Search
  • Follow NativePlanet
Share
» »ಕೆ.ಕೆ ಎಕ್ಸ್ ಪ್ರೆಸ್ ಜೊತೆ ಬೆಂಗಳೂರಿನಿಂದ ದಿಲ್ಲಿಯವರೆಗೆ

ಕೆ.ಕೆ ಎಕ್ಸ್ ಪ್ರೆಸ್ ಜೊತೆ ಬೆಂಗಳೂರಿನಿಂದ ದಿಲ್ಲಿಯವರೆಗೆ

By Vijay

ಎರಡು ರಾಜಧಾನಿಗಳ ಮಧ್ಯೆ ಪ್ರತಿ ದಿನ ವೇಗವಾಗಿ ಸಂಚರಿಸುವ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಇದಾಗಿದೆ. ಪ್ರತಿ ನಿತ್ಯ ಬೆಂಗಳೂರಿನಿಂದ ಹೊರಟು ದೆಹಲಿಗೆ ತಲುಪಿ ಮರಳಿ ಅಲ್ಲಿಂದ ಸಂಚಾರ ಪ್ರಾರಂಭಿಸಿ ಬೆಂಗಳೂರಿಗೆ ಬಂದು ಕೊನೆಗೊಳ್ಳುತ್ತದೆ. ಹೀಗೆ ನಿತ್ಯ ನಿರಂತರ ಇದರ ಪ್ರಯಾಣ ಸಾಗುತ್ತಲೆ ಇರುತ್ತದೆ. ಈ ರೈಲು ತನ್ನ ಪಥದಲ್ಲಿ ಕೆಲವು ರಾಜ್ಯಗಳ ಹಲವು ಪ್ರವಾಸಿ ಆಕರ್ಷಣೆಗಳ ಮೂಲಕ ಸಾಗುವುದು ಕೂಡ ವಿಶೇಷವೆ. ಈ ರೈಲು ತನ್ನ ಸಂಚರಿಸುವ ಪಥದಲ್ಲಿ ಆಯಾ ರಾಜ್ಯಗಳಿಗೆ ಭೇಟಿ ನೀಡುತ್ತಾ ಆ ಪ್ರದೇಶಗಳ ಭಿನ್ನ ಭಿನ್ನವಾದ ತಿಂಡಿ ತೀರ್ಥಗಳನ್ನು ಮನಸೊ ಇಚ್ಛೆ ಸವಿಯಲು ಅವಕಾಶವನ್ನು ಒದಗಿಸುತ್ತದೆ. ಸರಾಸರಿ ವೇಗ 62.7 ಕಿ.ಮೀ ಪ್ರತಿ ಘಂಟೆ ಹಾಗೂ ಗರಿಷ್ಠ ವೇಗ 88.2 ಕಿ.ಮೀ ಪ್ರತಿ ಘಂಟೆಯೊಂದಿಗೆ ಸಂಚರಿಸುವ ಈ ರೈಲು ಒಟ್ಟಾರೆಯಾಗಿ 40 ಘಂಟೆ 25 ನಿಮಿಷಗಳಲ್ಲಿ ದೇಶದ ರಾಜಧಾನಿ ದೆಹಲಿಯನ್ನು ತಲುಪುತ್ತದೆ.

