Search
  • Follow NativePlanet
Share
» »ಕೋನಾರ್ಕ್ : ಸೂರ್ಯ ಹಾಗೂ ಶೃಂಗಾರ

ಕೋನಾರ್ಕ್ : ಸೂರ್ಯ ಹಾಗೂ ಶೃಂಗಾರ

By Vijay

ಭಾರತದಲ್ಲಿ ಕಂಡುಬರುವ ಕೆಲ ಅತ್ಯದ್ಭುತ ರಚನೆಗಳ ಪೈಕಿ ಒಡಿಶಾ ರಾಜ್ಯದಲ್ಲಿರುವ ಕೋನಾರ್ಕ್ ಸೂರ್ಯ ದೇವಾಲಯವೂ ಸಹ ಒಂದು. ಸೂರ್ಯ ದೇವರಿಗೆ ಮುಡಿಪಾದ ಈ ಭವ್ಯ ಶಿಲ್ಪ ಕಲೆಯುಳ್ಳ ದೇವಾಲಯ ಖುಜುರಾಹೊದ ರೀತಿಯಲ್ಲಿ ಮೈಥುನ ಅಥವಾ ಮಿಥುನ ಶಿಲ್ಪ ಕಲೆಗೂ ಪ್ರಖ್ಯಾತಿ ಪಡೆದಿದೆ. ಸಂಸ್ಕೃತದ ಕೋನ ಹಾಗೂ ಸೂರ್ಯ ಎಂಬ ಅರ್ಥ ಕೊಡುವ ಅರ್ಕ ಪದಗಳಿಂದ ಇದಕ್ಕೆ ಕೋನಾರ್ಕ ಎಂಬ ಹೆಸರು ಬಂದಿದೆ.

ವಿದೇಶಿ ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುವ ಭಾರತದ ಹಲವು ಸ್ಥಳಗಳ ಪೈಕಿ ಕೋನಾರ್ಕ್ ಸೂರ್ಯ ದೇವಾಲಯವೂ ಒಂದಾಗಿದೆ. ಆದ್ದರಿಂದ ಪ್ರವಾಸಿ ದೃಷ್ಟಿಯಿಂದ ಗಮನಿಸಿದಾಗ ಈ ದೇವಸ್ಥಾನವು ಹೆಚ್ಚಿನ ಮಹತ್ವ ಪಡೆದಿದೆ ಎಂದು ಹೇಳಬಹುದಾಗಿದೆ. 13 ನೇಯ ಶತಮಾನದಲ್ಲಿ ನಿರ್ಮಿಸಲ್ಪಟ್ಟ ಈ ದೇವಾಲಯವು ಮನಸೆಳೆವ ಅತ್ಯಾಕರ್ಷಕ ಕೆತ್ತನೆಗಳಿಂದ ಕೂಡಿದೆ.

ಪ್ರಸ್ತುತ ಲೇಖನವು ಕೋನಾರ್ಕ್ ಸೂರ್ಯ ದೇವಾಲಯದ ಅತ್ಯದ್ಭುತ ಶಿಲ್ಪ ಕಲೆಯ ಹಾಗೂ ಶೃಂಗಾರಮಯ ಚಿತ್ರಗಳ ಪ್ರವಾಸ ಮಾಡಿಸುತ್ತದೆ.

ಕೋನಾರ್ಕ್ ಸೂರ್ಯ ದೇವಾಲಯ:

ಕೋನಾರ್ಕ್ ಸೂರ್ಯ ದೇವಾಲಯ:

ಈ ಸುಂದರ ಸೂರ್ಯ ದೇವಾಲಯವು ಒಡಿಶಾ ರಾಜ್ಯದ ಪುರಿ ಜಿಲ್ಲೆಯ ಕೋನಾರ್ಕ್ ಎಂಬ ಚಿಕ್ಕ ಪಟ್ಟಣದಲ್ಲಿ ನಿರ್ಮಿಸಲ್ಪಟ್ಟಿದೆ. ಆದ್ದರಿಂದ ಈ ದೇವಾಲಯ ಕೋನಾರ್ಕ್ ಸೂರ್ಯ ದೇವಾಲಯವೆಂದೆ ಪ್ರಸಿದ್ಧಿ ಪಡೆದಿದೆ.

