Search
  • Follow NativePlanet
Share
» »ಧಡ್ ಧಡ್ ಎಂದು ಎದೆ ನಡುಗಿಸುವ ಚಾರಣಗಳು!

ಧಡ್ ಧಡ್ ಎಂದು ಎದೆ ನಡುಗಿಸುವ ಚಾರಣಗಳು!

ಮಹಾರಾಷ್ಟ್ರ ರಾಜ್ಯದಲ್ಲಿ ಕೆಲವು ಅತ್ಯದ್ಭುತ ರೋಮಾಂಚನ ನೀಡುವ ಚಾರಣ ಮಾರ್ಗಗಳಿದ್ದು ಸದಾ ಸಾಹಸಬಯಸುವ ಪ್ರವಾಸಿಗರನ್ನು ಕೈಬಿಸಿ ಕರೆಯುತ್ತವೆ

By Vijay

ಚಾರಣ ಅಥವಾ ಟ್ರೆಕ್ಕಿಂಗ್ ಸಾಹಸಮಯ ಚಟುವಟಿಕೆಗಳನ್ನು ಇಷ್ಟಪಡುವ ಪ್ರವಾಸಿಗರ ನೆಚ್ಚಿನ ಚಟುವಟಿಕೆಯಾಗಿದೆ. ಹದಿಹರೆಯದವರ ಪಾಲಿಗಂತೂ ಇದೊಂದು ದೊಡ್ಡ ಸಾಧನೆಯಂತೆ ಕಂಡುಬರುತ್ತದೆ. ಭಾರತದ ಹಲವಾರು ರಾಜ್ಯಗಳಲ್ಲಿ ಅದೆಷ್ಟೊ ಚಾರಣ ಮಾರ್ಗಗಳಿವೆ.

ಅದರಂತೆ ಮಹಾರಾಷ್ಟ್ರವೂ ಸಹ ಅದ್ಭುತ ಚಾರಣಯೋಗ್ಯ ರಾಜ್ಯವಾಗಿದೆ. ಮೊದಲೆ ಮಹಾರಾಷ್ಟ್ರವನ್ನು ಬೆಟ್ಟ ಕೋಟೆಗಳ ಭಾರತದ ರಾಜಧಾನಿ ಎಂದು ಕರೆಯುತ್ತಾರೆ. ಹೀಗಿರುವಾಗ ಇಲ್ಲಿನ ಬೆಟ್ಟ ಕೋಟೆಗಳು ಚಾರಣಿಗರನ್ನು ಕೈಬಿಸಿ ಕರೆಯುತ್ತವೆ. ಆದರೆ ಇಲ್ಲಿರುವ ಎಲ್ಲಾ ಚಾರಣಗಳು ಅತಿ ಸುಲಭ ಎಂದು ತಿಳಿಯಬೇಡಿ.

ಕೆಲವು ಸಾಕಷ್ಟು ಅಪಾಯಕಾರಿಯಾದ ಚಾರಣ ಮಾರ್ಗಗಳಿವೆ. ವಿಶೇಷವಗಿ ಮಳೆಗಾಲದಂತಹ ಸಂದರ್ಭದಲ್ಲಿ ಸ್ವಲ್ಪ ತಪ್ಪಾದರೂ ದೇಹ ಪಾತಾಳಕ್ಕೆ ಗತಿ. ಹಾಗಾಗಿ ಇವು ಸವಾಲೋಡ್ಡುವ ಕೆಲವು ಅದ್ಭುತ ಚಾರಣ ಮಾರ್ಗಗಳಾಗಿವೆ. ಹಾಗಾದರೆ ಬನ್ನಿ ಅಂತಹ ಕೆಲವು ಆಯ್ದ ಚಾರಣ ಮಾರ್ಗಗಳ ಯವುವು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.

ಈ ಚಾರಣ ಮಾರ್ಗಗಳು ನಿಜವಾಗಿಯೂ ಗಟ್ಟಿ ಗುಂಡಿಗೆ ಇರುವವರನ್ನೂ ಕೂಡ ಒಂದು ಕ್ಷಣ ತಬ್ಬಿಬ್ಬರನ್ನಾಗಿಸುತ್ತದಾದರೂ ಜೀವನದಲ್ಲಿ ಎಂದೂ ಮರೆಯಲಾಗದ ಒಂದು ಅಲೌಕಿಕ ಅನುಭವವನ್ನೂ ಸಹ ಕರುಣಿಸುತ್ತದೆ. ಇನ್ನೇಕೆ ತಡ? ನೀವು ಚಾರಣಪ್ರಿಯ ಪ್ರವಾಸಿಗರಾಗಿದ್ದಲ್ಲಿ ಒಂದೊಮ್ಮೆ ಈ ಸ್ಥಳಗಳಿಗೆ ಭೇಟಿ ನೀಡಿ, ಉತ್ಕೃಷ್ಟಮಯವಾದ ಅನುಭವವನ್ನು ನಿಮ್ಮದಾಗಿಸಿಕೊಳ್ಳಿ.

