ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ಭಕ್ತರಿಗೆ ಬಂಗಾರವನ್ನು ಪ್ರಸಾದವಾಗಿ ನೀಡುವ ದೇವಾಲಯ - ರತ್ಲಾಂ ಮಹಾಲಕ್ಷ್ಮೀ ದೇವಾಲಯ

Written by:
Published: Saturday, August 12, 2017, 11:49 [IST]
Share this on your social network:
   Facebook Twitter Google+ Pin it  Comments

ಎತ್ತರವಾದ ಪರ್ವತ ಶ್ರೇಣಿಗಳು, ದಟ್ಟವಾದ ಹಚ್ಚ ಹಸಿರಿನ ಅರಣ್ಯಗಳು, ಜುಳು ಜುಳು ಹರಿಯುತ್ತಿರುವ ತೊರೆಗಳು, ಪಕ್ಷಿಗಳ ಚಿಲಿಪಿಲಿ ಶಬ್ಧ ಇವೆಲ್ಲವೂ ಪ್ರಕೃತಿಯಲ್ಲಿನ ವಿವಿಧ ಮನೋಹರವಾದ ದೃಶ್ಯಗಳನ್ನು ನಾವು ಕಾಣಬಹುದು. ವಿಂಧ್ಯಾ, ಸಾತ್ಪುರಾ ಪರ್ವತ ಶ್ರೇಣಿಗಳ ಮಧ್ಯೆ ನರ್ಮದ, ತಪತಿ ನದಿಗಳು ಸಮನಾಂತರವಾಗಿ ಪ್ರವಹಿಸುತ್ತಿರುತ್ತದೆ. ಇಲ್ಲಿ ವೈವಿಧ್ಯಮಯವಾದ ವೃಕ್ಷಗಳು, ಪ್ರಾಣಿ ಸಂಕುಲಗಳು, ಪ್ರಾಕೃತಿಕ ಸೌಂದರ್ಯ ಇವೆಲ್ಲವೂ ಮಧ್ಯ ಪ್ರದೇಶದಲ್ಲಿನ ಪ್ರವಾಸವನ್ನು ಮತ್ತಷ್ಟು ಹಿಮ್ಮಡಿಗೊಳಿಸುತ್ತದೆ.

ಇಂಥಹ ಸುಂದರವಾಗಿರುವ ಮಧ್ಯೆ ಪ್ರಧೇಶದಲ್ಲಿ ಒಂದು ವಿಚಿತ್ರವೆನಿಸುವ ಹಾಗು ಆಶ್ಚರ್ಯವೆನಿಸುವ ದೇವಾಲಯವಿದೆ. ಅದೇ ರತ್ಲಾಂ ಮಹಾಲಕ್ಷ್ಮೀ ದೇವಾಲಯ. ಸಾಮಾನ್ಯವಾಗಿ ದೇವಾಲಯದಲ್ಲಿ ಒಂದು ಸ್ಫೂನ್ ಅಷ್ಟು ಪ್ರಸಾದ ನೀಡಿ ಜೈ ಎನ್ನುತ್ತಾರೆ. ಆದರೆ ಈ ದೇವಾಲಯದಲ್ಲಿ ಚಿನ್ನವನ್ನೇ ಪ್ರಸಾದವಾಗಿ ನೀಡುತ್ತಾರಂತೆ. ಹಾಗಾದರೆ ಆ ದೇವಾಲಯದ ಬಗ್ಗೆ ತಿಳಿದು ನೀವು ಒಮ್ಮೆ ಭೇಟಿ ನೀಡಿ..........

ದೇವಾಲಯ ಎಲ್ಲಿದೆ?

ಈ ಆಶ್ಚರ್ಯಕರವಾದ ದೇವಾಲಯ ಮಧ್ಯ ಪ್ರದೇಶ ರಾಜ್ಯದಲ್ಲಿದೆ. ಈಗಾಗಲೇ ರತ್ನ ಹಾಗು ಬಂಗಾರಕ್ಕೆ ಪ್ರಸಿದ್ಧಿ ಗಳಿಸಿದೆ ಎಂದು ಹಲವಾರು ಮಂದಿಗೆ ಈ ರತ್ಲಾಂ ಮಹಾಲಕ್ಷ್ಮೀ ದೇವಾಲಯದ ಬಗ್ಗೆ ತಿಳಿದಿರಬಹುದು.

