Search
  • Follow NativePlanet
Share
» »ಮೊಗಲರ ಉದ್ಯಾನವನಗಳ ಗತ ವೈಭವದ ಕಿರುನೋಟ

ಮೊಗಲರ ಉದ್ಯಾನವನಗಳ ಗತ ವೈಭವದ ಕಿರುನೋಟ

By Sowmyabhai

ಮೊಗಲರು ಭಾರತ ದೇಶಕ್ಕೆ ಹಲವಾರು ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ತಮ್ಮ ಕಲೆ ಹಾಗೂ ವಾಸ್ತು ಶಿಲ್ಪದಿಂದ ಮತ್ತಷ್ಟು ಭಾರತವನ್ನು ಶ್ರೀಮಂತಗೊಳಿಸಿದ್ದಾರೆ. ಮೊಗಲರ ಚಕ್ರವರ್ತಿಗಳಾದ, ಬಾಬರ್, ಹುಮಾಯೂನ್, ಅಕ್ಬರ್, ಜಹಂಗೀರ್, ಷಹಜಾಹನ್ ಇವರೆಲ್ಲಾ ಆನೇಕ ಮಹತ್ತರ ಉದ್ಯಾನವನಗಳು, ಕೋಟೆಗಳು, ಕಟ್ಟಡಗಳು ನಿರ್ಮಿಸಿದ್ದಾರೆ. ಇವರ ಉದ್ಯಾನವನಗಳಲ್ಲಿ ಮುಖ್ಯವಾಗಿ ಈಜುಕೊಳಗಳು, ಕಾಲುವೆಗಳು, ಕಾರಂಜಿಗಳನ್ನು ಪರಿಚಯಿಸಿ ಉದ್ಯಾನವನಗಳಿಗೆ ವಿಶಿಷ್ಟ ಮೆರುಗನ್ನು ನೀಡಿದ ಮೊದಲಿಗರು. ಈ ಸುಂದರವಾದ ಉದ್ಯಾನವನಗಳೆಲ್ಲಾ ಪರ್ಷಿಯನ್ ಶೈಲಿಯಲ್ಲಿರುವುದು ವಿಷೇಶ. ಮೊಗಲರು ಸಸ್ಯ ಹಾಗೂ ಹೂವಿನ ಪ್ರೇಮಿಗಳಾಗಿದ್ದರು ಎಂಬುದಕ್ಕೆ ಸಾಕಷ್ಟು ನಿರ್ದಶನಗಳಿವೆ.

ಇವರು ನಿರ್ಮಿಸಿರುವ ಪ್ರತಿಯೊಂದು ಸ್ಥಳದಲ್ಲೂ ಸಸ್ಯ ಸಂಪತ್ತುನ್ನು ಪೋಷಿಸುತ್ತ ಬಂದಿರುವುದನ್ನು ಕಾಣಬುದು, ಹಾಗೆಯೇ ಮೊಗಲರ ಉದ್ಯಾನವನಗಳಲ್ಲಿ ವಿಶಿಷ್ಟವಾಗಿ ಸ್ವಿಮ್ಮೀಂಗ್ ಪೂಲ್‍ಗಳು, ಕಾಲುವೆಗಳು,ಕಾರಂಜಿಗಳನ್ನು ಕಾಣಬಹುದಾಗಿದೆ.

ಪ್ರಸುತ್ತದ ಲೇಖನದಲ್ಲಿ ಮೊಗಲ್ ಚಕ್ರವರ್ತಿಗಳು ನಿರ್ಮಿಸಿದ ಸುಂದರ ಪ್ರವಾಸಿ ತಾಣವಾದ 5 ಉದ್ಯಾನವನಗಳ ಬಗ್ಗೆ ತಿಳಿಯೋಣ.

Mughal gardens

PC:Arian Zwegers

ಚಾರ್‍ಭಾಗ್ ಉದ್ಯಾನವನ(ಗಾರ್ಡನ್)
ದೆಹಲಿಯಲ್ಲಿರುವ ಸುಪ್ರಸಿದ್ದವಾದ ಉದ್ಯಾನವನದಲ್ಲಿ ಚಾರ್‍ಭಾಗ್ ಉದ್ಯಾನವು ಒಂದು. ಇದೊಂದು ಪ್ರವಾಸಿ ಆರ್ಕಷಣಿಯ ಸ್ಥಳವಾಗಿದೆ. ಈ ಉದ್ಯಾನವನವನ್ನು ಮೊಗಲರು ನಿರ್ಮಿಸಿದ ಅತ್ಯಂತ ಸುಂದರವಾದ ಉದ್ಯಾನವಾಗಿದೆ. ಈ ಚಾರ್‍ಭಾಗ್ ಬಾಬರ್‍ನ ಅಚ್ಚುಮೆಚ್ಚಿನ ಉದ್ಯಾನವನವಾಗಿತ್ತು. ಚಾರ್‍ಭಾಗ್ ಎಂದರೆ ಉರ್ದುವಲ್ಲಿ ಚಾರ್ ಎಂದರೆ ನಾಲ್ಕು, ಭಾಗ್ ಎಂದರೆ ಉದ್ಯಾನ. ಈ ಉದ್ಯಾನವವು ಇಸ್ಲಾಮಿಕ್ ಶೈಲಿಯಲ್ಲಿ ನಿರ್ಮಿಸಲಾಗಿದೆ.

