Search
  • Follow NativePlanet
Share
» »ಕುಚಿಪುಡಿ! ನೃತ್ಯವೆ ಅಥವಾ ಸ್ಥಳವೆ?

ಕುಚಿಪುಡಿ! ನೃತ್ಯವೆ ಅಥವಾ ಸ್ಥಳವೆ?

ಕುಚಿಪುಡಿ ಶಾಸ್ತ್ರೀಯ ನೃತ್ಯ ಜನ್ಮ ತಳೆದ ಕುಚಿಪುಡಿ ಗ್ರಾಮವು ಆಂಧ್ರಪ್ರದೇಶ ರಾಜ್ಯದ ಕೃಷ್ಣಾ ಜಿಲ್ಲೆಯ ಮೊವ್ವಾ ತಲೂಕಿನಲ್ಲಿ ನೆಲೆಸಿದ್ದು ಕಲಾಪ್ರಿಯ ಆಸಕ್ತ ಪ್ರವಾಸಿಗರನ್ನು ಆಕರ್ಷಿಸುತ್ತದೆ

By Vijay

ಕುಚಿಪುಡಿ ಎಂದಾಗ ನಿಮ್ಮಲ್ಲಿ ಬಹುತೇಕರಿಗೆ ಒಂದು ವಿಶೇಷವಾದ ನೃತ್ಯವೊಂದು ನೆನಪಿಗೆ ಬರುತ್ತದಲ್ಲವೆ? ಹೌದು, ಭಾರತದಲ್ಲಿರುವ ಅತಿ ಪುರಾತನ ಹಾಗೂ ಪ್ರಮುಖ ಶಾಸ್ತ್ರೀಯ ನೃತ್ಯಗಳಲ್ಲೊಂದಾಗಿದೆ ಕುಚಿಪುಡಿ. ಹತ್ತನೇಯ ಶತಮಾನದಲ್ಲೆ ತಾಮ್ರ ಪತ್ರಗಳಲ್ಲಿ ಕುಚಿಪುಡಿ ನೃತ್ಯದ ಕುರಿತು ಉಲ್ಲೇಖಿಸಲಾಗಿರುವುದನ್ನು ಕಾಣಬಹುದು.

ಅದರಂತೆ ಪ್ರಾಚೀನಮಯವಾದ ನಾಟ್ಯಶಾಸ್ತ್ರದಿಂದ ರೂಪಗೊಂಡ ಒಂದು ವಿಶಿಷ್ಟವಾದ ನೃತ್ಯ ಕಲೆ ಇದಾಗಿದ್ದು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲೆ ಸಾಕಷ್ಟು ಖ್ಯಾತಿಗಳಿಸಿರುವ ಕಲೆಯ ಪ್ರಕಾರವಾಗಿದೆ ಕುಚಿಪುಡಿ. ಆದರೆ ಈ ನೃತ್ಯಕ್ಕೆ ಕುಚಿಪುಡಿ ಎಂಬ ಹೆಸರು ಹೇಗೆ ಬಂತು ಎಂದು ತಿಳಿದಿದೆಯೆ?

ಕುಚಿಪುಡಿ! ನೃತ್ಯವೆ ಅಥವಾ ಸ್ಥಳವೆ?

ಚಿತ್ರಕೃಪೆ: Kuchipudi Kalakar

ಹೌದು, ಕುಚಿಪುಡಿ ಮೂಲತಃ ಒಂದು ಸ್ಥಳದ ಹೆಸರು. ಇಲ್ಲಿಯೆ ಈ ವಿಶಿಷ್ಟ ನೃತ್ಯಕಲೆಯು ಜನ್ಮಿಸಿದ ಕಾರಣ ಈ ಸ್ಥಲದ ಹೆಸರೆ ನೃತ್ಯಕಲೆಯ ಹೆಸರಾಗಿ ಹೆಸರುವಾಸಿಯಾಗಿದೆ. ಸಾಕಷ್ಟು ಜನರು ಕುಚಿಪುಡಿ ಎಂದಾಗ ನೃತ್ಯವೆಂದು ತಿಳಿಯುತ್ತಾರೆ ಹೊರತು ಇದೊಂದು ಸ್ಥಳದ ಹೆಸರು ಎಂದು ತಿಳಿದಿರುವುದಿಲ್ಲ. ಕುಚಿಪುಡಿ ಇರುವುದು ಆಂಧ್ರಪ್ರದೇಶ ರಾಜ್ಯದಲ್ಲಿ.

