Search
  • Follow NativePlanet
Share
» »ಚಾಕೊಲೇಟ್ಸ್ ಕಾಣಿಕೆಯಾಗಿ ಪಡೆಯುವ ದೇವತೆಯ ಬಗ್ಗೆ ನಿಮಗೆ ಗೊತ್ತೆ?

ಚಾಕೊಲೇಟ್ಸ್ ಕಾಣಿಕೆಯಾಗಿ ಪಡೆಯುವ ದೇವತೆಯ ಬಗ್ಗೆ ನಿಮಗೆ ಗೊತ್ತೆ?

ಪಟ್ಟು ಕೊಲವಿಜಿ ಅಮ್ಮನ್ ದೇವಾಲಯವು ತಮಿಳು ನಾಡು ರಾಜ್ಯದ ಚೆನ್ನೈ ನಗರದ ಮೈಲಾಪುರೆ ಎಂಬಲ್ಲಿ ಇದೆ. ಈ ತಾಯಿಯು ಅತ್ಯಂತ ಶಕ್ತಿಶಾಲಿ ದೇವತೆಯಾಗಿದ್ದು ಹಲವಾರು ಭಕ್ತರನ್ನು ಹೊಂದಿದ್ದಾಳೆ. ಈ ತಾಯಿಯು ಅತ್ಯಂತ ವಿಭಿನ್ನವಾದ ಕಾಣಿಕೆಯನ್ನು ಅರ್ಪಿಸಿಕೊ

ಚಾಕೊಲೇಟ್ಸ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಅತ್ಯಂತ ಪ್ರಿಯವಾದುದು. ಚಾಕೊಲೆಟ್ಸ್‍ಗಳಲ್ಲಿ ಹಲವಾರು ಬಗೆಗಳಿರುತ್ತವೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಚಾಕೋಲೆಟ್ ಇಷ್ಟ. ಇದೇನಪ್ಪ ಇದ್ದಕ್ಕಿದ್ದ ಹಾಗೆ ಪ್ರವಾಸದ ಬಗ್ಗೆ ಬಿಟ್ಟು ರುಚಿಕರವಾದ ಚಾಕೊಲೇಟ್ ಬಗ್ಗೆ ಹೇಳುತ್ತಾ ಇದ್ದೇನೆ ಎಂದು ಯೋಚಿಸುತ್ತಿದ್ದೀರಾ?.

ಹಾಗಾದರೆ ಚಾಕೊಲೇಟ್ಸ್‍ನ್ನು ನೈವೆದ್ಯವಾಗಿ ನೀಡುವ ದೇವಾಲಯದ ಬಗ್ಗೆ ತಿಳಿಯೋಣ. ಪಟ್ಟು ಕೊಲವಿಜಿ ಅಮ್ಮನ್ ದೇವಾಲಯವು ತಮಿಳಿನಾಡು ರಾಜ್ಯದಲ್ಲಿದೆ. ಇಲ್ಲಿನ ಕೊಲವಿಜಿ ಅಮ್ಮನಿಗೆ ಚಾಕೊಲೆಟ್ಸ್ ಕಾಣಿಕೆಯಾಗಿ ನೀಡುತ್ತಾರೆ. ಇಂತಹ ವಿಭಿನ್ನ ದೇವಾಲಯದ ಬಗ್ಗೆ ತಿಳಿಯಲೇಬೇಕು ಅಲ್ಲವೇ?

ಪ್ರಸ್ತುತ ಲೇಖನದಲ್ಲಿ ಕಾಣಿಕೆಯಾಗಿ ಚಾಕೊಲೇಟ್ ಪಡೆಯುವ ಕೊಲವಿಜಿ ಅಮ್ಮನ ಬಗ್ಗೆ ತಿಳಿಯೋಣ.

ದೇವಾಲಯ ಎಲ್ಲಿದೆ?

ದೇವಾಲಯ ಎಲ್ಲಿದೆ?

ಪಟ್ಟು ಕೊಲವಿಜಿ ಅಮ್ಮನ್ ದೇವಾಲಯವು ತಮಿಳು ನಾಡು ರಾಜ್ಯದ ಚೆನ್ನೈ ನಗರದ ಮೈಲಾಪುರೆ ಎಂಬಲ್ಲಿ ಇದೆ. ಈ ತಾಯಿಯು ಅತ್ಯಂತ ಶಕ್ತಿಶಾಲಿ ದೇವತೆಯಾಗಿದ್ದು ಹಲವಾರು ಭಕ್ತರನ್ನು ಹೊಂದಿದ್ದಾಳೆ. ಈ ತಾಯಿಯು ಅತ್ಯಂತ ವಿಭಿನ್ನವಾದ ಕಾಣಿಕೆಯನ್ನು ಅರ್ಪಿಸಿಕೊಳ್ಳುತ್ತಾಳೆ.


