Search
  • Follow NativePlanet
Share
» »ಎಂದಿಗೂ ಮರೆಯಲಾಗದ ಕೊಡಚಾದ್ರಿ ಟ್ರೆಕ್

ಎಂದಿಗೂ ಮರೆಯಲಾಗದ ಕೊಡಚಾದ್ರಿ ಟ್ರೆಕ್

By Vijay

ಟ್ರೆಕ್ ಅಥವಾ ಚಾರಣಕ್ಕೆ ಹೊರಡುವುದೆಂದರೆ ಎಲ್ಲಿಲ್ಲದ ರೋಮಾಂಚನ ಉಂಟಾಗುವುದು ಖಂಡಿತ. ಅದರಲ್ಲೂ ಹದಿಹರೆಯದವರ ಪಾಲಿಗಂತೂ ಟ್ರೆಕ್ ಒಂದು ಅತ್ಯದ್ಭುತವಾದ ಮನರಂಜನಾ ಚಟುವಟಿಕೆ. ರಕ್ತದ ಕಣ ಕಣದಲ್ಲೂ ಹರಡಿರುವ ಸ್ನೇಹ ಎಂಬ ನಶೆಗೆ ಟ್ರೆಕ್ ಕಿಚ್ಚು ಹಚ್ಚುವುದರಲ್ಲಿ ಯಾವುದೆ ಸಂಶಯವಿಲ್ಲ.

ಸಾಮಾನ್ಯವಾಗಿ ಗಿರಿ ಪರ್ವತಗಳು, ಜಲಪಾತ ತಾಣಗಳು, ಪ್ರಕೃತಿ ಸೌಂದರ್ಯದ ತಾಣಗಳು ಚಾರಣಕ್ಕೆ ಹೇಳಿ ಮಾಡಿಸಿದಂತಹ ಸ್ಥಳಗಳು. ಕರ್ನಾಟಕದಲ್ಲಿ ಅದೇಷ್ಟೊ ಸಂಖ್ಯೆಯಲ್ಲಿ ಇಂತಹ ಸುಂದರ ಸ್ಥಳಗಳನ್ನು ಕಾಣಬಹುದು. ಅಂತಹ ಸ್ಥಳಗಳ ಪೈಕಿ ಒಂದಾಗಿದೆ ನಮ್ಮ ಕೊಡಚಾದ್ರಿ. ಹಾಗಾದರೆ ಬನ್ನಿ ಈ ಲೇಖನದ ಮೂಲಕ ಕೊಡಚಾದ್ರಿಯ ಚಾರಣ ನಾವೂ ಸಹ ಮಾಡೋಣ.

ಕೊಡಚಾದ್ರಿ:

ಕೊಡಚಾದ್ರಿ:

ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಕೊಡಚಾದ್ರಿಯು ಒಂದು ಶಿಖರ ಶೃಂಗವಾಗಿದ್ದು ಸಮುದ್ರ ಮಟ್ಟದಿಂದ ಸುಮಾರು 1343 ಮೀ ಗಳಷ್ಟು ಎತ್ತರದಲ್ಲಿದೆ. ಇದು ಕರ್ನಾಟಕ ಸರ್ಕಾರದಿಂದ ಪಾರಂಪರಿಕ ನೈಸರ್ಗಿಕ ಸ್ಥಳದ ಮಾನ್ಯತೆ ಪಡೆದಿದೆ.

ಚಿತ್ರಕೃಪೆ: alexrudd

ಕೊಡಚಾದ್ರಿ:

ಕೊಡಚಾದ್ರಿ:

ಕೊಡಚ ಹಾಗೂ ಆದ್ರಿ ಎಂಬ ಪದಗಳಿಂದ ಕೊಡಚಾದ್ರಿ ಎಂಬ ಹೆಸರು ಬಂದಿದೆ. ಕೊಡಚ ಎಂದರೆ ಕುಟಜ (ಗಿರಿ ಮಲ್ಲಿಗೆ ಹೂವು) ಹಾಗೂ ಸಂಸ್ಕೃತದಲ್ಲಿ ಆದ್ರಿ ಎಂದರೆ ಪರ್ವತ ಅಥವಾ ಶಿಖರ ಎಂದಾಗುತ್ತದೆ. ಇಲ್ಲಿ ಅಪಾರವಾಗಿ ಕಂಡುಬರುವ ಗಿರಿ ಮಲ್ಲಿಗೆ ಹೂವುಗಳಿಂದ ಇದಕ್ಕೆ ಈ ರೀತಿಯಾಗಿ ಹೆಸರು ಬಂದಿದೆ.

