Search
  • Follow NativePlanet
Share
» »ಮಂತ್ರಾಲಯ : ಶ್ರೀ ಗುರು ರಾಯರು ನೆಲೆಸಿದ ಕ್ಷೇತ್ರ

ಮಂತ್ರಾಲಯ : ಶ್ರೀ ಗುರು ರಾಯರು ನೆಲೆಸಿದ ಕ್ಷೇತ್ರ

By Vijay

"ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೆ" ಎಂಬ ಮಂತ್ರವನ್ನು ಗುರು ರಾಘವೇಂದ್ರರನ್ನು ನೆನೆಸಿ ಹೇಳುವುದು ಅವರ ಭಕ್ತರಲ್ಲಿ ಸರ್ವೇ ಸಾಮಾನ್ಯ. ಎಂತಹ ಸಂಕಟಗಳು ಬಂದರೂ ಸರಿ ಶ್ರೀ ಗುರು ರಾಯರನ್ನು ಭಕ್ತಿಯಿಂದ ನೆನೆಸಿದರೆ ಸಾಕು ಕ್ಷಣಾರ್ಧದಲ್ಲಿ ಅವು ಮಾಯವಾಗುತ್ತವೆ ಎಂಬ ಅಚಲವಾದ ವಿಶ್ವಾಸವಿದೆ ರಾಯರ ಭಕ್ತರಲ್ಲಿ. ಅಷ್ಟೆ ಅಲ್ಲ, ಸುಪ್ರಸಿದ್ಧ ಚಿತ್ರ ತಾರೆಯರಾದ ಡಾ. ರಾಜಕುಮಾರ್, ರಜನಿಕಾಂತ್, ನವರಸ ನಾಯಕ ಜಗ್ಗೇಶ್ ಮುಂತಾದವರ ಇಷ್ಟ ದೇವರಾದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ನೆಲೆಸಿರುವ ಪವಿತ್ರ ಶ್ರೀ ಕ್ಷೇತ್ರವೆ ಮಂತ್ರಾಲಯ.

ಮಂಚಾಲೆ ಎಂತಲೂ ಕರೆಯಲ್ಪಡುವ ಮಂತ್ರಾಲಯವು ಆಂಧ್ರದ ಕರ್ನೂಲ್ ಜಿಲ್ಲೆಯಲ್ಲಿ ತುಂಗಾ ನದಿ ತಟದ ಮೇಲೆ ನೆಲೆಸಿದೆ. ಗುರು ರಾಘವೇಂದ್ರರ ಬೃಂದಾವನವಿರುವ ಈ ಕ್ಷೇತ್ರವು ಪ್ರತಿ ವರ್ಷವೂ ಲಕ್ಷಾಂತರ ಭಕ್ತರನ್ನು ಸೆಳೆಯುತ್ತದೆ. ಶ್ರೀ ಗುರು ರಾಘವೇಂದ್ರರು ದ್ವೈತ ಪಂತದ ಸಂಸ್ಥಾಪಕರಾದ ಶ್ರೀ ಮಧ್ವಾಚಾರ್ಯರ ಅನುಯಾಯಿಯಾಗಿದ್ದು, ಅದರ ಪರಿಪಾಲಕರಾಗಿದ್ದರು. ಪ್ರಸ್ತುತ ಅವರ ಬೃಂದಾವನದಲ್ಲಿ ಸಮಾಧಿ ತೆಗೆದುಕೊಳ್ಳುವ ಮುಂಚೆ ಭಕ್ತರನ್ನು ಕುರಿತು ಮುಂದಿನ 700 ವರ್ಷಗಳವರೆಗೆ ಇದರಲ್ಲಿ ಜೀವಿಸಿರುವುದಾಗಿ ಅಭಯ ಹಸ್ತ ನೀಡಿದ್ದರು. ಅದರಂತೆ ಈಗಾಗಲೆ 339 ವರ್ಷಗಳು ಗತಿಸಿದ್ದು ಇನ್ನೂ ಮುಂದಿನ 361 ವರ್ಷಗಳವರೆಗೆ ರಾಯರು ಜಾಗೃತರಾಗಿದ್ದು ಭಕ್ತರನ್ನು ಹರಸುತ್ತಾರೆ ಎಂಬ ವಿಶ್ವಾಸ ಅವರ ಅನುಯಾಯಿಗಳಲ್ಲಿದೆ.

