Search
  • Follow NativePlanet
Share
» »ಕೊವಲಂ ಕೊವಲಂ ಅದ್ಭುತ ಸಮುದ್ರ ತೀರಂ

ಕೊವಲಂ ಕೊವಲಂ ಅದ್ಭುತ ಸಮುದ್ರ ತೀರಂ

By Vijay

ತಿರುವನಂತಪುರಂ ಕೇರಳದ ರಾಜಧಾನಿ ನಗರ ಹಾಗೂ ಒಂದು ಉತ್ತಮ ಪ್ರವಾಸಿ ತಾಣ. ಸಾಕಷ್ಟು ಆಕರ್ಷಣೆಗಳನ್ನು ಈ ನಗರದಲ್ಲಿ ಕಾಣಬಹುದು. ಕೊವಲಂ ಕಡಲ ತೀರದ ಕುರಿತು ಸಾಕಷ್ಟು ಜನರಿಗೆ ತಿಳಿದಿದೆ. ಈ ಜನಪ್ರಿಯ ಕಡಲ ತೀರದ ತಾಣವಿರುವುದು ತಿರುವನಂತಪುರಂನಲ್ಲೆ.

ನೀವು ಅನಂತಮಯ ಸಮುದ್ರದ ನೋಟದಿಂದ ಆನಂದ ಹೊಂದುವವರಾಗಿದ್ದರೆ, ಸಮುದ್ರದಲೆಗಳೊಡನೆ ಬಾಂಧವ್ಯ ಬೆಳೆಸುವವರಾಗಿದ್ದರೆ, ಸಾಹಸಮಯ ಸಮುದ್ರ ಕ್ರೀಡೆಗಳನ್ನು ಆಸ್ವಾದಿಸುವವರಾಗಿದ್ದರೆ ಇಲ್ಲವೆ ಸುಮ್ಮನೆ ಕಡಲ ತೀರದ ಮೇಲೆ ಹಾಯಾಗಿ ವಿರಮಿಸುತ್ತ, ಪಾನೀಯ ಹೀರುತ್ತ ಸಮಯ ಕಳೆಯ ಬಯಸುವಿರೆಂದರೆ ಕೊವಲಂಗೆ ಭೇಟಿ ನೀಡಲು ಮರೆಯದಿರಿ.

ಅರಬ್ಬಿ ಸಮುದ್ರದ ಉತ್ತಮ ಕಡಲ ಕಿನಾರೆಯನ್ನು ಹೊಂದಿರುವ ಕೊವಲಂ ವಿದೇಶಿ ಪ್ರವಾಸಿಗರಲ್ಲೂ ಸಹ ಹೆಸರುವಾಸಿಯಾಗಿದೆ. ತಿರುವನಂತಪುರಂ ನಗರ ಕೇಂದ್ರದಿಂದ ಕೇವಲ 12 ಕಿ.ಮೀ ಗಳಷ್ಟು ದೂರವಿರುವ ಈ ಕಡಲ ಪಟ್ಟಣ ಕೊವಲಂಗೆ ತೆರಳಲು ಸಾಕಷ್ಟು ಬಸ್ಸುಗಳು, ರಿಕ್ಷಾಗಳು, ಬಾಡಿಗೆ ಕಾರುಗಳು ತಿರುವನಂತಪುರಂನ ಕೇಂದ್ರ ಬಸ್ಸು, ರೈಲು ಹಾಗೂ ವಿಮಾನ ನಿಲ್ದಾಣಗಳಿಂದ ನಿರಾಯಾಸವಾಗಿ ಲಭಿಸುತ್ತವೆ.

ಕೊವಲಂ:

ಕೊವಲಂ:

ಕೊವಲಂ ಪದದ ಅರ್ಥ ಮೂಲದಲ್ಲಿ "ತೆಂಗಿನ ಮರಗಳ ತೋಪು" ಎಂದಾಗುತ್ತದೆ. ಈ ಪ್ರದೇಶದಲ್ಲಿದ್ದ ಅತಿಯಾದ ತೆಂಗಿನ ಮರಗಳಿಂದ ಈ ಪ್ರದೇಶಕ್ಕೆ ಹೆಸರು ಬಂದಿತೆನ್ನಲಾಗಿದೆ.

