Search
  • Follow NativePlanet
Share
» »ಧರೆಗಿಳಿದ ಸ್ವರ್ಗವೆಂದರೆ ಇದೇನಾ!

ಧರೆಗಿಳಿದ ಸ್ವರ್ಗವೆಂದರೆ ಇದೇನಾ!

By Vijay

ಸಾಕಷ್ಟು ಜನರು ಪ್ರವಾಸ ಮಾಡುತ್ತಾರೆ, ಅನೇಕ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಪ್ರತಿಯೊಂದು ಸ್ಥಳಗಳು ತಮ್ಮದೆ ಆದ ವೈಶಿಷ್ಟ್ಯ ಹೊಂದಿದ್ದರೂ ಎಲ್ಲರಿಗೂ ಹಿಡಿಸಬೇಕೆಂದೇನಿಲ್ಲ. ಕೆಲವರಿಗೆ ಮರಭೂಮಿ ಪ್ರದೇಶಗಳಿಗೆ ಭೇಟಿ ನೀಡುವುದು ಇಷ್ಟವಿಲ್ಲದಿದ್ದರೆ ಕೆಲವರಿಗೆ ಮರಭೂಮಿಗಳೆ ಅತಿ ಅಚ್ಚು ಮೆಚ್ಚು. ಹೀಗೆ ಹಲವರ ಭಾವನೆಗಳಿಗೆ, ಸದಭಿರುಚಿಗಳಿಗೆ ತಕ್ಕಂತೆ ಸ್ಥಳಗಳ ರುಚಿಯು ವಿಭಿನ್ನವಾಗಿರುತ್ತದೆ.

ಆದರೆ ಕೆಲ ಸ್ಥಳಗಳು ಎಲ್ಲಾ ಕಾಲದಲ್ಲೂ, ಎಲ್ಲಾ ರೀತಿಯ ಜನರಲ್ಲೂ ತಮ್ಮ ಪ್ರಭಾವವನ್ನು ಬೀರುತ್ತವೆ. ಆ ಸ್ಥಳದ ವಾತಾವರಣವಿರಬಹುದು ಇಲ್ಲವೆ ಪ್ರಕೃತಿ ಸೌಂದರ್ಯವಿರಬಹುದು ಭೇಟಿ ನೀಡಿದ ತಕ್ಷಣ ಜನರ ಮನದ ಮೇಲೆ ಸುಂದರವಾದ ಪರಿಣಾಮ ಬೀರಿ ಆ ಸ್ಥಳ ಅವರ ಮನದಿಂದ ಅಚ್ಚಳಿಯದೆ ಉಳಿಯುವಂತೆ ಮಾಡುತ್ತವೆ.

ಅಂತಹ ಸಾಕಷ್ಟು ಸ್ಥಳಗಳು ನಮ್ಮಲ್ಲಿವೆ. ಈ ಲೇಖನದ ಮೂಲಕ ಅಂತಹ ಸ್ಥಳಗಳ ಪೈಕಿ ಒಂದಾದ ಕೊಡೈಕೆನಾಲ್ ಎಂಬ ಸುಂದರ ಗಿರಿಧಾಮದ ಕುರಿತು ತಿಳಿಯೋಣ. ಸಾಮಾನ್ಯವಾಗಿ ಗಿರಿಧಾಮ ಎಂದಾಕ್ಷಣ ಬೇಸಿಗೆಯಲ್ಲಿ ಭೇಟಿ ನೀಡಲು ಆದರ್ಶಪ್ರಾಯವಾಗಿರುತ್ತವೆ ಎಂದು ನಮಗೆ ತಿಲಿದಿರುವ ವಿಚಾರ. ಆದರೆ ಕೆಲ ಗಿರಿಧಾಮಗಳು ಚಳಿಗಾಲ ಹಾಗೂ ಮಳೆಗಾಲದಲ್ಲೂ ಆಕರ್ಷಕವಾಗಿ ಕಾಣುತ್ತವೆ.

