Search
  • Follow NativePlanet
Share
» »ಕಾರಣೀ ಮಠದಲ್ಲಿ ಮೂಶಿಕವೇ ಕಾಳಿ ದೇವತೆಯಂತೆ

ಕಾರಣೀ ಮಠದಲ್ಲಿ ಮೂಶಿಕವೇ ಕಾಳಿ ದೇವತೆಯಂತೆ

ಇಲಿಗಳನ್ನು ಕಂಡರೆನೇ ಓಡಿಹೋಗುತ್ತೇವೆ. ಅವೆನೂ ಮಾಡದೇ ಹೊದರು ಕೂಡ ಅವುಗಳನ್ನು ಕಂಡರೆ ಅದೇನೂ ಭಯ. ನಮ್ಮ ಮನೆಗೆ ಇನ್ನೊಂದು ಅತಿಥಿ ಬಂದಿದ್ದಾರಲ್ಲ ಎಂದು ಅಗಲು ರಾತ್ರಿ ಎಲ್ಲಾ ಯೋಚನೆ ಮಾಡಿ ಹೇಗಾದರೂ ಮಾಡಿ ಆ ಅತಿಥಿಯನ್ನು ಓಡಿಸಬೇಕಲ್ಲವೇ ಎಂದು ರಣ

ಇಲಿಗಳನ್ನು ಕಂಡರೆನೇ ಓಡಿಹೋಗುತ್ತೇವೆ. ಅವೆನೂ ಮಾಡದೇ ಹೊದರು ಕೂಡ ಅವುಗಳನ್ನು ಕಂಡರೆ ಅದೇನೂ ಭಯ. ನಮ್ಮ ಮನೆಗೆ ಇನ್ನೊಂದು ಅತಿಥಿ ಬಂದಿದ್ದಾರಲ್ಲ ಎಂದು ಅಗಲು ರಾತ್ರಿ ಎಲ್ಲಾ ಯೋಚನೆ ಮಾಡಿ ಹೇಗಾದರೂ ಮಾಡಿ ಆ ಅತಿಥಿಯನ್ನು ಓಡಿಸಬೇಕಲ್ಲವೇ ಎಂದು ರಣತಂತ್ರ ರೂಪಿಸುತ್ತಿರುತ್ತೇವೆ.

ಎಷ್ಟೇ ಕಷ್ಟವಾದರು ಸರಿ ಯುದ್ಧ ಮಾಡಿಯಾದರೂ ಕೂಡ ಇಲಿಗಳನ್ನು ಹೋರಗೆ ಓಡಿಸುತ್ತೇವೆ ಇಲ್ಲ ಕೊಲ್ಲುತ್ತೇವೆ. ಹೀಗಿರುವಾಗ ಸಾವಿರಾರು ಸಂಖ್ಯೆಯಲ್ಲಿ ಇಲಿಗಳಿದ್ದರೇ?.... ಸಾಮಾನ್ಯವಾಗಿ ಅವುಗಳ ಸುತ್ತ ಮುತ್ತ ಪ್ರದೇಶಗಳಿಗೆ ಕೂಡ ಹೋಗುವುದಿಲ್ಲ ಅಲ್ಲವೇ?

ಹಾಗಾದರೆ ಕೇಳಿ, ರಾಜಸ್ಥಾನದಲ್ಲಿ ದೇಶನೂಕ್ ಎಂಬಲ್ಲಿ ಒಂದು ಹಿಂದೂ ದೇವಾಲಯವಿದೆ. ಅಲ್ಲಿ ಕಾರಣೀ ಮಠ ಒಂದರಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮೂಶಿಕಗಳಿವೆ. ಆಶ್ಚರ್ಯ ಏನಪ್ಪ ಎಂದರೆ ಆ ಮೂಶಿಕಗಳನ್ನು ಕಾಳಿ ಮಾತಾ ಸ್ವರೂಪಿ ಎಂದು ಕರೆಯುತ್ತಾರೆ ಇಲ್ಲಿನ ಭಕ್ತರು.

ಪ್ರಸ್ತುತ ಲೇಖನದಲ್ಲಿ ಕಾರಣೀಮಠದ ದೇವಾಲಯದಲ್ಲಿನ ಮೂಶಿಕಗಳ ಆರಾಧನೆ ಯಾಕೆ ಮಾಡುತ್ತಿದ್ದಾರೆ ಎಂಬುದನ್ನು ತಿಳಿಯೋಣ.

