Search
  • Follow NativePlanet
Share
» »ಉಡುಪಿಯಲ್ಲಿ ಶ್ರೀಕೃಷ್ಣ ಹೇಗೆ ಬಂದ ಗೊತ್ತೆ?

ಉಡುಪಿಯಲ್ಲಿ ಶ್ರೀಕೃಷ್ಣ ಹೇಗೆ ಬಂದ ಗೊತ್ತೆ?

By Vijay

ಕರ್ನಾಟಕದಲ್ಲಿರುವ ಉಡುಪಿ ನಗರವು ಸುಂದರ ಪ್ರವಾಸಿ ತಾಣವಾಗಿರುವುದು ಮಾತ್ರವಲ್ಲದೆ ಧಾರ್ಮಿಕತೆಯಿಂದಲೂ ಹೆಚ್ಚು ಮಹತ್ವ ಪಡೆದ ಸ್ಥಳವಾಗಿದೆ. ಜನಪ್ರೋಇಅ ನಂಬಿಕೆಯ ಪ್ರಕಾರ, ಹಿಂದೆ ಈ ಪ್ರದೇಶದ ರಾಜನಾಗಿದ್ದ, ಪರಶುರಾಮರ ಭಕ್ತನಾಗಿದ್ದ ರಾಮಭೋಜನು ಅನಂತೇಶ್ವರನ ವಿಗ್ರಹ ಪ್ರತಿಷ್ಠಾಪಿಸಿದ್ದ.

ಉಡುಪಿಗೆ ಹೋದರೆ ಇವುಗಳಿಗೆ ಭೇಟಿ ನೀಡಲು ಮರೆಯದಿರಿ

ಅಲ್ಲದೆ, ದಕ್ಷ ಪ್ರಜಾಪತಿಯ ಶಾಪದಿಂದ ಮುಕ್ತಿ ಹೊಂದಲು ಚಂದ್ರನು ಇಲ್ಲಿರುವ ಒಂದು ಸ್ಥಳದಲ್ಲಿ ಶಿವನನ್ನು ಕುರಿತು ತಪಸ್ಸುಗೈದಿದ್ದ ಹಾಗೂ ಅಲ್ಲಿ ಇಂದು ಚಂದ್ರೇಶ್ವರ ದೇವಾಲಯದ ನಿರ್ಮಾಣ ಮಾಡಲಾಗಿದೆ. ಚಂದ್ರನು ತಪಸ್ಸು ಮಾಡಿದ ಸ್ಥಳವೆ ಇಂದು ಉಡುಪಿಯಾಗಿದೆ. ಉಡು ಎಂದರೆ ನಕ್ಷತ್ರ ಎಂತಲೂ, ಪಾ ಎಂದರೆ ಅನುಯಾಯಿ ಎಂತಲೂ ಅರ್ಥಬರುತ್ತದೆ. ಹೀಗಾಗಿ ಉಡುಪ ಎಂಬುದೆ ಇಂದಿನ ಉಡುಪಿಯಾಗಿದೆ.

ಉಡುಪಿಯಲ್ಲಿ ಶ್ರೀಕೃಷ್ಣ ಹೇಗೆ ಬಂದ ಗೊತ್ತೆ?

ಚಿತ್ರಕೃಪೆ: Ashok Prabhakaran

ಮೊದಲಿನಿಂದಲೂ ಸಾಮಾನ್ಯವಾಗಿ ಉಡುಪಿಗೆ ಭೇಟಿ ನೀಡುವ ಭಕ್ತರು ಅನುಸರಿಸಿಕೊಂಡ ಪದ್ಧತಿ ಎಂದರೆ ಇಲ್ಲಿನ ಅನಂತೇಶ್ವರ ಹಾಗೂ ಚಂದ್ರೇಶ್ವರ ದೇವಾಲಯಕ್ಕೆ ಭೇಟಿ ನೀಡಿ ನಂತರ ಉಡುಪಿಯ ಹೆಗ್ಗುರುತಾದ ಕೃಷ್ಣ ಮಠ ಅಥವಾ ದೇವಾಲಯಕ್ಕೆ ಭೇಟಿ ನೀಡಿ ಮುದ್ದು ಕೃಷ್ಣನ ದರ್ಶನ ಪಡೇಯುತ್ತಾರೆ. ಇಲ್ಲಿ ಕೃಷ್ಣ ಬಂದು ನೆಲೆಸಿರುವುದರ ಹಿನ್ನಿಲೆಯೂ ಅಪರೂಪವಾಗಿದೆ.