ಕೊಡೈಕೆನಾಲ್:

ಕೊಡೈಕೆನಾಲ್:

ಕೊಡೈಕೆನಾಲ್ ಕೂಡ ಒಂದು ವಿಶಿಷ್ಟವಾದ ಗಿರಿಧಾಮವಾಗಿದೆ. ಬೇಸಿಗೆ ಹಾಗೂ ಚಳಿಗಾಲ ಇಲ್ಲಿಗೆ ಭೇಟಿ ನೀಡಲು ಆದರ್ಶ ಸಮಯ ಎಂದಿದ್ದರೂ ಮಳೆಗಾಲದ ಆಕರ್ಷಣೆಯೂ ಕೂಡ ಏನೂ ಕಮ್ಮಿ ಇಲ್ಲ. ಇನ್ನೇನೂ ಟ್ರೆಕ್ ನಂತಹ ಚಟುವಟಿಕೆ ಮಳೆಗಾಲದ ಸಂದರ್ಭದಲ್ಲಿ ತುಸು ಕಷ್ಟವಾದರೂ ಚಿಮು ಚಿಮು ಮಳೆಯ ನಡುವೆ, ಮನಸ್ಸಿಗೆ ಮುದ ನೀಡುವ ಆಹ್ಲಾದಕರ ವಾತಾವರಣ ಸದಾ ನಿಮ್ಮನ್ನು ಸ್ವಾಗತಿಸುತ್ತದೆ.

ಚಿತ್ರಕೃಪೆ: V.v

ಕೊಡೈಕೆನಾಲ್:

ಕೊಡೈಕೆನಾಲ್:

ತಮಿಳುನಾಡು ರಾಜ್ಯದ ದಿಂಡುಕ್ಕಲ್ ಜಿಲ್ಲೆಯಲ್ಲಿರುವ ಕೊಡೈಕೆನಾಲ್ ತಾಣವನ್ನು ಅಕ್ಕರೆಯಿಂದ "ಗಿರಿಧಾಮಗಳ ರಾಜಕುಮಾರಿ" ಎಂದೆ ಬಣ್ಣಿಸಲಾಗಿದೆ. ಅಲ್ಲದೆ ಹಿಂದಿನಿಂದಲೂ ಈ ಪ್ರದೇಶ ಒಂದು ಉತ್ಕೃಷ್ಟ ಪ್ರವಾಸಿ ತಾಣವಾಗಿ ಖ್ಯಾತಿ ಗಳಿಸಿದೆ.

ಚಿತ್ರಕೃಪೆ: Vaishalee

ಕೊಡೈಕೆನಾಲ್:

ಕೊಡೈಕೆನಾಲ್:

1845 ರಲ್ಲಿ ಪ್ರವರ್ಧಮಾನಕ್ಕೆ ಬಂದ ಕೊಡೈ ಪಟ್ಟಣದ ಆರ್ಥಿಕತೆಯು ಪ್ರಮುಖವಾಗಿ ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿದೆ. ಅಂತೆಯೆ ಇಲ್ಲಿ ಸಾಕಷ್ಟು ಪ್ರವಾಸಿ ಸೌಲಭ್ಯಗಳಿರುವುದನ್ನು ಕಾಣಬಹುದು. ಕೆವಲ ಕರ್ನಾಟಕ, ಆಂಧ್ರ, ಕೇರಳ ಮಾತ್ರವಲ್ಲದೆ ಉತ್ತರ ಭಾರತ ಹಾಗೂ ವಿದೇಶಗಳಿಂದಲೂ ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.

