Search
  • Follow NativePlanet
Share
» »ಚುಂಬಕದಂತೆ ಆಕರ್ಷಿಸುವ ಕೇರಳದ ದ್ವೀಪಗಳು

ಚುಂಬಕದಂತೆ ಆಕರ್ಷಿಸುವ ಕೇರಳದ ದ್ವೀಪಗಳು

By Vijay

ಕೇರಳ ತನ್ನಲ್ಲಿರುವ ಹಿನ್ನೀರು ಅಥವಾ ಬೆಟ್ಟ ಗುಡ್ಡಗಳಿಗೆ ಮಾತ್ರವಲ್ಲದೆ ಕೆಲವು ಆಕರ್ಷಕವಾದ, ಆಸಕ್ತಿ ಕೆರಳಿಸುವ ಚಿಕ್ಕ ಪುಟ್ಟ ದ್ವೀಪಗಳಿಗೂ ಸಹ ಹೆಸರುಗಳಿಸಿದೆ. ನಡುಗಡ್ಡೆಗಳು ಅಥವಾ ದ್ವೀಪಗಳು ಮೊದಲಿನಿಂದಲೂ ಮನುಷ್ಯನಿಗೆ ಆಸಕ್ತಿ ಕೆರಳಿಸುವ ತಾಣಗಳಾಗಿದ್ದು ಪ್ರವಾಸೋದ್ಯಮಕ್ಕೆ ತಮ್ಮದೆ ಆದ ಕೊಡುಗೆ ನೀಡಿವೆ.

ಕೆಲವು ದೇಶಗಳಲ್ಲಂತು ದ್ವೀಪಗಳನ್ನೂ ಸಹ ಮಾರಲಾಗುತ್ತದೆ. ಹೀಗಾಗಿ ನಡುಗಡ್ಡೆಗಳೆಂದರೆ ಕೆಲವು ಪ್ರವಾಸಿಗರಿಗೆ ಅದೇನೊ ಹಂಬಲ ನೋಡುವ ಚಡಪಡಿಕೆ. ಅಲ್ಲದೆ ಈ ತಾಣಗಳು ತನ್ನ ಸುತ್ತಲೂ ನೀರಿನಿಂದ ಕೂಡಿರುವುದರಿಂದ ವಿಶೇಷವಾಗಿ ಕಂಡುಬರುತ್ತವೆ. ಈ ತರಹದ ನಡುಗಡ್ಡೆಗಳನ್ನು ಭಾರತದಲ್ಲಿಯೂ ಸಾಕಷ್ಟು ಸಂಖ್ಯೆಯಲ್ಲಿ ನೋಡಬಹುದು. ಕೇರಳದ ದ್ವೀಪಗಳು ನೋಡಲು ಆಕರ್ಷಕವಾಗಿವೆ.

ಇದನ್ನೂ ಓದಲು ಬಯಸುತ್ತೀರಾ? ಕರ್ನಾಟಕದಲ್ಲಿರುವ ಸುಂದರ ನಡುಗಡ್ಡೆಗಳು

ಕೆಲವು ನಡುಗಡ್ಡೆಗಳು ಪ್ರವಾಸಿ ದೃಷ್ಟಿಯಿಂದ ಯೋಗ್ಯವಾದ ತಾಣಗಳಾಗಿದ್ದರೆ ಕೆಲವು ತಮ್ಮಲ್ಲಿರುವ ಕ್ಲಿಷ್ಟಕರ ಸ್ಥಿತಿಗತಿಗಳಿಂದ ಭೇಟಿ ನೀಡಲು ಯೋಗ್ಯಕರವಾಗಿಲ್ಲ. ಅದರಂತೆ "ದೇವರ ಸ್ವಂತ ನಾಡು" ಎಂದು ಕರೆಯಲ್ಪಡುವ ಕೇರಳದಲ್ಲಿಯೂ ಸಹ ಕೆಲವು ಭೇಟಿ ಯೋಗ್ಯ ಪುಟ್ಟ ಪುಟ್ಟ ದ್ವಿಪಗಳನ್ನು ಕಾಣಬಹುದು.