ಎಲ್ಲಿದೆ?

ಎಲ್ಲಿದೆ?

ಈ ಆಶ್ಚರ್ಯಕರವಾದ ದೇವಾಲಯವಿರುವುದು ರಾಜಸ್ಥಾನ ರಾಜ್ಯದ ದೇಶನೂಕ್‍ನಲ್ಲಿ. ಈ ದೇವಾಲಯವನ್ನು ಕಾರಣೀಮಠ ಎಂದು ಕರೆಯುತ್ತಾರೆ. ಇದೊಂದು ಹಿಂದೂ ದೇವಾಲಯವಾಗಿದ್ದು ಹಲವಾರು ಭಕ್ತರು ಈ ದೇವಾಲಯದ ಕಾಳಿಯನ್ನು ಹಾಗೂ ಮೂಶಿಕವನ್ನು ಆರಾಧಿಸಲು ಬರುತ್ತಾರೆ.


PC:Arian Zwegers

ಎಷ್ಟು ಮೂಶಿಕಗಳಿವೆ?

ಎಷ್ಟು ಮೂಶಿಕಗಳಿವೆ?

ಈ ಕಾರಣೀ ಮಠ ದೇವಾಲಯದಲ್ಲಿ ಸುಮಾರು 25,000 ಸಾವಿರ ಮೂಶಿಕಗಳು ಇವೆ ಎಂತೆ. ಈ ಮೂಶಿಕಗಳನ್ನು ಅತ್ಯಂತ ಪವಿತ್ರವಾದುದು ಎಂದು ಭಾವಿಸಲಾಗುತ್ತದೆ.


PC:Jean-Pierre Dalbéra


ಹಾನಿ

ಹಾನಿ

ಯಾವುದೇ ಕಾರಣದಿಂದಲೂ ಬಂದ ಭಕ್ತರು ಈ ಮೂಶಿಕವನ್ನು ದೈಹಿಕವಾಗಿ ಹಿಂಸೆ ನೀಡುವಂತಿಲ್ಲ. ಈ ಪವಿತ್ರವಾದ ಮೂಶಿಕವನ್ನು ಕಬ್ಬಾಸ್ ಎಂದು ಕರೆಯಲಾಗುತ್ತದೆ.


PC:Rakesh bhat29

ಕಾಳಿ

ಕಾಳಿ

ಪಾರ್ವತಿ ಸ್ವರೂಪಿಯಾದ ಕಾಳಿಯೇ ಈ ಮೂಶಿಕಗಳು ಎಂದು ಭಕ್ತರು ಪೂಜಿಸುತ್ತಾರೆ. ಈ ದೇವಾಲಯವನ್ನು ಸಾಮಾನ್ಯವಾಗಿ "ಟೆಂಪಲ್ ಆಫ್ ರ್ಯಾಟ್ಸ್" ಎಂದೇ ಪ್ರಖ್ಯಾತಿ ಪಡೆದಿದೆ.

PC:Eric Laurent


ಭಕ್ತರು

ಭಕ್ತರು

ಈ ಕಾರಣೀಮಠ ದೇವಾಲಯವು ಅತ್ಯಂತ ಪ್ರಸಿದ್ಧಿಯನ್ನು ಪಡೆದಿರುವ ಮಂದಿರವಾಗಿದ್ದು, ದೇಶದ ಮೂಲೆ ಮೂಲೆಗಳಿಂದ ಹಾಗೂ ವಿದೇಶಗಳಿಂದ ಈ ದೇವಾಲಯದ ಮೂಶಿಕವನ್ನು ಆರಾಧಿಸಲು ಮತ್ತು ದರ್ಶನ ಭಾಗ್ಯ ಪಡೆಯಲು ಭೇಟಿ ನೀಡುತ್ತಿರುತ್ತಾರೆ.

PC:Eric Laurent

ಲಕ್ಷ್ಮಣ

ಲಕ್ಷ್ಮಣ

ಪೂರಣಗಳ ಪ್ರಕಾರ ಲಕ್ಷ್ಮಣ ಎಂಬುವವನು ಕಪಿಲ ಸರೋವರದಲ್ಲಿ ಮುಳುಗಿ ದೇವರಲ್ಲಿ ಪ್ರಾರ್ಥಿಸಿದಾಗ ಕಾರಣೀ ಮಾತಾ ಯಮನಿಗೆ ಭೇಡಿಕೊಂಡಳು.