ಈ ರೈಲಿನ ಇತಿಹಾಸವು ಕುತೂಹಲಕಾರಿಯಾಗಿದೆ. ಪ್ರಾರಂಭದಲ್ಲಿ ವಾರಕ್ಕೆ ಎರಡು ಬಾರಿ ಮಾತ್ರ ಸಂಚರಿಸುವಂತೆ ಈ ರೈಲನ್ನು ಪರಿಚಯಿಸಲಾಯಿತು. ನಂತರ ಪ್ರಯಾಣವನ್ನು ಮೂರು ಬಾರಿ ಮಾಡಲಾಯಿತಲ್ಲದೆ ಪ್ರಸ್ತುತ ಕೇರಳ ಎಕ್ಸ್ ಪ್ರೆಸ್ ಜೊತೆ ವಿಲೀನಗೊಳಿಸಲಾಯಿತು. ಕೊನೆಯದಾಗಿ ಮತ್ತೆ ಪ್ರತ್ಯೇಕ ಮಾಡಿ ಸದ್ಯದ ಸಂಚಾರ ಮಾರ್ಗದಲ್ಲಿ ವರ್ಗಾಯಿಸಲಾಯಿತು. ಈ ರೈಲಿನ ಪ್ರಾರಂಭ ಮಾರ್ಗದಿಂದ ಅಂತ್ಯದ ಸ್ಥಳದವರೆಗೆ ಯಾವೆಲ್ಲ ಸ್ಥಳಗಳು ನಿಮ್ಮನ್ನು ಸ್ವಾಗತಿಸುತ್ತವೆ ಎಂಬ ತಿಳಿಯುವ ಬಯಕೆ ನಿಮಗಿದೆಯೆ? ಹಾಗಾದರೆ ಈ ಲೇಖನವನ್ನು ಓದಿ.

ಬೆಂಗಳೂರಿ ಸಿಟಿ ಜಂಕ್ಷನ್:

ಬೆಂಗಳೂರಿ ಸಿಟಿ ಜಂಕ್ಷನ್:

ಬೆಂಗಳೂರು ಸಿಟಿ ಜಂಕ್ಷನ್ ಈ ರೈಲಿನ ಪ್ರಾರಂಭಿಕ ಸ್ಥಳ.

ಚಿತ್ರಕೃಪೆ: Sherwin1995

ಬೆಂಗಳೂರು ಕ್ಯಾಂಟೋನ್ಮೆಂಟ್:

ಬೆಂಗಳೂರು ಕ್ಯಾಂಟೋನ್ಮೆಂಟ್:

ಸಿಟಿ ಜಂಕ್ಷನ್ ನಿಂದ ಹೊರಟ ತಕ್ಷಣ ಮೊದಲಿಗೆ ಎದುರಾಗುವ ನಿಲುಗಡೆ ಬೆಂಗಳೂರು ಕ್ಯಾಂಟೋನ್ಮೆಂಟ್. ಇಲ್ಲಿನ ಮುಖ್ಯ ಆಕರ್ಷಣೆ ಪರೇಡ್ ಗ್ರೌಂಡ್ ಅಥವಾ ಪಥ ಸಂಚಲನದ ಮೈದಾನ.

ಚಿತ್ರಕೃಪೆ: Prateek Karandikar

ಯಲಹಂಕ ಜಂಕ್ಷನ್:

ಯಲಹಂಕ ಜಂಕ್ಷನ್:

ನಂತರ ಸಿಗುವ ನಿಲುಗಡೆ ಯಲಹಂಕ. ಬೆಂಗಳೂರು ಶಿಲ್ಪಿ ಕೆಂಪೇಗೌಡರು ಬೆಂಗಳೂರನ್ನು ಮೊದಲು ಸ್ಥಾಪಿಸಿದಾಗ ಯಲಹಂಕವೆ ಇದರ ರಾಜಧಾನಿಯಾಗಿತ್ತು.

ಚಿತ್ರಕೃಪೆ: Geetworld

ಹಿಂದೂಪುರ:

ಹಿಂದೂಪುರ:

ಹೀಗೆ ಯಲಹಂಕದಿಂದ ಕರ್ನಾಟಕ ರಾಜ್ಯ ಗಡಿಯನ್ನು ದಾಟಿ ನಂತರದ ನಿಲುಗಡೆಯಾದ ಆಂಧ್ರದ ಹಿಂದೂಪುರವನ್ನು ತಲುಪುತ್ತದೆ. ಹಿಂದೂಪುರದಿಂದ ಕೇವಲ 15 ಕಿ.ಮೀ ದೂರದಲ್ಲಿರುವ ಲೇಪಾಕ್ಷಿಯು ನಾಗಲಿಂಗ ಹಾಗೂ ಬೃಹತ್ ನಂದಿ ವಿಗ್ರಹದಿಂದಾಗಿ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Sriharsha95

