Search
  • Follow NativePlanet
Share
» »ಒಂದು ದಿನ ತಂಗಲು ಗರಿಷ್ಠ 6 ಲಕ್ಷ ರೂಪಾಯಿ!

ಒಂದು ದಿನ ತಂಗಲು ಗರಿಷ್ಠ 6 ಲಕ್ಷ ರೂಪಾಯಿ!

By Vijay

ಪ್ರವಾಸಿ ಪ್ರಿಯ ಜನರು ವಿರಾಮದ ವೇಳೆಯಲ್ಲಿ ಇಲ್ಲವೆ ಸಮಯ ಸಿಕ್ಕಾಗಲೆಲ್ಲ ಅಥವಾ ಯೋಜನಾಬದ್ಧವಾಗಿ ವಿವಿಧ ಪ್ರದೇಶಗಳಿಗೆ ಪ್ರವಾಸ ಹೊರಡುವುದು ಸಾಮಾನ್ಯ. ಹೀಗೆ ಅನ್ಯ ಪ್ರದೇಶಗಳಿಗೆ ತೆರಳಿದಾಗ ವಸತಿಗೆಂದು ಅಥವಾ ತಂಗಲೆಂದು ಮೊದಲೆ ಹೋಟೆಲುಗಳ ಮಾಹಿತಿ ಕಲೆ ಹಾಕುವುದು ಒಂದು ಉತ್ತಮ ರೂಢಿ. ಈ ರೀತಿಯಾಗಿ ಮಾಡುವುದರಿಂದ ನಮ್ಮ ಪ್ರವಾಸಕ್ಕೆ ತಗುಲುವ ವೆಚ್ಚದ ಮೇಲೆ ಉತ್ತಮ ನಿಯಂತ್ರಣವನ್ನು ಸಾಧಿಸಬಹುದು. ಒಂದೆಡೆ ಮಧ್ಯಮ ವರ್ಗದವರು ವೆಚ್ಚದ ಕುರಿತು ಸಾಕಷ್ಟು ಕಾಳಜಿವಹಿಸಿದರೆ ಇನ್ನೊಂದೆಡೆ ರೊಕ್ಕವನ್ನು ನೀರಿನಂತೆ ಸುರಿದು ವಿಲಾಸಿ ವೈಭೋಗದ ಹೋಟೆಲುಗಳಲ್ಲಿ ತಂಗುವ ಶ್ರೀಮಂತ ಪ್ರವಾಸಿ ಪ್ರಿಯರು ಇರುತ್ತಾರೆ. ಅದೇನೆ ಇರಲಿ ಭಾರತದ ಕೆಲವು ಅತ್ಯದ್ಭುತ ಹೋಟೆಲುಗಳನ್ನು ನಿರ್ಮಿಸಲಾಗಿರುವ ರೀತಿ ಹಾಗು ಸೌಲಭ್ಯಗಳನ್ನು ನೋಡಿದರೆ ಸ್ವರ್ಗವೂ ನಾಚಿಕೊಳ್ಳುವಂತಿದೆ.

ಆದರೆ ಭಾರತ ಎಂಬ ಶ್ರೀಮಂತ ಸಂಸ್ಕೃತಿ ಸಂಪ್ರದಾಯವಿರುವ, ಮೊದಲಿನಿಂದಲೂ ಅತಿಥಿ ದೇವೋ ಭವ ಎನ್ನುತ್ತ ಅತಿಥಿ ಸತ್ಕಾರಕ್ಕೆ ಹೆಸರುವಾಸಿಯಾದ ದೇಶದಲ್ಲಿ ಹಣದ ಸ್ವಲ್ಪವೂ ಕೊರತೆಯಿಲ್ಲದ ಅತಿ ಶ್ರೀಮಂತ ಪ್ರವಾಸಿಗರನ್ನು ಸಂತೃಪ್ತಪಡಿಸುವ ದೃಷ್ಟಿಯಿಂದ ರಾಜವೈಭೋಗದ ಅತಿ ದುಬಾರಿ ವೆಚ್ಚವಿರುವ ಹಲವಾರು ಹೋಟೆಲುಗಳಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದ ಅನೇಕ ವ್ಯಕ್ತಿಗಳು, ಚಿತ್ರತಾರೆಗಳು ಇಂತಹ ಕೆಲವು ಹೋಟೆಲುಗಳಲ್ಲಿ ತಂಗಿದ್ದು ಇವು ಮತ್ತಷ್ಟು ಪ್ರಸಿದ್ಧಿಯನ್ನು ಗಳಿಸಿವೆ. ಪ್ರಸ್ತುತ ಲೇಖನವು ಭಾರತದ ಮೊದಲ ಹತ್ತು ದುಬಾರಿ ಶುಲ್ಕವಿರುವ ಹೋಟೆಲುಗಳ ಪರಿಚಯ ಮಾಡಿಸುತ್ತದೆ.