ಇಗತ್ಪುರಿ

ಇಗತ್ಪುರಿ

ಮಹಾರಾಷ್ಟ್ರದ ಇಗತ್ಪುರಿ ತಾಲೂಕಿನಲ್ಲಿರುವ ಸಹ್ಯಾದ್ರಿ ಪರ್ವತ ಶ್ರೇಣಿಯ ಅತಿ ಉನ್ನತ ಗಿರಿ ಶಿಖರವೆ ಕಲಸುಬಾಯಿ ಶಿಖರವೆಂದು ಕರೆಯಲಾಗುತ್ತದೆ. ಈ ಹೂ ಗಳ ಕಣಿವೆ ಪ್ರದೇಶವು ಚಾರಣಪ್ರಿಯರ ನೆಚ್ಚಿನ ಸ್ಥಳವಾಗಿದೆ. ಇಲ್ಲಿನ ಪ್ರಾಕೃತಿಕ ಸೌಂದರ್ಯವು ಅನನ್ಯವಾಗಿದೆ.

ಚಿತ್ರಕೃಪೆ: Mvkulkarni23

ಸಹ್ಯಾದ್ರಿ ಪರ್ವತಶ್ರೇಣಿ

ಸಹ್ಯಾದ್ರಿ ಪರ್ವತಶ್ರೇಣಿ

ರಾಯಗಡ್ ಕೋಟೆಯು ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯ ಕೊಂಕಣ ಪ್ರದೇಶದ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ನೆಲೆಸಿದೆ. ಪುಣೆ ಹಾಗು ಮುಂಬೈ ಶಹರವಾಸಿಗಳಿಗೆ ವಾರಾಂತ್ಯದ ರಜೆ ಕಳೆಯಲು ಇದೊಂದು ಆದರ್ಶಮಯವಾದ ಸ್ಥಳವಾಗಿದೆ.

ಚಿತ್ರಕೃಪೆ: Paapu07

ಜೆವೆಲ್ ಫೋರ್ಟ್

ಜೆವೆಲ್ ಫೋರ್ಟ್

ರತನ್ ವಾಡಿಯಲ್ಲಿ ಕಂಡು ಬರುವ ಜನಪ್ರಿಯ ಚಾರಣ ಸ್ಥಳಗಳ ಪೈಕಿ ಒಂದಾಗಿದೆ ರತನಗಡ್ ಕೋಟೆ. ಇದನ್ನು ರತ್ನ ಕೋಟೆ ಅಥವಾ ಜೆವೆಲ್ ಫೋರ್ಟ್ ಎಂತಲೂ ಸಹ ಕರೆಯಲಾಗುತ್ತದೆ. ಇಲ್ಲಿ ನೋಡಬಹುದಾದ ಕೆಲವು ಇತರೆ ಸುಂದರ ಆಕರ್ಷಣೆಗಳೆಂದರೆ ಅಮೃತೇಶ್ವರ ದೇವಾಲಯ, ಅರ್ಥರ್ ಜಲಾಶಯ ಹಾಗು ಭಂಡಾರಧಾರಾ.

ಚಿತ್ರಕೃಪೆ: Elroy Serrao

ಕೋಟೆ

ಕೋಟೆ

ಪುಣೆಯಿಂದ 110 ಕಿ.ಮೀ ದೂರದಲ್ಲಿರುವ ಶಿವನೇರಿ ಕೋಟೆಯು ಚಾರಣ ಮಾಡುತ್ತ ವಾರಾಂತ್ಯದ ರಜೆಯನ್ನು ಕಳೆಯಲು ಒಂದು ಆದರ್ಶಪ್ರಾಯವಾದ ಸ್ಥಳವಾಗಿದೆ. ಶಿವನೇರಿ ಕೋಟೆಯು ಚಿಕ್ಕದಾಗಿದ್ದರೂ ಸಹ ಸ್ವಲ್ಪ ಕಷ್ಟವೆಂದೆ ಹೇಳಬಹುದಾದ ಚಾರಣ ಪಥವನ್ನು ಒಳಗೊಂಡಿದೆ.

