Search
  • Follow NativePlanet
Share
» »ರೋಮಾಂಚನಗೊಳಿಸುವ ಕಾನ್ಹೇರಿ ಗುಹೆಗಳು

ರೋಮಾಂಚನಗೊಳಿಸುವ ಕಾನ್ಹೇರಿ ಗುಹೆಗಳು

By Vijay

ಮಹಾರಾಷ್ಟ್ರ ರಾಜ್ಯವು ಪ್ರವಾಸಿಗರ ಅಭಿರುಚಿಗೆ ತಕ್ಕಂತೆ ಹಲವಾರು ಬಗೆಯ ಪ್ರವಾಸಿ ಆಕರ್ಷಣೆಗಳು ನೆಲೆಸಿರುವ ಅದ್ಭುತ ರಾಜ್ಯವಾಗಿದೆ. ಕಡಲ ತೀರಗಳಿಂದ ಹಿಡಿದು ಕಾಡುಗಳವರೆಗೆ, ಗಿರಿಧಾಮಗಳಿಂದ ಹಿಡಿದು ಗುಹೆಗಳವರೆಗೆ ಬಗೆ ಬಗೆಯ ಪ್ರವಾಸಿ ಆಕರ್ಷಣೆಗಳನ್ನು ಇಲ್ಲಿ ಕಾಣಬಹುದು.

ಥಾಮಸ್ ಕುಕ್ ವತಿಯಿಂದ ಡಾಮೆಸ್ಟಿಕ್ ಪ್ಯಾಕೇಜ್ ಮೇಲೆ ರೂ. 1000 ಕಡಿತ

ನಿರ್ದಿಷ್ಟವಾಗಿ ಹೇಳಬೇಕೆಂದರೆ ಮಹಾರಾಷ್ಟ್ರವು ಕೆಲವು ಪ್ರಮುಖ ಗುಹಾ ರಚನೆಗಳಿಗೆ ಪ್ರಖ್ಯಾತವಾಗಿದೆ. ಅದರಲ್ಲೂ ವಿಶೇಷವಾಗಿ ಈ ಗುಹೆಗಳು ತನ್ನಲ್ಲಿರುವ ಕೆತ್ತಲ್ಪಟ್ಟ ರಚನೆಗಳಿಗಾಗಿರಬಹುದು ಅಥವಾ ವರ್ಣಚಿತ್ರಗಳಿಗಿರಬಹುದು ಹೆಸರುವಾಸಿಯಾಗಿವೆ. ಇವು ಪ್ರಾಚೀನ ಸಮಯದಲ್ಲಿದ್ದ ಕಲಾತ್ಮಕತೆಗೆ ಹಿಡಿದ ಕೈಗನ್ನಡಿಯಾಗಿದೆ.

ವಿಶೇಷ ಲೇಖನ : ಕಲ್ಲಿನಲ್ಲರಳಿದ ಕಲೆಗಳು

ಇಂತಹ ಆಸಕ್ತಿಕರ ಗುಹಾ ರಚನೆಗಳ ಪೈಕಿ ಪ್ರಸ್ತುತ ಲೇಖನದಲ್ಲಿ ಕಾನ್ಹೇರಿ ಗುಹೆಗಳ ಕುರಿತು ತಿಳಿಸಲಾಗಿದೆ. ಈ ಸುಂದರ, ಅದ್ಭುತ ಗುಹಾ ರಚನೆಗಳು ಮಹಾರಾಷ್ಟ್ರದ ರಾಜಧಾನಿ ನಗರವಾದ ಮುಂಬೈನ ಹೊರವಲಯದಲ್ಲೆ ನೆಲೆಸಿರುವುದು ವಿಶೇಷ. ಹಾಗಾಗಿ ಮುಂಬೈ ನಗರವಾಸಿಗಳಿಗೆ ಇದೊಂದು ವಾರಾಂತ್ಯದ ಆದರ್ಶಮಯವ ಪ್ರವಾಸಿ ತಾಣವಾಗುವುದರಲ್ಲಿ ಯಾವುದೆ ಸಂಶಯವಿಲ್ಲ.

