Search
  • Follow NativePlanet
Share
» »ದೇವತೆಗಳ ಸಮ್ಮೇಳನ ನಡೆಯುವ ಸ್ಥಳ!

ದೇವತೆಗಳ ಸಮ್ಮೇಳನ ನಡೆಯುವ ಸ್ಥಳ!

ಕರ್ನಾಟಕದ ಕೋಲಾರ ಜಿಲ್ಲೆಯ ಮುಳುಬಾಗಿಲು ತಾಲೂಕಿನಲ್ಲಿರುವ ಕುರುಡುಮಲೆ ಒಂದು ಪ್ರಸಿದ್ಧ ಯಾತ್ರಾ ಸ್ಥಳವಾಗಿದ್ದು ಸೋಮೇಶ್ವರ ಹಾಗೂ ಗಣಪತಿ ದೇವಾಲಯಗಳಿಗೆ ಪ್ರಸಿದ್ಧಿ ಪಡೆದಿದೆ

By vijay

ಪ್ರತಿ ಬಾರಿ ಬ್ರಹ್ಮದೇವರು ಯುಗಗಳು ಕಳೆದ ನಂತರ ಹೊಸ ಯುಗ ಪ್ರಾರಂಭಿಸುತ್ತಾರೆ. ಅದಕ್ಕೆ ಪೂರಕವಾಗಿ ಹೊಸ ಪೃಥ್ವಿಯನ್ನು ಸೃಷ್ಟಿಸುತ್ತಾರೆ ಎಂಬ ನಂಬಿಕೆ ಸನಾತನ ಕಾಲದಿಂದಲೂ ಹಿಂದುಗಳು ನಂಬುತ್ತಾರೆ. ಹೀಗೆ ಹೊಸ ಸೃಷ್ಟಿಯನ್ನು ಪ್ರಾರಂಭಿಸುವ ಸಂದರ್ಬದಲ್ಲಿ ಸಕಲ ದೇವತೆಗಳು ಒಂದೆಡೆ ಸಮ್ಮಿಲಿತಗೊಂಡು ಚರಚೆ ಮಾಡುತ್ತಾರೆ ಎಂಬ ನಂಬಿಕೆಯೂ ಇದೆ.

ಆ ನಂಬಿಕೆಯ ಪ್ರಕಾರವಾಗಿ ಭೂಲೋಕದಲ್ಲೆ ಒಂದು ಸ್ಥಳವಿದ್ದು ಆ ಸ್ಥಳದಲ್ಲಿ ಸಕಲ ದೇವತೆಗಳು ಭೂಲೋಕಕ್ಕೆ ಇಳಿದು ಬರುತ್ತಾರೆಂದೂ ಸಾಕಷ್ಟು ಜನರು ನಂಬುತ್ತಾರೆ. ಆ ಒಂದು ಸ್ಥಳವು ಇರುವುದು ಕರ್ನಾಟಕದಲ್ಲೆ ಎಂದಾಗ ನಿಮ್ಮಲ್ಲಿ ಬಹುತೇಕರಿಗೆ ಆಶರ್ಯ ಹಾಗೂ ಸಂತೋಷವಾಗಬಹುದು. ಹೌದು, ಆ ಸ್ಥಳ ಇರುವುದು ಕರ್ನಾಟಕದಲ್ಲೆ!

ದೇವತೆಗಳ ಸಮ್ಮೇಳನ ನಡೆಯುವ ಸ್ಥಳ!

ಸೋಮೇಶ್ವರ ದೇವಾಲಯ, ಚಿತ್ರಕೃಪೆ: Ganesha1

ಕರ್ನಾಟಕದ ಕೋಲಾರ ಜಿಲ್ಲೆಯ ಮುಳುಬಾಗಿಲು ತಾಲೂಕಿನಲ್ಲಿರುವ ಕುರುಡುಮಲೆ ಎಂಬ ಸ್ಥಳವೆ ಆ ಪವಿತ್ರ ಪ್ರದೇಶವಾಗಿದೆ. ಕುರುಡುಮಲೆಯು ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿದ್ದು, ಪ್ರಸಿದ್ಧ ಯಾತ್ರಾ ಸ್ಥಳವೆಂದೂ ಸಹ ಖ್ಯಾತಿ ಪಡೆದಿದೆ. ಪ್ರಾಚೀನ ಶಿವನ ಹಾಗೂ ಜಾಗೃತವಾದ ಗಣಪತಿ ದೇವಾಲಯವಿರುವ ಅದ್ಭುತ ಸ್ಥಳವಾಗಿದೆ ಕುರುಡುಮಲೆ.

ಕುರುಡು ಮಲೆಯ ಗಣಪತಿ ಮೂರ್ತಿಯು ಅತ್ಯಂತ ಪ್ರಭಾವಶಾಲಿ ಮೂರ್ತಿಯೆಂದು ಹೆಸರಾಗಿದೆ. ದಂತಕಥೆಗಳ ಪ್ರಕಾರ ಈ ಗಣಪತಿ ಮೂರ್ತಿಯನ್ನು ಸಾಕ್ಷಾತ್ ತ್ರಿಮೂರ್ತಿಗಳು ಪ್ರತಿಷ್ಟಾಪಿಸಿದರೆಂದು ತಿಳಿದು ಬಂದಿದೆ. ಈ ವಿಗ್ರಹದ ಸುತ್ತಲು ದೇವಾಲಯವನ್ನು ವಿಜಯನಗರದ ಅರಸರು ಕಟ್ಟಿಸಿದರೆಂದು ಸ್ಥಳಪುರಾಣದಿಂದ ತಿಳಿದುಬರುತ್ತದೆ.

