Search
  • Follow NativePlanet
Share
» »ಜಿಮ್ ಕಾರ್ಬೆಟ್ ಎಂಬ ಸೆಳೆಯುವ "ಮ್ಯಾಗ್ನೆಟ್"

ಜಿಮ್ ಕಾರ್ಬೆಟ್ ಎಂಬ ಸೆಳೆಯುವ "ಮ್ಯಾಗ್ನೆಟ್"

By Vijay

ಒಂದಾನೊಂದು ಕಾಲದಲ್ಲಿ ವನ್ಯಜೀವಿ ಪ್ರೀಯರಿಗೆ, ಪ್ರವಾಸಿಗರಿಗೆ ಹೆಸರು ಕೇಳಿದಾಕ್ಷಣ ಗುಂಡಿಗೆಯ ಏರಿಳಿತವನ್ನು ಹೆಚ್ಚಿಸುತ್ತಿದ್ದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವು ಇಂದು ದೇಶದ ಗುರುತರವಾದ ಪ್ರವಾಸಿ ಆಕರ್ಷಣೆಯಾಗಿರುವುದೂ ಅಲ್ಲದೆ ಜೈವಿಕ ಪ್ರವಾಸೋದ್ಯಮಕ್ಕೂ ಉತ್ತಮ ಉದಾಹರಣೆಯಾಗಿದೆ.

ಈ ರಾಷ್ಟ್ರೀಯ ಉದ್ಯಾನದ ವಿಶೇಷತೆ ಎಂದರೆ ಇದು ದೇಶದ ಅತಿ ಹಳೆಯ ರಾಷ್ಟ್ರೀಯ ಉದ್ಯಾನ. ಅಲ್ಲದೆ ಹುಲಿ ಮೀಸಲು ಪ್ರದೇಶದ ವ್ಯಾಪ್ತಿಗೆ ಒಳಪಟ್ಟ ಮೊದಲ ಕಾಡು. ಪ್ರಸಿದ್ಧ ಬ್ರಿಟೀಷ್ ಬೇಟೆಗಾರ ನಂತರ ಪರಿಸರತಜ್ಞನಾದ ಜಿಮ್ ಕಾರ್ಬೆಟ್ ಅವರ ಗೌರವಾರ್ಥವಾಗಿ ಈ ಉದ್ಯಾನಕ್ಕೆ ಜಿಮ್ ಕಾರ್ಬೆಟ್ ಎಂಬ ಹೆಸರು ಬಂದಿದೆ. ಏಕೆಂದರೆ ಇವರು ಈ ಉದ್ಯಾನದ ಸ್ಥಾಪನೆಯಲ್ಲಿ ಬಹು ಮುಖ್ಯ ಪಾತ್ರವಹಿಸಿದ್ದರು.

ವಿಶೇಷ ಲೇಖನ : ಕೇರಳದ ಅದ್ಭುತ ಕಾಡುಗಳು

ಇಂದಿಗೂ ಪ್ರತಿ ಋತುಮಾನಗಳಲ್ಲಿ 70,000 ಕ್ಕೂ ಅಧಿಕ ಪ್ರವಾಸಿಗರನ್ನು ಸೆಳೆಯುವ ಈ ಅದ್ಭುತ ರಾಷ್ಟ್ರೀಯ ಉದ್ಯಾನವು ಉತ್ತರಾಖಂಡ ರಾಜ್ಯದ, ನೈನಿತಾಲ್ ಜಿಲ್ಲೆಯ ರಾಮನಗರ್ ಎಂಬಲ್ಲಿ ಸುಮಾರು 520 ಚ.ಕಿ.ಮೀ ಗಳಷ್ಟು ವಿಶಾಲವಾದ ಸ್ಥಳದಲ್ಲಿ ಸೊಂಪಾಗಿ ವ್ಯಾಪಿಸಿದೆ. ಕಾಡಿನ ಪ್ರಾಣಿಗಳ ಚಟುವಟಿಕೆ, ಮನೋಹರವಾದ ಪ್ರಕೃತಿ ಸೌಂದರ್ಯಕ್ಕೆ ಹೆಚ್ಚು ಹೆಸರುವಾಸಿಯಾಗಿದೆ ಈ ಸುಂದರ ರಾಷ್ಟ್ರೀಯ ಉದ್ಯಾನ.