ಆಸಕ್ತಿ ಮೂಡಿಸುವ ಲೇಖನಗಳು : ಪ್ರಮುಖ ಗುಹಾ ದೇವಾಲಯಗಳು ಬೇಲಂ ಗುಹೆಗಳು

ಕಾನ್ಹೇರಿ ಗುಹೆಗಳು:

ಕಾನ್ಹೇರಿ ಗುಹೆಗಳು:

ಕಾನ್ಹೇರಿ ಗುಹೆಗಳು, ಉತ್ತರ ಮುಂಬೈನ ಹೊರವಲಯದ ಬೋರಿವಿಲಿ ಎಂಬ ಪ್ರದೇಶದ ಬಳಿ ನೆಲೆಸಿವೆ ಹಾಗೂ ಸುಲಭವಾಗಿ ಈ ತಾಣಕ್ಕೆ ಭೇಟಿ ನೀಡಬಹುದಾಗಿದೆ.

ಚಿತ್ರಕೃಪೆ: Ting Chen

ಕಾನ್ಹೇರಿ ಗುಹೆಗಳು:

ಕಾನ್ಹೇರಿ ಗುಹೆಗಳು:

ಭಾರತೀಯ ಶೈಲಿಯ ಬಂಡೆ ಕೆತ್ತನೆ ಕಲೆಗೆ ಉತ್ತಮ ಉದಾಹರಣೆಯಾಗಿರುವ ಈ ಗುಹೆಗಳು ಸಂಜಯ ಗಾಂಧಿ ರಾಷ್ಟ್ರೀಯ ಉದ್ಯಾನವನದ ಭಾಗವಾಗಿದ್ದು ಅದರ ಮುಖ್ಯ ದ್ವಾರದಿಂದ ಆರು ಕಿ.ಮೀ ಗಳಷ್ಟು ಒಳಾಂಗಣದಲ್ಲಿ ನೆಲೆಸಿವೆ ಹಾಗೂ ಬೋರಿವಿಲಿ ರೈಲು ನಿಲ್ದಾಣದಿಂದ ಇದು ಏಳು ಕಿ.ಮೀ ದೂರವಿದೆ.

ಚಿತ್ರಕೃಪೆ: Varun Patil

ಕಾನ್ಹೇರಿ ಗುಹೆಗಳು:

ಕಾನ್ಹೇರಿ ಗುಹೆಗಳು:

ಪ್ರವಾಸಿಗರು ಈ ಗುಹಾ ತಾಣಕ್ಕೆ ಬೆಳಿಗ್ಗೆ 7:30 ಗಂಟೆಯ ನಂತರ ಪ್ರವೇಶಿಸಬಹುದು. ದೊಡ್ಡದಾದ ಬಸಾಲ್ಟ್ ಕಲ್ಲಿನ ಬಂಡೆಯಲ್ಲಿ ಕೆತ್ತಲಾದ ಈ ಗುಹಾ ರಚನೆಗಳು ಪುರಾತನ ಭಾರತೀಯ ಕಲೆಯ ಮೇಲೆ ಯಾವ ರೀತಿ ಬೌದ್ಧ ಧರ್ಮದ ಪ್ರಭಾವ ಉಂಟಾಯಿತು ಎಂಬುದನ್ನು ಉದಾತ್ತವಾಗಿ ತಿಳಿಸುತ್ತದೆ.

ಚಿತ್ರಕೃಪೆ: Ting Chen

ಕಾನ್ಹೇರಿ ಗುಹೆಗಳು:

ಕಾನ್ಹೇರಿ ಗುಹೆಗಳು:

ಸ್ಥಳ ಪುರಾಣದ ಪ್ರಕಾರ, ಕಾನ್ಹೇರಿ ಎಂಬ ಹೆಸರು ಮೂಲತಃ ಕೃಷ್ಣಗಿರಿ ಎಂಬ ಸಂಸ್ಕೃತ ಪದದಿಂದ ವ್ಯುತ್ಪತ್ತಿಯಾಗಿದೆ ಎಂದು ಹೇಳಲಾಗುತ್ತದೆ. ಕೃಷ್ಣಗಿರಿ ಎಂದರೆ ಕಪ್ಪು ಬೆಟ್ಟ ಎಂದಾಗುತ್ತದೆ. ಈ ಗುಹಾ ರಚನೆಗಳ ಕಾಲಮಾನವು 10 ನೆಯ ಶತಮಾನಕ್ಕೆ ಕರೆದೊಯ್ಯುತ್ತವೆ.