ಆಂಧ್ರಪ್ರದೇಶ ರಾಜ್ಯದಲ್ಲಿರುವ ಪುಟ್ಟ ಗ್ರಾಮ ಕುಚಿಪುಡಿ ತನ್ನ ಸಾಂಸ್ಕೃತಿಕ ಹಿರಿಮೆಯಿಂದಾಗಿ ಹೆಸರುವಾಸಿಯಾಗಿದೆ. ಇಂತಹ ಶಾಸ್ತ್ರೀಯ ಕಲೆಗಳಿಗೆ ಪುರಾವೆಯನ್ನು ಒದಗಿಸುವಂತಹ ಈ ಪುಟ್ಟ ಗ್ರಾಮಕ್ಕೆ ನೀವೊಮ್ಮೆ ಭೇಟಿಕೊಡಲೇ ಬೇಕು. ಏಕೆಂದರೆ ಇಲ್ಲಿನ ಕಲಾ ಶ್ರೀಮಂತಿಕೆಯನ್ನು ಹೇಳುವುದಕ್ಕಿಂತ ಹೋಗಿ ನೋಡುವುದೇ ಸೂಕ್ತ.

ಕುಚಿಪುಡಿ! ನೃತ್ಯವೆ ಅಥವಾ ಸ್ಥಳವೆ?

ಕುಚಿಪುಡಿಯ ನಾಟ್ಯ ಕಲಾಕ್ಷೇತ್ರ, ಚಿತ್ರಕೃಪೆ: APCRDA

ಕುಚಿಪುಡಿ ಒಂದು ಸಣ್ಣ ಗ್ರಾಮ. ಇದು ಆಂಧ್ರ ಪ್ರದೇಶದ ದಕ್ಷಿಣ ರಾಜ್ಯದ ಕೃಷ್ಣಾ ಜಿಲ್ಲೆಯಲ್ಲಿರುವ ಮೊವ್ವಾ ಮಂಡಲ ಅಂದರೆ ತಾಲೂಕಿನಲ್ಲಿ ಬರುತ್ತದೆ. ಈ ಹಳ್ಳಿಯು ಬಂಗಾಳ ಕೊಲ್ಲಿಯಲ್ಲಿ ಕೃಷ್ಣಾ ನದಿಯು ಸೇರುವ ಸ್ಥಳದ ಸಮೀಪದಲ್ಲಿದೆ. ಕುಚಿಪುಡಿ ಶಾಸ್ತ್ರೀಯ ನೃತ್ಯವು ಈ ಸ್ಥಳದಲ್ಲಿ ರಚನೆಯಾದ್ದರಿಂದ ಈ ಹಳ್ಳಿಗೆ ಕುಚಿಪುಡಿ ಎಂಬ ಹೆಸರು ಬಂದಿದೆ.

ಎಂದಿಗೂ ಮರೆಯದ ಆಂಧ್ರ ಕರಾವಳಿ ಪ್ರವಾಸ!

ಕುಚಿಪುಡಿ ಮೊವ್ವಾ ಪಟ್ಟಣದಿಂದ ಏಳು ಕಿ.ಮೀ, ಮಚಲೀಪಟ್ಟಣದಿಂದ 26 ಕಿ.ಮೀ ಹಾಗೂ ಹೈದರಾಬಾದ್ ನಗರದಿಂದ ಸುಮಾರು 286 ಕಿ.ಮೀ ಗಳಷ್ಟು ದೂರದಲ್ಲಿದೆ. ಕೂಚಿಪುಡಿ ಗ್ರಾಮದ ಸುತ್ತಲೂ ಭೇಟಿ ಮಾಡುವಂತಹ ಹಲವಾರು ಪ್ರದೇಶಗಳಿವೆ. ಅವುಗಳಲ್ಲಿ ಉಂಡವಲ್ಲಿ ಗುಹೆಗಳು, ರಾಜೀವ ಗಾಂಧಿ ರಾಷ್ಟ್ರೀಯ ಉದ್ಯಾನ, ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯ, ಮೊಗಲರಾಜಪುರಂ ಗುಹೆಗಳು, ಹಾಗೂ ಕನಕ ದುರ್ಗ ದೇವಾಲಯ ಮೊದಲಾದವುಗಳಿಗೂ ಭೇಟಿ ನೀಡಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X