ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ಭಾರತದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು

Written by:
Published: Friday, November 15, 2013, 16:26 [IST]
Share this on your social network:
   Facebook Twitter Google+ Pin it  Comments


ಭಾರತದ ಹಲವು ರಾಜ್ಯಗಳಲ್ಲಿ ಅಂತಾರಾಷ್ಟ್ರೀಯ ವೈಮಾನಿಕ ನಿಲ್ದಾಣಗಳನ್ನು ಕಾಣಬಹುದಾಗಿದೆ. ಕೆಲವು ಜನದಟ್ಟಣೆಯ ಸಾಂದ್ರತೆಯಲ್ಲಿ ಪ್ರಮುಖವಾಗಿದ್ದರೆ ಇನ್ನೂ ಹಲವು ಪ್ರಶಾಂತಮಯ ಪರಿಸರದಿಂದ ಹೆಸರುವಾಸಿಯಾಗಿವೆ. ಭಾರತದಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಕುರಿತು ಈ ಲೇಖನದ ಮೂಲಕ ತಿಳಿಯಿರಿ.

ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮುಂಬೈ

ಮುಂಬೈನಲ್ಲಿರುವ ಈ ವಿಮಾನ ನಿಲ್ದಾಣವು 1,500 ಎಕರೆಯಷ್ಟು ಪ್ರದೇಶದಲ್ಲಿ ವಿಸ್ತಾರವಾಗಿ ಹರಡಿದೆ. ಹಲವು ದೇಶಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಗಳು ಲಭ್ಯವಿರುವ ಈ ನಿಲ್ದಾಣವು ಮೊದಲಿಗೆ ಸಾಹರ್ ವಿಮಾನ ನಿಲ್ದಾಣ ಎಂಬ ಹೆಸರನ್ನು ಹೊಂದಿತ್ತು.

ಚಿತ್ರಕೃಪೆ: Vapourlock

ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ದೆಹಲಿ

ನವದೆಹಲಿಯ ನೈರುತ್ಯ ದಿಕ್ಕಿಗೆ 16 ಕಿ.ಮೀ ದೂರದಲ್ಲಿರುವ ಪಾಲಂ ಎಂಬಲ್ಲಿ ಈ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣವಿದೆ. ಪ್ರಸ್ತುತ, ಭಾರತದ ಅತಿ ಜನದಟ್ಟಣೆಯಿರುವ ಈ ವಿಮಾನ ನಿಲ್ದಾಣಕ್ಕೆ ಭಾರತದ ಮಾಜಿ ಪ್ರಧಾನಿ ಇಂದಿರಾಗಂಧಿ ಅವರ ಹೆಸರನ್ನು ಅವರ ಗೌರವಾರ್ಥವಾಗಿ ಇದಕ್ಕಿಡಲಾಗಿದೆ. 5,220 ಎಕರೆಯಷ್ಟು ವಿಸ್ತೀರ್ಣದಲ್ಲಿ ಈ ನಿಲ್ದಾಣ ಹರಡಿದೆ.

ಚಿತ್ರಕೃಪೆ

ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ:

ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದಕ್ಷಿಣ ಭಾರತದ ಮಹಾನಗರ ಚೆನ್ನೈನ ಮೀನಂಬಕ್ಕಂ, ಪಲ್ಲವರಂ ಹಾಗು ತಿರುಸುಲಂ ಪ್ರದೇಶಗಳಲ್ಲಿ ವಿಸ್ತಾರವಾಗಿ ಹಬ್ಬಿದೆ. ಪ್ರಯಾಣಿಕರಿಗೆ ಪ್ರವೇಶ ಭಾಗವನ್ನು ತಿರುಸುಲಂ ನಲ್ಲಿ ಕಲ್ಪಿಸಲಾಗಿದೆ. ಇದು ದೇಶದ ಮೂರನೆಯ ಪ್ರಯಾಣಿಕ ಚಟುವಟಿಕೆ ನಿರತ ವಿಮಾನ ನಿಲ್ದಾಣವಾಗಿದೆ. ಇದರ ಅಧಿಕೃತ ಹೆಸರು ಅರೀಂಗರಣ್ಣಾ ಅಥವಾ ಅಣ್ಣಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.