ಚಿತ್ರಕೃಪೆ: Ramkumar

ಕೊಡೈಕೆನಾಲ್:

ಕೊಡೈಕೆನಾಲ್:

ಕೊಡೈಕೆನಲ್ ಮೂಲತಃ ಕೊಡೈ ಹಾಗೂ ಕಾನಲ್ ಎಂಬ ಎರಡು ಪದಗಳಿಂದ ವ್ಯುತ್ಪತ್ತಿಯಾಗಿದೆ. ತಮಿಳಿನಲ್ಲಿ ಈ ಹೆಸರಿಗೆ ಮೂರ್ನಾಲ್ಕು ಅರ್ಥಗಳಿವೆ. ಒಂದು ಅರ್ಥದ ಪ್ರಕಾರ, ಕೊಡೈ ಎಂದರೆ ಅಂತ್ಯ ಎಂತಲೂ, ಕಾನಲ್ ಎಂದರೆ ದಟ್ಟ ಕಾಡು ಎಂತಲೂ ಅರ್ಥ ಬರುತ್ತದೆ. ಅಂದರೆ ಇದು "ಕಾಡಿನ ಅಂತ್ಯ" ಎಂದು ಕಾವ್ಯಾತ್ಮಕವಾಗಿಯೂ ಭೌಗೋಳಿಕವಾಗಿಯೂ ಸಮಂಜಸವಾಗಿದೆ. ಇಲ್ಲಿ ಕಾಡಿನ ಅಂತ್ಯ ಎಂದರೆ ಇದರ ನಂತರ ಕಾಡು ಪ್ರದೇಶ ಮುಕ್ತಾಯ ಎಂದಷ್ಟೆ ಅರ್ಥ.

ಚಿತ್ರಕೃಪೆ: C/N N/G

ಕೊಡೈಕೆನಾಲ್:

ಕೊಡೈಕೆನಾಲ್:

ಮತ್ತೊಂದು ಅರ್ಥದ ಪ್ರಕಾರ, ತಮಿಳಿನಲ್ಲಿ ಕೊಡೈ ಎಂದರೆ ಕೊಡೆ/ಛತ್ರಿ ಎಂದೂ ಸಹ ಆಗುತ್ತದೆ. ಅಲ್ಲದೆ, ಕೊಡೈನ ದಟ್ಟ ಕಾಡು, ಪ್ರದೇಶದಲ್ಲಿ ಕೊಡೆಯ ಹಾಗೆ ಚಾಚಿದಂತೆ ಭಾಸವಾಗುತ್ತದೆ. ಹೀಗಾಗಿ ಇದಕ್ಕೆ ಕೊಡೈಕೆನಾಲ್ ಎಂಬ ಹೆಸರು ಬಂದಿರಲೂ ಬಹುದು ಎಂದು ಹೇಳಲಾಗಿದೆ.

ಚಿತ್ರಕೃಪೆ: Raj

ಕೊಡೈಕೆನಾಲ್:

ಕೊಡೈಕೆನಾಲ್:

ಕೊಡೈಕೆನಾಲ್ ಸುತ್ತಲೂ ಕಣಿವೆ, ಬೆಟ್ಟ, ಗುಡ್ಡಗಳಿಂದ ತುಂಬಿ ಕೊಂಡಿದ್ದು ಹುಲ್ಲುಗಾವಲಿನ ಮೈದಾನ ಹಾಗೂ ದಟ್ಟವಾದ ಶೋಲಾ ಅರಣ್ಯಗಳಿಂದ ಕೂಡಿದೆ. ಆದ್ದರಿಂದ ಮಳೆಗಾಲದ ಸಂದರ್ಭದಲ್ಲಿ ಇಲ್ಲಿನ ಪ್ರಕೃತಿ ಸುಂದರತೆಯ ದೃಶ್ಯಗಳು ಉಚ್ಛ್ರಾಯ ಸ್ಥಿತಿಗೆ ತಲುಪುತ್ತವೆ.

