದ ವಿಶಿಷ್ಟತೆಯನ್ನು ಹೊಂದಿದೆ.

ಅದರಂತೆ ಆಂಧ್ರಪ್ರದೇಶದಲ್ಲಿ ಕೆಲವು ಅದ್ಭುತ ಎನ್ನಬಹುದಾದ ಅರಣ್ಯ ಪ್ರದೇಶಗಳಿದ್ದು ಇವು ಸದಾ ನಿಸರ್ಗಪ್ರಿಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಹಾಗಾದರೆ ಆಂಧ್ರದಲ್ಲಿ ಭೇಟಿ ನೀಡಬಹುದಾದ ಕೆಲವು ಅದ್ಭುತ ಕಾಡು ಪ್ರದೇಶಗಳು ಯಾವುವು ಹಾಗೂ ಅವು ಎಲ್ಲಿವೆ ಎಂಬುದರ ಕುರಿತು ಪ್ರಸ್ತುತ ಲೇಖನದ ಮೂಲಕ ತಿಳಿಯೋಣ.

ಕೇರಳದ ಈ ಕಾಡುಗಳಿಗೆ ಭೇಟಿ ನೀಡಿದ್ದೀರಾ?ಕೇರಳದ ಈ ಕಾಡುಗಳಿಗೆ ಭೇಟಿ ನೀಡಿದ್ದೀರಾ?

ಮ್ಯಾಂಗ್ರೋವ್ ಕಾಡು

ಮ್ಯಾಂಗ್ರೋವ್ ಕಾಡು

ಭಾರತದಲ್ಲಿ ಕಂಡು ಬರುವ ಕೆಲವೆ ಕೆಲವು ಮ್ಯಾಂಗ್ರೋವ್ ಕಾಡುಗಳ ಪೈಕಿ ಅಂಧ್ರದಲ್ಲಿರುವ ಈ ಅರಣ್ಯಧಾಮವೂ ಸಹ ಒಂದು. ಇಲ್ಲಿ ಒಟ್ಟು 24 ಬಗೆಯ ವಿವಿಧ ಮ್ಯಾಂಗ್ರೋವ್ ಗಿಡಗಳನ್ನೂ ಹಾಗೂ 120 ಬಗೆಯ ಅದ್ಭುತ ಪಕ್ಷಿ ಪ್ರಬೇಧಗಳನ್ನು ಕಾಣಬಹುದು. ಈ ಕಾಡಿನ ಕುರಿತು ಸಾಕಷ್ಟು ಜನರಿಗೆ ತಿಳಿದಿಲ್ಲ. ಆದರೆ ಭೇಟಿ ನೀಡಿದರೆ ನಿಮಗೆ ಆಶ್ಚರ್ಯದ ಜೊತೆಗೆ ಸಂತಸವೂ ಉಂಟಾಗುವುದು ಖಚಿತ.

ಚಿತ್ರಕೃಪೆ: Arkadeep Meta

ಮ್ಯಾಂಗ್ರೋವ್ ಗಿಡ

ಮ್ಯಾಂಗ್ರೋವ್ ಗಿಡ

ಈ ಸುಂದರ ಕಾಡು ನದೀಮುಖ ಪ್ರದೇಶದಲ್ಲಿರುವುದರ ಕಾರಣ ಸುತ್ತಲೂ ನೀರನ್ನು ಕಾಣಬಹುದು. ಅಲ್ಲದೆ ಮ್ಯಾಂಗ್ರೋವ್ ಗಿಡಗಳು ಈ ನೀರಿನಲ್ಲಿ ಸದಾ ಇರುವುದರಿಂದ ವಿವಿಧ ಜಲಚರಗಳಿಗೆ ಸಾಕಷ್ಟು ಅದ್ಭುತವಾದ ಆಶ್ರಯ ತಾಣವಾಗಿಯೂ ಈ ಕಾಡು ಹೆಸರುವಾಸಿಯಾಗಿದೆ.

ಚಿತ್ರಕೃಪೆ: GARIMA UTKARSH SHARMA

ಏನು ವಿಶೇಷ?

ಏನು ವಿಶೇಷ?

