Search
  • Follow NativePlanet
Share
» »ಬೆಚ್ಚಿ ಬೀಳಿಸುವ ಭಯಾನಕ ರಸ್ತೆಗಳಲ್ಲಿ ಪ್ರವಾಸ

ಬೆಚ್ಚಿ ಬೀಳಿಸುವ ಭಯಾನಕ ರಸ್ತೆಗಳಲ್ಲಿ ಪ್ರವಾಸ

By Vijay

ಬೆಚ್ಚಿ ಬೀಳಿಸುವ ಭಯಾನಕ ರಸ್ತೆಗಳಲ್ಲಿ ಪ್ರವಾಸ ಮಾಡಬೇಕೆ? ಭಾರತದ ಉತ್ತರದ ತುದಿಯಲ್ಲಿರುವ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡಗಳು ಸಮುದ್ರ ಮಟ್ಟದಿಂದ ಸಾಕಷ್ಟು ಎತ್ತರದಲ್ಲಿ ನೆಲೆಸಿದ್ದು ಹಿಮಾಲಯದ ಒಡಲಿನಲ್ಲಿ ಸ್ಥಿತಗೊಂಡಿರುವುದು ಎಲ್ಲರಿಗೂ ತಿಳಿದ ವಿಷಯ. ಆದರೆ ಈ ರಾಜ್ಯಗಳಲ್ಲಿ ಕೆಲವು ರಸ್ತೆ ಮಾರ್ಗಗಳು ಅತ್ಯಂತ ಅಪಾಯಕಾರಿಯಾಗಿದ್ದು ನಿತ್ಯವೂ ಇಲ್ಲಿ ವಾಹನಗಳು ಒಡಾಡುತ್ತಲೇ ಇರುತ್ತವೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ.

ಹೌದು, ಅಂತಹ ಕೆಲವು ಜಗತ್ತಿನಲ್ಲೆ ಅಪಾಯಕಾರಿ ಎನ್ನಬಹುದಾದ ಕೆಲವು ರಸ್ತೆ ಮಾರ್ಗಗಳು, ಪರ್ವತ ದಾರಿಗಳು ಭಾರತದ ಹಲವು ಸ್ಥಳಗಳಲ್ಲಿ ಕಾಣಬಹುದಾಗಿದೆ. ಈ ರಸ್ತೆಗಳಲ್ಲಿ ಪಯಣಿಸುವಾಗ ಅಪೂರ್ವವಾದ ಸೃಷ್ಟಿ ಸೌಂದರ್ಯದ ಭೂದೃಶ್ಯಗಳನ್ನು, ನೋಟಗಳನ್ನು ಅನುಭವಿಸುವುದೇನೋ ನಿಜ, ಆದರೆ ಎಚ್ಚರ ತಪ್ಪಿದ್ದಲ್ಲಿ ಅಪಾಯ ಆಗುವುದು ಅಷ್ಟೆ ಕಟು ಸತ್ಯ.

ನಿಮಗಿಷ್ಟವಾಗಬಹುದಾದ : ಹುಬ್ಬೇರಿಸುವಂತೆ ಮಾಡುವ ಕೇರಳದ ಪ್ರಚಂಡ ರಸ್ತೆಗಳು

ಕೇವಲ ದೇಶೀಯವಲ್ಲದೆ ವಿದೇಶಗಳಿಂದಲೂ ಕೆಲವು ಅತಿ ಸಾಹಸಿಗ ಪ್ರವಾಸಿಗರು ಇಂತಹ ರಸ್ತೆಗಳಲ್ಲಿ ಪ್ರಯಾಣಿಸಲು ಈ ಸ್ಥಳಗಳಿಗೆ ಆಯಾ ಸಮಯದಲ್ಲಿ ಭೇಟಿ ನೀಡುತ್ತಲೆ ಇರುತ್ತಾರೆ. ಅಲ್ಲದೆ ಇಲ್ಲಿನ ಕೆಲ ರಸ್ತೆಗಳು ಎರಡು ಸ್ಥಳಗಳನ್ನು ಬೆಸೆಯಲು ಇರುವ ಏಕೈಕ ಸಾಧನವಾಗಿರುವುದರಿಂದ ನಿತ್ಯವೂ ಇದರ ಮೇಲೆ ಪ್ರಯಾಣಿಸುವುದೂ ಸಹ ಸಾಕಷ್ಟು ಜನರಿಗೆ ಸಾಮಾನ್ಯ ವಿಷಯ.