ಚಿತ್ರಕೃಪೆ: Raj

ಕೊಡೈಕೆನಾಲ್:

ಕೊಡೈಕೆನಾಲ್:

ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಕೊಡೈಕೆನಾಲ್ ಪ್ರದೇಶದಲ್ಲಿ ಜಲಾಪಾತ ತಾಣಗಳಿದ್ದು ಅಲ್ಲಲ್ಲಿ ಸುಂದರವಾದ ಹೂವುಗಳಿಂದ ತುಂಬಿರುವ ಭೂಮಿಗಳನ್ನೂ ಕಾಣಬಹುದು. ಇಲ್ಲಿನ ಆ ಸುಂದರ ಹೂವುಗಳನ್ನು ಉದ್ಯಾನಗಳನ್ನು ನೋಡಿದರೆ ನಿಮಗೆ ನಿಮ್ಮ ಮನೆಯೆ ನೆನೆಪಾಗದಿರಬಹುದು!

ಚಿತ್ರಕೃಪೆ: Raj

ಕೊಡೈಕೆನಾಲ್:

ಕೊಡೈಕೆನಾಲ್:

ಇಲ್ಲಿ ಸಾಕಷ್ಟು ನೋಡಬಹುದಾದ ಸ್ಥಳಗಳಿವೆ. ಅವು ಯಾವುವೆಂದು ತಿಳಿಯೋಣ ಬನ್ನಿ. ಕೊಡೈ ಕೆರೆ. ಸುಮಾರು 60 ಎಕರೆಗಳಷ್ಟು ವಿಸ್ತಾರ ಹೊಂದಿರುವ ಕೊಡೈ ಕೆರೆ 1863 ರಲ್ಲಿ ನಿರ್ಮಿಸಲ್ಪಟ್ಟ ಒಂದು ಕೃತಕ ಕೆರೆಯಾಗಿದೆ. ರಮಣಿಯವಾದ ಪರಿಸರ, ತಂಪಾದ ನೀರಿನಿಂದಿಗೆ ಕಂಗೊಳಿಸುವ ಈ ಕೆರೆಯಲ್ಲಿ ದೋಣಿ ವಿಹಾರವೂ ಲಭ್ಯ.

ಚಿತ್ರಕೃಪೆ: Thangaraj Kumaravel

ಕೊಡೈಕೆನಾಲ್:

ಕೊಡೈಕೆನಾಲ್:

ಬ್ರಯಂಟ್ ಉದ್ಯಾನ. ಕೊಡೈ ಕೆರೆಯ ಪೂರ್ವಕ್ಕೆ ಸುಮಾರು ಅರ್ಧ ಕಿ.ಮೀ ದೂರದಲ್ಲಿ ಈ ಸುಂದರವಾದ ಉದ್ಯಾನವಿದೆ. 325 ಬಗೆಯ ವೈವಿಧ್ಯಮಯ ಗಿಡ, ಮರಗಳು ಹಾಗೂ ಸಸಿಗಳನ್ನು ಇಲ್ಲಿ ಕಾಣಬಹುದಾಗಿದೆ. ಅಲ್ಲದೆ 1857 ರ ಕಾಲದ ಒಂದು ನೀಲ್ಗಿರಿ ಹಾಗೂ ಬೋಧಿ ವೃಕ್ಷಗಳು ಈ ಉದ್ಯಾನದ ಆಕರ್ಷಣ ಕೇಂದ್ರಗಳಾಗಿವೆ.

ಚಿತ್ರಕೃಪೆ: Ishfaq Shams

ಕೊಡೈಕೆನಾಲ್:

ಕೊಡೈಕೆನಾಲ್:

ಸಿಲ್ವರ್ ಕಾಸ್ಕೇಡ್ ಜಲಪಾತ. ಕೊಡೈಕೆನಾಲ್ ನಲ್ಲಿ ನೋಡಬಹುದಾದ ಮತ್ತೊಂದು ಆಕರ್ಷಣೆ. ಕೊಡೈ ಕೆರೆಯಿಂದ ಈ ಜಲಪಾತವು ಸೃಷ್ಟಿಯಾಗಿದೆ.

