ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ಒಂದು ಕಾಲದಲ್ಲಿ ಇದು 500 ಮಂದಿ ಪತ್ನಿಯರೊಂದಿಗೆ ರಾಜಭೋಗದಿಂದ ಮೆರೆದ ಕೋಟೆ

Written by:
Published: Saturday, July 15, 2017, 9:28 [IST]
Share this on your social network:
   Facebook Twitter Google+ Pin it  Comments

ಸಾಮಾನ್ಯವಾಗಿ ಭಾರತದಲ್ಲಿ ಹಲವಾರು ಪ್ರಸಿದ್ಧವಾದ ಕೋಟೆಗಳಿವೆ. ಒಂದೊಂದು ಕೋಟೆ ಒಂದೊಂದು ಇತಿಹಾವನ್ನು ತಿಳಿಸುತ್ತದೆ. ಆ ಕೋಟೆಯ ಇತಿಹಾಸ ತಿಳಿಯುವುದೆಂದರೆ ಅದ್ಭುತ. ಹಲವಾರು ಚಾರಿತ್ರಾತ್ಮಕ ಕೋಟೆಗಳು ಯುದ್ಧ, ರಕ್ತ, ಸುಖ, ದುಃಖಗಳನ್ನು ನೆನಪಿಸುತ್ತವೆ.

ಇಂತಹ ಸುಂದರವಾದ ಹಾಗೂ ಭವ್ಯವಾದ ಕೋಟೆಗಳಲ್ಲಿ ಪ್ರಮುಖವಾದುದು ಮಹೇಶ್ವರ ಕೋಟೆ ಅದು ಮಧ್ಯ ಪ್ರದೇಶದಲ್ಲಿದೆ. ಈ ಕೋಟೆಯಲ್ಲಿ ಸುಮಾರು 500 ಮಹಿಳೆಯರಿದ್ದರು. ಈ ಕೋಟೆ ರಾಣಿಯ ಆಳ್ವಿಕೆ ಎಂದು ತಿಳಿದುಕೊಳ್ಳಬೇಡಿ. ರಾಜನ ಆಳ್ವಿಕೆಯ ಕೋಟೆಯೇ ಆದರೆ ಈ ರಾಜನಿಗೆ 500 ಪತ್ನಿಯರಿದ್ದರು. ಒಂದು ಕಾಲದಲ್ಲಿ 500 ಪತ್ನಿಯರ ಜೊತೆಗೆ ರಾಜಭೋಗದಿಂದ ಮೇರೆದ ಈ ಕೋಟೆ ಈಗ ಪ್ರವಾಸ ಪ್ರದೇಶವಾಗಿ ಮಾರ್ಪಾಟಾಗಿದೆ.

ಎಲ್ಲಿದೆ?

ಈ ಸುಂದರವಾದ ಹಾಗೂ ವೈಭವ ಕೋಟೆಯು ಮಧ್ಯ ಪ್ರದೇಶದಲ್ಲಿನ ಗುರ್ಗಾವ್ ಜಿಲ್ಲೆಯಲ್ಲಿದೆ.

ಹೇಗೆ ತಲುಪಬೇಕು?

ಮುಂಬೈಗೆ ಪೂರ್ವ ದಿಕ್ಕಿಗೆ ಇದೆ ಈ ಕೋಟೆ. ಆಗ್ರಾದಿಂದ ಮುಂಬೈಗೆ ಸುಮಾರು 13 ಕಿ,ಮೀ ದೂರದಲ್ಲಿರುವ ಹೆದ್ದಾರಿಯ ಪೂರ್ವ ಭಾಗದಲ್ಲಿದೆ. ಈ ಕೋಟೆ ಇಂಡೋರ್‍ಗೆ ಸಮೀಪದಲ್ಲಿದೆ.

ಇಂಡೋರ್

ಇಂಡೋರ್‍ನಿಂದ ಸುಮಾರು 91 ಕಿ,ಮೀ ದೂರದಲ್ಲಿ ಇದೆ. ಈ ಕೋಟೆ ಅತ್ಯಂತ ಸುಂದರವಾಗಿ ನಿರ್ಮಿಸಿದ್ದಾರೆ. ನೋಡಲು ರಮಣೀಯವಾಗಿದೆ. ರಾಜರ ಕಾಲದ ವೈsಭವ ಯಾರು ತಾನೆ ಇಷ್ಟ ಪಡುವುದಿಲ್ಲ ಹೇಳಿ.

ನರ್ಮದ ನದಿ

ನಗರವು ನರ್ಮದ ನದಿಯ ತೀರದಲ್ಲಿರುವ ಕಾರಣ ಸಹಜವಾಗಿಯೇ ಅತಿ ಹೆಚ್ಚು ಪ್ರವಾಸ ತಾಣ ಎಂದು ಪ್ರಸಿದ್ಧಿ ಪಡೆದಿದೆ. ಇಲ್ಲಿ ಸುಮಾರು 500 ಮಂದಿ ಪತ್ನಿಯರ ಜೊತೆ ಒಂದು ರಾಜನು ಆಹ್ಲಾದಕರವಾದ ಜೀವನ ನಡೆಸುತ್ತಿದ್ದ ಈ ಕೋಟೆಯನ್ನು ಕಾಣಲು ಹಲವಾರು ಪ್ರವಾಸಿಗರು ಭೇಟಿ ನೀಡುತ್ತಾರೆ.

1818ರ ಕೊಲೊನಿಯಲ್ ಕೋಟೆ

ಕೊಲೊನಿಯಲ್ ಕೋಟೆ ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಕೋಟೆ. ಈ ಕೋಟೆಯನ್ನು 1818ರಲ್ಲಿ ನಿರ್ಮಿಸಲಾಯಿತು.

