Search
  • Follow NativePlanet
Share
» »ಮಹಾರಾಷ್ಟ್ರದ ಮೌಂಟ್ ಎವರೆಸ್ಟ್

ಮಹಾರಾಷ್ಟ್ರದ ಮೌಂಟ್ ಎವರೆಸ್ಟ್

By Vijay

ಹೌದು, ನೀವು ಕೇಳಿದ್ದು ಸರಿ. ಈ ಶಿಖರವನ್ನು ಮಹಾರಾಷ್ಟ್ರ ರಾಜ್ಯದ "ಮೌಂಟ್ ಎವರೆಸ್ಟ್" ಎಂದೆ ಪ್ರೀತಿಯಿಂದ ಸಂಭೋದಿಸಲಾಗುತ್ತದೆ. ಭೂಮಟ್ಟದಿಂದ ಈ ಅದ್ಭುತ ಪರ್ವತ ಶಿಖರ ಎತ್ತರ 5400 ಅಡಿಗಳು. ಮಹಾರಾಷ್ಟ್ರದ ಅತಿ ಎತ್ತರದ ಶಿಖರ ಎಂಬ ಖ್ಯಾತಿಗೆ ಪಾತ್ರವಾಗಿದೆ.

ನಿಮಗಿಷ್ಟವಾಗಬಹುದಾದ : ಧಡ್ ಧಡ್ ಎಂದು ಹೃದಯ ಬಡಿಯುವಂತೆ ಮಾಡುವ ಲೋಹಗಡ್

ಮಹಾರಾಷ್ಟ್ರದ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿರುವ ಈ ಅದ್ಭುತ ಪರ್ವತವನ್ನು ಇದರ ಪೂರ್ವದ ಬುಡಲ್ಲಿರುವ ಬಾರಿ ಎಂಬ ಹಳ್ಳಿಯಿಂದ ಸಂಪೂರ್ಣವಾಗಿ ನೋಡಬಹುದು. ಅಲ್ಲದೆ ಬಾರಿ ಹಳ್ಳಿಯು ಅಹ್ಮದ್ ನಗರ ಜಿಲ್ಲೆಯ ಪ್ರವಾಸಿ ಗ್ರಾಮ ಭಂಡಾರಧಾರಾದಿಂದ ಕೇವಲ ಆರು ಕಿ.ಮೀ ದೂರದಲ್ಲಿದೆ.

ಮಹಾರಾಷ್ಟ್ರದ ಮೌಂಟ್ ಎವರೆಸ್ಟ್

ಚಿತ್ರಕೃಪೆ: Ankur P

ಅಲ್ಲದೆ ಮುಂಬೈ-ನಾಶಿಕ್ ಮಾರ್ಗದಲ್ಲಿ ಬರುವ ಇಗತ್ಪುರಿಯಿಂದಲೂ ಸಹ ಭಂಡಾರಧಾರಾ ತಲುಪಿ ಅಲ್ಲಿಂದ ಬಾರಿ ಹಳ್ಳಿಗಳಿಗೆ ನಿಮ್ಮ ವಾಹನದಲ್ಲೊ ಅಥವಾ ಬಾಡಿಗೆ ವಾಹನಗಳಲ್ಲೊ ತೆರಳಿ ಪಶ್ಚಿಮಘಟ್ಟಗಳ ಈ ರೋಮಾಂಚಕ ಶಿಖರಕ್ಕೆ ಚಾರಣವನ್ನು ಕೈಗೊಳ್ಳಬಹುದಾಗಿದೆ.

ನಿಮಗೆ ರೈಲಿನಲ್ಲಿ ಪ್ರಯಾಣಿಸುವ ಇಷ್ಟವಿದ್ದಲ್ಲಿ ಮುಂಬೈನಿಂದ ಕಸರಾದ ಮೂಲಕ ರೈಲು ಮಾರ್ಗವಿದ್ದು ಕಸರಾದಿಂದ ಕಳಸುಬಾಯಿ ಶಿಖರಕ್ಕೆ ಚಾರಣ ಕೈಗೊಳ್ಳಬಹುದಾದ ಹಳ್ಳಿಗಳಿಗೆ ಸಂಚಾರಿ ಸೌಲಭ್ಯವಿದೆ. ಕಸರಾದಿಂದ ಖಾಸಗಿಯಾಗಿಯೂ ವಾಹನಗಳು ಲಭ್ಯವಿದ್ದು ಬಾಡಿಗೆಗೆ ತೆಗೆದುಕೊಂಡು ತೆರಳಬಹುದು.

ಮಹಾರಾಷ್ಟ್ರದ ಮೌಂಟ್ ಎವರೆಸ್ಟ್

ಚಿತ್ರಕೃಪೆ: Fitrangi

ಕಳಸುಬಾಯಿ ಶಿಖರ ಚಾರಣವು ಮೊದ ಮೊದಲು ಸರಳದಿಂದ ಕಷ್ಟಕರವಾಗಿದ್ದು ಕಳಸುಬಾಯಿಯ ದರ್ಶನ ಮಾಡಬೆಕೆಂಬ ಹೆಬ್ಬಯಕೆಯಿರುವ ಹಾಗೂ ತಲುಪಲೇಬೇಕೆಂಬ ಇಚ್ಛೆಯುಳ್ಳ ಚಾರಣಿಗರು ಇದನ್ನು ಏರುತ್ತಾರೆ. ಪೂರ್ವದಲ್ಲಿರುವ ಬಾರಿ ಹಳ್ಳಿಯಿಂದ ಈ ಚಾರಣವನ್ನು ಸಾಮಾನ್ಯವಾಗಿ ಮಾಡಲಾಗುತ್ತದೆ.