ಚಿತ್ರಕೃಪೆ: Steve Browne & John Verkl

ಕೋನಾರ್ಕ್ ಸೂರ್ಯ ದೇವಾಲಯ:

ಕೋನಾರ್ಕ್ ಸೂರ್ಯ ದೇವಾಲಯ:

ಪೂರ್ವ ಗಂಗ ಸಾಮ್ರಾಜ್ಯದ ದೊರೆಯಾಗಿದ್ದ ಒಂದನೇಯ ನರಸಿಂಹದೇವನಿಂದ ಈ ಸೂರ್ಯ ದೇವಾಲಯವು ಸುಮಾರು 1250 ರ ಸಮಯದಲ್ಲಿ ನಿರ್ಮಿಸಲ್ಪಟ್ಟಿದೆ. ಆಸಕ್ತಿಕರ ಸಂಗತಿಯೆಂದರೆ ಈ ಒಟ್ಟಾರೆ ದೇವಸ್ಥಾನವೆ ಒಂದು ದೊಡ್ಡ ರಥದ ರೂಪದಲ್ಲಿ ನಿರ್ಮಿಸಲ್ಪಟ್ಟಿರುವುದು.

ಚಿತ್ರಕೃಪೆ: Ishan Khosla

ಕೋನಾರ್ಕ್ ಸೂರ್ಯ ದೇವಾಲಯ:

ಕೋನಾರ್ಕ್ ಸೂರ್ಯ ದೇವಾಲಯ:

ರಥಕ್ಕೆ ಮೆರುಗು ನೀಡುವಂತೆ ಅತ್ಯಂತ ಸೂಕ್ಷ್ಮ ರೀತಿಯಲ್ಲಿ ಕೆತ್ತಲಾದ ಶಿಲೆಯ ರಥ ಚಕ್ರಗಳು, ರಥವನ್ನು ಎಳೆದೊಯ್ಯುವ ರೀತಿಯಲ್ಲಿ ನಿರ್ಮಿಸಲಾದ ಕುದುರೆಗಳು ಅಂದಿನ ಕಲಾ ಕೌಶಲ್ಯದ ಪರಿಚಯ ಮಾಡುವುದು ಅಲ್ಲದೆ ನೋಡುಗರನ್ನು ಆಶ್ಚರ್ಯಚಕಿತರನ್ನಾಗಿ ಮಾಡುತ್ತದೆ. ಏಕೆಂದರೆ ಅಂದಿನ ಕಾಲದಲ್ಲಿ ಇಂದು ದೊರೆಯುವ ನಿರ್ಮಾಣ ಸೌಲಭ್ಯಗಳು ಇರಲಿಲ್ಲ.

ಚಿತ್ರಕೃಪೆ: Chaitali Chowdhury

ಕೋನಾರ್ಕ್ ಸೂರ್ಯ ದೇವಾಲಯ:

ಕೋನಾರ್ಕ್ ಸೂರ್ಯ ದೇವಾಲಯ:

ಈ ದೇವಾಲಯವು ಅಂದಿನ ಕಾಲದಲ್ಲಿ ಎಷ್ಟು ದೊಡ್ಡದಾಗಿತ್ತೆಂದರೆ ಸಮುದ್ರ ಮಾರ್ಗವಾಗಿ ಬರುವವರಿಗೆ ಇದು ಗುರುತು ಗೋಪುರವಾಗಿ ಕಾರ್ಯ ನಿರ್ವಹಿಸುತ್ತಿತ್ತು. ನಾವಿಕರು ಇದನ್ನು ಕಪ್ಪು ಪಗೋಡ ಎಂಬ ಹೆಸರಿನಿಂದ ಗುರುತಿಸುತ್ತಿದ್ದರು. ಇದಕ್ಕೆ ವಿರುದ್ಧವೆಂಬಂತೆ ಪುರಿಯಲ್ಲಿರುವ ದೊಡ್ಡ ಜಗನ್ನಾಥನ ದೇವಸ್ಥಾನವು ಬಿಳಿ ಪಗೋಡ ಎಂಬೆ ಹೆಸರಿನಿಂದ ಗುರುತಿಸಲ್ಪಡುತ್ತಿತ್ತು.