ಚಿತ್ರಕೃಪೆ: Ishfaq Shams

ಕೊಡೈಕೆನಾಲ್:

ಕೊಡೈಕೆನಾಲ್:

ಬಿಯರ್ ಶೋಲಾ ಜಲಪಾತ. ಕೊಡೈಕೆನಾಲ್ ನಲ್ಲಿ ಕಂಡುಬರುವ ಮತ್ತೊಂದು ಸುಮಧುರ ಜಲಪಾತದ ಹೆಸರು. ಬಸ್ಸು ನಿಲ್ದಾಣದಿಂದ ಮೂರು ಕಿ.ಮೀ ದೂರದಲ್ಲಿ ರಕ್ಷಿತ ಅರಣ್ಯವೊಂದರಲ್ಲಿ ಈ ಜಲಪಾತವಿದೆ.

ಚಿತ್ರಕೃಪೆ: Nijumania

ಕೊಡೈಕೆನಾಲ್:

ಕೊಡೈಕೆನಾಲ್:

ಡಾಲ್ಫಿನ್ ನೋಸ್. ಕೊಡೈಕೆನಾಲ್ ಬಸ್ಸು ನಿಲ್ದಾಣದಿಂದ 8 ಕಿ.ಮೀ ದೂರದಲ್ಲಿ ಈ ಆಕರ್ಷಣೆಯಿದೆ. ಮೊನಚಾದ ಕಲ್ಲಿನ ಬಂಡೆಯೊಂದು ಪ್ರತ್ಯೆಕವಾಗಿ ಬೆಳೆದ ರೀತಿಯಲ್ಲಿ ಇದು ರೂಪಗೊಂಡಿದ್ದು ದೂರದಿಂದ ನೋಡಿದಾಗ ಡಾಲ್ಫಿನ್ ಮೀನಿನ ಮೂಗಿನಂತೆ ಇದು ಗೋಚರಿಸುತ್ತದೆ. ಇಲ್ಲಿ ನಿಂತು 6000 ಅಡಿಗಳಷ್ಟು ಆಳದ ಪ್ರಪಾತವನ್ನು ನೋಡುವಾಗ ಎಂಥವರಿಗೂ ಒಂದು ಕ್ಶಣ ತಲೆ ತಿರುಗದೆ ಇರಲಾರದು.

ಚಿತ್ರಕೃಪೆ: Wikitom2

ಕೊಡೈಕೆನಾಲ್:

ಕೊಡೈಕೆನಾಲ್:

ಪಿಲ್ಲರ್ ರಾಕ್ಸ್. ಇವು ಎತ್ತರದ ಬಂಡೆಗಳಾಗಿದ್ದು, 400 ಅಡಿಗಳಷ್ಟು ಎತ್ತರದ ಮೂರು ಬೃಹತ್ ಬೆಟ್ಟಗಳನ್ನು ಒಳಗೊಂಡಿದೆ. ಇವು ಆಧಾರ ಸ್ಥಂಬಗಳಂತೆ ಗೋಚರಿಸುವುದರಿಂದ ಇದನ್ನು "ಪಿಲ್ಲರ್ ರಾಕ್ಸ್" ಎಂದು ಕರೆಯಲಾಗಿದೆ.

ಚಿತ್ರಕೃಪೆ: Dhanil K

ಕೊಡೈಕೆನಾಲ್:

ಕೊಡೈಕೆನಾಲ್:

ಕೊಡೈಕೆನಾಲ್ ಬಸ್ಸು ನಿಲ್ದಾಣದಿಂದ ಕೇವಲ ಆರು ಕಿ.ಮೀ ದೂರದಲ್ಲಿದೆ ಸೌರ ವೀಕ್ಷಣಾಲಯ. ಸುತ್ತಮುತ್ತಲಿನ ಹಲವು ಆಣೆಕಟ್ಟುಗಳ ವಿಹಂಗಮ ನೋಟವನ್ನು ಇಲ್ಲಿನ ದೂರದರ್ಶಕದಲ್ಲಿ ಕಾಣಬಹುದು.