ಮಹೇಶ್ವರ ಎಂದರೆ ಏನು?

ಈ ಕೋಟೆಯನ್ನು ಮಹೇಶ್ವರ ಎಂದು ಇಡಲು ಒಂದು ಕಾರಣವಿದೆ. ಸಾಮಾನ್ಯವಾಗಿ ನಿಮಗೆ ತಿಳಿದ ಹಾಗೆ ಮಹೇಶ್ವರ ಎಂದರೆ ಪರಮಶಿವನ ಹಲವಾರು ಹೆಸರುಗಳಲ್ಲಿ ಒಂದು.

ಮಹೀಷ್‍ಮತಿ ಸಾಮ್ರಾಜ್ಯ

ಕೆಲವರ ಪ್ರಕಾರ ಈ ಕೋಟೆಯನ್ನು ಮಹೀಷ್‍ಮತಿ ಕೋಟೆ ಎಂದು ಕೂಡ ಸೂಚಿಸುತ್ತಾರೆ.

ಸಹಸ್ರಾರ್ಜುನ

ಈ ಕೋಟೆಯನ್ನು ಆಳ್ವಿಕೆ ನಡೆಸಿದ ರಾಜನ ಹೆಸರು ಸಹಸ್ರಾರ್ಜುನ. ಈ ರಾಜನಿಗೆ ಸುಮಾರು 500 ಮಂದಿ ಪತ್ನಿಯರಿದ್ದರು.

ಪ್ರಜೆಗಳು

ಸುಮಾರು 24 ಸಾವಿರ ಪ್ರಜೆಗಳು ಈ ಮಹೇಶ್ವರದಲ್ಲಿ ನಿವಾಸಿಸುತ್ತಿದ್ದರು ಎಂದು ಇತಿಹಾಸ ತಿಳಿಸುತ್ತದೆ.

ಹಬ್ಬಗಳು

ಈ ಕೋಟೆಯಲ್ಲಿ ಹಲವಾರು ಹಬ್ಬಗಳು ನಡೆಯುತ್ತಿದ್ದವಂತೆ. ಇಲ್ಲಿ ಸಾವಿರಾರೂ ಪ್ರಜೆಗಳು ಕೂಡ ಸೇರಿ ಆಚರಿಸುತ್ತಿದ್ದರಂತೆ.

ಮಹಾಶಿವರಾತ್ರಿ

ಹಬ್ಬ ಹರಿದಿನಗಳಲ್ಲಿ ನಾಗಪಂಚಮಿ, ಗುರುಪೌಣಮಿ, ಮಹಾಶಿವರಾತ್ರಿ ಮುಂತಾದ ಹಬ್ಬಗಳನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದರು.

ಚಿತ್ರೀಕರಣ

ಈ ಕೋಟೆಯ ಸೌಂದರ್ಯವನ್ನು ಬಾಲಿವುಡ್ ಮತ್ತು ಕಾಲಿವುಡ್ ಸಿನಿಮಾಗಳನ್ನು ಹೆಚ್ಚಾಗಿ ಚಿತ್ರಿಸುತ್ತಿರುತ್ತಾರೆ. ಕೆಲವು ಗಾಯಕರು ಈ ಸ್ಥಳದಲ್ಲಿ ಹಾಡಿದ ಹಾಡುಗಳ ಚಿತ್ರಿಕರಣವನ್ನು ಕೂಡ ಕಾಣಬಹುದಾಗಿದೆ.

ದೇವಾಲಯ

ಈ ಕೋಟೆಯ ಸುತ್ತ ಮುತ್ತ ಸುಮಾರು 100 ಕ್ಕಿಂತ ಅಧಿಕ ದೇವಾಲಯಗಳಿವೆ. ಒಮ್ಮೆ ಈ ಮಹೇಶ್ವರ ಕೋಟೆಗೆ ಭೇಟಿ ನೀಡಿದರೆ ಈ ದೇವಾಲಯಗಳಿಗೂ ಭೇಟಿ ನೀಡಿ.

ಪ್ರಪಂಚ ಪ್ರಖ್ಯಾತ ದೇವಾಲಯ

ವಿಂದ್ಯಾವಿನಿ ಎಂಬ ದೇವಾಲಯವು ಶಕ್ತಿವಂತ ಕಾಳಿಮಾತ ಮಂದಿರ. ಈ ಮಂದಿರವು ಏಕಮುಖಿ ದೇವಾಲಯವಾಗಿದ್ದು, ಸುಮಾರು 30 ಎಕರೆ ವಿಸ್ತೀಣದಲ್ಲಿ ನಿರ್ಮಿಸಲಾದ ಮಂದಿರವಾಗಿದೆ.

ಇತರ ದೇವಾಲಯಗಳು

ಇಲ್ಲಿ ಕಾಶಿ ವಿಶ್ವನಾಥ ದೇವಾಲಯ, ಅಖಿಲ ಮಾತಾ ದೇವಾಲಯ, ಬದ್ರಿನಾಥ ದೇವಾಲಯ, ಭವಾನಿ ದೇವಾಲಯ ಇನ್ನೂ ಇತರ ದೇವಾಲಯವನ್ನು ಇಲ್ಲಿ ಕಾಣಬಹುದಾಗಿದೆ.

English summary

It was once a royal castle with 500 wives

There are several well-known fortresses in India. Each castle tells one of Idiah. Knowing the history of the castle is wonderful. Many historic forts remind the war, blood, happiness, and sadness.
Please Wait while comments are loading...