ಕಾರಣೀಮಾತಾ

ಕಾರಣೀಮಾತಾ

ಕಾರಣೀಮಾತಾ, ಸಾವಿನ ದೇವನಾದ ಯಮಧರ್ಮರಾಯನಿಗೆ ಅತನನ್ನು ಮೃತ್ಯುವಿನಿಂದ ಪಾರುಮಾಡು ಎಂದು ಕೇಳಿಕೊಂಡಗಾ ಮೊದಲಿಗೆ ನಿರಾಕರಿಸಿದ ಯಮ ನಂತರ ಒಂದು ವರವನ್ನು ಪ್ರಸಾದಿಸಿದನು.

ಮೂಶಿಕ

ಮೂಶಿಕ

ಯಮ ಧರ್ಮರಾಜ ನೀಡಿದ ವರವೆನೆಂದರೆ ಆದು ನಿಮ್ಮ ಇಬ್ಬರಿಗೆ ಹುಟ್ಟುವ ಎಲ್ಲಾ ಗಂಡು ಮಕ್ಕಳು ಇಲಿಗಳಾಗಿ ಮರುಜನ್ಮ ಪಡೆಯುತ್ತಾರೆ ಎಂದು ವರವನ್ನು ಪ್ರಸಾದಿಸಿದ.

ಜಾನಪದ ಕಥೆ

ಜಾನಪದ ಕಥೆ

ಸ್ಥಳೀಯ ಜಾನಪದ ಭಕ್ತರ ಕಥೆಗಳ ಪ್ರಕಾರ, 20,000 ಶಕ್ತಿಶಾಲಿ ಸೈನಿಕರು ಯುದ್ಧದ ಸಮಯದಲ್ಲಿ ದೇಶನುಕ್‍ನ ಬಳಿ ಬಂದರು. ಆಗ ಕಾರಣೀಮಾತಾ ಅವರನ್ನು ಸಾವಿನ ದವಡೆಯಿಂದ ಪಾರು ಮಾಡಿದಳು.

ಸೈನಿಕರು

ಸೈನಿಕರು

ಯುದ್ಧ ಭೂಮಿಯಿಂದ ಓಡಿಬಂದೆವು ಎಂದು ಅವಮಾನ ತಾಳಲಾರದೇ ಆತ್ಮಹತ್ಯೆ ಮಾಡಿಕೊಳ್ಳುವಾಗ ಕಾರಣೀಮಾತಾ ಅವರ ಮೇಲೆ ಕರುಣೆ ತೊರಿ. ಸಾವಿನ ದವಡೆಯಿಂದ ಪಾರು ಮಾಡಿ ಅವರನ್ನು ಮೂಶಿಕಗಳಾಗುವಂತೆ ವರ ಪ್ರಸಾದಿಸಿಳು ಎಂಬುದು ಇನ್ನೊಂದು ದಂತಕಥೆ.

ದೇವಾಲಯ

ದೇವಾಲಯ

ಈ 20,000 ಸಾವಿರ ಮೂಶಿಕಗಳಿಗೆ ಇರಲು ಪ್ರತ್ಯೇಕವಾದ ದೇವಾಲಯವನ್ನು ನಿರ್ಮಿಸಿ ಅಲ್ಲಿ ವಾಸಿಸಲು ಕಾರಣೀ ಮಾತಾ ಅವಕಾಶ ನೀಡಿದಳು ಎಂದು ಕೆಲವರು ಈ ದೇವಾಲಯದ ಬಗ್ಗೆ ತಿಳಿಸುತ್ತಾರೆ.

ಯಾವಾಗ ನಿರ್ಮಿಸಿದರು?

ಯಾವಾಗ ನಿರ್ಮಿಸಿದರು?

ಬಿಕಾನೆರ್ನ ಮಹಾರಾಜ ಗಂಗಾ ಸಿಂಗರಿಂದ 20 ನೇ ಶತಮಾನದ ಆರಂಭದಲ್ಲಿ ಮೊಗಲ್ ಶೈಲಿಯಲ್ಲಿ ಈ ಕಾರಣೀ ಮಠವನ್ನು ನಿರ್ಮಾಣ ಮಾಡಿದನಂತೆ.