ಚಿತ್ರಕೃಪೆ: Tetraktys

ಕೋನಾರ್ಕ್ ಸೂರ್ಯ ದೇವಾಲಯ:

ಕೋನಾರ್ಕ್ ಸೂರ್ಯ ದೇವಾಲಯ:

ಪ್ರಸ್ತುತ ಈ ದೇವಸ್ಥಾನದ ಬಹುಪಾಲು ರಚನೆಯು ಪಾಳು ಬಿದ್ದಿವೆ ಅಥವಾ ನಾಶಗೊಂಡಿದೆ. ಚಿತ್ರದಲ್ಲಿ ಕಾಣುತ್ತಿರುವುದು ಮೂಲ ದೇವಾಲಯ ಹಾಗೂ ಪ್ರಸ್ತುತ ಕಾಣಬಹುದಾದ ದೇವಾಲಯ(ಹಳದಿ ಬಣ್ಣದಲ್ಲಿ).

ಚಿತ್ರಕೃಪೆ: Nataraja

ಕೋನಾರ್ಕ್ ಸೂರ್ಯ ದೇವಾಲಯ:

ಕೋನಾರ್ಕ್ ಸೂರ್ಯ ದೇವಾಲಯ:

ಮೂಲತಃ ಈ ದೇವಾಲಯವನ್ನು ಚಂದ್ರಭಾಗ ಎಂಬ ನದಿಯ ಮುಖ ಪ್ರದೇಶದಲ್ಲಿ ನಿರ್ಮಿಸಲಾಗಿತ್ತು. ಆದರೆ ಇಂದು ನದಿಯು ತಗ್ಗಿ ಹೋಗಿರುವುದು ಕಂಡುಬರುತ್ತದೆ.

ಚಿತ್ರಕೃಪೆ: Aleksandr Zykov

ಕೋನಾರ್ಕ್ ಸೂರ್ಯ ದೇವಾಲಯ:

ಕೋನಾರ್ಕ್ ಸೂರ್ಯ ದೇವಾಲಯ:

ದೇವಸ್ಥಾನವನ್ನು ಸೂಕ್ಷ್ಮವಾಗಿ ಪೂರ್ವ ದಿಕ್ಕಿಗೆ ಅಭಿಮುಖವಾಗಿ ನಿರ್ಮಿಸಲಾಗಿದ್ದು, ಸೂರ್ಯನ ಪ್ರಥಮ ರಷ್ಮಿಯು ದೇವಸ್ಥಾನಕ್ಕೆ ತಗುಲುವಂತೆ ನಿರ್ಮಿಸಲಾಗಿದೆ.

ಚಿತ್ರಕೃಪೆ: Achilli Family | Journeys

ಕೋನಾರ್ಕ್ ಸೂರ್ಯ ದೇವಾಲಯ:

ಕೋನಾರ್ಕ್ ಸೂರ್ಯ ದೇವಾಲಯ:

ಈ ಬೃಹತ್ ದೇವಸ್ಥಾನಕ್ಕೆ 12 ಜೊತೆ ರಥ ಚಕ್ರಗಳು ಹಾಗೂ ಏಳು ಜೊತೆ ಕುದುರೆಗಳನ್ನು ಶಿಲೆಗಳಲ್ಲಿ ಅದ್ಭುತವಾಗಿ ಕೆತ್ತಿ ನಿರ್ಮಿಸಲಾಗಿದೆ. ಈ ದೇವಸ್ಥಾನವು ಸಾಂಪ್ರದಾಯಿಕ ಕಳಿಂಗ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲ್ಪಟ್ಟಿರುವುದು ಕಂಡುಬರುತ್ತದೆ.