ಅಲ್ಲದೆ ಮಂತ್ರಾಲಯದಿಂದ ಕೇವಲ ಅರ್ಧ ಘಂಟೆ ಪ್ರಯಾಣದಷ್ಟು ದೂರವಿರುವ ಕರ್ನಾಟಕದಲ್ಲಿರುವ ಬಿಚಾಲೆ ಹಾಗು ಪಂಚಮುಖಿ ಆಂಜನೇಯ ಕ್ಷೇತ್ರಗಳು ಕೂಡ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಾಗಿವೆ.

ಮಂತ್ರಾಲಯ ಕ್ಷೇತ್ರ:

ಮಂತ್ರಾಲಯ ಕ್ಷೇತ್ರ:

ಮಂತ್ರಾಲಯ ಅಥವಾ ಮಂಚಾಲೆ ಮೂಲತಃ ಒಂದು ಗ್ರಾಮವಾಗಿದ್ದು, ಈ ಗ್ರಾಮದ ಮುಖ್ಯ ದೇವತೆಯಾಗಿ ಮಂಚಾಲಮ್ಮಳು ಆರಾಧಿಸಲ್ಪಡುತ್ತಾಳೆ. ಯಾರೊಬ್ಬ ಭಕ್ತನು ರಾಯರ ದರ್ಶನಕ್ಕೆಂದು ಮಂತ್ರಾಲಯಕ್ಕೆ ಬಂದರೆ ಮುಂಚೆ ಈ ದೇವಿಯ ದರ್ಶನ ಪಡೆದು ನಂತರ ರಾಯರನ್ನು ದರ್ಶಿಸಬೇಕು. ಇದು ಮೊದಲಿನಿಂದಲೂ ಪ್ರಚಲಿತದಲ್ಲಿರುವ ಆಚಾರ.

ಮಂತ್ರಾಲಯ ಕ್ಷೇತ್ರ:

ಮಂತ್ರಾಲಯ ಕ್ಷೇತ್ರ:

ಮಂಚಾಲಮ್ಮಳ ದೇವಸ್ಥಾನವು ಶ್ರೀ ಗುರುರಾಯರ ದೇವಸ್ಥಾನದ ಎಡ ಭಾಗದಲ್ಲಿದ್ದು ಎರಡೂ ದೇವಸ್ಥಾನಗಳು ತುಂಗಭದ್ರಾ ನದಿ ತೀರದಲ್ಲಿ ನೆಲೆಸಿವೆ. ಮೊದಲು ಮಂಚಾಲಮ್ಮಳ ದರ್ಶನ ಪಡೆದೆ ಗುರು ರಾಯರ ದರ್ಶನಕ್ಕೆ ಹೋಗಬೇಕಾಗುತ್ತದೆ.

ಮಂತ್ರಾಲಯ ಕ್ಷೇತ್ರ:

ಮಂತ್ರಾಲಯ ಕ್ಷೇತ್ರ:

ಗುರು ರಾಯರ ಶಿಷ್ಯ ವೃಂದದಲ್ಲಿ ಪ್ರಮುಖರಾಗಿದ್ದವರು ಶ್ರೀ ಅಪ್ಪಣ್ಣಾಚಾರ್ಯರು. ರಾಯರು ಅಪ್ಪಣ್ಣಾಚಾರ್ಯರೊಂದಿಗೆ ಭಿಕ್ಷಾಲಯ ಅಥವಾ ಬಿಚಾಲೆಯಲ್ಲಿ 13 ವರ್ಷಗಳ ಕಾಲ ವಾಸಿಸಿದ್ದರು.

ಚಿತ್ರಕೃಪೆ: Dr Murali Mohan Gurram

ಮಂತ್ರಾಲಯ ಕ್ಷೇತ್ರ:

ಮಂತ್ರಾಲಯ ಕ್ಷೇತ್ರ:

ಮಂತ್ರಾಯ ಕ್ಷೇತ್ರಕ್ಕೆ ಆಗಮಿಸಿದ ಕ್ಷಣವೆ ಭಕ್ತರನ್ನು ಸ್ವಾಗತಿಸುವ, ಗುರು ರಾಯರ ಸನ್ನಿಧಿಗೆ ಕರೆದೊಯ್ಯುವ ಸ್ವಾಗತ ಕಮಾನು.