ಚಿತ್ರಕೃಪೆ: Girish...

ಕೊವಲಂ:

ಕೊವಲಂ:

ರೋಚಕವಾದ ಇತಿಹಾಸವನ್ನು ಹೊಂದಿರುವ ಕೊವಲಂ ಪಟ್ಟಣಕ್ಕೆ, ಇತಿಹಾಸ ಪ್ರೀಯರು, ಉತ್ಸಾಹಿಗಳು, ಪ್ರವಾಸಿಗಳು ದೊಡ್ಡ ಸಂಖ್ಯೆಯಲ್ಲಿ ಬರುತ್ತಿರುತ್ತಾರೆ. ಈ ಸ್ಥಳದಲ್ಲಿ ಸಮಯ ಕಳೆಯುವುದೆಂದರೆ ಅನೇಕರಿಗೆ ಬಲು ಇಷ್ಟ.

ಚಿತ್ರಕೃಪೆ: deepgoswami

ಕೊವಲಂ:

ಕೊವಲಂ:

ಕೇವಲ ದೇಶದ ಪ್ರವಾಸಿಗರು ಮತ್ರವಲ್ಲದೆ ವಿದೇಶೀಯರೂ ಕೂಡಾ ಈ ಕಡಲ ತೀರವನ್ನು ನೋಡುವುದಕ್ಕಾಗಿ, ಸಮಯ ಕಳೆಯುವುದಕ್ಕಾಗಿ ಅಷ್ಟೆಅ ಅಲ್ಲ ಸಂಶೋಧನೆಗಳಿಗಾಯೂ ಸಹ ಬರುತ್ತಾರೆ.

ಚಿತ್ರಕೃಪೆ: Roberto Faccenda

ಕೊವಲಂ:

ಕೊವಲಂ:

ಕೊವಲಂನ ಇತಿಹಾಸ ಕೊಂಚ ಕೆದಕಿದಾಗ ತಿಳಿದುಬರುವ ವಿಷಯವೆಂದರೆ ತಿರುವಾಂಕೂರಿನ ಮನೆತನಗಳು ಇಲ್ಲಿ ಆಡಳಿತ ನಡೆಸುತ್ತಿದ್ದರು ಎಂಬುದು. ಅಲ್ಲದೇ ಈ ಪ್ರದೇಶಗಳ ಬಗ್ಗೆ ಅನೇಕಾನೇಕ ಕಥೆಗಳೂ ಸಹ ಕೇಳಿ ಬರುತ್ತವೆ.

ಚಿತ್ರಕೃಪೆ: Ian Armstrong

ಕೊವಲಂ:

ಕೊವಲಂ:

ಆಸಮಯದಲ್ಲಿ, ತಿರುವಾಂಕೂರಿನ ರಾಜ ಪ್ರತಿನಿಧಿ ಮಹಾರಾಣಿ ಸೇರು ಲಕ್ಷ್ಮೀ ಬಾಯಿ ಆಡಳಿತ ನಡೆಸುತ್ತಿದ್ದು, ತನ್ನ ಅಗತ್ಯಕ್ಕೆ ಬೇಕಾದ ಹಾಗೆ ಬೀಚ್ / ನದಿಯ ತೀರ, ವಿಹಾರ ಧಾಮ / ವಿರಾಮ ತಾಣಗಳನ್ನು ನಿರ್ಮಿಸಿಕೊಂಡಿದ್ದಳು. ಇವೆಲವೂ ನಡೆದಿದ್ದು ಸರಿ ಸುಮಾರು 1920 ರಲ್ಲಿ. ಇದರಿಂದಲೆ ಕೊವಲಂ ಹೆಸರು ಪ್ರವರ್ಧಮಾನಕ್ಕೆ ಬರತೊಡಗಿತು.

