Search
  • Follow NativePlanet
Share
» »ಭಾರತದ 5 ಐಷಾರಾಮಿ ರೆಸ್ಟೋರೆಂಟ್‍ಗಳು

ಭಾರತದ 5 ಐಷಾರಾಮಿ ರೆಸ್ಟೋರೆಂಟ್‍ಗಳು

By Sowmyabhai

ತಿಂಗಳಿಗೊಮ್ಮೆಯಾದರೂ ಯಾವುದಾದರೂ ಒಳ್ಳೆ ಐಷಾರಾಮಿ ರೆಸ್ಟೋರೆಂಟ್‍ಗೆ ಹೋಗಿ ತಮಗೆ ಇಷ್ಟವಾದ ಪಾಶ್ಚಿಮಾತ್ಯ ಅಥವಾ ದೇಶಿಯ ಆಹಾರಗಳನ್ನು ತಿಂದು ಒಂದೆರಡು ದಿನ ಹಾಯಾಗಿ ಕಾಳಕಳೆಯಬೇಕು ಎಂಬುದು ಸಾಮಾನ್ಯವಾಗಿ ಪ್ರತಿಯೊಬ್ಬರ ಮನದಾಸೆಯಾಗಿರುತ್ತದೆ. ಆದರೆ ನಾವು ಭೇಟಿ ನೀಡುವ ಸ್ಥಳವು ಸಕಲ ಸೌಕರ್ಯಯುತವಾಗಿರಬೇಕು, ಒಳ್ಳೆ ಆಹಾರಗಳು ದೊರೆಯುವಂತೆ ಇರಬೇಕು, ಸ್ವಿಂಮ್ಮಿಗ್ ಪೂಲ್‍ಗಳು, ಟಿ.ವಿ, ಬೃಹತ್ ಕೋಣೆಯನ್ನು ಹೊಂದಿರಬೇಕು ಎಂಬೆಲ್ಲಾ ಸೌಲಭ್ಯಗಳ ಹೋಟೆಲ್‍ಗಳನ್ನು ಹುಡುಕುತ್ತಿದ್ದರೆ ಈ ಲೇಖನದಲ್ಲಿ ತಿಳಿಸುವ ಹೋಟೆಲ್‍ಗಳಿಗೊಮ್ಮೆ ಭೇಟಿ ನೀಡಿ.

Famous Hotels

pc:Daniel Villafruela

ತಾಜ್‍ಲೇಕ್ ಪ್ಯಾಲೆಸ್

ತಾಜ್‍ಲೇಕ್ ಪ್ಯಾಲೆಸ್ ಒಂದು ಅತ್ಯುತ್ತಮವಾದ ರೆಸ್ಟೋರೆಂಟ್ ಆಗಿದೆ. ಈ ರೆಸ್ಟೋರೆಂಟ್ ರಾಜಸ್ಥಾನದ ಉದಯ್‍ಪುರದ ಸರೋವರದ ಮಧ್ಯೆ ನೆಲೆಸಿದೆ. ಇಲ್ಲಿ ಸಾಟಿಯಿಲ್ಲದ ಅತಿಥ್ಯ, ಕಂಡುಕೇಳರಿಯದ ಸೇವೆಗಳನ್ನು ಈ ಪ್ಯಾಲೆಸನಲ್ಲಿ ನೀವು ಆನಂದಿಸಬಹುದು. ಇಲ್ಲಿ ಒಟ್ಟು 66 ರೂಮ್‍ಗಳಿವೆ ಹಾಗೂ 17 ವಿಶೇಷ ಆಥುನಿಕ ಸಕಲ ಸೌಲಭ್ಯಯುತ ಕೊಠಡಿಗಳಿವೆ. ಅವುಗಳೆಂದರೆ ಎಲ್,ಸಿ,ಡಿ ಟಿ.ವಿ, ಎಲೆಕ್ಟ್ರಾಣಿಕ್ ಸೆಫ್, ಮಿನಿ ಬಾರ್, ಕಾಫಿ ಮೇಕರ್, ಮತ್ತು ಒಳ್ಳೆ ವಾಷ್‍ರೂಮ್‍ಗಳಾಗಿವೆ. ಈ ತಾಜ್‍ಲೇಕ್ ಪ್ಯಾಲೆಸ್ ಸರೋವರದಿಂದ ಅವೃತಗೊಂಡಿರುವುದರಿಂದ ಇಲ್ಲಿ ಬರುವ ಪ್ರವಾಸಿಗರು ಬೋಟಿಂಗ್ ಮಾಡಲು ಇಷ್ಟಪಡುತ್ತಾರೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಪಾಶ್ವಿಮಾತ್ಯ ಹಾಗೂ ದೇಶಿಯ ಆಹಾರ ಕೂಡ ಈ ತಾಜ್‍ಲೇಕ್‍ನಲ್ಲಿ ದೊರೆಯುತ್ತದೆ.

