Search
  • Follow NativePlanet
Share
» »ಕುತೂಹಲ ಕೆರಳಿಸುವ ಕೊಲ್ಕತ್ತಾ ಜನಜೀವನ

ಕುತೂಹಲ ಕೆರಳಿಸುವ ಕೊಲ್ಕತ್ತಾ ಜನಜೀವನ

By Vijay

ಭಾರತವು ಉತ್ತರದ ಕಾಶ್ಮೀರದಿಂದ ಹಿಡಿದು ದಕ್ಷಿಣದ ಕನ್ಯಾಕುಮಾರಿಯವರೆಗೆ ವೈವಿಧ್ಯಮಯ ಸಂಸ್ಕೃತಿ-ಸಂಪ್ರದಾಯಗಳನ್ನು ಒಳಗೊಂಡಿದೆ. ದೇಶದ ಯಾವುದೇ ರಾಜ್ಯಕ್ಕೆ ತೆರಳಿದರೂ ಅಲ್ಲೊಂದು ವಿಶಿಷ್ಟತೆ ಕಂಡುಬರುತ್ತದೆ ಪ್ರವಾಸಿಗರಿಗೆ. ಕೆಲ ವಿದೇಶಿ ಪ್ರವಾಸಿಗರಂತೂ ಭಾರತ ಹಾಗೂ ಅದರ ವೈವಿಧ್ಯತೆಯ ಕುರಿತು ಕುತೂಹಲ ಉಂಟಾಗಿಯೆ ಇಲ್ಲಿಗೆ ಭೇಟಿ ನೀಡುತ್ತಾರೆ. ಕೊಲ್ಕತ್ತಾ ನಗರವು ದೇಶದ ಎಲ್ಲ ಪ್ರಮುಖ ನಗರಗಳೊಂದಿಗೆ ರೈಲು ಹಾಗೂ ವಿಮಾನಗಳ ಮೂಲಕ ಉತ್ತಮ ಸಂಪರ್ಕ ಹೊಂದಿದೆ.

ಅದ್ಭುತ ಕೊಡುಗೆ : ಕೇವಲ 14 ರೂ. ಗಳಿಗೆ ಟ್ಯಾಕ್ಸಿ ಫಾರ್ ಶ್ಯೂರ್ ನಿಂದ ಕ್ಯಾಬ್ ಗಳು

ಈ ಒಂದು ನಿಟ್ಟಿನಲ್ಲಿ ಒಬ್ಬ ಪ್ರಬುದ್ಧ ಪ್ರವಾಸಿಗನಾಗಿ ವಿವಿಧ ನಗರಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಿತ್ಯ ಜನಜೀವನದ ಹಲವು ವಿಭಿನ್ನ ಮುಖಗಳು ಗೋಚರಿಸುತ್ತವೆ. ವಿವಿಧತೆಯಲ್ಲಿ ಏಕತೆ ಎಂಬಂತೆ ಎಲ್ಲ ಮಹಾನಗರಗಳಲ್ಲಿ ಆಯಾ ರಾಜ್ಯಗಳ ಸಂಸ್ಕೃತಿ ಸಂಪ್ರದಾಯಗಳ ಛಾಪು ಇದ್ದರೂ ಸಹ ಭಾರತವು ಅಖಂಡ, ಏಕತೆಯ ದೇಶವಾಗಿ ಪ್ರಪಂಚದಲ್ಲಿ ತನ್ನದೆ ಆದ ವಿಶಿಷ್ಟ ಸ್ಥಾನ ಹೊಂದಿರುವುದೂ ಅಲ್ಲದೆ ಸಾಂಸ್ಕೃತಿಕ ಶ್ರೀಮಂತಿಕೆಯ ದೊಡ್ಡ ದೇಶವೂ ಸಹ ಆಗಿದೆ.

ವಿಶೇಷ ಲೇಖನ : ಬೆಂಗಳೂರಿನಲ್ಲೊಂದು ದಿನದ ಜೀವನ

ಪ್ರಸ್ತುತ ಲೇಖನದ ಮೂಲಕ ದೇಶದ ನಾಲ್ಕು ಪ್ರಮುಖ ಮಹಾನಗರಗಳ ಪೈಕಿ ಒಂದಾದ ಕೊಲ್ಕತ್ತಾ ನಗರದಲ್ಲಿ ಒಂದು ಸುತ್ತು ಹೊಡೆಯುತ್ತ ಅಲ್ಲಿನ ನಿತ್ಯ ಜೀವನದ ಹಲವು ಕೌತುಕಮಯ ಆಯಾಮಗಳನ್ನು ತಿಳಿಯಿರಿ ಹಾಗೂ ಕಲಾ ಶ್ರೀಮಂತಿಕೆಯ ಈ ನಗರಕ್ಕೆ ಒಮ್ಮೆಯಾದರೂ ಭೇಟಿ ನೀಡಿ ಅಲ್ಲಿನ ತಿಂಡಿ ತಿನಿಸುಗಳಾಗಿರಬಹುದು, ಕಲೆಯಾಗಿರಬಹುದು ಇಲ್ಲವೆ ನಿತ್ಯ ಜೀವನಶೈಲಿಯಾಗಿರಬಹುದು ಖುದ್ದಾಗಿ ಅನುಭವಿಸಿ ಒಂದು ರೀತಿಯ ಸಾರ್ಥಕತೆಯ ಅನುಭವವನ್ನು ಪಡೆದುಕೊಳ್ಳಿ.