ಪ್ರಸ್ತುತ ಲೇಖನದ ಮೂಲಕ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದ ಕುರಿತು ಹಲವು ವಿಶೇಷ ಮಾಹಿತಿಗಳನ್ನು ತಿಳಿಯಿರಿ ಹಾಗೂ ಯಾವಾಗಲಾದರೂ ಒಮ್ಮೆ ಅವಕಾಶ ಸಿಕ್ಕಾಗ ಭೇಟಿ ನೀಡಲು ಖಂಡಿತ ಮರೆಯಬೇಡಿ.

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ:

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ:

ಈ ರಾಷ್ಟ್ರೀಯ ಉದ್ಯಾನವು ಉಪ ಹಿಮಾಲಯದ ಭಾಗದಲ್ಲಿ ನೆಲೆಸಿರುವುದರಿಂದ ವಿಶಿಷ್ಟವಾದ ಪರಿಸರ ಹಾಗೂ ವಾತಾವರಣವನ್ನು ಹೊಂದಿದೆ. 488 ಬಗೆಯ ಸಸ್ಯಗಳು ಹಾಗೂ ವೈವಿಧ್ಯಮಯ ವನಸ್ಪತಿ ಸಮ್ಪತ್ತನ್ನು ಹೊಂದಿರುವ ಈ ಉದ್ಯಾನ ಜೈವಿಕ ಪ್ರವಾಸೋದ್ಯಮಕ್ಕೆ ಉತ್ತಮ ಉದಾಹರಣೆಯಾಗಿದೆ.

ಚಿತ್ರಕೃಪೆ: Vikram Gupchup

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ:

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ:

ಪ್ರಕೃತಿ ಶ್ರೀಮಂತಿಕೆಯಿಂದ ಸಾಕಷ್ಟು ಸಂಪದ್ಭರಿತವಾಗಿರುವ ಈ ಉದ್ಯಾನವನ್ನು ಹೆಚ್ಚುತ್ತಿರುವ ಪ್ರವಾಸಿ ಚಟುವಟಿಕೆಗಳಿಂದ ರಕ್ಷಿಸುವ ಸವಾಲು ಉತ್ತರಾಖಂಡದ ಸರ್ಕಾರದ ಮುಂದಿದ್ದು ಅದಕ್ಕನುಸಾರವಾಗಿ ಇಂದು ಕೇವಲ ಆಯ್ದ ಕೆಲ ಪ್ರದೇಶಗಳಲ್ಲಿ ಮಾತ್ರವೆ ಪ್ರವಾಸಿಗರಿಗೆ ಪ್ರವೇಶಿಸಲು ಅವಕಾಶ ಮಾಡಿಕೊಡಲಾಗಿದೆ.

ಚಿತ್ರಕೃಪೆ: netlancer2006

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ:

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ:

ಈ ವಿಶಾಲವಾದ ಉದ್ಯಾನದಲ್ಲಿ ಬೆಟ್ಟ ಗುಡ್ಡಗಳು, ಸಮತಟ್ಟಾದ ಹುಲ್ಲುಗಾವಲಿನ ಭೂಮಿ, ದಟ್ಟವಾದ ಗಿಡ ಮರಗಳು, ಹಲವು ನೀರಿನ ಕೆರೆ-ತೊರೆಗಳನ್ನು ಕಾಣಬಹುದಾಗಿದ್ದು ಭೇಟಿ ನೀಡುವವರಿಗೆ ಒಂದು ಅಲೌಕಿಕ ಆನಂದವನ್ನುಂಟು ಮಾಡುತ್ತದೆ.

