Search
  • Follow NativePlanet
Share
» »ಕಾಮನ ಬಿಲ್ಲಿನಂಥ ಮುಂಬೈ ನಗರ ಜೀವನ

ಕಾಮನ ಬಿಲ್ಲಿನಂಥ ಮುಂಬೈ ನಗರ ಜೀವನ

By Vijay

ದೇಶದ ಆರ್ಥಿಕ ರಾಜಧಾನಿ, ಅತಿ ದೊಡ್ಡ ವಾಣಿಜ್ಯ ನಗರಿ, ಮಾಯಾ ಲೋಕದ ಸ್ವರ್ಗ, ಚಿತ್ರಗಳ ತವರು ಮುಂತಾದ ಬಿರುದಾವಳಿಗಳನ್ನು ಪಡೆದಿರುವ ಮುಂಬೈ ನಗರ ದಿನ ನಿತ್ಯವೂ ಸಾವಿರಾರು ಜನರು ಸುಂದರವಾದ ಕನಸುಗಳನ್ನು ಹೊತ್ತು ಜೀವನದಲ್ಲಿ ನೆಲೆ ನಿಲ್ಲಬೇಕೆಂದು ಬಯಸಿ ಭೇಟಿ ನೀಡುವ ಒಂದು ಅಮೋಘ ಮಾಯಾ ಲೋಕದ ನಗರವಾಗಿದೆ.

ಹರಿದು ತಿನ್ನುವ ಬಡತನದ ಜನರಿಂದ ಹಿಡಿದು ಬಂಗಾರದ ಬಕೆಟ್ ನಲ್ಲೆ ಸ್ನಾನ ಮಾಡುವ ಶ್ರೀಮಂತರವರೆಗೆ ಎಲ್ಲ ರೀತಿಯ, ಎಲ್ಲ ವರ್ಗದ, ಎಲ್ಲ ಕೋಮಿನ ಜನರು ವೈವಿಧ್ಯತೆಯಲ್ಲಿ ಏಕತೆ ಎಂಬ ನಾಣ್ಣುಡಿಗೆ ಅನುಗುಣವಾಗಿ ಏಕಭಾವದಿಂದ ಬದುಕುತ್ತಿರುವುದನ್ನು ನೋಡಿದಾಗ ಮುಂಬೈ ನಗರದ ಅಗಾಧತೆ, ಪ್ರಭುದ್ದತೆ, ಪ್ರಶಾಂತತೆ ಕಣ್ಣಿಗೆ ಕಟ್ಟುತ್ತವೆ.

ಮುಂಬೈ ನಗರದಲ್ಲಿ ಒಂದು ಸುತ್ತು ಹಾಕಿದಾಗ ನಗರದ "ನಗರ ಜೀವನ" ದ ಹಲವು ಸ್ತರಗಳು ಮನದಲ್ಲಿ ಕಾಣಿಸತೊಡಗುತ್ತವೆ. ಪ್ರವಾಸವೆಂದರೆ ಕೇವಲ ಸ್ಥಳಗಳನ್ನು ಸುತ್ತುವುದು, ಆಕರ್ಷಣೆಗಳನ್ನು ಸವಿಯುವುದು, ಕುಟುಂಬದೊಡನೆ ಬೆರೆತು ಹಾಯಾಗಿ ಸಮಯ ಕಳೆಯುವುದಲ್ಲ. ಇವುಗಳ ಜೊತೆ ಜೊತೆಯಲ್ಲೆ ವಿವಿಧ ಸ್ಥಳಗಳ ಆಯಾ ಪರಿಸರ, ಸಂಸ್ಕೃತಿ, ಆಚಾರ-ವಿಚಾರ, ಜೀವನ ನಿರ್ವಹಣೆ, ಸೂಕ್ಷ್ಮತೆಗಳನ್ನು ಅವಲೋಕಿಸುವುದೂ ಕೂಡ ಅರ್ಥಪೂರ್ಣ ಪ್ರವಾಸದ ಒಂದು ಲಕ್ಷಣ.