ಅತಿ ಹೆಚ್ಚು ಕೊಡುಗೆಗಳು

ಅತ್ಯಂತ ಸಂಪತ್ತು ಭರಿತವಾದ ಈ ದೇವಾಲಯದಲ್ಲಿ ಪ್ರತಿ ದಿನ ಅತಿ ಹೆಚ್ಚು ಕೊಡುಗೆಗಳನ್ನು ನೀಡುತ್ತಿರುತ್ತಾರೆ.

ಗರ್ಭಗುಡಿಯಲ್ಲಿನ ದೇವತೆಯ ಅಲಂಕಾರ

ಹೆಸರಿಗೆ ತಕ್ಕ ಹಾಗೆಯೇ ಗರ್ಭಗುಡಿಯಲ್ಲಿ ನೆಲೆಸಿರುವ ರತ್ಲಾಂ ಮಹಾಲಕ್ಷ್ಮೀ ತಾಯಿಗೆ ಸುಮಾರು 100 ಕೋಟಿ ಬೆಲೆಬಾಳುವ ನೋಟುಗಳ ಮಾಲೆ ಮತ್ತು ಬಂಗಾರ ಅಭರಣಗಳಿಂದ ಶೃಂಗರಿಸುತ್ತಾರೆ.

ಭಕ್ತರಿಗೆ ಪ್ರಸಾದ ಏನು ಗೊತ್ತ?

ದೇವಾಲಯದಲ್ಲಿ ವಿರಳವಾಗಿ ಬಂಗಾರ, ಬೆಳ್ಳಿ ಹೆಚ್ಚಾಗಿರುತ್ತದೆ. ಹೀಗೆ ಕೊಡುಗೆಯಾಗಿ ಪಡೆದ ಬಂಗಾರ ಮತ್ತು ಬೆಳ್ಳಿಯನ್ನು ಭಕ್ತರಿಗೆ ಪ್ರಸಾದವಾಗಿ ನೀಡುತ್ತಾರೆ.

ದೊಡ್ಡ ಸಂಖ್ಯೆಯಲ್ಲಿ ಭಕ್ತರು

ಈ ಪ್ರಸಾದವನ್ನು ಪಡೆಯಲು ದೇಶದ ಮೂಲೆ ಮೂಲೆಗಳಿಂದ ದೊಡ್ಡ ಸಂಖ್ಯೆಯಲ್ಲಿ ದೇವಾಲಯಕ್ಕೆ ಭಕ್ತರು ಭೇಟಿ ನೀಡುತ್ತಾರೆ.

ಲಕ್ಷ ಸಂಖ್ಯೆಯ ಭಕ್ತರು

ಮುಖ್ಯವಾಗಿ ಪ್ರತಿ ದೀಪಾವಳಿ ಹಬ್ಬದ ಸಂದರ್ಭಗಳಲ್ಲಿ 3 ದಿನಗಳವರೆಗೆ ನಡೆಯುವ ಉತ್ಸವಗಳಲ್ಲಿ ಭಕ್ತರು ಲಕ್ಷ ಲಕ್ಷ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ.

ರತ್ಲಾಂ ಮಹಾಲಕ್ಷ್ಮೀ ದೇವಾಲಯ

ಎಲ್ಲರಿಗೂ ಇಲ್ಲ ಅನ್ನದ ಹಾಗೆ ಬಂಗಾರವನ್ನು ಪ್ರಸಾದವಾಗಿ ನೀಡಿ ಕಳುಹಿಸುತ್ತಾರಂತೆ ಈ ರತ್ಲಾಂ ಮಹಾಲಕ್ಷ್ಮೀ ದೇವಾಲಯದಲ್ಲಿ.

ರತ್ಲಾಂ ಮಹಾಲಕ್ಷ್ಮೀ ದೇವಾಲಯ

ಸಾವಿರಾರು ಕಿ.ಮೀ ದೂರದಿಂದ ಭೇಟಿ ನೀಡುವ ಈ ದೇವಾಲಯಕ್ಕೆ ಇಲ್ಲಿ ನೀಡುವ ಪ್ರಸಾದವನ್ನು ಅತ್ಯಂತ ಪವಿತ್ರವಾದುದು ಎಂದು ಭಾವಿಸಲಾಗುತ್ತದೆ.