ದಿ ತಾಜ್ ಮಹಲ್ ಪ್ಯಾಲೇಸ್ ಆಂಡ್ ಟಾವರ್, ಮುಂಬೈ:

ದಿ ತಾಜ್ ಮಹಲ್ ಪ್ಯಾಲೇಸ್ ಆಂಡ್ ಟಾವರ್, ಮುಂಬೈ:

ಮುಂಬೈ ನಗರಕ್ಕೆ ಬಂದಿಳಿಯುವ ಪ್ರತಿಯೊಬ್ಬ ಪ್ರವಾಸಿಗನಿಗೆ ಹೆಗ್ಗುರುತಾದ ಸ್ಥಳವಿದು. ನಗರದ ಹಳೆಯ ಹೋಟೆಲುಗಳ ಪೈಕಿ ಒಂದಾಗಿರುವ ಈ ಹೋಟೆಲಿನ ಪ್ರಿಮೀಯಮ್ ಕೋಣೆಯ ದಿನ ಒಂದರ ಬಾಡಿಗೆ ರು. 21,500 ಹಾಗು ಐಷಾರಾಮಿ ಕೋಣೆಯ ಬಾಡಿಗೆ ಕೇವಲ 1.7 ಲಕ್ಷ ರೂಪಾಯಿಗಳು.

ಚಿತ್ರಕೃಪೆ: Taj Hotels

ದಿ ಲೀಲಾ ಪ್ಯಾಲೇಸ್ ಕೆಂಪಿನ್ಸ್ಕಿ, ಉದೈಪುರ್:

ದಿ ಲೀಲಾ ಪ್ಯಾಲೇಸ್ ಕೆಂಪಿನ್ಸ್ಕಿ, ಉದೈಪುರ್:

ರಾಜಸ್ಥಾನದ ಉದೈಪುರ್ ನಗರದ ಪಿಚೋಲಾ ಕೆರೆಯ ತಟದಲ್ಲಿ ನಿರ್ಮಾಣವಾಗಿರುವ ಈ ವೈಭವಯುತ ಹೋಟೆಲ್ ಅರಾವಳಿ ಪರ್ವತಗಳ ಸುಂದರ ದೃಶ್ಯಾವಳಿಗಳನ್ನು ಕರುಣಿಸುತ್ತದೆ. ಇದರ ಲೇಕ್ ವೀವ್ ಕೋಣೆಗಳ ಬಾಡಿಗೆಯು 26000 ರೂಪಾಯಿಗಳಿಂದ ಪ್ರಾರಂಭವಾಗಿ ಮಹಾರಾಜ ದರ್ಜೆಯ ಕೋಣೆಯ ಬಾಡಿಗೆ ಎರಡು ಲಕ್ಷ ರೂಪಾಯಿಯವರೆಗಿದೆ.

