Search
  • Follow NativePlanet
Share
» »ಕೊಲ್ಲಾಪುರದಲ್ಲಿರುವ ಕೋಪೇಶ್ವರ ದೇವಾಲಯದ ವೈಭವವನ್ನು ಎಂದಾದರೂ ಕಂಡಿದ್ದೀರಾ?

ಕೊಲ್ಲಾಪುರದಲ್ಲಿರುವ ಕೋಪೇಶ್ವರ ದೇವಾಲಯದ ವೈಭವವನ್ನು ಎಂದಾದರೂ ಕಂಡಿದ್ದೀರಾ?

ಕೋಪೇಶ್ವರ ದೇವಾಲಯವು ಕೂಡ ತನ್ನದೇ ವಾಸ್ತುಶಿಲ್ಪದಿಂದ ಮಹತ್ವವನ್ನು ಪಡೆದಿದೆ. ಈ ಸುಂದರವಾದ ದೇವಾಲಯಕ್ಕೆ ದೇಶ, ವಿದೇಶದಿಂದ ಭೇಟಿ ನೀಡುವ ಪುಣ್ಯಕ್ಷೇತ್ರ. ಈ ದೇವಾಲಯವು ಮಹಾರಾಷ್ಟ್ರ ರಾಜ್ಯದ

ದೇವಾಲಯಗಳು ನಮ್ಮ ಭಾರತದ ಆಸ್ತಿ. ಕೆಲವು ಪುರಾತನವಾದ ದೇವಾಲಯಗಳು ತನ್ನದೇ ಆದ ಮಹತ್ವವನ್ನು ಪಡೆದಿದೆ. ಕೆಲವು ದೇವಾಲಯಗಳು ತನ್ನ ವಾಸ್ತುಶಿಲ್ಪಗಳಿಂದ ಪ್ರಖ್ಯಾತಿ ಪಡೆದಿದ್ದರೆ, ಇನ್ನೂ ಕೆಲವು ದೇವಾಲಯಗಳು ತನ್ನ ಇತಿಹಾಸವನ್ನು ಹೊಂದಿ ಪ್ರಸಿದ್ದಿಯನ್ನು ಪಡೆದಿರುತ್ತದೆ.

ಕೋಪೇಶ್ವರ ದೇವಾಲಯವು ಕೂಡ ತನ್ನದೇ ವಾಸ್ತುಶಿಲ್ಪದಿಂದ ಮಹತ್ವವನ್ನು ಪಡೆದಿದೆ. ಈ ಸುಂದರವಾದ ದೇವಾಲಯಕ್ಕೆ ದೇಶ, ವಿದೇಶದಿಂದ ಭೇಟಿ ನೀಡುವ ಪುಣ್ಯಕ್ಷೇತ್ರ. ಈ ದೇವಾಲಯವು ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ಜಿಲ್ಲೆಯಲ್ಲಿದೆ.

ಪ್ರಸ್ತುತ ಲೇಖನದಲ್ಲಿ ಕೋಪೇಶ್ವರ ದೇವಾಲಯ ಬಗ್ಗೆ ತಿಳಿಯೋಣ.

ಎಲ್ಲಿದೆ?

ಎಲ್ಲಿದೆ?

ಈ ಕೋಪೇಶ್ವರ ದೇವಾಲಯವು ಮಹಾರಾಷ್ಟ್ರದಲ್ಲಿನ ಕೊಲ್ಲಾಪುರ ಜಿಲ್ಲೆಯಲ್ಲಿನ ಖಿದ್ರಾಪುರದಲ್ಲಿದೆ ಈ ದೇವಾಲಯ.


PC :Shailesh.patil



ಯಾರು ನಿರ್ಮಿಸಿದರು?

ಯಾರು ನಿರ್ಮಿಸಿದರು?

ಈ ಕೋಪೇಶ್ವರ ದೇವಾಲಯವನ್ನು 12 ನೇ ಶತಮಾನದಲ್ಲಿ ಗಂಡರಾದಿತ್ಯರು ನಿರ್ಮಿಸಿದರು, ತದನಂತರ ವಿಜಯಾದಿತ್ಯ ಹಾಗೂ ಭೋಜ್ ಸುಮಾರು 1109 ರಿಂದ 1178ರ ನಡುವೆ ಪುನರ್ ನಿರ್ಮಿಸಿದರು ಎಂದು ಹೇಳಲಾಗಿದೆ.


