Search
  • Follow NativePlanet
Share
» »ಪುರುಷರಿಗೆ ಈ ದೇವಾಲಯದಲ್ಲಿ ಪ್ರವೇಶವಿಲ್ಲ

ಪುರುಷರಿಗೆ ಈ ದೇವಾಲಯದಲ್ಲಿ ಪ್ರವೇಶವಿಲ್ಲ

ಹಿಂದೂ ಸಂಸೃತಿಯಲ್ಲಿ ದೇವಾಲಯಗಳ ಪಾತ್ರ ಅತ್ಯಂತ ಮಹತ್ವವಾದುದು, ಸನಾತನ ಧರ್ಮದಲ್ಲಿ ದೈವ ಆರಾಧನೆಗೆ ಪ್ರಥಮ ಸ್ಥಾನವಿದೆ. ಸಾಧರಣವಾಗಿ ನಮ್ಮ ದೇಶದ ದೇವಾಲಯಕ್ಕೆ ತೆರಳುವಾಗ ಕುಟುಂಬದವರ ಜೊತೆಗೆ ಭೇಟಿ ನೀಡುತ್ತೇವೆ. ಆದರೆ ಕೆಲವು ದೇವಾಲಯಗಳಲ್ಲಿ ಕುಟ

By Sowmyabhai

ಹಿಂದೂ ಸಂಸೃತಿಯಲ್ಲಿ ದೇವಾಲಯಗಳ ಪಾತ್ರ ಅತ್ಯಂತ ಮಹತ್ವವಾದುದು, ಸನಾತನ ಧರ್ಮದಲ್ಲಿ ದೈವ ಆರಾಧನೆಗೆ ಪ್ರಥಮ ಸ್ಥಾನವಿದೆ. ಸಾಧರಣವಾಗಿ ನಮ್ಮ ದೇಶದ ದೇವಾಲಯಕ್ಕೆ ತೆರಳುವಾಗ ಕುಟುಂಬದವರ ಜೊತೆಗೆ ಭೇಟಿ ನೀಡುತ್ತೇವೆ. ಆದರೆ ಕೆಲವು ದೇವಾಲಯಗಳಲ್ಲಿ ಕುಟುಂಬದವರೊಂದಿಗೆ ಭೇಟಿ ನೀಡಲು ಸಾಧ್ಯವಿಲ್ಲ. ಏಕೆಂದರೆ ಆ ದೇವಾಲಯಗಳಲ್ಲಿ ವಿವಾಹವಾಗದೇ ಇರುವ ಪುರುಷರಿಗೆ ಪ್ರವೇಶ ನಿಷೇಧವಾಗಿರುವುದರಿಂದ.

ಇದೇನಪ್ಪ ಇಂತಹ ದೇವಾಲಯವು ಇದೆಯಾ? ಎಂದು ಆಶ್ಚರ್ಯ ಪಡುತ್ತಿದ್ದೀರಾ? ಹೌದು ಇದು ನಿಜ. ಅದು ಮುಖ್ಯವಾಗಿ ನಮ್ಮ ಭಾರತ ದೇಶದಲ್ಲಿ ಎಂಬುದು ವಿಷೇಶ. ಇನ್ನೊಂದು ಆಶ್ಚರ್ಯಕರವಾದ ವಿಷಯವೆನೆಂದರೆ ನಮಗೆಲ್ಲಾ ತಿಳಿದಿರುವ ಹಾಗೇ ಬ್ರಹ್ಮ ದೇವಾಲಯವು ವಿಶ್ವದಲ್ಲೇ ಇಲ್ಲ ಎಂದೂ ಅಲ್ಲವೇ?.

ಆದರೆ ಬ್ರಹ್ಮನ ಏಕೈಕ ದೇವಾಲಯ ನಮ್ಮ ರಾಜಸ್ಥಾನ ರಾಜ್ಯದಲ್ಲಿದೆ. ಆದರೆ ಇಲ್ಲಿ ವಿವಾಹವಾಗದೇ ಇರುವ ಪುರುಷರಿಗೆ ಪ್ರವೇಶ ನಿಷೇಧ. ಈ ನಿಷೇಧ ಏಕೆ? ಹೇಗೆ ಆಚರಣೆಯಲ್ಲಿದೆ ಎಂಬುದನ್ನು ತಿಳಿಯಬೇಕಾದರೆ.....

ಪ್ರಸ್ತುತ ಲೇಖನದಲ್ಲಿ ಭಾರತದಲ್ಲಿನ ಏಕೈಕ ಬ್ರಹ್ಮನ ದೇವಾಲಯದಲ್ಲಿ ಪುರುಷರಿಗೆ ಪ್ರವೇಶವಿಲ್ಲದ ಕಾರಣವನ್ನು ಸ್ಲೆಡ್‍ಗಳ ಮೂಲಕ ತಿಳಿಯಿರಿ.

