Search
  • Follow NativePlanet
Share
» »ಚಕಿತಗೊಳಿಸುವ ಕುಕ್ಕರಹಳ್ಳಿ ಕೆರೆ

ಚಕಿತಗೊಳಿಸುವ ಕುಕ್ಕರಹಳ್ಳಿ ಕೆರೆ

By Vijay

ಮೈಸೂರು ನಗರದ ಹೃದಯ ಭಾಗದಲ್ಲೆ ನೆಲೆಸಿದ್ದು, ಹಲವು ಪ್ರಖ್ಯಾತ ಕಟ್ಟಡಗಳನ್ನು ಜೊತೆಗಾರರನ್ನಾಗಿ ಪಡೆದು ಭೇಟಿ ನೀಡುವವರಿಗೆ ಶಾಂತಿ, ನೆಮ್ಮದಿ ಕರುಣಿಸುವ ಕುಕ್ಕರಹಳ್ಳಿ ಕೆರೆ ನಗರದ ಒಂದು ಹಿತಕರವಾದ ಪ್ರವಾಸಿ ಆಕರ್ಷಣೆಯಾಗಿದೆ.

ಒತ್ತಡದ ಜೀವನ ನಡೆಸುವವರಿಗೆ ಚೈತನ್ಯ ಕರುಣಿಸುವ ಈ ಕೆರೆ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಶ್ರಮದ ಫಲವಾಗಿ ರೂಪಗೊಂಡಿದೆ. 1864 ರಲ್ಲಿ ನಗರದ ಹೊರವಲಯದ ಕೃಷಿ ಭೂಮಿಗೆ ನೀರೋದಗಿಸುವ ದೃಷ್ಟಿಯಿಂದ ನಿರ್ಮಿಸಲಾಗಿರುವ ಈ ಕೆರೆ ಇಂದು ಪ್ರವಾಸಿ ಆಕರ್ಷಣೆಯಾಗಿದೆ.

ನೀವು ಓದಲು ಬಯಸಬಹುದಾದ ಲೇಖನ: ಮೈಸೂರಿನ ಕಾರಂಜಿ ಕೆರೆ

ಕುಕ್ಕರಹಳ್ಳಿ ಕೆರೆ:

ಕುಕ್ಕರಹಳ್ಳಿ ಕೆರೆ:

ಹಿಂದೆ ಈ ಕೆರೆಯಿಂದ ವಸತಿ ಪ್ರದೇಶಗಳಿಗೆ ನೀರನ್ನು ಸರಬರಾಜು ಸಹ ಮಾಡಲಾಗುತ್ತಿತ್ತು. ಕಾಲಕ್ರಮೇಣ ತ್ಯಾಜ್ಯ, ಚರಂಡಿ ನೀರು ಇದರಲ್ಲಿ ಸೇರ್ಪಡೆಗೊಂಡು ಕೆರೆಯು ತನ್ನ ನೈಜ ಸ್ವಚ್ಛತೆಯನ್ನು ಕಳೆದುಕೊಂಡಿತು.

ಚಿತ್ರಕೃಪೆ: mysore.nic.in

ಕುಕ್ಕರಹಳ್ಳಿ ಕೆರೆ:

ಕುಕ್ಕರಹಳ್ಳಿ ಕೆರೆ:

ಅಂಶ ತಿಳಿದ ಕೆಲ ಸಂಘ ಸಂಸ್ಥೆಗಳು ಮುಂದೆ ಬಂದು ಇದರ ಶುದ್ಧಿಕರಣಕ್ಕೆ ಕೈ ಜೋಡಿಸಿದರು. ಅಲ್ಲದೆ ಏಷಿಯಾ ಡೆವೆಲಪ್‍ಮೆಂಟ್ ಬ್ಯಾಂಕ್ ಅವರ ಹಣ ಸಹಕಾರದೊಂದಿಗೆ ಕರ್ನಾಟಕ ಅರ್ಬನ್ ಇನ್ಫ್ರಾ ಸ್ಟ್ರಕ್ಚರ್ ಡೆವೆಲಪ್‍ಮೆಂಟ್ ಲಿಮಿಟೆಡ್ ಹಾಗೂ ಮೈಸೂರು ವಿಶ್ವವಿದ್ಯಾಲಯ ಜಂಟಿಯಾಗಿ ಈ ಕೆರೆಯ ಅಭಿವೃದ್ಧಿಯ ಹೊಣೆ ಹೊತ್ತರು.