PC:Abhijit Rajadhyaksha

ಶಿವ ಮತ್ತು ಪಾರ್ವತಿ

ಶಿವ ಮತ್ತು ಪಾರ್ವತಿ

ಈ ದೇವಾಲಯವು ಶಿವ ಹಾಗೂ ಪಾರ್ವತಿಯ ದೇವಿಯ ಕಥೆಯನ್ನು ಹೇಳುತ್ತದೆ. ಪಾರ್ವತಿಯ ತಂದೆ ಪ್ರಜಾಪತಿಯು ಸ್ಮಶಾನ ರುದ್ರನಾದ ಈಶ್ವರನಿಗೆ ತನ್ನ ಮಗಳನ್ನು ವಿವಾಹ ಮಾಡಿಕೊಡಲು ಒಪ್ಪಿಗೆ ನೀಡಿರಲಿಲ್ಲ.


PC:Sneha Jog

ಕೋಪೇಶ್ವರ ದೇವಾಲಯ

ಕೋಪೇಶ್ವರ ದೇವಾಲಯ

ಆದರೂ ಕೂಡ ತಂದೆಯ ವಿರುದ್ಧವಾಗಿ ಪಾರ್ವತಿ ದೇವಿಯು ಪರಮಶಿವನನ್ನು ವಿವಾಹವಾಗುತ್ತಾಳೆ. ಇದರಿಂದ ಕೋಪಗೊಂಡ ಪಾರ್ವತಿಯ ತಂದೆಯು ಒಮ್ಮೆ ಯಜ್ಞವನ್ನು ನೇರವೇರಿಸುವಾಗ ಪಾರ್ವತಿಯನ್ನು ಮಾತ್ರ ಕರೆದು, ಶಿವನನ್ನು ಕರೆಯುವುದಿಲ್ಲ.

PC:Shailesh.patil

ಕೋಪೇಶ್ವರ ದೇವಾಲಯ

ಕೋಪೇಶ್ವರ ದೇವಾಲಯ

ಪಾರ್ವತಿ ದೇವಿಯು ತನ್ನ ತಂದೆ ಪ್ರಜಾಪತಿಗೆ ಯಜ್ಞಕ್ಕೆ ತನ್ನ ಪತಿಯನ್ನು ಏಕೆ ಅಮಂತ್ರಣ ನೀಡಿಲ್ಲ ಎಂದು ಕೇಳಿದಳು. ಇದಕ್ಕೆ ಪ್ರಜಾಪತಿಯು ತನ್ನ ಮಗಳು ಎಂದೂ ಕೂಡ ನೋಡದೆ ಅವಮಾನ ಮಾಡಿ ಕಳುಹಿಸುತ್ತಾನೆ. ಈ ಕಥೆಯು ಈ ದೇವಾಲಯಕ್ಕೆ ಆಧಾರಿಸಿದೆ ಎಂದು ಕೆಲವರು ಹೇಳುತ್ತಾರೆ.

PC: Sneha jog

ಕೋಪೇಶ್ವರ ದೇವಾಲಯ

ಕೋಪೇಶ್ವರ ದೇವಾಲಯ

ಈ ದೇವಾಲಯದಲ್ಲಿ ಪರಮಶಿವ ಹಾಗೂ ಮಹಾ ವಿಷ್ಣುವಿಗೆ ಸರಿ ಸಮಾನವಾದ ಶಕ್ತಿಯನ್ನು ಹೊಂದಿರುವ ದೇವತೆ ಮೂರ್ತಿಗಳಾಗಿದ್ದಾರೆ. ಇವರಿಬ್ಬರಿಗೂ ಕೂಡ ಸಮಾನವಾಗಿ ಪೂಜೆಗಳನ್ನು ಇಲ್ಲಿ ನೆರವೇರಿಸಲಾಗುತ್ತದೆ.

PC: Abhijit Rajadhyaksha


ಕೋಪೇಶ್ವರ ದೇವಾಲಯ

ಕೋಪೇಶ್ವರ ದೇವಾಲಯ

ಈ ದೇವಾಲಯದಲ್ಲಿ ವಾಸ್ತುಶಿಲ್ಪವು ಅತ್ಯಂತ ಸುಂದರವಾಗಿದೆ. ಅದ್ಭುತವಾದ ಶಿಲ್ಪಗಳು, ದೇವತಾ ಮೂರ್ತಿಗಳು, ಸೂಕ್ಷ್ಮವಾದ ಕೆತ್ತನೆಗಳನ್ನು ಇಲ್ಲಿ ಕಾಣಬಹುದಾಗಿದೆ. ಈ ದೇವಾಲಯದ ಸೊಬಗನ್ನು ಕಾಣಲು ಹಲವಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.