ಪ್ರಸ್ತುತ ಲೇಖನದ ಮೂಲಕ ಯಾವೆಲ್ಲ ಭಯಾನಕ ರಸ್ತೆಗಳು ಭಾರತದ ಯಾವ ಯಾವ ಸ್ಥಳಗಳಲ್ಲಿ ಕಂಡುಬರುತ್ತದೆ ಹಾಗೂ ಅವುಗಳ ನೋಟ ಹೇಗಿದೆ ಎಂಬುದರ ಕುರಿತು ತಿಳಿಯಿರಿ. ನೀವು ಸಾಹಸಪ್ರಿಯ ಪ್ರವಾಸಿಗರಾಗಿದ್ದಲ್ಲಿ ಒಮ್ಮೆ ಈ ರಹದಾರಿಗಳಲ್ಲಿ ಪ್ರಯಾಣಿಸಿ ಆನಂದಿಸಿ, ಆದರೆ ಸಾಕಷ್ಟು ಮುಂಜಾಗೃತೆವಹಿಸುವುದನ್ನು ಮಾತ್ರ ಮರೆಯಬೇಡಿ.

ಭಾರತದ ಭಯಾನಕ ರಸ್ತೆಗಳು:

ಭಾರತದ ಭಯಾನಕ ರಸ್ತೆಗಳು:

ಸ್ವಲ್ಪ ಆಯ ತಪ್ಪಿದರೂ ನೇರ ಕೈಲಾಸಕ್ಕೆ ಪ್ರವೇಶವೆಂಬುವಂತಿದೆ ಈ ರಸ್ತೆ ಮಾರ್ಗ. ಸಾಕಷ್ಟು ಜಾಗರೂಕತೆವಹಿಸಿ ಧೈರ್ಯ ಹಾಗೂ ಚಾಲನಾ ಕೌಶಲ್ಯವಿದ್ದವರೂ ಮಾತ್ರ ಇಲ್ಲಿ ಪ್ರಯಾಣಕ್ಕೆ ಸಿದ್ಧರಾಗಬೇಕು. ಲಡಾಖ್ ಪ್ರಾಂತ್ಯದ ಲೇಹ್ ನಿಂದ ಮನಾಲಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗ.

ಚಿತ್ರಕೃಪೆ: Simon Matzinger

ಭಾರತದ ಭಯಾನಕ ರಸ್ತೆಗಳು:

ಭಾರತದ ಭಯಾನಕ ರಸ್ತೆಗಳು:

ಜಮ್ಮು ಮತ್ತು ಕಾಶ್ಮೀರ ರಾಜ್ಯದ ಝನ್ಸ್ಕಾರ್ ಕಣಿವೆಯ ಬಳಿ ಸ್ಥಿತವಿರುವ ಪೆಂಜಿಲಾ ಪರ್ವತ ದಾರಿಯ ಸುಂದರ ಚಿತ್ರ. ಚಿತ್ರದಲ್ಲಿ ರಸ್ತೆಯು ಸುಂದರವಾಗಿ ಕಂಡರೂ ಇದರ ಮೇಲೆ ನಡೆದಾಡುವುದು ಅಷ್ಟು ಸುಲಭವಲ್ಲ.

ಚಿತ್ರಕೃಪೆ: sandeepachetan.com travel photography

ಭಾರತದ ಭಯಾನಕ ರಸ್ತೆಗಳು:

ಭಾರತದ ಭಯಾನಕ ರಸ್ತೆಗಳು:

ಕೆಳಗೆ ಪಾತಾಳ, ಮೇಲೆ ಮೈ ನಡುಗುವ ಕೈಲಾಸ, ಮಧ್ಯದಲ್ಲಿ ಕೆಟ್ಟು ನಿಂತ ನನ್ಗಾಡಿ...ಯಪ್ಪಾ ದೇವರೆ ನೀನೆ ದಾರಿ..ಅಂದುಕೊಳ್ಳುತ್ತಿರಬಹುದೆ? ಈ ರೀತಿಯ ಕೆಲವು ದುರ್ಗಮ ಪ್ರಸಂಗಗಳು ಜಮ್ಮು ಕಾಶ್ಮೀರದ ಕೆಲವು ಪರ್ವತ ದಾರಿಗಳಲ್ಲಿ ಕಂಡುಬರುವುದು ಸಾಮಾನ್ಯ. ರೋಹ್ತಂಗ್ ಪಾಸ್ ಗೆ ಹೋಗುವ ಮಾರ್ಗದಲ್ಲಿ.

ಚಿತ್ರಕೃಪೆ: Rajarshi MITRA

ಭಾರತದ ಭಯಾನಕ ರಸ್ತೆಗಳು:

ಭಾರತದ ಭಯಾನಕ ರಸ್ತೆಗಳು:

ಕಾಶ್ಮೀರದ ಹಸಿರು ಕಣಿವೆಗಳಿಂದ ಮೈಕೊರೆಯುವಷ್ಟು ಚಳಿಯಿರುವ ಲಡಾಖ್ ಭೂಮಿಗೆ ಸಮ್ಪರ್ಕ ಕಲ್ಪಿಸುವ ರಹದಾರಿ ಜೋಜಿ ಲಾ ಬಳಿ.

ಚಿತ್ರಕೃಪೆ: sandeepachetan.com travel photography

ಭಾರತದ ಭಯಾನಕ ರಸ್ತೆಗಳು:

ಭಾರತದ ಭಯಾನಕ ರಸ್ತೆಗಳು:

ಮೈ ಜುಮ್ಮೆನಿಸುವಂತಹ ರಸ್ತೆ ಮಾರ್ಗ, ಒಂದೆಡೆ ಎತ್ತರದ ಪರ್ವತಗಳಾದರೆ ಇನ್ನೊಂದು ಬದಿಯಲ್ಲಿ ಸಹಸ್ರಾರು ಅಡಿಗಳಷ್ಟು ಆಳದಲ್ಲಿರುವ ಪ್ರಪಾತ. ಚಿಕ್ಕದಾದ ರಸ್ತೆ, ರೋಹ್ತಂಗ್ ಟಾಪ್.

ಚಿತ್ರಕೃಪೆ: Woudloper

ಭಾರತದ ಭಯಾನಕ ರಸ್ತೆಗಳು:

ಭಾರತದ ಭಯಾನಕ ರಸ್ತೆಗಳು:

ಹಿಮಾಲಯದ ನಿಬ್ಬೆರಗುಗೊಳಿಸುವ, ಮೈನಡುಗಿಸುವ ಪರ್ವತ ರಹದಾರಿಯ ಮಧ್ಯದಲ್ಲಿ. ಪ್ರತಿಯೊಂದು ತಿರುವಿನಲ್ಲೂ ಚಾಲಕರು ಮೈಯೆಲ್ಲಾ ಕಣ್ಣಾಗಿರಲೇಬೇಕು.

ಚಿತ್ರಕೃಪೆ: Mani Babbar Photography

ಭಾರತದ ಭಯಾನಕ ರಸ್ತೆಗಳು:

ಭಾರತದ ಭಯಾನಕ ರಸ್ತೆಗಳು:

ಜಮ್ಮು ಮತ್ತು ಕಾಶ್ಮೀರ ಲಡಾಖ್ ಬಳಿಯ ಖರ್ದುಂಗ್ ಲಾ ಪಾಸ್ ಗೆ ತೆರಳುವ ಮಾರ್ಗ.

ಚಿತ್ರಕೃಪೆ: Prabhu B Doss

ಭಾರತದ ಭಯಾನಕ ರಸ್ತೆಗಳು:

ಭಾರತದ ಭಯಾನಕ ರಸ್ತೆಗಳು:

ಹಾವಿನಂತೆ ಸುರುಳಿಯಾಗಿ ಚಲಿಸಿ, ಕೆಲ ನಿಮಿಷಗಳಲ್ಲೆ ಅಗಾಧ ಎತ್ತರದಿಂದ ಕೆಳಗಿಳಿಯಿರಿ. ಆದರೆ ಚಾಲನೆ ಜಾಗರೂಕತೆಯಿಂದ ಕೂಡಿರಲಿ. ಮನಾಲಿ-ಲೇಹ್ ಮಾರ್ಗ.

