Search
  • Follow NativePlanet
Share
» »ಮನಸೆಳೆವ ಕೊಲ್ಲಿ ಬೆಟ್ಟಗಳ ಅದ್ಭುತ ಲೋಕ

ಮನಸೆಳೆವ ಕೊಲ್ಲಿ ಬೆಟ್ಟಗಳ ಅದ್ಭುತ ಲೋಕ

By Vijay

ತಮಿಳುನಾಡು ಸಾಕಷ್ಟು ಪ್ರವಾಸಿ ಆಕರ್ಷಣೆಗಳನ್ನು ಹೊಂದಿರುವ ದಕ್ಷಿಣ ಭಾರತದ ರಾಜ್ಯಗಳ ಪೈಕಿ ಒಂದಾಗಿದೆ. ಪೂರ್ವ ಹಾಗೂ ಅದಮ್ಯ ಪ್ರಕೃತಿ ಸೌಂದರ್ಯದಿಂದ ನಳ ನಳಿಸುವ ಪಶ್ಚಿಮ ಘಟ್ಟಗಗಳೆರಡೂ ಸಂಧಿಸುವ ಈ ರಾಜ್ಯದಲ್ಲಿ ಅನೇಕ ನಯನ ಮನೋಹರ ಪರ್ವತ ಶ್ರೇಣಿಗಳಿವೆ.

ಪ್ರಕೃತಿ ಪ್ರಿಯ ಪ್ರವಾಸಿಗರೆ ಆಗಲಿ, ಚಾರಣ ಪ್ರಿಯ ಪ್ರವಾಸಿಗರೆ ಆಗಲಿ ಎಲ್ಲರೂ ಇಷ್ಟಪಡುವಂತಹ ಅನೇಕ ರಮಣೀಯ ಪರ್ವತ ಪ್ರವಾಸಿ ತಾಣಗಳು ಈ ರಾಜ್ಯಾದ್ಯಂತ ಕಾಣಬಹುದು. ಅಂತಹ ಒಂದು ಸ್ಥಳಗಳ ಪೈಕಿ ಒಂದಾಗಿದೆ ಕೊಲ್ಲಿಮಲೈ ಪರ್ವತ ಶ್ರೇಣಿ.

ನಿಮಗಿಷ್ಟವಾಗಬಹುದಾದ : ಪಶ್ಚಿಮಘಟ್ಟಗಳ ಮಾಯಾ ಲೋಕದಲ್ಲಿ ವಿಹಾರ

ಇಂದಿಗೂ ಕೊಲ್ಲಿಪಾವೈ ದೇವಿ(ಇಟ್ಟುಕ್ಕೈ ಅಮ್ಮ)ಯ ರಕ್ಷಣೆಯಲ್ಲಿರುವ ಈ ಪರ್ವತ ತಾಣವು, ಅದೇ ದೇವಿಯ ಹೆಸರನ್ನೇ ತನ್ನ ನಾಮಧೇಯವನ್ನಾಗಿಸಿಕೊಂಡಿರುವ ಪರ್ವತ ಶ್ರೇಣಿಯಾಗಿದೆ. ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯಲ್ಲಿರುವ ಕೊಲ್ಲಿಮಲೈ ಪಶ್ಚಿಮ ಘಟ್ಟಗಳಲ್ಲಿರುವ ಒಂದು ಸುಂದರವಾದ ಭಾಗ.

ಪ್ರಸ್ತುತ ಲೇಖನದ ಮೂಲಕ ಕೊಲ್ಲಿಮಲೈ ಕುರಿತು ಕೆಲವು ಆಸಕ್ತಿಕರ ವಿಷಯಗಳನ್ನು ತಿಳಿಯಿರಿ. ಅವಕಾಶ ದೊರೆತಾಗ ಖಂಡಿತವಾಗಿಯೂ ಭೇಟಿ ನೀಡಲು ಪ್ರಯತ್ನಿಸಿ.

