Search
  • Follow NativePlanet
Share
» »ನಕ್ಷತ್ರಾಕಾರದ ಅಪರೂಪದ ಕೋಟೆ!

ನಕ್ಷತ್ರಾಕಾರದ ಅಪರೂಪದ ಕೋಟೆ!

ಹಾಸನ ಜಿಲ್ಲೆಯ ಸಕಲೇಶಪುರದಿಂದ ಹತ್ತು ಕಿ.ಮೀ ಗಳಷ್ಟು ದೂರದಲ್ಲಿ ಸ್ಥಿತವಿರುವ ಮಂಜರಾಬಾದ್ ಕೋಟೆಯು ನಕ್ಷತ್ರಾಕಾರದಲ್ಲಿ ನಿರ್ಮಿಸಲಾದ ಆಕರ್ಷಕ ಕೋಟೆಯಾಗಿದೆ

By Vijay

ಈ ಕೋಟೆ ನಿರ್ಮಾಣವಾದ ಸಂದರ್ಭದಲ್ಲಿ ಈ ರೀತಿಯ ವಾಸ್ತುಅಶಿಲಿ ಹೊಂದಿರುವ ಕೋಟೆ ಎಲ್ಲೆಲ್ಲೂ ಇರಲಿಲ್ಲ. ಇದು ಭಾರತದಲ್ಲೆ ವಿಶಿಷ್ಟವಾಗಿ ವಿನ್ಯಾಸ ಪಡಿಸಲಾದ ಕೋಟೆಯಾಗಿ ಗಮನ ಸೆಳೆದಿತ್ತು. ಈ ಅದ್ಭುತ ಕೋಟೆ ಇರುವುದು ಕರ್ನಾಟಕ ರಾಜ್ಯದಲ್ಲಿ.

ಸಕಲೇಶಪುರದ ಸುತ್ತ ಒಂದು ಟ್ರೆಕ್!

ಹೌದು, ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಈ ಕೋಟೆಯಿದೆ. ಇಂದು ಇದು ಆಕರ್ಷಕ ಪ್ರವಾಸಿ ತಾಣವಾಗಿ ಗಮನ ಸೆಳೆಯುತ್ತದೆ. ಹಾಸನ ಜಿಲ್ಲೆಯ ಸಕಲೇಶಪುರದಿಂದ ಸುಮಾರು ಹತ್ತು ಕಿ.ಮೀ ಗಳಷ್ಟು ದೂರದಲ್ಲಿ ಈ ಕೋಟೆಯಿದೆ. ಸಮುದ್ರ ಮಟ್ಟದಿಂದ 3,241 ಅಡಿಗಳಷ್ಟು ಎತ್ತರದಲ್ಲಿ ನೆಲೆಸಿರುವ ಈ ಐತಿಹಾಸಿಕ ಅದ್ಭುತ ಪ್ರದೇಶದ ಅತ್ಯಂತ ವಿಹಂಗಮ ನೋಟವನ್ನು ಒದಗಿಸುತ್ತದೆ.

ನಕ್ಷತ್ರಾಕಾರದ ಅಪರೂಪದ ಕೋಟೆ!

ಚಿತ್ರಕೃಪೆ: Raghuvara

ಇತಿಹಾಸದಿಂದ ತಿಳಿದುಬರುವ ವಿಚಾರವೆಂದರೆ ಈ ಕೋಟೆಯ ನಿರ್ಮಾಣ 1792 ರಲ್ಲಾಗಿದ್ದು ಇದರ ನಿರ್ಮಾಣ ಮಾಡಿದ್ದು ಟಿಪ್ಪು ಸುಲ್ತಾನ. ಟಿಪ್ಪು ತನ್ನ ಅಧಿಪತ್ಯವನ್ನು ಮೈಸೂರಿನಲ್ಲಿ ಬೆಳೆಸುತ್ತಿದ್ದ ಸಂದರ್ಭದಲ್ಲಿ ಮೈಸೂರು-ಕೊಡಗು ಮಾರ್ಗವನ್ನು ಹತೋಟಿಯಲ್ಲಿಟ್ಟುಕೊಳ್ಳಲು ಬಯಸಿದ್ದ ಹಾಗೂ ಆ ಕಾರಣವಾಗಿ ಆಯಕಟ್ಟಿನ ಸ್ಥಳಗಳಲ್ಲಿ ನಿರ್ಮಾಣಗಳನ್ನು ಮಾಡಲು ಯೋಜಿಸಿದ್ದ.

ನಕ್ಷತ್ರಾಕಾರದ ಅಪರೂಪದ ಕೋಟೆ!

ಚಿತ್ರಕೃಪೆ: Raghuvara

ಆ ಸಮಯದಲ್ಲಿ ಮರಾಠರು ಹಾಗೂ ಬ್ರಿಟೀಷರು ಒಟ್ಟಾಗಿ ಟಿಪ್ಪುವಿನ ಮೇಲೆ ಯುದ್ಧ ಮಾಡಲು ಯೋಜಿಸಿದ್ದರು. ಇತ್ತ ಟಿಪ್ಪು ಫ್ರೆಂಚರ ಜೊತೆ ತನ್ನ ಸ್ನೇಹ ಬೆಳೆಸಿಕೊಂಡು ಫ್ರೆಂಚರ ಮಿಲಿಟರಿ ಸೈನ್ಯದಲ್ಲಿ ಕೋಟೆ ನಿರ್ಮಾಣ ವಾಸ್ತುಶಿಲ್ಪಿಯಾದ ಸೆಬಾಸ್ಟಿಯನ್ ಲಿ ಪ್ರೆಸ್ಟ್ರೆ ಡಿ ವೌಬನ್ ಎಂಬಾತನಿಗೆ ಈ ವಿಶಿಷ್ಟವಾದ ಕೋಟೆ ನಿರ್ಮಿಸಲು ಆಹ್ವಾನಿಸಿದ್ದ.