ಒಂದೊಮ್ಮೆ ಏರಲು ಪ್ರಾರಂಭಿಸಿದಾಗ ಮುಂದೆ ಸಾಗುತ್ತ ಪ್ರವರ ನದಿಯ ಉಪನದಿಯಾದ ವಾಕಿ ನದಿಯ ಉಗಮ ಸ್ಥಾನವಿದೆ. ಅದರ ಸನಿಹದಲ್ಲೆ ಆಂಜನೇಯನ ಚಿಕ್ಕ ದೇಗುಲವೊಂದಿದ್ದು ಚಾರಣ ಪ್ರಾರಂಭದ ಮುಖ್ಯ ಗುರುತಾಗಿ ಇದನ್ನು ಪರಿಗಣಿಸಲಾಗುತ್ತದೆ. ಈ ದೇವಾಲಯದ ಹಿಂಭಾಗದಿಂದ ಎತ್ತರದ ಶಿಖರಕ್ಕೆ ನೇರ ಚಾರಣ ಪ್ರಾರಂಭವಾಗುತ್ತದೆ.

ಮಹಾರಾಷ್ಟ್ರದ ಮೌಂಟ್ ಎವರೆಸ್ಟ್

ಚಿತ್ರಕೃಪೆ: Elroy Serrao

ಅಲ್ಲಲ್ಲಿ ಮೊನಚಾದ ಏರುಗಳಿರುವುದರಿಂದ ಹಿಂದೆ ಸಾಕಷ್ಟು ಜರಿದ ಉದಾಹರಣೆಗಳಿವೆ. ಆದ್ದರಿಂದ ಕೆಲ ಏರುವ ಸ್ಥಳಗಳಲ್ಲಿ ಕಬ್ಬಿಣದ ಏಣಿಗಳನ್ನು ಆಧಾರವಾಗಿ ಹಿಡಿದುಕೊಂಡು ಸುರಕ್ಷಿತವಾಗಿ ಏರುವಂತೆ ಮಾಡಲಾಗಿದೆ. ಮೆಟ್ಟಿಲುಗಳನ್ನು ಕೆಲವೆಡೆ ನಿರ್ಮಿಸಲಾಗಿದೆ.

ನಿಮಗಿಷ್ಟವಾಗಬಹುದಾದ : ಮಹಾಬಳೇಶ್ವರ ಒಂದು ರುದ್ರಮಯ ಗಿರಿಧಾಮ

ಒಂದೊಮ್ಮೆ ಶಿಖರ ತಲುಪಿದ ಮೇಲೆ ಚಿಕ್ಕದಾದ ಬಯಲು ಪ್ರದೇಶ ಕಂಡುಬರುತ್ತದೆ. ಇಲ್ಲಿ ಸ್ಥಳೀಯ ದೇವಿಯಾದ ಕಳಸುಬಾಯಿಗೆ ಮುಡಿಪಾದ ಚಿಕ್ಕ ದೇವಾಲಯವಿದೆ. ದಮ್ತಕಥೆಯ ಪ್ರಕಾರ, ಕಳಸುಬಾಯಿ ಮನೆಗೆಲಸದವಳಾಗಿದ್ದರೂ ಪರಮ ದೈವಿ ಭಕ್ತೆಯಾಗಿದ್ದಳು. ಮನೆಯೊಡತಿಯ ಕಾಟ ತಾಳಲಾರದೆ ಈ ಬೆಟ್ಟದಲ್ಲಿ ಮಾಯವಾದಳು.

ಮಹಾರಾಷ್ಟ್ರದ ಮೌಂಟ್ ಎವರೆಸ್ಟ್

ಕಳಸುಬಾಯಿ ದೇವಾಲಯ, ಚಿತ್ರಕೃಪೆ: Elroy Serrao

ಹೀಗಾಗಿ ಇದಕ್ಕೆ ಕಳಸುಬಾಯಿ ಶಿಖರ ಎಂತಲೂ ಹಾಗೂ ಆಕೆಯ ಗೌರವಾರ್ಥವಾಗಿ ದೇವಾಲಾವನ್ನೂ ನಿರ್ಮಿಸಲಾಗಿದೆ. ಪ್ರತಿ ಮಂಗಳವಾರ ಹಾಗೂ ಗುರುವಾರಗಳಂದು ಅರಚಕರೊಬ್ಬರಿಂದ ಇಲ್ಲಿ ಪ್ರಾರ್ಥನೆ ನಡೆಯುತ್ತದೆ. ಅಲ್ಲದೆ ನವರಾತ್ರಿ ಸಂದರ್ಭದಲ್ಲಿ ಕೆಳಗಿರುವ ಹಳ್ಳಿಗಳಿಂದ ಸಾಕಷ್ಟು ಜನರು ಈ ಶಿಖರ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X