ಸಾಯಿ ಪ್ರಶಾಂತಿ ನಿಲಯಂ:

ಸಾಯಿ ಪ್ರಶಾಂತಿ ನಿಲಯಂ:

ಶ್ರೀ ಸತ್ಯ ಸಾಯಿ ಬಾಬಾ ಅವರು ನೆಲೆಸಿರುವ ಪುಟ್ಟಪರ್ತಿಯ ಪ್ರಶಾಂತಿ ನಿಲಯಂ ನಿಲ್ದಾಣವು ಹಿಂದೂಪುರದ ನಂತರ ಬರುವ ನಿಲುಗಡೆಯಾಗಿದೆ. ನಿತ್ಯವೂ ನೂರಾರು ಸಾಯಿ ಭಕ್ತರು ಈ ಸ್ಥಳಕ್ಕೆ ಭೇಟಿ ನೀಡುತ್ತಿರುತ್ತಾರೆ. ಒಂದೊಮ್ಮೆ ಕಡು ಬಡವಾವಸ್ಥೆಯಲ್ಲಿದ್ದ ಈ ಹಳ್ಳಿಯು ಶ್ರೀ ಸತ್ಯ ಸಾಯಿ ಬಾಬಾರ ಅಪ್ರತೀಮೆ ಸಮಾಜಮುಖಿ ಸೇವೆಯಿಂದಾಗಿ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಅಭಿವೃದ್ಧಿ ಹೊಂದಿದ ತಾಣವಾಗಿದೆ.

ಚಿತ್ರಕೃಪೆ: j929

ಧರ್ಮಾವರಂ ಜಂಕ್ಷನ್:

ಧರ್ಮಾವರಂ ಜಂಕ್ಷನ್:

ನಂತರ ಬರುವ ನಿಲುಗಡೆ ಅನಂತಪುರ ಜಿಲ್ಲೆಯ ಎರಡನೇಯ ಅತಿ ದೊಡ್ಡ ಪಟ್ಟಣ ಧರ್ಮಾವರಂ. ಈ ಪ್ರದೇಶವು ತನ್ನಲ್ಲಿ ಉತ್ಪಾದಿಸಲಾಗುವ ರೇಷ್ಮೆ ಸೀರೆಗಳಿಗಾಗಿ ಹೆಚ್ಚು ಪ್ರಖ್ಯಾತಿ ಪಡೆದಿದೆ. ಇಲ್ಲಿನ ನೆಸೆಪೆಟಾ ಎಂಬಲ್ಲಿ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿರುವ ರೇಷ್ಮೆಯ ಅಂಗಡಿ ಮುಗ್ಗಟ್ಟುಗಳನ್ನು ಕಾಣಬಹುದು.

ಚಿತ್ರಕೃಪೆ: Elkagye

ಅನಂತಪುರ:

ಅನಂತಪುರ:

ನಂತರ ಸಿಗುವ ತಾಣ ಅನಂತಪುರ ನಗರ. ಈ ಪಟ್ಟಣದ ಸುತ್ತ ಮುತ್ತಲು ಸಾಕಷ್ಟು ಸಂಖ್ಯೆಯಲ್ಲಿ ಗುರುತರವಾದ ಪ್ರವಾಸಿ ತಾಣಗಳನ್ನು ಕಾಣಬಹುದು.

ಚಿತ್ರಕೃಪೆ: Lakshminarasimha

ಗೂಟಿ:

ಗೂಟಿ:

ಅನಂತಪುರದ ನಂತರದ ನಿಲುಗಡೆ ಗೂಟಿ ಪಟ್ಟಣ. ಹಿಂದೆ ಗೌತಮಿಪುರಿ ಎಂದು ಕರೆಯಲ್ಪಡುತ್ತಿದ್ದ ಈ ಪ್ರದೇಶವು ಸುಮಾರು ಏಳನೇಯ ಶತಮಾನದ್ದಾಗಿದ್ದು ಇಲ್ಲಿನ ಗೂಟಿ ಕೋಟೆಯಿಂದಾಗಿ ಪ್ರಸಿದ್ಧವಾಗಿದೆ.

