Search
  • Follow NativePlanet
Share
» »ಮೈಸೂರಿನಲ್ಲೊಂದು ಸುಂದರ ಕೆರೆ

ಮೈಸೂರಿನಲ್ಲೊಂದು ಸುಂದರ ಕೆರೆ

By Vijay

ಮೈಸೂರು ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ಮೃಗಾಲಯ, ಅರಮನೆ, ಬೃಂದಾವನ, ಚಾಮುಂಡಿ ಬೆಟ್ಟ ಮುಂತಾದವುಗಳು. ಇದು ನಿಜವೂ ಹೌದು. ಸಾಕಷ್ಟು ಜನ ಪ್ರವಾಸಿಗರು ಮೈಸೂರಿಗೆ ಬಂದರೆಂದರೆ ಈ ಆಕರ್ಷಣೆಗಳನ್ನು ನೋಡದೆಯೆ ಮರಳುವುದು ಅತಿ ವಿರಳ.

ಅದರಲ್ಲೂ ವಿಶೇಷವಾಗಿ ದಸರಾ ಸಮಯದಲ್ಲಂತೂ ಮೈಸೂರು ನಗರದಲ್ಲಿ ಸಾಕ್ಷಾತ್ ಮದುವೆ ಮನೆಯಲ್ಲಿ ಕಂಡುಬರುವ ಸಂಭ್ರಮದ ಹಾಗೆ ವಾತಾವರಣವಿರುತ್ತದೆ. ಕೇವಲ ರಾಜ್ಯ, ದೇಶ ಮಾತ್ರವಲ್ಲದೆ ವಿದೇಶಗಳಿಂದಲೂ ಸಹ ಸಾಕಷ್ಟು ಜನ ಪ್ರವಾಸಿಗರು ದಸರೆಯ ವಿಶೇಷದಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ದೌಡಾಯಿಸುತ್ತಾರೆ.

ಇನ್ನು ಮೈಸೂರಿನಲ್ಲಿ ದಸರಾ ಹಬ್ಬದ ಸವಿಯನ್ನು ಮನ ತಣಿಯುವಷ್ಟು ಸವಿದ ಮೇಲೆ, ಅತಿ ಸಡಗರ, ಅಬ್ಬರದ ಕಾರ್ಯಗಳ ನಂತರ ಮನಸ್ಸಿಗೆ ಕೊಂಚ ಭಾರ, ದೇಹಕ್ಕೆ ತುಸು ಆಯಾಸ ಆಗುವುದು ಸಹಜ. ಪ್ರಶಾಂತಮಯ ಹಾಗೂ ಹಿತಕರವಾದ ಸ್ಥಳದಲ್ಲಿ ತುಸು ವಿಶ್ರಾಂತಿಯನ್ನು ಮನ ಬಯಸುವುದು ಸಾಮಾನ್ಯ. ಈ ಸಂದರ್ಭದಲ್ಲಿ ಮೈಸೂರಿನ ಕಾರಂಜಿ ಕೆರೆಗೊಮ್ಮೆ ಭೇಟಿ ನೀಡಿ ಹಾಗೂ ನಿರಾಳರಾಗಿ.

ನಿಮಗಿಷ್ಟವಾಗಬಹುದಾದ ಲೇಖನಗಳು:

ಕೆ ಆರ್ ಎಸ್ ಆಣೆಕಟ್ಟು : ಸಂತಸದ ಕ್ಷಣಗಳು

ಮೈಸೂರು ಮೃಗಾಲಯಕ್ಕೊಂದು ಭೇಟಿ

ಕಾರಂಜಿ ಕೆರೆ:

ಕಾರಂಜಿ ಕೆರೆ:

ಮೈಸೂರು ಮೃಗಾಲಯದ ಒಂದು ಭಾಗವಾಗಿರುವ ಕಾರಂಜಿ ಕೆರೆಯು ಸುತ್ತಲೂ ಸುಂದರ ಹಾಗೂ ಪ್ರಶಾಂತಮಯ ಉದ್ಯಾನ ಹೊಂದಿರುವ ಅದ್ಭುತ ಪ್ರವಾಸಿ ಆಕರ್ಷಣೆಯಾಗಿ ನೋಡುಗರ ಗಮನ ಸೆಳೆಯುತ್ತದೆ.