ಚಿತ್ರಕೃಪೆ: Fabian8

ಕೊಡೈಕೆನಾಲ್:

ಕೊಡೈಕೆನಾಲ್:

ಕೊಡೈಕೆನಾಲ್ ಗಿರಿಧಾಮದಲ್ಲಿ ಕಂಡುಬರುವ ಕೆಲ ಮನಮೋಹಕ ಹೂವುಗಳು.

ಚಿತ್ರಕೃಪೆ: Thangaraj Kumaravel

ಕೊಡೈಕೆನಾಲ್:

ಕೊಡೈಕೆನಾಲ್:

ಕೊಡೈಕೆನಾಲ್ ಗಿರಿಧಾಮದಲ್ಲಿ ಕಂಡುಬರುವ ಕೆಲ ಮನಮೋಹಕ ಹೂವುಗಳು.

ಚಿತ್ರಕೃಪೆ: Thangaraj Kumaravel

ಕೊಡೈಕೆನಾಲ್:

ಕೊಡೈಕೆನಾಲ್:

ಕೊಡೈಕೆನಾಲ್ ಗಿರಿಧಾಮದಲ್ಲಿ ಕಂಡುಬರುವ ಕೆಲ ಮನಮೋಹಕ ಹೂವುಗಳು.

ಚಿತ್ರಕೃಪೆ: Thangaraj Kumaravel

ಕೊಡೈಕೆನಾಲ್:

ಕೊಡೈಕೆನಾಲ್:

ಕೊಡೈಕೆನಾಲ್ ಗಿರಿಧಾಮದಲ್ಲಿ ಕಂಡುಬರುವ ಕೆಲ ಮನಮೋಹಕ ಹೂವುಗಳು.

ಚಿತ್ರಕೃಪೆ: Thangaraj Kumaravel

ಕೊಡೈಕೆನಾಲ್:

ಕೊಡೈಕೆನಾಲ್:

ಕೊಡೈಕೆನಾಲ್ ಗಿರಿಧಾಮದಲ್ಲಿ ಕಂಡುಬರುವ ಕೆಲ ಮನಮೋಹಕ ಹೂವುಗಳು.

ಚಿತ್ರಕೃಪೆ: Thangaraj Kumaravel

ಕೊಡೈಕೆನಾಲ್:

ಕೊಡೈಕೆನಾಲ್:

ಕೊಡೈಕೆನಾಲ್ ಗಿರಿಧಾಮದಲ್ಲಿ ಕಂಡುಬರುವ ಕೆಲ ಮನಮೋಹಕ ಹೂವುಗಳು.

ಚಿತ್ರಕೃಪೆ: Thangaraj Kumaravel

ಕೊಡೈಕೆನಾಲ್:

ಕೊಡೈಕೆನಾಲ್:

ಕೊಡೈಕೆನಾಲ್ ಗಿರಿಧಾಮದಲ್ಲಿ ಕಂಡುಬರುವ ಕೆಲ ಮನಮೋಹಕ ಹೂವುಗಳು.

ಚಿತ್ರಕೃಪೆ: Thangaraj Kumaravel

ಕೊಡೈಕೆನಾಲ್:

ಕೊಡೈಕೆನಾಲ್:

ಕೊಡೈಕೆನಾಲ್ ಗಿರಿಧಾಮದಲ್ಲಿ ಕಂಡುಬರುವ ಕೆಲ ಮನಮೋಹಕ ಹೂವುಗಳು.

ಚಿತ್ರಕೃಪೆ: Thangaraj Kumaravel

ಕೊಡೈಕೆನಾಲ್:

ಕೊಡೈಕೆನಾಲ್:

ಕೊಡೈಕೆನಾಲ್ ಗಿರಿಧಾಮದಲ್ಲಿ ಕಂಡುಬರುವ ಕೆಲ ಮನಮೋಹಕ ಹೂವುಗಳು.

