Search
  • Follow NativePlanet
Share
» » ಬೇಡಿದ್ದೆಲ್ಲ ಈಡೇರಿಸುವ ಕರುವಾ ಸರೋವರ

ಬೇಡಿದ್ದೆಲ್ಲ ಈಡೇರಿಸುವ ಕರುವಾ ಸರೋವರ

By Vijay

ಜಮ್ಮು ಮತ್ತು ಕಾಶ್ಮೀರ ರಾಜ್ಯದ ರಿಯಾಸಿ ಜಿಲ್ಲೆಯು ಪ್ರವಾಸಿ ದೃಷ್ಟಿಯಿಂದ ಅದರಲ್ಲೂ ವಿಶೇಷವಾಗಿ ಧಾರ್ಮಿಕವಾಗಿ ಸಾಕಷ್ಟು ಹೆಸರುವಾಸಿಯಾದ ಸ್ಥಳವೆಂದೆ ಹೇಳಬಹುದು. ಏಕೆಂದರೆ ಈ ಒಂದು ಜಿಲ್ಲೆಯಲ್ಲಿ ದೇಶದಲ್ಲಿ ಎರಡನೇಯ ಅತಿ ಹೆಚ್ಚು ಜನರಿಂದ ಭೇಟಿ ನೀಡಲ್ಪಡುವ ವೈಷ್ಣೊ ದೇವಿ, ಶಿವಖೋರಿಯಂತಹ ಧಾರ್ಮಿಕ ತಾಣಗಳಿವೆ.

ವಿಸ್ಮಯಗೊಳಿಸುವ ಜಮ್ಮುಕಾಶ್ಮೀರದ ಅದ್ಭುತ ಕೆರೆಗಳು

ಈ ಪಟ್ಟಿಯಲ್ಲಿ ಸೇರುವಂತಹ ಮತ್ತೊಂದು ಕ್ಷೇತ್ರವೆಂದರೆ ಕರುವಾ ಗ್ರಾಮ. ಈ ಕರುವಾ ಗ್ರಾಮವು ಪ್ರಮುಖವಾಗಿ ಬಾಬಾ ಧನಸಾರ್ ಹಾಗೂ ಅಲ್ಲಿರುವ ಅತಿ ಪವಿತ್ರ ಎಂದು ನಂಬಲಾಗುವ ಕರುವಾ ಸರೋವರದಿಂದಾಗಿ ಸಾಕಷ್ಟು ಮಹತ್ವ ಪಡೆದಿದೆ. ರಿಯಾಸಿ ಜಿಲ್ಲೆಯ ರಿಯಾಸಿ ಪಟ್ಟಣದಿಂದ ಕಾಟ್ರಾಗೆ ಹೋಗುವ ಮಾರ್ಗದಲ್ಲಿ ರಿಯಾಸಿಯಿಂದ ಸುಮಾರು 17 ಕಿ.ಮೀ ದೂರದಲ್ಲಿ ಕರುವಾ ಗ್ರಾಮವಿದೆ.

 ಬೇಡಿದ್ದೆಲ್ಲ ಈಡೇರಿಸುವ ಕರುವಾ ಸರೋವರ

ಚಿತ್ರಕೃಪೆ: RameshSharma1

ಮುಖ್ಯ ರಸ್ತೆಯಿಂದ ತಿರುವು ಪಡೆದು ಸುಮಾರು ಇನ್ನೂರು ಮೀಟರುಗಳಷ್ಟು ದಟ್ಟವಾದ ಗಿಡ ಮರಗಳ ಮಧ್ಯ ಸಾಗುತ್ತ ಈ ಪವಿತ್ರ ತಾನವನ್ನು ತಲುಪಬಹುದಾಗಿದೆ. ಇಲ್ಲಿ ಬಾಬಾ ಧನಸಾರ್ ಗೆ ಮುಡಿಪಾದ ದೇವಾಲಯ ಹಾಗೂ ಪವಿತ್ರ ಕೊಳವಿದೆ. ಇದು ಕರುವಾ ಝೀಲ್ ಅಥವಾ ಕರುವಾ ಕರುವಾ ಸರೋವರವೆಂದೆ ಪ್ರಸಿದ್ಧವಾಗಿದೆ.