ವಿಶೇಷ ಲೇಖನ : ಮುಂಬೈನಗರ ಜೀವನದ ವಿಶೇಷತೆ

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲೊಂದು ದಿನ ಸುತ್ತಾಡಿದಾಗ ಅಲ್ಲಿನ ಪರಿಸರದ, ಜೀವನಶೈಲಿಯ ಸೂಕ್ಷ್ಮವಾದ ಚಿತ್ರಣವು ನಮ್ಮ ಕಣ್ಣುಗಳ ಮುಂದೆ ಕಟ್ಟುತ್ತದೆ. ಹಾಗಾದರೆ ತಡವೇಕೆ ಇಲ್ಲಿರುವ ಒಂದೊಂದು ಸ್ಲೈಡುಗಳು ಕೊಲ್ಕತ್ತಾ ನಗರದ ಒಂದೊಂದು ಕಥೆಯನ್ನು ಹೇಳುತ್ತವೆ. ನಿಮ್ಮ ಕೊಲ್ಕತ್ತಾ ಪ್ರಯಾಣ ಪ್ರಾರಂಭಿಸಿ.

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲೊಂದು ದಿನ:

ಭಾರತ ಸಾಂಸ್ಕೃತಿಕವಾಗಿ ಪ್ರಬಲ ಮತ್ತು ಸಾಂಪ್ರದಾಯಿಕವಾಗಿ ಬೇರೂರಿದ ದೇಶವಾದರೆ ಅದರ ಹೃದಯ ಭಾಗ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿದೆ ಎನ್ನಬಹುದು. ಬ್ರಿಟಿಷರ ಕಾಲದಿಂದಲೂ ಕಲ್ಕತ್ತಾ ಎಂದು ಕರೆಯಲ್ಪತಿಡುತ್ತಿದ್ದ ಈ ಸ್ಥಳ ಭಾರತೀಯ ಸಂಸ್ಕೃತಿಯ ಕೇಂದ್ರ ಸ್ಥಳವಾಗಿದೆ. ಸುಪ್ರಸಿದ್ಧ ವಿಕ್ಟೋರಿಯಾ ಮೆಮೊರಿಯಲ್ ಹಾಲ್.

ಚಿತ್ರಕೃಪೆ: Thomas Scherer

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲೊಂದು ದಿನ:

ಮತ್ತೊಂದು ಸಂಗತಿಯೆಂದರೆ ಕೊಲ್ಕತ್ತಾದ ಜನರು ದಶಕಗಳಿಂದ ಸಾಹಿತ್ಯ ಮತ್ತು ಕಲೆಯನ್ನು ಪ್ರೋತ್ಸಾಹಿಸಿಕೊಂಡು ಬಂದ ಹೆಮ್ಮೆ ಹೊತ್ತಿದ್ದಾರೆ. ಇದನ್ನು ನೋಡಲು ದಸರಾಕ್ಕಿಂತ ಮೊದಲು ಆಚರಿಸಲ್ಪಡುವ ದುರ್ಗಾ ಪೂಜೆ, ದೀಪಾವಳಿ ಮತ್ತು ಕಾಳಿ ಪೂಜೆಯ ಸಂದರ್ಭದಲ್ಲಿ ಭೇಟಿ ನೀಡಬೇಕು. ನಗರದ ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳನ್ನು ಅಲ್ಲದೆ ಬೀದಿಗಳನ್ನು ಸುಂದರವಾಗಿ ಅಲಂಕರಿಸಿರುತ್ತಾರೆ. ದುರ್ಗಾ ಪೂಜೆಯ ಸಂದರ್ಭದಲ್ಲಿ ಅಲಂಕೃತಗೊಂಡ ಒಂದು ಬೀದಿ.

ಚಿತ್ರಕೃಪೆ: Monsoon Lover

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾ ಸ್ಥಳೀಯ ಜನರಿಂದ ಮಾಡಲಾಗುವ ನಾಟಕ ಮತ್ತು ಬೀದಿ ನಾಟಕಗಳು ಜಗತ್ಪ್ರಸಿದ್ಧಿ ಪಡೆದಿವೆ. ಕೊಲ್ಕತ್ತಾದಲ್ಲಿ ಸಂಚಾರಕ್ಕೆಂದು ರಿಕ್ಷಾ, ಟ್ಯಾಕ್ಸಿಗಳ ಜೊತೆ ಕೈಗಾಡಿಗಳು ಇರುವುದು ವಿಶೇಷ. ಇದು ಮೊದಲಿನಿಂದಲೂ ಚಾಲ್ತಿಯಲ್ಲಿದ್ದು ಈಗಲೂ ಸಹ ಕಾಣಬಹುದಾಗಿದೆ. ಕೈಗಾಡಿಯಲ್ಲೆ ಜನರನ್ನು ವೇಗವಾಗಿ ನಡೆಯುತ್ತ ಕರೆದುಕೊಂಡು ಹೋಗುವ ಆ ಚಾಲಕರಿಗೆ ವಿಶೇಷವಾದ ಧನ್ಯವಾದಗಳನ್ನು ಸಮರ್ಪಿಸಲೇಬೇಕು.