ಚಿತ್ರಕೃಪೆ: Jebin Daniel Varghese

ಕೊವಲಂ:

ಕೊವಲಂ:

ಇದೆ ಮುಂದುವರಿದು ಈಗಲೂ ಸಮುದ್ರ ತೀರ, ನದಿ ತೀರ ಹಾಗೂ ವಿಹಾರ ಧಾಮಗಳಿಂದ ಅಲಂಕೃತಗೊಂಡು 'ಪ್ರಶಾಂತ ಕೋಟೆ' ಎಂದೇ ಕರೆಯಲ್ಪಡುವ ಕೊವಲಂ ಪ್ರವಾಸಿಗರರನ್ನು ಕೈಬೀಸಿ ಕರೆಯುತ್ತದೆ.

ಚಿತ್ರಕೃಪೆ: Ian Armstrong

ಕೊವಲಂ:

ಕೊವಲಂ:

ಕೊವಲಂ ಕಡಲ ತೀರದ ಇತಿಹಾಸ ರೋಚಕಮಯವಾಗಿದ್ದು, ಹುಡುಕಿದಷ್ಟು ಆಳವಾಗುತ್ತಾ ಹೊಸ ಹೊಸ ವಿಚಾರಗಳನ್ನು ಹೊರಹಾಕುತ್ತಾ ಹೋಗುತ್ತದೆ. ಇನ್ನೊಂದು ಮಾಹಿತಿಯ ಪ್ರಕಾರ, ತಿರುವಾಂಕೂರಿನ ರಾಣಿಯ ಸೋದರಳಿಯ ಕೊವಲಂ ಕಡಲ ತೀರ ಪಟ್ಟಣಕ್ಕೆ ಆಗಾಗ ಭೇಟಿ ನಿಡುತ್ತಿದ್ದ. ಅಲ್ಲದೇ ಇಲ್ಲಿನ್ ಸ್ಥಳೀಯ ಕಲೆ ಮತ್ತು ಕೃತಿ / ಸಂಸ್ಕೃತಿಯನ್ನು ಪೋಷಿಸುತ್ತಿದ್ದ ಎನ್ನಲಾಗುತ್ತದೆ.

ಚಿತ್ರಕೃಪೆ: Ian Armstrong

ಕೊವಲಂ:

ಕೊವಲಂ:

1930 ರ ನಂತರ ಕೊವಲಂ ಪಟ್ಟಣ ಕಡಲ ತೀರವಾಗಿ ಯುರೋಪಿಯನ್ ಪ್ರವಾಸಿಗರನ್ನು ಆಕರ್ಷಿಸುತ್ತಾ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿತು!

ಚಿತ್ರಕೃಪೆ: James Southorn

ಕೊವಲಂ:

ಕೊವಲಂ:

ಕೊವಲಂ ಪಟ್ಟಣದ ಚುಂಬಕದಂತಹ ಆಕರ್ಷಣೆ, ಮೋಹಕತೆ, ಮನರಂಜನೆ, ಸೌಂದರ್ಯ ನೆಲೆಸಿರುವುದು ಅದರ ಕಡಲ ತೀರದಲ್ಲೆ. ಬಿಸಿಯಾದ ಮರಳಿನ ಮೇಲೆ ಸಮುದ್ರದಿಂದ ಮೇಲೆಳುವ ಬೃಹತ್ ಅಲೆಗಳನ್ನು ನೋಡುವುದೇ ಒಂದು ಖುಷಿ ಹಾಗೂ ಜೀವನದಲ್ಲಿ ಒಮ್ಮೆಯಾದರೂ ಈ ಅನುಭವಗಳನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಲೇ ಬೇಕು.