ದೇವತೆಗಳ ಸಮ್ಮೇಳನ ನಡೆಯುವ ಸ್ಥಳ!

ಗಣೇಶ ವಿಗ್ರಹ

ಕುರುಡು ಮಲೆಯ ಸುತ್ತಲು ಇರುವ ಇನ್ನಿತರ ದಂತಕಥೆಗಳು ಹೀಗಿವೆ, ಕುರುಡು ಮಲೆ ಎಂಬ ಹೆಸರು ಕೂಡು ಮತ್ತು ಮಲೆ ಎಂಬ ಪದಗಳಿಂದ ಬಂದಿದೆ. ಇದರರ್ಥ ಸೇರುವ, ಭೇಟಿಯಾಗುವ ಸ್ಥಳವೆಂದು ಅರ್ಥ. ಸ್ಥಳೀಯರ ನಂಬಿಕೆಗಳಂತೆ ಈ ಸ್ಥಳವು ದೇವರುಗಳಿಗೆ ಬೇಸರವಾದಾಗ ಅವರು ಕಾಲ ಕಳೆಯುವ ಉದ್ದೇಶದಿಂದ ಭೂಮಿಗೆ ಇಳಿದು ಬರುವ ಸ್ಥಳವೆಂದು ಭಾವಿಸಲಾಗಿದೆ.

ಇಲ್ಲಿನ ಗಣೇಶ ದೇವಾಲಯವು 18 ಅಡಿ ಎತ್ತರದ ಗಣಪತಿ ಮೂರ್ತಿಯನ್ನು ಹೊಂದಿದೆ ಮತ್ತು ದೇವಾಲಯದ ವಿನ್ಯಾಸವನ್ನು ಎರಡು ವಿಭಿನ್ನ ಶೈಲಿಗಳಲ್ಲಿ ನಿರ್ಮಿಸಲಾಗಿದೆ. ಇದರ ಕುರಿತು ದಂತಕಥೆಗಳಿದ್ದು ಅದರ ಪ್ರಕಾರ ಈ ದೇವಾಲಯವನ್ನು ಇತಿಹಾಸ ಪ್ರಸಿದ್ಧ ಶಿಲ್ಪಿಗಳಾದ ಜಕಣಾಚಾರಿ ಮತ್ತು ಅವನ ಮಗ ಡಕಣಾಚಾರಿ ಇಬ್ಬರು ವಿನ್ಯಾಸಗೊಳಿಸಿದರು ಎಂದು ಹೇಳಲಾಗುತ್ತದೆ.

ದೇವತೆಗಳ ಸಮ್ಮೇಳನ ನಡೆಯುವ ಸ್ಥಳ!

ಚಿತ್ರಕೃಪೆ: Dineshkannambadi

ಇದಲ್ಲದೆ, ಕುರುಡುಮಲೆಯಲ್ಲಿ ಶಿವನಿಗೆ ಮುಡಿಪಾದ ಪುರಾತನ ಸೋಮೇಶ್ವರ ದೇವಾಲಯವಿದ್ದು, ಅದು ಇಲ್ಲಿನ ಗಣಪತಿ ದೇವಾಲಯಕ್ಕಿಂತ ಹಳೆಯದಾಗಿದೆ. ಇದರ ನಿರ್ಮಾಣ ಕಾಲವು ನಮ್ಮನ್ನು ಚೋಳರ ಆಡಳಿತ ಕಾಲದಷ್ಟರವರೆಗೂ ಕೊಂಡೊಯ್ಯುತ್ತದೆ. ಹಾಗಾಗಿ ಕುರುಡುಮಲೆ ಒಂದು ವಿಶಿಷ್ಟ ಧಾರ್ಮಿಕ ಪ್ರವಾಸಿ ತಾಣವಾಗಿಯೂ ಜನರ ಗಮನಸೆಳೆಯುತ್ತದೆ.

ಸಾಕಷ್ಟು ಆಕರ್ಷಿಸುವ ಪುರಾತನ ಗಣೇಶ ದೇವಾಲಯಗಳು!

ಕೋಲಾರ ಜಿಲ್ಲೆಯಲ್ಲಿರುವ ಕುರುಡುಮಲೆಯು ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ 100 ಕಿ.ಮೀ ಗಳಷ್ಟು ದೂರದಲ್ಲಿದ್ದು, ರಸ್ತೆ ಮಾರ್ಗದ ಮೂಲಕ ಸುಲಭವಾಗಿ ತಲುಪಬಹುದು. ಮುಳುಬಾಗಿಲುವಿನಿಂದ ಇಲ್ಲಿಗೆ ತೆರಳಲು ವಾಹನಗಳು ಸುಲಭವಾಗಿ ದೊರೆಯುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X