ಚಿತ್ರಕೃಪೆ: The Leela

ತಾಜ್ ಫಲಕ್ನುಮಾ ಪ್ಯಾಲೇಸ್, ಹೈದರಾಬಾದ್:

ತಾಜ್ ಫಲಕ್ನುಮಾ ಪ್ಯಾಲೇಸ್, ಹೈದರಾಬಾದ್:

ಪ್ರಸ್ತುತ ಹೋಟೆಲ್ ಆಗಿ ಪರಿವರ್ತಿತವಾಗಿರುವ ಈ ಭವ್ಯ ಕಟ್ಟಡವು ಹಿಂದೆ ಹೈದರಾಬಾದ್ ನಿಜಾಮನ ಮನೆಯಾಗಿತ್ತು. ನಂತರ ನಿಜಾಮನ ಕುಟುಂಬದವರು ಈ ಕಟ್ಟಡವನ್ನು ತಾಜ್ ಸಮುದಾಯಕ್ಕೆ ಭೋಗ್ಯ ನೀಡಿದ್ದಾರೆ. ಸಮುದ್ರ ಮಟ್ಟದಿಂದ 2000 ಅಡಿಗಳಷ್ಟು ಎತ್ತರದಲ್ಲಿ ನಿರ್ಮಿತವಾಗಿರುವ ಇದನ್ನು "ಬಾನಿನ ಕನ್ನಡಿ" ಎಂತಲೂ ಕರೆಯಲಾಗುತ್ತದೆ. ಇದರ ಕೋಣೆಗಳ ಬಾಡಿಗೆಯು 33000 ರೂಪಾಯಿಗಳಿಂದ ಪ್ರಾರಂಭವಾಗಿ ಐಷಾರಾಮಿ ದರ್ಜೆಯ ಕೋಣೆಯ ಬಾಡಿಗೆ 1.95 ಲಕ್ಷ ರೂಪಾಯಿಯವರೆಗಿದೆ.

ಚಿತ್ರಕೃಪೆ: Taj Hotels

ಒಬೇರಾಯ್ ರಾಜ್ ವಿಲಾಸ್, ಜೈಪುರ್:

ಒಬೇರಾಯ್ ರಾಜ್ ವಿಲಾಸ್, ಜೈಪುರ್:

ಈ ಭವ್ಯವಾದ ಐಷಾರಾಮಿ ಹೋಟೆಲ್ ರಾಜಸ್ಥಾನದ ಪ್ರಖ್ಯಾತ ಪ್ರವಾಸಿ ತಾಣವಾದ ಪಿಂಕ್ ಸಿಟಿ ಜೈಪುರ್ ನಗರದಲ್ಲಿದೆ. ಇದರ ಕೋಣೆಗಳ ಬಾಡಿಗೆಯು 35000 ರೂಪಾಯಿಗಳಿಂದ ಪ್ರಾರಂಭವಾಗಿ ಐಷಾರಾಮಿ ದರ್ಜೆಯ ಕೋಣೆಯ ಬಾಡಿಗೆ 2.3 ಲಕ್ಷ ರೂಪಾಯಿಯವರೆಗಿದೆ.

ಚಿತ್ರಕೃಪೆ: Oberoi Hotels

ತಾಜ್ ಲ್ಯಾಂಡ್ಸ್ ಎಂಡ್, ಮುಂಬೈ:

ತಾಜ್ ಲ್ಯಾಂಡ್ಸ್ ಎಂಡ್, ಮುಂಬೈ:

ಮುಂಬೈ ನಗರದಲ್ಲಿರುವ ತಾಜ್ ಸಮೂಹದ ಮತ್ತೊಂದು ದುಬ್ಬಾರಿ ಹೋಟೆಲ್ ಇದು. ಬಾಂದ್ರಾದಲ್ಲಿರುವ ಈ ಹೋಟೆಲ್ ಅರೇಬಿಯನ್ ಸಮುದ್ರಕ್ಕೆ ಅಭಿಮುಖವಾಗಿ ತಲೆ ಎತ್ತಿ ನಿಂತಿದ್ದು ಉತ್ಕೃಷ್ಟ ಮಟ್ಟದ ಸೌಲಭ್ಯಗಳನ್ನು ಒಳಗೊಂಡಿದೆ. ಇದರ ಕೋಣೆಗಳ ಬಾಡಿಗೆಯು 23000 ರೂಪಾಯಿಗಳಿಂದ ಪ್ರಾರಂಭವಾಗಿ ಐಷಾರಾಮಿ ದರ್ಜೆಯ ಕೋಣೆಯ ಬಾಡಿಗೆ 2.5 ಲಕ್ಷ ರೂಪಾಯಿಯವರೆಗಿದೆ.