ಚಿತ್ರಕೃಪೆ: Ekabhishek

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ:

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ:

ತೇವಾಂಶಭರಿತ ಕಾಡುಗಳನ್ನು ಇದು ಹೊಂದಿದ್ದು ಇಲ್ಲಿ ತೇಗ, ಸಾಲ, ಪೀಪಲ್, ಹಲ್ಡು, ರೋಹಿಣಿ, ಮಾವು ಮುಂತಾದ ಮರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕಾಣಬಹುದಾಗಿದೆ. ಉದ್ಯಾನದ 73% ರಷ್ಟು ಭಾಗವನ್ನು ದಟ್ಟ ಗಿಡ ಮರಗಳಿಂದ ಕೂಡಿದ ಕಾಡುಗಳೆ ಆವರಿಸಿವೆ.

ಚಿತ್ರಕೃಪೆ: Aiwok

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ:

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ:

ಈ ಉದ್ಯಾನದಲ್ಲಿ ಇಲ್ಲಿವರೆಗೂ ದಾಖಲಾದಂತೆ 110 ಬಗೆಯ ಗಿಡಮರಗಳು, 50 ಬಗೆಯ ಸಸ್ತನಿಗಳು, 580 ಬಗೆಯ ಪಕ್ಷಿಗಳು ಹಾಗೂ 25 ಬಗೆಯ ಸರಿಸೃಪಗಳು ಕಂಡುಬರುತ್ತವೆ. ಈ ರೀತಿಯಾಗಿ ಇದು ಜೀವ ಶಾಸ್ತ್ರಜ್ಞರಿಗೆ, ಪ್ರಾಣಿ ಸಂಶೋಧಕರಿಗೆ ಭೇಟಿ ನೀಡಲು ಒಂದು ಉತ್ತಮ ಅವಕಾಶ ಒದಗಿಸಿದೆ.

ಚಿತ್ರಕೃಪೆ: Bendale.kaustubh

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ:

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ:

ಈ ಉದ್ಯಾನದ ಇತಿಹಾಸವನ್ನು ಕೊಂಚ ಕೆದಕಿದಾಗ ತಿಳಿದುಬರುವ ಅಂಶವೆಂದರೆ, ಇಂದಿನ ಉದ್ಯಾನದ ಕೆಲ ಭಾಗಗಳು ಹಿಂದೆ ತೆಹ್ರಿ ಗಡ್ವಾಲ್ ಸಾಮ್ರಾಜ್ಯಕ್ಕೆ ಒಳಪಟ್ಟಿತ್ತು ನಂತರ ಬ್ರಿಟೀಷರು ಇದನ್ನು ಒಂದು ಅಭಯಾರಣ್ಯವನ್ನು ಮಾಡಿದರಲ್ಲದೆ ಇದನ್ನು ರಕ್ಷಿಸುವ ಉದ್ದೇಶದಿಂದ ಇಲ್ಲಿ ಕೃಷಿ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಿದರು.

ಚಿತ್ರಕೃಪೆ: Aiwok

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ:

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ:

ಸರ್ ಮಾಲ್ಕಮ್ ಹೈಲಿ ಎಂಬಾತ ಗವರ್ನರ್ ಆಗಿದ್ದ ಸಂದರ್ಭದಲ್ಲಿ ಅಂದರೆ 1936 ರಲ್ಲಿ 323.75 ಚ.ಕಿ.ಮೀ ವ್ಯಾಪ್ತಿಯ ಏಷಿಯಾದ ಮೊದಲ ರಾಷ್ಟ್ರೀಯ ಉದ್ಯಾನವಾಗಿ ಇದು ಪ್ರವರ್ಧಮಾನಕ್ಕೆ ಬಂದುದಲ್ಲದೆ ಆ ಸಮಯದಲ್ಲಿ ಹೈಲಿ ರಾಷ್ಟ್ರೀಯ ಉದ್ಯಾನ ಎಂಬ ಹೆಸರು ಪಡೆಯಿತು.

