Search
  • Follow NativePlanet
Share
» »ರಮಣೀಯ ಅರಬ್ಬಿ ಸಮುದ್ರದ ಮಧ್ಯೆ: ಜಂಜೀರಾ ಕೋಟೆ

ರಮಣೀಯ ಅರಬ್ಬಿ ಸಮುದ್ರದ ಮಧ್ಯೆ: ಜಂಜೀರಾ ಕೋಟೆ

ಜಂಜೀರಾ ಕೋಟೆ ಪುರಾತನವಾದ ಕೋಟೆಯಾಗಿದ್ದು, ಸುಮಾರು 16 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ ಎನ್ನಲಾಗಿದೆ. ಈ ಕೋಟೆಯು ಮಹಾರಾಷ್ಟ್ರದಲ್ಲಿದ್ದು ಆಕರ್ಷಣಿಯವಾದ ಪ್ರವಾಸಿ ಕೇಂದ್ರ ಇದಾಗಿದೆ. ಈ ಕೋಟೆ ಬೃಹತ್ತಾಗಿದ್ದು, ಸಂಪೂರ್ಣವಾಗಿ ಅರಬ್ಬೀ ಸಮು

ಕೋಟೆ ಎಂದರೆ ಚಿಕ್ಕವರಿಂದ ಹಿಡಿದು ದೊಡ್ಡವರಿಗೂ ಏನೊ ಒಂದು ಬಗೆಯ ಕೂತೂಹಲ. ಸಾಮಾನ್ಯವಾಗಿ ಕೋಟೆಗಳು ಹಲವಾರು ರಹಸ್ಯಗಳು, ಇತಿಹಾಸಗಳನ್ನು ತನ್ನಲ್ಲಿ ಅಡಗಿಸಿಕೊಂಡಿರುತ್ತದೆ. ಸಾಮಾನ್ಯವಾಗಿ ಕೋಟೆಗಳು ಅತ್ಯಂತ ಬೃಹತ್ ಆಗಿರುತ್ತವೆ. ಇವುಗಳು ಅರಸ ತನ್ನ ರಾಜ್ಯವನ್ನು ಹೇಗೆ ಭದ್ರ ಪಡಿಸಿಕೊಂಡಿದ್ದನು, ಯುದ್ಧಗಳು, ಬಿರುದುಗಳು, ವಾಸ್ತುಶಿಲ್ಪಗಳು, ರಹಸ್ಯ ಸ್ಥಳಗಳ ಬಗ್ಗೆ ತಿಳಿಯಲು ನಮ್ಮ ಮನಸ್ಸು ಹಾತೊರೆಯುತ್ತಿರುತ್ತದೆ. ಪ್ರತಿಯೊಬ್ಬ ಪ್ರವಾಸಿಗನಿಗೂ ತನ್ನ ಎಲ್ಲಾ ಅನುಮಾನಗಳಿಗೆ ಉತ್ತರ ಪಡೆಯಬೇಕು ಎಂಬ ಬಯಕೆ ಸಹಜವಾಗಿ ಇರುತ್ತದೆ. ಇಲ್ಲೊಂದು ಕೋಟೆ ಇದೆ ಅದು ಜಂಜೀರಾ ಕೋಟೆ. ಇದೊಂದು ಪುರಾತನವಾದ ಕೋಟೆಯಾಗಿದ್ದು, ಸುಮಾರು 16 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ ಎನ್ನಲಾಗಿದೆ. ಈ ಕೋಟೆಯು ಮಹಾರಾಷ್ಟ್ರದಲ್ಲಿದ್ದು ಆಕರ್ಷಣಿಯವಾದ ಪ್ರವಾಸಿ ಕೇಂದ್ರ ಇದಾಗಿದೆ. ಈ ಕೋಟೆ ಬೃಹತ್ತಾಗಿದ್ದು, ಸಂಪೂರ್ಣವಾಗಿ ಅರಬ್ಬೀ ಸಮುದ್ರದ ನೀರಿನಿಂದ ಅವೃತ್ತಗೊಂಡಿರುವ ಭದ್ರ ಕೋಟೆ. ಜಂಜೀರಾ ಕೋಟೆ ಅತ್ಯಂತ ರೋಮಾಂಚನಕಾರಿ ಅನುಭುತಿಯನ್ನು ಪ್ರವಾಸಿಗರಿಗೆ ನೀಡುವ ಸುಂದರ ತಾಣ. ಪ್ರಸ್ತುತ ಲೇಖನದಲ್ಲಿ ಐತಿಹಾಸಿಕವಾದ ಸೊಬಗನ್ನು ಹೊಂದಿರುವ ಜಂಜೀರಾ ಕೋಟೆಯ ಬಗ್ಗೆ ತಿಳಿಯೋಣ.

