Search
  • Follow NativePlanet
Share
» »ಈ ಗುಹೆಯಲ್ಲಿ ಗುಮ್ಮ ಅಲ್ಲ... ಶಿವಲಿಂಗವಿದೆ!

ಈ ಗುಹೆಯಲ್ಲಿ ಗುಮ್ಮ ಅಲ್ಲ... ಶಿವಲಿಂಗವಿದೆ!

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟಗಳ ಭಾಗದಲ್ಲಿರುವ ಒಂದು ಅದ್ಭುತ ನಿಸರ್ಗ ಸಹಜವಾದ ಪ್ರವಾಸಿ ತಾಣವೆಂದರೆ ಕವಲ ಗುಹೆ

By Divya Pandit

ಗುಹೆ ಎಂದರೆ ಸಾಕು ಮನಸ್ಸಲ್ಲಿ ಹಲವಾರು ಪ್ರಶ್ನೆಗಳು ಬುಗಿಲೇಳುತ್ತವೆ. ಅದೇಕೆ ಇಲ್ಲಿದೆ? ಯಾರು ಮಾಡಿದ್ದು? ಅದರಲ್ಲಿ ಏನಿದೆ? ಒಳಗೆ ಹೋಗುವುದಾ ಬೇಡವಾ? ಭಯಾನಕ ಪ್ರಾಣಿ ಇರಬಹುದಾ? ಹೀಗೆ ಪ್ರಶ್ನೆಗಳ ಸರಮಾಲೆಯೇ ಇರುತ್ತವೆ. ನಿಜ, ಜೀವನದಲ್ಲಿ ಒಮ್ಮೆ ನೋಡಲೇ ಬೇಕಾದಂತಹ ಹಾಗೂ ಕುತೂಹಲ ಕೆರಳಿಸುವ ಗುಹೆಯೊಂದರ ಪರಿಚಯ ಮಾಡಿಕೊಳ್ಳೋಣ ಬನ್ನಿ...

ಕವಲ ಗುಹೆ

ಈ ಗುಹೆ ಕರ್ನಾಟಕದ ದಾಂಡೆಲಿಯಲ್ಲಿ ಬರುತ್ತದೆ.ದಾಂಡೇಲಿಯಿಂದ 25 ಕಿ.ಮೀ. ದೂರದಲ್ಲಿರುವ ಇದು ಸುಣ್ಣದ ಕಲ್ಲಿನಿಂದ ಕೂಡಿದೆ. ಪುರಾತನ ಕಾಲದಲ್ಲಿ ಉಂಟಾದ ಜ್ವಾಲಾಮುಖಿಯಿಂದ ಈ ಗುಹೆ ಉಂಟಾಗಿದೆ ಎನ್ನಲಾಗುತ್ತದೆ.

ಈ ಗುಹೆಯಲ್ಲಿ ಗುಮ್ಮ ಅಲ್ಲ... ಶಿವಲಿಂಗವಿದೆ!

ಚಿತ್ರಕೃಪೆ: wikimapia.org

ಗುಹೆಯ ಒಳಗೆ

ಗುಹೆಯ ಒಳಗೆ ಪ್ರವೇಶಿಸುತ್ತಿದ್ದಂತೆ ಬಾವಲಿಗಳ ವಾಸನೆ ಮೂಗಿಗೆ ಬಡಿಯುತ್ತದೆ. ಅಲ್ಲಲ್ಲೇ ಸ್ವಲ್ಪ ಮರೆಯಲ್ಲಿ ಗೋಡೆಗಳ ಮೇಲೆ ಬಾವಲಿಗಳು ಕುಳಿತಿರುವುದನ್ನು ಕಾಣಬಹುದು. ಮುಂದೆ ಹೋದಂತೆ ಗುಹೆಯ ಜಾಗ ಇಕ್ಕಟ್ಟಾಗುತ್ತಾ ಹೋಗುತ್ತದೆ. ಹಾಗೇ ಮುಂದೆ ಸಾಗಿದರೆ ಗವಿಗಂಬಗಳಿರುವುದನ್ನು ಕಾಣಬಹುದು.

ಹತ್ತಲೇ ಬೇಕು

ಈ ಗುಹೆ ಬೆಟ್ಟದ ತುದಿಯಲ್ಲಿ ಇರುವುದರಿಂದ ಕಮ್ಮಿ ಎಂದರೂ 375 ಮೆಟ್ಟಿಲನ್ನು ಏರಿ ಹೋಗಬೇಕು. ಅಲ್ಲಿ ಬೇರೆ ಯಾವ ಮಾರ್ಗದಿಂದಲೂ ಸಾಗಲು ಸಾಧ್ಯವಿಲ್ಲ.