ರಮಣೀಯ ಸೌಂದರ್ಯದ ಕೊಲ್ಲಿ ಬೆಟ್ಟಗಳು:

ರಮಣೀಯ ಸೌಂದರ್ಯದ ಕೊಲ್ಲಿ ಬೆಟ್ಟಗಳು:

ಸುಮಾರು 280 ಚದರ ಕಿಲೋಮೀಟರ್ ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಕೊಲ್ಲಿಮಲೈ ಶ್ರೇಣಿಯ ಪರ್ವತಗಳ ಎತ್ತರ ಸುಮಾರು 1000 ದಿಂದ 1300 ಮೀಟರುಗಳೆಂದು ಅಂದಾಜಿಸಲಾಗಿದೆ.

ಚಿತ್ರಕೃಪೆ: Docku

ರಮಣೀಯ ಸೌಂದರ್ಯದ ಕೊಲ್ಲಿ ಬೆಟ್ಟಗಳು:

ರಮಣೀಯ ಸೌಂದರ್ಯದ ಕೊಲ್ಲಿ ಬೆಟ್ಟಗಳು:

ದಕ್ಷಿಣ ಭಾರತದ ಪೂರ್ವತೀರದ ಸಮಾನಾಂತರವಾಗಿ ಸಾಗುವ ಈ ಪರ್ವತ ಶ್ರೇಣಿಯ ತಪ್ಪಲನ್ನು ತಲುಪಬೇಕಾದರೆ ಸುಮಾರು 70 ಸುದೀರ್ಘ ಹೊರಳುಗಳನ್ನು ದಾಟಬೇಕಾಗುತ್ತದೆ.

ಚಿತ್ರಕೃಪೆ: Pravinraaj

ರಮಣೀಯ ಸೌಂದರ್ಯದ ಕೊಲ್ಲಿ ಬೆಟ್ಟಗಳು:

ರಮಣೀಯ ಸೌಂದರ್ಯದ ಕೊಲ್ಲಿ ಬೆಟ್ಟಗಳು:

ದೈವೀ ಶಕ್ತಿಯಿಂದ ರಕ್ಷಿತ ಪ್ರದೇಶವಾದ್ದರಿಂದಲೊ ಏನೊ ಇನ್ನೂವರೆಗೆ ಮಾನವ ಚಟುವಟಿಕೆಗಳು ಅಷ್ಟೊಂದು ಚುರುಕಾಗಿರದೆ ಹಾಗೂ ವಾಣಿಜ್ಯ ಶೋಷಣೆಗಳಿಂದ ದೂರ ಉಳಿದಿದ್ದು, ತನ್ನ ನೈಸರ್ಗಿಕ ಸೊಬಗನ್ನು ಹಾಗೆಯೆ ಉಳಿಸಿಕೊಂಡಿದೆ.

ಚಿತ್ರಕೃಪೆ: Rajeshodayanchal

ರಮಣೀಯ ಸೌಂದರ್ಯದ ಕೊಲ್ಲಿ ಬೆಟ್ಟಗಳು:

ರಮಣೀಯ ಸೌಂದರ್ಯದ ಕೊಲ್ಲಿ ಬೆಟ್ಟಗಳು:

ಕೊಲ್ಲಿಮಲೈ ಕೇವಲ ಚಾರಣ ಪ್ರವಾಸಿ ತಾಣವಾಗಿ ಮಾತ್ರವಲ್ಲದೆ ಯಾತ್ರಾ ಸ್ಥಳವಾಗಿಯೂ ಹೆಸರುವಾಸಿಯಾಗಿದೆ. ಇಲ್ಲಿರುವ ಶಿವನಿಗೆ ಮುಡಿಪಾದ ಅರಪಲೇಶ್ವರರ್ ದೇವಾಲಯದ ದರ್ಶನ ಕೋರಿ ಸುತ್ತಮುತ್ತಲಿನ ಪ್ರದೇಶಗಳಿಂದ ಸಾಕಷ್ಟು ಭಕ್ತಾದಿಗಳು ಕೊಲ್ಲಿಮಲೈಗೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Karthickbala

