ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ಮಹಾರಾಷ್ಟ್ರದ ಅದ್ಭುತ ಜಲಪಾತಗಳು

Written by:
Published: Tuesday, May 19, 2015, 13:02 [IST]
Share this on your social network:
   Facebook Twitter Google+ Pin it  Comments

ಮಧ್ಯ ಭಾರತದ ಪಶ್ಚಿಮದೆಡೆ ಸ್ಥಿತವಿರುವ ಮಹಾರಾಷ್ಟ್ರ ರಜ್ಯವು ದೇಶದ ಪ್ರಮುಖ ರಾಜ್ಯಗಳ ಪೈಕಿ ಒಂದಾಗಿದ್ದು ಹಲವಾರು ಪ್ರವಾಸಿ ವಿಶೇಷತೆಗಳಿಗೆ ಹೆಸರುವಾಸಿಯಾದಂತಹ ರಾಜ್ಯ. ಕಡಲ ತೀರದಿಂದ ಹಿಡಿದು ದಟ್ಟ ಕಾಡುಗಳವರೆಗೆ, ಉಸಿರುಗಟ್ಟಿ ಹಿಡಿದುಕೊಳ್ಳುವ ಬೆಟ್ಟಗುಡ್ಡಗಳಿಂದ ಹಿಡಿದು ನಯನ ಮನೋಹರವಾದ ಜಲಪಾತಗಳವರೆಗೆ ಹಲವು ಆಕರ್ಷಣೆಗಳನ್ನು ಇಲ್ಲಿ ಕಾಣಬಹುದಾಗಿದೆ. ಪ್ರಸ್ತುತ ಲೇಖನವು ಮಹಾರಾಷ್ಟ್ರದ ಕೆಲ ಸುಂದರ ಜಲಪಾತಗಳ ಕುರಿತು ತಿಳಿಸುತ್ತದೆ.

ಬುಕ್ಕಿಂಗ್‍ಖಜಾನಾದಿಂದ ಹೋಟೆಲ್ ಬುಕ್ಕಿಂಗ್ ಮೇಲೆ 50% ಕಡಿತ ಪಡೆಯಿರಿ

ಸಾಮಾನ್ಯವಾಗಿ ಜಲಪಾತಗಳು ಖುಶಿ ನೀಡುವ ತಾಣಗಳು, ಶಾಂತವಾಗಿ ಹರಿಯುವಂತೆ ಗೋಚರಿಸುವ ನದಿಯು ತನ್ನಲ್ಲಡಗಿರುವ ಅದ್ಭುತ ಶಕ್ತಿಯನ್ನು ತೋರಿಸಲು ಇರುವ ವೇದಿಕೆಗಳು, ಜಲಪಾತದ ತೀವ್ರತೆ ಹೆಚ್ಚಿದ್ದಷ್ಟೂ ಹೆಚ್ಚಿನ ಜಲ ವಿದ್ಯುತ್ ಉತ್ಪಾದಿಸಬಹುದೆಂದು ವಿಜ್ಞಾನಕ್ಕೆ ಸಾರಿ ಹೇಳುವ ಉಪದೇಶಕಗಳು.

ವಿಶೇಷ ಲೇಖನ : ಮಹಾರಾಷ್ಟ್ರದ ಅತ್ಯದ್ಭುತ ಗಿರಿಧಾಮಗಳು

ಸತ್ಯಾಂಶಗಳು ಏನೆ ಇರಲಿ, ಒಟ್ಟಿನಲ್ಲಿ ಹೇಳಬೇಕೆಂದರೆ ಜಲಪಾತಗಳು ಯಾವಾಗಲಿದ್ದರೂ ತಮ್ಮ ವೈಭವ, ವಯ್ಯಾರದಿಂದ ಪ್ರವಾಸಿಗನನ್ನು ಸದಾ ಆಕರ್ಷಿಸುತ್ತಲೆ ಇರುತ್ತವೆ, ಅದರಲ್ಲೂ ವಿಶೇಷವಾಗಿ ಮಳೆಗಾಲದ ಸಂದರ್ಭಗಳಲ್ಲಂತೂ ವಿವಿಧ್ಡೆಗಳಿರುವ ಜಲಪಾತಗಳಿಗೆ ಬೇಡಿಕೆ ದಿಢೀರ್ ಆಗಿ ಹೆಚ್ಚಾಗುತ್ತದೆ.