PC:Deepak Patil

ಕೋಪೇಶ್ವರ ದೇವಾಲಯ

ಕೋಪೇಶ್ವರ ದೇವಾಲಯ

ಈ ಸುಂದರವಾದ ಕೋಪೇಶ್ವರ ದೇವಾಲಯವು ಕೃಷ್ಣ ನದಿಯ ಮೇಲೆ ನೆಲೆಸಿದೆ. ಈ ದೇವಾಲಯದಲ್ಲಿ ಸುಮಾರು 48 ಸ್ತಂಭಗಳಿವೆ. ಪ್ರತಿಯೊಂದು ಸ್ತಂಭವು ತನ್ನ ಅದ್ಭುತ ಕೆತ್ತನೆಯುಳ್ಳ ಸೌಂದರ್ಯದಿಂದ ಕಂಗೊಳಿಸುತ್ತಿದೆ.


PC:www.win7wallpapers.com

ಔರಂಗಜೇಬ್

ಔರಂಗಜೇಬ್

ಇತಿಹಾಸಕಾರರು ಹೇಳುವ ಪ್ರಕಾರ ಔರಂಗಜೇಬನು ಈ ದೇವಾಲಯವಿರುವ ಪ್ರದೇಶವನ್ನು ಆಳ್ವಿಕೆ ನಡೆಸುವ ಕಾಲದಲ್ಲಿ ಇಂಥಹ ಸೊಬಗಿನಿಂದ ಕೂಡಿರುವ ಹಿಂದೂ ದೇವಾಲಯವನ್ನು ನಾಶ ಮಾಡಬೇಕು ಎಂದು ಸಂಚು ರೂಪಿಸಿದ್ದನಂತೆ.


PC: Shailesh.patil

ಉತ್ತಮವಾದ ಕಾಲಾವಧಿ

ಉತ್ತಮವಾದ ಕಾಲಾವಧಿ

ಈ ಕೋಪೇಶ್ವರ ದೇವಾಲಯಕ್ಕೆ ಭೇಟಿ ನೀಡಲು ಉತ್ತಮವಾದ ಕಾಲಾವಧಿಯೆಂದರೆ ಅದು ಜೂನ್ ತಿಂಗಳಿನಿಂದ ಜುಲೈ ತಿಂಗಳವರೆಗೆ. ಸಾಮಾನ್ಯವಾಗಿ ಮಹಾರಾಷ್ಟ್ರದಲ್ಲಿನ ಹವಾಮಾನ ಬೇಸಿಗೆಯಿಂದ ಕೂಡಿರುವುದರಿಂದ ಈ ಕಾಲಾವಧಿ ಸೂಕ್ತ.


PC:Shailesh.patil

ಪ್ರಯಾಣ

ಪ್ರಯಾಣ

ಈ ಕೋಪೇಶ್ವರ ದೇವಾಲಯವು ಮಹಾರಾಷ್ಟ್ರದಲ್ಲಿನ ಕೊಲ್ಲಾಪುರದಲ್ಲಿದೆ. ಕರ್ನಾಟಕದ ಸರಿಹದ್ದಿನ ಸಮೀಪದಲ್ಲಿದೆ. ಕೊಲ್ಲಾಪುರದಿಂದ ಸುಮಾರು 58 ಕಿ,ಮೀ ದೂರದಲ್ಲಿದೆ.

ಸಮೀಪದಲ್ಲಿನ ಪ್ರವಾಸಿತಾಣಗಳು

ಸಮೀಪದಲ್ಲಿನ ಪ್ರವಾಸಿತಾಣಗಳು

ಮಹಾಲಕ್ಷ್ಮಿ ದೇವಾಲಯ, ಸಿದ್ಧ ಗಿರಿ ಮ್ಯೂಸಿಯಂ, ಕೋಟೆಗಳು, ಜ್ಯೋತಿಬಾ ದೇವಾಲಯ, ಕನೇರಿ ಮಾತಾ, ರಾನಕಲಾ ಸರೋವರ ಇನ್ನೂ ಹಲವಾರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X