ರಮಣೀಯ ಸೌಂದರ್ಯದ ಕೊಲ್ಲಿ ಬೆಟ್ಟಗಳು:

ರಮಣೀಯ ಸೌಂದರ್ಯದ ಕೊಲ್ಲಿ ಬೆಟ್ಟಗಳು:

ಇನ್ನೊಂದು ಕುತೂಹಲಕರ ವಿಷಯವೆಂದರೆ, ಅರಪಲೇಶ್ವರರ್ ದೇವಾಲಯದಿಂದ ರಾಸಿಪುರಂನಲ್ಲಿರುವ ಶಿವನ ದೇವಾಲಯಕ್ಕೆ ರಹಸ್ಯ ಮಾರ್ಗವೊಂದಿದೆ ಎಂದು ಹೇಳಲಾಗುತ್ತದೆ. ಅಲ್ಲದೆ, ಈ ದೇವಾಲಯವು ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Rajeshodayanchal

ರಮಣೀಯ ಸೌಂದರ್ಯದ ಕೊಲ್ಲಿ ಬೆಟ್ಟಗಳು:

ರಮಣೀಯ ಸೌಂದರ್ಯದ ಕೊಲ್ಲಿ ಬೆಟ್ಟಗಳು:

ಪಾದಯಾತ್ರಿಗಳು, ಚಾರಣ ಪ್ರಿಯರು ಹಾಗು ಪ್ರಕೃತಿ ಪ್ರಿಯರು ವರ್ಷದ ಎಲ್ಲಾ ಕಾಲದಲ್ಲಿಯೂ ಕೊಲ್ಲಿಮಲೈಗೆ ಬೇಟಿನೀಡುವದನ್ನು ಕಾಣಬಹುದು.

ಚಿತ್ರಕೃಪೆ: Rajeshodayanchal

ರಮಣೀಯ ಸೌಂದರ್ಯದ ಕೊಲ್ಲಿ ಬೆಟ್ಟಗಳು:

ರಮಣೀಯ ಸೌಂದರ್ಯದ ಕೊಲ್ಲಿ ಬೆಟ್ಟಗಳು:

ಅದರಲ್ಲೂ ಅರಪಲೇಶ್ವರರ್ ದೇವಾಲಯದ ಹತ್ತಿರದಲ್ಲೇ ಇರುವ ಅಗಯ ಗಂಗೈ (ಆಕಾಶ ಗಂಗೆ) ಜಲಪಾತವು ಕೊಲ್ಲಿಪರ್ವತದ ಪ್ರಮುಖ ಆಕರ್ಷಣಾ ಕೇಂದ್ರವಾಗಿದೆ.

ಚಿತ್ರಕೃಪೆ: Rajeshodayanchal

ರಮಣೀಯ ಸೌಂದರ್ಯದ ಕೊಲ್ಲಿ ಬೆಟ್ಟಗಳು:

ರಮಣೀಯ ಸೌಂದರ್ಯದ ಕೊಲ್ಲಿ ಬೆಟ್ಟಗಳು:

ಅಲ್ಲದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೊಳಗೊಂಡ "ಓರಿ" ಉತ್ಸವವು ಇಲ್ಲಿನ ಪ್ರಸಿದ್ದ ಹಾಗೂ ಜನಾಕರ್ಷಕ ಉತ್ಸವವಾಗಿದೆ.

ಚಿತ್ರಕೃಪೆ: Rajeshodayanchal

ರಮಣೀಯ ಸೌಂದರ್ಯದ ಕೊಲ್ಲಿ ಬೆಟ್ಟಗಳು:

ರಮಣೀಯ ಸೌಂದರ್ಯದ ಕೊಲ್ಲಿ ಬೆಟ್ಟಗಳು:

ತಮಿಳುನಾಡು ಸರಕಾರವು, ಕೊಲ್ಲಿಮಲೈನಲ್ಲಿ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸೇಕುಪರೈ ಹಾಗು ಸೆಲುರ್ ನಾಡುಗಳಲ್ಲಿ ಎರಡು ನಿರೀಕ್ಷಣಾತಾಣಗಳನ್ನು ಅಭಿವೃದ್ಧಿಗೊಳಿಸುತ್ತಿದೆ.

