Search
  • Follow NativePlanet
Share
» »ಕರ್ನಾಟಕದ ಹೆಮ್ಮೆಯ ಅಣೆಕಟ್ಟುಗಳು

ಕರ್ನಾಟಕದ ಹೆಮ್ಮೆಯ ಅಣೆಕಟ್ಟುಗಳು

By Vijay

ಹರಿಯುವ ನೀರನ್ನು ಪೋಲಾಗದಂತೆ ಒಂದೆಡೆ ಹಿಡಿದಿಟ್ಟು, ನೀರನ್ನೆ ನಂಬಿದ ಸಮಸ್ತ ರೈತ ಸಮುದಾಯ ಹಾಗೂ ಜನತೆಗೆ ಅವಶ್ಯಕತೆಗೆ ತಕ್ಕಂತೆ ಪೂರೈಸುವ ವಿಧಾನಕ್ಕೆ ಪೂರಕವಾಗಿ ನಿರ್ಮಿಸಲಾಗುವ ರಚನೆಗಳೆ ಅಣೆಕಟ್ಟುಗಳು. ಮಳೆಗಾಲದ ಸಂದರ್ಭದಲ್ಲಿ ಜಲಾನಯನ ಪ್ರದೇಶಗಳಲ್ಲಿ ವಿಪರೀತ ಮಳೆ ಬಿದ್ದು ಇದ್ದ ಬಿದ್ದ ಎಲ್ಲ ನದಿ, ಕೆರೆ ತೊರೆಗಳು ತುಂಬಿ ಹರಿಯಲಾರಂಭಿಸುತ್ತವೆ.

ಈ ರೀತಿಯಾಗಿ ಹರಿಯುವ ಈ ನದಿಗಳಿಗೆ ಅವುಗಳು ಹರಿಯುವ ಪಥದಲ್ಲಿ ಅಡ್ಡಲಾಗಿ ಅಣೆಕಟ್ಟುಗಳನ್ನು ನಿರ್ಮಿಸುವುದರ ಮೂಲಕ ಸಾಕಷ್ಟು ನೀರನ್ನು ಬೇಸಿಗೆಯ ಸಂದರ್ಭಕ್ಕೆ ಇಲ್ಲವೆ ನೀರಿನ ಅಭಾವ ತಲೆದೋರಿದಾಗ ಬಳಸಲು ಅನುಕೂಲವಾಗುವಂತೆ ಶೇಖರಿಸಿಟ್ಟುಕೊಳ್ಳಬಹುದು.

ಪ್ರಸ್ತುತ ಲೇಖನವು, ನಮ್ಮ ನಾಡಿನ ಕೆಲ ಪ್ರಸಿದ್ಧ ಅಣೆಕಟ್ಟುಗಳ ಕುರಿತು ತಿಳಿಸುತ್ತದೆ.

ತುಂಗಭದ್ರಾ ಅಣೆಕಟ್ಟು:

ತುಂಗಭದ್ರಾ ಅಣೆಕಟ್ಟು:

ಕರ್ನಾಟಕದ ಬಳ್ಳಾರಿ ಜಿಲ್ಲೆಯ ಹೊಸಪೇಟೆ ಪಟ್ಟಣದ ಬಳಿ ಹರಿದಿರುವ ಕೃಷ್ಣಾ ನದಿಯ ಉಪನದಿಯಾದ ತುಂಗಭದ್ರಾ ನದಿಗೆ ಅಡ್ಡಲಾಗಿ ಈ ಬೃಹತ್ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಅಡಿಪಾಯವನ್ನು ಹೊರತುಪಡಿಸಿ ಭೂಮಟ್ಟದಿಂದ 49 ಮೀ ಗಳಷ್ಟು ಎತ್ತರವಿರುವ ಈ ಅಣೆಕಟ್ಟು ಬಹುಪಯೋಗಿ ಜಲಾಶಯವಾಗಿದೆ.

