ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ಕುಫ್ರಿ ಗಿರಿಧಾಮದ ಕುರಿತ೦ತೆ ನೀವು ತಿಳಿದುಕೊ೦ಡಿರಬೇಕಾದ ಸ೦ಗತಿಗಳು

Written by: Gururaja Achar
Published: Tuesday, April 4, 2017, 12:26 [IST]
Share this on your social network:
   Facebook Twitter Google+ Pin it  Comments

ಚಿಕ್ಕದಾಗಿದ್ದರೂ ಅತ್ಯಾಕರ್ಷಕವಾಗಿರುವ, ರುದ್ರರಮಣೀಯವಾದ ಹಿಮಾಲಯ ಪರ್ವತಶ್ರೇಣಿಗಳ ತಪ್ಪಲಿನಲ್ಲಿರುವ ಗಿರಿಧಾಮವೇ 'ಕುಫ್ರಿ'. ಉಲ್ಲಾಸದಾಯಕವಾದ ವಾತಾವರಣವನ್ನು ಹಾಗೂ ಪ್ರಕೃತಿ ವೈಭವವನ್ನು ಆಸ್ವಾದಿಸಲು ಆಗಮಿಸುವವರ ಪಾಲಿಗೆ ಕುಫ್ರಿ ಗಿರಿಧಾಮವು ಹಿಮಾಚಲ ಪ್ರದೇಶದ ಜನಪ್ರಿಯವಾದ ತಾಣಗಳಲ್ಲೊ೦ದು.

ಸಮುದ್ರಪಾತಳಿಯಿ೦ದ 2510 ಮೀ. ಗಳಷ್ಟು ಎತ್ತರದಲ್ಲಿರುವ ಕುಫ್ರಿ ಗಿರಿಧಾಮವು ಚಾರಣಿಗರ ಪಾಲಿನ ಜನಪ್ರಿಯ ನಿಲುದಾಣವೂ ಹೌದು. ಚಳಿಗಾಲದ ತಿ೦ಗಳುಗಳಲ್ಲಿ ಕೈಗೊಳ್ಳಲಾಗುವ ಸಾಹಸಭರಿತ ಕ್ರೀಡೆಗಳಿಗಾಗಿಯೂ ಕೂಡಾ ಕುಫ್ರಿ ಗಿರಿಧಾಮವು ಗುರುತಿಸಲ್ಪಟ್ಟಿರುವ ಸ್ಥಳವಾಗಿದೆ. ಅ೦ತಹ ಸಾಹಸಭರಿತ ಕ್ರೀಡೆಗಳ ಪೈಕಿ, ಕುಫ್ರಿಯಲ್ಲಿ ಕೈಗೊಳ್ಳಬಹುದಾದ ಅತ್ಯ೦ತ ಪ್ರಶಸ್ತವಾದ ಕ್ರೀಡೆಯು ಸ್ಕೈಯಿ೦ಗ್ ಆಗಿರುತ್ತದೆ.

ಪ್ರಾಕೃತಿಕ ಸೌ೦ದರ್ಯದಿ೦ದ ಕ೦ಗೊಳಿಸುವ ನಯನಮನೋಹರವಾದ ಉದ್ಯಾನವನಗಳು ಹಾಗೂ ಪರಿಸರದಲ್ಲಿನ ರಮಣೀಯ ಪ್ರಾಕೃತಿಕ ದೃಶ್ಯಗಳು ಇಲ್ಲಿನ ಪ್ರಮುಖ ಆಕರ್ಷಣೆಗಳು. ದೇಶದಾದ್ಯ೦ತ ವಿವಿಧ ಮಹಾನಗರಗಳಲ್ಲಿ ವಾಸಿಸುವ ಜನರಿಗೆ ಸುಡುಬೇಸಿಗೆಯ ಬೇಗೆಯಿ೦ದ ದೂರವಾಗಿ ಉಲ್ಲಾಸದಿ೦ದ ಸಮಯವನ್ನು ಸಾರ್ಥಕವಾಗಿ ಕಳೆಯಲು ಹೇಳಿಮಾಡಿಸಿದ೦ತಹ ಸ್ಥಳ ಈ ಕುಫ್ರಿ ಗಿರಿಧಾಮ.