ಚಿತ್ರಕೃಪೆ: VtTN

ನೇತಾಜಿ ಸುಭಾಸ ಚಂದ್ರ ಬೋಸ್ ನಿಲ್ದಾಣ, ಕೊಲ್ಕತ್ತಾ

ಪಶ್ಚಿಮ ಬಂಗಾಳ ರಾಜ್ಯದ ಕೊಲ್ಕಾತ್ತಾದಲ್ಲಿದೆ ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಕೊಲ್ಕತ್ತಾ ನಗರ ಕೇಂದ್ರದಿಂದ ಸುಮಾರು 17 ಕಿ.ಮೀ ದೂರದಲ್ಲಿದೆ. 1670 ಎಕರೆಯಷ್ಟು ವಿಸ್ತಾರವಾಗಿರುವ ಈ ನಿಲ್ದಾಣವು ಮೊದಲಿಗೆ ದಮ್ ದಮ್ ವಿಮಾನ ನಿಲ್ದಾಣ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು.

ಚಿತ್ರಕೃಪೆ: Jer.dv

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬೆಂಗಳೂರಿನ ಹೊರವಲಯದಲ್ಲಿ ಸುಮಾರು 40 ಕಿ.ಮೀ ದೂರದಲ್ಲಿ ನಿರ್ಮಿಸಲಾಗಿದೆ. 5,130 ಎಕರೆಯಷ್ಟು ವಿಶಾಲವಾದ ಪ್ರದೇಶದಲ್ಲಿ ಹರಡಿರುವ ಈ ವಿಮಾನ ನಿಲ್ದಾಣವು ಬೆಂಗಳೂರು ಮುಖ್ಯ ರೈಲು ನಿಲ್ದಾಣದಿಂದ ಕೇವಲ 30 ಕಿ.ಮೀ ದೂರವಿದೆ.

ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕೊಚ್ಚಿ

ಕೇರಳದ ಕೊಚ್ಚಿ ನಗರದ ನೆಡುಂಬಾಶೇರಿ ಎಂಬಲ್ಲಿ ಈ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣವಿದೆ. ಇದು ಕೊಚ್ಚಿ ನಗರದಿಂದ 30 ಕಿ.ಮೀ ದೂರದಲ್ಲಿದೆ.

ಚಿತ್ರಕೃಪೆ: SPat

ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕೊಳಿಕೋಡ್

ಹಿಂದೆ ಕ್ಯಾಲಿಕಟ್ ಎಂದು ಕರೆಯಲಾಗುತ್ತಿದ್ದ ಕೇರಳದ ಇಂದಿನ ಕೊಳಿಕೋಡ್ ನಲ್ಲಿ ಈ ನಿಲ್ದಾಣವಿದೆ. ಕರಿಪುರ್ ನಿಲ್ದಾಣ ಎಂತಲೂ ಕರೆಯಲಾಗುವ ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕರಿಪುರ್ ನಲ್ಲಿ ನೆಲೆಸಿದ್ದು ಕೊಳಿಕೋಡ್ ನಿಂದ 28 ಕಿ.ಮೀ ದೂರವಿದೆ.

ಚಿತ್ರಕೃಪೆ: Barimds

ತ್ರಿವೇಂದ್ರಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ತಿರುವನಂತಪುರಂ

ಕೇರಳದ ರಾಜಧಾನಿ ನಗರ ತಿರುವನಂತಪುರಂ ನಗರ ಕೇಂದ್ರದಿಂದ ಕೇವಲ 3.7 ಕಿ.ಮೀ ದೂರದಲ್ಲಿ ಈ ನಿಲ್ದಾಣವಿದೆ. ಭಾರತದ ನಾಲ್ಕು ಮಹಾನಗರಗಳ ನಂತರ ಬೇರೆಡೆ ನಿರ್ಮಿಸಲಾದ ಮೊದಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಭಾಜನವಾಗಿದೆ ಈ ವಾಯು ನಿಲ್ದಾಣ.