ಚಿತ್ರಕೃಪೆ: mysore.nic.in

ಕುಕ್ಕರಹಳ್ಳಿ ಕೆರೆ:

ಕುಕ್ಕರಹಳ್ಳಿ ಕೆರೆ:

ತತ್ಫಲವಾಗಿ ಇಂದು ಕೆರೆಯು ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಗಾಳಿ ಸೇವನೆ ಮಾಡುವವರ, ಜಾಗಿಂಗ್ ಮಾಡುವವರ ಪಾಲಿಗೆ ಸ್ವರ್ಗವಗಿದೆ.

ಚಿತ್ರಕೃಪೆ: mysoredasara.gov.in

ಕುಕ್ಕರಹಳ್ಳಿ ಕೆರೆ:

ಕುಕ್ಕರಹಳ್ಳಿ ಕೆರೆ:

ಮತ್ತೊಂದು ವಿಷಯವೆಂದರೆ ವಲಸೆ ಹೋಗುವ ಹಕ್ಕಿಗಳ ಆಶ್ರಯ ತಾಣವಾಗಿಯೂ ಸಹ ಈ ಕೆರೆ ಅತಿ ಪ್ರಸಿದ್ಧವಾಗಿದೆ. "ಬರ್ಡ್ ಲೈಫ್ ಇಂಟರ್ ನ್ಯಾಷನಲ್" ಎಂಬ ಸಂಸ್ಥೆಯು ಪ್ರಮುಖ ಪಕ್ಷಿ ವೀಕ್ಷಣಾ ತಾಣಗಳ ಪಟ್ಟಿಯಲ್ಲಿ ಈ ಕೆರೆಯನ್ನೂ ಸೇರಿಸಿರುವುದು ನಮಗೆಲ್ಲ ಹೆಮ್ಮೆಯ ಸಂಗತಿಯೂ ಹೌದು.

ಚಿತ್ರಕೃಪೆ: Ravinder M A

ಕುಕ್ಕರಹಳ್ಳಿ ಕೆರೆ:

ಕುಕ್ಕರಹಳ್ಳಿ ಕೆರೆ:

ಅದರಲ್ಲೂ ವಿಶೇಷವಾಗಿ ಚಳಿಗಾಲದ ಸಂದರ್ಭದಲ್ಲಿ ಈ ಕೆರೆ ಪ್ರದೇಶದಲ್ಲಿ ಸಾಕಷ್ಟು ವೈವಿಧ್ಯಮಯ ಹಕ್ಕಿಗಳ ಚಿಲಿಪಿಯನ್ನು ಕೇಳಿ ಆನಂದಿಸಬಹುದು.

ಚಿತ್ರಕೃಪೆ: Vishwas Krishna

ಕುಕ್ಕರಹಳ್ಳಿ ಕೆರೆ:

ಕುಕ್ಕರಹಳ್ಳಿ ಕೆರೆ:

ಕೆರೆಯ ದಂಡೆಗುಂಟ ದಾರಿಯು ಸುಮಾರು 4.5 ಕಿ.ಮೀ ಉದ್ದವನ್ನು ಹೊಂದಿದ್ದು ಹಾಯಾಗಿ ವಿಹರಿಸುತ್ತ, ಇಷ್ಟವಿದ್ದರೆ ಕೆರೆಯ ಅಕ್ಕ ಪಕ್ಕದಲ್ಲಿ ಅಲ್ಲಲ್ಲಿರುವ ಕಲ್ಲಿನ ಕಟ್ಟೆಗಳ ಮೇಲೆ ಹಾಗೆ ಸುಮ್ಮನೆ ಕುಳಿತು ಪ್ರದೇಶದ ಸೌಂದರ್ಯವನ್ನು ಕಣ್ಣಾರೆ ಸವಿಯಬಹುದು.