ಚಿತ್ರಕೃಪೆ: Haxplorer

ಆಲಮಟ್ಟಿ ಅಣೆಕಟ್ಟು:

ಆಲಮಟ್ಟಿ ಅಣೆಕಟ್ಟು:

ಉತ್ತರ ಕರ್ನಾಟಕ ಭಾಗದ ಬಿಜಾಪುರದ ಬಸವನಬಾಗೇವಾಡಿ ಬಳಿ ಹರಿದಿರುವ ಕೃಷ್ಣಾ ನದಿಗೆ ಅಡ್ಡಲಾಗಿ ಆಲಮಟ್ಟಿ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಇದು ಕೂಡ ವಿವಿಧೋದ್ದೇಶದ ಜಲಾಶಯವಾಗಿದ್ದು ವಿದ್ಯುತ್ ಉತ್ಪಾದನೆಯನ್ನೂ ಸಹ ಒಳಗೊಂಡಿದೆ. ಅಲ್ಲದೆ ಜಲಾಶಯ ಸುತ್ತಲಿನ ಪ್ರದೇಶದಲ್ಲಿ ಉದ್ಯಾನಗಳನ್ನು ನಿರ್ಮಿಸಲಾಗಿದ್ದು, ಪ್ರಮುಖ ಪ್ರವಾಸಿ ಆಕರ್ಷಣೆಯಾಗಿಯೂ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Murughendra

ಹಾರಂಗಿ ಅಣೆಕಟ್ಟು:

ಹಾರಂಗಿ ಅಣೆಕಟ್ಟು:

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹ್ಡ್ಗೂರು ಎಂಬ ಹಳ್ಳಿಯ ಬಳಿ ಹಾರಂಗಿ ಅಣೆಕಟ್ಟು ಜಲಾಶಯವಿದೆ. ಕಾವೇರಿ ನದಿಯ ಉಪನದಿಯಾದ ಹಾರಂಗಿ ನದಿಗೆ ಅಡ್ಡಲಾಗಿ ಈ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಪಶ್ಚಿಮ ಘಟ್ಟದ ಪುಷ್ಪಗಿರಿ ಬೆಟ್ಟಗಳಲ್ಲಿ ಹುಟ್ಟುವ ಹಾರಂಗಿ ನದಿಗೆ ನೀರಿನ ಮೂಲ ನೈರುತ್ಯ ಮಾರುಗಳಿಂದುಂಟಾಗುವ ಮಳೆಯಾಗಿದೆ.

ಚಿತ್ರಕೃಪೆ: Shashankbhat

ಹೇಮಾವತಿ ಅಣೆಕಟ್ಟು:

ಹೇಮಾವತಿ ಅಣೆಕಟ್ಟು:

ಹೇಮಾವತಿ ಕರ್ನಾಟಕದ ಒಂದು ನದಿಯಾಗಿದೆ. ಪಶ್ಚಿಮ ಘಟ್ಟದ ಚಿಕ್ಕಮಗಳೂರು ಜಿಲ್ಲೆಯ ಬಲ್ಲಾಳರಾಯನದುರ್ಗ ಎಂಬಲ್ಲಿ ಉಗಮಗೊಳ್ಳುವ ಈ ನದಿಯು ಹರಿಯುತ್ತ ನಂತರ ಯಗಚಿ ನದಿಯೊಂದಿಗೆ ವಿಲೀನವಾಗಿ ಕೃಷ್ಣರಾಜಸಾಗರದ ಬಳಿ ಕಾವೇರಿ ನದಿಯೊಂದಿಗೆ ಸಂಗಮಗೊಳ್ಳುತ್ತದೆ. ಹಾಸನ ಜಿಲ್ಲೆಯ ಗೋರೂರಿನ ಬಳಿ ಈ ನದಿಗೆ ಬೃಹತ್ತಾದ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಇದನ್ನೆ ಹೇಮಾವತಿ ಜಲಾಶಯ ಎಂದು ಕರೆಯಲಾಗುತ್ತದೆ.

ಚಿತ್ರಕೃಪೆ: Technofreak

ಲಿಂಗನಮಕ್ಕಿ ಅಣೆಕಟ್ಟು:

ಲಿಂಗನಮಕ್ಕಿ ಅಣೆಕಟ್ಟು:

ಲಿಂಗಮಕ್ಕಿ ಜಲಾಶಯವನ್ನು ಶರಾವತಿ ನದಿಗೆ ಅಡ್ಡಲಾಗಿ, 1964ರಲ್ಲಿ ನಿರ್ಮಿಸಲಾಗಿದ್ದು, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ. ಈ ಅಣೆಕಟ್ಟು 2.4 ಕಿ.ಮೀ ಗಳಷ್ಟು ಉದ್ದವಿದ್ದು, 1819 ಅಡಿಗಳಷ್ಟು ಎತ್ತರವಿದೆ. 4368 ಘನ ಮೀ ಗಳಷ್ಟು ನೀರು ಸಂಗ್ರಹಿಸುವ ಸಾಮರ್ಥ್ಯವನ್ನು ಈ ಜಲಾಶಯ ಹೊಂದಿದೆ.