ರತ್ಲಾಂ ಮಹಾಲಕ್ಷ್ಮೀ ದೇವಾಲಯ

ರತ್ಲಾಂ ಮಹಾಲಕ್ಷ್ಮೀ ದೇವಾಲಯದಲ್ಲಿ ನೀಡುವ ಬಂಗಾರದ ಪ್ರಸಾದ ಮನೆಯಲ್ಲಿ ಇದ್ದರೆ ಆ ಮಹಾ ಲಕ್ಷ್ಮೀಯೇ ಮನೆಯಲ್ಲಿ ಇದ್ದಹಾಗೆ ಎಂದು ಭಾವಿಸುತ್ತಾರೆ.

ರತ್ಲಾಂ ಮಹಾಲಕ್ಷ್ಮೀ ದೇವಾಲಯ

ಈ ರತ್ಲಾಂ ಮಹಾಲಕ್ಷ್ಮೀ ದೇವಾಲಯವು ಸಮುದ್ರ ಮಟ್ಟದಿಂದ ಸುಮಾರು 400 ಕಿ.ಮೀ ಎತ್ತರದಲ್ಲಿರುವ ರತ್ಲಾಂ ಮಾಳ್ವಾ ಪ್ರದೇಶದಲ್ಲಿ ಇದೆ.

ರತ್ಲಾಂ ಮಹಾಲಕ್ಷ್ಮೀ ದೇವಾಲಯ

ಮಧ್ಯ ಪ್ರದೇಶದಲ್ಲಿನ ರತ್ಲಾಂ ಜಿಲ್ಲೆ ಪ್ರಧಾನವಾದ ಕೇಂದ್ರ ಪ್ರಾಂತ್ಯವಾಗಿದೆ.

ರತ್ಲಾಂ ಮಹಾಲಕ್ಷ್ಮೀ ದೇವಾಲಯ

ಮಹಾಲಕ್ಷ್ಮೀ ದೇವಿಯ ದೇವಾಲಯದ ಜೊತೆಗೆ ಇಲ್ಲಿ ಇನ್ನೂ ಹಲವಾರು ಸುಂದರವಾದ ದೇವಾಲಯಗಳನ್ನು ಕಾಣಬಹುದಾಗಿದೆ.

ರತ್ಲಾಂ ಮಹಾಲಕ್ಷ್ಮೀ ದೇವಾಲಯ

ಅಲ್ಲಿ ಹಲವಾರು ದೇವಾಲಯಗಳಿದ್ದರೂ ಕೂಡ ಭಕ್ತರಿಗೆ ಬೆಳ್ಳಿ, ಬಂಗಾರವನ್ನು ಪ್ರಸಾದವಾಗಿ ನೀಡುವ ದೇವಾಲಯ ಮಾತ್ರ ರತ್ಲಾಂ ಮಹಾಲಕ್ಷ್ಮೀ ದೇವಾಲಯವೇ..

ರತ್ಲಾಂ ಮಹಾಲಕ್ಷ್ಮೀ ದೇವಾಲಯ

ಕೇವಲ ರತ್ಲಾಂ ಮಹಾಲಕ್ಷ್ಮೀ ದೇವಾಲಯದ ಮಾತ್ರ ಚಿನ್ನ, ಬೆಳ್ಳಿಯನ್ನು ಪ್ರಸಾದವಾಗಿ ನೀಡುತ್ತಾರೆ. ಬದಲಾಗಿ ಇಂಥಹ ಪ್ರತ್ಯೇಕವಾದ ಪ್ರಸಾದವನ್ನು ನೀಡುವ ದೇವಾಲಯ ಬೇರೆ ಎಲ್ಲೂ ನೀವು ಕಾಣಲು ಸಾಧ್ಯವಿಲ್ಲ.