ಪ್ರಸ್ತುತ, ಬಾವಿಯೊಳಗಿನ ಕಪ್ಪೆಯಂತಾಗಿರುವ ನಮ್ಮ ಜೀವನಕ್ಕೆ, ಇಂತಹ ಒಂದು ಸೂಕ್ಷ್ಮ ದೃಷ್ಟಿಯ ಪ್ರವಾಸ ಮಾಡಿಸಿದಾಗ ಜೀವನದ ಅಪಾರವಾದ ಮೌಲ್ಯವು ಅರ್ಥವಾಗುತ್ತಾ ಹೋಗುತ್ತದೆ. ಕಷ್ಟ ಸುಖಗಳು ಮನುಷ್ಯರಿಂದ ಏನೆಲ್ಲ ಮಂಗನಾಟವನ್ನು ಮಾಡಿಸುತ್ತವೆ ಎಂಬುದು ಗಮನಕ್ಕೆ ಬರುತ್ತದೆ. ಕೇವಲ ಮಾಲ್ ಗಳನ್ನು ಸುತ್ತಾಡಿದಾಗ, ಸಿನೆಮಾಗಳನ್ನು ನೋಡಿದಾಗ ಮಾತ್ರವೆ ಆನಂದ ಲಭಿಸುತ್ತದೆ ಎಂಬ ಪೊಳ್ಳು ಅನಿಸಿಕೆಯು ದೂರವಾಗುತ್ತದೆ.

ನಮ್ಮ ಆಚಾರ ವಿಚಾರ, ಸಂಸ್ಕೃತಿ -ಸಂಪ್ರದಾಯ ಏನೆ ಇರಲಿ...ನಗರವನ್ನು ಒಮ್ಮೆ ಸೂಕ್ಷ್ಮವಾಗಿ ಸುತ್ತಾಡಿದಾಗ ಹಲವು ನೋವುಗಳ ನಡುವೆಯೂ ಸುಖಮಯ ಜೀವನದ ಆಶಾ ಕಿರಣವನ್ನು ಬತ್ತದ ಹಾಗೆ ದೃಢ ಆತ್ಮ ವಿಶ್ವಾಸದಿಂದ ಮುನ್ನಡೆಸುತ್ತಿರುವ ಜೀವನದ ಅನಂತ ಪ್ರಯಾಣವು ನಮ್ಮನ್ನು ಮೂಕ ವಿಸ್ಮಿತರನ್ನಾಗಿ ಮಾಡುತ್ತದೆ.

ಹಾಗಾದರೆ ಬನ್ನಿ ಮುಂಬೈ ನಗರವನ್ನು ಒಮ್ಮೆ ಸೂಕ್ಷ್ಮವಾಗಿ ಅವಲೋಕಿಸಿ ಈ ಲೇಖನದ ಮೂಲಕ.

ಮುಂಬೈ ಜೀವನ:

ಮುಂಬೈ ಜೀವನ:

ಮುಂಬೈ ನಗರದಲ್ಲಿ ಮಳೆಗಾಲ ಬಹಳ (ಕು)ಖ್ಯಾತಿಯನ್ನು ಪಡೆದಿದೆ. ಈ ಹೆಚ್ಚು ಕಡಿಮೆ ದ್ವೀಪ ಪ್ರದೇಶದಲ್ಲಿ ಮಳೆಗಾಲದ ಆರಂಭವು ಬೇಸಿಗೆಯ ಬೇಗೆಯಿಂದ ತತ್ತರಿಸಿ ಹೋದ ಜನರಿಗೆ ನೆಮ್ಮದಿಯನ್ನು ಕರುಣಿಸುತ್ತದೆ. ಯಾವ ರೀತಿಯ ಜನರೇ ಆಗಲಿ ನಗರದಲ್ಲಿ ಮಳೆಗಾಲವನ್ನು ಸಂತಸದಿಂದ ಬರಮಾಡಿಕೊಳ್ಳುತ್ತಾರೆ.

ಚಿತ್ರಕೃಪೆ: Dinesh Bareja

ಮುಂಬೈ ಜೀವನ:

ಮುಂಬೈ ಜೀವನ:

ಎಲ್ಲೆಡೆಯು ಕಾಂಕ್ರೀಟ್ ಕಾಡುಗಳಿಂದ ರೂಪಗೊಂಡಿರುವ ಈ ನಗರದಲ್ಲಿ ಅವಕಾಶಗಳಿಗೇನೂ ಕಮ್ಮಿ ಇಲ್ಲ. ಅಂತೆಯೆ ಸಾವಿರಾರು ಜನರು ನಗರಕ್ಕೆ ನಿತ್ಯವೂ ತಮ್ಮ ಜೀವನದ ಕನಸನ್ನು ಕಾಣುತ್ತಾ ಕಾಲಿಡುತ್ತಾರೆ.