ಚಿತ್ರಕೃಪೆ: Sushma R

ಕುಕ್ಕರಹಳ್ಳಿ ಕೆರೆ:

ಕುಕ್ಕರಹಳ್ಳಿ ಕೆರೆ:

ಹಿನ್ನಿಲೆಯಲ್ಲಿರುವ ಚಾಮುಂಡಿ ಬೆಟ್ಟವಾಗಲಿ, ಅಥವಾ ಕಣ್ಣಳತೆ ದೂರದಲ್ಲಿ ಗೋಚರಿಸುವ ಮೈಸೂರಿನ ಪ್ರಮುಖ ಸ್ಮಾರಕ ಭವನಗಳಾಗಲಿ ಕಣ್ಣಿಗೆ ತಂಪನ್ನು ಎರೆಯುತ್ತವೆ.

ಚಿತ್ರಕೃಪೆ: chandanlog

ಕುಕ್ಕರಹಳ್ಳಿ ಕೆರೆ:

ಕುಕ್ಕರಹಳ್ಳಿ ಕೆರೆ:

ನಗರದ ರೈಲು ನಿಲ್ದಾಣದಿಂದ ಕೇವಲ ಮೂರು ಕಿ.ಮೀ ದೂರದಲ್ಲಿರುವ ಈ ಕೆರೆಗೆ ರಿಕ್ಷಾ ಅಥವಾ ಬಾಡಿಗೆ ಟ್ಯಾಕ್ಸಿಗಳಿಂದ ಸುಲಭವಾಗಿ ತಲುಪಬಹುದು.

ಚಿತ್ರಕೃಪೆ: innacoz

ಕುಕ್ಕರಹಳ್ಳಿ ಕೆರೆ:

ಕುಕ್ಕರಹಳ್ಳಿ ಕೆರೆ:

ಮಾನಸಗಂಗೋತ್ರಿ (ಮೈಸೂರು ವಿವಿ ಆವರಣ) ಹಾಗೂ ಕಲಾಮಂದಿರ (ರಂಗಾಯಣ) ಗಳ ಪಕ್ಕದಲ್ಲಿ ಸ್ಥಿತವಿರುವ ಈ ಕೆರೆಯು ಮುಕ್ತ ಪ್ರವೇಶ ಹೊಂದಿದ್ದು ಬೆಳಿಗ್ಗೆ ಆರರಿಂದ ಒಂಬತ್ತು ಘಂಟೆಯವರೆಗೂ ಸಂಜೆ ನಾಲ್ಕರಿಂದ ಏಳು ಘಂಟೆಯವರೆಗೂ ಸಾರ್ವಜನಿಕರಿಗಾಗಿ ತೆರೆದಿರುತ್ತದೆ.

ಚಿತ್ರಕೃಪೆ: innacoz

ಕುಕ್ಕರಹಳ್ಳಿ ಕೆರೆ:

ಕುಕ್ಕರಹಳ್ಳಿ ಕೆರೆ:

ಕುಕ್ಕರಹಳ್ಳಿ ಕೆರೆಯ ಅಮೋಘ ಸೌಂದರ್ಯ.

ಚಿತ್ರಕೃಪೆ: innacoz

ಕುಕ್ಕರಹಳ್ಳಿ ಕೆರೆ:

ಕುಕ್ಕರಹಳ್ಳಿ ಕೆರೆ:

ಕುಕ್ಕರಹಳ್ಳಿ ಕೆರೆಯ ಅಮೋಘ ಸೌಂದರ್ಯ.

ಚಿತ್ರಕೃಪೆ: Akhilesh Ravishankar

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X