ಚಿತ್ರಕೃಪೆ: Aleksandr Zykov

ಕೋನಾರ್ಕ್ ಸೂರ್ಯ ದೇವಾಲಯ:

ಕೋನಾರ್ಕ್ ಸೂರ್ಯ ದೇವಾಲಯ:

ಮೂಲ ದೇವಾಲಯವು ಅತಿ ದೊಡ್ಡದಾದ ಸುಮಾರು 229 ಅಡಿಗಳಷ್ಟು ಎತ್ತರದ ಗೋಪುರವನ್ನು ಹೊಂದಿತ್ತು. ಆದರೆ ಇದರ ಅತಿಯಾದ ಭಾರ ಹಾಗೂ ದುರ್ಬಲ ಮಣ್ಣಿನ ಕಾರಣದಿಂದಾಗಿ ಈ ಗೋಪುರವು 1837 ರಲ್ಲಿ ಕುಸಿದು ನಾಶ ಹೊಂದಿತು.

ಚಿತ್ರಕೃಪೆ: Aleksandr Zykov

ಕೋನಾರ್ಕ್ ಸೂರ್ಯ ದೇವಾಲಯ:

ಕೋನಾರ್ಕ್ ಸೂರ್ಯ ದೇವಾಲಯ:

ಪ್ರಸ್ತುತ, ಜಗಮೋಹನ ಎಂದು ಕರೆಯಲ್ಪಡುವ 128 ಅಡಿಗಳಷ್ಟು ಎತ್ತರವಿರುವ ವೀಕ್ಷಕ ಸಭಾಂಗಣವು ಎತ್ತರದ ರಚನೆಯಾಗಿದೆ. ಅಲ್ಲದೆ ಇದರ ಜೊತೆ ನೃತ್ಯ ಮಂದಿರ ಹಾಗೂ ಭೋಗ ಮಂದಿರ(ಭೋಜನಾಲಯ) ಗಳನ್ನೂ ಸಹ ಕಾಣಬಹುದಾಗಿದೆ.

ಚಿತ್ರಕೃಪೆ: saamiblog

ಕೋನಾರ್ಕ್ ಸೂರ್ಯ ದೇವಾಲಯ:

ಕೋನಾರ್ಕ್ ಸೂರ್ಯ ದೇವಾಲಯ:

ಈ ದೇವಾಲಯದ ಸ್ಥಳದಲ್ಲಿ ಇತರೆ ಎರಡು ದೇವಾಲಯಗಳ ಅವಶೇಷಗಳನ್ನೂ ಸಹ ಶೋಧಿಸಲಾಗಿದೆ. ಒಂದು ದೇವಾಲಯ ಸೂರ್ಯ ದೇವರ ಪತ್ನಿಯರಲ್ಲಿ ಒಬ್ಬಳಾಗಿದ್ದ ಮಾಯಾ ದೇವಿಗೆ ಮುಡಿಪಾಗಿದ್ದರೆ ಮತ್ತೊಂದು ದೇವಾಲಯವು ವೈಷ್ಣವ ಸಮುದಾಯದ ಒಂದು ದೇವತೆಗೆ ಮುಡಿಪಾಗಿದೆ. ಬಲರಾಮ, ವರಾಹ ಹಾಗೂ ತ್ರಿವಿಕ್ರಮರ ಕೆತ್ತನೆಗಳನ್ನು ಇಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: rjha94

ಕೋನಾರ್ಕ್ ಸೂರ್ಯ ದೇವಾಲಯ:

ಕೋನಾರ್ಕ್ ಸೂರ್ಯ ದೇವಾಲಯ:

ಪೌರಾಣಿಕವಾಗಿಯೂ ಅನೇಕ ರೋಚಕ ಸಂಗತಿಗಳನ್ನು ಈ ದೇವಸ್ಥಾನದ ಕುರಿತು ಕೇಳಬಹುದಾಗಿದೆ. ಭವಿಷ್ಯ ಹಾಗೂ ಸಾಂಬ ಪುರಾಣಗಳ ಪ್ರಕಾರ, ಹಿಂದೆ ಈ ಪ್ರದೇಶದಲ್ಲಿ ಈ ದೇವಸ್ಥಾನಕ್ಕಿಂತಲೂ ಮುಂಚೆ ಸೂರ್ಯನಿಗೆ ಮುಡಿಪಾದ ದೇವಾಲಯವಿತ್ತಂತೆ.