ಚಿತ್ರಕೃಪೆ: Imrx100

ಗುಂತಕಲ್:

ಗುಂತಕಲ್:

ಅನಂತಪುರದ ನಂತರದಲ್ಲಿ ಬರುವ ಸ್ಥಳ ಗುಂತಕಲ್ ಜಂಕ್ಷನ್. ಇದೊಂದು ಗುರುತರವಾದ ರೈಲು ಜಂಕ್ಷನ್ ಆಗಿದ್ದು ದಕ್ಷಿಣದ ಹಲವು ನಗರಗಳನ್ನು ಉತ್ತರ ಭಾರತದೊಂದಿಗೆ ಬೆಸೆಯುತ್ತದೆ. ಮೂಲತಃ ಗುಂತ ಕಲ್ಲಪ್ಪ ಎಂಬ ಪದದಿಂದ ಇದರ ಹೆಸರು ಬಂದಿದೆ.

ಚಿತ್ರಕೃಪೆ: Jpullokaran

ಗುಂತಕಲ್:

ಗುಂತಕಲ್:

ಗುಂತಕಲ್ ನಲ್ಲಿರುವ ಕಾಸಾಪುರಂ ಆಂಜನೇಯ ದೇವಸ್ಥಾನವು ಪ್ರಮುಖ ಆಕರ್ಷಣೆಯಾಗಿದೆ.

ಚಿತ್ರಕೃಪೆ: Sravankumar gtl

ಅದೋನಿ:

ಅದೋನಿ:

ಗುಂತಕಲ್ ನಿಂದ ಹೊರಟ ಈ ರೈಲು ನಂತರ ಬಂದು ನಿಲ್ಲುವುದು ಅದೋನಿಯಲ್ಲಿ. ಐತಿಹಾಸಿಕವಾಗಿ ಅದೋನಿಯು ತನ್ನಲ್ಲಿರುವ ಕೋಟೆಯಿಂದ ಹೆಸರುವಾಸಿಯಾಗಿದೆ.

ಚಿತ್ರಕೃಪೆ: S. Praveen Bharadhwaj

ಮಂತ್ರಾಲಯಂ ರಸ್ತೆ:

ಮಂತ್ರಾಲಯಂ ರಸ್ತೆ:

ಅದೋನಿಯ ನಂತರ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮಂತ್ರಾಲಯಕ್ಕೆ ಅತಿ ಹತ್ತಿರದಲ್ಲಿರುವ ಮಂತ್ರಾಲಯ ರಸ್ತೆ ಎಂಬ ಹೆಸರಿನ ರೈಲು ನಿಲ್ದಾಣಕ್ಕೆ ಈ ರೈಲು ಬರುತ್ತದೆ. ದಕ್ಷಿಣದಿಂದ ಮಂತ್ರಾಲಯಕ್ಕೆ ರೈಲಿನಲ್ಲಿ ತೆರಳುವ ಭಕ್ತರು ಇದೆ ನಿಲ್ದಾಣದಲ್ಲಿ ಇಳಿದು ನಂತರ ಮಂತ್ರಾಲಯಕ್ಕೆ ಹೋಗುತ್ತಾರೆ. ಇಲ್ಲಿಂದ ಮಂತ್ರಾಲಯ ಕೇವಲ 15 ಕಿ.ಮೀಗಳು.

ಚಿತ್ರಕೃಪೆ: Jpullokaran

ಮಂತ್ರಾಲಯಂ

ಮಂತ್ರಾಲಯಂ

ಪೂಜ್ಯ ಮಂತ್ರಾಲಯ ಶ್ರೀಕ್ಷೇತ್ರ.