Mughal gardens

PC:Pale blue dot

ಶಾಲಿಮರ್ ಭಾಗ್ ಉದ್ಯಾನವನ(ಗಾರ್ಡನ್)
ಶಾಲಿಮರ್ ಭಾಗ್ ಉದ್ಯಾನವು ಜಮ್ಮು ಕಾಶ್ಮಿರದಲ್ಲಿದೆ. ಜಮ್ಮು ಕಾಶ್ಮಿರದಲ್ಲಿರುವ ಮೊಗಲರ ಉದ್ಯಾನವು ಅತ್ಯಂತ ಸುಂದರವಾದ ಉದ್ಯಾನವನದ ತವರಾಗಿದೆ. ಶಾಲಿಮರ್ ಭಾರತದ ಬಹು ದೊಡ್ಡದಾದ ಉದ್ಯಾನವನವಾಗಿದೆ. ಈ ಉದ್ಯಾನವನವನ್ನು ಜಹಾಂಗೀರ್ 1619 ರಲ್ಲಿ ತನ್ನ ಪತ್ನಿ ನೂರ್ ಜಾಹನ್‍ಗಾಗಿ ನಿರ್ಮಿಸಿದನು. ಶಾಲಿಮರ್ ಎಂಬುದು ಸಂಸೃತ ಪದವಾಗಿದ್ದು ಇದರ ಅರ್ಥ ಪ್ರೇಮದ ಪ್ರತೀಕ ಎಂಬುದೇ ಆಗಿದೆ. ಈ ಶಾಲಿಮರ್ ಮೊಗಲ್ ಚಕ್ರವರ್ತಿಗಳ ಮಹೋನ್ನತ ತೋಟಗಾರಿಕೆಯ ನಿರ್ದಶನವಾಗಿದೆ.

Mughal gardens

PC:McKay Savage

ನಿಶಾತ್ ಭಾಗ್ ಉದ್ಯಾನವನ(ಗಾರ್ಡನ್)
ಈ ನಿಶಾತ್ ಭಾಗ್ ಎರಡನೇ ಬಹು ದೊಡ್ಡ ಬಾರತದ ಉದ್ಯಾನವನವಾಗಿದೆ. ಈ ಉದ್ಯಾನವನವು ಶ್ರೀನಗರದ ದಾಲ್ ಸರೋವರದ ಬಳಿ ಇದೆ. ನಿಶಾತ್ ಎಂದರೆ ಉರ್ದು ಭಾಷೆಯಲ್ಲಿ ಉದ್ಯಾನವನದಿಂದ ಹರ್ಷ ಎಂಬುದಾಗಿದೆ. ಈ ಉದ್ಯಾನವನವನ್ನು 1633 ರಲ್ಲಿ ಅಸಿಫ್ ಖಾನ್ ಹಾಗೂ ಆತನ ಸಹೋದರ ನೂರ್ ಜೆಹಾನ್ ವಿನ್ಯಾಸಗೊಳಿಸಿದರು. ನಿಶಾತ್ ಭಾಗ್ ಉದ್ಯಾನವನವು ಶ್ರೀನಗರ ಜಿಲ್ಲೆಯಿಂದ 11 ಕಿ,ಮಿಯಷ್ಟು ಅಂತರದಲ್ಲಿದೆ. ನಿಶಾತ್ ಭಾಗ್ ಹೋಗುವ ದಾರಿಯಲ್ಲೆ ಸುಂದರವಾದ ದಾಲ್ ಸರೋವರವನ್ನು ಕಾಣಬಹುದಾಗಿದೆ. ಈ ಉದ್ಯಾನವನದ ಮಾರ್ಗಗಳಲ್ಲಿ ಸೈಪ್ರೆಸ್ ಹಾಗೂ ಚಿನಾರ್ ಮರಗಳಿಂದ ಅಲಂಕೃತಗೊಂಡು ಈ ನಿಶಾತ್ ಭಾಗ್‍ಗೆ ಮತ್ತಷ್ಟು ಮೆರಗನ್ನು ತಂದಿದೆ.

Mughal gardens

PC:Akshey25

ವೆರಿನಾಗ್ ಉದ್ಯಾನವನ(ಗಾರ್ಡನ್)
ಈ ವೆರಿನಾಗ್ ಉದ್ಯಾನವನವು ಜಮ್ಮು ಕಾಶ್ಮೀರದ ಮೊದಲ ಪ್ರವಾಸಿ ತಾಣವಾಗಿದೆ. ಈ ಉದ್ಯಾನವನವನ್ನು ಮೊಗಲ್ ಚಕ್ರವರ್ತಿ ಜಹಂಗೀರ್ 1620 ರಲ್ಲಿ ನಿರ್ಮಿಸಿದನು. ವೆರಿನಾಗ್ ಉದ್ಯಾನವನವು ಜಮ್ಮುಕಾಶ್ಮೀರದ ಅನಂತನಾಗ್‍ದಿಂದ ಸಮಾರು 26 ಕಿ.ಮಿ ಅಂತರದಲ್ಲಿದೆ. ವೆರಿನಾಗ್ ಉದ್ಯಾನಕ್ಕೆ ಭೇಟಿ ನೀಡಲು ಹತ್ತಿರವಾದ ವಿಮಾನ ಮಾರ್ಗವೆಂದರೆ ಶ್ರೀನಗರ ಇಂಟರ್ ನ್ಯಾಷನಲ್ ಏರ್‍ಪೋರ್ಟ್ ಸುಮಾರು 82 ಕಿ,ಮಿ ದೂರದಲ್ಲಿದೆ. ಕಾಶ್ಮಿರದಲ್ಲಿರುವ ಇಂದಿರಾಗಾಂಧಿ ಮೆಮೊರಿಯಲ್ ಹೂ ತೋಟ ವು ಏಷ್ಯಾದಲ್ಲಿಯೇ ಅತ್ಯಂತ ದೊಡ್ಡದಾಗಿರುವ ಹೂ ತೋಟವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X