ಚಿತ್ರಕೃಪೆ: alexrudd

ಕೊಡಚಾದ್ರಿ:

ಕೊಡಚಾದ್ರಿ:

ಕುಟಚಾದ್ರಿ ಅಥವಾ ಕೊಡಶಿ ಪರ್ವತ ಎಂತಲೂ ಕರೆಯಲ್ಪಡುವ ಈ ಗಿರಿ ಕನ್ಯೆಯು ಪ್ರಖ್ಯಾತ ಧಾರ್ಮಿಕ ಕ್ಷೇತ್ರವಾದ ಮೂಕಾಂಬಿಕೆ ದೇವಿ ನೆಲೆಸಿರುವ ಕೊಲ್ಲೂರಿಗೆ ಹಿನ್ನಿಲೆಯಾಗಿ ನಿಂತು ನೋಡುಗರ ಹೃದಯ ಕದಿಯುತ್ತದೆ ಎಂದರೂ ತಪ್ಪಾಗಲಾರದು.

ಚಿತ್ರಕೃಪೆ: alexrudd

ಕೊಡಚಾದ್ರಿ:

ಕೊಡಚಾದ್ರಿ:

ಕೊಡಚಾದ್ರಿ ಕೊಲ್ಲೂರಿನಿಂದ 21 ಕಿ.ಮೀ ಹಾಗೂ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಾಗೋಡಿ ಎಂಬ ಹಳ್ಳಿಯಿಂದ 15 ಕಿ.ಮೀ ದೂರದಲ್ಲಿ ಸ್ಥಿತವಿದೆ. ಕೊಡಚಾದ್ರಿಗೆ ತೆರಳಲು ಹಲವು ಮಾರ್ಗಗಳಿದ್ದು ಕೆಲ ಮಾರ್ಗಗಳು ಕಠಿಣತೆಯಿಂದಲೂ ಸಹ ಕೂಡಿವೆ.

ಚಿತ್ರಕೃಪೆ: alexrudd

ಕೊಡಚಾದ್ರಿ:

ಕೊಡಚಾದ್ರಿ:

ಕೊಡಚಾದ್ರಿಗೆ ತೆರಳಲು ನಿಜವಾಗಲೂ ಸವಾಲೊಡ್ಡುವ ಸಮಯವೆಂದರೆ ಮಳೆಗಾಲ. ಈ ಸಂದರ್ಭದಲ್ಲಿ ರಸ್ತೆಗಳು ತೇವಭರಿತವಾಗಿದ್ದು ಜಾರುತ್ತಿರುತ್ತವೆ. ತೆರಳಲೇಬೇಕೆಂದಿದ್ದರೆ ಸಾಕಷ್ಟು ಜಾಗರೂಕತೆ ವಹಿಸುವುದು ಅತ್ಯವಶ್ಯಕವಾಗಿದೆ. ವರ್ಷದ ಸುಮಾರು 8 ರಿಂದ 9 ತಿಂಗಳುಗಳ ಕಾಲ ಇಲ್ಲಿ ಮಳೆ ಸುರಿಯುತ್ತಿರುತ್ತದೆ.