ಚಿತ್ರಕೃಪೆ: Dr Murali Mohan Gurram

ರಾಯಚೂರು:

ರಾಯಚೂರು:

ಮಂತ್ರಾಲಯ ರಸ್ತೆಯ ನಂತರ ಸಿಗುವ ಪಟ್ಟಣವೆ ಕರ್ನಾಟಕ ರಾಜ್ಯದ ರಾಯಚೂರು. ಉಷ್ಣ ವಿದ್ಯುತ್ ಸ್ಥಾವರ, ರಾಯಚೂರು ಕೋಟೆ ಹಾಗೂ ಇತರೆ ಅನೇಕ ಐತಿಹಾಸಿಕ ಸ್ಮಾರಕಗಳನ್ನು ಇಲ್ಲಿ ಕಾಣಬಹುದು.

ಚಿತ್ರಕೃಪೆ: Suresh.A

ವಾಡಿ:

ವಾಡಿ:

ರಾಯಚೂರು ನಂತರ ಬರುವ ಪಟ್ಟಣ ಗುಲ್ಬರ್ಗಾ ಜಿಲ್ಲೆಯ ವಾಡಿ. ಎ.ಸಿ.ಸಿ ಯ ಸಿಮೆಂಟ್ ಉತ್ಪಾದಿಸುವ ಘಟಕ ದೇಶದ ಅತಿ ದೊಡ್ಡ ಘಟಕಗಳ ಪೈಕಿ ಒಂದಾಗಿದ್ದು ಇಲ್ಲಿನ ಪ್ರಮುಖ ಅಂಶ. ಆಧುನಿಕ ಹಾಗೂ ಸಾಂಪ್ರದಾಯಿಕ ಎರದೂ ರೀತಿಯಲ್ಲೂ ಸಿಮೆಂಟನ್ನು ಇಲ್ಲಿ ಉತ್ಪಾದಿಸಲಾಗುತ್ತದೆ.

ಚಿತ್ರಕೃಪೆ: Superfast1111

ಗುಲ್ಬರ್ಗ:

ಗುಲ್ಬರ್ಗ:

ಕಲಬುರ್ಗಿ ಎಂತಲೂ ಕರೆಯಲ್ಪಡುವ ಗುಲ್ಬರ್ಗ ಕರ್ನಾಟಕದ ಭೌಗೋಳಿಕವಾಗಿ ದೊಡ್ಡ ಜಿಲ್ಲೆಗಳ ಪೈಕಿ ಮೊದಲನೆಯದು. ಐತಿಹಾಸಿಕ ಮಹತ್ವವುಳ್ಳ ಈ ಪಟ್ಟಣದಲ್ಲಿ ಅನೇಕ ಗುರುತರವಾದ ಐತಿಹಾಸಿಕ ಸ್ಮಾರಕಗಳನ್ನು ನೋಡಬಹುದು.

ಚಿತ್ರಕೃಪೆ: SridharSaraf

ಸೋಲಾಪುರ:

ಸೋಲಾಪುರ:

ಗುಲ್ಬರ್ಗದ ನಂತರದಲ್ಲಿ ಬರುವ ಪಟ್ಟಣ ಮಹಾರಾಷ್ಟ್ರದ ಸೋಲಾಪುರ.

ಚಿತ್ರಕೃಪೆ: Dharmadhyaksha

ಸೋಲಾಪುರ:

ಸೋಲಾಪುರ:

ಇಲ್ಲಿರುವ ಶ್ರೀ ಸಿದ್ಧೇಶ್ವರ ದೇವಾಲಯವು ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ.

ಚಿತ್ರಕೃಪೆ: Uddhavghodake

ಸೋಲಾಪುರ:

ಸೋಲಾಪುರ:

ಸೋಲಾಪುರ ಪಟ್ಟಣದ ಒಂದು ನೋಟ. ಮತ್ತೊಂದು ವಿಶೇಷವೆಂದರೆ ಈ ಪಟ್ಟಣದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಕನ್ನಡ ಮಾತನಾಡುವವರು ಸಿಗುತ್ತಾರೆ.