ಚಿತ್ರಕೃಪೆ: Thangaraj Kumaravel

ಕೊಡೈಕೆನಾಲ್:

ಕೊಡೈಕೆನಾಲ್:

ಕೊಡೈಕೆನಾಲ್ ಗಿರಿಧಾಮದಲ್ಲಿ ಕಂಡುಬರುವ ಕೆಲ ಮನಮೋಹಕ ಹೂವುಗಳು.

ಚಿತ್ರಕೃಪೆ: Thangaraj Kumaravel

ಕೊಡೈಕೆನಾಲ್:

ಕೊಡೈಕೆನಾಲ್:

ಕೊಡೈಕೆನಾಲ್ ಗಿರಿಧಾಮದಲ್ಲಿ ಕಂಡುಬರುವ ಕೆಲ ಮನಮೋಹಕ ಹೂವುಗಳು.

ಚಿತ್ರಕೃಪೆ: Thangaraj Kumaravel

ಕೊಡೈಕೆನಾಲ್:

ಕೊಡೈಕೆನಾಲ್:

ನವದಂಪತಿಗಳ ಪಾಲಿಗೆ ಸ್ವರ್ಗದಂತಿರುವ ಈ ಗಿರಿಧಾಮ ತನ್ನ ರಮಣೀಯ ನೋಟಗಳಿಂದ ಸತಿ-ಪತಿಗಳ ಮಧ್ಯ ಪ್ರಣಯ ಗೀತೆಯು ಮತ್ತಷ್ಟು ಗಾಢವಾಗಿ ಚಿಗುರುವಂತೆ ಕುಮ್ಮಕ್ಕು ನೀಡುತ್ತದೆ. ಬೇಕಾದರೆ ಕೊಡೈ ಕೆರೆಗೆ ಭೇಟಿ ನೀಡಿ, ಇಲ್ಲವೆ ದೋಣಿ ಸವಾರಿ ಮಾಡಿ. ಯಾವುದು ಇಷ್ಟವಿಲ್ಲವೆಂದ ಪಕ್ಷದಲ್ಲಿ ಸುಮ್ಮನೆ ಹಾಯಾಗಿ ಕುಳಿತು ಪ್ರಕೃತಿಯ ಮಡಿಲಿನಲ್ಲಿ ತಲ್ಲೀನರಾಗಿ. ಕುದುರೆ ಸವಾರಿಯೂ ಇಲ್ಲಿ ಲಭ್ಯ.

ಚಿತ್ರಕೃಪೆ: cprogrammer

ಕೊಡೈಕೆನಾಲ್:

ಕೊಡೈಕೆನಾಲ್:

ಮತ್ತೊಂದು ಗಮನದಲ್ಲಿರಿಸಬೇಕಾದ ಅಂಶವೆಂದರೆ, ಗಜ್ಜರಿ, ಸೇಬು ಮುಂತಾದ ಹಣ್ಣುಗಳು ಹಾಗೂ ತರಕಾರಿಗಳು ಇಲ್ಲಿ ಬಹು ಖ್ಯಾತಿ ಪಡೆದಿವೆ. ಆದ್ದರಿಂದ ನೀವು ಕೊಡೈ ಪ್ರವಾಸದಲ್ಲಿದ್ದಾಗ ಇವುಗಳನ್ನು ಕೊಂಡು ತಿನ್ನಲು ಮರೆಯದಿರಿ.