ಚಿತ್ರಕೃಪೆ: Achilli Family | Journeys

ಕೋನಾರ್ಕ್ ಸೂರ್ಯ ದೇವಾಲಯ:

ಕೋನಾರ್ಕ್ ಸೂರ್ಯ ದೇವಾಲಯ:

ಅವುಗಳೆಂದರೆ ಕಾಲಪ್ರಿಯ (ಮಥುರಾ), ಮುಲ್ತಾನ್ ಹಾಗೂ ಮುಂದಿರಾ (ಬಹುಶಃ ಇದೆ ಕೋನಾರ್ಕ್). ಇವು ಸುಮಾರು 9 ನೇಯ ಶತಮಾನಕ್ಕೆ ಸಂಬಂಧಿಸಿದ್ದೆನಲಾಗಿದೆ.

ಚಿತ್ರಕೃಪೆ: Aleksandr Zykov

ಕೋನಾರ್ಕ್ ಸೂರ್ಯ ದೇವಾಲಯ:

ಕೋನಾರ್ಕ್ ಸೂರ್ಯ ದೇವಾಲಯ:

ಮತ್ತೊಂದು ದಂತಕಥೆಯ ಪ್ರಕಾರ, ಧರ್ಮಪಾದನ ಪ್ರಸಂಗವು ಈ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಕುತೂಹಲಕರವಾಗಿದೆ. ಇದರ ನಿರ್ಮಾತೃ ಒಂದನೇಯ ನರಸಿಂಹ ದೇವನು ಬಿಸು ಮಹಾರಾಣ ಎಂಬಾತನನ್ನು ದೇವಸ್ಥಾನದ ಪ್ರಮುಖ ವಾಸ್ತು ಶಿಲ್ಪಿಯಾಗಿ ನೇಮಿಸಿದ್ದನಂತೆ.

ಚಿತ್ರಕೃಪೆ: Steve Browne & John Verkl

ಕೋನಾರ್ಕ್ ಸೂರ್ಯ ದೇವಾಲಯ:

ಕೋನಾರ್ಕ್ ಸೂರ್ಯ ದೇವಾಲಯ:

ಹನ್ನೆರಡು ವರ್ಷಗಳ ಸತತ ಪ್ರಯತ್ನದಿಂದ ಇವನ ಕುಶಲ ಕರ್ಮಿಗಳು ದೇವಾಲಯ ಸಂಪೂರ್ಣಗೊಳಿಸಿದರಾದರೂ ಕಳಶಕ್ಕೆ ಕಿರೀಟವಿಡಲು ಅಸಫಲರಾದರು. ಇದರಿಂದ ಕೋಪಗೊಂಡ ರಾಜ ಇನ್ನೆರಡು ದಿನಗಳಲ್ಲಿ ಕೆಲಸ ಸಂಪೂರ್ಣಗೊಳಿಸದಿದ್ದರೆ ಕೊಲ್ಲುವುದಾಗಿ ಆದೇಶಿಸಿದ.

ಚಿತ್ರಕೃಪೆ: Aleksandr Zykov

ಕೋನಾರ್ಕ್ ಸೂರ್ಯ ದೇವಾಲಯ:

ಕೋನಾರ್ಕ್ ಸೂರ್ಯ ದೇವಾಲಯ:

ಇದೆ ಸಮಯದಲ್ಲಿ ವಾಸ್ತುಶಿಲ್ಪಿ ಬಿಸು ಮಹಾರಾಣನ 12 ವರ್ಷದ ಮಗನಿಗೆ ಈ ವಿಷಯ ತಿಳಿದು ತಂದೆಗೋಸ್ಕರ ಆತನಿರುವೆಡೆ ಬಂದ. ಇತನೆ ಧರ್ಮಪಾದ. ಈ ಸಂದರ್ಭದಲ್ಲಿ ಮಹಾರಾಣನಿಗೆ ಆತನೆ ತನ್ನ ಮಗ ಎಂದು ತಿಳಿದಿರಲಿಲ್ಲ. ಏಕೆಂದರೆ ಆತ ಈ ಕೆಲಸಕ್ಕೆ ಬರುವಾಗ ಆತನ ಹೆಂಡತಿ ಬಸುರಿಯಾಗಿದ್ದಳು. ಕಿರೀಟವನ್ನು ಕಳಶದ ಮೇಲೆ ಸುಲಭವಾಗಿ ಕೂರಿಸುವಲ್ಲಿ ಉತ್ತಮವಾದ ಪರಿಹಾರ ಸೂಚಿಸಿದ ಬಾಲಕನಾದ ಧರ್ಮಪಾದ.

ಚಿತ್ರಕೃಪೆ: Aleksandr Zykov

ಕೋನಾರ್ಕ್ ಸೂರ್ಯ ದೇವಾಲಯ:

ಕೋನಾರ್ಕ್ ಸೂರ್ಯ ದೇವಾಲಯ:

ಆದರೆ, ಮಹಾರಾಣನ ಕೆಲಸಗಾರರು ಒಬ್ಬ ಹುಡುಗನ ಮುಂದೆ ಅಸಫಲರಾದರು ಎಂದು ತಿಳಿದು ಅವರನ್ನು ಹಾಗೂ ಅವನ ತಂದೆಯನ್ನು ರಾಜನು ಕೊಲ್ಲಬಹುದೆಂದು ಮನಗಂಡು ಧರ್ಮಪಾದನೆ ಸ್ವತಃ ಗೋಪುರದ ಮೇಲೆನಿಂದ ನೀರಿಗೆ ಹಾರಿದನು. ಈ ರೀತಿಯಾಗಿ ಈ ದೇವಾಲಯದ ಸುತ್ತ ದಂತಕಥೆಯು ಪ್ರಚಲಿತದಲ್ಲಿದೆ.

ಚಿತ್ರಕೃಪೆ: Aleksandr Zykov

ಕೋನಾರ್ಕ್ ಸೂರ್ಯ ದೇವಾಲಯ:

ಕೋನಾರ್ಕ್ ಸೂರ್ಯ ದೇವಾಲಯ:

ಸೂರ್ಯ ದೇವಾಲಯವು ಕೋನಾರ್ಕ್ ಎಂಬ ಪಟ್ಟಣದಲ್ಲಿದ್ದು, ಈ ಪಟ್ಟಣವು ಒಡಿಶಾ ರಾಜಧಾನಿ ಭುವನೇಶ್ವರದಿಂದ ಕೇವಲ 65 ಕಿ.ಮೀ ದೂರದಲ್ಲಿ ನೆಲೆಸಿದೆ. ಭುವನೇಶ್ವರ ರೈಲು ಹಾಗೂ ವಿಮಾನ ನಿಲ್ದಾಣಗಳೆರಡನ್ನೂ ಹೊಂದಿದ್ದು ಭಾರತದ ಎಲ್ಲ ಕಡೆಗಳಿಂದಲೂ ಸಂಪರ್ಕ ಸಾಧಿಸುತ್ತದೆ.

ಚಿತ್ರಕೃಪೆ: Shayan (USA)

ಕೋನಾರ್ಕ್ ಸೂರ್ಯ ದೇವಾಲಯ:

ಕೋನಾರ್ಕ್ ಸೂರ್ಯ ದೇವಾಲಯ:

ಖುಜುರಾಹೋದ ರೀತಿಯಲ್ಲಿ ಕೋನಾರ್ಕ್ ಸೂರ್ಯ ದೇವಾಲಯವು ಮಿಥುನ ಅಥವಾ ಶೃಂಗಾರ ರಸ ಉಕ್ಕಿಸುವ ಶಿಲ್ಪ ಕಲೆಗಳಿಂದಾಗಿಯೂ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Steve Browne & John Verkl