ಚಿತ್ರಕೃಪೆ: Coolgama

ದೌಂಡ್:

ದೌಂಡ್:

ಪುಣೆ ಜಿಲ್ಲೆಯ ದೌಂಡ್ ಈ ರೈಲಿನ ಮಾರ್ಗದಲ್ಲಿ ಸಿಗುವ ಮತ್ತೊಂದು ಪಟ್ಟಣ.

ಚಿತ್ರಕೃಪೆ: Akkida

ಅಹ್ಮದ್ ನಗರ:

ಅಹ್ಮದ್ ನಗರ:

ದೌಂಡ್ ನಂತರದಲ್ಲಿ ಬರುವ ಸ್ಥಳ ಅಹ್ಮದ್ ನಗರ. ಬಹುಮನಿ ಸುಲ್ತಾನರ ಆಳ್ವಿಕೆಯಲ್ಲಿದ್ದ ಅಹ್ಮದ್ ನಗರ ಒಂದು ಪ್ರಮುಖ ಐತಿಹಾಸಿಕ ಪಟ್ಟಣವಾಗಿದೆ.

ಚಿತ್ರಕೃಪೆ: Pravin Gupta

ಬೇಲಾಪುರ್:

ಬೇಲಾಪುರ್:

ಮುಂಬೈ ಉಪನಗರ ರೈಲ್ವೆ ಸುಪರ್ದಿಗೆ ಬರುವ ಬೇಲಾಪುರ್ ಅಹ್ಮದ್ ನಗರದ ನಂತರದಲ್ಲಿ ಬರುವ ಸ್ಥಳ. ಇಲ್ಲಿಂದ ಸುಮಾರು 50000 ಜನರು ಮುಂಬೈನೆಡೆಗೂ 15000 ದಷ್ಟು ಜನರು ಪನ್ವೇಲ್ ನೆಡೆಗೂ ಸಂಚರಿಸುತ್ತಾರೆ.

ಚಿತ್ರಕೃಪೆ: Chithiraiyan

ಕೋಪರಗಾಂವ್:

ಕೋಪರಗಾಂವ್:

ಭಾರತದ ಸುಪ್ರಸಿದ್ಧ ಯಾತ್ರಾ ಕ್ಷೇತ್ರ ಶಿರಡಿ ಅತಿ ಹತ್ತಿರದಲ್ಲಿರುವ ಕೋಪರಗಾಂವ್ ಬೇಲಾಪುರ್ ನಂತರದ ನಿಲ್ದಾಣವಾಗಿದೆ. ರೈಲಿನಲ್ಲಿ ಶಿರಡಿಗೆ ತೆರಳುವ ಭಕ್ತಾದಿಗಳು ಇಳಿಯುವುದು ಇದೆ ಸ್ಥಳದಲ್ಲಿ. ಶಿರಡಿಯು ಇಲ್ಲಿಂದ 14 ಕಿ.ಮೀ ದೂರದಲ್ಲಿದೆ.

ಚಿತ್ರಕೃಪೆ: Shikhaverma117

ಮನ್ಮಾಡ್ ಜಂಕ್ಷನ್:

ಮನ್ಮಾಡ್ ಜಂಕ್ಷನ್:

ಕೋಪರಗಾಂವ್ ನಂತರದಲ್ಲಿ ಸಿಗುವ ನಿಲುಗಡೆ ಮನ್ಮಾಡ್ ಜಂಕ್ಷನ್.

ಚಿತ್ರಕೃಪೆ: Superfast1111

ಜಲಗಾಂವ್:

ಜಲಗಾಂವ್:

ಮನ್ಮಾಡ್ ನಂತರದ ನಿಲುಗಡೆ ಜಲಗಾಂವ್. ಜಗತ್ತಿನಲ್ಲೆ ಹೆಚ್ಚಿನ ಪ್ರಮಾಣದ ಬಾಳೆ ಹಣ್ಣನ್ನು ಇಲ್ಲಿ ಬೆಳೆಯಲಾಗುತ್ತದೆ.

