Search
  • Follow NativePlanet
Share
» »ಮಹಾಬಲಿಪುರಂ : ಬೀಚಲ್ಲೊಂದು ವಿಶಿಷ್ಟ ದೇವಾಲಯ

ಮಹಾಬಲಿಪುರಂ : ಬೀಚಲ್ಲೊಂದು ವಿಶಿಷ್ಟ ದೇವಾಲಯ

By Vijay

ಭರ ಭರನೆ ಉಕ್ಕಿ ನೊರೆಯ ಹಾಲಿನಂತೆ ಅಪ್ಪಳಿಸುವ ರಭಸದ ನೀರಿನ ಅಲೆಗಳು ಒಂದೆಡೆಯಾದರೆ; ಏಕಶಿಲೆಗಳಲ್ಲೆ ಕೆತ್ತಲಾದ, ವಿಶಿಷ್ಟವಾದ ಅಪರೂಪದ ರಚನೆಗಳು ಮತ್ತೊಂದೆಡೆ. ಎಲ್ಲಿಂದೆಲ್ಲಿಯ ಹೋಲಿಕೆ ಇದು ಎಂತೆನಿಸಿದರೂ ಒಂದು ರೀತಿಯ ಪ್ರಕೃತಿ ಹಾಗೂ ಮಾನವಕಲೆ ಸಮ್ಮಿಳಿತವಾಗಿರುವ ವಿಶಿಷ್ಟವಾದ ಸ್ಥಳವಾಗಿ ಕಂಗೊಳಿಸುತ್ತದೆ ಮಹಾಬಲಿಪುರಂ.

ಮಾಮಲ್ಲಪುರಂ ಎಂತಲೂ ಕರೆಯಲ್ಪಡುವ ಈ ತೀರ ಪಟ್ಟಣ ತಮಿಳುನಾಡು ರಾಜ್ಯದ ಕಾಂಚೀಪುರಂ ಜಿಲ್ಲೆಯಲ್ಲಿದೆ. ಚೆನ್ನೈ ನಗರದ ದಕ್ಷಿಣಕ್ಕೆ ಕೇವಲ 60 ಕಿ.ಮೀ ಗಳಷ್ಟು ದೂರದಲ್ಲಿರುವ ಈ ಪಟ್ಟಣ ಐತಿಹಾಸಿಕ ಪ್ರಸಿದ್ಧ ಪಟ್ಟಣವಾಗಿದ್ದು ಅನನ್ಯ ಏಕಶಿಲಾ ಕೆತ್ತನೆಯ ರಚನೆಗಳಿಗೆ ಪ್ರಖ್ಯಾತಿ ಗಳಿಸಿದೆ.

ಮಹಾಬಲಿಪುರಂ ಕಡಲ ತಡಿಯ ದೇಗುಲದಿಂದ ಹಿಡಿದು ಗುಹೆ, ರಥ, ಮಂಟಪಗಳಂತಹ ವಿಶಿಷ್ಟ ಸ್ಮಾರಕಗಳು ಅನನ್ಯವಾಗಿ ಕೆತ್ತಲ್ಪಟ್ಟಿದ್ದು, ಭೇಟಿ ನೀಡುವ ಪ್ರವಾಸಿಗರಿಗೆ ವಿಶಿಷ್ಟ ಅನುಭೂತಿ ಕರುಣಿಸುವಲ್ಲಿ ಸಫಲವಾಗಿವೆ. ಅಷ್ಟೆ ಏಕೆ ಮಹಾಬಲಿಪುರಂ ಸ್ಮಾರಕಗಳ ಸಮೂಹವು ಯುನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣದ ಮಾನ್ಯತೆಯನ್ನೂ ಸಹ ಪಡೆದಿವೆ.

ಹಾಗಾದರೆ ಬನ್ನಿ ಮಹಾಬಲಿಪುರಂ ಪಟ್ಟಣವನ್ನು ನಾವೊಮ್ಮೆ ಈ ಲೇಖನದ ಮೂಲಕ ಸುತ್ತೋಣ.