ಚಿತ್ರಕೃಪೆ: Dixiechick80

ಗೋವಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಗೋವಾ

ಹೆಚ್ಚು ಜನಪ್ರಿಯವಾಗಿ ದಾಬೋಲಿಮ್ ನಿಲ್ದಾಣವೆಂದು ಕರೆಯಲ್ಪಡುವ ಈ ವಿಮಾನ ನಿಲ್ದಾಣವು ಗೋವಾದ ದಾಬೋಲಿಮ್ ಎಂಬ ಪ್ರದೇಶದಲ್ಲಿ ನೆಲೆಸಿದೆ. ವಾಸ್ಕೊ ಡ ಗಾಮಾದಿಂದ ಕೇವಲ 4 ಕಿ.ಮೀ ದೂರದಲ್ಲಿರುವ ಈ ನಿಲ್ದಾಣವು ರಾಜಧಾನಿ ಪಣಜಿಯಿಂದ 30 ಕಿ.ಮೀ ದೂರದಲ್ಲಿದೆ.

ಚಿತ್ರಕೃಪೆ: Ssr

ಸರ್ದಾರ್ ವಲ್ಲಭಭಾಯ್ ಪಟೇಲ್ ನಿಲ್ದಾಣ, ಗುಜರಾತ್

ಸರ್ದಾರ್ ವಲ್ಲಭಭಾಯ್ ಪಟೇಲ್ ಹೆಸರಿನ ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿರುವುದು ಗುಜರಾತ್ ರಾಜ್ಯದ ಅಹ್ಮದಾಬಾದ್ ನಲ್ಲಿ. ಅಹ್ಮದಾಬಾದ್ ನಗರದಿಂದ 8 ಕಿ.ಮೀ ದೂರವಿರುವ ಈ ನಿಲ್ದಾಣಕ್ಕೆ ಹೆಸರು ಭಾರತದ ಮಾಜಿ ಉಪಪ್ರಧಾನಿ ಹಾಗು ಉಕ್ಕಿನ ಮನುಷ್ಯನೆಂದೆ ಖ್ಯಾತಿ ಪಡೆದಿದ್ದ ಸರ್ದಾರ್ ವಲ್ಲಭಭಾಯ್ ಪಟೇಲ್ ರಿಂದ ಬಂದಿದೆ.

ಚಿತ್ರಕೃಪೆ: Hardik jadeja

ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಆಂಧ್ರಪ್ರದೇಶ

ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದು ಆಂಧ್ರದ ರಾಜಧಾನಿ ನಗರ ಹೈದರಾಬಾದ್ ನಲ್ಲಿ. ಈ ವಿಮಾನ ನಿಲ್ದಾಣವು ಕೊಚ್ಚಿ ನಂತರದಲ್ಲಿ ಎರಡನೆಯ ಸಾರ್ವಜನಿಕ ಹಾಗು ಖಾಸಗಿ ವಲಯಗಳ ಜಂಟಿ ಪಾಲುದಾರಿಕೆಯ ಯೋಜನೆಯಾಗಿದೆ.

ಚಿತ್ರಕೃಪೆ: Subhashish Panigrahi

ಲೋಕಪ್ರಿಯ ಗೋಪಿನಾಥ್ ಬೊರ್ಡೊಲೊಯ್ ಅಂತಾರಾಷ್ಟ್ರೀಯ ನಿಲ್ದಾಣ, ಅಸ್ಸಾಂ

ಮೊದಲಿಗೆ ಗುವಾಹಟಿ ಅಥವಾ ಬೊರ್ಝರ್ ನಿಲ್ದಾಣ ಎಂದು ಕರೆಯಲ್ಪಡುತ್ತಿದ್ದ ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿರುವುದು ಈಶಾನ್ಯ ಭಾರತದ ಅಸ್ಸಾಂ ರಾಜ್ಯದ ಗುವಾಹಟಿಯಲ್ಲಿ. ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದಿಂದ ನಿರ್ವಹಿಸಲ್ಪಡುವ ಈ ನಿಲ್ದಾಣವು ಭಾರತೀಯ ವಾಯು ಸೇನೆಗೂ ಕೂಡ ಸೇವೆ ಸಲ್ಲಿಸುತ್ತದೆ.

ಚಿತ್ರಕೃಪೆ: abymac

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕರ್ನಾಟಕ

ಮೊದಲಿಗೆ ಬಜ್ಪೆ ವಿಮಾನ ನಿಲ್ದಾಣವೆಂದು ಕರೆಯಲ್ಪಡುತ್ತಿದ್ದ ಮಂಗಳೂರಿನ ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 1951 ಡಿಸೆಂಬರ್ 25 ರಂದು ಪ್ರಾರಂಭವಾಯಿತು. ಮಧ್ಯ ಪ್ರಾಚ್ಯ ರಾಷ್ಟ್ರಗಳೊಂದಿಗೆ ಮಂಗಳೂರನ್ನು ಸಂಪರ್ಕಿಸುವ ಈ ವಿಮಾನ ನಿಲ್ದಾಣವು ಕರ್ನಾಟಕದಲ್ಲೆ ಮೊದ ಎರಡು ರನ್ ವೇ ಗಳುಳ್ಳ ನಿಲ್ದಾಣವಾಗಿತ್ತು.