ಅಲ್ಲದೆ ಹಿಂದಿನ ಕಥೆ ಸಾರುವ ಬಲಿ ಪೀಠಗಳು, ವಿಶಿಷ್ಟ ಕಲಾಕೃತಿಗಳು ಇಲ್ಲಿದ್ದು ಭೇಟಿ ನೀಡುಗರನ್ನು ವಿಸ್ಮಯಗೊಳಿಸುವಂತಿದೆ. ವಿಶೇಷವೆಂದರೆ ಈ ಕರುವಾ ಸರೋವರ ಎಷ್ಟೊಂದು ಮಹತ್ವ ಹೊಂದಿದೆ ಎಂದರೆ ಇಲ್ಲಿ ಭಕ್ತಿಯಿಂದ ಬಾಬಾ ಧನಸಾರರನ್ನು ನೆನೆದು ಪವಿತ್ರ ಸ್ನಾನ ಮಾಡಿ ಏನಾದರೂ ಬಯಕೆಗಳಿದ್ದಲ್ಲಿ ಕೇಳಿಕೊಂಡರೆ ಅವು ಅತಿ ಶೀಘ್ರದಲ್ಲೆ ಈಡೇರುತ್ತದೆಂದು ಭಕ್ತರ ನಂಬಿಕೆಯಾಗಿದೆ.

 ಬೇಡಿದ್ದೆಲ್ಲ ಈಡೇರಿಸುವ ಕರುವಾ ಸರೋವರ

ಚಿತ್ರಕೃಪೆ: Sahuajeet

ಆದರೆ ತಿಳಿಯಬೇಕಾದ ಅಂಶವೆಂದರೆ ನೇರವಾಗಿ ಕೊಳದಲ್ಲಿ ಸ್ನಾನ ಮಾಡಲು ಅವಕಾಶವಿಲ್ಲ. ಹಾಗಾಗಿ ಇಲ್ಲಿಗೆ ಭೇಟಿ ನೀಡುವ ಭಕ್ತಾದಿಗಳು, ಈ ಕೆರೆಯು ಮುಂದೆ ಸ್ವಲ್ಪ ಕೆಳ ಪ್ರದೇಶದಲ್ಲಿ ಹರಿದಿದ್ದು ಆ ಸ್ಥಳದಲ್ಲಿ ಸ್ನಾನ ಮಾಡಬಹುದಾಗಿದೆ. ವೈಷ್ಣೊ ದೇವಿಗೆ ಭೇಟಿ ನೀಡುವ ಅನೇಕ ಯಾತ್ರಿಗಳು ಈ ತಾಣಕ್ಕೂ ಭೇಟಿ ನೀಡುತ್ತಾರೆ.

ಸ್ಥಳಪುರಾಣದಂತೆ, ಬಾಬಾ ಧನಸಾರರು ಸಾಕ್ಷಾತ್ ಶೇಷನಾಗ್ ಸರ್ಪದೇವತೆಯ ಮಗನಾಗಿದ್ದಾನೆಂದು ಹೇಳಲಾಗುತ್ತದೆ. ಒಂದೊಮ್ಮೆ ಶಿವನು ಅಮರತ್ವದ ರಹಸ್ಯ ಕುರಿತು ಪಾರ್ವತಿಗೆ ಕೆಲ ವಿಷ್ಯಗಳನ್ನು ಹೇಳಬೇಕಾಗಿತ್ತು. ಅದಕ್ಕೆಂದು ಪಾರ್ವತಿಯಿದ್ದೆಡೆ ಶಿವನು ತೆರಳುತ್ತಿದ್ದಾಗ ಅಮರನಾಥ ಗುಹೆಗೆ ಹೋಗುತ್ತಿದ್ದಾಗ ಶೇಷನಾಗ್ ಎಂಬ ಸ್ಥಳದಲ್ಲಿ ತನ್ನ ಕುತ್ತಿಗೆಗೆ ಭೂಷಿತವಾದ ಸರ್ಪವನ್ನು ಅಲ್ಲಿಯೆ ಬಿಟ್ಟು ತೆರಳಿದ.

