Search
  • Follow NativePlanet
Share
» »ಲೇ...ಪಕ್ಷಿ ಇಂದ ಉಂಟಾದ ಲೇಪಾಕ್ಷಿ

ಲೇ...ಪಕ್ಷಿ ಇಂದ ಉಂಟಾದ ಲೇಪಾಕ್ಷಿ

ಆಧುನಿಕ ಬೆಂಗಳೂರು ನಗರದಲ್ಲಿ ಸಾಂಪ್ರದಾಯಿಕ ತಳವಿರುವ ಜನರಿರುವುದು ಅಪಾರ. ಈ ನಗರ ಹೇಗೆ ರಂಗು ರಂಗಾದ, ಮೋಜು ಮಸ್ತಿಗಳ ಆಕರ್ಷಣೆಗೆ ಹೆಸರುವಾಸಿಯಾಗಿದೆಯೊ ಅದೇ ರೀತಿಯಲ್ಲಿ ಧಾರ್ಮಿಕ ಆಚರಣೆ, ಆಕರ್ಷಣೆಗಳಿಗೂ ಸಹ ಪ್ರಸಿದ್ಧಿ ಪಡೆದಿದೆ. ಬೆಂಗಳೂರಿನ ಸುತ್ತಮುತ್ತಲಿನಲ್ಲಿ ಹಲವಾರು ಐತಿಹಾಸಿಕ, ಸಾಂಪ್ರದಾಯಿಕ, ಧಾರ್ಮಿಕ ಪಟ್ಟಣಗಳನ್ನು ಕಾಣಬಹುದು.

ಆ ಪಟ್ಟಿಯಲ್ಲಿ ಹೆಸರಿಸುತ್ತ ಹೋದರೆ ಆಂಧ್ರ ಪ್ರದೇಶದಲ್ಲಿರುವ ಲೇಪಾಕ್ಷಿ ಕ್ಷೇತ್ರವೂ ಸಹ ಕಣ್ಣಿಗೆ ಕಂಡುಬರುತ್ತದೆ. "ಲೇಪಾಕ್ಷಿ" ಆಂಧ್ರಪ್ರದೇಶ ರಾಜ್ಯದ ಅನಂತಪುರಜಿಲ್ಲೆಯಲ್ಲಿರುವ ಒಂದು ಐತಿಹಾಸಿಕ ಹಾಗೂ ಚಾರಿತ್ರಿಕ ಪಟ್ಟಣವಾಗಿದೆ. ಬೆಂಗಳೂರಿನಿಂದ ಸುಮಾರು125 ಕಿ.ಮೀ ಗಳಷ್ಟು ದೂರದಲ್ಲಿದೆ.

ಲೇಪಾಕ್ಷಿ ಮೂಲತಃ ತನ್ನಲ್ಲಿರುವ ದೇವಾಲಯ ಸಂಕೀರ್ಣ ಹಾಗೂ ದೊಡ್ಡ ನಂದಿ ವಿಗ್ರಹಕ್ಕೆ ಪ್ರಸಿದ್ಧಿ ಪಡೆದಿದೆ. ಇತಿಹಾಸವನ್ನು ಕೆದಕಿದಾಗ ತಿಳಿದು ಬರುವ ವಿಷಯವೆಮ್ದರೆ ವಿಜಯನಗರ ಅರಸರ ಆಳ್ವಿಕೆಯ ಸಮಯದಲ್ಲಿ ಇಲ್ಲಿನ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಕೃಷ್ಣದೇವರಾಯನ ತಮ್ಮನಾಗಿದ್ದ ಅಚ್ಚುತರಾಯನ ಕಾಲದಲ್ಲಿ ಪೆನುಗೊಂಡ ಪ್ರದೇಶಕ್ಕೆ ಕೋಶಾಧಿಕಾರಿಯಾಗಿದ್ದ ವಿರೂಪಣ್ಣ ಎಂಬುವವರು ಈ ದೇವಸ್ಥಾನವನ್ನು ಕಟ್ಟಿಸಿದರು ಎನ್ನುವ ಮಾಹಿತಿಯಿದೆ.

ಲೇಪಾಕ್ಷಿ:

ಲೇಪಾಕ್ಷಿ:

ಈ ಸ್ಥಳಕ್ಕೆ ಲೇಪಾಕ್ಷಿ ಎಂಬ ಹೆಸರು ಬರಲು ರೋಚಕವಾದ ಹಿನ್ನಿಲೆಯಿದೆ. ಅದರ ಪ್ರಕಾರ, ರಾಮಾಯಣದಲ್ಲಿ ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗುವಾಗ ಜಟಾಯು ಪಕ್ಷಿ ರಾಜನು ರಾವಣನನ್ನು ತಡೆಯಲು ಪ್ರಯತ್ನಿಸಿದ. ಇದರಿಂದ ರಾವಣ ಕೋಪಗೊಂಡು ಪಕ್ಷಿಯ ರೆಕ್ಕೆಗಳನ್ನೆ ಕತ್ತರಿಸಿ ಮುನ್ನಡೆದ.