ಉಡುಪಿಯಲ್ಲಿ ಶ್ರೀಕೃಷ್ಣ ಹೇಗೆ ಬಂದ ಗೊತ್ತೆ?

ಚಿತ್ರಕೃಪೆ: Vinayaraj

ಒಂದು ಜನಪ್ರೀಯ ದಂತಕಥೆಯ ಪ್ರಕಾರ, ಒಮ್ಮೆ ದ್ವಾರಕೆಯಲ್ಲಿ ಕೃಷ್ಣನ ವಿಗ್ರಹವು ಗೋಪಿಚಂದನದಲ್ಲಿ ಮುಳುಗಿ ಹೋಗಿ ಕಾಣದಂತಾಯಿತು. ಗೋಪಿಚಂದನವನ್ನು ಎಲ್ಲಿಗೊ ಸಾಗಿಸಬೇಕಾಗಿರುವುದರಿಂದ ದ್ವಾರಕೆಯಿಂದ ದೋಣಿಯ ಅಂಬಿಗ ಅದನ್ನು ದೋಣಿಯಲ್ಲಿ ಹಾಕಿ ಸಮುದ್ರದಲ್ಲಿ ಪ್ರಯಾಣ ಆರಂಭಿಸಿದ. ಮಲ್ಪೆ ಬಳಿಯ ಕರಾವಳಿಯಲ್ಲಿ ಆ ದೋಣಿ ಬಂದಾಗ ಅನಿರೀಕ್ಷಿತವಾಗಿ ಬಿರುಗಾಳಿಗೆ ಸಿಲುಕಿತು.

ಉಡುಪಿಯಲ್ಲಿ ಶ್ರೀಕೃಷ್ಣ ಹೇಗೆ ಬಂದ ಗೊತ್ತೆ?

ಬ್ರಹ್ಮ ರಥ, ಚಿತ್ರಕೃಪೆ: Paul Mannix

ಇತ್ತ ದ್ವೈತ ಮತದ ಸಂಸ್ಥಾಪಕರಾದ ಶ್ರೀ ಮಾಧ್ವಾಚಾರ್ಯರು ತಮ್ಮ ದಿವ್ಯ ದೃಷ್ಟಿಯಿಂದ ಇದನ್ನರಿತು ಮಲ್ಪೆಯ ಬಳಿ ಬಂದು ತಮ್ಮ ಶಕ್ತಿಯಿಂದ ಬಿರುಗಾಳಿಯನ್ನು ಶಾಂತಗೊಳಿಸಿ ದೋಣಿಯು ಸುರಕ್ಷಿತವಾಗಿ ತೀರಕ್ಕೆ ಬರುವಂತೆ ಮಾಡಿದರು. ಇದರಿಂದ ಸಂತಸಪಟ್ಟ ದೋಣಿಯ ಅಂಬಿಗ ಮಧ್ವಾಚಾರ್ಯರು ಮಾಡಿದ ಉಪಕಾರಕ್ಕೆ ಬದಲಾಗಿ ದೋಣಿಯಲ್ಲಿರುವ ಯಾವ ವಸ್ತುವನ್ನಾದರೂ ತೆಗೆದುಕೊಳ್ಳಲು ವಿನಂತಿಸಿದಾಗ, ಮಧ್ವಚಾರ್ಯರು ಕೃಷ್ಣನ ವಿಗ್ರಹವಿದ್ದ ಆ ಗೋಪಿಚಂದನವನ್ನು ತೆಗೆದುಕೊಂಡು ಕೊಳಕ್ಕೆ ಅದನ್ನು ಶುದ್ಧಗೊಳಿಸಿ ಅದರೊಳಗಿದ್ದ ಕೃಷ್ಣ ವಿಗ್ರಹವನ್ನು ಪ್ರತಿಷ್ಠಾಪಿಸಿದರೆನ್ನಲಾಗಿದೆ.

ಉಡುಪಿಯಲ್ಲಿ ಶ್ರೀಕೃಷ್ಣ ಹೇಗೆ ಬಂದ ಗೊತ್ತೆ?