ನೀವು ಪ್ರತಿ ಸಲ ಕೇರಳ ಪ್ರವಾಸ ಮಾಡಿದಾಗ ಕೇವಲ ಗಿರಿಧಾಮಗಳಿಗೆ ಭೇಟಿ ನೀಡುತ್ತಿದ್ದರೆ, ಅದನ್ನು ಬದಿಗಿಟ್ಟು ಈ ಸಲ ಒಂದೊಮ್ಮೆ ಈ ನಡುಗಡ್ಡೆಗಳ ಪ್ರವಾಸ ಮಾಡಿ ನೋಡಿ. ಖಂಡಿತವಾಗಿಯೂ ಇದು ವಿಶಿಷ್ಟ ಅನುಭವವನ್ನು ನಿಮಗೆ ಕರುಣಿಸ್ಬಹುದು. ಕೇರಳದಲ್ಲಿ ನೋಡಬಹುದಾದ ಕೆಲವು ಸುಂದರ ದ್ವೀಪಗಳ ಕುರಿತು ಈ ಲೇಖನದಲ್ಲಿ ತಿಳಿಯಿರಿ.

ಕೇರಳದ ದ್ವೀಪಗಳು:

ಕೇರಳದ ದ್ವೀಪಗಳು:

ಧರ್ಮದಾಮ ದ್ವೀಪ : ಕೇರಳದ ಕಣ್ಣೂರು ಜಿಲ್ಲೆಯ ತಲಚೇರಿಯಲ್ಲಿರುವ ಪುಟ್ಟ ನಡುಗಡ್ಡೆ ಇದಾಗಿದೆ. ಸಮುದ್ರ ತೀರದಿಂದ ಇನ್ನೂರು ಮೀಟರುಗಳಷ್ಟು ದೂರದಲ್ಲಿ ನೆಲೆಸಿರುವ ಈ ನಡುಗಡ್ಡೆಯು ಪಾಮ್ ಮರಗಳಿಂದ ತುಂಬಿದ್ದು ದಟ್ಟ ಹಸಿರಿನಿಂದ ಕೂಡಿದೆ. ಇದು ಖಾಸಗಿ ಪ್ರದೇಶವಾಗಿದ್ದು ಇಲ್ಲಿಗೆ ಭೇಟಿ ನೀಡಲು ಅನುಮತಿ ಪಡೆಯಬೇಕಾಗಿರುತ್ತದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಕಡಿಮೆಯಿದ್ದಾಗ ನಡೆದುಕೊಂಡು ಸಹ ಈ ದ್ವೀಪಕ್ಕೆ ಹೋಗಬಹುದಾಗಿದೆ.

ಚಿತ್ರಕೃಪೆ: ShajiA

ಕೇರಳದ ದ್ವೀಪಗಳು:

ಕೇರಳದ ದ್ವೀಪಗಳು:

ಕೇರಳದ ತ್ರಿಶ್ಶೂರ್ ಜಿಲ್ಲೆಯಲ್ಲಿರುವ ಚೆಟ್ಟುವಾ ಹಿನ್ನೀರಿನ ಒಂದು ಸುಂದರ ನಡುಗಡ್ಡೆಯಾಗಿದೆ. ತ್ರಿಶ್ಶೂರ್ ಪಟ್ಟಣದಿಂದ ಸುಮಾರು 25 ಕಿ.ಮಿ ಗಳಷ್ಟು ದೂರದಲ್ಲಿ ಚೆಟ್ಟುವಾ ನೆಲೆಸಿದೆ.