ಮಹಾಬಲಿಪುರಂ:

ಮಹಾಬಲಿಪುರಂ:

ಚೆನ್ನೈಗೆ ಭೇಟಿ ನೀಡಿದ್ದರೆ, ಸಮಯಾವಕಾಶವಿದ್ದರೆ ಮಹಾಬಲಿಪುರಂಗೆ ಹೋಗಲು ಮರೆಯದಿರಿ. ತಮಿಳುನಾಡು ಸರ್ಕಾರದ ಬಸ್ಸುಗಳು ಹಾಗೂ ಖಾಸಗಿ ವಲಯದ ಐಷಾರಾಮಿ ಬಸ್ಸುಗಳು ಸಾಕಷ್ಟು ಸಂಖ್ಯೆಯಲ್ಲಿ ಮಹಾಬಲಿಪುರಂಗೆ ತೆರಳಲು ದೊರೆಯುತ್ತವೆ.

ಚಿತ್ರಕೃಪೆ: Owen Young

ಮಹಾಬಲಿಪುರಂ:

ಮಹಾಬಲಿಪುರಂ:

ಮಹಾಬಲಿಪುರಂ ಸಮುದ್ರ ಮಟ್ಟದಿಂದ ಸರಾಸರಿ 40 ಅಡಿಗಳಷ್ಟು ಎತ್ತರದಲ್ಲಿ ನೆಲೆಸಿದೆ. ಮೂಲತಃ ಏಳನೇಯ ಶತಮಾನದಲ್ಲಿ ದಕ್ಷಿಣ ಭಾರತದಲ್ಲಿದ್ದ ಪಲ್ಲವರ ಸಾಮ್ರಾಜ್ಯದ ಬಂದರು ನಗರಿಯಾಗಿ ಈ ಪಟ್ಟಣ ಕಾರ್ಯ ನಿರ್ವಹಿಸುತ್ತಿತ್ತು.

ಚಿತ್ರಕೃಪೆ: Simply CVR

ಮಹಾಬಲಿಪುರಂ:

ಮಹಾಬಲಿಪುರಂ:

ಇಲ್ಲಿ ನಡೆಸಲಾದ ಉತ್ಖನನದಲ್ಲಿ ಸಾಕಷ್ಟು ಐತಿಹಾಸಿಕ ಮಹತ್ವವುಳ್ಳ, ಅತಿ ಪುರಾತನ ಕಾಲಮಾನದ ಹಲವಾರು ಪರಿಕರಗಳು ದೊರೆತಿರುವುದು, ಇದರ ಶ್ರೀಮಂತಿಕೆಯ ಕುರಿತು ಹೇಳಬಹುದಾದ ಸಂಗತಿಯಾಗಿದೆ.

ಚಿತ್ರಕೃಪೆ: Alexander Pfeiffenberger

ಮಹಾಬಲಿಪುರಂ:

ಮಹಾಬಲಿಪುರಂ:

ಅಷ್ಟೆ ಅಲ್ಲ, ನಾಲ್ಕನೇಯ ಶತಮಾನದ ಚೈನಾ ಹಾಗೂ ರೋಮನ್ ಸಾಮ್ರಾಜ್ಯಗಳ ನಾಣ್ಯ್ಗಳು ದೊರೆತಿದ್ದು, ಇದು ಅಂದಿನ ಶಾಸ್ತ್ರೀಯ ಕಾಲದಲ್ಲೆ ವ್ಯಾಪಾರ - ವಹಿವಾಟುವಿನ ಚಟುವಟಿಕೆಯುಕ್ತ ಪಟ್ಟಣವಾಗಿತ್ತೆಂದು ಪುಷ್ಟಿಕರಿಸುತ್ತದೆ.