ಭುಸಾವಳ್:

ಭುಸಾವಳ್:

ಜಲಗಾಂವ್ ನಂತರದ ನಿಲುಗಡೆ ಭುಸಾವಳ್.

ಚಿತ್ರಕೃಪೆ: Superfast1111

ಖಾಂಡ್ವಾ:

ಖಾಂಡ್ವಾ:

ಮಧ್ಯ ಪ್ರದೇಶದ ಖಾಂಡ್ವಾ ಈ ರೈಲು ಮಾರ್ಗದಲ್ಲಿ ಬರುವ ಮತ್ತೊಂದು ಸ್ಥಳ. ಈ ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿ ಆಕರ್ಷಣೆಗಳನ್ನು ಕಾಣಬಹುದು.

ಚಿತ್ರಕೃಪೆ: Rakeshgangrade

ಇಟಾರ್ಸಿ ಜಂಕ್ಷನ್:

ಇಟಾರ್ಸಿ ಜಂಕ್ಷನ್:

ಮಧ್ಯಪ್ರದೇಶದ ಹೋಶಂಗಾಬಾದ್ ಜಿಲ್ಲೆಯ ಇಟಾರ್ಸಿ ಪಟ್ಟಣ ಖಾಂಡ್ವಾದ ನಂತರದ ಸ್ಥಳವಾಗಿದೆ.

ಚಿತ್ರಕೃಪೆ: Superfast1111

ಭೋಪಾಲ್ ಜಂಕ್ಷನ್:

ಭೋಪಾಲ್ ಜಂಕ್ಷನ್:

ಮಧ್ಯಪ್ರದೇಶದ ರಾಜಧಾನಿ ನಗರ ಭೋಪಾಲ್ ಈ ರೈಲು ಮಾರ್ಗದಲ್ಲಿ ಸಿಗುವ ಇಟಾರ್ಸಿಯ ನಂತರದ ನಿಲುಗಡೆಯಾಗಿದೆ. ಅನೇಕ ಗುರುತರವಾದ ಪ್ರವಾಸಿ ಆಕರ್ಷಣೆಗಳನ್ನು ಇಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: Jayanta

ಬಿನಾ ಜಂಕ್ಷನ್:

ಬಿನಾ ಜಂಕ್ಷನ್:

ಬಿನಾ ಎಟಾವಾ ಪಟ್ಟಣ ಮಧ್ಯ ಪ್ರದೇಶ ರಾಜ್ಯದ ಸಾಗರ ಜಿಲ್ಲೆಯ ಒಂದು ಪಟ್ಟಣವಾಗಿದ್ದು ಈ ರೈಲು ಮಾರ್ಗದಲ್ಲಿ ಭೋಪಾಲ್ ನಂತರದಲ್ಲಿ ಬರುತ್ತದೆ. ಬಿನಾ ಪಟ್ಟಣವು ಎರಾನ್ ಎಂಬ ಪ್ರಾಚೀನ ಪ್ರದೇಶದಿಂದಾಗಿ ಹೆಚ್ಚು ಜನಪ್ರಿಯತೆ ಪಡೆದಿದೆ.

ಚಿತ್ರಕೃಪೆ: Adarshkothia

ಝಾನ್ಸಿ:

ಝಾನ್ಸಿ:

ಈ ರೈಲು ಮಾರ್ಗದಲ್ಲಿ ಸಿಗುವ ಮತ್ತೊಂದು ಗುರುತರವಾದ ಪ್ರವಾಸಿ ತಾಣ ಝಾನ್ಸಿ.

ಚಿತ್ರಕೃಪೆ: Vaibhav96

ಗ್ವಾಲೀಯರ್:

ಗ್ವಾಲೀಯರ್:

ಸುಪ್ರಸಿದ್ಧ ಪ್ರವಾಸಿ ಆಕರ್ಷಣೆಯಾದ ಕೋಟೆಯ ತಾಣ ಗ್ವಾಲೀಯರ್ ಪಟ್ಟಣವು ಝಾನ್ಸಿ ನಂತರದಲ್ಲಿ ಬರುತ್ತದೆ.