ಚಿತ್ರಕೃಪೆ: Premkudva

ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ವಿಮಾನ ನಿಲ್ದಾಣ, ಮಹಾರಾಷ್ಟ್ರ

ಮಹಾರಾಷ್ಟ್ರದ ನಾಗ್ಪುರ್ ನಲ್ಲಿದೆ ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಭಾರತದ ಮ್ರಮುಖ ನಗರಗಳೊಂದಿಗೆ ಉತ್ತಮ ವೈಮಾನಿಕ ಸಂಪರ್ಕ ಸಾಧಿಸುವ ಈ ನಿಲ್ದಾಣವು ಶಾರ್ಜಾ ದೇಶಕ್ಕೂ ಕೂಡ ವಿಮಾನ ಹರ್ರಟವನ್ನು ಒದಗಿಸುತ್ತದೆ.

ಚಿತ್ರಕೃಪೆ: Nikkul

ಬಿಜು ಪಟ್ನಾಯಕ್ ಏರ್ಪೋರ್ಟ್, ಒಡಿಶಾ

ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಪ್ರಸ್ತುತ, ಒಡಿಶಾ ರಾಜ್ಯದಲ್ಲಿ ಇದೊಂದೆ ಪ್ರಮುಖ ವಾಯು ನೆಲೆಯಾಗಿದೆ.

ಚಿತ್ರಕೃಪೆ: Subhashish Panigrahi

ತಿರುಚಿರಾಪಳ್ಳಿ ವಿಮಾನ ನಿಲ್ದಾಣ, ತಮಿಳುನಾಡು

ತಮಿಳುನಾಡಿನ ತಿರುಚಿರಾಪಳ್ಳಿಯ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 210 ರ ಬಳಿ ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಅಕ್ಟೋಬರ್ 4, 2012 ರಂದು ಇದನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಘೋಷಿಸಲಾಯಿತು.

ಕೊಯಮತ್ತೂರು ವಿಮಾನ ನಿಲ್ದಾಣ, ತಮಿಳುನಾಡು

ತಮಿಳುನಾಡಿನ ಕೊಯಮತ್ತೂರಿನ ಪೀಲಮೆಡು ಎಂಬಲ್ಲಿ ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಇದು ಕೊಯಮತ್ತೂರು ನಗರದಿಂದ ಕೇವಲ 11 ಕಿ.ಮೀ ದೂರದಲ್ಲಿದೆ.

ಚಿತ್ರಕೃಪೆ: PP Yoonus

ಚೌಧರಿ ಚರಣ್ ಸಿಂಗ್ ನಿಲ್ದಾಣ, ಉತ್ತರ ಪ್ರದೇಶ

ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಉತ್ತರ ಪ್ರದೇಶ ರಾಜ್ಯದ ಲಖನೌ ನಗರದಲ್ಲಿದೆ. ಅಕ್ಟೋಬರ್ 4, 2012 ರಂದು ಇದನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಘೋಷಿಸಲಾಯಿತು.

ಚಿತ್ರಕೃಪೆ

ವೀರ್ ಸಾವರ್ಕರ್ ಅಂತಾರಾಷ್ಟ್ರೀಯ ನಿಲ್ದಾಣ, ಅಂಡಮಾನ್ ಮತ್ತು ನಿಕೋಬಾರ್

ಭಾರತದ ಅಂಡಮಾನ್ ಮತ್ತು ನಿಕೋಬಾರ್ ಗಳ ಪ್ರಮುಖ ವಾಯು ನಿಲ್ದಾಣವಾಗಿದೆ ಇದು. ಪೋರ್ಟ್ ಬ್ಲೇರ್ ನಗರದಿಂದ ಕೇವಲ 2 ಕಿ.ಮೀ ದೂರದಲ್ಲಿದೆ ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.

ಚಿತ್ರಕೃಪೆ: Jpatokal

Please Wait while comments are loading...