ಚಿತ್ರಕೃಪೆ: Mani Babbar Photography

ಭಾರತದ ಭಯಾನಕ ರಸ್ತೆಗಳು:

ಭಾರತದ ಭಯಾನಕ ರಸ್ತೆಗಳು:

ಲಡಾಖ್ ಸುತ್ತಮುತ್ತಲಿನ ಪರ್ವತ ಪ್ರಾಂತ್ಯಗಳಲ್ಲಿರುವ ಒಂದು ರಹದಾರಿ.

ಚಿತ್ರಕೃಪೆ: lingeringcoldness

ಭಾರತದ ಭಯಾನಕ ರಸ್ತೆಗಳು:

ಭಾರತದ ಭಯಾನಕ ರಸ್ತೆಗಳು:

ಕಾಶ್ಮೀರದ ಶ್ರೀನಗರ ಬಳಿಯಿರುವ ಸೋನಾಮಾರ್ಗದ ಒಂದು ಪರ್ವತ ರಹದಾರಿ.

ಚಿತ್ರಕೃಪೆ: Soumyadeep Paul

ಭಾರತದ ಭಯಾನಕ ರಸ್ತೆಗಳು:

ಭಾರತದ ಭಯಾನಕ ರಸ್ತೆಗಳು:

ನಡೆದರೂ ಅಷ್ಟೆ, ವಾಹನ ಚಲಾಯಿಸಿದರೂ ಅಷ್ಟೆ, ಸುಂದರ ಪರ್ವತ ದೃಶ್ಯಾವಳಿಗಳ ಜೊತೆ ಜಾಗರೂಕತೆಯೂ ಅವಶ್ಯ.

ಚಿತ್ರಕೃಪೆ: Yann Pinczon du Sel

ಭಾರತದ ಭಯಾನಕ ರಸ್ತೆಗಳು:

ಭಾರತದ ಭಯಾನಕ ರಸ್ತೆಗಳು:

ಕಾಶ್ಮೀರದ ಸ್ಪಿತಿಗೆ ಹೋಗುವ ಮಾರ್ಗದಲ್ಲಿ ಬರುವ ಖಾಬ್ ಪಾಸ್. ನಾಟಕೀಯವಾಗಿ ರೂಪಿಸಿದಂತಿದೆ ಈ ರಹದಾರಿ, ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ.

ಚಿತ್ರಕೃಪೆ: nevil zaveri

ಭಾರತದ ಭಯಾನಕ ರಸ್ತೆಗಳು:

ಭಾರತದ ಭಯಾನಕ ರಸ್ತೆಗಳು:

ಮಾರಣಾಂತಿಕ ರೋಹ್ತಂಗ್ ಪಾಸ್. ಪ್ರತಿ ವರ್ಷವೂ ಕೆಲ ಜನರು ಈ ರಸ್ತೆಯಲ್ಲಿ ಜರುಗುವ ಅಪಘಾತಗಳಿಂದ ಸಾಯುತ್ತಲೆ ಇರುತ್ತಾರಂತೆ. ಆದರೂ ಇದು ದೆಹಲಿ, ಪಂಜಾಬ್, ಲಡಾಖ್ ಪ್ರದೇಶಗಳನ್ನು ಒಂದಕ್ಕೊಂದು ಬೆಸೆಯುವ ಪ್ರಮುಖ ಪರ್ವತ ದಾರಿಯಾಗಿದೆ ಎನ್ನುವುದರಲ್ಲಿ ಸಂದೇಹವಿಲ್ಲ.