ಮಹಾರಾಷ್ಟ್ರದ ಸಮಗ್ರ ಪ್ರವಾಸಿ ಸ್ಥಳಗಳು

ಮುಂಬರಲಿರುವ ಮಳೆಗಾಲದಲ್ಲಿ ನಿಮಗೂ ಸಹ ವಿಶೇಷವಾಗಿ ಮಹಾರಾಷ್ಟ್ರದ ಜಲಪಾತಗಳನ್ನು ನೋಡುವ ಬಯಕೆಯಿದ್ದರೆ, ಈ ಲೇಖನ ಓದಿ ಹಾಗೂ ನಿಮಗನುಕೂಲವೆನಿಸುವಂತಹ ತಾಣಕ್ಕೆ ತೆರಳಿ ಜಲಪಾತ ನೋಡಿ ಹಾಯಾಗಿ ಸಮಯ ಕಳೆಯಿರಿ.

ಮಹಾರಾಷ್ಟ್ರದ ಜಲಪಾತಗಳು:

ತೋಶೆಘರ್ ಜಲಪಾತ : ಇದರ ಒಟ್ಟು ಎತ್ತರ 1150 ಅಡಿಗಳು. ಸತಾರಾ ಪಟ್ಟಣದಿಂದ 36 ಕಿ.ಮೀ ದೂರದಲ್ಲಿರುವ ತೋಶೆಘರ್ ಎಂಬಲ್ಲಿ ಈ ಅದ್ಭುತ ಜಲಪಾತವಿದೆ. ಜಲಪಾತದ ಅದ್ಭುತ ನೋಟವನ್ನು ಚಲ್ಕೇವಾಡಿ ಎಂಬಲ್ಲಿಗೆ ತೆರಳಿ ಅಲ್ಲಿಂದ ಕೆಳಗೆ ಸುಮಾರು ಐದು ಕಿ.ಮೀ ಗಳಷ್ಟು ದೂರವನ್ನು ಕ್ರಮಿಸುವುದರ ಮೂಲಕ ಪಡೆಯಬಹುದು.

ಚಿತ್ರಕೃಪೆ: VikasHegde

 

ಮಹಾರಾಷ್ಟ್ರದ ಜಲಪಾತಗಳು:

ತೋರಣ ಜಲಪಾತ : ಪ್ರಚಂಡ ಕೋಟೆ ಎಂದೂ ಸಹ ಕರೆಯಲ್ಪಡುವ ತೋರಣ ಕೋಟೆಯ ಬಳಿ ಈ ಸುಂದರ ಜಲಪಾತವು ಸ್ಥಿತವಿದೆ. ಇದು ಪುಣೆ ಜಿಲ್ಲೆಯಲ್ಲಿದ್ದು ಪುಣೆ ನಗರದಿಂದ ನೈರುತ್ಯಕ್ಕೆ ಸುಮಾರು 70 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: rohit gowaikar

 

ಮಹಾರಾಷ್ಟ್ರದ ಜಲಪಾತಗಳು:

ಮಹಾರಾಷ್ಟ್ರದಲ್ಲಿರುವ ಯಾವಾಗಲೂ ಭೇಟಿ ನೀಡಬಹುದಾದ ಸುಂದರ ಹಚ್ಚ ಹಸಿರಿನಿ ಗಿರಿಧಾಮ ಲೋಣಾವಲಾ. ಇಲ್ಲಿ ಸಾಕಷ್ಟು ಪ್ರಕೃತಿ ಸೌಂದರ್ಯದಿಂದ ಕೂಡಿರುವ ಪ್ರೇಕ್ಷಣೀಯ ಸ್ಥಳಗಳನ್ನು ನೋಡಬಹುದು. ಅವುಗಳಲ್ಲೊಂದಾಗಿದೆ ಲಿರಿಲ್ ಪಾಯಿಂಟ್ ಎಂದು ಕರೆಯುವ ಸಣ್ಣ ಜಲಪಾತವೂ ಒಂದು.