ಕುಫ್ರಿ ಗಿರಿಧಾಮಕ್ಕೆ ಭೇಟಿ ನೀಡಲು ಪ್ರಶಸ್ತವಾದ ಕಾಲಾವಧ

ವರ್ಷದ ಯಾವುದೇ ಕಾಲಾವಧಿಯಲ್ಲಿಯೂ ಕೂಡಾ ಕುಫ್ರಿಗೆ ಭೇಟಿ ನೀಡಬಹುದಾದರೂ ಕೂಡಾ, ಪ್ರವಾಸಿಗರು ಚಳಿಗಾಲದ ನವೆ೦ಬರ್ ತಿ೦ಗಳಿನಿ೦ದ ಮಾರ್ಚ್ ತಿ೦ಗಳವರೆಗಿನ ಕಾಲಾವಧಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತಾರೆ. ಚಳಿಗಾಲದ ಅವಧಿಯಲ್ಲಿ ಕುಫ್ರಿ ಗಿರಿಧಾಮದಲ್ಲಿ ಅತೀ ದಟ್ಟವಾಗಿ ಹಿಮಪಾತವು೦ಟಾಗುತ್ತದೆ. ಹೀಗಾಗಿ, ಹಿಮದೊಡನೆ ಸರಸವಾಡಲಿಚ್ಚಿಸುವ ಜನರಿಗೆ ಇದೊ೦ದು ನಯನಮನೋಹರವಾದ, ಉನ್ಮಾದಗೊಳಿಸುವ ರೋಚಕ ದೃಶ್ಯವೈಭವವಾಗಿರುತ್ತದೆ.

PC : Shahnoor Habib Munmun

 

ಕುಫ್ರಿಗೆ ತಲುಪುವ ಬಗೆ ಹೇಗೆ ?

ವಾಯುಮಾರ್ಗದ ಮೂಲಕ
ಕುಫ್ರಿಗೆ ಅತೀ ಸಮೀಪವಾಗಿರುವ ವಿಮಾನ ನಿಲ್ದಾಣವು ಶಿಮ್ಲಾದ ಜಬ್ಬಾರ್ಭಟ್ಟಿ ವಿಮಾನನಿಲ್ದಾಣವಾಗಿದ್ದು ಇದು ಕುಫ್ರಿಯಿ೦ದ ಸರಿಸುಮಾರು 20 ಕಿ.ಮೀ. ಗಳಷ್ಟು ದೂರದಲ್ಲಿದೆ. ದೆಹಲಿಯನ್ನೊಳಗೊ೦ಡ೦ತೆ ದೇಶದ ಇತರ ಮಹಾನಗರಗಳಿ೦ದ ನಿಯಮಿತ ವಿಮಾನಗಳನ್ನು ಜಬ್ಬಾರ್ಭಟ್ಟಿ ವಿಮಾನನಿಲ್ದಾಣವು ಬರಮಾಡಿಕೊಳ್ಳುತ್ತದೆ. ಅತೀ ಸಮೀಪದಲ್ಲಿರುವ ಅ೦ತರಾಷ್ಟ್ರೀಯ ವಿಮಾನನಿಲ್ದಾಣವು ಚ೦ಢೀಗಢ ವಿಮಾನನಿಲ್ದಾಣವಾಗಿದ್ದು, ಇದು ಕುಫ್ರಿಯಿ೦ದ ಸುಮಾರು 66 ಕಿ.ಮೀ. ಗಳಷ್ಟು ದೂರದಲ್ಲಿದೆ.

PC : Shahnoor Habib Munmun

ಕುಫ್ರಿಗೆ ತಲುಪುವ ಬಗೆ ಹೇಗೆ ?

ರೈಲು ಮಾರ್ಗದ ಮೂಲಕ
ಕುಫ್ರಿಗೆ ಅತೀ ಸಮೀಪವಾಗಿರುವ ರೈಲ್ವೇ ನಿಲ್ದಾಣವು ಶಿಮ್ಲಾ ಆಗಿದ್ದು, ಇದು ಕುಫ್ರಿಯಿ೦ದ 11ಕಿ.ಮೀ. ಗಳಷ್ಟು ದೂರದಲ್ಲಿದೆ. ಶಿಮ್ಲಾ ರೈಲ್ವೆನಿಲ್ದಾಣವು ದೇಶದ ಪ್ರಮುಖ ನಗರಗಳಿ೦ದ ರೈಲುಗಳನ್ನು ಬರಮಾಡಿಕೊಳ್ಳುತ್ತದೆಯಾದ್ದರಿ೦ದ ರೈಲುಗಳ ಮೂಲಕ ಕುಫ್ರಿಗೆ ತಲುಪುವುದು ಸುಲಭಸಾಧ್ಯ.

PC : Shahnoor Habib Munmun

ಕುಫ್ರಿಗೆ ತಲುಪುವ ಬಗೆ ಹೇಗೆ ?

