Search
  • Follow NativePlanet
Share
» »ಮಹಿಷಾಸುರ ಮರ್ದಿನಿ ಗುಹಾ ದೇವಾಲಯ

ಮಹಿಷಾಸುರ ಮರ್ದಿನಿ ಗುಹಾ ದೇವಾಲಯ

By Vijay

ಗುಹೆಗಳು ಸಾಮಾನ್ಯವಾಗಿ ಕುತೂಹಲ ಮೂಡಿಸುವ ರಚನೆಗಳಾಗಿವೆ. ಪ್ರಸ್ತುತ ಜಗತ್ತಿನಲ್ಲಿ ನೈಸರ್ಗಿಕ ಹಾಗೂ ಕೃತಕವಾಗಿ ನಿರ್ಮಿಸಲಾದ ಎರಡು ರೀತಿಯ ಗುಹೆಗಳನ್ನು ಎಲ್ಲೆಡೆ ಕಾಣಬಹುದಾಗಿದೆ. ಭಾರತ ದೇಶದಲ್ಲೂ ಕೂಡ ಸಾಕಷ್ಟು ಸಂಖ್ಯೆಯಲ್ಲಿ ಗುಹೆಗಳನ್ನು ಕಾಣಬಹುದಾಗಿದೆ.

ವಿಶೇಷ ಲೇಖನಗಳು:

ವಿಸ್ಮಯಕರ ಬೊರಾ ಗುಹೆಗಳು

3 ಲಕ್ಷ ವರ್ಷ ಪುರಾತನ್ ಭೀಮ್ ಬೆಟ್ಕಾ

ಪ್ರಾಕೃತಿಕ ವಿಸ್ಮಯದ ಬೇಲಂ ಗುಹೆಗಳು

ಹಿಂದೆ ಗುಹೆಗಳು ಮಾನವನ ವಾಸಕ್ಕೆಂದು ಬಳಸಲ್ಪಡುತ್ತಿದ್ದರೆ ನಂತರದಲ್ಲಿ ಸಂರಕ್ಷಣೆಯ ರಚನೆಗಳಾಗಿಯೂ ಬಳಸಲ್ಪಟ್ಟವು. ಅಲ್ಲದೆ ಕಲ್ಲಿನಲ್ಲಿ ಗಟ್ಟಿ ಮುಟ್ಟಾಗಿ ರಕ್ಷಿಸಲ್ಪಟ್ಟಿರಲಿ ಎಂಬ ಉದ್ದೇಶದಿಂದಲೂ ಸಹ ಸಾಕಷ್ಟು ಬೌದ್ಧ ಗುಹೆಗಳು ದೇಶದ ನಾನಾ ಭಾಗಗಳಲ್ಲಿ ಕೆತ್ತಲ್ಪಟ್ಟಿರುವುದನ್ನು ನಾವು ಇತಿಹಾಸದ ಮೂಲಕ ತಿಳಿಯಬಹುದಾಗಿದೆ. ಅಷ್ಟೆ ಏಕೆ ದೇವರಿಗೆಂದೆ ಮುಡಿಪಾದ ಗುಹೆಗಳೂ ಸಹ ನಮ್ಮಲ್ಲಿ ಕಂಡುಬರುತ್ತವೆ.

ಇದೆ ರೀತಿಯಲ್ಲಿ ನಿರ್ಮಿಸಲಾದ ಒಂದು ವಿಶಿಷ್ಟವಾದ ಗುಹಾ ದೇವಾಲಯದ ಕುರಿತು ಪ್ರಸ್ತುತ ಲೇಖನದ ಮೂಲಕ ತಿಳಿಯಿರಿ. ಇದಕ್ಕೆ ಮಹಿಷಾಸುರ ಮರ್ದಿನಿ ಗುಹಾ ದೇವಾಲಯ/ಮಂಟಪ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇದು ತಮಿಳುನಾಡಿನ ಮಹಾಬಲಿಪುರಂನ ಲೈಟ್ ಹೌಸ್ ಬಳಿಯಲ್ಲಿ ಸ್ಥಿತವಿರುವ ಗುಹಾ ಸಂಕೀರ್ಣವಾಗಿದೆ. [ಅದ್ಭುತ ವರ್ಣನೆಯ ಮಹಾಬಲಿಪುರಂ]

ಮಹಿಷಾಸುರ ಮರ್ದಿನಿ ಗುಹಾ ದೇವಾಲಯ

ಚಿತ್ರಕೃಪೆ: Thamizhpparithi Maari

ರಾಷ್ಟ್ರೀಯ ಮಹತ್ವದ ಸ್ಥಾನ ಪಡೆಸಿರುವ ಈ ಗುಹಾ ಮಂಟಪವು ಮಹಾಬಲಿಪುರಂನ ಇತರೆ ದೇವಾಲಯ ರಚನೆಗಳ ಜೊತೆ ಜೊತೆಯಲ್ಲೆ ನಿರ್ಮಾಣವಾದುದಾಗಿದೆ. ಒಂದು ಹೆಬ್ಬ್ಂಡೆಯಲ್ಲಿ ಕೆತ್ತಲಾಗಿರುವ ಈ ಗುಹಾ ಮಂಟಪದ ಒಳ ಗೋಡೆಗಳ ಮೇಲೆ ನೈಪುಣ್ಯತೆಯಿಂದ ಕೂಡಿದ ವಿವಿಧ ಕೆತ್ತನೆಗಳನ್ನು ಕಾಣಬಹುದು.