ಚಿತ್ರಕೃಪೆ: Magiceye

ಗೌರವಯುತ ಮಠಾಧೀಶರಾದ ಶ್ರಿ ರಘುವರ್ಯ ತೀರ್ಥರ ಪ್ರಕಾರ, ಮಧ್ವಾಚಾರ್ಯರು ಧರ್ಮ ಪ್ರಸಾರಕ್ಕಾಗಿ ಉಡುಪಿಗೆ ಬಂದಿದ್ದರು, ದ್ವಾರಕೆಯಿಂದ ಬರುತ್ತಿದ್ದ ದೋಣಿ ಮಲ್ಪೆಯ ಬಳಿ ಅಪಘಾತಕ್ಕೀಡಾಯಿತು. ಇತ್ತ ಧ್ಯಾನದಲ್ಲಿದ್ದ ಮಧಾಚಾರ್ಯರಿಗೆ ಇದರ ಸುಳಿವು ದೊರೆತು ಶೀಘ್ರವಾಗಿ ತಮ್ಮ ಶಿಷ್ಯರೊಂದಿಗೆ ಮಲ್ಪೆಗೆ ತೆರಳಿ ಅಲ್ಲಿ ಕೃಷ್ಣನ ವಿಗ್ರಹ ಹುಡುಕಿ ನಂತರ ಕೊಳಕ್ಕೆ ಬಂದು ಅದನ್ನು ಶುದ್ಧಗೊಳಿಸಿ, ಮಠದಲ್ಲಿ ಸ್ಥಾಪಿಸಿದರು ಹಾಗೂ ದಿನನಿತ್ಯ ಅದರ ಪೂಜೆಗೆ ವ್ಯವಸ್ಥೆ ಮಾಡಿದರು. ಕೃಷ್ಣನ ವಿಗ್ರಹ ಶುದ್ಧಗೊಳಿಸಲಾದ ಕೆರೆಗೆ ಇಂದು ಮಾಧ್ವ ಸರೋವರ ಎಂದೆ ಕರೆಯಲಾಗುತ್ತದೆ.

ಉಡುಪಿಯಲ್ಲಿ ಶ್ರೀಕೃಷ್ಣ ಹೇಗೆ ಬಂದ ಗೊತ್ತೆ?

ಕನಕನ ಕಿಂಡಿ, ಚಿತ್ರಕೃಪೆ: Trimurthykulkarni

ಕೃಷ್ಣ ಮಠಕ್ಕೆ ಸಂಬಂಧಿಸಿದಂತೆ ಇನ್ನೊಂದು ಮಹಿಮೆಯಿದೆ. ಅದೇನೆಂದರೆ 16 ನೇಯ ಶತಮಾನದಲ್ಲಿ ವಾದಿರಾಜರ ಆಡಳಿತವಿದ್ದ ಸಮಯದಲ್ಲಿ ಕೆಳ ಜಾತಿಗೆ ಸೇರಿದ ಆದರೆ ಕೃಷ್ಣನ ಪರಮ ಭಕ್ತರಾಗಿದ್ದ ಕನಕದಾಸರು ಕೃಷ್ಣ ದರ್ಶನ ಕೋರಿ ಇಲ್ಲಿಗೆ ಬಂದಾಗ ಅವರನ್ನು ಒಳಗಡೆ ಬಿಡಲಿಲ್ಲ. ಆದರೂ ಅವರು ಕೋಪಗೊಳ್ಳದೆ ಗರ್ಭಗುಡಿಯ ಹಿಂಭಾಗದಲ್ಲಿ ಗೋಡೆಯ ಹಿಂದೆ ನಿಂತು ಕೃಷ್ಣನನ್ನು ಧ್ಯಾನಿಸಿದರು. ಅವರ ಭಕ್ತಿಗೆ ಪ್ರಸನ್ನನಾದ ಕೃಷ್ಣ ಹಿಂಭಾಗದಲ್ಲಿ ಗೋಡೆಯಲ್ಲಿ ರಂಧ್ರ ಉಂಟಾಗುವಂತೆ ಮಾಡಿ ಸ್ವತಃ ತಾನೆ ಹಿಮ್ಮುಖವಾಗಿ ತಿರುಗಿ ಅವರಿಗೆ ದರ್ಶನ ನೀಡಿದ. ಇಂದು ಅದು ಕನಕನ ಕಿಂಡಿ ಎಂದೆ ಪ್ರಸಿದ್ಧವಾಗಿದೆ.