ಕೋಟೆ ಎಲ್ಲಿದೆ

ಕೋಟೆ ಎಲ್ಲಿದೆ

ಈ ಮುರುಡ್ ಜಂಜೀರಾ ಮಹಾರಾಷ್ಟ್ರ ರಾಜ್ಯದ ರಾಯಗಡ ಜಿಲ್ಲೆಯ ಸಮುದ್ರ ತೀರದ ಒಂದು ಹಳ್ಳಿಯಲ್ಲಿ ಸಮುದ್ರ ಮಧ್ಯೆಯಲ್ಲಿ ದ್ವೀಪದಂತಹ ಐತಿಹಾಸಿಕ ಕೋಟೆ ಇದೆ. ಈ ಕೋಟೆ ದಕ್ಷಿಣ ಮುಂಬೈನಿಂದ ಸುಮಾರು 165 ಕಿ,ಮೀ ದೂರವಿರುವ ಮುರಾಡ್ ನಗರದ ಬಳಿ ಇರುವ ಅರಬ್ಬೀ ಸಮುದ್ರದ ಎತ್ತರ ಪ್ರದೇಶದಲ್ಲಿ ಕೋಟೆ ನಿರ್ಮಿಸಲಾಗಿದೆ.
PC:Geetanjali J

ಇಲ್ಲಿನ ಆಕರ್ಷಣೆಗಳು

ಇಲ್ಲಿನ ಆಕರ್ಷಣೆಗಳು

ಈ ಜಂಜೀರಾ ಕೋಟೆಯಲ್ಲಿ ಯುದ್ಧಕ್ಕೆ ಬಳಸುತ್ತಿದ್ದ ಫಿರಂಗಿ, ತುಪಾಕಿಗಳನ್ನು ಕಾಣಬುಹುದು.
PC: Geetanjali J

ಕೋಟೆಯ ಉದ್ದೇಶ

ಕೋಟೆಯ ಉದ್ದೇಶ

ಜಂಜೀರಾ ಕೋಟೆಯನ್ನು ಸಮುದ್ರದಿಂದ ಅವೃತ್ತವಾಗಿದ್ದು, ಶತ್ರುಗಳ ದಾಳಿ ಕೇವಲ ಜಲ ಮಾರ್ಗದ ಮೂಲಕ ಅಥವಾ ವೈಮಾನಿಕವಾಗಿ ಮಾಡಬಹುದಾಗಿತ್ತು. ಈ ಕೋಟೆಗೆ ದಾಳಿ ಮಾಡಬೇಕಾದರೆ ಅದು ಜಲ ಮಾರ್ಗದ ಮೂಲಕ ಮಾತ್ರ ಸಾಧ್ಯವಾಗುತ್ತಿತ್ತು.
PC:Geetanjali J