ಚಿತ್ರಕೃಪೆ: Sarah Jamerson

ಮುಂಬೈ ಜೀವನ:

ಮುಂಬೈ ಜೀವನ:

ಮುಂಬೈನ ಗೇಟ್ ವೆ ಆಫ್ ಇಂಡಿಯಾ ಹಾಗೂ ಅದರ ಹಿಂದೆ ತಲೆ ಎತ್ತಿ ಹೆಮ್ಮೆಯಿಂದ ನಿಂತಿರುವ ಹೋಟೆಲ್ ತಾಜ್.

ಚಿತ್ರಕೃಪೆ: Arian Zwegers

ಮುಂಬೈ ಜೀವನ:

ಮುಂಬೈ ಜೀವನ:

ಒಂದೆಡೆ ವೈಭೋಗದ ಜೀವನ...ಇನ್ನೊಂದೆಡೆ ಬರಿದಾದ ಮನಸ್ಸು ಎಲ್ಲವೂ ದೊರೆಯುತ್ತದೆ ಮುಂಬೈನಲ್ಲಿ..

ಚಿತ್ರಕೃಪೆ: La Priz

ಮುಂಬೈ ಜೀವನ:

ಮುಂಬೈ ಜೀವನ:

ಮುಂಬೈ ನಗರದ ಅತಿ ಪ್ರತಿಷ್ಠಿತ ಪ್ರದೇಶ ನಾರಿಮನ್ ಪಾಯಿಂಟ್ ನ ಮರೀನ್ ಡ್ರೈವ್.

ಚಿತ್ರಕೃಪೆ: Humayunn Niaz Ahmed Pee

ಮುಂಬೈ ಜೀವನ:

ಮುಂಬೈ ಜೀವನ:

ಮುಂಬೈನ ದಾದರ್ ನಲ್ಲಿರುವ ಕಬೂತರ್ ಖಾನಾದಲ್ಲಿ ಪಾರಿವಾಳಗಳಿಗೆ ಕಾಳುಣಿಸುತ್ತಿರುವ ಪುಟ್ಟ ಬಾಲಕಿ. ಕಬೂತರ್ ಎಂದರೆ ಪಾರಿವಾಳ ಎಂದರ್ಥ.

ಚಿತ್ರಕೃಪೆ: Arjun Shekar

ಮುಂಬೈ ಜೀವನ:

ಮುಂಬೈ ಜೀವನ:

ಮುಂಬೈ ನಗರದ ಪ್ರತಿಷ್ಠಿತ ಛತ್ರಪತಿ ಶಿವಾಜಿ ಟರ್ಮಿನಸ್.

ಚಿತ್ರಕೃಪೆ: Jon Hurd

ಮುಂಬೈ ಜೀವನ:

ಮುಂಬೈ ಜೀವನ:

ನಗರದಲ್ಲಿ ಸುತ್ತಲು, ಪ್ರವಾಸಿಗರಿಗೆಂದೆ ಮೀಸಲಾದ ಆಕರ್ಷಕ ರಥ ಸವಾರಿ.

ಚಿತ್ರಕೃಪೆ: garbyal

ಮುಂಬೈ ಜೀವನ:

ಮುಂಬೈ ಜೀವನ:

ಮುಂಬೈನ ಬೀದಿ ಬೀದಿಗಳಲ್ಲೂ ಚಿಕ್ಕ ಮನೆಗಳು....ಆದರೂ ಸಂತಸದಿಂದ ಕೂಡಿದ ದೊಡ್ಡ ಮನಗಳು.

ಚಿತ್ರಕೃಪೆ: Thomas Leuthard

ಮುಂಬೈ ಜೀವನ:

ಮುಂಬೈ ಜೀವನ:

ಮುಂಬೈನ ಹೆಸರುವಾಸಿಯಾದ ಧೋಬಿ ಘಾಟ್. ಹಲವು ಬಾಲಿವುಡ್ ಚಿತ್ರಗಳು ಈ ತಾಣದಲ್ಲಿ ಚಿತ್ರೀಕರಣಗೊಂಡಿವೆ.

