Search
  • Follow NativePlanet
Share
» »ಭಾರತದ 5 ರಹಸ್ಯಮಯ ತಾಣಗಳು

ಭಾರತದ 5 ರಹಸ್ಯಮಯ ತಾಣಗಳು

By Sowmyabhai

ಪ್ರಪಂಚದಲ್ಲಿ ಪ್ರಕೃತಿಯು ತನ್ನಲ್ಲಿ ಹಲವಾರು ರಹಸ್ಯವನ್ನು ಅಡಗಿಸಿಕೊಂಡಿದೆ ಅವುಗಳನ್ನು ಭೇಧಿಸಲು ಮಾನವನು ಸದಾ ಪ್ರಯತ್ನಿಸುತ್ತಿರುತ್ತಾನೆ. ಕೆಲವೊಮ್ಮೆ ನಿಗೂಢತೆಗಳ ಉತ್ತರ ಹುಡುಕುವಲ್ಲಿ ಸಫಲನಾದರೆ ಕೆಲವೊಮ್ಮೆ ವಿಫಲನಾಗುತ್ತಾನೆ. ಈ ರಹಸ್ಯಗಳಿಗೆಲ್ಲಾ ಭೇಧಿಸಲು ಉತ್ತರ ಹುಡುಕುತ್ತ ಹೊರಟರೆ ಎಷ್ಟು ಆಳಕ್ಕೆ ಹೋದರು ನಿಗೂಢತೆ ಮತ್ತಷ್ಟು ಆವರಿಸುತ್ತದೆ. ನೀವು ಇಂತಹ ಅಪರೂಪದ ಸ್ಥಳಗಳಿಗೊಮ್ಮೆ ಒಮ್ಮೆ ಭೇಟಿ ನೀಡಿ ಆಶ್ಚರ್ಯಚಕಿತರಾಗಿ.

ನೀವು ಒಮ್ಮೆಯಾದರು ಭೂಮಿಯ ಅಸ್ತಿತ್ವವಿಲ್ಲದೆ ಸ್ತಂಭವು ನಿಂತಿರುವುದನ್ನು ಕಂಡಿದ್ದೀರಾ?. ಒಂದು ವಿಚಿತ್ರವಾದ ಹಳ್ಳಿಯಲ್ಲಿ ಹುಟ್ಟವ ಮಕ್ಕಳೇಲ್ಲಾ ಅವಳಿ ಮಕ್ಕಳೆ, ಕೆಂಪುಮಳೆ ಬೀಳುವುದನ್ನು ಎಂದಾದರೂ ಕಂಡಿದ್ದೀರಾ?. ಮುಶಿಕವನ್ನು ಮಠದಲ್ಲಿ ಕಾಳಿ ದೇವರಂತೆ ಆರಾಧಿಸುತ್ತಿರುವುದನ್ನು ಕೇಳಿದ್ದೀರಾ?. ಸೃಷ್ಠಿಕರ್ತ ಬ್ರಹ್ಮನ ದೇವಾಲಯವನ್ನು ಕಂಡಿದ್ದೀರಾ? ಹಾಗಾದರೆ ಪ್ರಸ್ತುತ ಲೇಖನದಲ್ಲಿ ಭಾರತದಲ್ಲಿನ ಕೆಲವು ಕೂತುಹಲಕಾರಿಯಾದ ತಾಣದ ಕುರಿತು ಮಾಹಿತಿ ಪಡೆಯಿರಿ.