ಚಿತ್ರಕೃಪೆ: Taj Hotels

ಒಬೇರಾಯ್ ಅಮರವಿಲಾಸ್, ಆಗ್ರಾ:

ಒಬೇರಾಯ್ ಅಮರವಿಲಾಸ್, ಆಗ್ರಾ:

ಆಗ್ರಾದಲ್ಲಿರುವ ಈ ಒಬೇರಾಯ್ ಅಮರವಿಲಾಸ್ ಹೋಟೆಲ್ ಅದ್ಭುತ ಸೌಲಭ್ಯಗಳನ್ನೊಳಗೊಂಡ ಒಂದು ವೈಭವದ ಹೋಟೆಲ್. ಇದರ ಕೋಣೆಗಳ ಬಾಡಿಗೆಯು 35000 ರೂಪಾಯಿಗಳಿಂದ ಪ್ರಾರಂಭವಾಗಿ ಐಷಾರಾಮಿ ದರ್ಜೆಯ ಕೋಣೆಯ ಬಾಡಿಗೆ 2.5 ಲಕ್ಷ ರೂಪಾಯಿಯವರೆಗಿದೆ.

ಒಬೇರಾಯ್ ಹೋಟೆಲ್, ಮುಂಬೈ:

ಒಬೇರಾಯ್ ಹೋಟೆಲ್, ಮುಂಬೈ:

ಅರಬ್ಬಿ ಸಮುದ್ರಕ್ಕೆ ಅಭಿಮುಖವಾಗಿ ತಲೆ ಎತ್ತಿ ನಿಂತಿರುವ ಮುಂಬೈ ನಗರದ ಈ ಹೋಟೆಲ್ ಐಷಾರಾಮಿ ತಂಗುವಿಕೆಯ ಅನುಭವಕ್ಕೆ ಹೆಸರುವಾಸಿಯಾಗಿದೆ. ಇದರ ಕೋಣೆಗಳ ಬಾಡಿಗೆಯು 25000 ರೂಪಾಯಿಗಳಿಂದ ಪ್ರಾರಂಭವಾಗಿ ಐಷಾರಾಮಿ ದರ್ಜೆಯ ಕೋಣೆಯ ಬಾಡಿಗೆ 3 ಲಕ್ಷ ರೂಪಾಯಿಯವರೆಗಿದೆ.

ಚಿತ್ರಕೃಪೆ: Oberoi Hotels

ಒಬೇರಾಯ್, ಗುರ್ಗಾಂವ್:

ಒಬೇರಾಯ್, ಗುರ್ಗಾಂವ್:

ಗುರ್ಗಾಂವ್ ನಲ್ಲಿರುವ ಪ್ರತಿಷ್ಠಿತ ಒಬೇರಾಯ್ ಹೋಟೆಲ್ ಅತಿ ವಿಶೀಷ್ಟವಾಗಿದೆ. ಭಾರತದಲ್ಲೆ ಏಕೈಕ ಸಿಗಾರ್ ಲಾಂಜ್ ಹೊಂದಿರುವ ಈ ಹೋಟೆಲ್ ಭಾರತೀಯ ಕಲಾ ಸಂಗ್ರಹಾಲವನ್ನೂ ಹೊಂದಿದೆ. ಇದರ ಕೋಣೆಗಳ ಬಾಡಿಗೆಯು 30000 ರೂಪಾಯಿಗಳಿಂದ ಪ್ರಾರಂಭವಾಗಿ ಐಷಾರಾಮಿ ದರ್ಜೆಯ ಕೋಣೆಯ ಬಾಡಿಗೆ 3 ಲಕ್ಷ ರೂಪಾಯಿಯವರೆಗಿದೆ.