ಚಿತ್ರಕೃಪೆ: ಜಿ.ಎಸ್. ಜಯಕೃಷ್ಣ ತಲವಾಟ

ಸುಪಾ ಅಣೆಕಟ್ಟು:

ಸುಪಾ ಅಣೆಕಟ್ಟು:

ಉತ್ತರ ಕನ್ನಡ ಜಿಲ್ಲೆಯಲ್ಲಿ ಹರಿಯುವ ಕಾಳಿ ನದಿಗೆ ಅಡ್ಡಲಾಗಿ ಜೋಯಿಡಾ ತಾಲೂಕಿನ ಬಳಿ ಈ ಜಲಾಶಯವನ್ನು ನಿರ್ಮಿಸಲಾಗಿದೆ. ಇದೊಂದು ಜಲ ವಿದ್ಯುತ್ ಉತ್ಪಾದನೆಯ ಯೋಜನೆಯೂ ಸಹ ಆಗಿದೆ. ಚಿತ್ರದಲ್ಲಿರುವುದು ಸುಪಾ ಅಣೆಕಟ್ಟಿನ ಹಿನ್ನೀರು.

ಚಿತ್ರಕೃಪೆ: Chinmayisk

ಭದ್ರಾ ಅಣೆಕಟ್ಟು:

ಭದ್ರಾ ಅಣೆಕಟ್ಟು:

ಕುದುರೆಮುಖದ ಗಂಗಾಮೂಲ ಎಂಬಲ್ಲಿ ಉದ್ಭವಿಸುವ ಭದ್ರಾ ನದಿಗೆ ಅಡ್ಡಲಾಗಿ ಶಿವಮೊಗ್ಗ ಜಿಲ್ಲೆಯ ಲಕ್ಕವಳ್ಳಿ ಎಂಬ ಹಳ್ಳಿಯ ಬಳಿ ಈ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಇದು ಲಕ್ಕವಳ್ಳಿ ಹಳ್ಳಿಗೆ ಅತಿ ಸನೀಹದಲ್ಲಿರುವುದರಿಂದ ಇದಕ್ಕೆ ಲಕ್ಕವಳ್ಳಿ ಅಣೆಕಟ್ಟು ಇಲ್ಲವೆ ಭದ್ರಾ ಜಲಾಶಯ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ. ಜಲಾಶ್ಯದ ಸುತ್ತಮುತ್ತಲಿನ ನೋಟಗಳು ನೋಡಲು ಆಕರ್ಷಕವಾಗಿವೆ.

ಚಿತ್ರಕೃಪೆ: Amarrg

ಕೃಷ್ಣರಾಜ ಸಾಗರ ಅಣೆಕಟ್ಟು:

ಕೃಷ್ಣರಾಜ ಸಾಗರ ಅಣೆಕಟ್ಟು:

ಜನಪ್ರಿಯವಾಗಿ ಕೆ ಆರ್ ಎಸ್ ಎಂತಲೆ ಕರೆಯಲ್ಪಡುವ ಕೃಷ್ಣರಾಜಸಾಗರ, ಅಣೆಕಟ್ಟು ಹಾಗೂ ಜಲಾಶ್ಯದ ಹೆಸರಾಗಿದೆ. ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರದ ಬಳಿ ಕಾವೇರಿ ನದಿಗೆ ನಿರ್ಮಿಸಲಾಗಿರುವ ಈ ಸುಂದರ ಪ್ರವಾಸಿ ಆಕರ್ಷಣೆಯುಳ್ಳ ಜಲಾಶಯ ಮೈಸೂರು ನಗರಕ್ಕೆ ಬಹು ಹತ್ತಿರದಲ್ಲಿದೆ. ಇದರ ಆವರಣದಲ್ಲಿರುವ ಬೃಂದಾವನ ಉದ್ಯಾನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.