ಚಿತ್ರಕೃಪೆ: Senthil Kumar

ಮಹಾಬಲಿಪುರಂ:

ಮಹಾಬಲಿಪುರಂ:

ಪಲ್ಲವರು ಮೂರನೇಯ ಶತಮಾನದಿಂದ ಒಂಬತ್ತನೇಯ ಶತಮಾನದವರೆಗೆ ಮಾಮಲ್ಲಪುರಂ ಆಳಿದ್ದಾರೆ. ಇಲ್ಲಿನ ಸ್ಮಾರಕಗಳು ಕಲ್ಲಿನಲ್ಲಿ ಕೆತ್ತಲ್ಪಟ್ಟ ವಾಸ್ತುಶೈಲಿಗೆ ಉತ್ತಮ ಉದಾಹರಣೆಗಳಾಗಿದ್ದು ಖಂಡಿತವಾಗಿಯೂ ಭೇಟಿ ಯೋಗ್ಯ ರಚನೆಗಳಾಗಿವೆ.

ಚಿತ್ರಕೃಪೆ: J'ram DJ

ಮಹಾಬಲಿಪುರಂ:

ಮಹಾಬಲಿಪುರಂ:

"ಬ್ಯಾಲೆನ್ಸಿಂಗ್ ರಾಕ್" ಅಥವಾ ಸಮತೋಲನದ ಕಲ್ಲು ಅಚ್ಚರಿಭರಿತ ಪ್ರಾಕೃತಿಕ ವಿಸ್ಮಯವಾಗಿದೆ. ಕೊಂಚ ಇಳಿಜಾರಿನಲ್ಲಿದ್ದರೂ ಬೃಹದಾಕಾರದ ಕಲ್ಲು ಉರುಳದೆ ಹಾಗೆ ನಿಂತಿರುವುದು ಪ್ರಕೃತಿಯ ಸೋಜಿಗವೆ ಸರಿ.

ಚಿತ್ರಕೃಪೆ: Nigel's Europe & beyond

ಮಹಾಬಲಿಪುರಂ:

ಮಹಾಬಲಿಪುರಂ:

ಇಲ್ಲಿ ನೋಡಬಹುದಾದ ಕೆಲವು ರಚನೆಗಳ ಪೈಕಿ ತಿರುಕಡಲ್‍ಮಲ್ಲೈ ದೇವಸ್ಥಾನವೂ ಒಂದು. ವಿಷ್ಣು ದೇವರಿಗೆ ಮುಡಿಪಾದ ಈ ದೇವಸ್ಥಾನವು 108 ದಿವ್ಯ ದೇಶಂಗಳ ಪೈಕಿ ಒಂದಾಗಿದೆ. ದಂತಕಥೆಯ ಪ್ರಕಾರ, ಪ್ರದೇಶದ ಉಳಿದ ಶಿಲ್ಪ ಕಲೆಯನ್ನು ರಕ್ಷಿಸುವ ದೃಷ್ಟಿಯಿಂದ ಪಲ್ಲವ ದೊರೆ ಈ ದೇಗುಲದ ನಿರ್ಮಾಣ ಮಾಡಿದ. ಅದರಂತೆ ಈ ದೇಗುಲ ನಿರ್ಮಾಣದ ನಂತರ ಸಮುದ್ರದಿಂದ ಇತರೆ ಯಾವುದೆ ರಚನೆಗಳು ಹಾನಿಗೊಳಗಾಗಲಿಲ್ಲ.

ಚಿತ್ರಕೃಪೆ: J'ram DJ

ಮಹಾಬಲಿಪುರಂ:

ಮಹಾಬಲಿಪುರಂ:

ಗಂಗಾ ಮೂಲ / ಅರ್ಜುನನ ತಪಸ್ಸು: ಇದೊಂದು ಮತ್ತೊಂದು ಆಕರ್ಷಕ ರಚನೆಯಾಗಿದೆ. 96*43 ಅಡಿ ಅಳತೆ ಹೊಂದಿರುವ ಈ ರಚನೆಯು ಎರಡು ಬಂಡೆಗಳಲ್ಲಿ ಕೆತ್ತಲಾಗಿದೆ. ಉಬ್ಬುಗಳ ಈ ಶಿಲ್ಪಕಲೆಯು ಆಕರ್ಷಕವಾಗಿದ್ದು, ಅರ್ಜುನ ತಪಸ್ಸು ಮಾಡುತ್ತಿರುವ ಪ್ರಸಂಗ ಹಾಗೂ ಗಂಗಾ ನದಿಯ ಮೂಲವನ್ನು ಪ್ರಚುರಪಡಿಸುತ್ತದೆ.