ಕೋನಾರ್ಕ್ ಸೂರ್ಯ ದೇವಾಲಯ:

ಕೋನಾರ್ಕ್ ಸೂರ್ಯ ದೇವಾಲಯ:

ಖುಜುರಾಹೋದ ರೀತಿಯಲ್ಲಿ ಕೋನಾರ್ಕ್ ಸೂರ್ಯ ದೇವಾಲಯವು ಮಿಥುನ ಅಥವಾ ಶೃಂಗಾರ ರಸ ಉಕ್ಕಿಸುವ ಶಿಲ್ಪ ಕಲೆಗಳಿಂದಾಗಿಯೂ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Steve Browne & John Verkle

ಕೋನಾರ್ಕ್ ಸೂರ್ಯ ದೇವಾಲಯ:

ಕೋನಾರ್ಕ್ ಸೂರ್ಯ ದೇವಾಲಯ:

ಖುಜುರಾಹೋದ ರೀತಿಯಲ್ಲಿ ಕೋನಾರ್ಕ್ ಸೂರ್ಯ ದೇವಾಲಯವು ಮಿಥುನ ಅಥವಾ ಶೃಂಗಾರ ರಸ ಉಕ್ಕಿಸುವ ಶಿಲ್ಪ ಕಲೆಗಳಿಂದಾಗಿಯೂ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Steve Browne & John Verkl

ಕೋನಾರ್ಕ್ ಸೂರ್ಯ ದೇವಾಲಯ:

ಕೋನಾರ್ಕ್ ಸೂರ್ಯ ದೇವಾಲಯ:

ಖುಜುರಾಹೋದ ರೀತಿಯಲ್ಲಿ ಕೋನಾರ್ಕ್ ಸೂರ್ಯ ದೇವಾಲಯವು ಮಿಥುನ ಅಥವಾ ಶೃಂಗಾರ ರಸ ಉಕ್ಕಿಸುವ ಶಿಲ್ಪ ಕಲೆಗಳಿಂದಾಗಿಯೂ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Steve Browne & John Verkle

ಕೋನಾರ್ಕ್ ಸೂರ್ಯ ದೇವಾಲಯ:

ಕೋನಾರ್ಕ್ ಸೂರ್ಯ ದೇವಾಲಯ:

ಖುಜುರಾಹೋದ ರೀತಿಯಲ್ಲಿ ಕೋನಾರ್ಕ್ ಸೂರ್ಯ ದೇವಾಲಯವು ಮಿಥುನ ಅಥವಾ ಶೃಂಗಾರ ರಸ ಉಕ್ಕಿಸುವ ಶಿಲ್ಪ ಕಲೆಗಳಿಂದಾಗಿಯೂ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Aleksandr Zykov

ಕೋನಾರ್ಕ್ ಸೂರ್ಯ ದೇವಾಲಯ:

ಕೋನಾರ್ಕ್ ಸೂರ್ಯ ದೇವಾಲಯ:

ಖುಜುರಾಹೋದ ರೀತಿಯಲ್ಲಿ ಕೋನಾರ್ಕ್ ಸೂರ್ಯ ದೇವಾಲಯವು ಮಿಥುನ ಅಥವಾ ಶೃಂಗಾರ ರಸ ಉಕ್ಕಿಸುವ ಶಿಲ್ಪ ಕಲೆಗಳಿಂದಾಗಿಯೂ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Aleksandr Zykov

ಕೋನಾರ್ಕ್ ಸೂರ್ಯ ದೇವಾಲಯ:

ಕೋನಾರ್ಕ್ ಸೂರ್ಯ ದೇವಾಲಯ:

ಖುಜುರಾಹೋದ ರೀತಿಯಲ್ಲಿ ಕೋನಾರ್ಕ್ ಸೂರ್ಯ ದೇವಾಲಯವು ಮಿಥುನ ಅಥವಾ ಶೃಂಗಾರ ರಸ ಉಕ್ಕಿಸುವ ಶಿಲ್ಪ ಕಲೆಗಳಿಂದಾಗಿಯೂ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Steve Browne & John Verkle

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X