ಚಿತ್ರಕೃಪೆ: Vaishalee

ಕೊಡೈಕೆನಾಲ್:

ಕೊಡೈಕೆನಾಲ್:

ಕೊಡೈಕೆನಾಲ್ ಗೆ ತೆರಳಬೇಕಿದ್ದಲ್ಲಿ, ಹತ್ತಿರದ ನಗರಗಳಾದ ಮದುರೈ, ದಿಂಡುಗಲ್, ಪಳನಿ ಇಲ್ಲವೆ ಕೋಯಮತ್ತೂರಿಗೆ ತೆರಳುವುದು ಉತ್ತಮ. ಇಲ್ಲಿಂದ ಕೊಡೈಗೆ ತೆರಳಲು ಬಸ್ಸುಗಳು ದೊರೆಯುತ್ತವೆ. ಹತ್ತಿರದ ರೈಲು ನಿಲ್ದಾಣ ಪಳನಿ. ತಂಗಲು ಸಾಕಷ್ಟು ಹೋಟೆಲುಗಳು, ರಿಸಾರ್‍ಟುಗಳು ಕೊಡೈನಲ್ಲಿ ಲಭ್ಯವಿದೆ. ಮೊದಲೆ ಕಾಯ್ದಿರಿಸಿದ್ದರೆ ಇನ್ನೂ ಉತ್ತಮ.

ಚಿತ್ರಕೃಪೆ: Vaishalee

ಕೊಡೈಕೆನಾಲ್:

ಕೊಡೈಕೆನಾಲ್:

ನಿಮ್ಮ ಮನಕೆ ಮುದ ನೀಡುವಂತಹ ಕೊಡೈಕೆನಾಲ್ ನ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: aSrN

ಕೊಡೈಕೆನಾಲ್:

ಕೊಡೈಕೆನಾಲ್:

ನಿಮ್ಮ ಮನಕೆ ಮುದ ನೀಡುವಂತಹ ಕೊಡೈಕೆನಾಲ್ ನ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: Sankara Subramanian

ಕೊಡೈಕೆನಾಲ್:

ಕೊಡೈಕೆನಾಲ್:

ನಿಮ್ಮ ಮನಕೆ ಮುದ ನೀಡುವಂತಹ ಕೊಡೈಕೆನಾಲ್ ನ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: Raj

ಕೊಡೈಕೆನಾಲ್:

ಕೊಡೈಕೆನಾಲ್:

ನಿಮ್ಮ ಮನಕೆ ಮುದ ನೀಡುವಂತಹ ಕೊಡೈಕೆನಾಲ್ ನ ಕೆಲವು ಸುಂದರ ಚಿತ್ರಗಳು. ಕೊಡೈಕೆನಾಲ್ ನ ಒಂದು ರಿಸಾರ್ಟ್.

ಚಿತ್ರಕೃಪೆ: Darshan Simha

ಕೊಡೈಕೆನಾಲ್:

ಕೊಡೈಕೆನಾಲ್:

ನಿಮ್ಮ ಮನಕೆ ಮುದ ನೀಡುವಂತಹ ಕೊಡೈಕೆನಾಲ್ ನ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: mandeepsandhu_chd

ಕೊಡೈಕೆನಾಲ್:

ಕೊಡೈಕೆನಾಲ್:

ನಿಮ್ಮ ಮನಕೆ ಮುದ ನೀಡುವಂತಹ ಕೊಡೈಕೆನಾಲ್ ನ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: Bharath Kishore

ಕೊಡೈಕೆನಾಲ್:

ಕೊಡೈಕೆನಾಲ್:

ನಿಮ್ಮ ಮನಕೆ ಮುದ ನೀಡುವಂತಹ ಕೊಡೈಕೆನಾಲ್ ನ ಕೆಲವು ಸುಂದರ ಚಿತ್ರಗಳು. ಚಿತ್ರದಲ್ಲಿರುವುದು ಪ್ರಖ್ಯಾತ ಸ್ಯೂಸೈಡ್ ಪಾಯಿಂಟ್/ ಆತ್ಮಹತ್ಯಾ ತಾಣ.

ಚಿತ್ರಕೃಪೆ: Technofreak

ಕೊಡೈಕೆನಾಲ್:

ಕೊಡೈಕೆನಾಲ್:

ನಿಮ್ಮ ಮನಕೆ ಮುದ ನೀಡುವಂತಹ ಕೊಡೈಕೆನಾಲ್ ನ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: Gopal Vijayaraghavan

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X