ಚಿತ್ರಕೃಪೆ: Premnath Thirumalaisamy

ಲೇಪಾಕ್ಷಿ:

ಲೇಪಾಕ್ಷಿ:

ನಂತರ ಕೆಳಗೆ ಬಿದ್ದ ಪಕ್ಷಿ ಜಟಾಯು ರಾಮ ಆ ಮಾರ್ಗವಾಗಿ ಬರುವವರೆಗೆ ಕಾದು ರಾವಣ ಸೀತಾಮಾತೆಯನ್ನು ಕದ್ದೊಯ್ದ ವಿಚಾರ ತಿಳಿಸಿದ. ರಾಮನು ಅದನ್ನು ಲೇ ಪಕ್ಷಿ ಎಂದು ಕರೆದು ಅದು ಲಯದಲ್ಲಿ ಲೀನ ವಾಗುವಂತೆ ಮಾಡಿದ. "ಲೇ ಪಕ್ಷಿ" ಎಂದದ್ದೆ, ಕಾಲ ಕ್ರಮೇಣ ಆ ಸ್ಥಳಕ್ಕೆ 'ಲೇಪಾಕ್ಷಿ' ಎಂಬ ಹೆಸರು ಬರಲು ಕಾರಣವಾಯಿತೆಂದು ಹೇಳಲಾಗುತ್ತದೆ.

ಚಿತ್ರಕೃಪೆ: Premnath Thirumalaisamy

ಲೇಪಾಕ್ಷಿ:

ಲೇಪಾಕ್ಷಿ:

ಲೇಪಾಕ್ಷಿಯ ದೇವಸ್ಥಾನವು 7 ಪ್ರಾಕಾರಗಳಷ್ಟು ವಿಸ್ತಾರವಾಗಿ ಹರಡಿದ್ದು, ಸದ್ಯ ಕೇವಲ 3 ಪ್ರಾಕಾರಗಳು ಮಾತ್ರ ಉಳಿದುಕೊಂಡಿವೆ. ದೇವಸ್ಥಾನವನ್ನು ಕೂರ್ಮಶೈಲವೆಂಬ ಆಮೆಯ ಆಕಾರ ಹೊಂದಿರುವ ಬೆಟ್ಟದ ಮೇಲೆ ನಿರ್ಮಿಸಲಾಗಿದೆ.

ಚಿತ್ರಕೃಪೆ: Indi Samarajiva

ಲೇಪಾಕ್ಷಿ:

ಲೇಪಾಕ್ಷಿ:

ಲೇಪಾಕ್ಷಿಯ ಪ್ರಮುಖ ದೇವಾಲಯವಾದ ವೀರಭದ್ರ ದೇವಾಲಯವು ಶಿವನಿಗೆ (ವೀರಭದ್ರನ ರೂಪದಲ್ಲಿ) ಮುಡಿಪಾದ ದೇವಾಲಯವಾಗಿದೆ. ಸಹೋದರರಾದ ವೀರಣ್ಣ ಹಾಗೂ ವಿರೂಪಣ್ಣರಿಂದ ನಿರ್ಮಿತವಾದ ಈ ದೇವಾಲಯವು ವಿಜಯನಗರ ವಾಸ್ತು ಶೈಲಿ ಹಾಗೂ ಮೂರಲ್ ವರ್ಣಚಿತ್ರಗಳಿಗೆ ಅತ್ಯುತ್ತಮ ಉದಾಹರಣೆಯಾಗಿದೆ.

ಚಿತ್ರಕೃಪೆ: Premnath Thirumalaisamy

ಲೇಪಾಕ್ಷಿ:

ಲೇಪಾಕ್ಷಿ:

ಏಕ ಶಿಲೆಯಲ್ಲಿ ಕೆತ್ತಲಾದ ನಂದಿ ವಿಗ್ರಹವೂ ಸಹ ಲೇಪಾಕ್ಷಿಯ ಪ್ರಮುಖ ಆಕರ್ಷಣೆಗಳ ಪೈಕಿ ಒಂದಾಗಿದೆ. ಈ ವಿಗ್ರಹವು 4.5 ಮೀ. ಗಳಷ್ಟು ಎತ್ತರವಾಗಿದ್ದು, 8.3 ಮೀ. ಗಳಷ್ಟು ಉದ್ದವಾಗಿದೆ. ಮುಖ್ಯ ದೇವಾಲಯದಿಂದ 200 ಮೀ. ಗಳಷ್ಟು ದೂರದಲ್ಲಿ ಈ ವಿಗ್ರಹವನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Nagesh Kamath

ಲೇಪಾಕ್ಷಿ:

ಲೇಪಾಕ್ಷಿ:

ಅಲ್ಲದೆ ದೇವಾಲಯದ ಅನೇಕ ಕೆತ್ತನೆಗಳು, ರಚನೆಗಳು ಭೇಟಿ ನೀಡುವವರ ಮನ ಕದಿಯುವಲ್ಲಿ ಯಶಸ್ವಿಯಾಗಿವೆ. ಕಲ್ಲಿನ ಚೈನು, ವಾಸ್ತುಪುರುಷ, ಪದ್ಮಿನಿ ಓಡುವ ಮಹಿಳೆ, ಜೋಲುವ ಖಂಬ ಹೀಗೆ ಅನೇಕ ವಿಸ್ಮಯ, ಅಚ್ಚರಿ ಮೂಡಿಸುವ ರಚನೆಗಳನ್ನು ಲೇಪಾಕ್ಷಿಯಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: Indi Samarajiva

ಲೇಪಾಕ್ಷಿ:

ಲೇಪಾಕ್ಷಿ:

ಲೇಪಾಕ್ಷಿ ತೆರಳುವುದು ಸುಲಭವಾಗಿದ್ದು, ಬೆಂಗಳೂರಿನಿಂದ ಹಿಂದುಪುರದವರೆಗೆ ರೈಲು ಅಥವಾ ಬಸ್ಸಿನಲ್ಲಿ ಪಯಣಿಸಬಹುದು. ನಂತರ ಹಿಂದುಪುರದಿಂದ 13 ಕಿ.ಮೀ ದೂರವಿರುವ ಲೇಪಾಕ್ಷಿಯನ್ನು ಸುಲಭವಾಗಿ ಖಾಸಗಿ ವಾಹನಗಳ ಮೂಲಕ ತೆರಳಬಹುದಾಗಿದೆ.

ಚಿತ್ರಕೃಪೆ: Premnath Thirumalaisamy

ಲೇಪಾಕ್ಷಿ:

ಲೇಪಾಕ್ಷಿ:

ಲೇಪಾಕ್ಷಿಯ ದಂಗುಬಡಿಸುವ ಆಕರ್ಷಕ ಕೆತ್ತನೆಗಳು. ಜೋಲುವ ಖಂಬ ಲೇಪಾಕ್ಷಿ ದೇವಾಲಯದ ಒಂದು ಅಚ್ಚರಿ.

ಚಿತ್ರಕೃಪೆ: Nagesh Kamath

ಲೇಪಾಕ್ಷಿ:

ಲೇಪಾಕ್ಷಿ:

ಲೇಪಾಕ್ಷಿಯ ದಂಗುಬಡಿಸುವ ಆಕರ್ಷಕ ಕೆತ್ತನೆಗಳು.

ಚಿತ್ರಕೃಪೆ: Vishal Prabhu

ಲೇಪಾಕ್ಷಿ:

ಲೇಪಾಕ್ಷಿ:

ಲೇಪಾಕ್ಷಿಯ ದಂಗುಬಡಿಸುವ ಆಕರ್ಷಕ ಕೆತ್ತನೆಗಳು.

ಚಿತ್ರಕೃಪೆ: Vishal Prabhu

ಲೇಪಾಕ್ಷಿ:

ಲೇಪಾಕ್ಷಿ:

ಲೇಪಾಕ್ಷಿಯ ದಂಗುಬಡಿಸುವ ಆಕರ್ಷಕ ಕೆತ್ತನೆಗಳು.

ಚಿತ್ರಕೃಪೆ: Vishal Prabhu

ಲೇಪಾಕ್ಷಿ:

ಲೇಪಾಕ್ಷಿ:

ಲೇಪಾಕ್ಷಿಯ ದಂಗುಬಡಿಸುವ ಆಕರ್ಷಕ ಕೆತ್ತನೆಗಳು.

ಚಿತ್ರಕೃಪೆ: Premnath Thirumalaisamy

ಲೇಪಾಕ್ಷಿ:

ಲೇಪಾಕ್ಷಿ:

ಲೇಪಾಕ್ಷಿಯ ದಂಗುಬಡಿಸುವ ಆಕರ್ಷಕ ಕೆತ್ತನೆಗಳು.

ಚಿತ್ರಕೃಪೆ: Nishanth Jois

ಲೇಪಾಕ್ಷಿ:

ಲೇಪಾಕ್ಷಿ:

ಲೇಪಾಕ್ಷಿಯ ದಂಗುಬಡಿಸುವ ಆಕರ್ಷಕ ಕೆತ್ತನೆಗಳು.

ಚಿತ್ರಕೃಪೆ: Nagarjun Kandukuru

ಲೇಪಾಕ್ಷಿ:

ಲೇಪಾಕ್ಷಿ:

ಲೇಪಾಕ್ಷಿಯ ದಂಗುಬಡಿಸುವ ಆಕರ್ಷಕ ಕೆತ್ತನೆಗಳು.

ಚಿತ್ರಕೃಪೆ: Premnath Thirumalaisamy

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X