Famous Hotels

pc:James Attree

ಲೀಲಾ ಪ್ಯಾಲೆಸ್
ತಾಜ್ ಪ್ಯಾಲೆಸ್‍ನಂತೆ ಈ ರೆಸ್ಟೋರೆಂಟ್ ಕೂಡ ಪ್ರಸಿದ್ದವಾದುದು. ಇಲ್ಲಿಗೆ ಬರುವ ಅತಿಥಿಗಳಿಗೆ ಎಂದೂ ಮರೆಯಲಾರದ ಅತಿಥ್ಯ ನೀಡುತ್ತಾರೆ. ಈ ಲೀಲಾ ಪ್ಯಾಲೆಸ್ ರಾಜಸ್ಥಾನದ ಉದಯ್‍ಪುರದಲ್ಲಿದೆ. ಈ ಪ್ಯಾಲೆಸ್‍ನಲ್ಲಿ ಒಟ್ಟು 80 ಕೊಠಡಿಗಳಿವೆ. ಈ ಪ್ಯಾಲೆಸ್ ಹೊಳೆಯುತ್ತಿರುವ ರತ್ನಗಂಬಳಿಯ ಮೇಲೆ ಪ್ರವಾಸಿಗರನ್ನು ಬರಮಾಡಿಕೊಳ್ಳುತ್ತಾರೆ. ಇಲ್ಲಿ ಬರುವ ಪ್ರವಾಸಿಗರಿಗೆ ರಾಜಸ್ಥಾನದ ಸಂಸ್ಕ್ರತಿ ಹಾಗೂ ಸೊಬಗನ್ನು ಈ ಲೀಲಾ ಪ್ಯಾಲೆಸ್‍ನಲ್ಲಿ ಕಣ್ಣಾರೆಕಂಡು, ಮಾನಸಾರೆ ಉಂಡು ಆನಂದಿಸಬಹುದಾದ ತಾಣವಾಗಿದೆ.

Famous Hotels

pc:GAURAV MARWAHA

ಒಬೆರಾಯ್ ಅಮರ್ ವಿಲಾಸ್
ಈ ವಿಲಾಸವು ಆಗ್ರಾದ ಅಗ್ರಗಣ್ಯವಾದ ರೆಸಾರ್ಟ್ ಆಗಿದೆ. ಒಬೆರಾಯ್ ಒಂದು ವ್ಯವಸ್ಥಿತವಾದ, ಸೊಗಸಾದ ಕೊಠಡಿಗಳು, ಹಚ್ಚಹಸಿರಾದ ಪ್ರಾಕೃತಿಕ ಸೊಬಗು ಹೊಂದಿರುವ ಈ ವಿಲಾಸ್ ನಿಂದ ತಾಜ್ ಮಹಲ್‍ಗೆ ತಲುಪಲು ಬೇಕಾದ ಅವಧಿ 600 ಮೀ. ಈ ವಿಲಾಸದ ಒಳಗೆ ರಾಜ ಮಹಲ್‍ನಂತೆ ಅಲಂಕೃತವಾಗಿ ಇದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಸ್ಪ ಟ್ರೀಟ್‍ಮೆಂಟ್ , ಯೋಗ ಕ್ಲಾಸ್‍ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