ಚಿತ್ರಕೃಪೆ: MGA73bot2

 

ಮಹಾರಾಷ್ಟ್ರದ ಜಲಪಾತಗಳು:

ಧಬೋಸಾ ಜಲಪಾತ : ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಜವ್ಹಾರ್ ಪಟ್ಟಣದ ಬಳಿ ಸ್ಥಿತವಿದೆ ಈ ಜಲಪಾತ.ಜವ್ಹಾರ್- ತಲಸಾರಿ - ಸಿಲ್ವಾಸಾ ರಸ್ತೆಯಿಂದ ಕೇವಲ 18 ಕಿ.ಮೀ ಗಳಷ್ಟು ದೂರದಲ್ಲಿ ಧಬ ಧಬನೆ ಧರೆಗುರುಳುವ ಈ ಜಲಪಾತವನ್ನು ಕಾಣಬಹುದು.

ಚಿತ್ರಕೃಪೆ: Ajaygabhale

 

ಮಹಾರಾಷ್ಟ್ರದ ಜಲಪಾತಗಳು:

ಬಾಣೇಶ್ವರ ಜಲಪಾತ : ಇದೊಂದು ಅತಿ ಚಿಕ್ಕದಾದ ಜಲಧಾರೆಯಾಗಿದ್ದು ಜಲಪಾತವೆನ್ನುವಕ್ಕಿಂತಲೂ ಭವ್ಯವಾಗಿ ಹರಿಯುವ ಜಲಪಾತದಂತೆ ಆಭಾಸ ನೀಡುವ ಜಲಧಾರೆಯಾಗಿದೆ. ಪುಣೆ ಜಿಲ್ಲೆಯ ನಸರಾಪುರ ಎಂಬಲ್ಲಿ ಈ ಜಲಪಾತವಿದ್ದು ಇಲ್ಲಿರುವ ಬಾಣೇಶ್ವರ ಶಿವ ದೇವಾಲಯದಿಂದಾಗಿ ಇದಕ್ಕೆ ಈ ಹೆಸರು ಬಂದಿದೆ.

ಚಿತ್ರಕೃಪೆ: Troykrish

 

ಮಹಾರಾಷ್ಟ್ರದ ಜಲಪಾತಗಳು:

ಕೆಲ ಜಲಪಾತಗಳು ಮಳೆಗಾಲದ ಸಮ್ದರ್ಭದಲ್ಲಿ ಮಾತ್ರ ರೂಪ ತಳೆದು ಪ್ರವಾಸಿಗರನ್ನು ಎಲ್ಲೆಡೆಯಿಂದ ಆಕರ್ಷಿಸುತ್ತವೆ. ಅಂತಹ ಪಟ್ಟಿಯಲ್ಲೆ ಸೇರಿಸಬಹುದಾದ ಒಜಾರ್ಡಾ ಜಲಪಾತವನ್ನು ಕೊಯ್ನಾ ಜಲಾಶಯದ ಬಳಿ ಕಾಣಬಹುದಾಗಿದೆ. ಕೊಯ್ನಾ ಜಲಾಶಯದಿಂದ ಹತ್ತು ಕಿ.ಮೀ ದೂರವಿರುವ ನವಜಾ ಹಳ್ಳಿಯ ಬಳಿ ಈ ಜಲಪಾತವು ಭವ್ಯವಾಗಿ ಮಳೆಗಾಲದ ಸಂದರ್ಭದಲ್ಲಿ ಒಡಮೂಡಿ ಸುತ್ತಮುತ್ತಲಿನ ಪ್ರದೇಶಗಳಿಂದ ಸಾಕಷ್ಟು ಜನರನ್ನು ತನ್ನೆಡೆ ಆಕರ್ಷಿಸುತ್ತದೆ.

ಚಿತ್ರಕೃಪೆ: Ameymodak

 

ಮಹಾರಾಷ್ಟ್ರದ ಜಲಪಾತಗಳು:

ಸಿಂಧುದುರ್ಗ ಜಿಲ್ಲೆಯ ವೈಭವವಾಡಿ ತಾಲೂಕಿನ ನಪ್ನೆ ಹಳ್ಳಿಯಲ್ಲಿರುವ ಈ ಅದ್ಭುತ ಜಲಪಾತವು ಕೊಂಕಣ ಭಾಗದ ಮಳೆಗಾಲದ ಜಲಪಾತಗಳಂತಿರದೆ ವರ್ಷದ ಎಲ್ಲ ಸಮಯದಲ್ಲೂ ಕಾಣಬಹುದಾದ ಜಲಪಾತವಾಗಿದೆ. ನಪ್ನೆ ಎಂಬ ಹೆಸರಿನಿಂದಲೆ ಈ ಜಲಪಾತವನ್ನು ಕರೆಯಲಾಗುತ್ತದೆ.