ಚಿತ್ರಕೃಪೆ: Jean-Pierre Dalbéra

ಮಹಾಬಲಿಪುರಂ:

ಮಹಾಬಲಿಪುರಂ:

ವರಾಹ ಗುಹಾ ದೇವಾಲಯ: ಬಂಡೆಯಲ್ಲಿ ಕೆತ್ತಲಾದ ವರಾಹಸ್ವಾಮಿಗೆ ಮುಡಿಪಾದ ಅತ್ಯಾಕರ್ಷಕ ಗುಹಾ ದೇವಾಲಯ ಇದಾಗಿದೆ.

ಚಿತ್ರಕೃಪೆ: Vsundar

ಮಹಾಬಲಿಪುರಂ:

ಮಹಾಬಲಿಪುರಂ:

ಕಡಲ ತೀರದ ದೇಗುಲ: ಬಂಗಾಳ ಕೊಲ್ಲಿ ಸಮುದ್ರವನ್ನು ಎದುರಾಭಿಮುಖವಾಗಿ ನೋಡುತ್ತಿರುವ ಈ ದೇಗುಲವು "ಶೋರ್ ಟೆಂಪಲ್" / ದಂಡೆಯ ದೇಗುಲ ಎಂದೆ ಪ್ರಸಿದ್ಧಿ ಪಡೆದಿದೆ. ಹಿಂದೆ ಸಮುದ್ರ ಸಂಚಾರದ ಸಮಯದಲ್ಲಿ ನಾವಿಕರಿಗೆ ಈ ದೇಗುಲ ಸ್ಪಷ್ಟವಾಗಿ ಕಾಣುತ್ತಿತ್ತು ಹಾಗೂ ಅವರು ಇದನ್ನು "ಸೆವೆನ್ ಪಗೋಡಾ" ಎಮ್ದು ಕರೆಯುತ್ತಿದ್ದರು. ಪಗೋಡಾ ಎಂದರೆ ಗೋಪುರ ಎಂದರ್ಥ.

ಚಿತ್ರಕೃಪೆ: J'ram DJ

ಮಹಾಬಲಿಪುರಂ:

ಮಹಾಬಲಿಪುರಂ:

ಪಂಚರಥಗಳು: ಯುಧಿಷ್ಟರ, ಭೀಮ, ಅರ್ಜುನ, ನಕುಲ, ಸಹದೇವ ಹಾಗೂ ದ್ರೌಪದಿ ಹೀಗೆ ಪಾಂಡವರಿಗೆ ಮುಡಿಪಾದ ಐದು ರಥಗಳನ್ನು ಕೆತ್ತಲಾಗಿದ್ದು, ಅದ್ಭುತವಾದ ಕೆತ್ತನೆಗೆ ಮೈಮನಗಳು ಪುಳಕಿತಗೊಳ್ಳದೆ ಇರಲಾರವು. ಮತ್ತೊಂದು ಸಂಗತಿಯೆಂದರೆ ಈ ಐದೂ ರಥಗಳು ಒಂದೆ ಬೃಹತ್ ಬಂಡೆಯಿಂದ ಕೆತ್ತಲ್ಪಟ್ಟಿದ್ದರೂ ಸಹ ಒಂದಕ್ಕೊಂದು ಜೋಡಿಸಲ್ಪಟ್ಟದೆ ಇರುವುದು.

ಚಿತ್ರಕೃಪೆ: Venu62

ಮಹಾಬಲಿಪುರಂ:

ಮಹಾಬಲಿಪುರಂ:

1894 ರಲ್ಲಿ ನಿರ್ಮಿಸಲ್ಪಟ್ಟ ದೀಪ ಗೋಪುರ ಅಥವಾ ಲೈಟ್ ಹೌಸ್ ಮಹಾಬಲಿಪುರಂನ ಮತ್ತೊಂದು ಸೊಗಸಾದ ಆಕರ್ಷಣೆಯಾಗಿದೆ.