ಚಿತ್ರಕೃಪೆ: Challiyan

ಕೇರಳದ ದ್ವೀಪಗಳು:

ಕೇರಳದ ದ್ವೀಪಗಳು:

ಕಣ್ಣೂರು ಜಿಲ್ಲೆಯ ಪಯ್ಯನೂರು ಬಳಿಯಿರುವ ಕವ್ವಾಯಿ ಒಂದು ಪುಟ್ಟ ಹಿನ್ನೀರಿನ ನಡುಗಡ್ಡೆಯಾಗಿದೆ. ಪಯ್ಯನೂರಿನಿಂದ ಚಿಕ್ಕದಾದ ಒಂದು ಸೇತುವೆ ಬಳಸಿಕೊಂಡು ಈ ನಡುಗಡ್ಡೆಯನ್ನು ತಲುಪಬಹುದಾಗಿದೆ.

ಚಿತ್ರಕೃಪೆ: Sherjeena

ಕೇರಳದ ದ್ವೀಪಗಳು:

ಕೇರಳದ ದ್ವೀಪಗಳು:

ಒಮ್ಮೆ ಯೋಚಿಸಿ...ಎಲ್ಲಾದರೂ ಹೋಗಬೇಕೆಂದರೆ ದೋಣಿಯಲ್ಲೆ ಸಾಗುವುದು, ಇರುವ ಮನೆಯೆಂದರೆ ದೋಣಿ ಮನೆ, ಮನೆಯ ಮುಂಭಾಗದಲ್ಲೂ ನೀರು ಹಿಂಭಾಗದಲ್ಲೂ ನೀರು. ಅಲ್ಲಲ್ಲಿ ಸಂಚಾರಕ್ಕೂ ದೋಣಿಗಳೆ. ಒಂದು ವಿಶಿಷ್ಟ ರೀತಿಯ ಅನುಭವವುಂಟಾಗುವುದು ಸಹಜ. ಈ ಒಂದು ಸುಂದರ ಅನುಭವವನ್ನು ಅರಸಿ ಹೊರಟಾಗ ಸಿಗುವುದೆ ಕುಮರಕಮ್. ಕೇರಳದ ಪ್ರಮುಖ ನಗರವಾದ ಕೊಟ್ಟಾಯಂ ನಿಂದ ಕೇವಲ 16 ಕಿ.ಮೀ ದೂರದಲ್ಲಿ ನೆಲೆಸಿದೆ. ಇದರ ಕೆಲವು ಭಾಗಗಳು ಮಾತ್ರವೆ ನಡುಗಡ್ಡೆಯ ರೂಪ ಹೊಂದಿವೆ.

ಚಿತ್ರಕೃಪೆ: Sarath Kuchi

ಕೇರಳದ ದ್ವೀಪಗಳು:

ಕೇರಳದ ದ್ವೀಪಗಳು:

ಕೊಲ್ಲಂ ಜಿಲ್ಲೆಯ ಕಲ್ಲಾಡಾ ನದಿ ಹಾಗೂ ಅಷ್ಟಮುಡಿ ಕೆರೆ ಸಮಾಗಮ ಹೊಂದುವ ಸ್ಥಳದಲ್ಲಿರುವ ಒಂದು ನಡುಗಡ್ಡೆಯ ಹೆಸರೆ ಮುನ್ರೋ ದ್ವೀಪ. ಕೊಲ್ಲಂ ಪಟ್ಟಣದಿಂದ ಸುಮಾರು 25 ಕಿ.ಮೀ ಗಳಷ್ಟು ದೂರದಲ್ಲಿದೆ ಈ ನಡುಗಡ್ಡೆ.

ಚಿತ್ರಕೃಪೆ: Saralstalin

ಕೇರಳದ ದ್ವೀಪಗಳು:

ಕೇರಳದ ದ್ವೀಪಗಳು:

ಎರ್ನಾಕುಲಂ ಜಿಲ್ಲೆಯಲ್ಲಿರುವ ಒಂದು ಸುಂದರ ನಡುಗಡ್ಡೆ ನೆಡುಂಗಡ.