ಚಿತ್ರಕೃಪೆ: Ashwin Kumar

ಕೃಷ್ಣರಾಜ ಸಾಗರ ಅಣೆಕಟ್ಟು:

ಕೃಷ್ಣರಾಜ ಸಾಗರ ಅಣೆಕಟ್ಟು:

ಬೃಂದಾವನ ಉದ್ಯಾನದ ಒಂದು ಸುಂದರ ನೋಟ.

ಚಿತ್ರಕೃಪೆ: Ashwin Kumar

ಕೊಡಸಳ್ಳಿ ಅಣೆಕಟ್ಟು:

ಕೊಡಸಳ್ಳಿ ಅಣೆಕಟ್ಟು:

ಉತ್ತರ ಕನ್ನಡ ಜಿಲ್ಲೆಯಲ್ಲಿ ಹರಿದಿರುವ ಕಾಳಿ ನದಿಗೆ ಅಡ್ಡಲಾಗಿ ಯಲ್ಲಾಪುರದ ಬಳಿ ಈ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ ನಿರ್ಮಿಸಲಾಗಿರುವ ಈ ಅಣೆಕಟ್ಟಿನ ಮುಖ್ಯ ಉದ್ದೇಶ ಜಲ ವಿದ್ಯುತ್ ಉತ್ಪಾದನೆಯಾಗಿದೆ.

ಚಿತ್ರಕೃಪೆ: Karthickbala

ಧೂಪದಳ್ ಅಣೆಕಟ್ಟು:

ಧೂಪದಳ್ ಅಣೆಕಟ್ಟು:

ಬೆಳಗಾವಿ ಜಿಲ್ಲೆಯ ಗೋಕಾಕ್ ಪಟ್ಟಣದಿಂದ 18 ಕಿ.ಮೀ ದೂರದಲ್ಲಿರುವ ಕೊಣ್ಣೂರು ಎಂಬಲ್ಲಿ ಘಟಪ್ರಭಾ ನದಿಗೆ ಅಡ್ಡಲಾಗಿ ಈ ಅಣೆಕಟ್ಟನ್ನು ಸುಮಾರು 1883 ರಲ್ಲಿ ನಿರ್ಮಿಸಲಾಗಿದೆ. ವಿದ್ಯುತ್ ಉತ್ಪಾದನೆಯ ಯೋಜನೆಯೂ ಆಗಿರುವ ಇದು ಮೀನು ಹಿಡಿಯುವುದಕ್ಕೂ ಕೂಡ ಪ್ರಸಿದ್ಧಿ ಪಡೆದಿದೆ.

ಚಿತ್ರಕೃಪೆ: Shil.4349

ಹಿಡಕಲ್ ಅಣೆಕಟ್ಟು:

ಹಿಡಕಲ್ ಅಣೆಕಟ್ಟು:

ಬೆಳಗಾವಿ ಜಿಲ್ಲೆಯ ಗೋಕಾಕ್ ಪಟ್ಟಣದಿಂದ 25 ಕಿ.ಮೀ ದೂರದಲ್ಲಿರುವ ಹಿಡಕಲ್ ಎಂಬಲ್ಲಿ ಈ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಇದೊಂದು ಪ್ರವಾಸಿ ಆಕರ್ಷಣೆಯೂ ಸಹ ಆಗಿದೆ. ಪ್ರತಿ ವರ್ಷವೂ ಬಲು ಅಪರೂಪದ ಪಕ್ಷಿಗಳಿ ಇಲ್ಲಿಗೆ ವಲಸೆ ಬರುತ್ತವೆ. ಚಿತ್ರದಲ್ಲಿರುವ ಹಿಡಕಲ್ ಜಲಾಶಯದ ನೀರು.

ಚಿತ್ರಕೃಪೆ: Shil.4349

ನಾರಾಯಣಪುರ ಅಣೆಕಟ್ಟು:

ನಾರಾಯಣಪುರ ಅಣೆಕಟ್ಟು:

ಯಾದಗಿರಿ ಜಿಲ್ಲೆಯ ನಾರಾಯಣಪುರ ಎಂಬಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಈ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಬಿಜಾಪುರ, ಗುಲ್ಬರ್ಗ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ನೀರಾವರಿ ಉದ್ದೇಶಗಳಿಗಾಗಿ ಈ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಇದರ ಜಲಾಶಯವನ್ನು ಬಸವ ಸಾಗರ ಜಲಾಶಯ ಎಂಬ ಹೆಸರಿನಿಂದ ಕರೆಯಲಾಗುತ್ತದೆ.