ಬಿಳಿ ಮೂಶಿಕ

ಬಿಳಿ ಮೂಶಿಕ

ಆಶ್ಚರ್ಯ ಏನಪ್ಪ ಎಂದರೆ ಈ ಕಾರಣೀ ಮಠ ದೇವಾಲಯದಲ್ಲಿ 2,500 ಮೂಶಿಕಗಳಲ್ಲಿ 4 ಮೂಶಿಕಗಳು ಬಿಳಿ ಮೂಶಿಕಗಳಿವೆ ಎಂತೆ.

ಸಂತಾನ ಭಾಗ್ಯ

ಸಂತಾನ ಭಾಗ್ಯ

ಈ ಬಿಳಿ ಮೂಶಿಕಗಳನ್ನು ದರ್ಶನ ಭಾಗ್ಯ ಪಡೆದರೆ ಸಂತಾನ ಭಾಗ್ಯ ದೊರೆಯುತ್ತದೆ ಎಂದು ಭಕ್ತರು ನಂಬುತ್ತಾರೆ. ಹಾಗಾಗಿ ಭಕ್ತರು ತಂಡೋಪ ತಂಡವಾಗಿ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಹಬ್ಬ ಹರಿದಿನ

ಹಬ್ಬ ಹರಿದಿನ

ಆಶ್ಚರ್ಯವೆನೆಂದರೆ ಆ ಬಿಳಿ ಇಲಿಗಳು ಹಬ್ಬ ಹರಿದಿನಗಳ ದಿನ ಮಾತ್ರ ಕಣ್ಣೀಗೆ ಕಾಣಿಸುತ್ತವೆ ಎಂತೆ.

ಕಾರಣೀ ಮಾತಾ ಮಕ್ಕಳು

ಕಾರಣೀ ಮಾತಾ ಮಕ್ಕಳು

ಈ ಬಿಳಿ ಮೂಶಿಕಗಳು ಯಾರೆಂದರೆ ಅದು ಸಾಕ್ಷಾತ್ ಕಾರಣೀ ಮಾತಾಳ 4 ಪುತ್ರರು ಎಂದು ನಂಬಲಾಗಿದೆ. ಈ ಮೂಶಿಕವನ್ನು ಕಾಣಲು ಪ್ರತ್ಯೇಕವಾಗಿ ಭಕ್ತರು ಭೇಟಿ ನೀಡುತ್ತಾರೆ.

ಪ್ರಸಾದ

ಪ್ರಸಾದ

ಈ ಮೂಶಿಕಗಳಿಗೆ ಪ್ರಸಾದವಾಗಿ ಹಲವಾರು ಬಗೆ ಬಗೆಯ ಸಿಹಿ ತಿಂಡಿಗಳನ್ನು ಬಂದ ಭಕ್ತರು ನೀಡುತ್ತಾರೆ.

ಉತ್ಸವ

ಉತ್ಸವ

ಈ ಕಾರಣೀ ಮಠದಲ್ಲಿ ಚೈತ್ರ ಶುಕ್ಲದಂದು ಹಾಗೂ ನವರಾತ್ರಿಯಂದು ಉತ್ಸವ ನಡೆಯುತ್ತವೆ. ಮಾರ್ಚ್ ಮತ್ತು ಏಪ್ರಿಲ್‍ನಲ್ಲಿ ಮೊದಲ ದೊಡ್ಡ ಜಾತ್ರೆ ನಡೆಯುತ್ತದೆ. ನವರಾತ್ರಿಯ ಸಮಯ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ಎರಡನೇ ಜಾತ್ರೆ ನಡೆಯುತ್ತದೆ. ಈ ಜಾತ್ರೆಗೆ ಸಾವಿರಾರು ಭಕ್ತರು ಪಾದಯಾತ್ರೆ ನಡೆಸುತ್ತಾರೆ.

ತಪುಲುಪುವ ಬಗೆ?

ತಪುಲುಪುವ ಬಗೆ?

ವಿಮಾನ ಮಾರ್ಗದ ಮೂಲಕ: ಮಾಹಿಮಾನ್ವಿತ ಕಾರಣೀ ಮಠಕ್ಕೆ ತಲುಪಲು ಸಮೀಪದ ವಿಮಾನ ಮಾರ್ಗ ಎಂದರೆ ಅದು ಜೋಧಪುರ್ ಏರ್‍ರ್ಪೋಟ್, ಇಲ್ಲಿಂದ ದೇಶನುಕ್‍ಗೆ ಸುಮಾರು 143 ಕಿ,ಮೀ ದೂರದಲ್ಲಿ ಕಾರಣೀ ಮಠವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X