ಚಿತ್ರಕೃಪೆ: Riju K

ಕಾರಂಜಿ ಕೆರೆ:

ಕಾರಂಜಿ ಕೆರೆ:

ಕೆರೆಯ ಸುತ್ತಲಿರುವ ನೈಸರ್ಗಿಕ ಉದ್ಯಾನ ಕಣ್ಮನ ಸೆಳೆಯುವ ಪಾತರಗಿತ್ತಿ ಉದ್ಯಾನ (ಬಟರ್ ಫ್ಲೈ ಪಾರ್ಕ್) ಹಾಗೂ ನಡೆಯುವ ಏವಿಯರಿ (ಒಂದು ರೀತಿಯಲ್ಲಿ ಪಂಜರದಲ್ಲಿ ನಡೆಯುವ ಹಾಗೆ) ಅನ್ನು ಹೊಂದಿದೆ. ವಿಶೇಷವೆಂದರೆ ಈ ಪಾದಚಾರಿ ಏವಿಯರಿ ಭಾರತದ ಅತಿ ದೊಡ್ಡದಾದ ಮಾರ್ಗವಾಗಿದೆ.

ಚಿತ್ರಕೃಪೆ: Riju K

ಕಾರಂಜಿ ಕೆರೆ:

ಕಾರಂಜಿ ಕೆರೆ:

ಮೈಸೂರು ಮೃಗಾಲಯದ ಅಧೀನಕ್ಕೆ ಒಳಪಡುವ ಈ ಕೆರೆಯು ಒಟ್ಟು 90 ಹೆಕ್ಟೇರ್ ಗಳಷ್ಟು ವಿಶಾಲವಾಗಿ ಹರಡಿದೆ. ಅದರಲ್ಲಿ 55 ಹೆಕ್ಟೆರುಗಳಷ್ಟು ನೀರಿನ ಪ್ರದೇಶವಾಗಿದ್ದರೆ ಇನ್ನುಳಿದ 35 ಹೆಕ್ಟೇರುಗಳಷ್ಟು ಪ್ರದೇಶ ಭೂಮಯವಾಗಿದೆ.

ಚಿತ್ರಕೃಪೆ: Riju K

ಕಾರಂಜಿ ಕೆರೆ:

ಕಾರಂಜಿ ಕೆರೆ:

ಈ ಕೆರೆ ಪ್ರವೇಶಕ್ಕೆ ಪ್ರವೇಶ ಶುಲ್ಕವಿದ್ದು ಕೆರೆಯಲ್ಲಿ ದೋಣಿ ವಿಹಾರದ ಸೌಲಭ್ಯವನ್ನೂ ಸಹ ಒದಗಿಸಲಾಗಿದೆ. ಬೇಕಿದ್ದರೆ ಚಾಲಕ ರಹಿತ ಪೆಡಲ್ ದೋಣಿ ಅಥವಾ ಚಾಲಕಸಹಿತ ದೋಣಿ ವಿಹಾರದ ಎರಡೂ ಆಯ್ಕೆಗಳು ನಿಗದಿತ ದರಗಳಿಗೆ ಲಭ್ಯವಿದೆ.

ಚಿತ್ರಕೃಪೆ: Nagesh Kamath

ಕಾರಂಜಿ ಕೆರೆ:

ಕಾರಂಜಿ ಕೆರೆ:

ಹಿಂದೆ ಈ ಕೆರೆ ಪ್ರದೇಶವು ಹೆರಾನ್ ಹಾಗೂ ಎಗ್ರೆಟ್ ರೀತಿಯ ಪಕ್ಷಿಗಳಿಗೆ ಆಶ್ರಯ ತಾಣವಾಗಿತ್ತು. ಕಾಲಕ್ರಮೇಣ ಕೆರೆಯ ಸುತ್ತಮುತ್ತಲಿನ ಪ್ರದೇಶಗಳಿಂದ ಕಲುಷಿತ ನೀರು ಇದಕ್ಕೆ ಸೇರ್ಪಡೆಗೊಂಡು ಕೆರೆಯು ಮಾಲಿನ್ಯಮಯವಾಗತೊಡಗಿತು.