ಚಿತ್ರಕೃಪೆ: Karthickbala

ರಮಣೀಯ ಸೌಂದರ್ಯದ ಕೊಲ್ಲಿ ಬೆಟ್ಟಗಳು:

ರಮಣೀಯ ಸೌಂದರ್ಯದ ಕೊಲ್ಲಿ ಬೆಟ್ಟಗಳು:

ಮಸಿಲಾ ಜಲಪಾತ ಮತ್ತು ಸ್ವಾಮಿ ಪ್ರಣವಾನಂದರ ಆಶ್ರಮ, ಇವು ಇಲ್ಲಿ ಕಾಣಬಹುದಾದ ಇತರೆ ಆಕರ್ಷಕ ಪ್ರವಾಸಿ ತಾಣಗಳಾಗಿವೆ. ಆಕಾಶಗಂಗೆ ಜಲಪಾತ.

ಚಿತ್ರಕೃಪೆ: Karthickbala

ರಮಣೀಯ ಸೌಂದರ್ಯದ ಕೊಲ್ಲಿ ಬೆಟ್ಟಗಳು:

ರಮಣೀಯ ಸೌಂದರ್ಯದ ಕೊಲ್ಲಿ ಬೆಟ್ಟಗಳು:

ಕೊಲ್ಲಿಮಲೈ ಬೆಟ್ಟಗಳ ಬುಡದಲ್ಲಿ ಸಾಕಷ್ಟು ಚಿಕ್ಕ ಪುಟ್ಟ ಪಟ್ಟಣಗಳಿದ್ದು ಅಲ್ಲಿಂದ ಕೊಲ್ಲಿ ಬೆಟ್ಟಗಳ ನೋಟವು ಅತ್ಯಂತ ವಿಹಂಗಮವಾಗಿ ಗೋಚರಿಸುತ್ತದೆ.

ಚಿತ್ರಕೃಪೆ: Pravinraaj

ರಮಣೀಯ ಸೌಂದರ್ಯದ ಕೊಲ್ಲಿ ಬೆಟ್ಟಗಳು:

ರಮಣೀಯ ಸೌಂದರ್ಯದ ಕೊಲ್ಲಿ ಬೆಟ್ಟಗಳು:

ಪುರಾತನ ತಮಿಳು ಸಾಹಿತ್ಯ ರಚನೆಗಳಾದ ಸಿಲಪತ್ತಿಗರಂ, ಮಣಿಮೇಕಲೈ ಮುಂತಾದವುಗಳಲ್ಲಿ ಕೊಲ್ಲಿ ಬೆಟ್ಟಗಳ ಕುರಿತು ಉಲ್ಲೇಖಿಸಲಾಗಿದೆ.

ಚಿತ್ರಕೃಪೆ: Rajeshodayanchal

ರಮಣೀಯ ಸೌಂದರ್ಯದ ಕೊಲ್ಲಿ ಬೆಟ್ಟಗಳು:

ರಮಣೀಯ ಸೌಂದರ್ಯದ ಕೊಲ್ಲಿ ಬೆಟ್ಟಗಳು:

ಕೊಲ್ಲಿ ಮಲೈಗೆ ಸಂಬಂಧಿಸಿದಂತೆ ಅನೇಕ ದಂತ ಕಥೆಗಳಿವೆ. ಹಿಂದೆ ಈ ಪ್ರದೆಶವನ್ನು ತಮಿಳುನಾಡಿನ ಏಳು ಮಹಾ ಪರೋಪಕಾರಿ ವ್ಯಕ್ತಿಗಳಲ್ಲಿ ಒಬ್ಬನಾಗಿ ಪರಿಗಣಿಸಲ್ಪಡುವ ವಲ್ವಿಲ್ ಓರಿ ಎಂಬಾತನು ಆಳುತ್ತಿದ್ದನು. ಇಂದಿಗೂ ತಮಿಳಿನ ಜನಪದ ಕಥೆಗಳಲ್ಲಿ ಅವನ ಶೌರ್ಯ,ಸಾಹಸಗಳನ್ನು ವರ್ಣಿಸಲಾಗಿದೆ.

