Search
  • Follow NativePlanet
Share
» »ಇಲಿಗಳ ದೇವಾಲಯ : ಒಂದು ವಿಸ್ಮಯ

ಇಲಿಗಳ ದೇವಾಲಯ : ಒಂದು ವಿಸ್ಮಯ

By Vijay

ಸಂಸ್ಕೃತಿ ಸಂಪ್ರದಾಯಗಳು ಗಟ್ಟಿಯಾಗಿ ನೆಲೆಯುರಿರುವ ಭಾರತ ದೇಶದಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ದೇವಾಲಯಗಳನ್ನು ಕಾಣಬಹುದು. ಅಷ್ಟೆ ಏಕೆ ಜನಪ್ರಿಯ ಚಿತ್ರ ತಾರೆಯರಿಂದ ಹಿಡಿದು ಬೈಕ್ ಗಳಿಗೂ ಸಮರ್ಪಿತವಾದ ವಿಚಿತ್ರ ರೀತಿಯ ದೇವಾಲಯಗಳನ್ನು ಇಲ್ಲಿ ಕಾಣಬಹುದು. ಇದು ಅವರವರ ಭಕುತಿಗೆ ಬಿಟ್ಟ ವಿಚಾರ. ಆದರೆ ಈ ಲೇಖನದಲ್ಲಿ ಪರಿಚಯ ಮಾಡಿಸಲಾದ ದೇವಾಲಯ ನಿಮಗೆ ಅಚ್ಚರಿ, ಕುತೂಹಲಗಳನ್ನು ಮೂಡಿಸುವುದಂತು ಖಂಡಿತ. ಈ ದೇವಾಲಯದಲ್ಲಿ ಭಕ್ತರಿಗಿಂತಲೂ ಅಧಿಕ ಸಂಖ್ಯೆಯಲ್ಲಿ ಇಲಿಗಳು ನಿರ್ಭಯವಾಗಿ ಎಲ್ಲೆಂದರಲ್ಲಿ ಓಡಾಡುತ್ತಿರುವುದನ್ನು ಕಾಣಬಹುದು.

ಈ ದೇವಸ್ಥಾನದಲ್ಲಿ ಇಲಿಗಳನ್ನು ಪವಿತ್ರವೆಂದು ಭಾವಿಸಲಾಗಿದ್ದು ಅವುಗಳಿಗೆ ಪ್ರತ್ಯೇಕವಾಗಿ ಪ್ರಸಾದ ನೈವೇದ್ಯಗಳನ್ನು ಅರ್ಪಿಸಲಾಗುತ್ತದೆ. ವಿವಿಧ ನಂಬಿಕೆಗಳು ಗಾಢವಾಗಿ ತಳವೂರಿರುವ ನಮ್ಮ ದೇಶದಲ್ಲಿ ಕೋತಿಯನ್ನು ಪ್ರತಿನಿಧಿಸುವ ಆಂಜನೇಯನ ದೇವಸ್ಥಾನವಾಗಲಿ ಅಥವಾ ಸರ್ಪಗಳಿಗೆ ಮೀಸಲಾದ ಸರ್ಪ ದೇವಾಲಯಗಳಾಗಲಿ ಇರುವುದನ್ನು ಸಾಮಾನ್ಯವಾಗಿ ಕಾಣಬಹುದು. ಆದರೆ ವಿಘ್ನೇಶ್ವರನ ವಾಹನವಾದ ಮೂಷಕ ಅಥವಾ ಇಲಿಗಳನ್ನು ಪವಿತ್ರವೆಂದು ಭಾವಿಸಲಾಗುವ ದೇವಾಲಯವಿರುವುದು ವಿರಳದಲ್ಲಿ ವಿರಳವೆಂದೆ ಹೇಳಬಹುದು. ಈ ದೇವಾಲಯವಿರುವುದು ರಾಜಸ್ಥಾನ ರಾಜ್ಯದ ಬಿಕಾನೇರ್ ಪಟ್ಟಣದಿಂದ ಸುಮಾರು 30 ಕಿ.ಮೀ ದೂರವಿರುವ ದೇಶ್ನೋಕ್ ಎಂಬಲ್ಲಿ. ಇದು ಕರ್ಣಿ ಮಾತಾಗೆ ಮೀಸಲಾದ ದೇವಾಲಯವಾಗಿದ್ದು ಇಲಿಗಳ ದೇವಸ್ಥಾನ ಎಂತಲೂ ಹೆಸರುವಾಸಿಯಾಗಿದೆ.