ಚಿತ್ರಕೃಪೆ: Ting Chen

ಕಾನ್ಹೇರಿ ಗುಹೆಗಳು:

ಕಾನ್ಹೇರಿ ಗುಹೆಗಳು:

ಇಲ್ಲಿಯವರೆಗೆ ಸುಮಾರು 109 ಗುಹಾ ರಚನೆಗಳನ್ನು ಉತ್ಖನನ ಮಾಡಿ ಹೊರ ತೆಗೆಯಲಾಗಿದೆ. ಪ್ರತಿಯೊಂದು ಗುಹೆಗಳಲ್ಲಿ ಬೌದ್ಧ ಸ್ತೂಪ ಹಾಗೂ ಕಂಬಗಳ ಆಧಾರವಿರುವುದನ್ನು ಗಮನಿಸಬಹುದು. ಅಲ್ಲದೆ ಬುದ್ಧನ ವಿಗ್ರಹಗಳನ್ನು ಸಹ ಇಲ್ಲಿ ಕಾಣಬಹುದು.

ಚಿತ್ರಕೃಪೆ: Milind13

ಕಾನ್ಹೇರಿ ಗುಹೆಗಳು:

ಕಾನ್ಹೇರಿ ಗುಹೆಗಳು:

ಇಲ್ಲಿರುವ ಗುಹೆಗಳಲ್ಲಿ ಬಹುತೇಕ ಗುಹೆಗಳನ್ನು ಬೌದ್ಧ ವಿಹಾರಗಳನ್ನಾಗಿ ಬಳಸಲಾಗುತ್ತಿತ್ತು. ಅಂದರೆ ವಾಸಿಸುವುದರ ಜೊತೆಗೆ ಧ್ಯಾನ ಮಾಡುವುದು ಹಾಗೂ ಅಧ್ಯಯನಗೋಸ್ಕರ ಇವು ಬಳಸಲ್ಪಡುತ್ತಿದ್ದವು. ಪ್ರಾರ್ಥನಾ ಮಂದಿರ.

ಚಿತ್ರಕೃಪೆ: Marco Zanferrari

ಕಾನ್ಹೇರಿ ಗುಹೆಗಳು:

ಕಾನ್ಹೇರಿ ಗುಹೆಗಳು:

ಬಹು ಸಂಖ್ಯೆಯಲ್ಲಿರುವ ವಿಹಾರಗಳು ಅಂದಿನ ಸಮಯದಲ್ಲಿ ಬೌದ್ಧ ಸನ್ಯಾಸಿಗಳು ಹೇಗೆ ವ್ಯವಸ್ಥಿತ ರೀತಿಯಲ್ಲಿ ವಾಸಿಸುತ್ತಿದ್ದರು ಎಂಬುದನ್ನು ಮನೋಜ್ಞವಾಗಿ ತಿಳಿಸುತ್ತವೆ.

ಚಿತ್ರಕೃಪೆ: Ting Chen

ಕಾನ್ಹೇರಿ ಗುಹೆಗಳು:

ಕಾನ್ಹೇರಿ ಗುಹೆಗಳು:

ಮೌರ್ಯರು ಹಾಗೂ ಕುಶಾನರು ಆಳುತ್ತಿದ್ದ ಸಮಯದಲ್ಲಿ ಕಾನ್ಹೇರಿ ಒಂದು ವಿಶ್ವವಿದ್ಯಾಲಯ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿತ್ತು ಎಂಬುದು ಇತಿಹಾಸದಿಂದ ತಿಳಿದು ಬರುತ್ತದೆ.

ಚಿತ್ರಕೃಪೆ: Jeff Warren

ಕಾನ್ಹೇರಿ ಗುಹೆಗಳು:

ಕಾನ್ಹೇರಿ ಗುಹೆಗಳು:

ಅಷ್ಟೆ ಅಲ್ಲದೆ ಈ ಕೇಂದ್ರವು ಇತರೆ ಪ್ರಮುಖ ವ್ಯಾಪಾರಿ ಕೇಂದ್ರಗಳಾದ ಸೋಪಾರಾ, ಕಲ್ಯಾಣ, ನಾಶಿಕ್ ಹಾಗೂ ಉಜ್ಜಯಿನಿಗಳೊಂದಿಗೆ ಸಂಬಂಧವನ್ನೂ ಸಹ ಹೊಂದಿತ್ತು ಎಂದು ತಿಳಿದು ಬರುತ್ತದೆ.