ಚಿತ್ರಕೃಪೆ: alan jones

ಭಾರತದ ಭಯಾನಕ ರಸ್ತೆಗಳು:

ಭಾರತದ ಭಯಾನಕ ರಸ್ತೆಗಳು:

ಕಾರ್ಗಿಲ್ ಹಾಗೂ ಸೊನಾಮಾರ್ಗವನ್ನು ಬೆಸೆಯುವ ಪರ್ವತದ ಸುರುಳಿಯಾಕಾರದ ಅಪಾಯಕಾರಿ ರಹದಾರಿ. ಇದು ಏಷ್ಟು ರೋಮಾಂಚನವಾಗಿದೆಯೋ ಅಷ್ಟೆ ಅಪಾಯಕಾರಿಯೂ ಹೌದು.

ಚಿತ್ರಕೃಪೆ: zuki

ಭಾರತದ ಭಯಾನಕ ರಸ್ತೆಗಳು:

ಭಾರತದ ಭಯಾನಕ ರಸ್ತೆಗಳು:

ಹಿಮಾಚಲ ಪ್ರದೇಶದ ಕೌರಿಕ್ ಗೆ ಹೋಗುವ ಮಾರ್ಗದಲ್ಲಿ...ನಿಜಕ್ಕೂ ಭಯಾನವಾಗಿದೆ ಈ ರಸ್ತೆ ಮಾರ್ಗ.

ಚಿತ್ರಕೃಪೆ: Mani Babbar Photography

ಭಾರತದ ಭಯಾನಕ ರಸ್ತೆಗಳು:

ಭಾರತದ ಭಯಾನಕ ರಸ್ತೆಗಳು:

ಹಿಮಾಚಲ ಪ್ರದೇಶದ ಲಾಹೌಲ್-ಸ್ಪಿತಿ ಜಿಲ್ಲೆಯ ದರ್ಚಾದ ಬಳಿ ಸ್ಥಿತವಿರುವ ದುರ್ಗಮ ಪರ್ವತ ದಾರಿ.

ಚಿತ್ರಕೃಪೆ: Mani Babbar Photography

ಭಾರತದ ಭಯಾನಕ ರಸ್ತೆಗಳು:

ಭಾರತದ ಭಯಾನಕ ರಸ್ತೆಗಳು:

ಹಿಮಾಚಲ ಪ್ರದೇಶದ ಲಾಹೌಲ್ ನಿಂದ ಜಮ್ಮು ಕಾಶ್ಮೀರದ ಲಡಾಖ್ ವರೆಗಿರುವ ರಸ್ತೆ ಮಾರ್ಗದಲ್ಲಿ ಬರುವ ಬಾರಾ ಲಾಚಾ ಲಾ ಪಾಸ್. ಹಿಮಪಾತದ ಸಂದರ್ಭದಲ್ಲಿ ರಸ್ತೆಯು ದಟ್ಟವಾದ ಹಿಮದಿಂದ ಕೂಡಿರುವುದು ಸಾಮಾನ್ಯ.

ಚಿತ್ರಕೃಪೆ: Kiran Jonnalagadda

ಭಾರತದ ಭಯಾನಕ ರಸ್ತೆಗಳು:

ಭಾರತದ ಭಯಾನಕ ರಸ್ತೆಗಳು:

ಲಡಾಖ್ ನಲ್ಲಿರುವ ಚಾಂಗ್ ಲಾ ಪಾಸ್. ಒಂದೆಡೆ ಇಳಿಜಾರಿದ್ದು ಹಿಮದಿಂದ ಕೂಡಿರುತ್ತದೆ. ಸಾಕಷ್ಟು ನಿಧಾನವಾಗಿ ಹಾಗೂ ಜಾಗರೂಕವಾಗಿ ಇದರ ವಾಹನ ಚಲಾಯಿಸಬೇಕು. ಇದನ್ನು ಜಗತ್ತಿನ ಎರಡನೇಯ ಅತಿ ಎತ್ತರದಲ್ಲಿ ವಾಹನ ಚಲಾಯಿಸುವ ಮಾರ್ಗ ಎಂದು ಹೇಳಲಾಗುತ್ತದೆ. ಲೇಹ್ ನಿಂದ ಪ್ಯಾಂಗಾಂಗ್ ಕೆರೆಗೆ ತೆರಳುವ ಮಾರ್ಗದಲ್ಲಿ ಈ ಪರ್ವತ ದಾರಿ ಬರುತ್ತದೆ.