ಚಿತ್ರಕೃಪೆ: Varkey Parakkal

ಕೇರಳದ ದ್ವೀಪಗಳು:

ಕೇರಳದ ದ್ವೀಪಗಳು:

ಪೂಚಕ್ಕಲ್, ಕೇರಳದ ಹಿನ್ನೀರಿನ ಒಂದು ಸುಂದರ ನಡುಗಡ್ಡೆ. ವೆಂಬನಾಡು ಕೆರೆಯ ಪೂರ್ವ ಹಾಗೂ ಪಶ್ಚಿಮ ಭಾಗಗಳನ್ನು ಬೆಸೆಯುವ ಕಾಲುವೆ ನೀರಿನ ಸಮ್ಪರ್ಕವನ್ನು ಈ ನಡುಗಡ್ಡೆ ಹೊಂದಿದೆ. ಭೂಭಾಗವು ಫಲವತ್ತಾಗಿದ್ದು ದಟ್ಟವಾದ ಹಸಿರಿನಿಂದ ಕಂಗೊಳಿಸುತ್ತದೆ.

ಚಿತ್ರಕೃಪೆ: Augustus Binu

ಕೇರಳದ ದ್ವೀಪಗಳು:

ಕೇರಳದ ದ್ವೀಪಗಳು:

ಪೂಚಕ್ಕಲ್ ನಡುಗಡ್ಡೆಯು ತನ್ನಲ್ಲಿರುವ ನಗಾರಿ ಶ್ರೀಧರ್ಮ ಶಾಸ್ತ ದೇವಾಲಯಕ್ಕೆ ಪ್ರಸಿದ್ಧಿ ಪಡೆದಿದೆ. ಪ್ರತಿ ವರ್ಷ ಏಪ್ರಿಲ್ ಸಮಯದಲ್ಲಿ ಜರುಗುವ ವಿಷು ಉತ್ಸವವು ಇಲ್ಲಿ ವಿಶಿಷ್ಟವಾಗಿರುತ್ತದೆ.

ಚಿತ್ರಕೃಪೆ: Krajeev

ಕೇರಳದ ದ್ವೀಪಗಳು:

ಕೇರಳದ ದ್ವೀಪಗಳು:

ಕೊಚ್ಚಿ ನಗರದ ಒಂದು ಭಾಗವಾಗಿದೆ ವೆಲ್ಲಿಂಗ್ಡನ್ ದ್ವೀಪ. ಇದೊಂದು ಮಾನವ ನಿರ್ಮಿತ ದ್ವೀಪವಾಗಿದೆ.

ಚಿತ್ರಕೃಪೆ: wikipedia

ಕೇರಳದ ದ್ವೀಪಗಳು:

ಕೇರಳದ ದ್ವೀಪಗಳು:

ಕುರುವದ್ವೀಪ : ಕೇರಳದಲ್ಲೆ ಭೇಟಿ ನೀಡಬಹುದಾದ ಒಂದು ಸುಂದರ ದ್ವೀಪವಾಗಿದೆ ಈ ಕುರುವದ್ವೀಪ. ದಟ್ಟವಾದ ಹಸಿರು, ವೈವಿಧ್ಯಮಯ ಜೀವ ಸಂಪತ್ತನ್ನು ಹೊಂದಿರುವ ಈ ನಡುಗಡ್ಡೆ ವಯನಾಡ್ ಜಿಲ್ಲೆಯಲ್ಲಿರುವ ಕಬಿನಿ ಹಿನ್ನೀರಿನಲ್ಲಿ ರೂಪಿತವಾಗಿದೆ.