ಚಿತ್ರಕೃಪೆ: Elroy Serrao

ಕಾನ್ಹೇರಿ ಗುಹೆಗಳು:

ಕಾನ್ಹೇರಿ ಗುಹೆಗಳು:

ಬ್ರಾಹ್ಮಿ, ದೇವನಾಗರಿ ಹಾಗೂ ಪಹಲ್ವಿ ಬಾಷೆಗಳಲಿ ರಚಿಸಲಾದ 51 ಕೆತ್ತಲ್ಪಟ್ಟ ಬರಹಗಳು, 26 ಶಿಲಾ ಶಾಸನಗಳು ಈ ಗುಹಾ ರಚನೆಗಳಲ್ಲಿ ಇಲ್ಲಿಯವರೆಗೂ ದೊರಕಿವೆ.

ಚಿತ್ರಕೃಪೆ: I for Detail

ಕಾನ್ಹೇರಿ ಗುಹೆಗಳು:

ಕಾನ್ಹೇರಿ ಗುಹೆಗಳು:

ಸುತ್ತಲೂ ಸಂಜಯ ಗಾಂಧಿ ಅಭಯಾರಣ್ಯದ ದಟ್ಟ ವನಸಿರಿಯಲ್ಲಿ ನೆಲೆಸಿರುವ ಈ ಸುಂದರ ಗುಹಾ ತಾಣವು ಶಾಂತ ಪರಿಸರದಲ್ಲಿದ್ದು ಭೇಟಿ ನೀಡುವವರಿಗೆ ಒಂದು ವಿಶಿಷ್ಟ ಅನುಭೂತಿಯನ್ನು ಕರುಣಿಸುತ್ತದೆ.

ಚಿತ್ರಕೃಪೆ: Steph C

ಕಾನ್ಹೇರಿ ಗುಹೆಗಳು:

ಕಾನ್ಹೇರಿ ಗುಹೆಗಳು:

ಅದರಲ್ಲೂ ವಿಶೇಷವಾಗಿ ಮಳೆಗಾಲದ ಸಮಯವು ಇಲ್ಲಿಗೆ ಭೇಟಿ ನೀಡಲು ಬಲು ಆದರ್ಶಮಯವಾಗಿದೆ. ಬೆಟ್ಟ ಗುಡ್ಡ ಪ್ರದೇಶಗಳಲ್ಲಿ ನೆಲೆಸಿರುವ ಈ ರಚನೆಗಳಿಗೆ ಮಳೆಗಾಲದಲ್ಲುಂಟಾಗುವ ತಾತ್ಕಾಲಿಕ ಜಲಪಾತಗಳ ಸವಿಯನ್ನು ಸವಿಯುತ್ತ ಭೇಟಿ ನೀಡುವುದೆ ಒಂದು ಸಂತಸ.

ಚಿತ್ರಕೃಪೆ: Chaitu

ಕಾನ್ಹೇರಿ ಗುಹೆಗಳು:

ಕಾನ್ಹೇರಿ ಗುಹೆಗಳು:

ಇಲ್ಲಿಗೆ ತಲುಪಲು ಬೋರಿವಿಲಿಯಿಂದ ಪ್ರತಿ ಗಂಟೆಗೊಮ್ಮೆ ಬಸ್ಸುಗಳ ವ್ಯವಸ್ಥೆಯಿದೆ. ಪ್ರವಾಸಿಗರು ರಾಷ್ಟ್ರೀಯ ಉದ್ಯಾನದ ಮುಖ್ಯ ದ್ವಾರ ಹಾಗೂ ಗುಹಾ ರಚನೆಗಳ ಪ್ರವೇಶ ಸ್ಥಳಗಳಲ್ಲಿ ಶುಲ್ಕ ಪಾವತಿಸಿ ಒಳ ಪ್ರವೇಶಿಸಬೇಕಾಗುತ್ತದೆ.