ಚಿತ್ರಕೃಪೆ: University of Salford Press

ಮುಂಬೈ ಜೀವನ:

ಮುಂಬೈ ಜೀವನ:

ಫಾಸ್ಟ್ ಫೂಡ್ ದರ್ಶಿನಿಗಳ ರೀತಿಯಲ್ಲೆ ಶೀಘ್ರ ಹೇರ್‍ ಕಟ್ಟಿಂಗ್ ಪರಿಹಾರಗಳು.

ಚಿತ್ರಕೃಪೆ: Jon Hurd

ಮುಂಬೈ ಜೀವನ:

ಮುಂಬೈ ಜೀವನ:

ಮುಂಬೈನ ವೈಭವದ ಎಂ.ಎಲ್.ಎ ಹಾಸ್ಟೇಲ್ ಮುಂದಿನ ಒಂದು ಸಾಮಾನ್ಯ ರಾತ್ರಿ.

ಚಿತ್ರಕೃಪೆ: Roshan Nikam

ಮುಂಬೈ ಜೀವನ:

ಮುಂಬೈ ಜೀವನ:

ಮುಂಬೈನ ಹಲವು ಜನರಿಗೆ ಇಂದಿಗೂ ಫುಟ್ ಪಾತುಗಳೆ ರಾತ್ರಿ ಮಲಗಲು ಹಾಸಿಗೆಗಳು.

ಚಿತ್ರಕೃಪೆ: Indi Samarajiva

ಮುಂಬೈ ಜೀವನ:

ಮುಂಬೈ ಜೀವನ:

ಮುಂಬೈ ನಗರದ ಲೋಕಲ್ ಟ್ರೈನುಗಳಲ್ಲಿ ಹೀಗಿರುತ್ತದೆ ಪ್ರಯಾಣ.

ಚಿತ್ರಕೃಪೆ: erin

ಮುಂಬೈ ಜೀವನ:

ಮುಂಬೈ ಜೀವನ:

ಮುಂಬೈ ಬೀದಿಗಳಲ್ಲೆ ತಯಾರಾಗುವ ಪಾದರಕ್ಷೆಗಳೂ ಸಹ ಉತ್ತಮ ಗುಣಮಟ್ಟದ್ದಾಗಿರುತ್ತವೆ.

ಚಿತ್ರಕೃಪೆ: Andreas Lehner

ಮುಂಬೈ ಜೀವನ:

ಮುಂಬೈ ಜೀವನ:

ಮುಂಬೈ ಉಚ್ಛ ನ್ಯಾಯಾಲಯದ ಹಿಂಬದಿಯ ಮೈದಾನದಲ್ಲಿ ಕ್ರಿಕೆಟ್ ಆಟದಲ್ಲಿ ನಿರತ ಯುವ ಕ್ರಿಕೆಟಿಗರು.

ಚಿತ್ರಕೃಪೆ: Tom Thai

ಮುಂಬೈ ಜೀವನ:

ಮುಂಬೈ ಜೀವನ:

ಕಾಲ ಕಳೆಯಲು ಮುಂಬೈನ ಮರೀನ್ ಡ್ರೈವ್ ಅತಿ ಪ್ರಶಸ್ತವಾದ ಸ್ಥಳ.

ಚಿತ್ರಕೃಪೆ: Dan Searle

ಮುಂಬೈ ಜೀವನ:

ಮುಂಬೈ ಜೀವನ:

ಮುಂಬೈನ ಬಾಂದ್ರಾ ಪ್ರದೇಶದ ಚಾಪೇಲ್ ರಸ್ತೆ ಬದಿಯ ಒಂದು ಆಶರ್ಯಕರ ಜಾಹೀರಾತು. ಈ ಜಾಹೀರಾತು ನಡೆಯುವುದನ್ನು ಪ್ರೋತ್ಸಾಹಿಸುತ್ತದೆ.

ಚಿತ್ರಕೃಪೆ: Qihui

ಮುಂಬೈ ಜೀವನ:

ಮುಂಬೈ ಜೀವನ:

ರಸ್ತೆ ಬದಿಗಳಲ್ಲೆ ಆನಂದಮಯ ಜೀವನ.