ಈ ಅದ್ಭುತ ಕಾಡು ಪ್ರದೇಶವು ಬಂದರು ನಗರಿಯಾದ ಆಂಧ್ರದ ಕಾಕಿನಾಡ ಪಟ್ಟಣದಿಂದ ಸುಮಾರು 18 ಕಿ.ಮೀ ದೂರವಿದ್ದು ಇಲಿ ಗೌತಮಿ ಹಾಗೂ ಗೋದಾವರಿ ನದಿಗಳು ಪ್ರತ್ಯೇಕವಾಗಿ ಹರಿದು ಬಂಗಾಳ ಕೊಲ್ಲಿಯಲ್ಲಿ ಸಮಾಗಮವಾಗುವ ಸ್ಥಳದ ಬಳಿ ಸ್ಥಿತವಿದೆ.

ಚಿತ್ರಕೃಪೆ: GARIMA UTKARSH SHARMA

ದಖ್ಖನ ಪ್ರಸ್ಥಭೂಮಿ

ದಖ್ಖನ ಪ್ರಸ್ಥಭೂಮಿ

ಆಂಧ್ರದ ಕರ್ನೂಲ್ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಎರ್‍ರಮಲಾ ಬೆಟ್ಟಗಳು ಅದ್ಭುತವಾದ ಕಾಡುಗಳಿಂದ ಕೂಡಿದ್ದು ಸಾಕಷ್ಟು ಸುಂದರ ಪ್ರಕೃತಿಯನ್ನು ಹೊಂದಿದೆ. ಈ ಪ್ರದೇಶದ ವ್ಯಾಪ್ತಿಯಲ್ಲಿ ಅನೇಕ ಅದ್ಭುತ ಪ್ರವಾಸಿ ತಾಣಗಳಿರುವುದು ವಿಶೇಷ.

ಚಿತ್ರಕೃಪೆ: Vinayaraj

ಅದ್ಭುತ

ಅದ್ಭುತ

ಈ ಬೆಟ್ಟಕಾಡುಗಳ ವ್ಯಾಪ್ತಿಯಲ್ಲಿ ಬರುವ ಒಂದು ಪ್ರಬುದ್ಧ ಪ್ರವಾಸಿ ಆಕರ್ಷಣೆ ಎಂದರೆ ಬೇಲಂ ಗುಹೆಗಳು. ಕರ್ನೂಲ್ ಜಿಲ್ಲೆಯ ಕೊಲಿಮಿಗುಂಡ್ಲಾ ಪ್ರದೇಶದ ಬೇಲಂ ಎಂಬ ಗ್ರಾಮದಲ್ಲಿ ಈ ಅದ್ಭುತ ಗುಹೆಗಳಿದ್ದು ಪ್ರವಾಸಿಗರನ್ನು ಚುಂಬಕದಂತೆ ಆಕರ್ಷಿಸುತ್ತವೆ.

ಚಿತ್ರಕೃಪೆ: Pravinjha

ಕಡಪ

ಕಡಪ

ಎರ್‍ರಮಲ ಬೆಟ್ಟ ಕಾಡುಗಳು ಕಡಪ ಜಿಲ್ಲೆಯವರೆಗೂ ವಿಸ್ತರಿಸಿದ್ದು ಇಲ್ಲಿ ಅದ್ಭುತವಾದ ಗಂಡಿಕೋಟ ಕಣಿವೆ ಪ್ರದೇಶವನ್ನು ಕಾಣಬಹುದು. ಇದನ್ನು ಭಾರತದ ಗ್ರ್ಯಾಂಡ್ ಕ್ಯನಿಯನ್ ಎಂದೂ ಸಹ ಸಂಬೋಧಿಸುತ್ತಾರೆ.

ಚಿತ್ರಕೃಪೆ: Sudhakarbichali

ಅಭಯಾರಣ್ಯ

ಅಭಯಾರಣ್ಯ

ಕಂಬಲಕೊಂಡ ಒಂದು ಜೈವಿಕ ಪರಿಸರದ ಉದ್ಯಾನವಾಗಿದ್ದು ಸುಮಾರು 70.70 ಚಕಿಮೀ ವಿಸ್ತೀರ್ಣದಲ್ಲಿ ವಿಶಾಲವಾಗಿ ಆವರಿಸಿದೆ. ಇದೊಂದು ಒಣ ನಿತ್ಯಹರಿದ್ವರ್ಣದ ಕಾಡಾಗಿದ್ದು ಆಂಧ್ರಪ್ರದೇಶ ಅರಣ್ಯ ಇಲಾಖೆಯಿಂದ ನಿಯಂತ್ರಿಸಲ್ಪಡುತ್ತದೆ.