ಚಿತ್ರಕೃಪೆ: कोल्हापुरी

 

ಮಹಾರಾಷ್ಟ್ರದ ಜಲಪಾತಗಳು:

ಮುಂಬೈ ಸಬರ್ಬ್ ರೈಲಿನ ಕರ್ಜಾತ್-ಖೊಪೋಲಿ ಮಾರ್ಗದ ಜನಪ್ರೀಯ ಜಂಕ್ಷನ್ ಹಾಗೂ ಪಿಕ್ನಿಕ್ ಸ್ಥಳವಾಗಿರುವ ಪಲಸ್ದಾರಿಯು ತನ್ನ ಸುಂದರ ಜಲಪಾತದಿಂದಾಗಿ ಹೆಸರುವಾಸಿಯಾಗಿದೆ. ವಾರಾಂತ್ಯದ ರಜೆಗಳಲ್ಲಿ ಭೇಟಿ ನೀಡಬಹುದಾದ ಸುಂದರ ತಾಣ ಇದಾಗಿದೆ.

ಚಿತ್ರಕೃಪೆ: Shivashree

 

ಮಹಾರಾಷ್ಟ್ರದ ಜಲಪಾತಗಳು:

ಭಂಡಾರಧಾರಾ (ರಾಂಧಾ) ಜಲಪಾತ : ಪ್ರವಾಸಿ ವಿಶೇಷತೆಯುಳ್ಳ ಹಳ್ಳಿಯಾಗಿರುವ ಭಂಡಾರಧಾರಾವು ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ಪಶ್ಚಿಮ ಘಟ್ಟಗಳಲ್ಲಿ ನೆಲೆಸಿದೆ. ಇಲ್ಲಿರುವ ರಾಂಧಾ ಜಲಪಾತವು ಧರೆಗುರುಳುವ ರೀತಿ ನೋಡುಗರನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಮತ್ತೊಂದು ವಿಷಯವೆಂದರೆ ಮಳೆಗಾಲದ ಸಂದರ್ಭದಲ್ಲಿ ಮಾತ್ರವೆ ಇದರ ಅಂದ ಚೆಂದ ಇಮ್ಮಡಿಗೊಳ್ಳುತ್ತದೆ.

ಚಿತ್ರಕೃಪೆ: Shimjithsr

 

ಮಹಾರಾಷ್ಟ್ರದ ಜಲಪಾತಗಳು:

ರಾಮತೀರ್ಥ ಜಲಪಾತ : ಸಿಂಧುದುರ್ಗ ಜಿಲ್ಲೆಯ ಪಶ್ಚಿಮ ಘಟ್ಟಗಳಲ್ಲಿ ಉಗಮಗೊಳ್ಳುವ ಹಿರಣ್ಯಕೇಶಿ ನದಿಯಿಂದ ರೂಪಗೊಳ್ಳುವ ಈ ಜಲಪಾತವು ಕೋಲ್ಹಾಪುರ ಜಿಲ್ಲೆಯ ಅಜ್ರಾ ಪಟ್ಟಣದ ಬಳಿ ಸ್ಥಿತವಿದೆ. ನದಿಯು ಅಜ್ರಾ ತಲುಪುವ ಎರಡು ಕಿ.ಮೀ ಮುಂಚೆ ಐದು ಮೀ ಗಳಷ್ಟು ಎತ್ತರದ ಬಂಡೆಯ ಮೇಲಿಂದ ಕೆಳ ಧುಮುಕುತ್ತ ರಾಮತೀರ್ಥ ಜಲಪಾತವಾಗಿ ಗುರುತಿಸಲ್ಪಡುತ್ತದೆ. ಇದೊಂದು ಧಾರ್ಮಿಕ ಪ್ರವಾಸಿ ಆಕರ್ಷಣೆಯಾಗಿದ್ದು ರಾಮ ಹಾಗೂ ಶಿವನ ದೇವಸ್ಥಾನಗಳಿವೆ.