ಚಿತ್ರಕೃಪೆ: Peter Rivera

ಮುಂಬೈ ಜೀವನ:

ಮುಂಬೈ ಜೀವನ:

ಮುಂಬೈನ ಫಿರೋಜ್ ಶಾ ಮೆಹ್ತಾ ಅಥವಾ ತೂಗುವ (ಹ್ಯಾಂಗಿಂಗ್ ಗಾರ್ಡನ್) ಉದ್ಯಾನ.

ಚಿತ್ರಕೃಪೆ: Leonora Enking

ಮುಂಬೈ ಜೀವನ:

ಮುಂಬೈ ಜೀವನ:

ವೈಭವದ ಮುಂಬೈ....ಎತ್ತರದ ಗಗನಚುಂಬಕ ಕಟ್ಟಡಗಳು

ಚಿತ್ರಕೃಪೆ: tom jervis

ಮುಂಬೈ ಜೀವನ:

ಮುಂಬೈ ಜೀವನ:

ವಿಶೇಷವಾಗಿ ವಿದೇಶಿ ಪ್ರವಾಸಿಗರ ಮನಸೆಳೆವ ಅಲಂಕೃತ ಮುಂಬೈ ಸಿಟಿ ಟ್ಯಾಕ್ಸಿಗಳು.

ಚಿತ್ರಕೃಪೆ: Jonathan

ಮುಂಬೈ ಜೀವನ:

ಮುಂಬೈ ಜೀವನ:

ಹಲವು ಬಣ್ಣಗಳು, ವಿವಿಧ ಮುಖಗಳ ರಂಗುರಂಗಾದ ಮುಂಬೈ ನಗರ ಜೀವನ.

ಚಿತ್ರಕೃಪೆ: Meena Kadri

ಮುಂಬೈ ಜೀವನ:

ಮುಂಬೈ ಜೀವನ:

ಹಲವು ಬಣ್ಣಗಳು, ವಿವಿಧ ಮುಖಗಳ ರಂಗುರಂಗಾದ ಮುಂಬೈ ನಗರ ಜೀವನ.

ಚಿತ್ರಕೃಪೆ: Fi Dot

ಮುಂಬೈ ಜೀವನ:

ಮುಂಬೈ ಜೀವನ:

ಹಲವು ಬಣ್ಣಗಳು, ವಿವಿಧ ಮುಖಗಳ ರಂಗುರಂಗಾದ ಮುಂಬೈ ನಗರ ಜೀವನ.

ಚಿತ್ರಕೃಪೆ: Rishad Daroowala

ಮುಂಬೈ ಜೀವನ:

ಮುಂಬೈ ಜೀವನ:

ಹಲವು ಬಣ್ಣಗಳು, ವಿವಿಧ ಮುಖಗಳ ರಂಗುರಂಗಾದ ಮುಂಬೈ ನಗರ ಜೀವನ.

ಚಿತ್ರಕೃಪೆ: Martin Bishop

ಮುಂಬೈ ಜೀವನ:

ಮುಂಬೈ ಜೀವನ:

ಹಲವು ಬಣ್ಣಗಳು, ವಿವಿಧ ಮುಖಗಳ ರಂಗುರಂಗಾದ ಮುಂಬೈ ನಗರ ಜೀವನ.

ಚಿತ್ರಕೃಪೆ: Yutaka Fujii

ಮುಂಬೈ ಜೀವನ:

ಮುಂಬೈ ಜೀವನ:

ಹಲವು ಬಣ್ಣಗಳು, ವಿವಿಧ ಮುಖಗಳ ರಂಗುರಂಗಾದ ಮುಂಬೈ ನಗರ ಜೀವನ.

ಚಿತ್ರಕೃಪೆ: Nomad Tales

ಮುಂಬೈ ಜೀವನ:

ಮುಂಬೈ ಜೀವನ:

ಹಲವು ಬಣ್ಣಗಳು, ವಿವಿಧ ಮುಖಗಳ ರಂಗುರಂಗಾದ ಮುಂಬೈ ನಗರ ಜೀವನ. ಬಾಂದ್ರಾ - ವರ್ಲಿ ಸೀ ಲಿಂಕ್ ಸೇತುವೆ.