ಚಿತ್ರಕೃಪೆ: Selathan

ರಮಣೀಯ ಸೌಂದರ್ಯದ ಕೊಲ್ಲಿ ಬೆಟ್ಟಗಳು:

ರಮಣೀಯ ಸೌಂದರ್ಯದ ಕೊಲ್ಲಿ ಬೆಟ್ಟಗಳು:

ಇನ್ನೊಂದು ದಂತಕಥೆಯ ಪ್ರಕಾರ, ಹಿಂದೆ ಇಬ್ಬರು ಮುನಿಗಳು ಈ ಪ್ರದೇಶವು ತಮ್ಮ ತಪಸ್ಸಿಗೆ ಸೂಕ್ತವೆಂದು ಪರಿಗಣಿಸಿ ಕುಳಿತಾಗ ರಕ್ಕಸರಿಬ್ಬರು ಇವರಿಗೆ ತೊಡರೆ ಕೊಡಹತ್ತಿದರು. ಆಗ ಆ ಇಬ್ಬರೂ ಮುನಿಗಳಿ ಪ್ರದೇಶದ ದೇವಿಯಾದ ಕೊಲ್ಲೊ ಪಾವೈಯನ್ನು ಬೇಡಿದಾಗ ಅವಳು ತನ್ನ ಮೋಡಿ ಮಾಡುವ ನಗುವಿನಿಂದಲೆ ಇಬ್ಬರು ರಕ್ಕಸರನ್ನು ಓಡಿಸಿದಳಂತೆ. ಇನ್ನೊಂದು ಪ್ರತೀತಿಯಂತೆ ಅರ್ಥಶಾಸ್ತ್ರ ಬರೆದ ಚಾಣಕ್ಯ ಜನಸಿದ್ದು ಇದೇ ಸ್ಥಳದಲ್ಲಂತೆ.

ರಮಣೀಯ ಸೌಂದರ್ಯದ ಕೊಲ್ಲಿ ಬೆಟ್ಟಗಳು:

ರಮಣೀಯ ಸೌಂದರ್ಯದ ಕೊಲ್ಲಿ ಬೆಟ್ಟಗಳು:

ಇಂದಿಗೂ ಒಂದು ರೀತಿಯ ಗಾಂಭೀರ್ಯತೆಯುಳ್ಳ ಬೆಟ್ಟ ಪ್ರದೇಶವಾಗಿ ಕೊಲ್ಲಿಮಲೈ ಜನರ ಮನಸೆಳೆಯುತ್ತದೆ. ಈ ಬೆಟ್ಟಗಳಲ್ಲಿ ಅಪರೂಪ ಹಾಗೂ ವೈವಿಧ್ಯಮಯವಾದ ಔಷಧೀಯ ಗಿಡ ಮೂಲಿಕೆಗಳಿವೆ. ಹೆಚ್ಚು ಅನ್ವೇಷಿಸಲ್ಪಡದ ಕಾರಣವಾಗಿ ರಮಣೀಯ ಪ್ರಕೃತಿ ಸೌಂದರ್ಯ ಹಾಗೂ ಕಲ್ಮಶರಹಿತ ವಾತಾವರಣ ಹೊಂದಿದೆ.