ಬ್ರಹ್ಮನ ದೇವಾಲಯ

ಬ್ರಹ್ಮನ ದೇವಾಲಯ

ಪ್ರಪಂಚದಲ್ಲಿನ ಏಕೈಕ ಬ್ರಹ್ಮನ ದೇವಾಲಯವೆಂದರೆ ಅದು ರಾಜಸ್ಥಾನದ ಪುಷ್‍ಕರ್‍ನ ಬ್ರಹ್ಮ ದೇವಾಲಯ. ಈ ದೇವಾಲಯವು ರಾಜಸ್ಥಾನ ರಾಜ್ಯದ ಪುಷ್‍ಕರದಲ್ಲಿದೆ. ಇದೊಂದು ಪವಿತ್ರವಾದ ಹಿಂದೂ ತೀರ್ಥಕ್ಷೇತ್ರವಾಗಿದ್ದು ಸುಮಾರು 2000 ವರ್ಷಗಳ ಇತಿಹಾಸ ಹೊಂದಿದೆ.

PC:Redtigerxyz

ಪುಷ್‍ಕರ

ಪುಷ್‍ಕರ

ಇಲ್ಲಿ ಪವಿತ್ರವಾದ ಪುಷ್‍ಕರ ಎಂಬ ಸರೋವರ ಇರುವುದರಿಂದ ಈ ಪಟ್ಟಣಕ್ಕೆ ಇದೇ ಹೆಸರಿಡಲಾಗಿದೆ. ಈ ಪವಿತ್ರವಾದ ದೇವಾಲಯದಲ್ಲಿ ವಿವಾಹವಿಲ್ಲದ ಪುರುಷರಿಗೆ ದೇವಾಲಯದ ಪ್ರವೇಶ ನಿಷೇದಿಸಲಾಗಿದೆ


PC:Vberger

ಪುರಾಣ

ಪುರಾಣ

ಪದ್ಮ ಪುರಾಣದ ಪ್ರಕಾರ ಒಮ್ಮೆ ವಜ್ರನಾಭನೆಂಬ ರಾಕ್ಷಸ ಮಕ್ಕಳಿಗೆ ಹಾಗೂ ಮಾನವರಿಗೆ ಅಪಾರವಾಗಿನ ಪೀಡಿಸುತ್ತಿದ್ದ. ಇದರಿಂದ ಕೋಪಗೊಂಡ ಬ್ರಹ್ಮನು ತನ್ನ ಕಮಲವನ್ನೇ ಆಯುಧವನ್ನಾಗಿ ಮಾಡಿ ಆ ರಾಕ್ಷಸನನ್ನು ಸಂಹರಿಸಿದ.

PC:wikipedia

ಕಮಲದ ಪಕುಳಿ

ಕಮಲದ ಪಕುಳಿ

ಆ ರಾಕ್ಷಸನ್ನು ಸಂಹರಿಸುವಾಗ ಕಮಲದ ಎಲೆಗಳು ಭೂಮಿಯ ಮೂರು ವಿವಿಧ ಭಾಗಗಳಲ್ಲಿ ಬಿದ್ದವು. ನಂತರ ಬ್ರಹ್ಮನ ಕಮಲಗಳನ್ನು ಜೇಷ್ಠ ಪುಷ್ಕರ, ಮಧ್ಯೆ ಪುಷ್ಕರ ಹಾಗೂ ಕನಿಷ್ಕ ಪುಷ್ಕರ ಎಂದು ಹೆಸರಿಸಲಾಯಿತು. ಆದರೆ ಜೇಷ್ಠ ಪುಷ್ಕರ ಅತ್ಯಂತ ಮಹತ್ವವನ್ನು ಪಡೆಯಿತು.