ಉಡುಪಿಯಲ್ಲಿ ಶ್ರೀಕೃಷ್ಣ ಹೇಗೆ ಬಂದ ಗೊತ್ತೆ?

ಚಿತ್ರಕೃಪೆ: Ilya Mauter

ಈ ರೀತಿಯಾಗಿ ದ್ವಾರಕೆಯಿಂದ ಸ್ವತಃ ಕೃಷ್ಣನೆ ಇಲ್ಲಿ ಆಗಮಿಸಿರುವನೆಂದು, ದರುಶನ ಕೋರಿ ಬರುವ ಎಲ್ಲ ಭಕ್ತರನ್ನು ಹರಸುವವನೆಂದು ನಂಬಲಾಗಿದ್ದು ದಕ್ಷಿಣ ಭಾರತದ ವಿವಿಧೆಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಕೃಷ್ಣನ ಭಕ್ತರು ಉಡುಪಿಗೆ ಭೇಟಿ ನೀಡುತ್ತಾರೆ. ಕೃಷ್ಣ ಮಠದ ಹೊರತಾಗಿ ಇತರೆ ಅಷ್ಟ ಮಠಗಳೂ ಸಹ ಉಡುಪಿಯಲ್ಲಿವೆ. ಈ ಅಷ್ಟಮಠಗಳ ಆಡಳಿತವೆ ಕೃಷ್ಣ ಮಠದ ಸಕಲ ಕಾರ್ಯಗಳ, ಸೇವೆಗಳ ನಿರ್ವಹಣೆ ಮಾಡುತ್ತದೆ.

ಕೃಷ್ಣನ ಅಮೋಘ ನೆಲೆ ಹಿಮವದ್ ಗೋಪಾಲಸ್ವಾಮಿ ಬೆಟ್ಟ

ಮಧ್ವಾಚಾರ್ಯರು ತಮ್ಮ ನೇರ ಶಿಷ್ಯರನ್ನು ಎಂಟು ಗ್ರಾಮಗಳಲ್ಲಿ ಮಠಗಳನ್ನು ಸ್ಥಾಪಿಸಿ ಅದರ ಮುಖ್ಯಸ್ಥರನ್ನಾಗಿ ನಿಯೋಜನೆಗೊಳಿಸಿದರು. ಅವೆ ಇಂದು ಅಷ್ಟ ಮಠಗಳಾಗಿದ್ದು ಉಡುಪಿ ಪಟ್ಟಣದಲ್ಲೆ ಮಠಗಳನ್ನು ಹೊಂದಿವೆ. ಅವುಗಳೆಂದರೆ ಪೇಜಾವರ, ಫಲಿಮಾರು, ಅದಮಾರು, ಪುತ್ತಿಗೆ, ಸೋದೆ, ಕೃಷ್ಣಾಪುರ, ಶೀರೂರು, ಕಾಣಿಯೂರು.

ಉಡುಪಿಗೆ ತಲುಪುವ ಬಗೆ:

ಉಡುಪಿಯು ಬೆಂಗಳೂರಿನಿಂದ 405 ಕಿ.ಮೀ ಹಾಗೂ ಮಂಗಳೂರಿನಿಂದ 56 ಕಿ.ಮೀ ಗಳಷ್ಟು ದೂರವಿದ್ದು ತೆರಳಲು ಸಾಕಷ್ಟು ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳು ದೊರೆಯುತ್ತವೆ. ಅಲ್ಲದೆ ಮಂಗಳೂರು ಹಾಗೂ ಬೆಂಗಳೂರಿನಿಂದ ರೈಲುಗಳು ದೊರೆಯುತ್ತವೆ. ಉಡುಪಿ ನಗರ ಪ್ರದೇಶವಾಗಿದ್ದು ವಸತಿ ಪಡೆಯಲು ಸಾಕಷ್ಟು ವಸತಿಗೃಹಗಳು ಹಾಗೂ ಹೋಟೆಲುಗಳಿವೆ. ಆದರೆ ಉತ್ಸವಗಳ ಸಂದರ್ಭದಲ್ಲಿ ಜನದಟ್ಟನೆ ಹೆಚ್ಚಾಗಿರುವುದರಿಂದ ಮೊದಲೆ ಹೋಟೆಲ್ ರೂಂ ಬುಕ್ ಮಾಡಿ ಹೋದರೆ ಒಳಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X