ಚಿತ್ರಕೃಪೆ: Koshy Koshy

ಕೊವಲಂ:

ಕೊವಲಂ:

ಕೊವಲಂ ತನ್ನಲ್ಲಿರುವ ಪ್ರಖ್ಯಾತ ಬೀಚುಗಳಿಗಾಗಿ ಖ್ಯಾತಿ ಗಳಿಸಿದೆ. ಇಲ್ಲಿರುವ ಲೈಟ್ ಹೌಸ್ ಬೀಚ್ ಕೊವಲಂ ನಲ್ಲಿರುವ ದೊಡ್ಡ ಕಡಲ ತೀರವಾಗಿದೆ. ಈ ವೀಕ್ಷಣಾ ಗೋಪುರದ ಮೇಲಿನಿಂದ ಕೊವಲಂ ಸಮುದ್ರ ತೀರದ ಮಂತ್ರಮುಗ್ಧಗೊಳಿಸುವಂತಹ ನೋಟವನ್ನು ನೋಡಬಹುದಾಗಿದೆ.

ಚಿತ್ರಕೃಪೆ: Mehul Antani

ಕೊವಲಂ:

ಕೊವಲಂ:

ಹವಾ ಹೆಸರಿನ ಕಡಲ ತೀರ ಕೊವಲಂನ ಎರಡನೇಯ ಪ್ರಖ್ಯಾತ ಕಡಲ ತೀರವಾಗಿದೆ. ಈ ಬೀಚ್ ನಲ್ಲಿ ತುಂಡುಡುಗೆ ತೊಟ್ಟ ಅನೇಕ ವಿದೇಶಿ ಪ್ರವಾಸಿಗರು ಕಾಣಸಿಗುತ್ತಾರೆ. ಸನ್ ಬಾತ್ (ಸೂರ್ಯನ ಎಳೆ ಕಿರಣಗಳಿಗೆ ದೇಹವನ್ನು ಒಪ್ಪಿಸುವುದು) ಕೂಡ ಸಾಮಾನ್ಯವಾಗಿ ಇಲ್ಲಿ ಕಂಡುಬರುತ್ತದೆ.

ಚಿತ್ರಕೃಪೆ: Balaji.B

ಕೊವಲಂ:

ಕೊವಲಂ:

ಇಲ್ಲಿರುವ ಮತ್ತೊಂದು ಕಡಲ ತೀರವೆಂದರೆ ಸಮುದ್ರ ಕಡಲ ತೀರ. ಇದು ಕರಾವಳಿ ತೀರದ ಉತ್ತರ ಭಾಗದಲ್ಲಿದೆ. ಆದರೆ ಈ ಬೀಚ್ ನಲ್ಲಿ ಉಳಿದೆರಡು ಬೀಚ್ ನಲ್ಲಿ ಕಂಡುಬರುವಂತೆ ಹೆಚ್ಚಿನ ಚಟುಚಟಿಕೆಗಳು ಕಂಡು ಬರುವುದಿಲ್ಲ. ಈ ಕಡಲ ತೀರಕ್ಕೆ ಸ್ಥಳೀಯ ಮೀನುಗಾರರು ಮೀನು ಹಿಡಿಯಲು ಬರುತ್ತಿರುತ್ತಾರೆ.

ಚಿತ್ರಕೃಪೆ: Miran Rijavec

ಕೊವಲಂ:

ಕೊವಲಂ:

ಕೊವಲಂ ಕಡಲ ತೀರದ ಸುಂದರ ಮನಸೆಳೆವ ಚಿತ್ರಗಳು.

ಚಿತ್ರಕೃಪೆ: James Southorn

ಕೊವಲಂ:

ಕೊವಲಂ:

ಕೊವಲಂ ಕಡಲ ತೀರದ ಸುಂದರ ಮನಸೆಳೆವ ಚಿತ್ರಗಳು.

ಚಿತ್ರಕೃಪೆ: Vinoth Chandar

ಕೊವಲಂ:

ಕೊವಲಂ:

ಕೊವಲಂ ಕಡಲ ತೀರದ ಸುಂದರ ಮನಸೆಳೆವ ಚಿತ್ರಗಳು.

ಚಿತ್ರಕೃಪೆ: Miran Rijavec

ಕೊವಲಂ:

ಕೊವಲಂ:

ಕೊವಲಂ ಕಡಲ ತೀರದ ಸುಂದರ ಮನಸೆಳೆವ ಚಿತ್ರಗಳು.