ಚಿತ್ರಕೃಪೆ: Sobarwiki

ಕಾನ್ಹೇರಿ ಗುಹೆಗಳು:

ಕಾನ್ಹೇರಿ ಗುಹೆಗಳು:

ಕಾನ್ಹೇರಿ ಗುಹೆ ಪ್ರವೇಶಿಸುವ ಮೊದಲು ಪ್ರವಾಸಿಗರನ್ನು ಸ್ವಾಗತಿಸುವ ಪುಟ್ಟ ಸೇತುವೆ. ಮಳೆಗಾಲದ ಸಂದರ್ಭದಲ್ಲಿ ಇದರ ಕೆಳಗೆ ಪುಟ್ಟ ನೀರಿನ ತೊರೆ ಹರಿಯುತ್ತಿರುವುದನ್ನು ನೋಡಿದಾಗ ಮನವು ಸಂತಸಗೊಳ್ಳದೆ ಇರಲಾರದು.

ಚಿತ್ರಕೃಪೆ: Magiceye

ಕಾನ್ಹೇರಿ ಗುಹೆಗಳು:

ಕಾನ್ಹೇರಿ ಗುಹೆಗಳು:

ಕಾನ್ಹೇರಿ ಗುಹೆಯ ಕೆಲ ಸುಂದರ ಚಿತ್ರಗಳು. ಗುಹೆಯ ಒಳಾಂಗಣ. ಎಷ್ಟು ವ್ಯವಸ್ಥಿತವಾಗಿ ಇವುಗಳನ್ನು ಆ ಸಮಯದಲ್ಲೆ ರಚಿಸಲಾಗಿತ್ತೆಂದು ತಿಳಿಯಬಹುದು.

ಚಿತ್ರಕೃಪೆ: Indrajit Chakraborty

ಕಾನ್ಹೇರಿ ಗುಹೆಗಳು:

ಕಾನ್ಹೇರಿ ಗುಹೆಗಳು:

ಕಾನ್ಹೇರಿ ಗುಹೆಯ ಕೆಲ ಸುಂದರ ಚಿತ್ರಗಳು. ಸುಂದರವಾಗಿ ಕೆತ್ತಲ್ಪಟ್ಟ ವಿಗ್ರಹಗಳು.

ಚಿತ್ರಕೃಪೆ: Vaibhav Gupta

ಕಾನ್ಹೇರಿ ಗುಹೆಗಳು:

ಕಾನ್ಹೇರಿ ಗುಹೆಗಳು:

ಕಾನ್ಹೇರಿ ಗುಹೆಯ ಕೆಲ ಸುಂದರ ಚಿತ್ರಗಳು. ಮುಖ್ಯ ಗುಹೆಯ ಒಳ ಭಾಗದಲ್ಲಿರುವ ಬುದ್ಧನ ದೊಡ್ಡ ಪ್ರತಿಮೆ.

ಚಿತ್ರಕೃಪೆ: Belasd

ಕಾನ್ಹೇರಿ ಗುಹೆಗಳು:

ಕಾನ್ಹೇರಿ ಗುಹೆಗಳು:

ಕಾನ್ಹೇರಿ ಗುಹೆಯ ಕೆಲ ಸುಂದರ ಚಿತ್ರಗಳು.

ಚಿತ್ರಕೃಪೆ: Milind13

ಕಾನ್ಹೇರಿ ಗುಹೆಗಳು:

ಕಾನ್ಹೇರಿ ಗುಹೆಗಳು:

ಕಾನ್ಹೇರಿ ಗುಹೆಯ ಕೆಲ ಸುಂದರ ಚಿತ್ರಗಳು. ಗುಹೆಯ ಸುತ್ತಮುತ್ತಲಿರುವ ಹಸಿರಿನಿಂದ ಕೂಡಿದ ಸುಂದರ ಪರಿಸರ.

ಚಿತ್ರಕೃಪೆ: Magiceye

ಕಾನ್ಹೇರಿ ಗುಹೆಗಳು:

ಕಾನ್ಹೇರಿ ಗುಹೆಗಳು:

ಕಾನ್ಹೇರಿ ಗುಹೆಯ ಕೆಲ ಸುಂದರ ಚಿತ್ರಗಳು. ಕಾನ್ಹೇರಿ ಬೆಟ್ಟದ ಮೇಲಿಂದ ಸೊಗಸಾಗಿ ಕಂಡುಬರುವ ಮುಂಬೈ ಮಹಾ ನಗರದ ನೋಟ.

ಚಿತ್ರಕೃಪೆ: bengarrison

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X