ಚಿತ್ರಕೃಪೆ: M M

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲೊಂದು ದಿನ:

ಇನ್ನು ತಿಂಡಿ ತಿನಿಸುಗಳ ವಿಷಯಕ್ಕೆ ಬಂದರೆ ಕೊಲ್ಕತ್ತಾ ನಗರ ಬೆಂಗಾಳಿ ಅನ್ನ ಮತ್ತು ಬೇಳೆ ಮಿಶ್ರಿತ ಕರ್ರಿ ಜೊತೆಗೆ ಮೀನಿನ ಖಾದ್ಯಕ್ಕೆ ಹೆಚ್ಚು ಪ್ರಸಿದ್ಧವಾಗಿದೆ. ನಗರದಲ್ಲಿ ಸಾಕಷ್ಟು ರೆಸ್ಟೋರೆಂಟ್ ಗಳಿದ್ದು,ಸ್ಥಳೀಯ ಆಹಾರಗಳು ಕಡಿಮೆ ದರದಲ್ಲಿ ದೊರೆಯುತ್ತವೆ.

ಚಿತ್ರಕೃಪೆ: Giridhar Appaji Nag Y

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾಗೆ ಭೇಟಿ ನೀಡಿದರೆ ಅಲ್ಲಿನ ಖಾದ್ಯಗಳನ್ನು ಸವಿಯಲು ಮರೆಯದಿರಿ. ಬೆಂಗಾಲಿ ಸಿಹಿ ತಿಂಡಿಗಳು ದೇಶದಾದ್ಯಂತ ಹೆಸರುವಾಸಿಯಾಗಿದ್ದು ಸಂದೇಶ್, ಮಿಷ್ಟಿ ದಹಿ (ಸಿಹಿ ಮೊಸರು) ಮತ್ತು ರಸ ಮಲೈ ಗಳನ್ನು ತಿನ್ನಲೇಬೇಕು.

ಚಿತ್ರಕೃಪೆ: Steve Browne & John Verkleir

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲೊಂದು ದಿನ:

ನಿಮಗೆ ಸ್ವಲ್ಪ ಬೇರೆ ರೀತಿಯ ಖಾದ್ಯಗಳು ಬೇಕೆಂದಿದ್ದಲ್ಲಿ ಚೈನಾ ಟೌನ್ ನಲ್ಲಿ ಸಾಕಷ್ಟು ಭಾರತೀಯ ಚೈನಾ ನೂಡಲ್ಸ್ ತಿನ್ನಬಹುದು ಜೊತೆಗೆ ಅಲ್ಲಿ ಸಿಗುವ ಮೊಮೊಸ್ ಅನ್ನು ತಿನ್ನಲೇಬೇಕು.

ಚಿತ್ರಕೃಪೆ: Sumath Karnad

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲೊಂದು ದಿನ:

ಜಗತ್ಪ್ರಸಿದ್ಧ ಹೌರಾ ಸೇತುವೆ ಮತ್ತು ಟ್ರಾಮ್ ಸೌಲಭ್ಯ ಇಲ್ಲಿರುವುದರಿಂದ ಹಾಲಿವುಡ್ ಮತ್ತು ಬಾಲಿವುಡ್ ಸಿನೆಮಾಗಳಲ್ಲಿ ಕೊಲ್ಕತ್ತಾ ಸಾಕಷ್ಟು ಬಾರಿ ಚಿತ್ರಣಗೊಂಡಿದೆ. ಕೊಲ್ಕತ್ತಾ ಭಾರತದ ಮೊದಲ ಭೂಗತ ಮೆಟ್ರೋ ರೈಲನ್ನು ಹೊಂದಿದ ಖ್ಯಾತಿಗೆ ಪಾತ್ರವಾಗಿದೆ.

ಚಿತ್ರಕೃಪೆ: Paul Hamilton

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾ ಜನರು ಕ್ರೀಡಾಸಕ್ತರಾಗಿದ್ದು ವಿಶೇಷವಾಗಿ ಕ್ರಿಕೆಟ್ ಮತ್ತು ಸಾಸರ್ (ಫುಟ್ ಬಾಲ್) ಆಟಗಳ ಮೇಲೆ ಹೆಚ್ಚಿನ ಒಲವನ್ನು ಹೊಂದಿದ್ದಾರೆ. ಇಲ್ಲಿ ರಾಷ್ಟ್ರ ಮಟ್ಟದ ಪಂದ್ಯಾವಳಿಗಳು ಹಾಗೂ ತರಬೇತಿ ಶಿಬಿರಗಳನ್ನು ನಡೆಸಲು ಸಾಕಷ್ಟು ಕ್ರೀಡಾಂಗಣಗಳು ಇವೆ. ಐಪಿಎಲ್ ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಎಂಬ ಟೀಮ್ ಇರುವುದನ್ನು ಕೂಡ ಗಮನಿಸಬಹುದು.