ಕೋಟೆಯ ವಾಸ್ತು ಶಿಲ್ಪ

ಕೋಟೆಯ ವಾಸ್ತು ಶಿಲ್ಪ

ಈ ಕೋಟೆಯನ್ನು ಹತ್ತಲು ಸಾಧ್ಯವಾಗದಷ್ಟು ಎತ್ತರವಾಗಿ ಕೋಟೆಯನ್ನು ಕಟ್ಟಲಾಗಿದೆ. ಸುಮಾರು 12 ಮೀಟರ್‍ನಷ್ಟು ಎತ್ತರವಾಗಿ ಈ ಕೋಟೆಯನ್ನು ಕಟ್ಟಲಾಗಿದೆ. ಇದೊಂದು ಅದ್ಭುತವಾದ ವಾಸ್ತುಶಿಲ್ಪವನ್ನು ಹೊಂದಿರುವ ಕೋಟೆ. ಜಂಜೀರಾ ಕೋಟೆಯ ಮುಖ್ಯ ದ್ವಾರದಲ್ಲಿ ಸಿಂಹವೊಂದು 5 ಆನೆಗಳ ಮೇಲೆ ಎರಗಿರುವಂತೆ ಚಿತ್ರಿಸಲಾಗಿದೆ. ಈ ಕೋಟೆಯಲ್ಲಿ ಗುಪ್ತ ಸುರಂಗ ಮಾರ್ಗವಿದ್ದು, ನೀರಿನ ಕೆಳಗೆ ಸುರಂಗ ಸಾಗುವುದಾಗಿದೆ.
PC:: Geetanjali J

ಕೋಟೆಯ ಒಳಗೆ ಏನಿದೆ?

ಕೋಟೆಯ ಒಳಗೆ ಏನಿದೆ?

ಜಂಜೀರಾ ಕೋಟೆಯ ಒಳಗೆ ಸೈನಿಕರು ಬಳಕೆಗೆ ಸಿಹಿನೀರಿನ ಕೊಳ, ಅಧಿಕಾರಿಗಳಿಗೆ ತಂಗಲು ತಾಣಗಳು, ಭವ್ಯವಾದ ಸಭಾ ಭವನ, ಮಸೀದಿಗಳನ್ನು ನಾವು ಕಾಣಬಹುದಾಗಿದೆ.
PC: Geetanjali J

ನಿರ್ಮಾಣ ಮಾಡಿದವರು ಯಾರು?

ನಿರ್ಮಾಣ ಮಾಡಿದವರು ಯಾರು?

ಈ ಕೋಟೆಯನ್ನು 16 ನೇ ಶತಮಾನದಲ್ಲಿ ರಾಜಾ ರಾಮ್ ಪಾಟಿಲ್ ಎಂಬ ಒಬ್ಬ ಮರಾಠ ಮೀನುಗಾರ ತನ್ನ ಪ್ರದೇಶದ ಜನರನ್ನು ರಕ್ಷಿಸಿಕೊಳ್ಳಲು ಕಟ್ಟಿಸಿಕೊಂಡ ಕೋಟೆ ಜಂಜೀರಾ.
PC:Geetanjali J

ಫಿರಂಗಿ

ಫಿರಂಗಿ

ಶತ್ರುಗಳನ್ನು ಧ್ವಂಸ ಮಾಡಲು ಪ್ರತಿಯೊಂದು ಕೋಟೆಯ ಸರಹದ್ದು ಗೋಡೆಗಳ ಮೇಲೆ ಫಿರಂಗಿಗಳನ್ನು ಇರಿಸಲಾಗಿದೆ. ಕೆಲವು ಫಿರಂಗಿಗಳನ್ನು ನೀವು ಇಂದಿಗೂ ಕಾಣಬಹುದಾಗಿದೆ.
PC:Geetanjali J

ಆಕ್ರಮಣ

ಆಕ್ರಮಣ

ಈ ಭವ್ಯವಾದ ಕೋಟೆಯನ್ನು ಕಂಡ ನಿಜಾಮ ದೊರೆ ತನ್ನ ದಂಡನಾಯಕ ಫಿರಂ ಖಾನ್‍ನಿಗೆ ಈ ಜಂಜೀರಾ ಕೋಟೆಯನ್ನು ವಶಪಡಿಸಿ ಕೊಂಡು ಬರಲು ಆಜ್ಞೆ ಹೊರಡಿಸುತ್ತಾನೆ. ಈ ಕೋಟೆಯ ಆಕ್ರಮಣ ನಡೆಯುತ್ತದೆ. ತದನಂತರ ನಿಜಾಮರ ದಂಡ ನಾಯಕ ಫಿರಂ ಖಾನ್ ಅದಾಗಲೇ ಇದ್ದ ಕೋಟೆಯನ್ನು ನಾಶಪಡಿಸಿ ಬಲಿಷ್ಟವಾದ ಕೋಟೆಯನ್ನು ನಿರ್ಮಿಸುತ್ತಾನೆ.
PC:Geetanjali J