ಚಿತ್ರಕೃಪೆ: Milind.dumbare

ವಿತಂಡಗಡ್

ವಿತಂಡಗಡ್

ತಿಕೋನಾ ಕೋಟೆಯನ್ನು ವಿತಂಡಗಡ್ ಎಂದೂ ಸಹ ಕರೆಯಲಾಗುತ್ತದೆ. ಲೋಣಾವಲಾ ಗಿರಿಧಾಮದ ಬಳಿಯಿರುವ ಕಮ್ಶೇಟ್ ಅಥವಾ ಮಾವಲ್ ಪ್ರದೇಶದಲ್ಲಿ ಈ ಬೆಟ್ಟ ಕೋಟೆಯನ್ನು ಕಾಣಬಹುದು. ತಿಕೋನಾ ಕೋಟೆ ಹಾಗು ಭೆಡ್ಸೆ ಗುಹೆಗಳು ನೆಚ್ಚಿನ ಚಾರಣ ಸ್ಥಳಗಳಾಗಿವೆ.

ಚಿತ್ರಕೃಪೆ: Hrishikesh Burkule

ಅವಳಿ ಕೋಟೆ

ಅವಳಿ ಕೋಟೆ

ಮಹಾರಾಷ್ಟ್ರದ ಸಹ್ಯಾದ್ರಿ ಪರ್ವತ ಶ್ರೇಣಿಗಳ ಒಡಲಿನಲ್ಲಿರುವ ಒಂದು ಪುಟ್ಟ ಹಳ್ಳಿಯೆ ರಾಜಮಾಚಿ. ರಾಜಮಾಚಿ ಕೋಟೆಯು ಚಾರಣ ಯೋಗ್ಯವಾದ ಶ್ರೀವರ್ಧನ ಹಾಗು ಮನರಂಜನ ಎಂಬ ಅವಳಿ ಕೋಟೆಗಳನ್ನು ಹೊಂದಿದೆ. ಇದು ಖಂಡಾಲಾ ಹಾಗು ಲೋಣಾವಲಾ ಬಳಿಯಿರುವ ಒಂದು ಪ್ರಸಿದ್ಧ ಪ್ರವಾಸಿ ಚಾರಣ ಕೋಟೆಯಾಗಿದೆ. ಈ ಹಳ್ಳಿಯು ಲೋಣಾವಲಾದಿಂದ ಕೇವಲ 15 ಕಿ.ಮೀ ದೂರದಲ್ಲಿದ್ದು ಚಾರಣದ ಮೂಲಕ ತಲುಪಬಹುದಾಗಿದೆ. ಇಲ್ಲಿರುವ ಬೆಟ್ಟದ ತುದಿಯ ಕೋಟೆಯ ಮೇಲೆ ತಲುಪಿದಾಗ ಸುತ್ತಲ ಪರಿಸರದ ವಿಹಂಗಮ ನೋಟವನ್ನು ಕಾಣಬಹುದು.

ಚಿತ್ರಕೃಪೆ: Kandoi.sid

ಒಂದೆ ದಿನ!

ಒಂದೆ ದಿನ!

ಪುಣೆ ನಗರದ ನೈರುತ್ಯ ದಿಕ್ಕಿಗೆ ಸುಮಾರು 30 ಕಿ.ಮೀ ದೂರದಲ್ಲಿದೆ ಈ ಸುಂದರವಾದ ಒಂದು ದಿನದ ಚಾರಣ ಸ್ಥಳ. ಇಲ್ಲಿನ ಬೆಟ್ಟದ ತುದಿಯಲ್ಲಿರುವ ಕೋಟೆಯು ಮರಾಠಿ ಯೋಧರ ಶೂರತನದ ಕಥೆಯನ್ನು ಹೇಳುತ್ತದೆ. ಅಗಾಧವಾದ ಬೆಟ್ಟದ ಸುತ್ತಲಿನ ಹಸಿರಿನ ನಡುವೆ ಪ್ರಕೃತಿಯ ಆನಂದವನ್ನು ಸವಿಯುತ್ತ ಬೆಟ್ಟದ ತುದಿಯ ಕೋಟೆಯವರೆಗೂ ತಲುಪುವುದೆ ಒಂದು ರೋಮಾಂಚನವಾದ ಅನುಭವ. ಸಹ್ಯಾದ್ರಿ ಪರ್ವತ ಶ್ರೇಣಿಯ ಭುಲೇಶ್ವರ ಪರ್ವತಗಳಲ್ಲಿ ನೆಲೆಸಿರುವ ಈ ಸ್ಥಳವು ಸಮುದ್ರ ಮಟ್ಟದಿಂದ 1312 ಮೀ ಎತ್ತರದಲ್ಲಿದೆ. ಬೆಟ್ಟದ ಬುಡದಿಂದ ತುದಿಯವರೆಗೆ ಚಿಕ್ಕದಾದ ದಾರಿಯಿದ್ದು ಸಾಹಸಮಯ ಅನುಭೂತಿಯನ್ನು ಕರುಣಿಸುತ್ತದೆ. ಪುಣೆಯ ಶನಿವಾರವಾಡಾ ಹಾಗು ಸ್ವರಗೇಟ್ ಗಳಿಂದ ಸಿಂಹಗಡ್ ಗೆ ತೆರಳಲು ಸ್ಥಳೀಯ ಆಡಳಿತದ ವತಿಯಿಂದ ಪ್ರತಿ ಘಂಟೆಗೆ ಒಂದು ಬಸ್ ಲಭ್ಯವಿದೆ.