 ಬೇಡಿದ್ದೆಲ್ಲ ಈಡೇರಿಸುವ ಕರುವಾ ಸರೋವರ

ಚಿತ್ರಕೃಪೆ: Sahuajeet

ಹೀಗೆ ಅಲ್ಲಿದ್ದ ಶೇಷನಾಗನು ಮನುಷ್ಯ ರೂಪ ತಾಳಿ ವಾಸುದೇವನಾದನು (ಕೃಷ್ಣನಲ್ಲ). ಈ ವಾಸುದೇವನು ನಂತರ ಸಂಸಾರ ಜೀವನ ನಡೆಸಿ ಸಂತಾನಗಳನ್ನು ಪಡೆದನು. ಅವನ ಸಂತಾನಗಳ ಪೈಕಿ ಬಾಬಾ ಧನಸರರು ಒಬ್ಬರು. ಸಂತರಾಗಿದ್ದ ಇವರು ಶಿವನ ಪರಮ ಭಕ್ತರಾಗಿದ್ದರು.

 ಬೇಡಿದ್ದೆಲ್ಲ ಈಡೇರಿಸುವ ಕರುವಾ ಸರೋವರ

ಚಿತ್ರಕೃಪೆ: Sahuajeet

ಹೀಗೊಮ್ಮೆ ಅವರು ಅಲೆಯುತ್ತಿದ್ದಾಗ ಕರುವಾದ ಬಳಿ ಬಂದು ಅಲ್ಲಿ ಒಬ್ಬ ರಾಕ್ಷಸನು ಅಲ್ಲಿದ್ದ ಜನರಿಗೆ ಹಿಂಸೆಗಳನ್ನು ಕೊಡುತ್ತಿದುದನ್ನು ಗಮನಿಸಿ. ಆ ಜನರ ಒಳಿತಿಗಾಗಿ ರಾಕ್ಷಸನನ್ನು ಸಂಹರಿಸಲು ನೆರವಾಗುವಂತೆ ಶಿವನಲ್ಲಿ ಪ್ರಾರ್ಥಿಸಿದರು. ಅದರಂತೆ ಶಿವನು ಪ್ರಸನ್ನನಾಗಿ ಅವರಿಗೆ ರಾಕ್ಷಸನನ್ನು ಸಂಹರಿಸಲು ನೆರವು ಮಾಡಿದನು.

ಶೇಷನಾಗ್ ಸರೋವರ ನೋಡಿದ್ದೀರಾ?

ಹೀಗಾಗಿ ಕ್ರಮೇಣ ಅದು ಧನಸರರ ಕ್ಷೆತ್ರವಾಗಿ ಹಾಗೂ ಅಲ್ಲಿ ಅವರು ತಪಗೈದಿದ್ದರಿಂದ ಕರುವಾ ಕೊಳವು ಪವಿತ್ರಮಯವಾಗಿ ಅಲ್ಲಿನ ಜನರಿಂದ ಆರಾಧಿಸಲ್ಪಡತೊಡಗಿತು. ಇಂದಿಗೂ ಸಾಕಷ್ಟು ಪಾವಿತ್ರ್ಯತೆಯನ್ನು ಉಳಿಸಿಕೊಂಡಿರುವ ಈ ತಾಣಕ್ಕೆ ಸಾಕಷ್ಟು ಜನ ಭಕ್ತಾದಿಗಳು ಭೇಟಿ ನೀಡುತ್ತಲೆ ಇರುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X