ಚಿತ್ರಕೃಪೆ: Adityamadhav83

ವಿಶಾಖಾಪಟ್ಟಣ

ವಿಶಾಖಾಪಟ್ಟಣ

ಈ ರಾಷ್ಟ್ರೀಯ ಉದ್ಯಾನವು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 5 ರ ಬಳಿಯಿದ್ದು ವಿಶಾಖಪಟ್ಟಣದಿಂದ ಕೇವಲ 20 ಕಿ.ಮೀ ದೂರದಲ್ಲಿ ವಿಜಯನಗರಂ - ಶ್ರೀಕಾಕುಲಂ ರಸ್ತೆಯ ಮೇಲೆ ನೆಲೆಸಿದೆ. ಈ ಉದ್ಯಾನದ ಸಮ್ಮುಖದಲ್ಲೆ ಹೆದ್ದಾರಿಯ ಇನ್ನೊಂದು ಬದಿಯಲ್ಲಿ ಇಂದಿರಾಗಾಂಧಿ ಪ್ರಾಣಿಶಾಸ್ತ್ರೀಯ ಉದ್ಯಾನವನ್ನು ಕಾಣಬಹುದು. ಈ ಉದ್ಯಾನವನ್ನು ವೈಜಾಗ್ ಝೂ ಎಂಬ ಹೆಸರಿನಿಂದಲೆ ಕರೆಯಲಾಗುತ್ತದೆ.


ಚಿತ್ರಕೃಪೆ: Adityamadhav83

ಕೃಷ್ಣಾ ನದಿ ಮುಖಜ ಭೂಮಿ

ಕೃಷ್ಣಾ ನದಿ ಮುಖಜ ಭೂಮಿ

ಕೃಷ್ಣಾ ಅಭಯಾರಣ್ಯವು ಅನೇಕ ಪರಿಸರ ಸಂರಕ್ಷಣಾವಾದಿಗಳ ಪ್ರಕಾರ, ದಕ್ಷಿಣ ಭಾರತದಲ್ಲೆ ದಟ್ಟನೆಯ ಮ್ಯಾಂಗ್ರೋವ್ ಕಾಡುಗಳನ್ನು ಹೊಂದಿರುವ ಏಕೈಕ ಅಭಯಾರಣ್ಯವಾಗಿದೆ. ಅಲ್ಲದೆ ಇದೊಂದು ಅಪರೂಪದ ಜೈವಿಕ ಪರಿಸರದ ತಾಣವೂ ಸಹ ಆಗಿದೆ. ಆಂಧ್ರ ಪ್ರದೇಶ ರಾಜ್ಯದ ಕೃಷ್ಣಾ ನದಿ ಮುಖಜ ಭೂಮಿಯಲ್ಲಿ ಕಂಡುಬರುವ ಈ ಅಭಯಾರಣ್ಯವು ಆಂಧ್ರದ ಕೃಷ್ಣಾ ಜಿಲ್ಲೆಯ ಮಚಲಿಪಟ್ಟಣಂ ನಗರಕ್ಕೆ ಹತ್ತಿರದಲ್ಲಿದೆ.

ಚಿತ್ರಕೃಪೆ: J.M.Garg

ಮೀಸಲು ಕಾಡು

ಮೀಸಲು ಕಾಡು

ಈ ಒಂದು ಅದ್ಭುತ ಅಭಯಾರಣ್ಯದಲ್ಲಿ ಸೊರ್ಲಗೊಂಡಿ ಮೀಸಲು ಅರಣ್ಯ, ಅದಾವುಲದಿವಿ ಮೀಸಲು ಅರಣ್ಯ, ಲಂಕಿವನಿದಿಬ್ಬ ಹೀಗೆ ಅನೇಕ ಮೀಸಲು ಅರಣ್ಯಗಳನ್ನು ಕಾಣಬಹುದು. ಈ ಮೀಸಲು ಕಾಡುಗಳು ಕೃಷ್ಣಾ ನದಿ ಮುಖಜ ಭೂಮಿಯ ಸಣ್ಣ ಪುಟ್ಟ ನಡುಗಡ್ಡೆಗಳಲ್ಲಿ ಅವ್ಯಾಹತವಾಗಿ ಹರಡಿವೆ. ಈ ಪ್ರದೇಶದ ನದಿಗಳ ದಂಡೆಯ ಗುಂಟ ಮ್ಯಾಂಗ್ರೋವ್ ಕಾಡುಗಳನ್ನು ಕಾಣಬಹುದಾಗಿದೆ.