ಚಿತ್ರಕೃಪೆ: Vijay S

ಕೊಡಚಾದ್ರಿ:

ಕೊಡಚಾದ್ರಿ:

ಆದರೆ ಮಳೆಗಾಲದಲ್ಲಿ ಕೊಡಚಾದ್ರಿಯು ಧರೆಗಿಳಿದ ಅಪ್ಸರೆಯಂತೆ ಕಾಣುವುದು ಖಂಡಿತ. ಮಂಜು ಮುಸುಕಿನ ವಾತಾವರಣ, ತಂಪು ತಂಪಾದ ಪರಿಸರ, ಎಲ್ಲೆಲ್ಲೂ ಹಸಿರು, ತಾಜಾ ನೀರಿನ ಕೆರೆ ತೊರೆಗಳು, ನಗರದ ಗೌಜು ಗದ್ದಲಗಳಿಲ್ಲದ ಶಾಂತತೆ ಎಲ್ಲವೂ ಸೇರಿ ಇದನ್ನು ಒಂದು ಭುವಿಯ ಸ್ವರ್ಗದ ಹಾಗೆ ಕಾಣುವೆಂತೆ ಮಾಡುತ್ತವೆ.

ಚಿತ್ರಕೃಪೆ: Vijay S

ಕೊಡಚಾದ್ರಿ:

ಕೊಡಚಾದ್ರಿ:

ಮೂಕಾಂಬಿಕಾ ರಾಷ್ಟ್ರೀಯ ಉದ್ಯಾನದ ಮಧ್ಯದಲ್ಲಿ ಸ್ಥಿತವಿರುವ ಕೊಡಚಾದ್ರಿಯು ಜೀವ ವೈವಿಧ್ಯತೆಯ ತಾಣವಾಗಿದ್ದು, ಹಲವು ಬಗೆಯ ಸ್ಥಳೀಯ ಹಾಗೂ ಅಳಿವಿನಂಚಿನಲ್ಲಿರುವ ಜೀವ ಹಾಗೂ ಸಸ್ಯ ಸಂಪತ್ತುಗಳಿಗೆ ಆಶ್ರಯ ತಾಣವಾಗಿದೆ.

ಚಿತ್ರಕೃಪೆ: Vijay S

ಕೊಡಚಾದ್ರಿ:

ಕೊಡಚಾದ್ರಿ:

ಕೊಡಚಾದ್ರಿ ಶಿಖರ ತುದಿಯು ಬರಡು ನೆಲವಾಗಿದ್ದು ಅಷ್ಟೊಂದು ಗಿಡ ಮರಗಳನ್ನು ಇಲ್ಲಿ ಕಾಣಲಾಗದು. ಇದಕ್ಕೆ ಕಾರಣವೆಂದರೆ ಇಲ್ಲಿ ಬಿರುಸಾಗಿ ಬಿಸುವ ಗಾಳಿ. ಆದರೂ ಇಲ್ಲಿಂದ ಇದರ ಕೆಳಗೆ ಸ್ಥಿತವಿರುವ ಕಾಡು ಪರಿಸರ, ಪ್ರಪಾತ ಮುಂತಾದವುಗಳನ್ನು ನೋಡಿದಾಗ ರೋಮಾಂಚನ ಆಗದೆ ಇರಲಾರದು.

ಚಿತ್ರಕೃಪೆ: Ashwin Kumar

ಕೊಡಚಾದ್ರಿ:

ಕೊಡಚಾದ್ರಿ:

ಐತಿಹಾಸಿಕವಾಗಿಯೂ ಗುರುತಿಸಲ್ಪಟ್ಟ ಕೊಡಚಾದ್ರಿಯಲ್ಲಿ ಇಂದಿಗೂ ಸಹ ಹಲವು ಪುರಾತನ ಕಾಲದಲ್ಲಿ ನಿರ್ಮಿಸಲಾದ ಏಕಶಿಲಾ ರಚನೆಗಳನ್ನು ಕಾಣಬಹುದಾಗಿದೆ. 12 ಅಡಿಗಳಿಗಿಂತಲೂ ಹೆಚ್ಚು ವ್ಯಾಸವುಳ್ಳ ಶಿಲೆಗಳನ್ನು ಈ ರಚನೆಗಳಲ್ಲಿ ಬಳಸಿರುವುದನ್ನು ಗಮನಿಸಬಹುದು.