ಚಿತ್ರಕೃಪೆ: Amit Kulkarni

ಮುಂಬೈ ಜೀವನ:

ಮುಂಬೈ ಜೀವನ:

ಹಲವು ಬಣ್ಣಗಳು, ವಿವಿಧ ಮುಖಗಳ ರಂಗುರಂಗಾದ ಮುಂಬೈ ನಗರ ಜೀವನ.

ಚಿತ್ರಕೃಪೆ: Rajarshi MITRA

ಮುಂಬೈ ಜೀವನ:

ಮುಂಬೈ ಜೀವನ:

ಹಲವು ಬಣ್ಣಗಳು, ವಿವಿಧ ಮುಖಗಳ ರಂಗುರಂಗಾದ ಮುಂಬೈ ನಗರ ಜೀವನ.

ಚಿತ್ರಕೃಪೆ: Rajarshi MITRA

ಮುಂಬೈ ಜೀವನ:

ಮುಂಬೈ ಜೀವನ:

ಹಲವು ಬಣ್ಣಗಳು, ವಿವಿಧ ಮುಖಗಳ ರಂಗುರಂಗಾದ ಮುಂಬೈ ನಗರ ಜೀವನ.

ಚಿತ್ರಕೃಪೆ: Mark Robinson

ಮುಂಬೈ ಜೀವನ:

ಮುಂಬೈ ಜೀವನ:

ಹಲವು ಬಣ್ಣಗಳು, ವಿವಿಧ ಮುಖಗಳ ರಂಗುರಂಗಾದ ಮುಂಬೈ ನಗರ ಜೀವನ.

ಚಿತ್ರಕೃಪೆ: mihir samel

ಮುಂಬೈ ಜೀವನ:

ಮುಂಬೈ ಜೀವನ:

ಹಲವು ಬಣ್ಣಗಳು, ವಿವಿಧ ಮುಖಗಳ ರಂಗುರಂಗಾದ ಮುಂಬೈ ನಗರ ಜೀವನ.

ಚಿತ್ರಕೃಪೆ: Henrik Bennetsen

ಮುಂಬೈ ಜೀವನ:

ಮುಂಬೈ ಜೀವನ:

ಹಲವು ಬಣ್ಣಗಳು, ವಿವಿಧ ಮುಖಗಳ ರಂಗುರಂಗಾದ ಮುಂಬೈ ನಗರ ಜೀವನ.

ಚಿತ್ರಕೃಪೆ: Ravi Khemka

ಮುಂಬೈ ಜೀವನ:

ಮುಂಬೈ ಜೀವನ:

ಹಲವು ಬಣ್ಣಗಳು, ವಿವಿಧ ಮುಖಗಳ ರಂಗುರಂಗಾದ ಮುಂಬೈ ನಗರ ಜೀವನ.

ಚಿತ್ರಕೃಪೆ: Ana Raquel S. Hernandes

ಮುಂಬೈ ಜೀವನ:

ಮುಂಬೈ ಜೀವನ:

ಹಲವು ಬಣ್ಣಗಳು, ವಿವಿಧ ಮುಖಗಳ ರಂಗುರಂಗಾದ ಮುಂಬೈ ನಗರ ಜೀವನ.

ಚಿತ್ರಕೃಪೆ: Meena Kadri

ಮುಂಬೈ ಜೀವನ:

ಮುಂಬೈ ಜೀವನ:

ಹಲವು ಬಣ್ಣಗಳು, ವಿವಿಧ ಮುಖಗಳ ರಂಗುರಂಗಾದ ಮುಂಬೈ ನಗರ ಜೀವನ.

ಚಿತ್ರಕೃಪೆ: NEENAD ARUL

ಮುಂಬೈ ಜೀವನ:

ಮುಂಬೈ ಜೀವನ:

ಹಲವು ಬಣ್ಣಗಳು, ವಿವಿಧ ಮುಖಗಳ ರಂಗುರಂಗಾದ ಮುಂಬೈ ನಗರ ಜೀವನ.

ಚಿತ್ರಕೃಪೆ: abhijit chendvankar

ಮುಂಬೈ ಜೀವನ:

ಮುಂಬೈ ಜೀವನ:

ಹಲವು ಬಣ್ಣಗಳು, ವಿವಿಧ ಮುಖಗಳ ರಂಗುರಂಗಾದ ಮುಂಬೈ ನಗರ ಜೀವನ.

ಚಿತ್ರಕೃಪೆ: Swaminathan

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X