ಚಿತ್ರಕೃಪೆ: Oberoi Hotels

ಲೀಲಾ ಪ್ಯಾಲೇಸ್ ಕೆಂಪಿನ್ಸ್ಕಿ, ನವದೆಹಲಿ:

ಲೀಲಾ ಪ್ಯಾಲೇಸ್ ಕೆಂಪಿನ್ಸ್ಕಿ, ನವದೆಹಲಿ:

ದೆಹಲಿಯ ಪ್ರತಿಷ್ಠಿತ ಪ್ರದೇಶವಾದ ಚಾಣಕ್ಯಪುರಿಯಲ್ಲಿ ಸ್ಥಿತವಿರುವ ಈ ವೈಭವದ ಹೋಟೆಲ್ ನಗರದ ಅತ್ಯಂತ ದುಬಾರಿ ಹೋಟೆಲ್ ಆಗಿದೆ. ಹೋಟೆಲ್ ಕಿಟಕಿಯ ಗಾಜುಗಳು ಗುಂಡು ನಿರೋಧಕಗಳಿಂದ ಮಾಡಲ್ಪಟ್ಟಿವೆ. ಇದರ ಕೋಣೆಗಳ ಬಾಡಿಗೆಯು 25000 ರೂಪಾಯಿಗಳಿಂದ ಪ್ರಾರಂಭವಾಗಿ ಐಷಾರಾಮಿ ದರ್ಜೆಯ ಕೋಣೆಯ ಬಾಡಿಗೆ 4.5 ಲಕ್ಷ ರೂಪಾಯಿಯವರೆಗಿದೆ.

ಚಿತ್ರಕೃಪೆ: The Leela

ತಾಜ್ ಲೇಕ್ ಪ್ಯಾಲೇಸ್, ಉದೈಪುರ್:

ತಾಜ್ ಲೇಕ್ ಪ್ಯಾಲೇಸ್, ಉದೈಪುರ್:

ಪ್ರಸ್ತುತ ಭಾರತದ ಅತಿ ದುಬಾರಿ ಬಾಡಿಗೆಯ ಐಷಾರಾಮಿ ಹೋಟೆಲ್ ಇದಾಗಿದೆ. ರಾಜಸ್ಥಾನದ ಸರೋವರಗಳ ನಗರ ಎಂಬ ಖ್ಯಾತಿಯ ಉದೈಪುರ್ ನಲ್ಲಿ ಸ್ಥಿತವಿರುವ ಈ ಸುಂದರವಾದ ಭವ್ಯ ಹೋಟೆಲ್ ಕೆರೆಯ ಮಧ್ಯದಲ್ಲಿ ನಿರ್ಮಾಣಗೊಂಡಿರುವುದು ವಿಶೇಷ. ಕೆರೆಯ ಮಧ್ಯದಲ್ಲಿರುವುದು ಅಲ್ಲದೆ ಅಂಗಳದಲ್ಲಿ ಸುಂದರವಾದ ಕೊಳವನ್ನೂ ಕಾಣಬಹುದು. ಅತ್ಯಂತ ವೈಭವದ ತಂಗುವಿಕೆಯ ಅನುಭವ ಈ ಹೋಟೆಲ್ ಕರುಣಿಸುತ್ತದೆ. ಇದರ ಕೋಣೆಗಳ ಬಾಡಿಗೆಯು 36000 ರೂಪಾಯಿಗಳಿಂದ ಪ್ರಾರಂಭವಾಗಿ ಐಷಾರಾಮಿ ದರ್ಜೆಯ ಕೋಣೆಯ ಬಾಡಿಗೆ 6 ಲಕ್ಷ ರೂಪಾಯಿಯವರೆಗಿದೆ.

ಚಿತ್ರಕೃಪೆ: Taj Hotels

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X