ವೀದೇಶಿಯರು

ವೀದೇಶಿಯರು

ಜಂಜೀರಾ ಕೋಟೆಯ ಮೇಲೆ ಕೇವಲ ದೇಶಿಯರೇ ಅಲ್ಲದೇ ಬ್ರಿಟೀಷರು, ಡಚ್ಚರು ಮತ್ತು ಮರಾಠರು ಕೂಡ ಈ ಕೋಟೆಯನ್ನು ವಶಪಡಿಸಿಕೊಳ್ಳಲು ಕಾಯುತ್ತಿದ್ದರಂತೆ. ಆದರೆ ಈ ಆಸೆಯು ವಿದೇಶಿಯರಿಗೆ ಕನಸಾಗೀಯೇ ಉಳಿಯಿತು.
PC:Geetanjali J

ಶಿವಾಜಿ

ಶಿವಾಜಿ

ಈ ಕೋಟೆಯನ್ನು ವಶಪಡಿಸಿಕೊಳ್ಳಲು ಮರಾಠರ ಶಿವಾಜಿಯೇ ಅಲ್ಲದೇ ಆತನ ಮಗ ಸಂಭಾಜಿ ಕೂಡ ಪ್ರಯತ್ನ ಮಾಡಿದ್ದರು.
PC:Geetanjali J

ಪ್ರವೇಶ ಸಮಯ

ಪ್ರವೇಶ ಸಮಯ

ಜಂಜೀರಾ ಕೋಟೆಗೆ ಭೇಟಿ ನೀಡಲು ಬೆಳಗ್ಗೆ 7 ರಿಂದ ಸಂಜೆ 6:30 ರವರೆಗೆ ಅವಕಾಶವಿದೆ. ಈ ಕೋಟೆಯನ್ನು ಸುತ್ತಾಡಿ ಬರಲು ತೆಗೆದುಕೊಳ್ಳವ ಸಮಯ ಸುಮಾರು 1:30 ನಿಮಿಷಗಳ ಕಾಲ ಈ ಭವ್ಯವಾದ ಕೋಟೆಯ ಸೌಂದರ್ಯವನ್ನು ಅಸ್ವಾಧಿಸಬಹುದು.
PC: commons.wikimedia

ಸಮೀಪದ ಪ್ರಸಿದ್ದವಾದ ಪ್ರದೇಶ

ಸಮೀಪದ ಪ್ರಸಿದ್ದವಾದ ಪ್ರದೇಶ

ಜಂಜೀರಾ ಕೋಟೆಯ ಸಮೀಪದಲ್ಲಿ ದತ್ತ ಮಂದಿರ, ಬವಾಬ್ ಪ್ಯಾಲೆಸ್, ಗರಂಭಿ ಫಾಲ್ಸ್, ಸಿದ್ಧಿ ವಿನಾಯಕ ದೇವಾಲಯ, ಕಾಸ ಕೋಟೆ, ಮರುಡ್ ಬೀಚ್‍ಗಳಿಗೂ ಕೂಡ ನೀವು ಭೇಟಿ ನೀಡಬಹುದಾಗಿದೆ.
PC: commons.wikimedia

ಬೋಟ್‍ನ ಮೂಲಕ ಸಾಗಬೇಕು

ಬೋಟ್‍ನ ಮೂಲಕ ಸಾಗಬೇಕು

ಇಲ್ಲಿನ ವಿಶೇಷವೆನೆಂದರೆ ಜಂಜೀರಾ ಕೋಟೆಯನ್ನು ನೋಡಬೇಕಾದರೆ ಬೋಟ್‍ನ ಮೂಲಕ ಸಾಗಬೇಕು.
PC: commons.wikimedia

ತಲುಪುವ ಬಗೆ

ತಲುಪುವ ಬಗೆ

ಈ ಜಂಜೀರಾ ಕೋಟೆಯನ್ನು ತಲುಪಲು ಅತ್ಯಂತ ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಮುಂಬೈನ ಛತ್ರಪತಿ ಶಿವಾಜಿ ಇಂಟರ್ ನ್ಯಾಷನಲ್ ಏರ್‍ಪೋರ್ಟ್.

PC:Ishan Manjrekar

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X