ಚಿತ್ರಕೃಪೆ: Vvp1001

 

ಮಹಾರಾಷ್ಟ್ರದ ಜಲಪಾತಗಳು:

ಮಹಾರಾಷ್ಟ್ರದ ಪ್ರಮುಖ ಸಂತರ ಪೈಕಿ ಒಬ್ಬರಾದ ಸಮರ್ಥ ಶ್ರೀ ರಾಮದಾಸರು 22 ವರ್ಷಗಳ ಕಾಲ ವಾಸಿಸಿ ದಾಸಬೋಧ ಎಂಬ ಅದ್ವೈತದ ಆಧಾರದ ಮೇಲೆ ರಚಿಸಿದ ಸ್ಥಳವೆ ಶಿವಥರಘಳ. ಇಲ್ಲಿ ಜಲಪಾತವೊಂದನ್ನು ಕಾಣಬಹುದಾಗಿದ್ದು ಅದರ ಹಿಂಬದಿಯ ಗುಹೆಯಲ್ಲಿ ರಾಮದಾಸರು ವಾಸಿಸಿದ್ದರೆನ್ನಲಾಗಿದೆ. ಈ ಜಲಪಾತವು ಧಾರ್ಮಿಕ ಆಕರ್ಷಣೆಯನ್ನೂ ಸಹ ಹೊಂದಿರುವುದರಿಂದ ಸಾಕಷ್ಟು ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ಶಿವಥರಘಳ ಕುರಿತು ತಿಳಿಯಿರಿ.

ಚಿತ್ರಕೃಪೆ: Marathipunekar

 

ಮಹಾರಾಷ್ಟ್ರದ ಜಲಪಾತಗಳು:

ಪಾಂಡವಕಡಾ ಜಲಪಾತ: ನವಿ (ನವೀನ್ ಅಂದರೆ ಹೊಸ ಎಂಬರ್ಥ) ಮುಂಬೈನ ಉಪನಗರವಾದ ಖಾರಘರ್ ಎಂಬಲ್ಲಿ ಈ ಮನಮೋಹಕ ಜಲಪಾತವಿದೆ. 107 ಮೀ ಗಳಷ್ಟು ಎತ್ತರದಿಂದ ಧರೆಗೆ ಉಕ್ಕುವ ನೀರು ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸಿಬಿಡುತ್ತದೆ.

ಚಿತ್ರಕೃಪೆ: Uruj Kohari

 

ಮಹಾರಾಷ್ಟ್ರದ ಜಲಪಾತಗಳು:

ಕುಣೆ ಜಲಪಾತ: ಲೋನಾವಲಾದ ಕುಣೆ ಎಂಬ ಹಳ್ಳಿಯಲ್ಲಿ ಈ ಸುಂದರ ಜಲಪಾತವಿದೆ. ಮಳೆಗಾಲದ ಸಂದರ್ಭದಲ್ಲಿ ನೀರು ಹಾಲ್ನೊರೆಯಂತೆ ಧರೆಗುರುಳುತ್ತ ಆನಂದವನ್ನುಂಟು ಮಾಡುತ್ತದೆ.

ಚಿತ್ರಕೃಪೆ: Avinash Lewis

 

ಮಹಾರಾಷ್ಟ್ರದ ಜಲಪಾತಗಳು:

ವಜ್ರಾಯಿ ಜಲಪಾತ: ಸತಾರಾ ಜಿಲ್ಲೆಯ ಭಂಬೋವಲಿ ಎಂಬ ಹಳ್ಳಿಯಲ್ಲಿ ಈ ಸುಂದರ ಜಲಪಾತವಿದೆ.