Mysterious Temples in India

PC: wikimedia.com

ಒಮ್ಮೆಯಾದರು ಆಂಧ್ರಪ್ರದೇಶದ ಹಿಂದೂಪುರ ಜಿಲ್ಲೆಯ ಮಂಡಲ ಎಂಬ ಹಳ್ಳಿಯಲ್ಲಿರುವ ಲೇಪಾಕ್ಷಿಗೆ ಭೇಟಿ ನೀಡಿದ್ದಿರಾ? ಹಾಗಾದರೆ ಕೂಡಲೇ ಭೇಟಿ ನೀಡಿ. ವಿಶೇಷವೇನೆಂದರೆ ಸುಪ್ರಸಿದ್ದವಾದ ಲೇಪಾಕ್ಷಿ ದೇವಾಲಯದಲ್ಲಿ ತೇಲುತ್ತಿರುವ ಸ್ತಂಭವಿದೆ. ಈ ಸ್ತಂಭವು ಲೇಪಾಕ್ಷಿಯ ಶಿವ, ವಿಷ್ಣು, ಹಾಗೂ ವೀರಭದ್ರ ನೆಲೆಸಿರುವ ಮಂದಿರದಲ್ಲಿದೆ. ದೇಗುಲದಲ್ಲಿ ಒಟ್ಟು 70 ಸ್ತಂಭಗಳಿದ್ದು ಒಂದು ಸ್ತಂಭ ಮಾತ್ರ ಭೂಮಿಗೆ ಯಾವುದೇ ಆಧಾರವಿಲ್ಲದೇ ತೇಲುವ ರೂಪದಲ್ಲಿದೆ. ಇಲ್ಲಿ ಬರುವ ಪ್ರವಾಸಿಗರು ಇಂತಹ ಅಪರೂಪದ ದೃಶ್ಯವನ್ನು ಕಂಡು ಚಕಿತಗೊಳ್ಳದೆ ಇರಲಾರರು. ಲೇಪಾಕ್ಷಿಯು ವಾಸ್ತುಶಿಲ್ಪದಲ್ಲಿ ಹಾಗೂ ಸಂಸ್ಕøತಿಯಲ್ಲಿ ಶ್ರೀಮಂತ ಇತಿಹಾಸ ಹೊಂದಿರುವ ದೇವಾಲಯ . ಈ ದೇವಾಲಯವನ್ನು ವಿಜಯನಗರದ ರಾಜರ ಕಾಲಾವಧಿಯಲ್ಲಿ(1336-1646)ರಲ್ಲಿ ನಿರ್ಮಾಣಗೊಂಡ ದೇವಾಲಯವಾಗಿದೆ.

Mysterious Temples in India

ಅದೇ ರೀತಿ ಮತ್ತೊಂದು ಕೂತುಹಲಕಾರಿ ಸ್ಥಳವೆಂದರೆ ಕೇರಳದ ಮಲ್ಲಪುರಂ ಜಿಲ್ಲೆಯ ಕುಡಿನಿ ಎಂಬ ಹಳ್ಳಿಯಲ್ಲಿ ಜನಿಸುವ ಸುಮಾರು ಮಕ್ಕಳೆಲ್ಲಾ ಅವಳಿ ಮಕ್ಕಳೇ ಅದ್ದರಿಂದ ಈ ಹಳ್ಳಿಯು ಅವಳಿ ಮಕ್ಕಳ ಹಳ್ಳಿ ಎಂದೇ ಖ್ಯಾತವಾಗಿದೆ. ಈ ಹಳ್ಳಿಯಲ್ಲಿ ಸರಾಸರಿ 200 ಕಿಂತ ಅಧಿಕ ಅವಳಿ ಮಕ್ಕಳಿದ್ದಾರೆ ಹಾಗೂ 2 ಜೋಡಿ ತ್ರಿವಳಿ ಮಕ್ಕಳಿದ್ದಾರೆ ಎನ್ನಲಾಗಿದೆ. ಈ ಹಳ್ಳಿಯಿಂದ ಮದುವೆ ಆಗಿ ಹೋಗಿರುವ ಹೆಣ್ಣು ಮಕ್ಕಳೂ ಕೂಡ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ ಎನ್ನಲಾಗಿದೆ. ಇಂತಹ ಅಪರೂಪದ ದೃಶ್ಯವನ್ನು ಕಾಣಬೇಕಾದರೆ ಕೇರಳ ರಾಜ್ಯಕ್ಕೆ ಭೇಟಿ ನೀಡಿವಾಗ ಈ ಹಳ್ಳಿಗೂ ಒಮ್ಮೆ ಹೋಗಿ ಬನ್ನಿ.

Mysterious Temples in India

ನಾವೂ ಸಾಮಾನ್ಯವಾಗಿ ಮನೆಯಲ್ಲಿ ಇಲಿಗಳಿವೆ ಹೇಗಾದರೂ ಮಾಡಿ ಓಡಿಸಿಬಿಡಬೇಕು ಎಂದು ಅನಿಸದಿರದು. ಆದರೆ ರಾಜಸ್ತಾನದ ದೇಶನುಕ್‍ನ ಪವಿತ್ರವಾದ ಧಾರ್ಮಿಕ ಕಾರಣಿ ಮಠವಿದೆ, ಅಲ್ಲಿ ಸರಿಸುಮರು 20.000 ಮುಶಿಕಗಳಿದ್ದು ಅವುಗಳನ್ನು ದೈವ ಸ್ವರೂಪಿಯಾದ ಕಾಳಿಯ ಅವತಾರ ಎಂದು ಜನರು ಆರಾಧಿಸುತ್ತಾರೆ. ಕಾರಣಿ ಮಠದ ಮುಶಿಕಗಳಿಗೆ ಯಾವುದೇ ಮಾರಣಾಂತಿಕ ಹಲ್ಲೆ ಮಾಡುವಂತಿಲ್ಲ ಅವುಗಳು ಮನೆಯ ಸದಸ್ಯರಂತೆ ಜನರು ಭಾವಿಸಲಾಗುತ್ತದೆ. ಈ ಮುಶಿಕಗಳನ್ನು ಮಂಗಳಕರವಾದ ದೈವ ಎಂದು ಭಕ್ತರು ಆರಾಧಿಸುತ್ತಾರೆ. ಈ ಮಠದಲ್ಲಿ ಮುಶಿಕಗಳಿಗೆ ಪ್ರತ್ಯೇಕವಾದ ಕೊಠಡಿಯಿದ್ದು ಆಹಾರವಾಗಿ ಹಾಲು, ಪ್ರಸಾದವನ್ನು ನೀಡಲಾಗುತ್ತದೆ. ಈ ಮಠವು ಪ್ರೇಕ್ಷಣೀಯ ಹಾಗೂ ಧಾರ್ಮಿಕ ಸ್ಥಳವಾಗಿದೆ.