ಚಿತ್ರಕೃಪೆ: J.M.Garg

ಮೀನು ಹಿಡಿಯುವ

ಮೀನು ಹಿಡಿಯುವ

ಕೃಷ್ಣಾ ನದಿಯ ನದಿ ಮುಖವು ಈ ಪ್ರದೇಶದಿಂದ ಹಾದು ಹೋಗಿದ್ದು ಇದರ ತುಂಬ ಮ್ಯಾಂಗ್ರೋವ್ ಕಾಡುಗಳನ್ನು ನೋಡಬಹುದು. ಒಂದು ಮೂಲದಂತೆ ಈ ಒಂದು ನಿರ್ದಿಷ್ಟ ಭಾಗದಲ್ಲಿ ಅಪಾರವಾದ ಸಂಖ್ಯೆಯಲ್ಲಿ ಮೀನು ಹಿಡಿಯುವ ಬೆಕ್ಕುಗಳನ್ನು ಕಾಣಬಹುದಾಗಿದೆಯಂತೆ. ಆದರೆ ಇದಕ್ಕೆ ನಿರ್ದಿಷ್ಟ ಪುರಾವೆಗಳಿಲ್ಲ. ಏಕೆಂದರೆ ಈ ರೀತಿಯ ಬೆಕ್ಕುಗಳು ಕಂಡುಬರುವುದು ಬಲು ಅಪರೂಪ.

ಚಿತ್ರಕೃಪೆ: J.M.Garg

ಕಾಶ್ಮೀರ!

ಕಾಶ್ಮೀರ!

ಹೌದು, ಇದೊಂದು ಚಿಕ್ಕ ಗ್ರಾಮವಾಗಿದ್ದು ಸುತ್ತಲೂ ಅರಣ್ಯದಿಂದ ಸುತ್ತುವರೆದಿದೆ. ಇಲ್ಲಿನ ಕಾಡುಗಳ ಸೌಂದರ್ಯ ನಿಜಕ್ಕೂ ವರ್ಣಿಸಲಾಗದಷ್ಟು ಅದ್ಭುತವಾಗಿದೆ. ವೈಜಾಗ್ ಅಥವಾ ವಿಶಾಖಾಪಟ್ಟಣ ಜಿಲ್ಲೆಯಲ್ಲಿರುವ ಈ ಪ್ರದೇಶವನ್ನು ಆಂಧ್ರದ ಕಾಶ್ಮೀರ ಎಂತಲೆ ಕರೆಯುತ್ತಾರೆ.

ಚಿತ್ರಕೃಪೆ: Bdmshiva

ಚಳಿಗಾಲ

ಚಳಿಗಾಲ

ಸಾಮಾನ್ಯವಾಗಿ ಆಂಧ್ರವು ಸಾಕಷ್ಟು ಉಷ್ಣತೆ ಹೊಂದಿರುವ ರಾಜ್ಯ. ಆದಾಗ್ಯೂ ಈ ಲಂಬಸಿಂಗಿ ಚಳಿಗಾಲದ ಸಮಯದಲ್ಲಿ ಸುಮಾರು ಸೊನ್ನೆ ಡಿಗ್ರಿಯಷ್ಟು ಉಷ್ಣಾಂಶ ಹೊಂದಿದ್ದು ದಟ್ಟವಾದ ಮಂಜಿನಿಂದ ಕೂಡಿರುತ್ತದೆ. ಸಾಕಷ್ಟು ತಂಪಾಗಿರುವ ಕಾರಣ ಇದನ್ನು ಕಾಶ್ಮೀರ ಎಂದು ಕರೆಯುತ್ತಾರೆ.

ಚಿತ್ರಕೃಪೆ: Bdmshiva

ಎಷ್ಟು ದೂರ

ಎಷ್ಟು ದೂರ

ಉತ್ತಮ ರಸ್ತೆ ಸಂಪರ್ಕ ಹೊಂದಿರುವ ಈ ಗ್ರಾಮ ವಿಶಾಖಾಪಟ್ಟಣದಿಂದ 101 ಕಿ.ಮೀ ಹಾಗೂ ಚಿಂತಪಲ್ಲಿಯಿಂದ 19 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದ್ದು ಸುಲಭವಾಗಿ ತಲುಪಬಹುದಾಗಿದೆ.