ನಕ್ಷತ್ರಾಕಾರದ ಅಪರೂಪದ ಕೋಟೆ!

ಚಿತ್ರಕೃಪೆ: Rvsssuman

ಅದರಂತೆ ಆ ಫ್ರೆಂಚ್ ವಾಸ್ತುಶಿಲ್ಪಿ ಈ ಅದ್ಭುತ ಕೋಟೆಯನ್ನು ನಕ್ಷತ್ರದಾಕಾರದಲ್ಲಿ ಅದ್ಭುತವಾಗಿ ವಿನ್ಯಾಸ ಮಾಡಿ ನಿರ್ಮಿಸಿದ್ದ. ಆ ಸಮಯದಲ್ಲಿ ಈ ರೀತಿಯ ಕೋಟೆ ಇದೊಂದೆ ಆಗಿತ್ತು ಹಾಗೂ ವೀಕ್ಷಣಾ ಸ್ಥಳಗಳನ್ನು ಹೊಂದಿತ್ತು. ಹೀಗಾಗಿ ಇಂದು ಇದೊಂದು ಅಪರೂಪದ ಕೋಟೆಯಾಗಿ ಪ್ರವಾಸಿಗರ ಗಮನ ಸೆಳೆಯುತ್ತದೆ.

ನಕ್ಷತ್ರಾಕಾರದ ಅಪರೂಪದ ಕೋಟೆ!

ಚಿತ್ರಕೃಪೆ: Aravind K G

ಈ ಕೋಟೆಯ ಮತ್ತೊಂದು ಗುಣಲಕ್ಷಣವೆಂದರೆ ಆಕಾಶವು ಸ್ಪಷ್ಟವಾಗಿದ್ದ ಸಂದರ್ಭದಲ್ಲಿ ಈ ಕೋಟೆಯ ಮೇಲೆ ನಿಂತು ಸೂಕ್ಷ್ಮವಾಗಿ ಗಮನಿಸಿದಾಗ ಅರಬ್ಬಿ ಸಮುದ್ರದ ನೋಟವನ್ನೂ ಸಹ ಕಾಣಬಹುದೆಂದು ಹೇಳಲಾಗುತ್ತದೆ. ಹಾಗಾಗಿ ಈ ಕೋಟೆಯು ಪ್ರವಾಸಿಗರಿಗೆ ಕುತೂಹಲವನ್ನುಂಟು ಮಾಡುತ್ತದೆ.

ನಕ್ಷತ್ರಾಕಾರದ ಅಪರೂಪದ ಕೋಟೆ!

ಚಿತ್ರಕೃಪೆ: Rvsssuman

ಈ ಕೋಟೆಯ ನಿರ್ಮಾಣದ ನಂತರ, ಟಿಪ್ಪು ಈ ಕೋಟೆಗೆ ಭೇಟಿ ನೀಡಿದ್ದಾಗ ಕೋಟೆ ತಾಣವು ಸಮ್ಪೂರ್ಣವಾಗಿ ಮಂಜಿನಲ್ಲಿ ಆವರಿಸಿದ್ದನ್ನು ಕಂಡು ಇದಕ್ಕೆ ತಾನೆ ಒಂದು ಹೆಸರು ಸೂಚಿಸಿದ್ದ. ಆ ಪದವೆ ಕನ್ನಡದ ಮಂಜು ಪದದೊಂದಿಗೆ ಸಂಬಂಧ ಹೊಂದಿದೆ. ಗೊತ್ತಾಯಿತೆ ಯಾವ ಕೋಟೆ ಇದೆಂದು?

ಹಸಿರುಪಥದಲ್ಲಿ ಟ್ರೆಕ್ಕಿಂಗ್

ಹೌದು, ಇದೆ ಮಂಜರಾಬಾದ್/ಮಂಜಿರಾಬಾದ್ ಕೋಟೆ. ಮಂಜಿರಾಬಾದ್ ತಾಲೂಕಿನಲ್ಲಿದೆ ಈ ಕೋಟೆ. ಇದೊಂದು ಅದ್ಭುತ ಪ್ರವಾಸಿ ಆಕರ್ಷಣೆಯಾಗಬಹುದಾದ ಎಲ್ಲ ಅರ್ಹತೆಗಳನ್ನು ಹೊಂದಿದೆಯಾದರೂ ಪ್ರಸ್ತುತ ಹೇಳಿಕೊಳ್ಳುವ ಯಾವ ವ್ಯವಸ್ಥೆಗಳು ಇಲ್ಲಿಲ್ಲ. ಕರ್ನಾಟಕ ಸರ್ಕಾರದಿಂದ ಮುಂದೆ ಇಲ್ಲೊಂದು ಉದ್ಯಾನವನ್ನು ನಿರ್ಮಿಸುವ ಯೋಜನೆಯೂ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X