ಚಿತ್ರಕೃಪೆ: Liji Jinaraj

ಮಹಾಬಲಿಪುರಂ:

ಮಹಾಬಲಿಪುರಂ:

ಸಮುದ್ರ ತೀರದಲ್ಲಿ ಸಾಕಷ್ಟು ಆಹಾರ ಖಾದ್ಯಗಳು, ಕುರುಕಲು ತಿಂಡಿಗಳು ದೊರೆಯುವುದರಿಂದ ಆನಂದದಿಂದ ತಿಂಡಿಗಳನ್ನು ಸವಿಯುತ್ತ, ಬೇಕಿದ್ದರೆ ಸಮುದ್ರದಲ್ಲಿ ಆಟವಾಡುತ್ತ ಉತ್ತಮವಾದ ಸಮಯವನ್ನು ನಿಮ್ಮವರೊಂದಿಗೆ ಕಳೆಯಬಹುದು.

ಚಿತ್ರಕೃಪೆ: Nigel's Europe & beyond

ಮಹಾಬಲಿಪುರಂ:

ಮಹಾಬಲಿಪುರಂ:

ಮಹಾಬಲಿಪುರಂ ಪಟ್ಟಣದೆಡೆ ಹೊರಡಲು ಮನ ಸೆಳೆಸುವಂತಹ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: Vikas Rana

ಮಹಾಬಲಿಪುರಂ:

ಮಹಾಬಲಿಪುರಂ:

ಮಹಾಬಲಿಪುರಂ ಪಟ್ಟಣದೆಡೆ ಹೊರಡಲು ಮನ ಸೆಳೆಸುವಂತಹ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: Ishan Manjrekar

ಮಹಾಬಲಿಪುರಂ:

ಮಹಾಬಲಿಪುರಂ:

ಮಹಾಬಲಿಪುರಂ ಪಟ್ಟಣದೆಡೆ ಹೊರಡಲು ಮನ ಸೆಳೆಸುವಂತಹ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: Arian Zwegers

ಮಹಾಬಲಿಪುರಂ:

ಮಹಾಬಲಿಪುರಂ:

ಮಹಾಬಲಿಪುರಂ ಪಟ್ಟಣದೆಡೆ ಹೊರಡಲು ಮನ ಸೆಳೆಸುವಂತಹ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: dev2r

ಮಹಾಬಲಿಪುರಂ:

ಮಹಾಬಲಿಪುರಂ:

ಮಹಾಬಲಿಪುರಂ ಪಟ್ಟಣದೆಡೆ ಹೊರಡಲು ಮನ ಸೆಳೆಸುವಂತಹ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: Liji Jinaraj

ಮಹಾಬಲಿಪುರಂ:

ಮಹಾಬಲಿಪುರಂ:

ಮಹಾಬಲಿಪುರಂ ಪಟ್ಟಣದೆಡೆ ಹೊರಡಲು ಮನ ಸೆಳೆಸುವಂತಹ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: Liji Jinaraj

ಮಹಾಬಲಿಪುರಂ:

ಮಹಾಬಲಿಪುರಂ:

ಮಹಾಬಲಿಪುರಂ ಪಟ್ಟಣದೆಡೆ ಹೊರಡಲು ಮನ ಸೆಳೆಸುವಂತಹ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: Liji Jinaraj

ಮಹಾಬಲಿಪುರಂ:

ಮಹಾಬಲಿಪುರಂ:

ಮಹಾಬಲಿಪುರಂ ಪಟ್ಟಣದೆಡೆ ಹೊರಡಲು ಮನ ಸೆಳೆಸುವಂತಹ ಕೆಲವು ಸುಂದರ ಚಿತ್ರಗಳು. ಚಿತ್ರದಲ್ಲಿರುವುದು ಮಹಾಬಲಿಪುರಂನಲ್ಲಿರುವ ತಿರುಕಡಲ್‍ಮಲ್ಲೈ ದೇವಸ್ಥಾನ.