ಈ ಗುಹೆಯಲ್ಲಿ ಗುಮ್ಮ ಅಲ್ಲ... ಶಿವಲಿಂಗವಿದೆ!

ಚಿತ್ರಕೃಪೆ: Wikimapia

ಏನಿದೆ ಒಳಗೆ

40 ಅಡಿ ಅಂತರದ ವರೆಗೂ ಅಂಕುಡೊಂಕಾಗಿ ಇರುವ ಈ ಗುಹೆಯ ಒಳಗೆ ಪ್ರವೇಶಿಸಿದರೆ ದೊಡ್ಡ ಗಾತ್ರದ ಶಿವಲಿಂಗ ಇರುವುದನ್ನು ಕಾಣಬಹುದು. ಇಲ್ಲಿ ಶಿವಲಿಂಗಕ್ಕೆ ನಿತ್ಯವೂ ಪೂಜೆ ನಡೆಯುತ್ತದೆ ಎನ್ನುತ್ತಾರೆ.

ಗುಹೆಯ ಸುತ್ತ-ಮುತ್ತ

ಈ ಗುಹೆ ಮರಗಿಡಗಳ ಪೊದೆಯಿಂದ ಮುಚ್ಚಿದಂತಿದೆ. ಇದರೊಟ್ಟಿಗೆ ಇನ್ನೊಂದು ಸುಂದರ ದೃಶ್ಯವೆಂದರೆ ಗುಹೆಯ ಹಿಂಭಾಗದಲ್ಲಿ ಕಾಳಿ ನದಿ ಹರಿಯುವುದು.

ಈ ಗುಹೆಯಲ್ಲಿ ಗುಮ್ಮ ಅಲ್ಲ... ಶಿವಲಿಂಗವಿದೆ!

ಚಿತ್ರಕೃಪೆ: Wikimapia

ಹೀಗೆ ಮಾಡಬಹುದು

ಕವಲ ಗುಹೆಯ ಹತ್ತಿರ ಎಲ್ಲಾದರೂ ರೂಮ್ ವ್ಯವಸ್ಥೆ ಮಾಡಿಕೊಂಡಿದ್ದರೆ ಕಾಳಿ ನದಿಯಲ್ಲಿ ರ್ಯಾಫ್ಟಿಂಗ್, ಬೆಳಗಿನ ಜಾವದಲ್ಲಿ, ರಾತ್ರಿಯವೇಳೆ ಟ್ರೆಕ್ಕಿಂಗ್ ಹಾಗೂ ಪ್ರಾಣಿಗಳ ವೀಕ್ಷಣೆಗೆ ಹೋಗಬಹುದು.

ಇದಕ್ಕೆ ಸಮೀಪ

ದಾಂಡೆಲಿಯಿಂದ ಗೋಕರ್ಣ, ಮುರುಡೇಶ್ವರ, ಕಾರವಾರ, ಯಾಣದ ಕಡೆಗೂ ಪ್ರಯಾಣ ಮುಂದುವರಿಸಬಹುದು.

ಗುಹೆಗೆ ಹೋಗಲು

ಇಲ್ಲಿ ಬೆಳಿಗ್ಗೆ 8 ರಿಂದ ಸಂಜೆ 5ರ ವರೆಗೆ ಮಾತ್ರ ಪ್ರವೇಶಕ್ಕೆ ಅನುಮತಿದೊರೆಯುತ್ತದೆ. ಪ್ರವೇಶ ಶುಲ್ಕವೆಂದು 10 ರೂ ಕೊಡಬೇಕಾಗುಗುವುದು.

ಎಚ್ಚರಿಕೆ ಅಗತ್ಯ

ಈ ಪ್ರದೇಶ ದಟ್ಟವಾದ ಗಿಡ ಮರಗಳಿಂದ ಕೂಡಿರುವುದರಿಂದ ವಿಷ ಜಂತುಗಳು ಇರುವ ಸಾಧ್ಯತೆ ಹೆಚ್ಚು. ಹಾಗಾಗಿ ಎಚ್ಚರಿಕೆಯಿಂದ ಹೆಜ್ಜೆ ಹಾಕುವುದು ಮುಖ್ಯ.

ದಾಂಡೇಲಿಯ ದಂಡಕಾರಣ್ಯದಲ್ಲಿ ಒಂದು ಸುತ್ತು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X