Search
  • Follow NativePlanet
Share
» »ಮಹಾರಾಷ್ಟ್ರದ ಮಂಡಪೇಶ್ವರ ಏಕೈಕ ಶಿವನ ಗುಹೆ

ಮಹಾರಾಷ್ಟ್ರದ ಮಂಡಪೇಶ್ವರ ಏಕೈಕ ಶಿವನ ಗುಹೆ

ಗುಹೆಗಳೆಂದರೆ ಏನೊ ಒಂದು ಬಗೆಯ ವಿಸ್ಮಯ ಅಲ್ಲಿ ಎನಿರಬಹುದು ಎಂಬ ಕುತೂಹಲ ನಮ್ಮಲ್ಲಿ ಕಾಡದೇ ಇರದು. ಅಂತಹ ಗುಹೆಗಳಿಗೆ ಒಮ್ಮೆ ಭೇಟಿ ನೀಡಬೇಕು ಎಂದು ಪ್ರತಿಯೊಬ್ಬರಲ್ಲು ಸಹಜವಾಗಿರುತ್ತದೆ.ಹಲಾವಾರು ಪ್ರವಾಸಿಗರು ಮುಂಬೈನ ಸಮೀಪದಲ್ಲಿರುವ ಎಲಿಫ್ಯಾಂಟ್

ಗುಹೆಗಳೆಂದರೆ ಏನೊ ಒಂದು ಬಗೆಯ ವಿಸ್ಮಯ ಅಲ್ಲಿ ಎನಿರಬಹುದು ಎಂಬ ಕುತೂಹಲ ನಮ್ಮಲ್ಲಿ ಕಾಡದೇ ಇರದು. ಅಂತಹ ಗುಹೆಗಳಿಗೆ ಒಮ್ಮೆ ಭೇಟಿ ನೀಡಬೇಕು ಎಂದು ಪ್ರತಿಯೊಬ್ಬರಲ್ಲು ಸಹಜವಾಗಿರುತ್ತದೆ. ಅಂತಹ ಸುಂದರವಾದ ಗುಹೆಯು ಮಹಾರಾಷ್ರ್ಟದಲ್ಲಿ ಇದೆ. ಈ ಪ್ರಾಚೀನವಾದ ಗುಹೆಯ ಹೆಸರು ಮಂಡಪೇಶ್ವರ ಗುಹೆ.ಮಹಾರಾಷ್ಟ್ರದ ಪ್ರಸಿದ್ದವಾದ ಅಜಂತ, ಎಲ್ಲೊರ, ಎಲಿಫ್ಯಾಂಟ್ ಗುಹೆಗಳಂತೆ ಈ ಗುಹೆಯು ಅತ್ಯಂತ ಹೆಸರುವಾಸಿ ಗುಹೆಯಾಗಿದೆ. ಪ್ರಸ್ತುತ ಲೇಖನದಲ್ಲಿ ಮಂಡಪೇಶ್ವರ ಗುಹೆಯ ಬಗ್ಗೆ ಕುರಿತು ತಿಳಿಯೋಣ.

ಮಂಡಪೇಶ್ವರನ ಗುಹೆ

pc:Kartik Chandramouli

ಹಲಾವಾರು ಪ್ರವಾಸಿಗರು ಮುಂಬೈನ ಸಮೀಪದಲ್ಲಿರುವ ಎಲಿಫ್ಯಾಂಟ್, ಎಲ್ಲೋರ, ಅಜಂತ, ಮಹಾಕಾಳಿ ಮತ್ತು ಕಾನ್‍ಹೇರಿ ಗುಹೆಗಳಿಗೆಲ್ಲಾ ಭೇಟಿ ನೀಡಿರುತ್ತೀರಾ. ಅದರೆ ಮಂಡಪೇಶ್ವರ ಗುಹೆಯನ್ನು ಯಾರು ಅಷ್ಟಾಗಿ ಭೇಟಿ ನೀಡುವುದಿಲ್ಲ. ಈ ಸುಂದರವಾದ ಗುಹೆಯು ದಹಿಸಾರ್ ಪಟ್ಟಣ ಮತ್ತು ಬೋರಿವಾಲಿ ಪಟ್ಟಣ ಮಧ್ಯೆ ಇದ್ದು ಇವುಗಳಿಂದ ಪ್ರತ್ಯೇಕವಾಗಿದೆ. ಮಂಡಪೇಶ್ವರ ಗುಹೆಯು 1500 ರಿಂದ 1600 ವರ್ಷಗಳ ಹಿಂದಿನ ಇತಿಹಾಸ ಹೊಂದಿದೆ.