ಚಿತ್ರಕೃಪೆ: SasmitV

ಲೋಣಾವಲಾ

ಲೋಣಾವಲಾ

ಮಹಾರಾಷ್ಟ್ರದ ಲೋಣಾವಲಾ ಪ್ರದೇಶದಲ್ಲಿ ನೆಲೆಸಿರುವ ಲೋಹಗಡ್ ಒಂದು ಸುಪ್ರಸಿದ್ಧವಾದ ಚಾರಣ ಸ್ಥಳವಾಗಿದೆ. ಪುಣೆ ನಗರದ ಹತ್ತಿರದಲ್ಲಿರುವ ಹಲವು ಚಾರಣ ಸ್ಥಳಗಳ ಪೈಕಿ ಇದೂ ಕೂಡ ಒಂದು. ಇಲ್ಲಿರುವ ಲೋಹಗಡ್ ಹಾಗು ವಿಸಾಪುರ್ ಅವಳಿ ಕೋಟೆಗಳು ಮಳೆಗಾಲದ ನೆಚ್ಚಿನ ಚಾರಣ ಸ್ಥಳಗಳಾಗಿವೆ.

ಚಿತ್ರಕೃಪೆ: vivek Joshi

ರಾಜಗಾಂಭೀರ್ಯ

ರಾಜಗಾಂಭೀರ್ಯ

ರಾಜಗಡ್ ಕೋಟೆಯು ಮಹಾರಾಷ್ಟ್ರದಲ್ಲಿ ಕಂಡುಬರುವ ಎಲ್ಲ ಕೋಟೆಗಳ ನಡುವೆ ರಾಜನಂತೆಯೆ ಇದ್ದು ಚಾರಣದ ಅತಿ ಉತ್ತಮ ಸ್ಥಳವಾಗಿದೆ. ಪುಣೆ ನಗರದಿಂದ 65 ಕಿ.ಮೀ ದೂರದಲ್ಲಿರುವ ಈ ಕೋಟೆಯು ಸಾಹಸಮಯ ಚಾರಣ ಪಥವನ್ನು ಹೊಂದಿದ್ದು ಹದಿಹರೆಯ ಪ್ರವಾಸಿಗರಲ್ಲಿ ಹೆಚ್ಚು ಜನಪ್ರಿಯವಾಗಿದೆ.

ಚಿತ್ರಕೃಪೆ: rohit gowaikar

ರಾತ್ರಿಗೂ ಸೈ

ರಾತ್ರಿಗೂ ಸೈ

ಕೋರಿಗಡ್ ಕೋಟೆಯು ಲೋಣಾವಲಾದಲ್ಲಿ ಕಂಡುಬರುವ ತಿಕೋನಾ, ಲೋಹಗಡ್, ವಿಸಾಪುರ್ ಕೋಟೆಗಳ ಪೈಕಿ ಮಹತ್ತರವಾದ ಕೋಟೆಯಾಗಿದೆ. ಮತ್ತೊಂದು ವಿಷಯವೆಂದರೆ ಈ ಕೋಟೆಯು ಜನಪ್ರಿಯ ರಾತ್ರಿ ಚಾರಣದ ಸ್ಥಳವಾಗಿದೆ.