ಚಿತ್ರಕೃಪೆ: Kirsten

ಭಾರತದ ಭಯಾನಕ ರಸ್ತೆಗಳು:

ಭಾರತದ ಭಯಾನಕ ರಸ್ತೆಗಳು:

ಖರ್ದುಂಗ್ ಲಾ ಪಾಸ್. ಲಡಾಖ್ ನಲ್ಲಿರುವ ಅತಿ ಎತ್ತರದ ಪರ್ವತ ದಾರಿ. ಇದರ ಹೆಗ್ಗಳಿಕೆ ಎಂದರೆ ಇದು ಜಗತ್ತಿನ ಅತಿ ಎತ್ತರದ ವಾಹನ ಚಲಾಯಿಸಬಹುದಾದ ಮಾರ್ಗವಾಗಿದೆ.

ಚಿತ್ರಕೃಪೆ: Michael Day

ಭಾರತದ ಭಯಾನಕ ರಸ್ತೆಗಳು:

ಭಾರತದ ಭಯಾನಕ ರಸ್ತೆಗಳು:

ಪುಣೆ ಜಿಲ್ಲೆಯಲ್ಲಿರುವ ಪಶ್ಚಿಮ ಘಟ್ಟಗಳಲ್ಲಿ ಬರುವ ಮಾಲ್ಶೇಜ್ ಘಾಟ್ ಒಂದು ಪರ್ವತ ರಹದಾರಿಯಾಗಿದೆ. ಹಿಮಾಲಯದ ಪರ್ವತ ರಹದಾರಿಗಳಿಗೆ ಹೋಲಿಸಿದರೆ ಇದು ಅಷ್ಟೊಂದು ಭಯಾನಕವಾಗಿಲವಾದರೂ ತಕ್ಕ ಮಟ್ಟಿಗೆ ಅಪಾಯಕಾರಿಯಾಗಿದೆ. ಒಂದೆಡೆ ಪ್ರಪಾತವಿದ್ದರೆ ಇನ್ನೊಂದೆಡೆ ಮೊನಚಾದ ಬಂಡೆಗಳ ಪರ್ವತ. ಅಲ್ಲಲ್ಲಿ ಸುರಂಗ ಮಾರ್ಗಗಳು.

ಚಿತ್ರಕೃಪೆ: Himanshu Sarpotdar

ಭಾರತದ ಭಯಾನಕ ರಸ್ತೆಗಳು:

ಭಾರತದ ಭಯಾನಕ ರಸ್ತೆಗಳು:

ಮಳೆಗಾಲದ ಸಮಯದಲ್ಲಿ ಈ ರಸ್ತೆಯಲ್ಲಿ ಪ್ರಯಾಣಿಸುವುದೆ ಒಂದು ಸುಂದರ ಅನುಭವ. ಅಲ್ಲಲ್ಲಿ ಉಂಟಾಗುವ ನಯನ ಮನೋಹರ ಕೃತಕ ಜಲಪಾತಗಳು ಹರ್ಷವನ್ನುಂಟು ಮಾಡುತ್ತವೆ. ಪುಣೆ ನಗರ ಕೇಂದ್ರದಿಂದ ಉತ್ತರಕ್ಕೆ ಸುಮಾರು 134 ಕಿ.ಮೀ ದೂರದಲ್ಲಿ ಮಾಲ್ಶೇಜ್ ಘಾಟ್ ಪರ್ವತ ದಾರಿಯಿದೆ.

ಚಿತ್ರಕೃಪೆ: Kiran SRK

ಭಾರತದ ಭಯಾನಕ ರಸ್ತೆಗಳು:

ಭಾರತದ ಭಯಾನಕ ರಸ್ತೆಗಳು:

ಸಿಕ್ಕಿಂನ ಹಿಮಾಲಯ ಭಾಗದಲ್ಲಿರುವ ನಾಥು ಲಾ ಪಾಸ್. ಈ ಮಾರ್ಗವು ಭಾರತದ ಸಿಕ್ಕಿಂ ಅನ್ನು ಚೀನಾದ ಟಿಬೆಟ್ ಆಟೋನೋಮಸ್ ರೀಜನ್ ನೊಂದಿಗೆ ಬೆಸೆಯುತ್ತದೆ. ಗುಡ್ಡದಲ್ಲಿ ಸೂಕ್ಷ್ಮವಾಗಿ ಗಮನಿಸಿ "ಮೇರಾ ಭಾರತ್ ಮಹಾನ್" ಎಂದು ಬರೆದಿರುವುದನ್ನು ಕಾಣಬಹುದು.