ಚಿತ್ರಕೃಪೆ: Ian Armstrong

ಕೊವಲಂ:

ಕೊವಲಂ:

ಕೊವಲಂ ಕಡಲ ತೀರದ ಸುಂದರ ಮನಸೆಳೆವ ಚಿತ್ರಗಳು.

ಚಿತ್ರಕೃಪೆ: Ian Armstrong

ಕೊವಲಂ:

ಕೊವಲಂ:

ಕೊವಲಂ ಕಡಲ ತೀರದ ಸುಂದರ ಮನಸೆಳೆವ ಚಿತ್ರಗಳು. ಕೊವಲಂ ಬಳಿಯಿರುವ ವಿಳಿಂಜಮ್ ಕಡಲ ತೀರ.

ಚಿತ್ರಕೃಪೆ: Koshy Koshy

ಕೊವಲಂ:

ಕೊವಲಂ:

ಕೊವಲಂ ಕಡಲ ತೀರದ ಸುಂದರ ಮನಸೆಳೆವ ಚಿತ್ರಗಳು.

ಚಿತ್ರಕೃಪೆ: Miran Rijavec

ಕೊವಲಂ:

ಕೊವಲಂ:

ಕೊವಲಂ ಕಡಲ ತೀರದ ಸುಂದರ ಮನಸೆಳೆವ ಚಿತ್ರಗಳು.

ಚಿತ್ರಕೃಪೆ: Miran Rijavec

ಕೊವಲಂ:

ಕೊವಲಂ:

ಕೊವಲಂ ಕಡಲ ತೀರದ ಸುಂದರ ಮನಸೆಳೆವ ಚಿತ್ರಗಳು.

ಚಿತ್ರಕೃಪೆ: Thierry Leclerc

ಕೊವಲಂ:

ಕೊವಲಂ:

ಕೊವಲಂ ಕಡಲ ತೀರದ ಸುಂದರ ಮನಸೆಳೆವ ಚಿತ್ರಗಳು.

ಚಿತ್ರಕೃಪೆ: Ronald Tagra

ಕೊವಲಂ:

ಕೊವಲಂ:

ಕೊವಲಂ ಕಡಲ ತೀರದ ಸುಂದರ ಮನಸೆಳೆವ ಚಿತ್ರಗಳು.

ಚಿತ್ರಕೃಪೆ: bjoern

ಕೊವಲಂ:

ಕೊವಲಂ:

ಕೊವಲಂ ಕಡಲ ತೀರದ ಸುಂದರ ಮನಸೆಳೆವ ಚಿತ್ರಗಳು.

ಚಿತ್ರಕೃಪೆ: techbreeze

ಕೊವಲಂ:

ಕೊವಲಂ:

ಕೊವಲಂ ಕಡಲ ತೀರದ ಸುಂದರ ಮನಸೆಳೆವ ಚಿತ್ರಗಳು.

ಚಿತ್ರಕೃಪೆ: techbreeze

ಕೊವಲಂ:

ಕೊವಲಂ:

ಕೊವಲಂ ಕಡಲ ತೀರದ ಸುಂದರ ಮನಸೆಳೆವ ಚಿತ್ರಗಳು.

ಚಿತ್ರಕೃಪೆ: Sanjay

ಕೊವಲಂ:

ಕೊವಲಂ:

ಕೊವಲಂ ಕಡಲ ತೀರದ ಸುಂದರ ಮನಸೆಳೆವ ಚಿತ್ರಗಳು. ಚೊವಾರಾ ಕಡಲ ತೀರ.

ಚಿತ್ರಕೃಪೆ: Kerala Tourism

ಕೊವಲಂ:

ಕೊವಲಂ:

ಕೊವಲಂ ಕಡಲ ತೀರದ ಸುಂದರ ಮನಸೆಳೆವ ಚಿತ್ರಗಳು.

ಚಿತ್ರಕೃಪೆ: Brian Snelson

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X