ಚಿತ್ರಕೃಪೆ: Simply CVR

ರಮಣೀಯ ಸೌಂದರ್ಯದ ಕೊಲ್ಲಿ ಬೆಟ್ಟಗಳು:

ರಮಣೀಯ ಸೌಂದರ್ಯದ ಕೊಲ್ಲಿ ಬೆಟ್ಟಗಳು:

ಕೊಲ್ಲಿಮಲೈ ಗ್ರಾಮ ಪ್ರದೇಶದ ಮಾರುಕಟ್ಟೆಗಳಲ್ಲಿ ಸಿಗುವ ಹಣ್ಣು, ತರಕಾರಿಗಳು ಕಲ್ಮಶರಹಿತವಾಗಿ, ಸತ್ವಯುಕ್ತಗಳಾಗಿರುತ್ತವೆ. ನೀವು ಇಲ್ಲಿಗೆ ಭೇಟಿ ನೀಡಿದಾಗ ಹಣ್ಣುಗಳ ರುಚಿಯನ್ನು ಸವಿಯಲು ಮರೆಯದಿರಿ. ಹಲಸು, ಪೈನ್ ಆಪಲ್, ಕರಿಮೆಣಸುಗಳನ್ನು ಇಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ.

ಚಿತ್ರಕೃಪೆ: Rajeshodayanchal

ರಮಣೀಯ ಸೌಂದರ್ಯದ ಕೊಲ್ಲಿ ಬೆಟ್ಟಗಳು:

ರಮಣೀಯ ಸೌಂದರ್ಯದ ಕೊಲ್ಲಿ ಬೆಟ್ಟಗಳು:

ಕೊಲ್ಲಿಮಲೈ ಬೆಟ್ಟಗಳಲ್ಲಿ ಹುಲುಸಾಗಿ ಬೆಳೆದಿರುವ ಕರಿಮೆಣಸಿನ ಗಿಡ.

ಚಿತ್ರಕೃಪೆ: Docku

ರಮಣೀಯ ಸೌಂದರ್ಯದ ಕೊಲ್ಲಿ ಬೆಟ್ಟಗಳು:

ರಮಣೀಯ ಸೌಂದರ್ಯದ ಕೊಲ್ಲಿ ಬೆಟ್ಟಗಳು:

ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯಲ್ಲಿರುವ ಕೊಲ್ಲಿಮಲೈ ಬೆಂಗಳೂರಿನಿಂದ 275 ಕಿ.ಮೀ ಗಳಷ್ಟು ದೂರದಲ್ಲಿದೆ. ರೈಲು, ಬಸ್ಸು ಹಾಗೂ ವಿಮಾನಗಳ ಮೂಲಕ ಇಲ್ಲಿಗೆ ತೆರಳಬಹುದು. ಹತ್ತಿರದ ರೈಲು ನಿಲ್ದಾಣ ಸೇಲಂ ಆದರೆ ಹತಿರದ ವಿಮಾನ ನಿಲ್ದಾಣ ತಿರುಚ್ಚಿಯಾಗಿದೆ. ಸೇಲಂನಿಂದ ಕೊಲ್ಲಿಮಲೈ 65 ಕಿ.ಮೀ ಹಾಗೂ ತಿರುಚ್ಚಿಯಿಂದ 105 ಕಿ.ಮೀ ದೂರದಲ್ಲಿದೆ.

ಚಿತ್ರಕೃಪೆ: Pravinraaj

ರಮಣೀಯ ಸೌಂದರ್ಯದ ಕೊಲ್ಲಿ ಬೆಟ್ಟಗಳು:

ರಮಣೀಯ ಸೌಂದರ್ಯದ ಕೊಲ್ಲಿ ಬೆಟ್ಟಗಳು:

ಬೆಂಗಳೂರಿನಿಂದ ಹೊರಡ ಬೇಕಿದ್ದರೆ ಬೆಂಗಳೂರು - ಹೊಸೂರು - ಧರ್ಮಪುರಿ - ಸೇಲಂ ಮಾರ್ಗವಾಗಿ ಕೊಲ್ಲಿಮಲೈಗೆ ತಲುಪಬಹುದು. ಈ ದೂರವು ಒಟ್ಟಾರೆಯಾಗಿ 275 ಕಿ.ಮೀ ಗಳಷ್ಟಿದೆ.

ಚಿತ್ರಕೃಪೆ: Dilli2040

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X