Mysterious Temples in India

ಪ್ರಪಂಚದಲ್ಲಿ ಎಲ್ಲಾ ದೇವರುಗಳಿಗೆ ಲಕ್ಷಾಂತರ ದೇವಾಲಯಗಳಿವೆ. ಗಲ್ಲಿ ಗಲ್ಲಿಗೆ ಹತ್ತಾರು ದೇಗುಲಗಳನ್ನು ದಿನ ನಿತ್ಯ ನೋಡುತ್ತಿರುತ್ತೆವೆ. ಆದರೆ ಕುತುಹಲವೆಂದರೆ ಬ್ರಹ್ಮಾಂಡವನ್ನು ಸೃಷ್ಠಿಸಿರುವ ಬ್ರಹ್ಮನ ದೇವಾಲಯವನ್ನು ಎಲ್ಲಾದರು ಕಂಡಿದ್ದೀರಾ? ಹಾಗಾದರೆ ರಾಜಸ್ಥಾನದ ಅಜ್‍ಮೀರ ಜಿಲ್ಲೆಯ ಪುಷಕರಕ್ಕೆ ಒಮ್ಮೆ ಭೇಟಿ ನೀಡಿ. ಇಲ್ಲಿ ಬ್ರಹ್ಮನಿಗೆ ದಿನ ನಿತ್ಯ ಪೂಜೆ ನಡೆಯುವ ಪುರಾತನ ತೀರ್ಥಕ್ಷೇತ್ರವಾಗಿದೆ. ಈ ಬ್ರಹ್ಮನ ದೇವಾಲಯವು 14ನೇ ಶತಮಾನದಲ್ಲಿ ಅಂದರೆ 2000 ವರ್ಷಗಳ ಪುರಾತನ ದೇವಾಲಯವಾಗಿದ್ದು, ಹಲವಾರು ಭಕ್ತಾಧಿಗಳು, ಪ್ರವಾಸಿಗಳು ಭೇಟಿ ನೀಡುವ ತಾಣವಾಗಿದೆ.

Mysterious Temples in India

PC: s4.scoopwhoop.com

ಸಾಮಾನ್ಯವಾಗಿ ಮಳೆಯಲ್ಲಿ ಆಟವಾಡುದು ಎಂದರೆ ಎಲ್ಲರಿಗೂ ಒಂಥರಾ ಆನಂದ, ಆದೇ ಮಳೆ ರಕ್ತದ ರೀತಿ ಕೆಂಪು ಮಳೆಯಾದರೆ ? ಹೌದು ಕೇರಳದ ಇಡುಕ್ಕಿಯ ಪಶ್ಚಿಮ ಘಟ್ಟದ ಅಡವಿಯಲ್ಲಿ ಕೆಂಪು ಬಣ್ಣದ ಮಳೆಯಾಗುತ್ತದೆ. ಈ ಪ್ರದೇಶವು ಕೆಂಪು ಪ್ರಾಂತ ಎಂದೇ ಗುರುತಿಸಿಕೊಂಡಿದೆ. ಈ ಕೆಂಪು ಮಳೆಯು ಮೊದಲಬಾರಿ ಇಡುಕ್ಕಿಯಲ್ಲಿ ಜುಲೈ25,2001ರಂದು ಬಂದಿತ್ತು ನಂತರ 2 ತಿಂಗಳಿಗೆ ಒಮ್ಮೆ ಸುರಿಯುತ್ತಿತ್ತು ಎನ್ನಲಾಗಿದೆ. ಇಂಥಹ ಸಾವಿರಾರು ಆಶ್ಚರ್ಯಕರವಾದ ಸಂಗತಿಗಳು ಕೇಳಿದಾಗ ಇದು ನಿಜವೇ ಎಂದು ಅನಿಸದಿರದು, ಒಮ್ಮೆ ಭೇಟಿ ನೀಡಿ ನಿಮ್ಮ ಸಂಶಯವನ್ನು ಬಗೆಹರಿಸಿಕೊಳ್ಳಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X