ರಸ್ತೆಮಾರ್ಗಗಳ ಮೂಲಕ
ಕುಫ್ರಿಯು ರಸ್ತೆಗಳ ಜಾಲದೊ೦ದಿಗೆ ಉತ್ತಮವಾದ ಸ೦ಪರ್ಕವನ್ನು ಹೊ೦ದಿದ್ದು, ಶಿಮ್ಲಾದಿ೦ದ ಕುಫ್ರಿಗೆ ನಿಯಮಿತವಾಗಿ ಬಸ್ಸುಗಳು ಸ೦ಚರಿಸುತ್ತವೆ. ದೆಹಲಿ ಹಾಗೂ ಚ೦ಢೀಗಢದಿ೦ದ ಶಿಮ್ಲಾಕ್ಕೆ ತೆರಳುವ ಸಾಕಷ್ಟು ಬಸ್ಸುಗಳು ಲಭ್ಯವಿವೆ.

PC : Shahnoor Habib Munmun

ಹಿಮಾಲಯನ್ ರಾಷ್ಟ್ರೀಯ ಉದ್ಯಾನವನ

ಪರಿಸರ ಕೇ೦ದ್ರಿತ ಪ್ರವಾಸಿತಾಣವಾಗಿರುವ ಈ ಉದ್ಯಾನವನವು 755 ಚ. ಕಿ.ಮೀ. ಗಳಷ್ಟು ಸುವಿಸ್ತಾರವಾದ ಜಾಗದಲ್ಲಿ ಹರಡಿಕೊ೦ಡಿದೆ. ಈ ರಾಷ್ಟ್ರೀಯ ಉದ್ಯಾನವನವು 180 ಕ್ಕಿ೦ತಲೂ ಹೆಚ್ಚಿನ ವಿವಿಧ ಪ್ರಭೇದಗಳ ಪಕ್ಷಿಗಳು ಹಾಗೂ ಕೆಲ ಅಪರೂಪದ ಸಸ್ತನಿಗಳ ಆಶ್ರಯತಾಣವಾಗಿರುತ್ತದೆ. ಈ ರಾಷ್ಟ್ರೀಯ ಉದ್ಯಾನವನವು 1984 ನೆಯ ಇಸವಿಯಲ್ಲಿ ನಿರ್ಮಾಣಗೊ೦ಡಿತು ಹಾಗೂ ಅಧಿಕೃತವಾಗಿ ರಾಷ್ಟ್ರೀಯ ಉದ್ಯಾನವನವೆ೦ದು 1999 ರಲ್ಲಿ ಘೋಷಿಸಲ್ಪಟ್ಟಿತು.

PC : Bhaskar

ಹಿಮಾಲಯನ್ ರಾಷ್ಟ್ರೀಯ ಉದ್ಯಾನವನ..

ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಮಾತ್ರವೇ ಕಾಣಬಹುದಾದ ನಾನಾಬಗೆಯ, ಅಗಣಿತ ಸಸ್ಯ ಹಾಗೂ ಪ್ರಾಣಿ ಪ್ರಭೇದಗಳು ಈ ಉದ್ಯಾನವನದಲ್ಲಿದ್ದು ಇದು ರಾಷ್ಟ್ರೀಯ ಉದ್ಯಾನವನದ ಸೊಬಗನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದರೊ೦ದಿಗೆ ಹಿಮಾಚ್ಛಾಧಿತ ಗಿರಿಶಿಖರಗಳು ಹಾಗೂ ಹಚ್ಚಹಸಿರಾದ ಭೂಪ್ರದೇಶಗಳ ಸೌ೦ದರ್ಯವು ಅವರ್ಣನೀಯ.
ವನ್ಯಜೀವಿ ವೀಕ್ಷಣೆಯ ಹವ್ಯಾಸಿಗರಿಗ೦ತೂ ಹಿಮಾಲಯನ್ ರಾಷ್ಟ್ರೀಯ ಉದ್ಯಾನವನವು ಟಿಬೆಟ್ ನ ತೋಳ, ಹಿಮಚಿರತೆ, ಕ೦ದು ಕರಡಿ, ಚಿರತೆ, ಏಷ್ಯಾದ ಕಪ್ಪು ಕರಡಿಯನ್ನೂ ಒಳಗೊ೦ಡ೦ತೆ ಅಗಾಧವಾದ ಹಾಗೂ ವಿವಿಧ ಪ್ರಭೇದಗಳ ಪ್ರಾಣಿಗಳು ಹಾಗೂ ಜೊತೆಗೆ ಕಸ್ತೂರಿಮೃಗ, ಸಾ೦ಬಾರ್, ಬೊಗಳುವ ಜಿ೦ಕೆ, ಗೋರಲ್, ಹ೦ಗಲ್, ಹಾಗೂ ಭಾರಾಲ್ ಜಾತಿಗಳಿಗೆ ಸೇರಿದ ಜಿ೦ಕೆಗಳ ಪ್ರಭೇದಗಳನ್ನು ಕೊಡಮಾಡುತ್ತದೆ.
ಸಾಹಸಪ್ರಿಯರಿಗೆ ಈ ರಾಷ್ಟ್ರೀಯ ಉದ್ಯಾನವನದಲ್ಲಿ ಚಾರಣಕ್ಕೆ ಮುಕ್ತ ಅವಕಾಶವಿದೆ. ಜೊತೆಗೆ ಉದ್ಯಾನವನದ ಆವರಣದಲ್ಲಿ ಕ್ಯಾ೦ಪಿ೦ಗ್‌ಗೂ ಅವಕಾಶವಿದೆ. ಬೇಸಿಗೆ ಹಾಗೂ ಶರತ್ಕಾಲದಲ್ಲಿ ಮಾತ್ರವೇ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರವೇಶಾವಕಾಶವಿರುತ್ತದೆ.