ಚಿತ್ರಕೃಪೆ: alexrudd

ಕೊಡಚಾದ್ರಿ:

ಕೊಡಚಾದ್ರಿ:

ಕೊಡಚಾದ್ರಿಯ ಶಿಖರ ಪ್ರದೇಶದಲ್ಲಿ ಮೂಕಾಂಬಿಕೆ ದೇವಿಗೆ ಮುಡಿಪಾದ ಒಂದು ಪುರಾತನ ದೇಗುಲವನ್ನು ಕಾಣಬಹುದಾಗಿದ್ದು, ಇದು ಅಂದು ದೇವಿಯು ಮೂಕಾಸುರನ ವಧಿಸಿದ ಸ್ಥಳದಲ್ಲಿಯೆ ನಿರ್ಮಾಣವಾಗಿದ್ದೆಂದು ಹೇಳಲಾಗುತ್ತದೆ. ಹಾಗಾಗಿ ಇದು ಧಾರ್ಮಿಕ ದೃಷ್ಟಿಯಿಂದಲೂ ಮನ್ನಣೆಗಳಿಸಿದೆ.

ಚಿತ್ರಕೃಪೆ: alexrudd

ಕೊಡಚಾದ್ರಿ:

ಕೊಡಚಾದ್ರಿ:

ಇಂದಿಗೂ ಸಹ ಸಾಕಷ್ಟು ಸಂಖ್ಯೆಯಲ್ಲಿ ಸ್ಥಳೀಯರು ಹಾಗೂ ಕೇರಳಿಗರು ಕೊಡಚಾದ್ರಿಗೆ ಭೇಟಿ ನೀಡುತ್ತಿರುತ್ತಾರೆ. ಮೊನಚಾದ ಬೆಟ್ಟ ತುದಿಗಳ ಮೇಲೆ ನಿಂತು ಸುಂದರ ಭೂದೃಶ್ಯಾವಳಿಗಳಿಗೆ ಸಾಕ್ಷಿಯಾಗುತ್ತಿರುತ್ತಾರೆ.

ಚಿತ್ರಕೃಪೆ: Vijay S

ಕೊಡಚಾದ್ರಿ:

ಕೊಡಚಾದ್ರಿ:

ಕೊಡಚಾದ್ರಿಯ ಸುತ್ತಮುತ್ತಲಿನ ಪ್ರದೇಶಗಳು ಕಾಡುಗಳಿಂದ ಆವೃತವಾಗಿದ್ದು, ಪಶ್ಚಿಮ ಘಟ್ಟದ ಮಳೆಗಾಡು ಪ್ರದೇಶದ ಭಾಗವಾಗಿದೆ. ಆದ್ದರಿಂದ ಈ ಪ್ರದೇಶದಲ್ಲಿ ಸುತ್ತಾಡಿದಾಗ ಮನಮೋಹಕವಾದ ಭೂದೃಶ್ಯಾವಳಿಗಳು, ಸುಂದರ ಸೂರ್ಯೋದಯ ಹಾಗೂ ಸೂರ್ಯಾಸ್ತದ ನೋಟಗಳನ್ನು ಕಾಣಬಹುದು (ಮಳೆಗಾಲದ ಅನುಪಸ್ಥಿತಿಯಲ್ಲಿ).

ಚಿತ್ರಕೃಪೆ: alexrudd

ಕೊಡಚಾದ್ರಿ:

ಕೊಡಚಾದ್ರಿ:

ಆದಿ ಶಂಕರಾಚಾರ್ಯರು ಈ ಶಿಖರಕ್ಕೆ ಭೇಟಿ ನೀಡಿ ಕೆಲ ಸಮಯ ಧ್ಯಾನಿಸಿದ್ದರು ಎಂದು ಹೇಳಲಾಗಿದೆ. ಅದಕ್ಕೆ ಕುರುಹು ಎಂಬಂತೆ ಶಿಲೆಯ ಒಂದು ಪುಟ್ಟ ದೇಗುಲವಾದ ಸರ್ವಜ್ಞ ಪೀಠವನ್ನು ಇಂದಿಗೂ ಇಲ್ಲಿ ಕಾಣಬಹುದಾಗಿದೆ. ಆದಿ ಶಂಕರರಿಗೆ ಇದು ಮುಡಿಪಾಗಿದೆ.