PC:wikipedia

ವಿವಾಹವಿಲ್ಲದ ಪುರುಷರಿಗೆ ಪ್ರವೇಶವಿಲ್ಲ

ವಿವಾಹವಿಲ್ಲದ ಪುರುಷರಿಗೆ ಪ್ರವೇಶವಿಲ್ಲ

ಯಾವುದೇ ಒಂದು ಆಚರಣೆ ಇದ್ದರೂ ಕೂಡ ಅದಕ್ಕೆ ಒಂದು ಬಲವಾದ ಕಾರಣವಿರುತ್ತದೆ. ಹಾಗೇಯೆ ಈ ದೇವಾಲಯಕ್ಕೂ ಕೂಡ ಸ್ವಾರಸ್ಯಕಾರವಾದ ಒಂದು ಪುರಾಣವಿದೆ. ಆ ಕಾರಣವೆನೆಂದರೆ


PC:Scott Dexter

ಬ್ರಹ್ಮನ ಯಾಗ

ಬ್ರಹ್ಮನ ಯಾಗ

ಇದಕ್ಕೆ ಕಾರಣವೆನೆಂದರೆ ಪೂರ್ವದಲ್ಲಿ ಬ್ರಹ್ಮ ಈ ಪ್ರದೇಶದಲ್ಲಿ ಮಹಾಯಾಗ ಮಾಡಬೇಕು ಎಂದು ಕೊಂಡಿದ್ದನಂತೆ. ಮಹಾ ಯಾಗವನ್ನು ಪ್ರಾರಂಭಿಸುವ ಸಮಯದಲ್ಲಿ ಬ್ರಹ್ಮನ ಪತ್ನಿ ಸರಸ್ವತಿ ದೇವಿ ಬರುವುದು ತಡವಾಯಿತು.

PC:LRBurdak

ದಂಪತಿಗಳು

ದಂಪತಿಗಳು

ಸಾಮಾನ್ಯವಾಗಿ ಯಾಗವನ್ನು ಎಂದಿಗೂ ಒಬ್ಬರು ಮಾಡಕೊಡದು. ಜೊತೆಗೆ ಪತ್ನಿಯು ಕೂಡ ಇರಬೇಕು ಎಂಬುದು ಬ್ರಹ್ಮನಿಗೆ ತಿಳಿದಿತ್ತು. ಹಾಗಾಗಿ ಯಾಗವನ್ನು ದಂಪತಿಗಳು ಮಾಡಬೇಕಾಗಿರುವುದರಿಂದ ಸರಸ್ವತಿಯ ಬಾರದ್ದಿದ್ದ ಕಾರಣ ಗಾಯತ್ರಿ ದೇವಿಯನ್ನು ವಿವಾಹವಾಗಿ ಯಾಗವನ್ನು ಪೂರ್ಣಗೊಳಿಸುತ್ತಾನೆ.

PC:Brahma TemplE

ಸರಸ್ವತಿ ದೇವಿ

ಸರಸ್ವತಿ ದೇವಿ

ಸರಸ್ವತಿಗೆ ತನ್ನ ಸ್ಥಾನದಲ್ಲಿ ಗಾಯತ್ರಿ ದೇವಿ ಕುಳಿತಿರುವುದು ಸರಸ್ವತಿಗೆ ತೆಡೆದುಕೊಳ್ಳಲಾಗಲಿಲ್ಲ ಆಗ ಅವೇಶದಿಂದ ಬ್ರಹ್ಮನನ್ನು ಸರಸ್ವತಿ ಶಾಪವನ್ನು ಇಟ್ಟಳು.

PC:Rashmi.parab

ಶಾಪಗ್ರಸ್ತ ದೇವಾಲಯ

ಶಾಪಗ್ರಸ್ತ ದೇವಾಲಯ

ಹೀಗೆ ಸರಸ್ವತಿ ಶಾಪವನ್ನು ನೀಡಿದ್ದ ಕಾರಣ ಈ ದೇವಾಲಯದ ಒಳಗೆ ವಿವಾಹವಿಲ್ಲದವರಿಗೆ ಪ್ರವೇಶ ನಿಷಿದ್ಧ.


PC:Adityavijayavargia

ಬ್ರಹ್ಮಚಾರಿಗಳು

ಬ್ರಹ್ಮಚಾರಿಗಳು

ಈ ದೇವಾಲಯಕ್ಕೆ ಮಹಿಳೆಯರು, ವಯಸ್ಕರು, ಮದುವೆಯಾದವರು ಪ್ರವೇಶವನ್ನು ಪಡೆಯಬಹುದು.

PC:Rameezm raza

ಕಾಣಿಕೆ

ಕಾಣಿಕೆ

ವಿವಾಹವಿಲ್ಲದ ಪುರುಷರು ಕೇವಲ ಹೊರ ಅಂಗಳದಲ್ಲಿ ಮಾತ್ರ ತಾವು ಸಮರ್ಪಿಸಬೇಕಾದ ದಾನ, ಉಡುಗೊರೆಗಳನ್ನು ಆರ್ಚಕರಿಗೆ ನೀಡಿ ಹೊರಗಡೆಯಿಂದಲೇ ಬ್ರಹ್ಮನನ್ನು ನೆನೆದು ಹೊರಡಬೇಕು.