ಚಿತ್ರಕೃಪೆ: Adityamadhav83

ವೈಜಾಗ್

ವೈಜಾಗ್

ವೈಜಾಗ್ ನಲ್ಲೆ ಇರುವ ಮಾಧವಧಾರಾ ಅದ್ಭುತವಾದ ನಿತ್ಯಹರಿದ್ವರ್ಣದ ಕಾಡುಗಳಿಗೆ ಆಶ್ರಯ ನೀಡಿದ ತಾಣವಾಗಿದೆ. ಇಲ್ಲಿನ ಭೇಟಿ ಸದಾ ಅವಿಸ್ಮರಣೀಯವಾಗಿರುತ್ತದೆ ಎನ್ನುತ್ತಾರೆ ಭೇಟಿ ನೀಡುವ ಪ್ರವಾಸಿಗರು.

ಚಿತ್ರಕೃಪೆ: Adityamadhav83

ವಿಶಾಖಪಟ್ಟಣ

ವಿಶಾಖಪಟ್ಟಣ

ಆಂಧ್ರದ ಬಂಗಾಳ ಕೊಲ್ಲಿಯ ಅದ್ಭುತ ಬಂದರು ನಗರವಾದ ವೈಜಾಗ್ ಅಥವಾ ವಿಶಾಖಾಪಟ್ಟಣ ಸಾಕಷ್ಟು ಪ್ರವಾಸಿ ವಿಶೇಷತೆಯುಳ್ಳ್ ನಗರವಾಗಿದೆ. ಇದೆ ಜಿಲ್ಲೆಯಲ್ಲಿರುವ ಮಿಧಿಲಾಪುರಿ ಸಹ ನಿತ್ಯ ಹರಿದ್ವರ್ಣದ ಸುಂದರ ಕಾಡನ್ನು ಹೊಂದಿರುವ ಆಕರ್ಷಕ ತಾಣವಾಗಿದೆ.

ಚಿತ್ರಕೃಪೆ: Adityamadhav83

ನಿತ್ಯಹರಿದ್ವರ್ಣ

ನಿತ್ಯಹರಿದ್ವರ್ಣ

ವಿಶಾಖಪಟ್ಟಣದಲ್ಲಿರುವ ಮತ್ತೊಂದು ಕಾಡು ಹಳ್ಳಿ ಪಡೇರು. ಸಾಕಷ್ಟು ಅದ್ಭುತವಾದ ಪ್ರಾಕೃತಿಕ ಸೊಬಗಿನಿಂದ ಈ ಕಾಡು ಪ್ರದೇಶ ಕಂಗೊಳಿಸುತ್ತದೆ.

ಚಿತ್ರಕೃಪೆ: Krishna Potluri

ವಿಜಿನಗರಂ

ವಿಜಿನಗರಂ

ಆಂಧ್ರದ ವಿಜಿನಗರಂ ಜಿಲ್ಲೆಯಲ್ಲಿರುವ ರಾಮತೀರ್ಥಂ ಕಾಡು ಪ್ರದೇಶ ಸಕಷ್ಟು ನಯನ ಮನೋಹರ ಕಾಡು ದೃಶ್ಯಾವಳಿಗಳಿಂದ ಕೂಡಿದ್ದು ಪ್ರವಾಸಿಗರನ್ನು ಕ್ಷಣ ಮಾತ್ರದಲ್ಲೆ ಆಕರ್ಷಿಸುತ್ತದೆ.

ಚಿತ್ರಕೃಪೆ: Adityamadhav83

ವಿಜಿನಗರಂ

ವಿಜಿನಗರಂ

ಆಂಧ್ರದ ವಿಜಿನಗರಂ ಜಿಲ್ಲೆಯಲ್ಲಿರುವ ರಾಮತೀರ್ಥಂ ಕಾಡು ಪ್ರದೇಶ ಸಕಷ್ಟು ನಯನ ಮನೋಹರ ಕಾಡು ದೃಶ್ಯಾವಳಿಗಳಿಂದ ಕೂಡಿದ್ದು ಪ್ರವಾಸಿಗರನ್ನು ಕ್ಷಣ ಮಾತ್ರದಲ್ಲೆ ಆಕರ್ಷಿಸುತ್ತದೆ.

ಚಿತ್ರಕೃಪೆ: Adityamadhav83

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X