ಚಿತ್ರಕೃಪೆ: Vijayakumarblathur

ಕೊಡಚಾದ್ರಿ:

ಕೊಡಚಾದ್ರಿ:

ಸರ್ವಜ್ಞಪೀಠದಿಂದ ಚಾರಣ ಮಾಡುತ್ತ ಗಣೇಶ ಗುಹಾ ಎಂಬ ಈ ಸ್ಥಳಕ್ಕೆ ಭೇಟಿ ನೀಡಬಹುದು. ಇದೊಂದು ನೈಸರ್ಗಿಕವಾಗಿ ರೂಪಗೊಂಡ ಗುಹೆಯಾಗಿದ್ದು ಪ್ರದೇಶದ ಗುರುತರವಾದ ಪ್ರವಾಸಿ ಆಕರ್ಷಣೆಯಾಗಿದೆ.

ಚಿತ್ರಕೃಪೆ: Pinku ajai

ಕೊಡಚಾದ್ರಿ:

ಕೊಡಚಾದ್ರಿ:

ಕೊಡಚಾದ್ರಿಯಲ್ಲಿ ಆಸ್ವಾದಿಸಬಹುದಾದ ಆಕರ್ಷಣೆಗಳ ಪೈಕಿ ಒಂದಾಗಿದೆ ಹಿಡ್ಲುಮನೆ ಜಲಪಾತ. ಕೊಡಚಾದ್ರಿಯಿಂದ ಐದು ಕಿ.ಮೀ ದೂರವಿರುವ ಈ ಜಲಪಾತ ತಾಣಕ್ಕೆ ಚಾರಣದ ಮೂಲಕ ಸುಲಭವಾಗಿ ತೆರಳಬಹುದಾಗಿದೆ.

ಚಿತ್ರಕೃಪೆ: Shrikanth n

ಕೊಡಚಾದ್ರಿ:

ಕೊಡಚಾದ್ರಿ:

ಕೊಡಚಾದ್ರಿಗೆ ಚಾರಣಕ್ಕೆಂದು ತೆರಳ ಬೇಕಿದ್ದರೆ ಶಿವಮೊಗ್ಗ ಜಿಲ್ಲೆಯ ನಾಗೋಡಿ ಅಥವಾ ನಿಟ್ಟೂರು ಹಳ್ಳಿಗಳಿಗೆ ತೆರಳಿ ಅಲ್ಲಿಂದ ಚಾರಣ ಕೈಗೊಳ್ಳಬಹುದು. ನಾಗೋಡಿ ಕೊಲ್ಲೂರಿನಿಂದ 21 ಕಿ.ಮೀ ಗಳಷ್ಟು ದೂರದಲ್ಲಿದೆ. ಇನ್ನು ಶಿವಮೊಗ್ಗಕ್ಕೆ ತೆರಳಲು ರಾಜ್ಯದ ಹಲವು ನಗರಗಳಿಂದ ಬಸ್ಸು ಹಾಗೂ ರೈಲಿನ ಸೌಲಭ್ಯವಿದೆ. ಅಲ್ಲದೆ ಕೊಲ್ಲೂರಿಗೂ ಸಹ ಸಾಕಷ್ಟು ಬಸ್ಸುಗಳು ದೊರೆಯುತ್ತವೆ.

ಚಿತ್ರಕೃಪೆ: alexrudd

ಕೊಡಚಾದ್ರಿ:

ಕೊಡಚಾದ್ರಿ:

ಕೊಡಚಾದ್ರಿ ಪ್ರದೇಶದ ಸುಂದರ ನೋಟಗಳು.