ಚಿತ್ರಕೃಪೆ: Prashant Ram

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ:

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ:

ಗೃಹಬಳಕೆಗೆಂದು ಕೇವಲ ಕಟ್ಟಿಗೆಗಳನ್ನು ಆರಿಸುವುದರ ಹೊರತಾಗಿ ಬೇಟೆಯಾಡುವುದನ್ನು ಇಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಯಿತು. ಇದೊಂದು ಮೀಸಲು ಪ್ರದೇಶವಾಗಿ ಘೋಷಣೆಯಾಗುತ್ತಿದ್ದಂತೆ ಪ್ರಾಣಿ-ಪಕ್ಷಿಗಳ ಹಿಡಿಯುವುದಾಗಲಿ, ಕೊಲ್ಲುವುದನ್ನಾಗಲಿ ನಿಷೇಧಿಸಲಾಯಿತು.

ಚಿತ್ರಕೃಪೆ: Ross Huggett

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ:

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ:

1954-55 ರ ಸಮಯದಲ್ಲಿ ಇದನ್ನು ರಾಮಗಂಗಾ ಉದ್ಯಾನವೆಂತಲೂ ಮತ್ತೆ 1955-56 ರ ಸಮಯದಲ್ಲಿ ಅಂತಿಮವಾಗಿ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ ಎಂತಲೂ ಮರುನಾಮಕರಣ ಮಾಡಲಾಯಿತು.

ಚಿತ್ರಕೃಪೆ: Rohit Varma

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ:

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ:

ಹುಲಿ, ಸಿಂಹ, ಏಷಿಯನ್ ಆನೆ, ಘೇಂಡಾಮೃಗ ಮುಂತಾದ ಅಳಿವಿನಂಚಿನಲ್ಲಿರುವ ಜೀವಿಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಕಾರ್ಯದಲ್ಲಿ ನಿರತವಾಗಿರುವ ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ ನಿಂದ ಅನುದಾನ ಪಡೆಯುತ್ತಿರುವ 13 ರಾಷ್ಟ್ರೀಯ ಉದ್ಯಾನಗಳ ಪೈಕಿ ಇದೂ ಸಹ ಒಂದಾಗಿದೆ.

ಚಿತ್ರಕೃಪೆ: Vikram Gupchup

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ:

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ:

ರಾಮಗಂಗಾ ನದಿ, ಪತ್ಲಿ ದುನ್ ಕಣಿವೆಗಳನ್ನು ಹೊಂದಿರುವ ಈ ರಾಷ್ಟ್ರೀಯ ಉದ್ಯಾನವು ಯಾವ ರೀತಿ ನೆಲೆಸಿದೆ ಎಂದರೆ ಇದರ ಉತ್ತರದಲ್ಲಿ ಕೆಳ ಸ್ತರದ ಹಿಮಾಲಯದ ವಲಯವಿದ್ದರೆ, ದಕ್ಷಿಣದಲ್ಲಿ ಶಿವಾಲಿಕ್ ಪರ್ವತಗಳ ವಲಯವು ಕಂಡುಬರುತ್ತದೆ.

ಚಿತ್ರಕೃಪೆ: Ekabhishek

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ:

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ:

ಬಂಗಾಳ ಹುಲಿಗಳು, ಚಿರತೆ, ಸಾಂಬಾರ, ಜಿಂಕೆ, ಆನೆ, ಕರಡಿ, ವಿವಿಧ ಜಾತಿಯ ಮಂಗಗಳು, ವೈವಿಧ್ಯಮಯ ಪಕ್ಷಿಗಳು ಹೀಗೆ ಜೀವರಾಶಿಗಳಿಂದ ಸಮ್ಪದ್ಭರಿತವಾಗಿದೆ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ.

ಚಿತ್ರಕೃಪೆ: Soumyajit Nandy

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ:

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ:

ರಾಷ್ಟ್ರೀಯ ಉದ್ಯಾನದಲ್ಲಿ ದಿಖಾಲಾ ಎಂಬ ತಾಣವು ಪ್ರವಾಸಿಗರಲ್ಲಿ ಜನಪ್ರೀಯವಾಗಿದೆ. ದುನ್ ಕಣಿವೆಯ ಅಂಚಿನಲ್ಲಿರುವ ಈ ತಾಣದಲ್ಲಿ ನೂರಾರು ವರ್ಷಗಳ ಹಿಂದೆ ಸ್ಥಾಪಿಸಲಾದ ವಿಶ್ರಾಂತಿಗೃಹವನ್ನು ಕಾಣಬಹುದು.