ಚಿತ್ರಕೃಪೆ: tpms5

ಕಾರಂಜಿ ಕೆರೆ:

ಕಾರಂಜಿ ಕೆರೆ:

ಅನಂತರ ಈ ಕೆರೆಯಲ್ಲಿ ಆಹಾರದ ಮೂಲಗಳು ಕ್ರಮೇಣವಾಗಿ ಕಡಿಮೆಗೊಳ್ಳುತ್ತ ಪಕ್ಷಿಗಳು ಈ ಕೆರೆಗೆ ಬರುವುದನ್ನು ನಿಲ್ಲಿಸಿದವು. ಈ ಸಮಯದಲ್ಲಿ ಎಚ್ಚೆತ್ತುಗೊಂಡ ಸಂಬಂಧಿಸಿದ ಇಲಾಖೆ ಈ ಕೆರೆಯನ್ನು ಪುನಶ್ಚೇತನಗೊಳಿಸುವ ದೃಷ್ಟಿಯಿಂದ ಇತರೆ ಕೆಲ ನಿರ್ದಿಷ್ಟ ಇಲಾಖೆಗಳ ಸಹಾಯ ಕೋರಿ ಮತ್ತೆ ಕೆರೆಯನ್ನು ಮೊದಲಿನ ರೂಪಕ್ಕೆ ತರಲಾಯಿತು.

ಚಿತ್ರಕೃಪೆ: Nagesh Kamath

ಕಾರಂಜಿ ಕೆರೆ:

ಕಾರಂಜಿ ಕೆರೆ:

ಇಂದು ಈ ಕೆರೆಯು ಹಲವಾರು ದೇಸೀಯ ಹಾಗೂ ವಲಸೆ ಹಕ್ಕಿಗಳ ಆಶ್ರಯ ತಾಣವಾಗಿದೆ. ಪಕ್ಷಿ ಪ್ರಿಯರು ಹಾಗೂ ಛಾಯಾಗ್ರಾಹಕರು ಈ ಕೆರೆಗೆ ಭೇಟಿ ನೀಡಬಹುದು ಅದರಲ್ಲೂ ಚಳಿಗಾಲದ ಸಮಯದಲ್ಲಿ ಪಕ್ಷಿಗಳ ಕಲರವ ದುಪ್ಪಟ್ಟಾಗಿರುತ್ತದೆ. ಅಲ್ಲದೆ ಕೆರೆಯ ಸುತ್ತಲಿರುವ ಉದ್ಯಾನದ ವಾತಾವರಣವು ಹಿತಕರವಾಗಿದ್ದು ಒಂದು ದಿನದ ಮಟ್ಟಿಗೆ ಒಳ್ಳೆಯ ವಿಶ್ರಾಂತಿಯನ್ನು ಪಡೆಯುವ ದೃಷ್ಟಿಯಿಂದ ಪ್ರಶಸ್ತವಾಗಿದೆ.

ಚಿತ್ರಕೃಪೆ: Nagesh Kamath

ಕಾರಂಜಿ ಕೆರೆ:

ಕಾರಂಜಿ ಕೆರೆ:

ಈ ಕೆರೆಗೆ ಅಳವಡಿಸಲಾದ ಪ್ರಮುಖ ಆಕರ್ಷಣೆ ಎಂದರೆ ಕೆರೆಯ ಮಧ್ಯದಲ್ಲಿರುವ ಕಾರಂಜಿ. ಈ ಕಾರಂಜಿಯು ಸುಮಾರು 40 ಅಡಿಗಳಷ್ಟು ಎತ್ತರ ಚಿಮ್ಮುತ್ತ ನೋಡುಗರ ಮನ ಸೆಳೆಯುತ್ತದೆ. ಅಂತೆಯೆ ಇದನ್ನು ಕಾರಂಜಿ ಕೆರೆ ಎಂದು ಪ್ರೀತಿಯಿಂದ ಕರೆಯಲಾಗುತ್ತದೆ.

ಚಿತ್ರಕೃಪೆ: Riju K

ಕಾರಂಜಿ ಕೆರೆ:

ಕಾರಂಜಿ ಕೆರೆ:

ಈ ಕೆರೆಯ ಉದ್ಯಾನದ ಮತ್ತೊಂದು ಆಕರ್ಷಣೆ ಎಂದರೆ ಕೃತಕ ಪಂಜರ. ಇದು ದೇಶದಲ್ಲೆ ದೊಡ್ಡದಾದ ಪಂಜರವಾಗಿದ್ದು ಇದರಲ್ಲಿ ಒಂದು ಕೃತಕ ಜಲಪಾತ, ಎರಡು ಕೊಳಗಳನ್ನು ನಿರ್ಮಿಸಲಾಗಿದೆ. ಕಾರಂಜಿ ಕೆರೆಯಿಂದ ಇಲ್ಲಿ ನೀರಿನ ಸರಬರಾಜುವಿದ್ದು ಇಲ್ಲಿ ಬಳಸಲ್ಪಟ್ಟ ನೀರನ್ನು ಮತ್ತೆ ಕೆರೆಗೆ ಬಿಡಲಾಗುತ್ತದೆ.