ಚಿತ್ರಕೃಪೆ: wikimapia

ವಾಣಿ ವಿಲಾಸ ಸಾಗರ ಅಣೆಕಟ್ಟು:

ವಾಣಿ ವಿಲಾಸ ಸಾಗರ ಅಣೆಕಟ್ಟು:

ವಾಣಿ ವಿಲಾಸ ಸಾಗರ ಅಥವಾ ಮಾರಿ ಕಣಿವೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿರುವ ಒಂದು ಅಣೆಕಟ್ಟಿನ ಹೆಸರಾಗಿದೆ. ಕರ್ನಾಟಕ ರಾಜ್ಯದ ಅತಿ ಹಳೆಯದಾದ ಆಣೆಕಟ್ಟು ಇದಾಗಿದೆ. ಸ್ವಾತಂತ್ರ್ಯಪೂರ್ವ ಮೈಸೂರು ಮಹಾರಾಜರಿಂದ ಈ ಅಣೆಕಟ್ಟಿನ ನಿರ್ಮಾಣವಾಗಿದೆ. ಇದನ್ನು ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ.

ಚಿತ್ರಕೃಪೆ: HPN

ಕಣ್ವ ಅಣೆಕಟ್ಟು:

ಕಣ್ವ ಅಣೆಕಟ್ಟು:

ಬೆಂಗಳೂರಿನಿಂದ 69 ಹಾಗೂ ರಾಮನಗರದಿಂದ 10 ಕಿ.ಮೀ ದೂರದಲ್ಲಿರುವ ಕಣ್ವ ಜಲಾಶಯ ಅಣೆಕಟ್ಟು, ಒಂದು ಪ್ರವಾಸಿ ಆಕರ್ಷಣೆಯೂ ಸಹ ಆಗಿದೆ. ಕಣ್ವ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಅಣೆಕಟ್ಟು ಒಂದು ಸಣ್ಣ ನೀರಾವರಿ ಯೋಜನೆಯಾಗಿದೆ.

ಚಿತ್ರಕೃಪೆ: Sreejithk2000

ಮಾರ್ಕೋನ ಹಳ್ಳಿ:

ಮಾರ್ಕೋನ ಹಳ್ಳಿ:

ತುಮಕೂರು ಜಿಲ್ಲೆಯ ಮಾರ್ಕೋನಹಳ್ಳಿ ಬಳಿ ಶಿಂಶಾ ನದಿಗೆ ಅಡ್ಡಲಾಗಿ ಈ ಬೃಹತ್ ಜಲಶಯವನ್ನು ನಿರ್ಮಿಸಲಾಗಿದೆ.

ಚಿತ್ರಕೃಪೆ: Siddarth.P.Raj

ನವೀಲುತೀರ್ಥ ಅಣೆಕಟ್ಟು:

ನವೀಲುತೀರ್ಥ ಅಣೆಕಟ್ಟು:

ಬೆಳಗಾವಿ ಜಿಲ್ಲೆಯ ಸೌದತ್ತಿ ಬಳಿ ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟೆಯೆ ನವೀಲುತೀರ್ಥ ಅಣೆಕಟ್ಟು. ಈ ಅಣೆಕಟ್ಟೆಯಿಂದ ನಿರ್ಮಿತವಾಗಿರುವ ಜಲಾಶಯವನ್ನು ರೇಣುಕಾ ಸಾಗರ ಎಂದು ಕರೆಯಲಾಗುತ್ತದೆ. ಇದು ಧಾರ್ಮಿಕ ಮಹತ್ವವುಳ್ಳ ಸೌದತ್ತಿ ಎಲ್ಲಮ್ಮನ ದೇವಸ್ಥಾನಕ್ಕೆ ಹತ್ತಿರದಲ್ಲಿದೆ.

ಚಿತ್ರಕೃಪೆ: Manjunath Doddamani

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X