ಮಂತ್ರಾಲಯ ಕ್ಷೇತ್ರ:

ಮಂತ್ರಾಲಯ ಕ್ಷೇತ್ರ:

ಶ್ರೀ ಗುರು ರಾಘವೇಂದ್ರ ಮಠಕ್ಕೆ ಕರೆದೊಯ್ಯುವ ಮಠ ಪ್ರವೇಶ ದ್ವಾರ. ಇದರ ಮುಂಬದಿಯಲ್ಲಿ ಪೂಜಾ ಸಾಮಗ್ರಿಗಳು ದೊರಕುತ್ತವೆ.

ಮಂತ್ರಾಲಯ ಕ್ಷೇತ್ರ:

ಮಂತ್ರಾಲಯ ಕ್ಷೇತ್ರ:

ಮಠದ ಪ್ರವೇಶ ದ್ವಾರದ ನಂತರ ಮಠಕ್ಕೆ ತಲುಪಲು ಇರುವ ಪಾದಚಾರಿ ಮಾರ್ಗ. ಸುಡು ಬಿಸಿಲಿನಲ್ಲಿ ಭಕ್ತರಿಗೆ ಅನಾನುಕೂಲತೆ ಆಗದಿರಲೆಂದು ರಸ್ತೆಯ ಎರಡೂ ಬದಿಯಲ್ಲಿ ಛಾವಣಿಯನ್ನು ನಿರ್ಮಿಸಿರುವುದು ಕಾಣಬಹುದು.

ಮಂತ್ರಾಲಯ ಕ್ಷೇತ್ರ:

ಮಂತ್ರಾಲಯ ಕ್ಷೇತ್ರ:

ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠದ ಮುಂಭಾಗದ ನೋಟ.

ಮಂತ್ರಾಲಯ ಕ್ಷೇತ್ರ:

ಮಂತ್ರಾಲಯ ಕ್ಷೇತ್ರ:

ಮಠದ ಆವರಣದಲ್ಲಿ ಕಂಡುಬರುವ ಕಾಳಿಂಗ ಸರ್ಪದ ಹೆಡೆಯ ಮೇಲೆ ನೃತ್ಯ ನಿರತನಾಗಿರುವ ಶ್ರೀಕೃಷ್ಣನ ಸುಂದರವಾದ ಪ್ರತಿಮೆ.

ಮಂತ್ರಾಲಯ ಕ್ಷೇತ್ರ:

ಮಂತ್ರಾಲಯ ಕ್ಷೇತ್ರ:

ಗಮನಿಸಬೇಕಾದ ಸಂಗತಿಯೆಂದರೆ, ಪ್ರವೇಶ ದ್ವಾರದ ಬಳಿಯಲ್ಲಿ ಸಾಕಷ್ಟು ವ್ಯಾಪಾರಿಗಳು ಭಕ್ತರನ್ನು ಕುರಿತು ತಮ್ಮ ಪಾದರಕ್ಷೆಗಳನ್ನು ಇಲ್ಲಿಯೇ ಬಿಟ್ಟು ಹೋಗಿ ಎಂದು ಬೆನ್ನು ಹತ್ತುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಆದರೆ ಇದಕ್ಕೆಂತಲೆ ಪ್ರತ್ಯೇಕವಾದ ಪಾದರಕ್ಷೆ ಇಡುವ ಸ್ಥಳವು ಮಠದ ಆವರಣದಲ್ಲಿದೆ.

ಮಂತ್ರಾಲಯ ಕ್ಷೇತ್ರ:

ಮಂತ್ರಾಲಯ ಕ್ಷೇತ್ರ:

ರಾಘವೇಂದ್ರ ಮಠವನ್ನು ಪ್ರವೇಶಿಸಲು ಇರುವ ಮುಖ್ಯ ದ್ವಾರ.

ಮಂತ್ರಾಲಯ ಕ್ಷೇತ್ರ:

ಮಂತ್ರಾಲಯ ಕ್ಷೇತ್ರ:

ಶ್ರೀ ಗುರು ರಾಯರ ಮಠದ ಆವರಣದ ಒಂದು ನೋಟ. ಉರುಳು ಸೇವೆ, ಪಾದ ಪ್ರದಕ್ಷಿಣೆ ಮೂತಾದವುಗಳನ್ನು ಈ ಸ್ಥಳದಲ್ಲೆ ಪೂರ್ಣಗೊಳಿಸಬೇಕಾಗುತ್ತದೆ.