ಚಿತ್ರಕೃಪೆ: Nagesh Kamath

ಕಾರಂಜಿ ಕೆರೆ:

ಕಾರಂಜಿ ಕೆರೆ:

ಇಲ್ಲಿ 15 ಕ್ಕೂ ಅಧಿಕ ಬಗೆಯ 40 ರಿಂದ 50 ರ ವರೆಗೆ ಪಕ್ಷಿಗಳನ್ನು ಕಾಣಬಹುದಾಗಿದೆ. ಹಾರ್ನ್ ಬಿಲ್, ನವಿಲುಗಳು, ಬಿಳಿ ನವಿಲುಗಳು, ಕ್ರೇನ್, ಪೆಲಿಕನ್, ಪೈಂಟೆಡ್ ಸ್ಟಾರ್ಕ್, ಎಗ್ರೆಟ್, ಟರ್ಕಿ ಕೋಳಿಗಳು ಮುಂತಾದವುಗಳನ್ನು ನೋಡಿ ಆನಂದಿಸಬಹುದಾಗಿದೆ.

ಚಿತ್ರಕೃಪೆ: Jan Arendtsz

ಕಾರಂಜಿ ಕೆರೆ:

ಕಾರಂಜಿ ಕೆರೆ:

ಕಾರಂಜಿ ಕೆರೆಯಲ್ಲಿರುವ ಚಿಕ್ಕ ನಡುಗಡ್ಡೆ ಭೂಮಿಯೊಂದರಲ್ಲಿ ಪಾತರಗಿತ್ತಿ ಉದ್ಯಾನವನ್ನು ನಿರ್ಮಿಸಲಾಗಿದೆ. ಇಲ್ಲಿಗೆ ತೆರಳಲು ಸೇತುವೆಯನ್ನು ನಿರ್ಮಿಸಲಾಗಿದ್ದು ಇದರ ಮೂಲಕ ಸಾಗುವಾಗ ಚಲನ ಚಿತ್ರಗಳಲ್ಲಿ ಸುಂದರವಾಗಿ ಕಾಣುವಂತೆ ಹಾಕಲಾಗುವ ಸೆಟ್ಟಿನಂತೆ ಭಾಸವಾಗುತ್ತದೆ.

ಚಿತ್ರಕೃಪೆ: Jan Arendtsz

ಕಾರಂಜಿ ಕೆರೆ:

ಕಾರಂಜಿ ಕೆರೆ:

45 ಕ್ಕೂ ಅಧಿಕ ಬಗೆಯ ಬಣ್ಣ ಬಣ್ಣದ ಚಿಟ್ಟೆಗಳನ್ನು ಈ ಪಾತರಗಿತ್ತಿ ಉದ್ಯಾನದಲ್ಲಿ ಕಾಣಬಹುದು. ಅವುಗಳು ತನ್ಮಯದಿಂದ ಹೂಗಳಿಂದ ಹೂಗಳ ಮೇಲೆ ಹಾರುತ್ತ ಮಕರಂದ ಸವಿಯುವುದನ್ನು ನೋಡಿದಾಗ ಮುಗ್ಧ ಮನಸಿನ ಪ್ರವಾಸಿಗನಲ್ಲಿ ಆನಂದದ ಅಲೆ ಉಕ್ಕದೆ ಇರಲಾರದು.

ಚಿತ್ರಕೃಪೆ: Nagesh Kamath

ಕಾರಂಜಿ ಕೆರೆ:

ಕಾರಂಜಿ ಕೆರೆ:

ಸಸ್ಯ ಶಾಸ್ತ್ರಜ್ಞರ ಅಣತಿಯಂತೆ ಚಿಟ್ಟೆಗಳ ಸಂತಾನಾಭಿವೃದ್ಧಿಗೆ ಅನುಕೂಲಕರವಾಗಿರುವ ಸಸ್ಯ ರಾಶಿಗಳನ್ನು ಇಲ್ಲಿ ಬೆಳೆಸಲಾಗಿದೆ. ಈ ವಿವಿಧ ಪ್ರಕಾರದ ಸಸ್ಯಗಳನ್ನು ಮಲೆನಾಡು ಹಾಗೂ ಇತರೆ ಗಿರಿಧಾಮಗಳಿಂದ ತರಲಾಗಿದೆ.