ಚಿತ್ರಕೃಪೆ: Vinayakmore

 

ಮಹಾರಾಷ್ಟ್ರದ ಜಲಪಾತಗಳು:

ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲಿರುವ ಅಂಬೋಲಿಯು ಮಳೆಗಾಲದಲ್ಲೂ ಭೇಟಿ ನೀಡಬಹುದಾದಂತಹ ಸುಂದರ ಗಿರಿಧಾಮ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ಮಳೆಗಾಲದ ಸಂದರ್ಭದಲ್ಲಿ ಅಲ್ಲಲ್ಲಿ ಕೃತಕ ಚಿಕ್ಕ ಪುಟ್ಟ ಜಲಪಾತಗಳು ರೂಪಗೊಂಡು ಈ ಪ್ರದೇಶವನ್ನು ಧರೆಗಿಳಿದ ಸ್ವರ್ಗದಂತೆ ಮಾಡುತ್ತವೆ. ಅಂಬೋಲಿ ಜಲಪಾತವಂತೂ ಮಳೆಗಾಲದ ಇನ್ನಿಲ್ಲದ ಆಕರ್ಷಣೆ.

ಚಿತ್ರಕೃಪೆ: Ishan Manjrekar

 

ಮಹಾರಾಷ್ಟ್ರದ ಜಲಪಾತಗಳು:

ಮುಂಬೈ ಬಳಿಯಿರುವ ಕರ್ಜಾತ್ ತಾಲೂಕಿನಲ್ಲಿರುವ ಭಿವಪುರಿ ಒಂದು ಚಿಕ್ಕ ಪಟ್ಟಣವಾಗಿದೆ. ಇಲ್ಲಿರುವ ಜಲಪಾತವು ನೋಡಲು ಹಾಗೂ ಅನುಭವಿಸಲು ಆಕರ್ಷಕವಾಗಿದ್ದು ಪ್ರವಾಸಿಗರಲ್ಲಿ ಜನಪ್ರೀಯವಾಗಿದೆ.

ಚಿತ್ರಕೃಪೆ: Vvp1001

 

ಮಹಾರಾಷ್ಟ್ರದ ಜಲಪಾತಗಳು:

ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯ ಸಂಗಮೇಶ್ವರ ಬಳಿಯಿರುವ ಮಾರ್ಲೇಶ್ವರವು ಒಂದು ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾಗಿದೆ. ಇದು ಪ್ರಮುಖವಾಗಿ ಶಿವನ ಗುಹಾ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿರುವ ಧಾರೇಶ್ವರ ಜಲಪಾತವು ಮತ್ತೊಂದು ಪ್ರವಾಸಿ ಆಕರ್ಷಣೆಯಾಗಿದೆ. ಬಾವ್ ನದಿಯಿಂದಾಗುವ ಈ ಜಲಪಾತವು ಮಳೆಗಾಲದ ಸಂದರ್ಭದಲ್ಲಿ ನೋಡಲು ಬಲು ಆಕರ್ಷಕವಾಗಿರುತ್ತದೆ.

ಚಿತ್ರಕೃಪೆ: Vvp1001

 

ಮಹಾರಾಷ್ಟ್ರದ ಜಲಪಾತಗಳು:

ಮುಂಬೈ-ಗೋವಾ ರಸ್ತೆಯಲ್ಲಿರುವ ತರಾಳೆಗೆ ತೆರಳಿ ಅಲ್ಲಿಂದ ವಿಜಯದುರ್ಗಕ್ಕೆ ತಲುಪಬೇಕು. ವಿಜಯದುರ್ಗದಿಂದ ಹತ್ತಿರದಲ್ಲಿರುವ ವ್ಯಾಘ್ರೇಶ್ವರ ದೇವಸ್ಥಾನಕ್ಕೆ ತಲುಪಿ ಅಲ್ಲಿಂದ ಚಾರಣ ಮಾಡುತ್ತ ತಲುಪಬಹುದಾದ ಜಲಪಾತವೆ ವ್ಯಾಘ್ರೇಶ್ವರ ಜಲಪಾತ. ಇದು 300 ಅಡಿಗಳಷ್ಟು ಎತ್ತರದಿಂದ ಅಮೋಘವಾಗಿ ಬೀಳುತ್ತದೆ.