ಚಿತ್ರಕೃಪೆ: Indrajit Das

ಭಾರತದ ಭಯಾನಕ ರಸ್ತೆಗಳು:

ಭಾರತದ ಭಯಾನಕ ರಸ್ತೆಗಳು:

ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯಲ್ಲಿರುವ ಸೆಲಾ ಪಾಸ್. ಇದು ಬೌದ್ಧನಗರಿಯಾದ ತವಾಂಗ್ ಅನ್ನು ಗುವಾಹಟಿ ಹಾಗೂ ತೇಜಪುರದೊಂದಿಗೆ ಬೆಸೆಯುತ್ತದೆ. ಈ ಒಂದು ರಸ್ತೆ ಮಾತ್ರ ಅರುಣಾಚಲಪ್ರದೇಶವು ಭಾರತದ ಇತರೆ ಸ್ಥಳಗಳೊಂದಿಗೆ ಸಂಪರ್ಕ ಕಲ್ಪಿಸುವ ಮಾರ್ಗವಾಗಿದೆ.

ಚಿತ್ರಕೃಪೆ: Ani ttbr

ಭಾರತದ ಭಯಾನಕ ರಸ್ತೆಗಳು:

ಭಾರತದ ಭಯಾನಕ ರಸ್ತೆಗಳು:

ತಗ್ಲಾಂಗ್ ಲಾ : ಲಡಾಖ್ ಪ್ರಾಂತ್ಯದಲ್ಲಿರುವ ಮತ್ತೊಂದು ಪರ್ವತ ದಾರಿ. ಲೇಹ್-ಮನಾಲಿ ರಸ್ತೆಯಿಂದ ಇದನ್ನು ಸಂಪರ್ಕಿಸಬಹುದು.

ಚಿತ್ರಕೃಪೆ: Kondephy

ಭಾರತದ ಭಯಾನಕ ರಸ್ತೆಗಳು:

ಭಾರತದ ಭಯಾನಕ ರಸ್ತೆಗಳು:

ಕೇರಳದಲ್ಲಿರುವ ವಯನಾಡ್ ಚೂರಂ. ಮೊನಚಾದ ಸುರುಳಿಗಳುಳ್ಳ ಗುಡ್ಡ ಪ್ರಾಂತದಲ್ಲಿ ನಿರ್ಮಿಸಲಾದ, ಅಗಾಧ ಸೃಷ್ಟಿ ಸೌಂದರ್ಯ ಕರುಣಿಸುವ ರಸ್ತೆ ಮಾರ್ಗ ಇದಾಗಿದೆ. ಇದು ವಯನಾಡ್ ಜಿಲ್ಲೆಯ ಲಕ್ಕಿಡಿ ಎಂಬಲ್ಲಿಂದ ಪ್ರಾರಂಭವಾಗಿ ತಮರಚೇರಿಯ ಅಡಿವರಂವರೆಗೆ ಹರಡಿಕೊಂಡಿದೆ.

ಚಿತ್ರಕೃಪೆ: Vinayaraj

ಭಾರತದ ಭಯಾನಕ ರಸ್ತೆಗಳು:

ಭಾರತದ ಭಯಾನಕ ರಸ್ತೆಗಳು:

ಶ್ರೀನಗರದಿಂದ ಲೇಹ್ ಗೆ ತೆರಳುವ ಮಾರ್ಗ. ಇದನ್ನು ಜೋಜಿ ಲಾ ಪಾಸ್ ಎಂದು ಕರೆಯುತ್ತಾರೆ. ಸಾಗುವಾಗ ನಿಧಾನವಾಗಿ ಹಾಗೂ ಜಾಗರೂಕತೆಯಿಂದ ಸಾಗಬೇಕು. ಎಚ್ಚರ ತಪ್ಪಿದರೆ ಪಾತಾಳ ದರ್ಶನ ಖಂಡಿತ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X