ಚಿತ್ರಕೃಪೆ: Pabak Sarkar

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾ ನಗರದ ರಾತ್ರಿ ಜೀವನ ದೇಶದಲ್ಲಿ ಇತರೆ ಮಹಾನಗರಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಹಾಗೆ ಬಣ್ಣ ಬಣ್ಣದ್ದಾಗಿರುತ್ತದೆ. ನೈಟ್ ಕ್ಲಬ್ ಗಳಲ್ಲಿ ತಕ್ಕ ಮಟ್ಟಿಗೆ ಪ್ರವೇಶ ದರ ನೀಡಬೇಕಾಗುತ್ತದೆ. ಪೊಲೀಸರು ಮತ್ತು ಸ್ಥಳೀಯ ಕಾನೂನು ಜನರ ಸುರಕ್ಷತೆಗೆ ಪ್ರಾಮುಖ್ಯತೆ ನೀಡುತ್ತದೆ.

ಚಿತ್ರಕೃಪೆ: Soumyadeep Paul

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲೊಂದು ದಿನ:

ಪ್ರವಾಸಿಗರಿಗೆ ಕೊಲ್ಕತ್ತಾ ನಗರ ತೋರಿಸಲು ಸಾಕಷ್ಟು ಸ್ಥಳಗಳನ್ನು ಹೊಂದಿದೆ. ಇಲ್ಲಿನ ಕಲೆ, ಖಾದ್ಯಗಳು, ಸಮಕಾಲೀನ ಜೀವನ ಮತ್ತು ಒಂದು ಪರಿಪೂರ್ಣ ರಾತ್ರಿಯ ಮಿಶ್ರಣ ಪ್ರವಾಸಿಗರಿಗೆ ಖುಶಿ ನೀಡುವುದಂತೂ ಖಂಡಿತ. ಈ ನಗರವು ಅಂತಾರಾಷ್ಟ್ರೀಯ ವಾಣಿಜ್ಯದಲ್ಲಿ ಅತ್ಯುತ್ತಮ ಸಂವಹನ ಸಂಪರ್ಕವನ್ನೂ ಸಹ ಹೊಂದಿದೆ.

ಚಿತ್ರಕೃಪೆ: Abhijit Kar Gupta

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾ ಮತ್ತು ಸುತ್ತಮುತ್ತಲು ಸಾಕಷ್ಟು ಪ್ರವಾಸಿ ತಾಣಗಳಿವೆ, ವಿದ್ಯಾ ಸಾಗರ ಸೇತುವೆ, ವಿಕ್ಟೋರಿಯಾ ಮೆಮೋರಿಯಲ್, ಇಂಡಿಯನ್ ಮ್ಯೂಸಿಯಂ, ಇಡನ್ ಗಾರ್ಡನ್, ಸೈನ್ಸ್ ಸಿಟಿ ಇವುಗಳಲ್ಲಿ ಕೆಲವು. ಇಲ್ಲಿ ಕೆಲವು ಪಾರಂಪರಿಕ ಕಟ್ಟಡಗಳಾದ GPO ಮತ್ತು ಕಲ್ಕತ್ತಾ ಹೈ ಕೋರ್ಟ್ ಇವುಗಳು ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಚಿತ್ರಕೃಪೆ: Rajarshi MITRA

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದ ಸುಪ್ರಸಿದ್ಧ ಹೌರಾ ಸೇತುವೆಯ ಮೇಲೆ ನಿತ್ಯದ ಜನಜೀವನ.

ಚಿತ್ರಕೃಪೆ: Abhijit Kar Gupta

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲೊಂದು ದಿನ:

ಹೂಗ್ಲಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಹೌರಾ ಸೇತುವೆಯು ರಾತ್ರಿಯಲ್ಲಿ ಕಂಗೊಳಿಸುತ್ತಿರುವ ನೋಟ. ಈ ಸೇತುವೆಯ ಮೇಲೆ ಸಾಕಷ್ಟು ಹಿಂದಿ ಹಾಗೂ ಇತರೆ ಭಾಷೆಯ ಚಲನಚಿತ್ರಗಳು ಚಿತ್ರೀಕರಣಗೊಂಡಿವೆ.

ಚಿತ್ರಕೃಪೆ: Partha Sarathi Sahana

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲೊಂದು ದಿನ:

ಹೂಗ್ಲಿ ನದಿಯ ಮೇಲೆ ಸ್ಥಿತವಿರುವ ಖಿದೀರ್ಪೊರ್‍ ಡಾಕ್ ಯಾರ್ಡ್.

ಚಿತ್ರಕೃಪೆ: Smeet Chowdhury

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲೊಂದು ದಿನ:

ಈ ನಗರದ ವಾಸಿಗಳು ಕಲಾ ಪ್ರೇಮಿಗಳು. ಸಾಹಿತ್ಯದಿಂದ ವರ್ಣ ಕಲೆಯವರೆಗೂ ಇಲ್ಲಿ ಸದಾ ಪ್ರೋತ್ಸಾಹ ದೊರೆಯುತ್ತದೆ. ವರ್ಣ ಕಲಾ ಪ್ರೀಯರಿಗೆ ಇದು ಸಾಕಷ್ಟು ಆಯ್ಕೆಗಳನ್ನು ಕರುಣಿಸುತ್ತದೆ. ಬೀದಿಗಳಲ್ಲಿ ಕಲಾಪ್ರೀಯರ ಮನ ತಣಿಸಲು ವರ್ಣಚಿತ್ರಗಳನ್ನು ಮಾರಾಟ ಮಾಡುತ್ತಿರುವ ಬೀದಿ ವ್ಯಾಪಾರಿ.