ಮಹಿಷಾಸುರ ಮರ್ದಿನಿ ಗುಹಾ ದೇವಾಲಯ

ಚಿತ್ರಕೃಪೆ: Vinbhan

ಈ ಗುಹಾ ಮಂಟಪವನ್ನು ಪೂರ್ವಕ್ಕೆ ಮುಖ ಮಾಡಿ ಕೆತ್ತಲಾಗಿದ್ದು, ಮೂರು ಕೋಣೆಗಳನ್ನು ಇದರಲ್ಲಿ ಕಾಣಬಹುದಾಗಿದೆ. 32 ಅಡಿಗಳಷ್ಟು ಉದ್ದ, 15 ಅಡಿಗಳಷ್ಟು ಅಗಲ ಹಾಗೂ 12.5 ಅಡಿಗಳಷ್ಟು ಎತ್ತರವನ್ನು ಈ ಗುಹಾ ಮಂಟಪವು ಹೊಂದಿದೆ. ಹೊರ ಭಾಗವು ಕೆತ್ತಲ್ಪಟ್ಟ ಖಂಬಗಳಿಂದ ಕೂಡಿದ್ದು ನೋಡಲು ಆಕರ್ಷಕವಾಗಿ ಗೋಚರಿಸುತ್ತದೆ.

ಮಹಿಷಾಸುರ ಮರ್ದಿನಿ ಗುಹಾ ದೇವಾಲಯ

ಚಿತ್ರಕೃಪೆ: Destination8infinity

ಮಹಾಬಲಿಪುರಂನಲ್ಲಿ ಕಂಡುಬರುವ ಪ್ರಮುಖ ಗುಹೆಗಳ ಪೈಕಿ ಇದೂ ಸಹ ಒಂದಾಗಿದ್ದು, ಮಹಿಷಾಸುರ ಮರ್ದಿನಿಯಾದ ತಾಯಿ ದುರ್ಗೆಗೆ ಮುಡಿಪಾದ ದೇವಾಲಯವಾಗಿದೆ. ಒಳ ಗೋಡೆಗಳಲ್ಲಿ ಮಹಿಷಾಸುರನ ಜೊತೆ ದುರ್ಗೆಯು ಯುದ್ಧ ಮಾಡುತ್ತಿರುವ ಪ್ರಸಂಗದ ಕೆತ್ತನೆಯನ್ನು ಕಾಣಬಹುದಾಗಿದೆ. ಇದು ಗುಹೆಯ ಉತ್ತರ ದಿಕ್ಕಿನ ಗೋಡೆಯಲ್ಲಿ ಕಂಡುಬರುತ್ತದೆ.

ಮಹಿಷಾಸುರ ಮರ್ದಿನಿ ಗುಹಾ ದೇವಾಲಯ

ಚಿತ್ರಕೃಪೆ: Hariharanmg

ಅಲ್ಲದೆ ವಿಷ್ಣು ಅನಂತಶಯನಾಗಿ ವಿಶ್ರಮಿಸುತ್ತಿರುವುದು/ಮಲಗಿರುವುದನ್ನು ಸಹ ಕೆತ್ತನೆಯಲ್ಲಿ ಕಾಣಬಹುದಾಗಿದೆ. ಈ ಕೆತ್ತನೆಯು ಗುಹೆಯ ದಕ್ಷಿಣ ದಿಕ್ಕಿನ ಗೋಡೆಯಲ್ಲಿ ಕಂಡುಬರುತ್ತದೆ. ಪ್ರವಾಸಿ ದೃಷ್ಟಿಯಿಂದ ಮಹತ್ವ ಪಡೆದಿರುವ ಈ ಗುಹಾ ದೇವಾಲಯಕ್ಕೆ ಸಾಕಷ್ಟು ಜನ ಪ್ರವಾಸಿಗರು ಭೇಟಿ ನೀಡುತ್ತಾರೆ.

ಮಹಿಷಾಸುರ ಮರ್ದಿನಿ ಗುಹಾ ದೇವಾಲಯ

ಚಿತ್ರಕೃಪೆ: Jenith

ಮಹಾಬಲಿಪುರಂನ ಇತರೆ ವಿಶ್ವ ಪಾರಂಪರಿಕ ತಾಣಗಳ ಜೊತೆ ಕಂಡುಬರುವ ಈ ರಚನೆಯು ಕೋರಮಂಡಲ್ ಕರಾವಳಿ ತೀರದ ಬೆಟ್ಟದ ತುದಿಯೊಂದರ ಮೇಲೆ ನಿರ್ಮಿತವಾದ ಗುಹಾ ಮಂಟಪವಾಗಿದೆ. ಪ್ರಸ್ತುತ ಕಾಂಚೀಪುರಂ ಜಿಲ್ಲೆಗೆ ಒಳಪಡುವ ಇದು ರಾಜಧಾನಿ ಚೆನ್ನೈ ನಗರದಿಂದ ಕೇವಲ 58 ಕಿ.ಮೀ ಗಳಷ್ಟು ದೂರದಲ್ಲಿದೆ. ಇಲ್ಲಿಗೆ ತಾಲುಪಲು ಚೆನ್ನೈನಿಂದ ಸಾಕಷ್ಟು ಬಸ್ಸುಗಳು ಬಾಡಿಗೆ ಕಾರುಗಳು ದೊರೆಯುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X