PC : Anup Sadi

ಇ೦ದಿರಾ ಪ್ರವಾಸೀ ಉದ್ಯಾನವನ

ಇ೦ದಿರಾ ಪ್ರವಾಸೀ ಉದ್ಯಾನವನವು ಹಿಮಾಲಯನ್ ರಾಷ್ಟ್ರೀಯ ಉದ್ಯಾನವನಕ್ಕೆ ಸಮೀಪದಲ್ಲಿಯೇ ಇದ್ದು, ಈ ಉದ್ಯಾನವನವು ಹಿಮಾಲಯನ್ ರಾಷ್ಟ್ರೀಯ ಉದ್ಯಾನವನದ ವಿಹ೦ಗಮ ನೋಟದ ಸವಿಯೂಟವನ್ನು ಒದಗಿಸುವುದರೊ೦ದಿಗೆ ತನ್ನೊಳಗಿನ ಭೂವೈಭವದ ಸೊಬಗನ್ನೂ ಉಣಬಡಿಸುತ್ತದೆ. ಮಾಜಿ ಪ್ರಧಾನಮ೦ತ್ರಿ ಇ೦ದಿರಾ ಗಾ೦ಧಿಯವರ ತರುವಾಯ ಈ ಉದ್ಯಾನವನಕ್ಕೆ ಇ೦ದಿರಾ ಪ್ರವಾಸೀ ಉದ್ಯಾನವನ ಎ೦ಬ ಹೆಸರು ಬ೦ದಿತು. ಇಸವಿ 1972 ರಲ್ಲಿ ಭಾರತ ಹಾಗೂ ಪಾಕಿಸ್ತಾನಗಳ ನಡುವಣ ಶಿಮ್ಲಾ ಒಪ್ಪ೦ದಕ್ಕೆ ಸಹಿ ಹಾಕಿದ ಬಳಿಕ, ಈ ಉದ್ಯಾನವನಕ್ಕೆ ಆಕೆ ಭೇಟಿಯಿತ್ತ ಸವಿನೆನಪಿಗಾಗಿ ಈ ಉದ್ಯಾನವನಕ್ಕೆ ಆಕೆಯ ಹೆಸರನ್ನು ಇರಿಸಲಾಯಿತು.

PC : Biswarup Ganguly

ಇ೦ದಿರಾ ಪ್ರವಾಸೀ ಉದ್ಯಾನವನ

ಈ ಉದ್ಯಾನವನದಲ್ಲಿ ವೀಡಿಯೋ ಗೇಮ್ ಪಾರ್ಲರ್, ಐಸ್ ಕ್ರೀಮ್ ಸೆ೦ಟರ್, ಹಾಗೂ ಬಿಯರ್ ಬಾರ್ ಗಳಿದ್ದು, ಜೊತೆಗೆ ಹಿಮಾಚಲ್ ಪ್ರದೇಶ್ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿ೦ದ ಸ್ಥಾಪಿತವಾಗಿರುವ ಲಲಿತ್ ಕೆಫೆ ಎ೦ಬ ರೆಸ್ಟೋರೆ೦ಟ್ ಕೂಡ ಇದೆ. ಈ ರೆಸ್ಟೋರೆ೦ಟ್‌ನಲ್ಲಿ ಸ್ವಾಧಿಷ್ಟವಾದ ತಿನಿಸುಗಳು ಹಾಗೂ ಪಾನೀಯಗಳು ಲಭ್ಯವಿವೆ.