ಚಿತ್ರಕೃಪೆ: Soumyadeep Paul

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲೊಂದು ದಿನ:

ಹಳೆಯ ಕೊಲ್ಕತ್ತಾ ಭಾಗದಲ್ಲಿ ಕಂಡು ಬರುವ ಚಿಕ್ಕ ಚಿಕ್ಕ ಸಂದಿಗಳು. ಮನಿಕಟ್ಲಾ ಪ್ರದೇಶದ ಬಿಡಾನ್ ಬೀದಿಯ ಹತ್ತಿರವಿರುವ ಒಂದು ಸಂದಿ.

ಚಿತ್ರಕೃಪೆ: Abhijit Kar Gupta

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲೊಂದು ದಿನ:

ಗ್ರೇಟರ್ ಕೊಲ್ಕತ್ತಾದ ದಕ್ಷಿಣೇಶ್ವರದಲ್ಲಿರುವ ಸುಪ್ರಸಿದ್ಧ ಕಾಳಿ ದೇವಿಯ ಮಂದಿರ. ಭಾರತ ಕಂಡ ಶ್ರೇಷ್ಠ ಸಂತರಲ್ಲೊಬ್ಬರಾದ ಹಾಗೂ ಸ್ವಾಮಿ ವಿವೇಕಾನಂದರ ಪೂಜ್ಯ ಗುರುಗಳಾದ ಶ್ರೀ ರಾಮಕೃಷ್ಣ ಪರಮಹಂಸರು ಇಲ್ಲಿ ಬಹುಕಾಲ ಕಾಳಿ ಮಾತೆಯನ್ನು ಪೂಜಿಸುತ್ತ ವಾಸಿಸಿದ್ದರು. ಅವರ ಕೊಟ್ಯಾಂತರ ಅನುಯಾಯಿಗಳಿಗೆ ಇಂದಿಗೂ ಇದು ಪವಿತ್ರವಾದ ಸ್ಥಳವಾಗಿದೆ.

ಚಿತ್ರಕೃಪೆ: Asis K. Chatterjee

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದ ಜನನಿಬಿಡ ಸ್ಥಳಗಳಲ್ಲೊಂದಾದ ನಿವ್ ಮಾರ್ಕೆಟ್. ಪುರಾತನ ಶೈಲಿಯ ಸಾಂಪ್ರದಾಯಿಕ ಕಟ್ಟಡ ಇಂದಿಗೂ ಅಂದಿನ ಕಥೆಯನ್ನು ಹೇಳುತ್ತ ಹೊಸಬರನ್ನು ಹೃದಯಪೂರ್ವಕವಾಗಿ ಬರಮಾಡಿಕೊಳ್ಳುತ್ತದೆ. ಕಡಿಮೆ ಬೆಲೆಯಿಂದ ಹಿಡಿದು ದುಬಾರಿವರೆಗೂ ಸಾಕಷ್ಟು ವಸ್ತುಗಳು ಇಲ್ಲಿ ದೊರೆಯುತ್ತವೆ. ಗ್ರಾಹಕರಿಂದ ಸದಾ ತುಂಬಿ ತುಳುಕುವ ಈ ಮಾರುಕಟ್ಟೆಯು ಕೊಲ್ಕತ್ತಾದ ಜೀವನ ಶೈಲಿಯ ಹತ್ತಿರದ ನೋಟವನ್ನು ಭೇಟಿ ನೀಡುವವರಿಗೆ ಒದಗಿಸುತ್ತದೆ.

ಚಿತ್ರಕೃಪೆ: Rajarshi MITRA

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲೊಂದು ದಿನ:

ಸುಪ್ರಸಿದ್ಧ ವಿದ್ಯಾಸಾಗರ ಸೇತುವೆ. ಇದು ಏಷಿಯಾ ಖಂಡದಲ್ಲೆ ಅತಿ ದೊಡ್ಡದಾದ ದಪ್ಪನೆಯ ತಂತಿಗಳ ಆಧಾರದ (ಕೇಬಲ್ ಬ್ರಿಡ್ಜ್) ಸೇತುವೆಯಾಗಿದ್ದು ಜಗತ್ತಿನಲ್ಲೆ ಈ ರೀತಿಯ ಮೂರನೆಯ ದೊಡ್ಡ ಸೇತುವೆಯಾಗಿದೆ. ಬರೋಬ್ಬ್ಬರಿ 121 ದಪ್ಪನೆಯ ತಂತಿಗಳು ಈ ಸೇತುವೆಗೆ ಆಧಾರ ಒದಗಿಸಿವೆ. ಹಲವು ತುಕಡಿಗಳಿಂದ ನಿರ್ಮಾಣವಾಗಿರುವ ಈ ಸೇತುವೆಯ ಮುಖ್ಯ ತುಕಡಿಯು 457 ಮೀ. ಗೂ ಅಧಿಕ ಉದ್ದವಾಗಿದ್ದು 115 ಮೀ. ಗಳಷ್ಟು ಅಗಲ ಹೊಂದಿದೆ. ಸಂಚರಿಸಲು ಒಟ್ಟು 9 ಪಥಗಳನ್ನು ಇದರ ಮೇಲೆ ಕಾಣಬಹುದು. ಸೇತುವೆಯ ಕೆಳಗಿರುವುದು ಪ್ರಿನ್ಸೆಪ್ ಸ್ಮಾರಕ ಭವನ.