ಪ್ರಸ್ತುತ, 20,000 ಕ್ಕೂ ಅಧಿಕ ಇಲಿಗಳು ಈ ದೇವಸ್ಥಾನದಲ್ಲಿ ನೆಲೆಸಿದ್ದು ಇವುಗಳ ದರುಶನ ಪಡೆಯಲು ದೂರದ ಪಟ್ಟಣಗಳಿಂದಲೂ ಸಹ ಭಕ್ತರು ಇಲ್ಲಿಗೆ ಆಗಮಿಸುತ್ತಿರುತ್ತಾರೆ. ಅಷ್ಟೆ ಏಕೆ, ಜಗತ್ತಿನ ವಿವಿಧೆಡೆಯಿಂದಲೂ ಸಹ ಪ್ರವಾಸಿಗರು ತಮ್ಮ ಕುತೂಹಲವನ್ನು ತಣಿಸಿಕೊಳ್ಳಲು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಇಲ್ಲಿರುವ ಇಲಿಗಳಲ್ಲಿ ಕೇವಲ ಕೆಲವೆ ಕೆಲವು ಶ್ವೇತ ವರ್ಣದ ಇಲಿಗಳಿದ್ದು ಅವುಗಳನ್ನು ಅತ್ಯಂತ ಪವಿತ್ರವೆಂದು ಭಾವಿಸಲಾಗುತ್ತದೆ. ಏನಾದರೂ ಇವುಗಳ ದರುಶನವಾದರೆ ಮಾತೆಯ ನೇರ ಕೃಪಾದೃಷ್ಟಿಯು ನಿಮ್ಮೆ ಮೇಲಿದೆ ಎಂಬುದು ಇಲ್ಲಿನ ಜನರ ನಂಬಿಕೆ. ಸ್ಥಳಿಯವಾಗಿ ಈ ಇಲಿಗಳನ್ನು ಕಬ್ಬಾಗಳೆಂದು ಕರೆಯಲಾಗುತ್ತದೆ.

ಕಿರು ಇತಿಹಾಸ:

ಕರಣಿ ಮಾತಾ ಚರಣ್ ಜಾತಿಯಲ್ಲಿ ಜನಿಸಿದ ಒಬ್ಬ ಹಿಂದು ತಪಸ್ವಿಣಿಯಾಗಿದ್ದು ದುರ್ಗಾ ಮಾತೆಯ ಅವತಾರವೆಂದು ಆಕೆಯ ಭಕ್ತ ಜನರ ಅಚಲವಾದ ನಂಬಿಕೆ. ಜೋಧಪುರ್ ಹಾಗು ಬಿಕಾನೇರ್ ರಾಜವಂಶಸ್ಥರ ಅಧಿಕೃತ ದೇವತೆಯಾಗಿರುವ ಕರಣಿ ಮಾತಾ ಸುಮಾರು 151 ವರ್ಷಗಳ ಕಾಲ ಜೀವಿಸಿದ್ದಳೆಂದು ಹೇಳಲಾಗುತ್ತದೆ. ಸ್ಥಳ ಪುರಾಣದ ಪ್ರಕಾರ, ಕಿಪೋಜಿ ಚರಣ್ ಎಂಬುವನ ಪತ್ನಿಯಾಗಿದ್ದ ಕರಣಿ ಮಾತೆಯು ಸಮಯ ಸರಿದಂತೆ ಸಂಸಾರ ಜೀವನದಲ್ಲಿ ನಿರಾಸಕ್ತಿ ಹೊಂದಿ ಆದರೂ ಪತಿಯ ಸಂಸಾರ ಜೀವನಕ್ಕೆ ಬಾಧೆ ಬರದಂತೆ ತನ್ನ ತಂಗಿಯನ್ನೆ ಪತಿಯೊಂದಿಗೆ ವಿವಾಹ ಮಾಡಿ ದೇವರ ಧ್ಯಾನದಲ್ಲೆ ತನ್ನ ಜೀವನವನ್ನು ಕಳೆದ ಸಾಧ್ವಿ.

ಪ್ರಸ್ತುತ ಕರಣಿ ಮಾತಾಗೆ ಸಮರ್ಪಿತವಾದ ಎರಡು ದೇವಾಲಯಗಳಿದ್ದು ಒಂದು ದೇಶ್ನೋಕ್ ನಲ್ಲಿದ್ದು ಇನ್ನೊಂದು ಉದೈಪುರ್ ನ ಮಚ್ಲಾ ಬೆಟ್ಟದಲ್ಲಿರುವ ಶ್ರೀ ಮನ್ಷಪೂರ್ಣ ಕರಣಿ ಮಾತಾ ದೇವಾಲಯ.

ಕರಣಿ ಮಾತಾ ದೇವಸ್ಥಾನ:

ಕರಣಿ ಮಾತಾ ದೇವಸ್ಥಾನ:

ಗುಂಪು ಗುಂಪಾಗಿ ನಿರ್ಭಯದಿಂದ ನೈವೇದ್ಯ ಸೇವಿಸುತ್ತಿರುವ ಇಲಿಗಳು.

ಚಿತ್ರಕೃಪೆ: Ingrid Truemper

ಕರಣಿ ಮಾತಾ ದೇವಸ್ಥಾನ:

ಕರಣಿ ಮಾತಾ ದೇವಸ್ಥಾನ:

ಯಾರ ಭೀತಿಯು ಇಲ್ಲದೆ ತಿನ್ನುವುದರಲ್ಲೆ ಮಗ್ನವಾದ ಇಲಿಗಳು.