ಮಂತ್ರಾಲಯ ಕ್ಷೇತ್ರ:

ಮಂತ್ರಾಲಯ ಕ್ಷೇತ್ರ:

ಶ್ರೀ ಗುರುರಾಯರ ಸನ್ನಿಧಿಯಲ್ಲಿ ತುಲಾಭಾರ ನೆರವೇರಿಸಲು ಇಚ್ಛೆಯುಳ್ಳವರು ಈ ಮಂಟಪದಲ್ಲಿ ನೆರವೇರಿಸಿಕೊಳ್ಳಬಹುದು.

ಮಂತ್ರಾಲಯ ಕ್ಷೇತ್ರ:

ಮಂತ್ರಾಲಯ ಕ್ಷೇತ್ರ:

ಶ್ರೀ ಗುರು ರಾಯರಿಗೆ ಭಕ್ತರು ತಮ್ಮ ಸಾಮರ್ಥ್ಯಾನುಸಾರ ಸೇವೆಗಳನ್ನು ಮಾಡಬಹುದು. ವಿವಿಧ ಸೇವೆಗಳಿಗಾಗಿ ನೊಂದಣಿ ಹಾಗು ರಶೀದಿಯನ್ನು ಇಲ್ಲಿ ಪಡೆಯಬೇಕು.

ಮಂತ್ರಾಲಯ ಕ್ಷೇತ್ರ:

ಮಂತ್ರಾಲಯ ಕ್ಷೇತ್ರ:

ಮಠದ ಆವರಣದಲ್ಲಿರುವ ಯಾಗ ಶಾಲೆ. ವಿವಿಧ ಉತ್ಸವ ದಿನಾಚರಣೆಗಳಲ್ಲಿ ಹೋಮ ಹವನ ಇತ್ಯಾದಿಗಳನ್ನು ಇಲ್ಲಿ ನೆರವೇರಿಸಲಾಗುತ್ತದೆ.

ಮಂತ್ರಾಲಯ ಕ್ಷೇತ್ರ:

ಮಂತ್ರಾಲಯ ಕ್ಷೇತ್ರ:

ಮಠದ ಆವರಣದಲ್ಲಿ ಕಂಡು ಬರುವ ನಾಗರ ಕಟ್ಟೆ. ಇದರ ಎದುರಿನಲ್ಲೆ ಯಾಗ ಶಾಲೆಯನ್ನು ಕಾಣಬಹುದಾಗಿದೆ.

ಮಂತ್ರಾಲಯ ಕ್ಷೇತ್ರ:

ಮಂತ್ರಾಲಯ ಕ್ಷೇತ್ರ:

ಮಠದ ಆವರಣದಲ್ಲಿರುವ ಶ್ರೀ ಸುಶಮೀಂದ್ರ ತೀರ್ಥರ ಬೃಂದಾವನ.

ಮಂತ್ರಾಲಯ ಕ್ಷೇತ್ರ:

ಮಂತ್ರಾಲಯ ಕ್ಷೇತ್ರ:

ಮಠದ ಆವರಣದಲ್ಲಿರುವ ಶ್ರೀ ಸುಧಮೇಂದ್ರ ತೀರ್ಥರ ಬೃಂದಾವನ.

ಮಂತ್ರಾಲಯ ಕ್ಷೇತ್ರ:

ಮಂತ್ರಾಲಯ ಕ್ಷೇತ್ರ:

ಮಠದ ಆವರಣದಲ್ಲಿರುವ ಶ್ರೀ ಸುರ್ವತೀಂದ್ರ ತೀರ್ಥರ ಬೃಂದಾವನ.

ಮಂತ್ರಾಲಯ ಕ್ಷೇತ್ರ:

ಮಂತ್ರಾಲಯ ಕ್ಷೇತ್ರ:

ಮುಖ್ಯ ಮಠದ ನಾಲ್ಕು ಬದಿಗಳಲ್ಲೂ ಇರುವ ವಿರಮಿಸಭುದಾದಂತಹ ವಿಶಾಲವಾದ ಕಟ್ಟೆ ಮಂಟಪಗಳು. ಸಾಕಷ್ಟು ಜನ ಮಧ್ಯಾಹ್ನದ ಮಹಾ ಪ್ರಸಾದದ ನಂತರ ಕೆಲ ಕಾಲ ಇಲ್ಲಿ ವಿರಮಿಸುತ್ತಾರೆ.