ಚಿತ್ರಕೃಪೆ: Avrajyoti Mitra

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾ ಮೊದಲಿನಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ತನ್ನ ಅಪಾರವಾದ ಕೊಡುಗೆ ನೀಡುತ್ತಿದೆ. ಸಾಹಿತ್ಯ ಕ್ಷೇತ್ರದ ಹಲವು ಅಪರೂಪದ ಹಾಗೂ ಪ್ರಮುಖವಾದ, ಪುರಾತನವಾದ ಸಾಕಷ್ಟು ಪುಸ್ತಕ, ಗ್ರಂಥಗಳು ಇಲ್ಲಿರುವ ರಾಷ್ಟ್ರೀಯ ಗ್ರಂಥಾಲಯದಲ್ಲಿ ಕಾಣಬಹುದು. ಇಂದು ರಾಷ್ಟ್ರೀಯ ಗ್ರಂಥಾಲಯವಾಗಿರುವ ಈ ಕಟ್ಟಡ ಹಿಂದೆ ಬ್ರಿಟೀಷರ ಆಡಳಿತವಿದ್ದ ಕಾಲದಲ್ಲಿ ವೈಸ್ ರಾಯ್ ಅವರ ಅಧಿಕೃತ ನಿವಾಸವಾಗಿತ್ತು.

ಚಿತ್ರಕೃಪೆ: Avrajyoti Mitra

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲೊಂದು ದಿನ:

ದೇಶದಲ್ಲಿ ರಚಿಸಲಾದ ಮೊದಲ ಉಚ್ಛ ನ್ಯಾಯಾಲಯ ಎಂಬ ಕೀರ್ತಿಗೆ ಪಾತ್ರವಾದ ಕೊಲ್ಕತ್ತಾದ ಉಚ್ಛ ನ್ಯಾಯಾಲಯದ ಕಟ್ಟಡ. ಈ ಪುರಾತನ ಭವ್ಯ ನ್ಯಾಯಾಲಯ ಹಾಗೂ ಕಟ್ಟಡವನ್ನು 1862 ರಲ್ಲಿ ಸ್ಥಾಪಿಸಲಾಯಿತು.
ದೇಶದಲ್ಲಿ ಸ್ಥಾಪಿಸಲಾದ ಮೂರು ಮುಖ್ಯ ನ್ಯಾಯಾಲಯಗಳ ಪೈಕಿ ಇದು ಮೊದಲನೆಯದಾಗಿದೆ. ಉಳಿದೆರಡು ನ್ಯಾಯಾಲಯಗಳೆಂದರೆ ಚೆನ್ನೈ ಹೈಕೋರ್ಟ್ (ಹಿಂದಿನ ಮದ್ರಾಸ್ ಹೈಕೋರ್ಟ್) ಹಾಗೂ ಮುಂಬೈ (ಹಿಂದಿನ ಬಾಂಬೆ ಹೈಕೋರ್ಟ್).

ಚಿತ್ರಕೃಪೆ: Avrajyoti Mitra

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದ ಹೂಗ್ಲಿ ನದಿಯ ತಟದಲ್ಲಿ ನಿರ್ಮಾಣಗೊಂಡಿರುವ ಹೌರಾ ಮುಖ್ಯ ರೈಲು ನಿಲ್ದಾಣ ಕಟ್ಟಡದ ವಿಹಂಗಮ ನೋಟ. ಹೌರಾ ಕೊಲ್ಕತ್ತಾ ಬಳಿಯಿರುವ ನಾಲ್ಕು ಪ್ರಮುಖ ರೈಲು ನಿಲ್ದಾಣಗಳ ಪೈಕಿ ಒಂದಾಗಿದ್ದು ಕೊಲ್ಕತ್ತಾ ನಗರದ ಹೃದಯ ಭಾಗಕ್ಕೆ ರಬೀಂದ್ರ ಸೇತು ಅಥವಾ ಸುಪ್ರಸಿದ್ಧ ಹೌರಾ ಸೇತುವೆಯ ಮೂಲಕ ಸಂಪರ್ಕಿಸುತ್ತದೆ.