ಚಿತ್ರಕೃಪೆ: Rohit Varma

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ:

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ:

ಜೀಪ್ ಸಫಾರಿ ಈ ಉದ್ಯಾನದ ಮತ್ತೊಂದು ಆಕರ್ಷಣೆ. ರಾಮನಗರದಿಂದ ಜೀಪುಗಳನ್ನು ಬಾಡಿಗೆಗೆ ಪಡೆದು ರಾಷ್ಟ್ರೀಯ ಉದ್ಯಾನದಲ್ಲಿ ಅದ್ಭುತವಾಗಿ ವಿಹರಿಸಬಹುದು ಹಾಗೂ ಸಾಕಷ್ಟು ಪ್ರಾಣಿ ಪಕ್ಷಿಗಳನ್ನು ಅವುಗಳ ಸಹಜ ನಡತೆಯಲ್ಲಿ ಬಹು ಹತ್ತಿರದಿಂದ ನೋಡಬಹುದು.

ಚಿತ್ರಕೃಪೆ: Wolfgang Maehr

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ:

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ:

ರಾಷ್ಟ್ರೀಯ ಉದ್ಯಾನದಲ್ಲಿ ಪ್ರವಾಸಿಗರಿಗೆ ನಡೆಯಲು ಅನುಮತಿಯಿಲ್ಲ. ಆದರೆ ವೃತ್ತಿಪರ ಮಾರ್ಗದರ್ಶಕನೊಂದಿಗೆ ಉದ್ಯಾನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಾರಣದ ಅನುಭವನ್ನು ಪಡೆಯಬಹುದಾಗಿದೆ.

ಚಿತ್ರಕೃಪೆ: Prashant Ram

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ:

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ:

ರಮಗಂಗಾ ಜಲಾಶಯ ಅಥವಾ ಕಾಲಾಗಡ್ ಆಣೆಕಟ್ಟು ಇಲ್ಲಿರುವ ಮತ್ತೊಂದು ಸುಂದರ ಪ್ರವಾಸಿ ಆಕರ್ಷಣೆಯಾಗಿದೆ. ಇದು ಪ್ರಮುಖವಾಗಿ ಪಕ್ಷಿ ವೀಕ್ಷಣೆಗೆ ಜನಪ್ರೀಯವಾಗಿದೆ.

ಚಿತ್ರಕೃಪೆ: Koshy Koshy

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ:

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ:

ರಾಮನಗರದಿಂದ 25 ಕಿ.ಮೀ ದೂರವಿರುವ ಕಾರ್ಬೆಟ್ ಜಲಪಾತ ಒಂದು ಸುಂದರ ಪ್ರವಾಸಿ ಆಕರ್ಷಣೆಯಾಗಿದೆ. ಮಳೆಗಾಲದ ಸಂದರ್ಭದಲ್ಲಿ ಈ ಜಲಪಾತವು ಸುಂದರವಾಗಿ ಮೈದುಂಬಿಕೊಂಡು ಧುಮುಕುತ್ತದೆ.

ಚಿತ್ರಕೃಪೆ: Viaggio Routard

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ:

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ:

ಗರ್ಜಿಯಾ ದೇವಿ ದೇವಸ್ಥಾನ. ರಾಮನಗರದಿಂದ 14 ಕಿ.ಮೀ ದೂರದಲ್ಲಿರುವ ಪ್ರದೇಶದ ಪವಿತ್ರ ದೇಗುಲವಾಗಿದೆ.

ಚಿತ್ರಕೃಪೆ: Anni in

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ:

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ:

ಕಾರ್ಬೆಟ್ ರಾಷ್ಟ್ರೀಯ ಉದ್ಯಾನಕ್ಕೆ ಕೇಂದ್ರ ಪ್ರದೇಶವಾಗಿ ರಾಮನಗರವಿದ್ದು, ದೆಹಲಿಯಿಂದ ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ರಾಮನಗರಕ್ಕೆ ತೆರಳಲು ರೈಲುಗಳಿವೆ.

ಚಿತ್ರಕೃಪೆ: Mridusinha

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X