PC:Kapaliadiyar

ರೋಗ ನಿವಾರಿಣಿ

ರೋಗ ನಿವಾರಿಣಿ

ಈ ಪಟ್ಟು ಕೊಲವಿಜಿ ಅಮ್ಮನ್ ಅತ್ಯಂತ ಶಕ್ತಿ ಸ್ವರೂಪಿಣಿ ತನ್ನ ಮಹಿಮೆಯಿಂದ ಹಲವಾರು ಭಕ್ತರನ್ನು ಸಲುಹಿದ ಆದಿ ಶಕ್ತಿ. ಈಕೆಯು ಭಕ್ತರ ಹಲವಾರು ರೋಗಗಳನ್ನು ನಿವಾರಣೆ ಮಾಡುತ್ತಿದ್ದಾಳೆ. ತಮ್ಮ ರೋಗಗಳನ್ನು ಪರಿಹರಿಸು ಎಂದು ದಿನನಿತ್ಯ ಈ ತಾಯಿಯ ಆರ್ಶಿವಾದವನ್ನು ಬೇಡಿ ಭಕ್ತರು ಬರುತ್ತಾರೆ.

PC:Kapaliadiyar

ಮುಂದಕಣ್ಣಿ ಅಮ್ಮನ್ ದೇವಾಲಯ

ಮುಂದಕಣ್ಣಿ ಅಮ್ಮನ್ ದೇವಾಲಯ

ಪಟ್ಟು ಕೊಲವಿಜಿ ಅಮ್ಮನ್ ದೇವಾಲಯದಿಂದ ಮುಂದಕಣ್ಣಿ ಅಮ್ಮನ್ ದೇವಾಲಯವು ಅತ್ಯಂತ ಸಮೀಪದಲ್ಲಿದೆ. ಈ ಎರಡು ದೇವಾಲಯಗಳು ಅತ್ಯಂತ ಪ್ರಸಿದ್ಧಿಯನ್ನು ಪಡೆದಿದೆ.

ಚಾಕೊಲೇಟ್ ಅಮ್ಮನ್

ಚಾಕೊಲೇಟ್ ಅಮ್ಮನ್

ಪಟ್ಟು ಕೊಲವಿಜಿ ಅಮ್ಮನ್ ತಾಯಿಯನ್ನು ಚಾಕೊಲೇಟ್ ಅಮ್ಮನ್ ಎಂದು ಸಹಾ ಕರೆಯುತ್ತಾರೆ. ಈ ತಾಯಿಯು ಚಾಕೊಲೇಟ್‍ನ್ನು ಕಾಣಿಕೆಯಾಗಿ ಪಡೆಯುವ ಸಲುವಾಗಿ ಈ ದೇವತೆಯು ಚಾಕೊಲೇಟ್ ಅಮ್ಮನ್ ಆಗಿದ್ದಾಳೆ. ಇಲ್ಲಿಗೆ ಬರುವ ಭಕ್ತರು ಚಾಲೊಲೇಟ್‍ನ್ನು ಕಾಣಿಕೆಯಾಗಿ ಅರ್ಪಿಸುತ್ತಾರೆ.

ದೇವತ ಮೂರ್ತಿಗಳು

ದೇವತ ಮೂರ್ತಿಗಳು

ಪಟ್ಟು ಕೊಲವಿಜಿ ಅಮ್ಮನ್ ದೇವಾಲಯದ ಒಳಭಾಗದಲ್ಲಿ ಹಲವಾರು ದೇವತ ಮೂರ್ತಿಗಳಿವೆ. ಅವುಗಳೆಂದರೆ ಪಚ್ಚಿ ಪಟ್ಟು ಕುವೇಚಿ ಅಮ್ಮನ್, ಅರ್ಪಣ ಕಾಳಿ ಅಮ್ಮನ್, ಆನಂದ ಕುವಿಜಿ ಅಮ್ಮನ್, ಮಂಗಳ ಕಾಳಿ ಅಮ್ಮನ್, ಗಣೇಶ, ಮುರುಗನ್, ಅಯ್ಯಪ್ಪ, ದಕ್ಷೀಣ ಮೂರ್ತಿ, ಕೈಲಾಸ ಕಬಾಲಿ, ಕೃಷ್ಣ, ಸೂರ್ಯ ನಾರಾಯಣ, ಬಾಲಾಜಿ ಹೀಗೆ ಇನ್ನೂ ಹಲವಾರು ದೇವತಾ ಮೂರ್ತಿಗಳನ್ನು ಇಲ್ಲಿ ಕಾಣಬಹುದಾಗಿದೆ.