ಚಿತ್ರಕೃಪೆ: Amogh Sarpotdar

ಕಲವಂತಿನ್ ದುರ್ಗ

ಕಲವಂತಿನ್ ದುರ್ಗ

ಪ್ರಬಾಲಗಡ್ - ಕಲವಂತಿನ್ ದುರ್ಗವು, ಮಹಾರಾಷ್ಟ್ರದ ಮಾಥೇರಾನ್, ಪನವೇಲ್ ಮಧ್ಯದಲ್ಲಿರುವ ಸಹ್ಯಾದ್ರಿ ಪರ್ವತ ಶ್ರೇಣಿಗಳಲ್ಲಿ ಸಮುದ್ರ ಮಟ್ಟದಿಂದ ಸುಮಾರು 2300 ಅಡಿಗಳಷ್ಟು ಎತ್ತರದಲ್ಲಿದೆ. ಇದೊಂದು ಅತ್ಯುತ್ತಮ ಚಾರಣ ಸ್ಥಳವಾಗಿರುವುದು ಅಲ್ಲದೆ ಭಾರತದ ಸುಂದರ ನಿರ್ಜನ ಪ್ರದೇಶಗಳ ಪೈಕಿ ಒಂದಾಗಿದೆ.

ಚಿತ್ರಕೃಪೆ: Rohit Gowaikar

ರತ್ನಾಗಿರಿ

ರತ್ನಾಗಿರಿ

ಮಹಾರಾಷ್ಟ್ರದ ರತ್ನಾಗಿರಿಜಿಲ್ಲೆಯ ಕುಂಭಾರ್ಲಿ ಘಾಟ್ ಪ್ರದೇಶದಲ್ಲಿ ಈ ಚಾರಣ ಸ್ಥಳವು ಸ್ಥಿತವಿದೆ. ಇದರ ಸುತ್ತಲೂ ಅನೇಕ ವನ್ಯ ಪ್ರಾಣಿಗಳನ್ನು ಕಾಣಬಹುದಾಗಿದೆ. ಅತಿ ಕುತೂಹಲಕಾರಿಯಾದ ಕಾಡಿನ ಚಾರಣ ಮಾರ್ಗ ಇದಾಗಿದೆ.

ಚಿತ್ರಕೃಪೆ: Nilesh2 str

ಅಹ್ಮದ್ ನಗರ

ಅಹ್ಮದ್ ನಗರ

ಮಹಾರಾಷ್ಟ್ರದ ಅಹಮದ್ ನಗರ ಪ್ರದೇಶದಲ್ಲಿ ಈ ಭವ್ಯ ಸ್ಥಳವನ್ನು ಕಾಣಬಹುದು. ಈ ಸುಪ್ರಸಿದ್ಧ ಸ್ಥಳದಲ್ಲಿ ಅನೇಕ ಆಕರ್ಷಣೆಗಳನ್ನು ಕಾಣಬಹುದಾಗಿದೆ. ಹರಿಶ್ಚಂದ್ರ ಗುಹೆಗಳು, ಹರಿಶ್ಚಂದ್ರೇಶ್ವರ ದೇವಾಲಯ, ತಾರಾಮತಿ ಶಿಖರ, ಮಾಲ್ಶೇಜ್ ಘಾಟ್ ಹಾಗು ಕೇದಾರೇಶ್ವರ ಗುಹಾ ದೇವಾಲಯ ಇಲ್ಲಿ ಕಂಡುಬರುವ ಕೆಲವು ಪ್ರಮುಖ ಸ್ಥಳಗಳು. ಈ ಸ್ಥಳದ ಕುರಿತು ಹೆಚ್ಚು ಮಾಹಿತಿ ಪಡೆಯಿರಿ.

ಚಿತ್ರಕೃಪೆ: rohit gowaikar

ಪ್ರಚಂಡಗಡ್

ಪ್ರಚಂಡಗಡ್

ತೋರ್ಣಾ ಕೋಟೆ ಅಥವಾ ಪ್ರಚಂಡಗಡ್, ಪುಣೆಗೆ ಹತ್ತಿರದಲ್ಲಿರುವ ಒಂದು ಬೃಹತ್ ಕೋಟೆಯಾಗಿದೆ. ಪುಣೆ ಜಿಲ್ಲೆಯಲ್ಲಿರುವ ಅತಿ ದೊಡ್ಡದಾದ ಕೋಟೆ ಇದಾಗಿದೆ ಅಲ್ಲದೆ ನೆಚ್ಚಿನ ಪ್ರವಾಸಿ ಸ್ಥಳವಾಗಿಯೂ ಇದು ಹೆಸರುವಾಸಿಯಾಗಿದೆ.

ಚಿತ್ರಕೃಪೆ: Amogh Sarpotdar

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X