ಚಿತ್ರಕೃಪೆ: Vinayaraj

ಕೇರಳದ ದ್ವೀಪಗಳು:

ಕೇರಳದ ದ್ವೀಪಗಳು:

ಈ ನಡುಗಡ್ಡೆಯಲ್ಲಿ ಜನವಾಸವಿಲ್ಲ. ಆದ ಕಾರಣ ಬಗೆ ಬಗೆಯ ಪ್ರಾಣಿ ಪಕ್ಷಿಗಳನ್ನು ಇಲ್ಲಿ ಕಾಣಬಹುದು. ಅಲ್ಲದೆ ಅಪರೂಪದ ಸಸ್ಯಗಳು ಹಾಗೂ ಕೀಟಗಳನ್ನು ಇಲ್ಲಿ ನೋಡಬಹುದು.

ಚಿತ್ರಕೃಪೆ: Vinayaraj

ಕೇರಳದ ದ್ವೀಪಗಳು:

ಕೇರಳದ ದ್ವೀಪಗಳು:

ಪ್ರಕೃತಿಯ ಅಗಾಧ ವೈಭವದ ಜೊತೆ ಶಾಂತಿಯೂ ಸಹ ಇಲ್ಲಿನ ಪರಿಸರದಲ್ಲಿ ಹಾಸು ಹೊಕ್ಕಾಗಿದ್ದು ಭೇಟಿ ನೀಡಿದವರನ್ನು ಮಂತ್ರಮುಗ್ಧಗೊಳಿಸುತ್ತದೆ. ಇತ್ತಿಚಿಗಷ್ಟೆ ಈ ಸ್ಥಳವು ಜಗತ್ತಿನ ಎಲ್ಲ ಮೂಲೆಗಳಿಂದ ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡಿರುವ ಅಂಶ ಬೆಳಕಿಗೆ ಬಂದಿದೆ.

ಚಿತ್ರಕೃಪೆ: Challiyan

ಕೇರಳದ ದ್ವೀಪಗಳು:

ಕೇರಳದ ದ್ವೀಪಗಳು:

ಸುತ್ತಲೂ ಕೆರೆ, ನೀರಿನ ತೊರೆ ನದಿಗಳಿಂದ ಸುತ್ತುವರೆದಿರುವ ಈ ದ್ವೀಪವನ್ನು ಕೇರಳ ಪ್ರವಾಸೋದ್ಯಮ ಇಲಾಖೆಯು ನಡೆಸುತ್ತಿರುವ ಫೈಬರ್ ದೋಣಿಗಳ ಮೂಲಕ ಈ ದ್ವಿಪವನ್ನು ತಲುಪಬಹುದಾಗಿದೆ.

ಚಿತ್ರಕೃಪೆ: Vengolis

ಕೇರಳದ ದ್ವೀಪಗಳು:

ಕೇರಳದ ದ್ವೀಪಗಳು:

ಕೇರಳ ಅರಣ್ಯ ಇಲಾಖೆಯ ವನ ಸಂರಕ್ಷಣ ಸಮೀತಿಯು ಇದನ್ನು ನಿರ್ವಹಿಸುತ್ತಿದ್ದು ನೇರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಯೋಗ್ಯ ಸಮಯದಲ್ಲಿ ಮಾತ್ರ ಪಾಸ್ ಅನ್ನು ಪಡೆಯುವುದರ ಮೂಲಕ ಈ ನಡುಗಡ್ಡೆಯನ್ನು ಪ್ರವೇಶಿಸಬಹುದು.

ಚಿತ್ರಕೃಪೆ: Challiyan

ಕೇರಳದ ದ್ವೀಪಗಳು:

ಕೇರಳದ ದ್ವೀಪಗಳು:

ವಯನಾಡ್ ಜಿಲ್ಲೆಯ ಮನಂತವಾಡಿಯಿಂದ 17 ಕಿ.ಮೀ ಹಾಗೂ ಪುಲ್ಪಳ್ಳಿಯಿಂದ 10 ಕಿ.ಮೀ ಗಳಷ್ಟು ದೂರದಲ್ಲಿದೆ ಕುರುವದ್ವೀಪ.

ಚಿತ್ರಕೃಪೆ: Sudheesh S

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X