ಮಂತ್ರಾಲಯ ಕ್ಷೇತ್ರ:

ಮಂತ್ರಾಲಯ ಕ್ಷೇತ್ರ:

ತುಂಗಭದ್ರಾ ನದಿ ಹರಿದಿರುವ ನದಿ ಪಾತ್ರ ಭೂಮಿ. ಸಾಮಾನ್ಯವಾಗಿ ಮಳೆಗಾಲದ ಸಮಯದಲ್ಲಿ ಈ ನದಿಯು ತನ್ನ ಪೂರ್ಣ ಸ್ವರೂಪದಲ್ಲಿ ಗಂಭೀರವಾಗಿ ಹರಿಯುತ್ತದೆ.

ಮಂತ್ರಾಲಯ ಕ್ಷೇತ್ರ:

ಮಂತ್ರಾಲಯ ಕ್ಷೇತ್ರ:

ರಾಯರ ಸನ್ನಿಧಾನದಲ್ಲಿ ಹರಿದಿರುವ ತುಂಗಭದ್ರಾ ನದಿಯ ಒಂದು ನೋಟ.

ಮಂತ್ರಾಲಯ ಕ್ಷೇತ್ರ:

ಮಂತ್ರಾಲಯ ಕ್ಷೇತ್ರ:

ತುಂಗ ಭದ್ರಾ ನದಿ ತಟ ಹಾಗು ರಾಯರ ಮಠದ ಮಧ್ಯದಲ್ಲಿರುವ ಶಿವನ ದೇವಸ್ಥಾನ.

ಮಂತ್ರಾಲಯ ಕ್ಷೇತ್ರ:

ಮಂತ್ರಾಲಯ ಕ್ಷೇತ್ರ:

ಮಂತ್ರಾಲಯ ಕ್ಷೇತ್ರ ಹಾಗು ಸುತ್ತಮುತ್ತಲಿನ ಪ್ರದೇಶವು ಈ ರೀತಿಯ ಬೆಟ್ಟಗಳಿಂದ ಆವರಿಸಿದೆ.

ಮಂತ್ರಾಲಯ ಕ್ಷೇತ್ರ:

ಮಂತ್ರಾಲಯ ಕ್ಷೇತ್ರ:

ಮಂತ್ರಾಲಯವು ಕರ್ನಾಟಕದ ರಾಯಚೂರು ಪಟ್ಟಣದಿಂದ ಕೇವಲ 42 ಕಿ.ಮೀ ದೂರದಲ್ಲಿದ್ದು, ಬಸ್ಸು ಹಾಗು ರೈಲಿನ ಮುಖಾಂತರ ಸುಲಭವಾಗಿ ತಲುಪಬಹುದಾಗಿದೆ. ಆದರೆ ರೈಲಿಗೆ ಹೋಲಿಸಿದಾಗ ಬಸ್ಸಿನಲ್ಲಿ ಪಯಣಿಸುವುದು ತುಂಬ ಅನುಕೂಲಕರ. ಅಲ್ಲದೆ ಆಂಧ್ರದ ಕರ್ನೂಲ್, ಅದೋನಿ, ಕರ್ನಾಟಕದ ರಾಯಚೂರು ಹಾಗು ಬಳ್ಳಾರಿ ನಗರಗಳಿಂದ ಮಂತ್ರಾಲಯಕ್ಕೆ ನಿರಂತರವಾಗಿ ಬಸ್ಸುಗಳ ಸೌಲಭ್ಯವಿದೆ. ರೈಲಿನಲ್ಲಿ ಪ್ರಯಾಣಿಸಲು ಇಚ್ಛಿಸಿದ್ದರೆ ಗುಂತಕಲ್ - ರಾಯಚೂರು ಮಾರ್ಗದಲ್ಲಿರುವ ಮಂತ್ರಾಲಯಂ ರಸ್ತೆ ನಿಲ್ದಾಣದಲ್ಲಿ ಇಳಿಯಬೇಕು. ಇಲ್ಲಿಂದ ಮಂತ್ರಾಲಯ ಕ್ಷೇತ್ರವು ಕೇವಲ 16 ಕಿ.ಮೀ ದೂರದಲ್ಲಿದೆ.

ಚಿತ್ರಕೃಪೆ: Jpullokaran

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X