ಚಿತ್ರಕೃಪೆ: Smeet Chowdhury

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲಿರುವ ಸಸ್ಯೋದ್ಯಾನವು ಒಂದು ಉತ್ತಮ ಪ್ರವಾಸಿ ಆಕರ್ಷಣೆಯಾಗಿದೆ. ಈ ಉದ್ಯಾನದಲ್ಲಿ ಪ್ರಮುಖವಾಗಿ ಗಮನ ಸೆಳೆವ ಅಂಶವೆಂದರೆ ದೊಡ್ಡ ಆಲದ ಮರ. ಈ ಮರದ ಮುಖ್ಯ ಕಾಂಡವನ್ನು ಕೊಳೆಯುತ್ತಿದ್ದ ಕಾರಣ ಕತ್ತರಿಸಲಾಗಿದ್ದು ಇದು ಇನ್ನೂ ಜೀವಂತವಾಗಿದೆ. ಅಲ್ಲದೆ ಗಿನೆಸ್ ಬುಕ್ ದಾಖಲೆಯಲ್ಲಿ ಹೆಸರು ಪಡೆದಿರುವ ಈ ಮರವು ತನ್ನ ಉಪ ಬೇರುಗಳ ಮೂಲಕ 1.5 ಹೆಕ್ಟೇರ್ (ಸುಮಾರು 2.47 ಎಕರೆಗಳಷ್ಟು) ಪ್ರದೇಶದಲ್ಲಿ ವ್ಯಾಪಿಸಿದೆ. ಏನಿಲ್ಲವೆಂದರೂ ಈ ಮರಕ್ಕೆ 2880 ಉಪಬೇರುಗಳು ಜೋತು ಬಿದ್ದಿರುವುದನ್ನು ಕಾಣಬಹುದು.

ಚಿತ್ರಕೃಪೆ: McKay Savage

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲೊಂದು ದಿನ:

ಜೈನರಿಗೆ ಅದರಲ್ಲೂ ದಿಗಂಬರ ಪಂಥದವರಿಗೆ ಪವಿತ್ರವಾಗಿರುವ ಕೊಲ್ಕತ್ತಾ ನಗರದಲ್ಲಿರುವ ದಿಗಂಬರ ಜೈನ ದೇವಾಲಯ.

ಚಿತ್ರಕೃಪೆ: Dr.Souvik Maitra

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲೊಂದು ದಿನ:

ಇಗೋ ಕೊಲ್ಕತ್ತಾ ಮಿಂಟ್. ಮಿಂಟ್ ಎನ್ನುವುದು ಭಾರತ ಸರ್ಕಾರದ ಕೈಗಾರಿಕಾ ಸೇವೆಯಾಗಿದ್ದು ಹಣದ ನಾಣ್ಯಗಳನ್ನು ಉತ್ಪದಿಸಲಾಗುತ್ತದೆ. ಭಾರತದಲ್ಲಿ ಮುಂಬೈ, ಹೈದರಾಬಾದ್, ಕೊಲ್ಕತ್ತಾ, ನೊಯಿಡಾಗಳಲ್ಲಿ ಮಿಂಟ್ ಗಳನು ಕಾಣಬಹುದು. ಕೊಲ್ಕತ್ತಾದಲ್ಲಿ ಮಿಂಟ್ ಅನ್ನು ನಿರ್ಮಿಸಲು 1930 ರಲ್ಲೆ ಕಾಮಗಾರಿಯನ್ನು ಪ್ರಾರಂಭಿಸಲಾಯಿತಾದರೂ ಎರಡನೆಯ ಮಹಾಯುದ್ಧದಿಂದಾಗಿ ಈ ಕಟ್ಟಡವು ಅಪೂರ್ಣಗೊಂಡಿತು. ನಂತರ 1951 ರಲ್ಲಿ ಈ ಕಟ್ಟಡದ ಕಾಮಗಾರಿಯನ್ನು ಪೂರ್ಣಗೊಳಿಸಲಾಯಿತು. 1952 ರಿಂದ ಇಲ್ಲಿಯವರೆಗೆ ಇದು ಕಾರ್ಯನಿರ್ವಹಿಸುತ್ತಿದೆ.

ಚಿತ್ರಕೃಪೆ: Avrajyoti Mitra

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲಿ ಮಾನ್ಸೂನ್ ಅಪ್ಪಳಿಸುವ ಮುನ್ನ ಬಾನಂಗಳದಲ್ಲಿ ಕಂಡುಬರುವ ಕಪ್ಪು ಮೋಡಗಳ ಮುಸುಕಿನ ಗುದ್ದಾಟ.

ಚಿತ್ರಕೃಪೆ: Abhijit Kar Gupta

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದ ಮತ್ತೊಂದು ಪ್ರಮುಖ ಪ್ರವಾಸಿ ಆಕರ್ಷಣೆಯಾದ ಅಲಿಪೋರ್ ಪ್ರಾಣಿ ಸಂಗ್ರಹಾಲಯದಲ್ಲಿನ ಗಡಿಯಾಲ್ (ಮೊಸಳೆಯ ಮತ್ತೊಂದು ಪ್ರಭೇದ). ಅಲಿಪೋರ್ ಭಾರತದ ಮೊದಲ ಶಾಸ್ತ್ರೋಕ್ತವಾಗಿ ಪ್ರಾರಂಭವಾದ ಪ್ರಾಣಿ ಸಂಗ್ರಹಾಲಯವಾಗಿದೆ.

ಚಿತ್ರಕೃಪೆ: Shaunak Modi

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲೊಂದು ದಿನ:

ಬೀದಿ ಬದಿಯ ಪಾನಿ ಪುರಿ ಮಾರುವ ವ್ಯಾಪಾರಿಗಳು. ಕೊಲ್ಕತ್ತಾದಲ್ಲಿ ಈ ರೀತಿಯಾಗಿ ದೊರಕುವ ರಸ್ತೆ ಬದಿಯ ಪಾನಿ ಪುರಿಗಳು ಯುವಕ ಯುವತಿಯರ ನೆಚ್ಚಿನ ಕುರುಕಲು ತಿಂಡಿಯಾಗಿದೆ.