ಚಿತ್ರಕೃಪೆ: Schwiki

ಕರಣಿ ಮಾತಾ ದೇವಸ್ಥಾನ:

ಕರಣಿ ಮಾತಾ ದೇವಸ್ಥಾನ:

ದೇವಾಲಯದ ಪ್ರವೇಶ ಸ್ಥಳ.

ಚಿತ್ರಕೃಪೆ: dalbera

ಕರಣಿ ಮಾತಾ ದೇವಸ್ಥಾನ:

ಕರಣಿ ಮಾತಾ ದೇವಸ್ಥಾನ:

ದೇವಸ್ಥಾನದ ಗರ್ಭಗೃಹದಲ್ಲೆ ಭಕ್ತರ ನಡುವೆ ಸುಗಮವಾಗಿ ಓಡಾಟ.

ಕರಣಿ ಮಾತಾ ದೇವಸ್ಥಾನ:

ಕರಣಿ ಮಾತಾ ದೇವಸ್ಥಾನ:

ದೇವಸ್ಥಾನದ ಬಾಗಿಲುಗಳ ಮೇಲೆ ಕೆತ್ತಲ್ಪಟ್ಟ ಇಲಿಗಳ ಆಕಾರ.

ಚಿತ್ರಕೃಪೆ: dalbera

ಕರಣಿ ಮಾತಾ ದೇವಸ್ಥಾನ:

ಕರಣಿ ಮಾತಾ ದೇವಸ್ಥಾನ:

ಎಲ್ಲಾದರೇನು...ನಿದ್ದೆ ಮಾಡಿದರೆ ಸಾಕಪ್ಪಾ...ಹೇಗೂ ನನ್ನನ್ನು ಹಿಡಿಯುವರು, ಹೊಡೆಯುವರು ಯಾರಿಲ್ಲಿ

ಚಿತ್ರಕೃಪೆ: Fulvio's photos

ಕರಣಿ ಮಾತಾ ದೇವಸ್ಥಾನ:

ಕರಣಿ ಮಾತಾ ದೇವಸ್ಥಾನ:

ಯಾರ ಭೀತಿಯು ಇಲ್ಲದ ಸ್ವಚ್ಛಂದವಾಗಿ ತಮಗೆ ಬೇಕಾದಲ್ಲಿ ಹಾಯಾಗಿ ಸಂಚರಿಸುವ ಇಲಿಗಳು.

ಚಿತ್ರಕೃಪೆ: koen_photos

ಕರಣಿ ಮಾತಾ ದೇವಸ್ಥಾನ:

ಕರಣಿ ಮಾತಾ ದೇವಸ್ಥಾನ:

ಯಾರ ಭೀತಿಯು ಇಲ್ಲದ ಸ್ವಚ್ಛಂದವಾಗಿ ತಮಗೆ ಬೇಕಾದಲ್ಲಿ ಹಾಯಾಗಿ ಸಂಚರಿಸುವ ಇಲಿಗಳು.

ಚಿತ್ರಕೃಪೆ: oggiscienza

ಕರಣಿ ಮಾತಾ ದೇವಸ್ಥಾನ:

ಕರಣಿ ಮಾತಾ ದೇವಸ್ಥಾನ:

ಯಾರ ಭೀತಿಯು ಇಲ್ಲದ ಸ್ವಚ್ಛಂದವಾಗಿ ತಮಗೆ ಬೇಕಾದಲ್ಲಿ ಹಾಯಾಗಿ ಸಂಚರಿಸುವ ಇಲಿಗಳು.

ಚಿತ್ರಕೃಪೆ: oggiscienza

ಕರಣಿ ಮಾತಾ ದೇವಸ್ಥಾನ:

ಕರಣಿ ಮಾತಾ ದೇವಸ್ಥಾನ:

ಯಾರ ಭೀತಿಯು ಇಲ್ಲದ ಸ್ವಚ್ಛಂದವಾಗಿ ತಮಗೆ ಬೇಕಾದಲ್ಲಿ ಹಾಯಾಗಿ ಸಂಚರಿಸುವ ಇಲಿಗಳು.

ಚಿತ್ರಕೃಪೆ: Arian Zwegers

ಕರಣಿ ಮಾತಾ ದೇವಸ್ಥಾನ:

ಕರಣಿ ಮಾತಾ ದೇವಸ್ಥಾನ:

ಯಾರ ಭೀತಿಯು ಇಲ್ಲದ ಸ್ವಚ್ಛಂದವಾಗಿ ತಮಗೆ ಬೇಕಾದಲ್ಲಿ ಹಾಯಾಗಿ ಸಂಚರಿಸುವ ಇಲಿಗಳು.

ಚಿತ್ರಕೃಪೆ: Shakti

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X