ಅಹಿಲ್ಯ ಕೋಟೆ

ಈ ಕೋಟೆಯನ್ನು 18 ನೇ ಶತಮಾನದಲ್ಲಿ ನರ್ಮದ ನದಿ ತೀರದಲ್ಲಿ ನಿರ್ಮಿಸಲಾಗಿದೆ. ಇದು ಮಧ್ಯ ಪ್ರದೇಶದ ಮಹೇಶ್ವರದಲ್ಲಿನ ಒಂದು ಅದ್ಭುತವಾದ ಪ್ರವಾಸಿ ತಾಣವಾಗಿದೆ.

ಭತೃಹರಿ ಗುಹೆಗಳು, ಉಜ್ಜಯಿನಿ

ಭತೃಹರಿ ಗುಹೆಗಳು ಮಧ್ಯ ಪ್ರದೇಶ ರಾಜ್ಯದಲ್ಲಿ ಪ್ರಮುಖ ಪ್ರವಾಸಿ ಪ್ರದೇಶಗಳಲ್ಲಿ ಒಂದಾಗಿದೆ. ಇದು ಉಜ್ಜಯಿನಿ ಪುರಾತನ ಪಟ್ಟಣಕ್ಕೆ ಹೆಚ್ಚು ಸಮೀಪದಲ್ಲಿದೆ.

ಅನ್ನಪೂರ್ಣ ದೇವಾಲಯ, ಇಂಡೋರ್

ಅದ್ಭುತವಾದ ಅನ್ನಪೂರ್ಣ ದೇವಾಲಯವು ಇಂಡೋರ್‍ನಲ್ಲಿದೆ. ಇಲ್ಲಿ ಆನೇಕ ಕಾರಣದಿಂದಾಗಿ ಈ ದೇವಾಲಯವು ಪ್ರಸಿದ್ಧಿಯನ್ನು ಪಡೆದಿದೆ. 9 ನೇ ಶತಮಾನದಲ್ಲಿ ನಿರ್ಮಾಣ ಮಾಡಿರುವ ಈ ದೇವಾಲಯವನ್ನು ಇಂಡೊ ಆರ್ಯನ್ ಮತ್ತು ದ್ರಾವಿಡ ನಿರ್ಮಾಣ ಶೈಲಿಯಲ್ಲಿದೆ.

ಲಕ್ಷ್ಮೀ ದೇವಾಲಯ, ಖಜುರಾಹೋ

ಖಜುರಾಹೋದಲ್ಲಿನ ಲಕ್ಷ್ಮೀ ದೇವಾಲಯವು ಚಿಕ್ಕದಾಗಿದ್ದು, ಈ ಲಕ್ಷ್ಮೀ ದೇವಾಲಯ ಸಂಪತ್ತಿಗೆ, ಶ್ರೇಯಸ್ಸಿಗೆ ಅಂಕಿತವಾದ ದೇವಾಲಯವಾಗಿದೆ. ಈ ದೇವಾಲಯವನ್ನು ಕ್ರಿ.ಶ 900-925 ರಲ್ಲಿ ನಿರ್ಮಾಣ ಮಾಡಲಾಗಿರುವ ದೇವಾಲಯವಾಗಿದೆ.

ಹೇಗೆ ಸಾಗಬೇಕು?

ಈ ಮಾಹಿಮಾನ್ವಿತವಾದ ದೇವಾಲಯಕ್ಕೆ ತಲುಪಲು ಬೆಂಗಳೂರಿನಿಂದ ರೈಲ್ವೆ ಮೂಲಕ ಔರಂಗಬಾದ್‍ಗೆ ತಲುಪಿ. ಅಲ್ಲಿಂದ ಸುಮಾರು 1 ದಿನ, 2 ಗಂಟೆಗಳ ಕಾಲ ಪ್ರಯಾಣ ಮಾಡಬೇಕಾಗುತ್ತದೆ. ಕಾರಿನಲ್ಲಿ ಸುಮಾರು 19 ಗಂಟೆಗಳ ಕಾಲ ಪ್ರಯಾಣಿಸಬೇಕಾಗುತ್ತದೆ.

English summary

Madhya Pradesh Rathlam Mahalakshmi Temple

The high mountain ranges, dense green forests, the flowing streams and the chirping of the birds can all be seen in the picturesque scenery of nature. Between the Vindhya and the Satpura Range, the Narmada and Tapti rivers flow in parallel. Various species of animals, wildlife, and natural beauty all over the tour in Madhya Pradesh.
Please Wait while comments are loading...