ಚಿತ್ರಕೃಪೆ: Jayanta

ಗ್ವಾಲೀಯರ್:

ಗ್ವಾಲೀಯರ್:

ಗ್ವಾಲೀಯರ್ ಕೋಟೆಯ ನೋಟ.

ಚಿತ್ರಕೃಪೆ: Noeljoe85

ಆಗ್ರಾ ಕ್ಯಾಂಟೋನ್ಮೆಂಟ್

ಆಗ್ರಾ ಕ್ಯಾಂಟೋನ್ಮೆಂಟ್

ಗ್ವಾಲೀಯರ್ ನಂತರದಲ್ಲಿ ಬರುವ ನಿಲುಗಡೆ ಆಗ್ರಾ ಕ್ಯಾಂಟೋನ್ಮೆಂಟ್. ಜಗತ್ತಿನ ಏಳು ಅದ್ಭುತಗಳಲ್ಲೊಂದಾದ ತಾಜ್ ಮಹಲ್ ಅನ್ನು ಆಗ್ರಾದಲ್ಲಿ ಕಾಣಬಹುದು.

ಚಿತ್ರಕೃಪೆ: Fatehrawkey

ಆಗ್ರಾ :

ಆಗ್ರಾ :

ತಾಜ್ ಮಹಲ್ ಭಾರತದ ಹೆಮ್ಮೆ ಹಾಗೂ ಒಂದು ಪ್ರಬುದ್ಧವಾದ ಪ್ರವಾಸಿ ಆಕರ್ಷಣೆ.

ಚಿತ್ರಕೃಪೆ: Yann

ಮಥುರಾ ಜಂಕ್ಷನ್:

ಮಥುರಾ ಜಂಕ್ಷನ್:

ಆಗ್ರಾದ ನಂತರದ ನಿಲುಗಡೆ ಶ್ರೀ ಕೃಷ್ಣನ ಜನ್ಮಭೂಮಿ ಹಾಗೂ ಧಾರ್ಮಿಕ ಆಕರ್ಷಣೆಯ ನಗರಿ ಮಥುರಾ. ಇಲ್ಲಿ ದೊರೆಯುವ ಮಥುರಾ ಫೇಡೆಗಳು ತುಂಬ ಪ್ರಸಿದ್ಧ.

ಚಿತ್ರಕೃಪೆ: Poco a poco

ಹಜರತ್ ನಿಜಾಮುದ್ದೀನ್:

ಹಜರತ್ ನಿಜಾಮುದ್ದೀನ್:

ದೆಹಲಿಯ ಐದು ಪ್ರಮುಖ ರೈಲು ನಿಲ್ದಾಣಗಳ ಪೈಕಿ ಒಂದಾದ ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣವು ಮಥುರಾದ ನಂತರ ಬರುತ್ತದೆ.

ಚಿತ್ರಕೃಪೆ: Deeptrivia

ನವದೆಹಲಿ:

ನವದೆಹಲಿ:

ಬೆಂಗಳೂರಿನಿಂದ ಪ್ರಾರಂಭವಾದ ಈ ರೈಲು ಮೂರು ರಾಜ್ಯಗಳನ್ನು ದಾಟಿ ಕೊನೆಯದಾಗಿ ನವದೆಹಲಿಯ ರೈಲು ನಿಲ್ದಾಣಕ್ಕೆ ಆಗಮಿಸುತ್ತದೆ. ಇದರ ಪ್ರಯಾಣವು ಇಲ್ಲಿ ಅಂತ್ಯವಾಗಿ ನಂತರ ಇದೆ ಸ್ಥಳದಿಂದ ಮತ್ತೆ ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತದೆ.

ಚಿತ್ರಕೃಪೆ: Bruno Corpet

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X