ಮಂಡಪೇಶ್ವರನ ಗುಹೆ
pc:Grv rtd490

ಈ ಗುಹೆಯು ಆಕರ್ಷಣಿಯವಾಗಿದ್ದು ಶಿವನರೂಪದಲ್ಲಿ ಮಂಡಪೇಶ್ವರ ನೆಲೆಸಿದ್ದಾನೆ. ಇದೊಂದು ಏಕೈಕ ಶಿವನ ಗುಹೆಯಾಗಿದ್ದು ಉಳಿದ ಗುಹೆಗಳೆಲ್ಲಾ ಬೌದ್ದ ಧರ್ಮದ ಬುದ್ದನಿಗೆ ಸಂಬಂಧ ಪಟ್ಟ ಗುಹೆಗಳಾಗಿವೆ. ಈ ಮಂಡಪೇಶ್ವರ ಗುಹೆಯು ದಹೀಸಾರ್ ನದಿಯ ದಂಡೆಯ ಮೇಲಿದೆ. 17 ನೇ ಶತಮಾನದಲ್ಲಿ ಈ ಗುಹೆಯನ್ನು ಮರಾಠರಿಂದ ಸುಡಲಾಯಿತು. ಇಂತಹ ಪುರಾತನವಾದ ಶಿವನ ದೇವಾಲಯದಲ್ಲಿ ಲಿಂಗ ಸ್ವರೂಪಿಯಾಗಿ ಶಿವನು ನೆಲೆಸಿದ್ದಾನೆ ಹಾಗೆಯೇ ನಂದಿ ಕೂಡ ನೆಲೆಸಿರುವುದನ್ನು ಕಾಣಬಹುದು. ಈ ಗುಹೆಯಲ್ಲಿ ಶಿವನ ನಟರಾಜ, ಸದಾಶಿವ, ಅರ್ಧನಾರೀಶ್ವರ, ಶಿವ ಪಾರ್ವತಿ ಕಲ್ಯಾಣ ಪ್ರತಿಮೆಗಳಿವೆ. ಇಷ್ಟೇ ಅಲ್ಲದೇ ಗಣೇಶ, ವಿಷ್ಣು, ಬ್ರಹ್ಮನ ವಿಗ್ರಹಗಳನ್ನು ಕಾಣಬಹುದಾಗಿದೆ.

ಮಂಡಪೇಶ್ವರನ ಗುಹೆ
pc:Grv rtd490

ಬೊರಿವಾಲಿ ಸಂಜಯ್ ಗಾಂಧಿ ನ್ಯಾಷನಲ್ ಪಾರ್ಕ್‍ನ ಬಳಿ ಇರುವ ಕಾನ್‍ಹೇರಿ ಗುಹೆಗಿಂತ ಈ ಮಂಡಪೇಶ್ವರ ಗುಹೆಯು ಅತ್ಯಂತ ಚಿಕ್ಕದಾದ ಗುಹೆಯಾಗಿದೆ. ಈ ಮಂಡಪೇಶ್ವರ ಗುಹೆಯನ್ನು ಸುಮಾರು 1500 ರಿಂದ 1600 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದು ಸಮೀಪದಲ್ಲೇ ಯೋಗೇಶ್ವರಿ ಗುಹೆಯನ್ನು ಕಾಣಬಹುದಾಗಿದೆ. ಸಾಮಾನ್ಯವಾಗಿ ಮಹಾರಾಷ್ರ್ಟದಲ್ಲಿನ ಹಲವಾರು ಗುಹೆಗಳು ಬುದ್ದನಿಗೆ ಸಂಬಂಧ ಪಟ್ಟ ಗುಹೆಗಳೇ ಹೆಚ್ಚು. ಇದಕ್ಕೆ ಕಾರಣವೆಂದರೆ ಬೌಧ್ದ ಧರ್ಮ ಪ್ರಚಾರ ಮಾಡುವುದಕ್ಕೋಸ್ಕರ ಬೌಧ್ದ ಸನ್ಯಾಸಿಗಳು ಧ್ಯಾನಕ್ಕಾಗಿ ಇಂತಹ ಗುಹೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದರು.

ಈ ಮಂಡಪೇಶ್ವರ ಗುಹೆಯು ಯುದ್ದದಿಂದ ತಮ್ಮ ಪ್ರಾಣ ರಕ್ಷಣೆಗಾಗಿ ಕೆಲವು ಸೈನಿಕರು ಬಳಸುತ್ತಿದ ಸ್ಥಳವಾಗಿದ್ದು ನಂತರ ಹಲವು ರಾಜರು ತಮ್ಮ ವಿವಿಧ ಬಳಕೆಗಾಗಿ ಈ ಗುಹೆಗಳನ್ನು ಬಳಸುತ್ತಿದ್ದರು ಎನ್ನಲಾಗಿದೆ. ಪೋರ್ಚುಗೀಸರು ಈ ಗುಹೆಯನ್ನು ಧ್ಯಾನ ಮಾಡಲು ಸೂಕ್ತ ಸ್ಥಳವೆಂದು ಈ ಗುಹಾ ಜಾಗವನ್ನು ವಶಪಡಿಸಿಕೊಂಡರು. ಹೀಗೆ ಹಲವಾರು ವರ್ಷಗಳಿಂದ ಆಶ್ರಯ ತಾಣವಾಗಿದ್ದ ಈ ಗುಹೆಯನ್ನು ಮರಾಠರ ರಾಜರ ಕಾಲಾವಧಿಯಲ್ಲಿ ಸುಟ್ಟು ನಾಶಪಡಿಸಲಾಯಿತು.

ಈ ಸ್ಥಳಕ್ಕೆ ಭೇಟಿ ನೀಡಲು ಉತ್ತಮ ಕಾಲಾವಧಿ
ಈ ಸ್ಥಳಕ್ಕೆ ಯಾವಾಗಲಾದರೂ ಭೇಟಿ ನೀಡಬಹುದಾಗಿದೆ. ವಾತಾವರಣಕ್ಕೆ ಸಂಬಂದಿಸಿದಂತೆ ಮಹಾರಾಷ್ಟ್ರದ ಅತ್ಯಂತ ಉಷ್ಣಾಂಶವಿರುವುದರಿಂದ ಬೇಸಿಗೆಯ ಕಾಲ ಅಷ್ಟು ಉತ್ತಮವಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X