PC:Pushkar lake

ಬ್ರಹ್ಮನ ಮೂರ್ತಿ

ಬ್ರಹ್ಮನ ಮೂರ್ತಿ

ಈ ಎಲ್ಲಾ ವಿಧಾನವನ್ನು ನೀವು ಹೊರಗಡೆಯಿಂದಲೇ ನಿಂತುಕೊಂಡು ಅನುಭವಿಸಬೇಕು. ಅಪ್ಪಿ ತಪ್ಪಿಯೂ ಬ್ರಹ್ಮನ ಸನ್ನಿಧಿಗೆ ತೆರಳಿ ನೋಡುವ ಹಾಗಿಲ್ಲ. ಹೆಚ್ಚೆಂದರೆ ಬ್ರಹ್ಮನ ಮೂರ್ತಿಯನ್ನು ಮನದಲ್ಲಿ ಸ್ಮರಿಸಿಕೊಳ್ಳಬಹುದಷ್ಟೆ.

PC:Pablo Nicolás Taibi Cicaré

ಒಂಟೆ ಉತ್ಸವ

ಒಂಟೆ ಉತ್ಸವ

ಪುಷ್‍ಕರ ರಾಜಸ್ಥಾನದ ಅಜ್ಮೇರ್ ಜಿಲ್ಲೆಯು ಪ್ರಮುಖ ಪಟ್ಟಣ ಕೇಂದ್ರವಾಗಿದೆ. ಅಜ್ಮೇರ್ ನಗರದಿಂದ ಸುಮಾರು 15 ಕಿ,ಮೀ ದೂರದಲ್ಲಿ ಪುಷ್ಕರ್ ಪಟ್ಟಣವಿದ್ದು ಇಲ್ಲಿ ಹಲವಾರು ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳು ದೊರೆಯುತ್ತವೆ. ಇಲ್ಲಿ ಅದ್ಭುತ ಒಂಟೆಯ ಉತ್ಸವ ನಡೆಸಲಾಗುತ್ತದೆ.


PC:Diego Delso

ಪ್ರವೇಶ ಸಮಯ

ಪ್ರವೇಶ ಸಮಯ

ಏಕೈಕ ಬ್ರಹ್ಮನ ದೇವಾಲಯಕ್ಕೆ ಪ್ರವೇಶ ಸಮಯವೆಂದರೆ ಅದು ಬೆಳಗ್ಗೆ 6:30 ರಿಂದ ರಾತ್ರಿ 8:30ರವರೆಗೆ.


PC:Diego Delso

ವಿಮಾನ ಮಾರ್ಗದ ಮೂಲಕ

ವಿಮಾನ ಮಾರ್ಗದ ಮೂಲಕ

ಬ್ರಹ್ಮನ ಏಕೈಕ ದೇವಾಲಯಕ್ಕೆ ತೆರಳಲು ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಜೈಪುರದ ಸಂಗನೀರ್ ಏರ್‍ರ್ಪೋಟ್. ಇಲ್ಲಿಂದ ಪುಷ್‍ಕರಣಿಗೆ ಸುಮಾರು 127 ಕಿ,ಮೀ ದೂರದಲ್ಲಿದೆ. ಹಾಗೇಯೆ ಜೋಧಾ ಪುರ್‍ನ ಜೋಧಾಪುರ್ ವಿಮಾನ ನಿಲ್ದಾಣದಿಂದ ಸುಮಾರು 158 ಕಿ.ಮೀ ದೂರದಲ್ಲಿದೆ.

ರೈಲ್ವೆ ನಿಲ್ದಾಣ

ರೈಲ್ವೆ ನಿಲ್ದಾಣ

ಪುಷ್‍ಕರಣಿ ನಗರಕ್ಕೆ ಸಮೀಪವಾದ ರೈಲ್ವೆ ನಿಲ್ದಾಣವೆಂದರೆ ಅದು ಅಜಮೀರ್ ಜಂಗ್ಷನ್. ಇಲ್ಲಿಂದ ಪುಷ್‍ಕರಣಿಗೆ ಕೇವಲ 10 ಕಿ,ಮೀ ದೂರದಲ್ಲಿದೆ.

ರಸ್ತೆ ಮಾರ್ಗದ ಮೂಲಕ

ರಸ್ತೆ ಮಾರ್ಗದ ಮೂಲಕ

ರಾಜಸ್ಥಾನ ದೂರವಿರುವ ರಾಜ್ಯವಾದ್ದರಿಂದ ಹಲವಾರು ಪ್ರಸಿದ್ಧವಾದ ಪಟ್ಟಣಗಳಿಂದ ತೆರಳಬೇಕಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X