ಚಿತ್ರಕೃಪೆ: Vijayakumarblathur

ಕೊಡಚಾದ್ರಿ:

ಕೊಡಚಾದ್ರಿ:

ಕೊಡಚಾದ್ರಿ ಪ್ರದೇಶದ ಸುಂದರ ನೋಟಗಳು.


ಚಿತ್ರಕೃಪೆ: Jayeshj

ಕೊಡಚಾದ್ರಿ:

ಕೊಡಚಾದ್ರಿ:

ಕೊಡಚಾದ್ರಿ ಪ್ರದೇಶದ ಸುಂದರ ನೋಟಗಳು.


ಚಿತ್ರಕೃಪೆ: Mridulcp

ಕೊಡಚಾದ್ರಿ:

ಕೊಡಚಾದ್ರಿ:

ಕೊಡಚಾದ್ರಿ ಪ್ರದೇಶದ ಸುಂದರ ನೋಟಗಳು.


ಚಿತ್ರಕೃಪೆ: Manoj K

ಕೊಡಚಾದ್ರಿ:

ಕೊಡಚಾದ್ರಿ:

ಕೊಡಚಾದ್ರಿ ಪ್ರದೇಶದ ಸುಂದರ ನೋಟಗಳು.


ಚಿತ್ರಕೃಪೆ: Chinmayahd

ಕೊಡಚಾದ್ರಿ:

ಕೊಡಚಾದ್ರಿ:

ಕೊಡಚಾದ್ರಿ ಪ್ರದೇಶದ ಸುಂದರ ನೋಟಗಳು.


ಚಿತ್ರಕೃಪೆ: alexrudd

ಕೊಡಚಾದ್ರಿ:

ಕೊಡಚಾದ್ರಿ:

ಕೊಡಚಾದ್ರಿ ಪ್ರದೇಶದ ಸುಂದರ ನೋಟಗಳು.


ಚಿತ್ರಕೃಪೆ: alexrudd

ಕೊಡಚಾದ್ರಿ:

ಕೊಡಚಾದ್ರಿ:

ಕೊಡಚಾದ್ರಿ ಪ್ರದೇಶದ ಸುಂದರ ನೋಟಗಳು.


ಚಿತ್ರಕೃಪೆ: alexrudd

ಕೊಡಚಾದ್ರಿ:

ಕೊಡಚಾದ್ರಿ:

ಕೊಡಚಾದ್ರಿ ಪ್ರದೇಶದ ಸುಂದರ ನೋಟಗಳು.


ಚಿತ್ರಕೃಪೆ: alexrudd

ಕೊಡಚಾದ್ರಿ:

ಕೊಡಚಾದ್ರಿ:

ಕೊಡಚಾದ್ರಿ ಪ್ರದೇಶದ ಸುಂದರ ನೋಟಗಳು.


ಚಿತ್ರಕೃಪೆ: alexrudd

ಕೊಡಚಾದ್ರಿ:

ಕೊಡಚಾದ್ರಿ:

ಕೊಡಚಾದ್ರಿ ಪ್ರದೇಶದ ಸುಂದರ ನೋಟಗಳು.

ಚಿತ್ರಕೃಪೆ: alexrudd

ಕೊಡಚಾದ್ರಿ:

ಕೊಡಚಾದ್ರಿ:

ಕೊಡಚಾದ್ರಿ ಪ್ರದೇಶದ ಸುಂದರ ನೋಟಗಳು.

ಚಿತ್ರಕೃಪೆ: alexrudd

ಕೊಡಚಾದ್ರಿ:

ಕೊಡಚಾದ್ರಿ:

ಕೊಡಚಾದ್ರಿ ಪ್ರದೇಶದ ಸುಂದರ ನೋಟಗಳು.

ಚಿತ್ರಕೃಪೆ: alexrudd

ಕೊಡಚಾದ್ರಿ:

ಕೊಡಚಾದ್ರಿ:

ಕೊಡಚಾದ್ರಿ ಪ್ರದೇಶದ ಸುಂದರ ನೋಟಗಳು.

ಚಿತ್ರಕೃಪೆ: Premnath Thirumalaisamy

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X