ಚಿತ್ರಕೃಪೆ: M M

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದ ಸಾಲ್ಟ್ ಲೇಕ್ ಸೆಕ್ಟರ್ ಐದರಲ್ಲಿರುವ ಸಿಟಿಎಸ್ ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನದ ಕಚೇರಿ ಕಟ್ಟಡ.

ಚಿತ್ರಕೃಪೆ: seaview99

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದ ಮಚುವಾ ಬಜಾರ್ ಪ್ರದೇಶ. ಮೋಸಂಬಿ ಹಣ್ಣುಗಳಂತೆ ಪ್ರಸನ್ನವಾಗಿರುವ ಮುಖಗಳು.

ಚಿತ್ರಕೃಪೆ: Abhijit Kar Gupta

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದ ರಸ್ತೆ ಬದಿಯ ಟೀ ಶಾಪುಗಳು ಕಾರ್ಮಿಕರಲ್ಲದೆ ಭೇಟಿ ನೀಡುವ ಪ್ರವಾಸಿಗರಲ್ಲೂ ಬಹು ಫೇಮಸ್ಸು.

ಚಿತ್ರಕೃಪೆ: Sayamindu Dasgupta

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲೊಂದು ಹೀಗೊಂದು ಶಾಂತಮಯ ಮುಂಜಾವಿನ ಸಮಯ. ಸೂರ್ಯ ರಂಗೇರುತ್ತಿದ್ದಂತೆ ಎಲ್ಲೆಲ್ಲೂ ಜೀವ ಕಳೆ ತುಂಬಿ ಬಿಡುತ್ತದೆ.

ಚಿತ್ರಕೃಪೆ: Rajarshi MITRA

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲೊಂದು ದಿನ:

ಫುಟ್ ಪಾತಿನಲ್ಲೇ ಜೀವನ...ಸಂತೋಷಕ್ಕಿಲ್ಲ ಕೊರತೆ

ಚಿತ್ರಕೃಪೆ: M M

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲೊಂದು ದಿನ:

ನಿತ್ಯ ಕಾಯಕ ಸಂಪನ್ನವಾಗಲು ಬಚ್ಚಲಾದರೇನು...ಬೀದಿಯಾದರೇನು? ಯಾವ ಹಂಗು ನಮ್ಗಿಲ್ಲ ಸ್ವಾಮಿ.

ಚಿತ್ರಕೃಪೆ: M M

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲೊಂದು ದಿನ:

ಸಂತೋಷವನ್ನೂ ಕೊಳ್ಳಬಹುದು ಸ್ವಾಮಿ. ಹೌದು ನಾನು ಮಕ್ಕಳಿಗೆ ಸಂತೋಷವನ್ನು ಮಾರುತ್ತೇನೆ.

ಚಿತ್ರಕೃಪೆ: Soumyadeep Paul

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದ ಅತಿ ದೊಡ್ಡ ಕ್ರೀಡಾಂಗಣವಾದ ಇಡನ್ ಗಾರ್ಡನ್ ಮೈದಾನ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಲ್ಲಿ ಕ್ರಿಕೆಟ್ ಪಂದ್ಯಾವಳಿಗಳು ಆಯೋಜಿಸಲ್ಪಡುತ್ತವೆ. ಅಲ್ಲದೆ ಇದು ದೇಶದ ಬೃಹತ್ ಕ್ರಿಕೆಟ್ ಮೈದಾನಗಳ ಪೈಕಿ ಪ್ರಥಮ ಸ್ಥಾನದಲ್ಲಿದೆ.

ಚಿತ್ರಕೃಪೆ: Partha Bhaumik

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾ ನಗರದ ಪ್ರಮುಖ ರಸ್ತೆಗಳಲ್ಲೊಂದಾದ ವಿ ಐ ಪಿ ರಸ್ತೆಯ ಒಂದು ನೋಟ.

ಚಿತ್ರಕೃಪೆ: dwaipayan chakraborti

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾ ನಗರವು ರಾತ್ರಿಯಲ್ಲಿ ಕಂಗೊಳಿಸುತ್ತಿರುವುದು.

ಚಿತ್ರಕೃಪೆ: Abhijit Kar Gupta

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದಲ್ಲೊಂದು ದಿನ:

ಕೊಲ್ಕತ್ತಾದ ಪ್ರತಿನಿಧಿ ಎಂದೆ ಹೇಳಬಹುದಾದ ಕಾಳಿ ಮಾತೆ ಅಥವಾ ದುರ್ಗಾ ಮಾತಾಳ ಸುಂದರ ವಿಗ್ರಹ. ಸದಾ ಪ್ರವಾಸಿಗರನ್ನು ಆಕರ್ಷಿಸುತ್ತ ಕುತೂಹಲ ಕೆರಳಿಸುತ್ತದೆ.

ಚಿತ್ರಕೃಪೆ: Matthias Rosenkranz

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X