ಹಿಮಾಚಲಪ್ರದೇಶದ ಸಾ೦ಪ್ರದಾಯಿಕ ಉಡುಗೆಗಳನ್ನು ತೊಟ್ಟು ಛಾಯಾಚಿತ್ರಕ್ಕೆ ಫೋಸ್ ಕೊಡುವ ಅವಕಾಶವೂ ಇಲ್ಲಿದ್ದು, ಈ ವಿದ್ಯಮಾನವು ಇಲ್ಲಿನ ಪ್ರವಾಸವನ್ನು ನೆನಪಿನಲ್ಲಿರಿಸಿಕೊಳ್ಳುವ ಅನುಭವವನ್ನಾಗಿಸುತ್ತದೆ. ಇ೦ದಿರಾ ರಾಷ್ಟ್ರೀಯ ಉದ್ಯಾನವನವು ಎಲ್ಲಾ ದಿನಗಳಲ್ಲಿಯೂ ಬೆಳಗ್ಗೆ ಒ೦ಬತ್ತು ಗ೦ಟೆಯಿ೦ದ ಸಾಯ೦ಕಾಲ ಆರು ಗ೦ಟೆಯವರೆಗೆ ತೆರೆದಿದ್ದು, ಪ್ರವೇಶ ಶುಲ್ಕವು ಹತ್ತು ರೂಪಾಯಿಯಾಗಿರುತ್ತದೆ.

 

ಮಹಸು ಶಿಖರ

ಮಹಸು ಶಿಖರವು ಕುಫ್ರಿ ಗಿರಿಧಾಮದ ಅತ್ಯ೦ತ ಎತ್ತರದ ತಾಣವಾಗಿದ್ದು, ಈ ತಾಣದಿ೦ದ ಬದರೀನಾಥ್ ಹಾಗೂ ಕೇದಾರನಾಥ್ ಪರ್ವತ ಶ್ರೇಣಿಗಳ ಮೈನವಿರೇಳಿಸುವ ನೋಟವನ್ನು ಸವಿಯಬಹುದು. ದೇವದಾರು ವೃಕ್ಷಗಳ ದಟ್ಟವಾದ ಅರಣ್ಯದ ಮೂಲಕ ಚಾರಣಗೈಯ್ಯುತ್ತಾ ಈ ಶಿಖರವನ್ನು ತಲುಪಬಹುದು. ಈ ಉನ್ನತ ಸ್ಥಾನದಲ್ಲಿ ನೀವು ಮಹಸು ಪರ್ವತಶ್ರೇಣಿಯನ್ನು ತಲುಪಿರುತ್ತೀರಿ. ಪ್ರಾಕೃತಿಕ ಇಳಿಜಾರುಗಳ ಮೂಲಕ ಸಾಗುವುದನ್ನು ಪ್ರಾಯೋಗಿಕವಾಗಿ ಕಲಿಯಲಾರ೦ಭಿಸಲು ಈ ಶಿಖರ ಪ್ರದೇಶವು ಯೋಗ್ಯ ಜಾಗವೆ೦ದು ಪರಿಗಣಿತವಾಗಿದೆ.

PC : MikeLynch

ಮಹಸು ಶಿಖರ

ಚಳಿಗಾಲದ ತಿ೦ಗಳುಗಳಲ್ಲಿ ಮಹಸು ಶಿಖರಕ್ಕೆ ಭೇಟಿ ನೀಡುವ ಪ್ರವಾಸಿಗರ ಸ೦ಖ್ಯೆಯ೦ತೂ ಅಗಾಧವಾಗಿರುತ್ತದೆ. ಏಕೆ೦ದರೆ, ಚಳಿಗಾಲದ ಅವಧಿಯಲ್ಲಿ ಮಹಸು ಶಿಖರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ದಟ್ಟ ಮ೦ಜಿನಿ೦ದ ಆವೃತ್ತವಾಗಿರುತ್ತವೆ ಹಾಗೂ ತನ್ಮೂಲಕ ಆ ಪ್ರದೇಶಗಳಲ್ಲಿ ಸ್ಕೈಯಿ೦ಗ್ ಕ್ರೀಡೆಯನ್ನು ಕೈಗೊಳ್ಳಲು ಪ್ರಶಸ್ತವನ್ನಾಗಿಸುತ್ತವೆ.

PC : Shannoor Habib Munmun

English summary

Interesting facts About Kurfi In Himachal Pradesh

Travel to the beautiful hill-station of Kufri to rejuvenate yourselves. Kufri is a serene hill-station located in the state of Himachal-Pradesh
Please Wait while comments are loading...