ಚಿತ್ರಕೃಪೆ: tpms5

ಕಾರಂಜಿ ಕೆರೆ:

ಕಾರಂಜಿ ಕೆರೆ:

ಮಕ್ಕಳ ಉದ್ಯಾನ, ಕಾಫಿ ಕೇಂದ್ರ, ಸ್ವಚ್ಛಂದವಾಗಿ ಬೆಳೆದ ಹುಲ್ಲಿನ ಹಾಸಿಗೆ ಎಲ್ಲ ಸೇರಿ ಈ ಒಂದು ಸ್ಥಳವನ್ನು ಆದರ್ಶಮಯ ಪಿಕ್ನಿಕ್ ತಾಣವನ್ನಾಗಿ ಮಾಡಿದುದರಲ್ಲಿ ಯಾವುದೆ ಸಂಶಯವಿಲ್ಲ. ಆದ್ದರಿಂದ ಸಮಯ ಸಿಕ್ಕಾಗ ಹೀಗೊಂದು ವಿಸಿಟ್ ಹಾಕಿ ಬಂದುಬಿಡಿ ಈ ಕೆರೆಗೆ.

ಚಿತ್ರಕೃಪೆ: Riju K

ಕಾರಂಜಿ ಕೆರೆ:

ಕಾರಂಜಿ ಕೆರೆ:

ಮೈಸೂರು ಮೃಗಾಲಯದ ಒಂದು ಮೂಲೆಯಿಂದ ಲಲಿತ ಮಹಲ್ ರಸ್ತೆಯಲ್ಲಿರುವ ಈ ಕೆರೆಯನ್ನು ಪ್ರವೇಶಿಸಬಹುದು. ಮೊದಲು ಮೈಸೂರು ಮೃಗಾಲಯದಿಂದ ರೇಸ್ ಕೋರ್ಸ್ ಗೆ ಸಾಗಿ ಅಲ್ಲಿಂದ ಅಲ್ಲಿಂದ ಎಡ ತಿರುವು ಪಡೆದು ಲಲಿತ ಮಹಲ್ ರಸ್ತೆಗೆ ತಲುಪಬಹುದು. ಇಲ್ಲಿಂದ ಮುಂದೆ ಸಾಗುತ್ತ ಕಾರಂಜಿ ಕೆರೆಗೆ ಪ್ರವೇಶಿಸಬಹುದು.

ಚಿತ್ರಕೃಪೆ: Jan Arendtsz

ಕಾರಂಜಿ ಕೆರೆ:

ಕಾರಂಜಿ ಕೆರೆ:

ಕಾರಂಜಿ ಕೆರೆಯ ಸೊಬಗನ್ನು ವಿವರಿಸುವ ಸುಂದರ, ಆಕರ್ಷಕ ಚಿತ್ರಗಳು. ಕಾರಂಜಿ ಕೆರೆ ತೆರೆದಿರುವ ಸಮಯ : ಮಂಗಳವಾರ ಹೊರತುಪಡಿಸಿ ಪ್ರತಿ ದಿನ ಬೆಳಿಗ್ಗೆ 8.30 ರಿಂದ ಸಂಜೆ 5.30 ಘಂಟೆಯವರೆಗೆ. ಪ್ರವೇಶ ಶುಲ್ಕ ಹತ್ತು ರೂಪಾಯಿ ಹಾಗೂ ಕ್ಯಾಮೆರಾ ಶುಲ್ಕ ಹತ್ತು ರೂ.

ಚಿತ್ರಕೃಪೆ: Jan Arendtsz

ಕಾರಂಜಿ ಕೆರೆ:

ಕಾರಂಜಿ ಕೆರೆ:

ಕಾರಂಜಿ ಕೆರೆಯ ಸೊಬಗನ್ನು ವಿವರಿಸುವ ಸುಂದರ, ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Jan Arendtsz

ಕಾರಂಜಿ ಕೆರೆ:

ಕಾರಂಜಿ ಕೆರೆ:

ಕಾರಂಜಿ ಕೆರೆಯ ಸೊಬಗನ್ನು ವಿವರಿಸುವ ಸುಂದರ, ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Nagesh Kamath

ಕಾರಂಜಿ ಕೆರೆ:

ಕಾರಂಜಿ ಕೆರೆ:

ಕಾರಂಜಿ ಕೆರೆಯ ಸೊಬಗನ್ನು ವಿವರಿಸುವ ಸುಂದರ, ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Nagesh Kamath

ಕಾರಂಜಿ ಕೆರೆ:

ಕಾರಂಜಿ ಕೆರೆ:

ಕಾರಂಜಿ ಕೆರೆಯ ಸೊಬಗನ್ನು ವಿವರಿಸುವ ಸುಂದರ, ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Nagesh Kamath

ಕಾರಂಜಿ ಕೆರೆ:

ಕಾರಂಜಿ ಕೆರೆ:

ಕಾರಂಜಿ ಕೆರೆಯ ಸೊಬಗನ್ನು ವಿವರಿಸುವ ಸುಂದರ, ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Nagesh Kamath

ಕಾರಂಜಿ ಕೆರೆ:

ಕಾರಂಜಿ ಕೆರೆ:

ಕಾರಂಜಿ ಕೆರೆಯ ಸೊಬಗನ್ನು ವಿವರಿಸುವ ಸುಂದರ, ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Nagesh Kamath

ಕಾರಂಜಿ ಕೆರೆ:

ಕಾರಂಜಿ ಕೆರೆ:

ಕಾರಂಜಿ ಕೆರೆಯ ಸೊಬಗನ್ನು ವಿವರಿಸುವ ಸುಂದರ, ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Nagesh Kamath

ಕಾರಂಜಿ ಕೆರೆ:

ಕಾರಂಜಿ ಕೆರೆ:

ಕಾರಂಜಿ ಕೆರೆಯ ಸೊಬಗನ್ನು ವಿವರಿಸುವ ಸುಂದರ, ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Nagesh Kamath

ಕಾರಂಜಿ ಕೆರೆ:

ಕಾರಂಜಿ ಕೆರೆ:

ಕಾರಂಜಿ ಕೆರೆಯ ಸೊಬಗನ್ನು ವಿವರಿಸುವ ಸುಂದರ, ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Nagesh Kamath

ಕಾರಂಜಿ ಕೆರೆ:

ಕಾರಂಜಿ ಕೆರೆ:

ಕಾರಂಜಿ ಕೆರೆಯ ಸೊಬಗನ್ನು ವಿವರಿಸುವ ಸುಂದರ, ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Nagesh Kamath

ಕಾರಂಜಿ ಕೆರೆ:

ಕಾರಂಜಿ ಕೆರೆ:

ಕಾರಂಜಿ ಕೆರೆಯ ಸೊಬಗನ್ನು ವಿವರಿಸುವ ಸುಂದರ, ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Nagesh Kamath

ಕಾರಂಜಿ ಕೆರೆ:

ಕಾರಂಜಿ ಕೆರೆ:

ಕಾರಂಜಿ ಕೆರೆಯ ಸೊಬಗನ್ನು ವಿವರಿಸುವ ಸುಂದರ, ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Nagesh Kamath

ಕಾರಂಜಿ ಕೆರೆ:

ಕಾರಂಜಿ ಕೆರೆ:

ಕಾರಂಜಿ ಕೆರೆಯ ಸೊಬಗನ್ನು ವಿವರಿಸುವ ಸುಂದರ, ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Nagesh Kamath

ಕಾರಂಜಿ ಕೆರೆ:

ಕಾರಂಜಿ ಕೆರೆ:

ಕಾರಂಜಿ ಕೆರೆಯ ಸೊಬಗನ್ನು ವಿವರಿಸುವ ಸುಂದರ, ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Jan Arendtsz

ಕಾರಂಜಿ ಕೆರೆ:

ಕಾರಂಜಿ ಕೆರೆ:

ಕಾರಂಜಿ ಕೆರೆಯ ಸೊಬಗನ್ನು ವಿವರಿಸುವ ಸುಂದರ, ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Jan Arendtsz

ಕಾರಂಜಿ ಕೆರೆ:

ಕಾರಂಜಿ ಕೆರೆ:

ಕಾರಂಜಿ ಕೆರೆಯ ಸೊಬಗನ್ನು ವಿವರಿಸುವ ಸುಂದರ, ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Nagesh Kamath

ಕಾರಂಜಿ ಕೆರೆ:

ಕಾರಂಜಿ ಕೆರೆ:

ಕಾರಂಜಿ ಕೆರೆಯ ಸೊಬಗನ್ನು ವಿವರಿಸುವ ಸುಂದರ, ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Nagesh Kamath

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X