ದೇವಾಲಯ

ದೇವಾಲಯ

ಪಟ್ಟು ಕೊಲವಿಜಿ ಅಮ್ಮನ್ ದೇವಾಲಯ ಪ್ರವೇಶಿಸುತ್ತಿದ್ದಂತೆ ಪವಿತ್ರವಾದ ನಿಂಬೆ ಮರವಿದೆ. ಮತ್ತೊಂದು ಭಾಗದಲ್ಲಿ ಆಂಜನೇಯ ಸ್ವಾಮಿಯು ನೆಲೆಸಿದ್ದಾನೆ. 7 ಶಕ್ತಿ ದೇವತೆಗಳಾದ ಸಪ್ತ ಕನ್ನಿಕೆಯರು ಒಂದೇ ಸಾಲಿನಲ್ಲಿ ನಿಂತಿರುವುದನ್ನು ಈ ದೇವಾಲಯದಲ್ಲಿ ಕಾಣಬಹುದಾಗಿದೆ.

ಸ್ವಯಂ ಭೂ

ಸ್ವಯಂ ಭೂ

ಪಟ್ಟು ಕೊಲವಿಜಿ ಅಮ್ಮನ್ ದೇವಾಲಯವು ಸ್ವಯಂ ಭೂ ಸ್ಥಾಪಿತವಾದ ದೇವತೆಯಾಗಿದ್ದಾಳೆ. ಈ ತಾಯಿಯ ದರ್ಶನ ಭಾಗ್ಯ ಪಡೆಯಲು ಸಾವಿರಾರು ಭಕ್ತರು ಈ ದೇವಾಲಯಕ್ಕೆ ಬರುತ್ತಾರೆ.

ಸಂಪತ್ತು

ಸಂಪತ್ತು

ಪಟ್ಟು ಕೊಲವಿಜಿ ಅಮ್ಮನ್ ಪ್ರೀತಿ ಹಾಗೂ ಸಂಪತ್ತನ್ನು ನೀಡುವ ಅದಿ ದೇವತೆಯಾಗಿದ್ದಾಳೆ. ಈ ತಾಯಿಯು ಅತ್ಯಂತ ಶಕ್ತಿಶಾಲಿಯಾಗಿದ್ದು ಯಾರಾದರೂ ಅಪಚಾರ ಮಾಡಿದರೆ ಅವರನ್ನು ಶಿಕ್ಷಿಸುತ್ತಾಳೆ.

ತಲುಪುವ ಬಗೆ?

ತಲುಪುವ ಬಗೆ?

ಈ ಪಟ್ಟು ಕೊಲವಿಜಿ ಅಮ್ಮನ್ ದೇವಾಲಯವು ತಮಿಳು ನಾಡು ರಾಜ್ಯದ ಚೆನ್ನೈ ನಗರದ ಮೈಲಾಪುರ್‍ನ ಜಿ.ಎನ್.ಸಿ ಚೆಟ್ಟಿ ರಸ್ತೆಯಲ್ಲಿದೆ. ಮೈಲಾಪುರ್‍ನಿಂದ ಈ ದೇವಾಲಯಕ್ಕೆ ಬಸ್‍ಗಳ ಸಂಪರ್ಕ ವ್ಯವಸ್ಥೆಗಳಿವೆ.

ದೇವಾಲಯದ ಪ್ರವೇಶ ಸಮಯ

ದೇವಾಲಯದ ಪ್ರವೇಶ ಸಮಯ

ಪಟ್ಟು ಕೊಲವಿಜಿ ಅಮ್ಮನ್ ದೇವಾಲಯದ ಪ್ರವೇಶ ಸಮಯ ಬೆಳಗ್ಗೆ 6 ರಿಂದ 10:30 ರವರೆಗೆ ಹಾಗೂ ಸಂಜೆ 4 ರಿಂದ ರಾತ್ರಿ 8:30 ರವರೆಗೆ ಭಕ್ತರಿಗೆ ಪ್ರವೇಶವನ್ನು ನೀಡಲಾಗುತ್ತದೆ.

ವಿಶೇಷ ಪೂಜೆ

ವಿಶೇಷ ಪೂಜೆ

ಈ ಪಟ್ಟು ಕೊಲವಿಜಿ ಅಮ್ಮನ್‍ಗೆ ಮಂಗಳವಾರದಂದು 3 ಗಂಟೆ ಮಧ್ಯಾಹ್ನದಲ್ಲಿ ರಾಹು ಕಾಲ ವಿಶೇಷ ಪೂಜೆ ಹಾಗೂ ಗುರುವಾರ ಸಂಜೆ ದಕ್ಷಿಣ ಮೂರ್ತಿ ವಿಶೇಷ ಪೂಜೆಗಳನ್ನು ನೆರವೆರಿಸಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X