ಚಿತ್ರಕೃಪೆ: Vvp1001

 

ಮಹಾರಾಷ್ಟ್ರದ ಜಲಪಾತಗಳು:

ಭಂಡಾರದಾರಾದ ವಿಲ್ಸನ್ ಡ್ಯಾಮ್ ಬಳಿಯಿರುವ ಅಂಬ್ರೆಲ್ಲಾ ಜಲಪಾತವು ಮಳೆಗಾಲದ ಸಂದರ್ಭದಲ್ಲಿ ತಂಡೋಪತಂಡವಾಗಿ ಜನರನ್ನು ಆಕರ್ಷಿಸುತ್ತದೆ. ಈ ಜಲಪಾತವು ಧುಮುಕುವ ರೀತಿ ಅಥವಾ ಆಕಾರವು ಕೊಡೆಯ (ಆಂಗ್ಲದಲ್ಲಿ ಅಂಬ್ರೆಲ್ಲಾ) ಹಾಗೆ ಗೋಚರಿಸುವುದರಿಂದ ಇದಕ್ಕೆ ಅಂಬ್ರೆಲ್ಲಾ ಜಲಪಾತ ಎಂಬ ಹೆಸರಿನಿಂದ ಕರೆಯಲಾಗುತ್ತದೆ.

ಚಿತ್ರಕೃಪೆ: Vvp1001

 

ಮಹಾರಾಷ್ಟ್ರದ ಜಲಪಾತಗಳು:

ಸವದವ್, ಇದು ಸಿಂಧುದುರ್ಗ ಜಿಲ್ಲೆಯಲ್ಲಿರುವ ಪ್ರವಾಸಿ ಆಕರ್ಷಣೆಯುಳ್ಳ ಜಲಪಾತವಾಗಿದೆ. ಇದು ಜಿಲ್ಲೆಯ ಕಂಕಾವಳಿ ಪಟ್ಟಣದ ಬಳಿಯಿದ್ದು ಅಪಾರವಾಗಿ ಜನರನ್ನು ವಿಶೇಷವಾಗಿ ಮಳೆಗಾಲದ ಸಂದರ್ಭದಲ್ಲಿ ಆಕರ್ಷಿಸುತ್ತದೆ.

ಚಿತ್ರಕೃಪೆ: Vvp1001

 

ಮಹಾರಾಷ್ಟ್ರದ ಜಲಪಾತಗಳು:

ದೂಧ್ ಸಾಗರ್ : ನಾಶಿಕ್‌ನ ಸಮೀಪದಲ್ಲಿರುವ ಸೋಮೇಶ್ವರದಲ್ಲಿರುವ ಇದು ಸುಮಾರು 10 ಮೀಟರು ಎತ್ತರದಿಂದ ಬೀಳುತ್ತದೆ. ಚಿತ್ರಾವಳಿಯ ದೃಶ್ಯಗಳೊಂದಿಗೆ ಇಡೀ ಪ್ರದೇಶದ ಅದ್ಭುತ ಸನ್ನಿವೇಶವನ್ನು ನಿಮಗೆ ಕಟ್ಟಿಕೊಡುತ್ತದೆ. ಅತ್ಯುತ್ತಮ ಪಿಕ್‌ನಿಕ್‌ ತಾಣವಾದ ಇದು ಮಳೆಗಾಲದಲ್ಲಿ ಅದ್ಭುತವಾಗಿ ಕಾಣುತ್ತದೆ. ಸುಲಭವಾಗಿ ಜಲಪಾತದ ಕೆಳಗೆ ಹೋಗಲು ಸಹಾಯವಾಗುವಂತೆ ಮೆಟ್ಟಿಲುಗಳನ್ನು ಕೊರೆಯಲಾಗಿದೆ. ಗೋವಾ ಬಳಿಯೂ ಸಹ ಪ್ರಸಿದ್ಧವಾದ ದೂಧ್ ಸಾಗರ್ ಜಲಪಾತವಿದೆ. ಓದಿರಿ ಗೋವಾ ಜಲಪಾತದ ಚಿತ್ರ.

ಚಿತ್ರಕೃಪೆ: Jagadhatri

 

English summary

List of beautiful waterfalls of Maharashtra

Maharashtra is one of the important states of India in terms of travel and tourism. Maharashtra tourism is equipped with different varieties of tourist attractions which satisfies the different needs of a traveler. Waterfalls are one such thing which cannot be missed in Maharashtra especially during monsoon season.
Please Wait while comments are loading...