ಚಿತ್ರಕೃಪೆ: Fernando Saiz

ಮಹಾಬಲಿಪುರಂ:

ಮಹಾಬಲಿಪುರಂ:

ಮಹಾಬಲಿಪುರಂ ಪಟ್ಟಣದೆಡೆ ಹೊರಡಲು ಮನ ಸೆಳೆಸುವಂತಹ ಕೆಲವು ಸುಂದರ ಚಿತ್ರಗಳು. ಸಮುದ್ರದಲ್ಲಿ ಆನಂದಿಸುತ್ತಿರುವ ಪ್ರವಾಸಿಗರು.

ಚಿತ್ರಕೃಪೆ: Ajay Tallam

ಮಹಾಬಲಿಪುರಂ:

ಮಹಾಬಲಿಪುರಂ:

ಮಹಾಬಲಿಪುರಂ ಪಟ್ಟಣದೆಡೆ ಹೊರಡಲು ಮನ ಸೆಳೆಸುವಂತಹ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: Ashwin Kumar

ಮಹಾಬಲಿಪುರಂ:

ಮಹಾಬಲಿಪುರಂ:

ಮಹಾಬಲಿಪುರಂ ಪಟ್ಟಣದೆಡೆ ಹೊರಡಲು ಮನ ಸೆಳೆಸುವಂತಹ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: mountainamoeba

ಮಹಾಬಲಿಪುರಂ:

ಮಹಾಬಲಿಪುರಂ:

ಮಹಾಬಲಿಪುರಂ ಪಟ್ಟಣದೆಡೆ ಹೊರಡಲು ಮನ ಸೆಳೆಸುವಂತಹ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: Simply CVR

ಮಹಾಬಲಿಪುರಂ:

ಮಹಾಬಲಿಪುರಂ:

ಮಹಾಬಲಿಪುರಂ ಪಟ್ಟಣದೆಡೆ ಹೊರಡಲು ಮನ ಸೆಳೆಸುವಂತಹ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: Girish Gopi

ಮಹಾಬಲಿಪುರಂ:

ಮಹಾಬಲಿಪುರಂ:

ಮಹಾಬಲಿಪುರಂ ಪಟ್ಟಣದೆಡೆ ಹೊರಡಲು ಮನ ಸೆಳೆಸುವಂತಹ ಕೆಲವು ಸುಂದರ ಚಿತ್ರಗಳು. ಮಹಾಬಲಿಪುರಂನಲ್ಲಿರುವ ಟೆಂಪಲ್ ಬೇ ಎನ್ನುವ ಸುಮಧುರವಾದ ರಿಸಾರ್ಟು.

ಚಿತ್ರಕೃಪೆ: Raj

ಮಹಾಬಲಿಪುರಂ:

ಮಹಾಬಲಿಪುರಂ:

ಮಹಾಬಲಿಪುರಂ ಪಟ್ಟಣದೆಡೆ ಹೊರಡಲು ಮನ ಸೆಳೆಸುವಂತಹ ಕೆಲವು ಸುಂದರ ಚಿತ್ರಗಳು. ಮಹಾಬಲಿಪುರಂನಲ್ಲೊಂದು ಚಿತ್ರೀಕರಣ.

ಚಿತ್ರಕೃಪೆ: Giles Clark

ಮಹಾಬಲಿಪುರಂ:

ಮಹಾಬಲಿಪುರಂ:

ಮಹಾಬಲಿಪುರಂ ಪಟ್ಟಣದೆಡೆ ಹೊರಡಲು ಮನ ಸೆಳೆಸುವಂತಹ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: Koshy Koshy

ಮಹಾಬಲಿಪುರಂ:

ಮಹಾಬಲಿಪುರಂ:

ಮಹಾಬಲಿಪುರಂ ಪಟ್ಟಣದೆಡೆ ಹೊರಡಲು ಮನ ಸೆಳೆಸುವಂತಹ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: Simply CVR

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X