Famous Hotels

pc:Gaurav raka

ಉಮಾಯಿದ್ ಭವನ್ ಪ್ಯಾಲೆಸ್

ಈ ಪ್ಯಾಲೆಸ್‍ನ್ನು ಹೆಚ್,ಹೆಚ್ ಮಹಾರಾಜ್ ಉಮಾಯಿದ್ ಸಿಂಗ್ ಜೀ ಯವರು 1928 ರಿಂದ 1943 ರರಲ್ಲಿ ಜೋಧಪುರ್‍ನಲ್ಲಿ ಸ್ಥಾಪಿಸಿದರು. ಈ ಪ್ಯಾಲೆಸ್‍ನ ಸ್ವಾಗತ ದ್ವಾರದಲ್ಲಿರುವ ಹಚ್ಚ ಹಸಿರಿನ ಸೌಂದರ್ಯ, ಪ್ರಾಚೀನ ಯುಗ ಸಂಗ್ರಹದ ಪ್ರದರ್ಶನವು ಬರುವ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಈ ಪ್ಯಾಲೆಸ್‍ನಿಂದ ಕೇವಲ 4 ಕಿ,ಮೀ ದೂರದಲ್ಲಿ ಪ್ರಸಿದ್ದ ಪ್ರವಾಸಿತಾಣವಾದ ಜಸ್‍ವಂತ್ ತಾಡಾ, ಮೆಹರಂಗರ್ ಕೋಟೆ ಇನ್ನು ಹಲವಾರು ತಾಣಗಲಿವೆ. ಇಲ್ಲಿಗೆ ಬರುವ ಪ್ರವಾಸಿಗರನ್ನು ಸಾಂಪ್ರದಾಯಿಕವಾದ ಸ್ಪ ಹಾಗೂ ಸೌಂದರ್ಯ ಚಿಕಿತ್ಸೆಗೆ ಪ್ರೋತ್ಸಹವನ್ನು ನೀಡಲಾಗುತ್ತದೆ. ಪ್ಯಾಲೆಸ್‍ನಲ್ಲಿ ಯೋಗ ಸೆಂಟರ್, ಫಿಟ್‍ನೆಸ್ ಕ್ಲಬ್ ಮತ್ತು ಟೆನ್ನಿಸ್ ಕೋರ್ಟ್‍ಗಳನ್ನು ಹೊಂದಿದೆ. ಪ್ರವಾಸಿಗರಿಗೆ ರಾಜಸ್ಥಾನಿ ಹಾಗೂ ವಿವಿಧ ಬಗೆಯ ಸವಿರುಚಿಯ ಭೋಜನಗಳು ದೊರೆಯುತ್ತದೆ.

Famous Hotels

pc:Ian Brown

ಪಾಲ್ ರೆಸ್ಟೋರೆಂಟ್
ಈ ಪಾಲ್ ರೆಸ್ಟೋರೆಂಟ್ ಇರುವುದು ಬೆಂಗಳೂರಿನಲ್ಲಿ. ಈ ಪಾಲ್‍ನಲ್ಲಿ ಐಷಾರಾಮಿ ಪರಿಸರ, ಸ್ಪ ಟ್ರಿಟ್‍ಮೆಂಟ್, ಉತ್ತಮ ಅತಿಥ್ಯ ನೀಡಲಾಗುತ್ತದೆ. ಈ ಪಾಲ್ ರೆಸ್ಟೋರೆಂಟ್ ಬೆಂಗಳೂರಿನ ಪ್ರಸಿದ್ದವಾದ ಹೋಟೆಲ್‍ಆಗಿದೆ. ಈ ಹೋಟೆಲ್‍ಗೆ ತೆರಳಲು ರೈಲ್ವೆ ಸ್ಟೇಷನ್‍ನಿಂದ ಕೇವಲ 4 ಕಿ,ಮೀ ಹಾಗೂ ಬೆಂಗಳೂರು ಅಂತರರಾಷ್ಟೀಯ ವಿಮಾನ ನಿಲ್ದಾಣದಿಂದ ಕೇವಲ 28 ಕಿ,ಮೀ ಅಂತರದಲ್ಲಿದೆ. ಇಲ್ಲಿಗೆ ಬರುವ ಪ್ರವಾಸಿಗರು ಯೋಗ ಸೆಂಟರ್, ಫಿಟ್‍ನೆಸ್ ಕ್ಲಬ್ ಮತ್ತು ಸ್ವಿಂಮಿಂಗ್ ಪೂಲ್‍ಗಳಿಗೂ ವ್ಯವಸ್ಥೆ ಇದೆ. ಇಷ್ಟೇ ಅಲ್ಲದೇ ಹಲವಾರು ಬಗೆಯ ಭೋಜನಗಳನ್ನು ಒದಗಿಸುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X